HOME » NEWS » Explained » TIPS TO AVOID FOGGING OF YOUR SPECTACLES FROM THE FACE MASK STG SNVS

Explainer - ಮುಖಕ್ಕೆ ಹಾಕಿದ ಮಾಸ್ಕ್ ನಿಮ್ಮ ಕನ್ನಡಕವನ್ನು ಮಸುಕಾಗಿಸುತ್ತಿದೆಯೇ? ಇಲ್ಲಿವೆ ವಿವಿಧ ಮಾರ್ಗೋಪಾಯಗಳು

ದೃಷ್ಟಿದೋಷ ಇದ್ದು ಕನ್ನಡಕ ಧರಿಸುವವರಿಗೆ ಫೇಸ್ ಮಾಸ್ಕ್ ಒಂದು ರೀತಿಯ ಕಿರಿಕಿರಿ ಐಟಂ. ಉಸಿರಾಟದಿಂದ ಹೊರಬರುವ ನೀರಿನ ಆವಿಯು ಕನ್ನಡಕವನ್ನು ಮಸುಕಾಗಿಸಿ ಸರಿಯಾಗಿ ಕಾಣದಂತೆ ಮಾಡುತ್ತದೆ. ಈ ಸಮಸ್ಯೆಗೆ ಕೆಲ ಪರಿಹಾರಗಳು ಇಲ್ಲಿವೆ…

news18
Updated:March 2, 2021, 2:13 PM IST
Explainer - ಮುಖಕ್ಕೆ ಹಾಕಿದ ಮಾಸ್ಕ್ ನಿಮ್ಮ ಕನ್ನಡಕವನ್ನು ಮಸುಕಾಗಿಸುತ್ತಿದೆಯೇ? ಇಲ್ಲಿವೆ ವಿವಿಧ ಮಾರ್ಗೋಪಾಯಗಳು
ಸಾಂದರ್ಭಿಕ ಚಿತ್ರ
  • News18
  • Last Updated: March 2, 2021, 2:13 PM IST
  • Share this:
ಕೋವಿಡ್ -19 ಸಾಂಕ್ರಾಮಿಕವು ಎಲ್ಲರಿಗೂ ಮಾಸ್ಕ್ ಅನ್ನು ಕಡ್ಡಾಯಗೊಳಿಸಿದೆ. ಇದು ಮೊಬೈಲ್ ಫೋನ್ ಮತ್ತು ಹಣದಷ್ಟೇ ಮಹತ್ವದ್ದಾಗಿದ್ದು, ಮಾಸ್ಕ್ ಇಲ್ಲದೆ ನಾವು ಹೊರಹೋಗಲು ಹಿಂಜರಿಯುತ್ತೇವೆ. ಆದರೂ, ಕನ್ನಡಕವನ್ನು ಧರಿಸುವವರಿಗೆ, ಮಾಸ್ಕ್ ಅನ್ನು ಬಳಸುವುದು ಕಷ್ಟ, ಏಕೆಂದರೆ ಅದು ಅವರ ಕನ್ನಡಕವನ್ನು ಮಸುಕಾಗಿಸುತ್ತದೆ. ಸಾರ್ವಜನಿಕವಾಗಿ ರಕ್ಷಣಾತ್ಮಕ ಮಾಸ್ಕ್​ಗಳನ್ನು ಧರಿಸುವ ಪ್ರಾಮುಖ್ಯತೆಯನ್ನು ಗಮನಿಸಿ, ಕನ್ನಡಕವನ್ನು ಹೊಂದಿರುವ ಅನೇಕ ಜನರು ತೊಂದರೆಗಳನ್ನು ಎದುರಿಸುತ್ತಿದ್ದರೂ ಅದನ್ನು ಧರಿಸುತ್ತಾರೆ. ನೀರಿನ ಆವಿಗಳು ಅವುಗಳ ಮೇಲೆ ಸಂಗ್ರಹವಾದಾಗ ಘನೀಕರಣದಿಂದಾಗಿ ಕನ್ನಡಕ ಮಂಜಾಗುತ್ತದೆ (Fogging.) ಆರ್ದ್ರತೆ, ಬೆವರು ಅಥವಾ ಉಸಿರಾಟದಿಂದಲೂ ನೀರಿನ ಆವಿ ಸೇರಬಹುದು.

ಫೇಸ್ ಮಾಸ್ಕ್ ಧರಿಸಿದಾಗ ಕನ್ನಡಕ ಧರಿಸಿದ ವ್ಯಕ್ತಿಯು ಉಸಿರಾಡುವಾಗ ಬಿಸಿ ಗಾಳಿಯು ಕನ್ನಡಕದ ತಂಪಾದ ಮೇಲ್ಮೈ ಮೇಲೆ ಬಿದ್ದು ತೇವಾಂಶದ ಪದರವನ್ನು ರೂಪಿಸುತ್ತದೆ. ಇದು ಅವರನ್ನು ಸ್ಪಷ್ಟವಾಗಿ ನೋಡುವುದನ್ನು ತಡೆಯುತ್ತದೆ. ಅದೃಷ್ಟವಶಾತ್, ಮಾಸ್ಕ್ ಮತ್ತು ಕನ್ನಡಕ ಹಾಕಿಕೊಂಡು ಸ್ಪಷ್ಟವಾಗಿ ನೋಡಲು ಸಾಧ್ಯವಾಗಿಸುವ ಕೆಲ ತಂತ್ರಗಳು ಇಲ್ಲಿವೆ.:

ಇದನ್ನೂ ಓದಿ: Explainer: ಜಾನ್ಸನ್ ಆ್ಯಂಡ್ ಜಾನ್ಸನ್ ಕೋವಿಡ್ 19 ಲಸಿಕೆಗೆ ಅಮೆರಿಕ ಗ್ರೀನ್ ಸಿಗ್ನಲ್: ಇದರ ಪ್ರಯೋಜನಗಳೇನು ಗೊತ್ತಾ..?

ವಿಶೇಷ ಸ್ಪ್ರೇಗಳು:

ಕನ್ನಡಕವನ್ನು ಮಸುಕಾಗಿಸುವುದನ್ನು ತಪ್ಪಿಸಲು ವಿಶೇಷ ರೀತಿಯ ಸ್ಪ್ರೇಗಳು ಅಥವಾ ದ್ರವೌಷಧಗಳು ಲಭ್ಯವಿದೆ. ಈ ಆ್ಯಂಟಿ-ಫಾಗ್ ಸ್ಪ್ರೇಗಳನ್ನು ಕನ್ನಡಕಗಳ ಮೇಲೆ ಸಿಂಪಡಿಸಿ ಒರೆಸಿದ ಬಳಿಕ, ಫೇಸ್ ಮಾಸ್ಕ್ ಧರಿಸಿದಾಗ ಕನ್ನಡಕವು ಮಸುಕಾಗದಂತೆ ತಡೆಯುತ್ತದೆ.

ಫಿಟ್ಟೆಡ್ ಮಾಸ್ಕ್:

ನಿಮ್ಮ ಮುಖಕ್ಕೆ, ವಿಶೇಷವಾಗಿ ಮೂಗಿನ ಸುತ್ತ ಸಂಪೂರ್ಣವಾಗಿ ಹೊಂದುವ ಮಾಸ್ಕ್​ಗಳನ್ನು ಧರಿಸಲು ಪ್ರಯತ್ನಿಸಿ. ಫೇಸ್ ಮಾಸ್ಕ್ ಮೂಗಿನ ಮೇಲೆ ಸಂಪೂರ್ಣವಾಗಿ ನಿಂತಿದ್ದರೆ, ನೀವು ಉಸಿರಾಡುವ ಗಾಳಿಯು ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಇದರಿಂದಾಗಿ ನಿಮ್ಮ ಕನ್ನಡಕವು ಮಂಜಾಗುವುದಿಲ್ಲ.ಇದನ್ನೂ ಓದಿ: ಯಾರಿಗೆ ಕೋವಿಡ್ ಲಸಿಕೆ ಸಿಗುತ್ತೆ? ಉಸಿರಾಟ ತೊಂದರೆ, ಹೆಚ್ಐವಿ, ಕ್ಯಾನ್ಸರ್ ಸೇರಿ 20 ಕಾಯಿಲೆಗಳ ಪಟ್ಟಿ

ದ್ರವ ಸಾಬೂನುಗಳು:

ಗ್ಲಾಸ್ ಫಾಗಿಂಗ್ ಸಮಸ್ಯೆಗೆ ಈ DIY ಪರಿಹಾರವು ಉತ್ತಮವಾಗಿದೆ. ಫೇಸ್ ಮಾಸ್ಕ್ ಧರಿಸಿದವರು ಕನ್ನಡಕದ ಮೇಲೆ ಒಂದು ಹನಿ ಸೋಪ್ ದ್ರವವನ್ನು ಹಾಕಿ ಅದನ್ನು ಬಟ್ಟೆಯಿಂದ ಸರಿಯಾಗಿ ಒರೆಸಬಹುದು. ಕನ್ನಡಕಗಳ ಮೇಲೆ ಪಾರದರ್ಶಕವಾದ ಸಾಬೂನು ಪದರವು ಅದನ್ನು ಮಸುಕಾಗದಂತೆ ತಡೆಯುತ್ತದೆ.

ಟೇಪ್ ಅಂಟಿಸಿ:

ಮಾಸ್ಕ್ ಹಾಕಿಕೊಂಡು ಫಾಗಿಂಗ್ ಆಗುವುದನ್ನು ತಪ್ಪಿಸಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಮಾಸ್ಕ್ ಅನ್ನು ಮೂಗಿಗೆ ಸರಿಯಾಗಿ ಕೂರುವಂತೆ ಅಂಟಿಸಲು ನೀವು ಮೆಡಿಕಲ್ ಟೇಪ್ ಅನ್ನು ಬಳಸಬಹುದು. ಇದರಿಂದ ಗಾಳಿಯು ಕನ್ನಡಕಕ್ಕೆ ಎಸ್ಕೇಪ್ ಆಗುವುದಿಲ್ಲ ಮತ್ತು ನಿಮ್ಮ ದೃಷ್ಟಿಗೆ ಯಾವುದೇ ತೊಂದರೆಯೂ ಆಗುವುದಿಲ್ಲ.
Published by: Vijayasarthy SN
First published: March 2, 2021, 2:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories