Tirupati Laddu: ತಿರುಪತಿ ಲಡ್ಡುಗೆ ಮುನ್ನೂರು ವರ್ಷವಾಯ್ತು, ಇದರ ವಿಶೇಷತೆ ಗೊತ್ತಾ

ತಿರುಪತಿ ಲಡ್ಡು ನೀಡೋದಕ್ಕೆ ಶುರುವಾಗಿ 300 ವರ್ಷ ಆಯ್ತು ಅಂದ್ರೆ ನೀವು ನಂಬಲೇಬೇಕು. ಹೌದು.. ಆಗಸ್ಟ್ ಎರಡು 1715ರಲ್ಲಿ ಮೊದಲ ಬಾರಿಗೆ ತಿಮ್ಮಪ್ಪನ ಸನ್ನಿಧಿಯಲ್ಲಿ ಲಡ್ಡು ನೀಡಲಾಯ್ತು. ತಿಮ್ಮಪ್ಪನಿಗೂ ಲಡ್ಡುಗೂ ಇರೋ ನಂಟಿನ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ

ತಿರುಪತಿ ಲಡ್ಡು

ತಿರುಪತಿ ಲಡ್ಡು

  • Share this:
ಆಂಧ್ರಪ್ರದೇಶ (ಆಗಸ್ಟ್ 03): ಏಳು ಬೆಟ್ಟದೊಡೆಯ, ಸಂಕಟ ಬಂದಾಗ ವೆಂಕಟರಮಣ (Tirupati Venkatraman) ಅಂತೆಲ್ಲಾ ತಿರುಪತಿ ತಿಮ್ಮಪ್ಪ (Tirupati Balaji) ನ ನೆನೆಯುತ್ತೇವೆ. ಭಾರತದ ಶ್ರೀಮಂತ ದೇಗುಲ (Richest Temple) ಗಳಲ್ಲೊಂದಾದ ತಿರುಪತಿಯ ದರ್ಶನಕ್ಕೆ (Tirupati Darshana) ದೇಶ-ವಿದೇಶದಿಂದ ಭಕ್ತರು ಬರ್ತಾರೆ. ತಿಮ್ಮಪ್ಪನ ಸನ್ನಿಧಿ ಎಷ್ಟು ವೈಶಿಷ್ಯ ಹೊಂದಿದ್ಯೋ ಅಷ್ಟೇ ಏಳುಕೊಂಡಲವಾಡನ ದರ್ಶನ ಪಡೆದ ಬಳಿಕ ಕೊಡೋ ಲಡ್ಡು ಕೂಡ ವಿಶ್ವದಾದ್ಯಂತ ಪ್ರಸಿದ್ಧ. ತಿರುಪತಿಯಲ್ಲಿ ಪೂಜೆ, ದರ್ಶನ ಪಡೆದ ಬಳಿಕ ಲಡ್ಡು (Laddu) ನೀಡಲಾಗುತ್ತೆ. ಪೂಜೆಯ ಬಳಿಕ ಭಕ್ತರು ಸರತಿ ಸಾಲಲ್ಲಿ ನಿಂತು ತಿರುಪತಿ ಲಡ್ಡು ಪಡೆಯುತ್ತಾರೆ. ತಿರುಪತಿ ಲಡ್ಡು ಯಾವಾಗ ಶುರುವಾಯ್ತು..? ತಿರುಪತಿ ಲಡ್ಡು ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿವರ ಇಲ್ಲಿದೆ.

ತಿಮ್ಮಪ್ಪನ ಸನ್ನಿಧಿಗೆ ತೆರಳಿದ ಬಳಿಕ ಲಡ್ಡು ಪಡೆದರೆ ಸಾರ್ಥಕ ಭಾವವೂ ಮೂಡುತ್ತೆ. ತಿಮ್ಮಪ್ಪನ ದರ್ಶನದ ಬಳಿಕ ಪ್ರಸಾದ ರೂಪದಲ್ಲಿ ನೀಡೋ ಲಡ್ಡುಗಳಿಗೆ ಭಕ್ತಗಣ ಕ್ಯೂ ನಿಂತಿರುತ್ತೆ. ಲಡ್ಡು ಪಡೆಯಲು 29 ಹೆಚ್ಚು ಕೌಂಟರ್​ಗಳಿದ್ದು ಪ್ರತಿದಿನವೂ ಭಕ್ತರಿಂದ ತುಂಬಿತುಳುಕ್ತಾ ಇರುತ್ತೆ.

ತಿರುಪತಿ ಲಡ್ಡುಗೆ 300 ವರ್ಷ..!

ತಿರುಪತಿ ಲಡ್ಡು ನೀಡೋದಕ್ಕೆ ಶುರುವಾಗಿ 300 ವರ್ಷ ಆಯ್ತು ಅಂದ್ರೆ ನೀವು ನಂಬಲೇಬೇಕು. ಹೌದು.. ಆಗಸ್ಟ್​ ಎರಡು 1715ರಲ್ಲಿ ಮೊದಲ ಬಾರಿಗೆ ತಿಮ್ಮಪ್ಪನ ಸನ್ನಿಧಿಯಲ್ಲಿ ಲಡ್ಡು ನೀಡಲಾಯ್ತು. ಅಂದರೆ 307 ವರ್ಷದಿಂದ ವೆಂಕಟರಮಣನಿಗೆ ಲಡ್ಡು ನೈವೇದ್ಯವಾಗಿ ಇಡಲಾಗ್ತಿದೆ. ಅದಕ್ಕೂ ಮೊದಲು ಲಡ್ಡು ಪ್ರಸಾದ ವಿತರಣೆಯಾಗುತ್ತಿರಲಿಲ್ಲ. ಹಾಗಾಗಿ ತಿರುಪತಿ ಲಡ್ಡುಗೆ 300 ವರ್ಷಗಳ ಭಾರೀ ಇತಿಹಾಸವಿದೆ.

Bengaluru To Tirupati KSRTC Package Tour Special offer check price facility and booking offers here
ತಿರುಮಲ ತಿರುಪತಿ


ಲಡ್ಡು ಪಡೆಯದಿದ್ರೆ ದರ್ಶನವೇ ಅಪೂರ್ಣವಾದಂತೆ..!

ಹೌದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದರೆ ಒಂದು ಲಡ್ಡು ಉಚಿತವಾಗಿ ಸಿಗುತ್ತೆ. ಅದರಂತೆ ಟಿಕೆಟ್​​ಗೆ ಅನುಗುಣವಾಗಿಯೂ ಲಡ್ಡು ನೀಡಲಾಗುತ್ತೆ. ಒಂದು ಟಿಕೆಟ್ ಅಥವಾ ಟೋಕನ್​​ಗೆ 6 ಲಡ್ಡು ಪಡೆಯಬಹುದು. ವಿಶೇಷ ಪರಿಮಳ, ಸ್ವಾದದ ಲಡ್ಡು ಪಡೆಯದೇ ಹೋದರೆ ಒಂದರ್ಥದಲ್ಲಿ ತಿರುಪತಿಯ ಪ್ರವಾಸವೇ ಅಪೂರ್ಣವಾದಂತೆ ಅಂತಾ ಭಕ್ತರು ಭಾವಿಸ್ತಾರೆ.

ಇದನ್ನೂ ಓದಿ: Shiva Temples: ವಿದೇಶದಲ್ಲೂ ಇದೆ ಅದ್ಭುತ ಶಿವ ಮಂದಿರಗಳು! ದರ್ಶನ ಪಡೆಯಿರಿ

ಪ್ರತಿದಿನ ಒಂದೂವರೆ ಲಕ್ಷ ಲಡ್ಡು ವಿತರಣೆ

ಸೋಜಿಗ ಅನಿಸಿದ್ರೂ ಸತ್ಯ. ತಿರುಪತಿಯಲ್ಲಿ ದಿನವೊಂದಕ್ಕೆ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಲಡ್ಡುಗಳು ತಯಾರಾಗಿ ವಿತರಿಸಲ್ಪಡುತ್ತದೆ. ದರ್ಶನಕ್ಕೆ ಬಂದ ಭಕ್ತರು ಕ್ಯೂ ನಿಂತು ಲಡ್ಡು ಕೊಂಡೊಯ್ಯುತ್ತಾರೆ. ಒಂದೂವರೆ ಲಕ್ಷ ಲಡ್ಡುಗಳಲ್ಲಿ ಸರಾಸರಿ ಓರ್ವ ಭಕ್ತನೇ ಸರಾಸರಿ 4 ಲಡ್ಡು ಕೊಂಡೊಯ್ಯುತ್ತಾನೆ ಎಂದು ಅಂದಾಜಿಸಲಾಗಿದೆ.

ತಿರುಪತಿ ದೇವಸ್ಥಾನ
ತಿರುಪತಿ ದೇವಸ್ಥಾನ


ತಿರುಪತಿಯಲ್ಲಿ 3 ಬಗೆಯ ಲಡ್ಡು..!

ತಿರುಪತಿಯ ಲಡ್ಡು ರುಚಿ ನೋಡಿದವ ಮತ್ತೂ ಬೇಕು ಅಂತಾ ಬಯಸ್ತಾನೆ.  ಅಲ್ಲಿನ ಪ್ರಸಾದದ ಸ್ವಾದವೇ ಅಂತಹುದ್ದು. ತಿರುಪತಿಯಲ್ಲಿ ಕೊಡೋ ಲಡ್ಡು ಒಂದೇ ರೀತಿ ಇರಲ್ಲ. ತಿಮ್ಮಪ್ಪನ ಸನ್ನಿಧಾನದಲ್ಲಿ ತಯಾರಾಗೋ ಲಡ್ಡುಗಳಲ್ಲಿ ಮೂರು ಬಗೆಗಳಿವೆ. ಮೊದಲನೆಯದು ಚಿಕ್ಕ ಲಡ್ಡುವಾಗಿದ್ದು 175ರಿಂದ 200 ಗ್ರಾಂ ಇರುತ್ತದೆ. ಇದಕ್ಕೆ 60 ರೂಪಾಯಿ. ಸಾಮಾನ್ಯವಾಗಿ ಬಹುತೇಕ ಭಕ್ತರು ಇದೇ ಲಡ್ಡನ್ನು ಪಡೆಯುತ್ತಾರೆ. ಎರಡನೆಯದ್ದು ಕಲ್ಯಾಣ ಲಡ್ಡು. ಇದು ಅರ್ಧ ಕೆ.ಜಿ. ತೂಗುತ್ತದೆ. ಈ ಲಡ್ಡು ವಿಶೇಷ ದಿನಗಳಲ್ಲಿ ಮಾತ್ರ ತಯಾರಾಗುತ್ತೆ. ಇದಕ್ಕೆ 100 ರೂಪಾಯಿ.

​ಇದನ್ನೂ ಓದಿ: Raksha Bandhan 2022: ರಕ್ಷಾ ಬಂಧನ ಹಬ್ಬ ಬೆಳೆದು ಬಂದ ಇತಿಹಾಸ ಗೊತ್ತಾ?

ತಿಮ್ಮಪ್ಪನಿಗೆ 32 ಕೆಜಿಯ ಲಡ್ಡು..!

ಇನ್ನು ಕೊನೆಯದಾಗಿ ಬೃಹತ್ ಲಡ್ಡು. ಹೆಸರಿನಂತೆ ಇದು ದೊಡ್ಡದಾಗಿಯೇ ಇರುತ್ತೆ. ಅಂದರೆ 32 ಕೆಜಿ ತೂಗುತ್ತದೆ. ಮಾತ್ರವಲ್ಲದೇ ಇದನ್ನು ವಿಶೇಷ ದಿನಗಳಲ್ಲಿ ಮಾತ್ರ ಹೆಚ್ಚಾಗಿ ತಯಾರಿಸಲಾಗುತ್ತೆ. ವರ್ಷದಲ್ಲಿ ಎರಡ್ಮೂರು ಬಾರಿ ಮಾತ್ರ ತಯಾರಿಸ್ತಾರೆ ಅಂತಾನೂ ಹೇಳಲಾಗುತ್ತೆ. ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಈ ಲಡ್ಡು ವಿಶ್ವದ ಅತೀ ದೊಡ್ಡ ಲಡ್ಡು ಅನ್ನೋ ಖ್ಯಾತಿನೂ ಗಳಿಸಿದೆ. ತಿರುಪತಿ ಲಡ್ಡನ್ನು ಅಲ್ಲಿನ ಅರ್ಚಕರೇ ತಯಾರಿಸೋದು ವಿಶೇಷ.
Published by:Thara Kemmara
First published: