• ಹೋಂ
  • »
  • ನ್ಯೂಸ್
  • »
  • Explained
  • »
  • Explained: ದಿನಕ್ಕೆ 10 ಸಾವಿರ ಹೆಜ್ಜೆ ನಡೆಯಲೇಬೇಕಾ? ಎಷ್ಟು ವಾಕಿಂಗ್ ಮಾಡಿದ್ರೆ ಏನೆಲ್ಲಾ ಪ್ರಯೋಜನ ಇದೆ?

Explained: ದಿನಕ್ಕೆ 10 ಸಾವಿರ ಹೆಜ್ಜೆ ನಡೆಯಲೇಬೇಕಾ? ಎಷ್ಟು ವಾಕಿಂಗ್ ಮಾಡಿದ್ರೆ ಏನೆಲ್ಲಾ ಪ್ರಯೋಜನ ಇದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿತ್ಯವೂ ಐದು ಸಾವಿರಕ್ಕಿಂತ ಹೆಚ್ಚಿನ ಹೆಜ್ಜೆಗಳನ್ನು ನಡೆಯುವ ಮಹಿಳೆಯರಲ್ಲಿ ಕೂಡ ಹೃದಯ ಕಾಯಿಲೆ, ಹೃದಯಾಘಾತದಂತಹ ಅಪಾಯಗಳು ಕಡಿಮೆಯಾಗಿದೆ.

  • Share this:

ಇತ್ತೀಚಿನ ದಿನಗಳಲ್ಲಿ ಆರೋಗ್ಯವೆಂಬುದು ಅತ್ಯಮೂಲ್ಯ ಸಂಪತ್ತಾಗಿದೆ. ಕಂಡೂ ಕೇಳದ ರೋಗಗಳು, ದೇಹಕ್ಕೆ ನೋವನ್ನುಂಟು ಮಾಡುವ ಔಷಧೋಪಚಾರಗಳು ದೇಹವನ್ನು ಜರ್ಝರಿತಗೊಳಿಸುತ್ತಿರುವಾಗ ಆರೋಗ್ಯವೇ ಭಾಗ್ಯ ಎಂಬುದು ಅರಿವಾಗುತ್ತದೆ. ಆರೋಗ್ಯ ಒಂದಿದ್ದರೆ ಸಾಕು ಬೇರೆ ಸಂಪತ್ತುಗಳು ಅಗತ್ಯವಿಲ್ಲ ಎಂಬುದು ಮನದಟ್ಟಾಗುತ್ತದೆ. ಕೊರೋನಾದಂತಹ ಸಾಂಕ್ರಾಮಿಕ ರೋಗಗಳ ಆಕ್ರಮಣದ ನಂತರ ಮಾನವ ಹೆಚ್ಚು ಹೆಚ್ಚು ಆರೋಗ್ಯದ ಕಡೆಗೆ ಗಮನಹರಿಸುತ್ತಿದ್ದಾನೆ. ಜಾಗಿಂಗ್, ವಾಕಿಂಗ್, ಯೋಗ, ಜಿಮ್ ಕಸರತ್ತು, ಝಂಬಾ ಹೀಗೆ ದೇಹವನ್ನು ಕರಗಿಸುವ ಹಲವಾರು ವ್ಯಾಯಾಮಗಳನ್ನು ಮಾಡುತ್ತಾ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾನೆ.


ವ್ಯಾಯಾಮದಲ್ಲಿ ವಾಕಿಂಗ್ ದಿ ಬೆಸ್ಟ್ ವ್ಯಾಯಾಮ ಎನ್ನಬಹುದು. ಇದು ಅತಿ ಸರಳವಾದ ವ್ಯಾಯಾಮ ಕ್ರಮವೂ ಹೌದು. ಸರಿಯಾದ ಶೂಗಳು, ಟ್ರ್ಯಾಕ್ ಪ್ಯಾಂಟ್‌ಗಳು, ಸಲ್ವಾರ್ ಕಮೀಜ್, ಸೀರೆ ಹೀಗೆ ನೀವು ಧರಿಸಿರುವ ದಿರಿಸು ಯಾವುದೇ ಇರಲಿ ವಾಕಿಂಗ್ ಆರಾಮದಾಯಕವಾಗಿ ಮಾಡಬಹುದಾಗಿದೆ. ಇನ್ನು ನೀವು ಇಂತಿಷ್ಟೇ ಹೆಜ್ಜೆಗಳನ್ನು ಹಾಕಬೇಕು ಇಲ್ಲವೇ ಇಂತಿಷ್ಟು ಕಿಮೀ ನಡೆಯಬೇಕು ಇದರಿಂದ ದೇಹದ ತೂಕ ಕಡಿಮೆಯಾಗಿ ಆರೋಗ್ಯವಾಗಿರುತ್ತೀರಿ ಎಂದು ವೈದ್ಯರು, ಕೆಲವು ಅಧ್ಯಯನಗಳು ತಿಳಿಸಿವೆ. ಆದರೆ ನೀವು ಆರೋಗ್ಯವಾಗಿರಲು ಹತ್ತು ಸಾವಿರ ಹೆಜ್ಜೆಗಳನ್ನು ಹಾಕಬೇಕು ಎಂದೇನಿಲ್ಲ. ಐದು ಸಾವಿರ ಹೆಜ್ಜೆಗಳಷ್ಟು ನಡೆದೂ ಕೂಡ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.


ಇದನ್ನೂ ಓದಿ:Vitamin D Deficiency: ವಿಟಮಿನ್ ಡಿ ಕೊರತೆಯನ್ನು ಸೂಚಿಸುವ ಲಕ್ಷಣಗಳಿವು..!

ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕ ತಜ್ಞ ಡಾ. ಇಮಿನ್ ಲೀ ಮತ್ತು ಅವರ ಸಹೋದ್ಯೋಗಿಗಳು ಹೆಜ್ಜೆ ಎಣಿಕೆ ಮತ್ತು ಆರೋಗ್ಯದ ಬಗ್ಗೆ 2019 ರಲ್ಲಿ ಅಧ್ಯಯನ ನಡೆಸಿದ್ದು ಸರಿಸುಮಾರು ಐದು ಸಾವಿರ ಹೆಜ್ಜೆಗಳನ್ನು ನಡೆದೂ ಕೂಡ ಮರಣದಂತಹ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.


ನಿತ್ಯವೂ 7500 ಹೆಜ್ಜೆಗಳ ನಡಿಗೆಯ ಪ್ರಯೋಜನ


ನಿತ್ಯವೂ ಐದು ಸಾವಿರಕ್ಕಿಂತ ಹೆಚ್ಚಿನ ಹೆಜ್ಜೆಗಳನ್ನು ನಡೆಯುವ ಮಹಿಳೆಯರಲ್ಲಿ ಕೂಡ ಹೃದಯ ಕಾಯಿಲೆ, ಹೃದಯಾಘಾತದಂತಹ ಅಪಾಯಗಳು ಕಡಿಮೆಯಾಗಿದೆ. 7500 ಹೆಜ್ಜೆಗಳನ್ನು ನಡೆದಾಗ ಕೂಡ ಇದರ ಪ್ರಯೋಜನಗಳು ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಅಂದರೆ ಹತ್ತು ಸಾವಿರ ಹೆಜ್ಜೆಗಳಿಗಿಂತ ಕಡಿಮೆ ನಡೆದಾಗ ಕೂಡ ಪ್ರಯೋಜನ ಸರಿಸುಮಾರು ಒಂದೇ ಆಗಿರುತ್ತದೆ.


ದೀರ್ಘ ಆಯುಷ್ಯಕ್ಕಾಗಿ ದಿನವೂ 10 ಸಾವಿರ ಹೆಜ್ಜೆಗಳ ನಡಿಗೆ ಅಗತ್ಯವಿಲ್ಲ


ಕಳೆದ ವರ್ಷ ಸರಿಸುಮಾರು 5,000 ಮಧ್ಯವಯಸ್ಸಿನ ಪುರುಷ ಹಾಗೂ ಮಹಿಳೆಯರ ಮೇಲೆ ಅಧ್ಯಯನ ನಡೆಸಲಾಯಿತು. ಈ ಅಧ್ಯಯನದಿಂದ ತಿಳಿದು ಬಂದ ವಿಚಾರವೇನೆಂದರೆ ದೀರ್ಘ ಆಯುಷ್ಯಕ್ಕಾಗಿ 10 ಸಾವಿರ ಹೆಜ್ಜೆಗಳು ನಡೆಯುವ ಅಗತ್ಯವಿಲ್ಲ ಎಂದಾಗಿದೆ. 8000 ಹೆಜ್ಜೆಗಳನ್ನು ನಡೆಯುವವರಲ್ಲಿ ಸಾಯುವ ಅಪಾಯವು ಕಡಿಮೆಯಾಗಿದ್ದು ದಿನವೂ 4000 ಹೆಜ್ಜೆಗಳನ್ನು ನಡೆಯುವವರಿಗಿಂತ ಅರ್ಧದಷ್ಟು ಜನ ಪ್ರಾಣಾಪಾಯದಿಂದ ಪಾರಾಗಿದ್ದರು. ಅಂದರೆ ಕನಿಷ್ಠ ಪಕ್ಷ 8000 ಹೆಜ್ಜೆಗಳ ನಡಿಗೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂಬುದು ಇದರ ಒಳಾರ್ಥವಾಗಿದೆ.


ಇನ್ನು 10 ಸಾವಿರ ಹೆಜ್ಜೆಗಳನ್ನು ನಡೆಯುವುದು ತಪ್ಪಲ್ಲ. ಆದರೆ ಇದರಿಂದ ಆರೋಗ್ಯದ ಮೇಲೆ ಉಂಟಾಗುವ ಪ್ರಭಾವ ಸಮಾನವಾಗಿರುತ್ತದೆ. ಬೆಲ್ಜಿಯಂನ ಗೇಂಟ್‌ನಲ್ಲಿ 2005ರಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ಸ್ಥಳೀಯ ನಾಗರಿಕರಿಗೆ ಪೆಡೋಮೀಟರ್‌ಗಳನ್ನು ನೀಡಲಾಯಿತು ಮತ್ತು ದಿನಕ್ಕೆ ಕನಿಷ್ಠ 10,000 ಹೆಜ್ಜೆಗಳನ್ನು ನಡೆಯುವಂತೆ ಹೇಳಲಾಯಿತು. ಸುಮಾರು 660 ಮಹಿಳೆಯರು ಮತ್ತು ಪುರುಷರು ಈ ಅಧ್ಯಯನದಲ್ಲಿ ಭಾಗಿಯಾಗಿದ್ದರು ಮತ್ತು ಈ ಜನರಲ್ಲಿ ಕೇವಲ 8% ದಷ್ಟು ಜನರು ಮಾತ್ರವೇ 10,000 ಹೆಜ್ಜೆಗಳ ಗುರಿಯನ್ನು ಪೂರ್ಣಗೊಳಿಸಿದ್ದಾರೆ. ಆದರೆ ನಾಲ್ಕು ವರ್ಷಗಳ ಕಾಲ ನಡೆದ ಈ ಅಧ್ಯಯನದಲ್ಲಿ, 10,000 ದಿನಗಳ ಹೆಜ್ಜೆಯನ್ನು ಹೆಚ್ಚಿನ ದಿನಗಳವರೆಗೆ ಪೂರೈಸಲು ಯಾರಿಗೂ ಸಾಧ್ಯವಾಗಲಿಲ್ಲ.


ದೈಹಿಕ ಚಟುವಟಿಕೆ ಮಾರ್ಗಸೂಚಿಗಳು ಹಂತಗಳಿಗಿಂತ ಸಮಯಕ್ಕೆ ಪ್ರಾಧಾನ್ಯತೆ ನೀಡುತ್ತವೆ


ಡಾ. ಲೀ ಹೇಳುವಂತೆ ಒಬ್ಬ ವ್ಯಕ್ತಿಯು ಪ್ರತೀ ದಿನ ನಡೆಯುವ ಹೆಜ್ಜೆಗಳಲ್ಲಿ ಕೆಲವು ಸಾವಿರ ಹೆಜ್ಜೆಗಳನ್ನು ಹೆಚ್ಚು ನಡೆದರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಅಮೆರಿಕ ಹಾಗೂ ಇತರ ಸರಕಾರದ ಮೂಲಕ ಬಿಡುಗಡೆಯಾದ ಚಟುವಟಿಕೆಯ ಮಾರ್ಗಸೂಚಿಗಳು ಹಂತಗಳಿಗಿಂತ ಸಮಯವನ್ನು ಶಿಫಾರಸು ಮಾಡುತ್ತವೆ.


ಇದನ್ನೂ ಓದಿ:Karnataka Rains: ರಾಜ್ಯದಲ್ಲಿ ಜು. 23ರವರೆಗೆ ಅಬ್ಬರಿಸಲಿದೆ ಮಳೆ, ಬೆಂಗಳೂರಲ್ಲಿ ಇನ್ನೂ 2 ದಿನ ವರುಣನ ಆರ್ಭಟ; ಯೆಲ್ಲೋ-ಆರೆಂಜ್ ಅಲರ್ಟ್ !

ವಾರದಲ್ಲಿ ಕನಿಷ್ಠ ಪಕ್ಷ 150 ನಿಮಿಷಗಳ ವ್ಯಾಯಾಮ ಅಗತ್ಯ


ಈ ಮಾರ್ಗಸೂಚಿಯ ಅನುಸಾರ ಪ್ರತಿಯೊಬ್ಬರೂ ತಮ್ಮ ಚಟುವಟಿಕೆಯನ್ನು ಹೊರತುಪಡಿಸಿ ವಾರದಲ್ಲಿ 150 ನಿಮಿಷಗಳ ದೈಹಿಕ ಕಸರತ್ತು ಅಥವಾ ದಿನವೂ 30 ನಿಮಿಷಗಳ ವ್ಯಾಯಾಮವನ್ನು ಮಾಡುವುದು ಅಗತ್ಯವಾಗಿದೆ.


ದಿನದಲ್ಲಿ 7 ರಿಂದ 8 ಸಾವಿರ ಹೆಜ್ಜೆಗಳ ನಡಿಗೆ ಸಾಕು


ಡಾ. ಲೀ ಹೇಳುವಂತೆ ವ್ಯಾಯಾಮಗಳನ್ನು ಬೇರೆ ಬೇರೆ ಹಂತಗಳನ್ನಾಗಿ ವಿಂಗಡಿಸಿದರೆ ದೈನಂದಿನ ವ್ಯಾಯಾಮದ ಪ್ರಕಾರ 16,000 ಹಂತಗಳಿವೆ. ಶಾಪಿಂಗ್ ಮಾಡುವುದು ಮನೆಯಲ್ಲಿನ ಕೆಲಸಗಳ ಸಮಯದಲ್ಲಿಒಬ್ಬ ವ್ಯಕ್ತಿ ಸರಾಸರಿ ದಿನಕ್ಕೆ 5,000 ಹೆಜ್ಜೆಗಳು ನಡೆಯುತ್ತಾನೆ. ಈ 5000 ಹೆಜ್ಜೆಗಳಿಗೆ 2 ರಿಂದ 3 ಸಾವಿರ ಹೆಜ್ಜೆಗಳನ್ನು ಸೇರಿಸಿದರೆ ದಿನಕ್ಕೆ ಆತ ನಡೆಯುವುದು 7 ರಿಂದ 8 ಸಾವಿರ ಹೆಜ್ಜೆಗಳಾಗುತ್ತದೆ.
ಗಡಿಯಾರ ತಯಾರಕ ಕಂಪೆನಿಗಳ ಮಾರುಕಟ್ಟೆ ತಂತ್ರ ಕೂಡ 10,000 ಹೆಜ್ಜೆಗಳು


ಡಾ. ಲೀ ಹೇಳುವಂತೆ 1960ರ ಸಮಯದಲ್ಲಿ ಜಪಾನ್ ದೇಶದಲ್ಲಿ 10 ಸಾವಿರ ಹೆಜ್ಜೆಗಳ ಟಾರ್ಗೆಟ್ ಜನಪ್ರಿಯವಾಯಿತು. 1964ರ ಟೋಕಿಯೊ ಒಲಿಂಪಿಕ್ಸ್ ಬಳಿಕ ಗಡಿಯಾರ ತಯಾರಕ ಕಂಪೆನಿಗಳು ಪೆಡೋಮೀಟರ್‌ಗಳ ಮಾರ್ಕೆಟಿಂಗ್ ಜನಪ್ರಿಯಗೊಳಿಸಲು ಜನರು ಹೆಚ್ಚು ಫಿಟ್‌ನೆಸ್‌ನತ್ತ ಗಮನಹರಿಸುವ ಮಾರುಕಟ್ಟೆ ಕಾರ್ಯತಂತ್ರವನ್ನು ರೂಪಿಸಿದರು. ಜಪಾನೀ ಭಾಷೆಯಲ್ಲಿ 10000 ಹೆಜ್ಜೆಗಳು ಎಂದು ಪೆಡೋಮೀಟರ್ ಮೇಲೆ ಬರೆಯಲಾಯಿತು. ಅಂದಿನಿಂದ 10 ಸಾವಿರ ಹೆಜ್ಜೆಗಳು ಎನ್ನುವುದು ಫಿಟ್‌ನೆಸ್‌ನ ಮಾನದಂಡವಾಗಿ ಮಾರ್ಪಟ್ಟಿದೆ.

First published: