Explained: ಸಮುದ್ರದ ನೀರನ್ನೂ ಕುಡಿಯುವ ನೀರನ್ನಾಗಿ ಪರಿವರ್ತಿಸಬಹುದು! ಅದು ಹೇಗೆ ಗೊತ್ತಾ?

ಭೂಮಿಯ ಮೇಲಿನ ನೀರನ್ನು ಕುಡಿಯುವ ನೀರಾಗಿ, ಬಳಕೆಗೆ ಯೋಗ್ಯವಾಗಿ ಪರಿವರ್ತಿಸಿದರೆ ನೀರಿನ ಸಮಸ್ಯೆ ಸ್ವಲ್ಪ ಬಗೆ ಹರಿಯುತ್ತದೆ

ಭೂಮಿಯ ಮೇಲಿನ ನೀರನ್ನು ಕುಡಿಯುವ ನೀರಾಗಿ, ಬಳಕೆಗೆ ಯೋಗ್ಯವಾಗಿ ಪರಿವರ್ತಿಸಿದರೆ ನೀರಿನ ಸಮಸ್ಯೆ ಸ್ವಲ್ಪ ಬಗೆ ಹರಿಯುತ್ತದೆ

ಭೂಮಿಯ ಮೇಲಿನ ನೀರನ್ನು ಕುಡಿಯುವ ನೀರಾಗಿ, ಬಳಕೆಗೆ ಯೋಗ್ಯವಾಗಿ ಪರಿವರ್ತಿಸಿದರೆ ನೀರಿನ ಸಮಸ್ಯೆ ಸ್ವಲ್ಪ ಬಗೆ ಹರಿಯುತ್ತದೆ

 • Share this:
  ಭೂಮಿಯ (Earth) ಮೇಲೆ ಮೂರು ಭಾಗ ನೀರಿದೆ (Water) ಮತ್ತು ಕೇವಲ ಒಂದೇ ಒಂದು ಭಾಗ ನೆಲವಿದೆ. ಆದರೂ ನೀರಿಗೆ ಎಲ್ಲಾ ಕಡೆ ಹಾಹಾಕಾರವಿದೆ. ಇದಕ್ಕೆ ಕಾರಣ ಭೂಮಿ ಮೇಲಿರುವ ಸಮುದ್ರದ ಉಪ್ಪು ನೀರು (Salt Water). ಭೂಮಿಯ ಮೇಲ್ಮೈಯ ಸುಮಾರು 71 ಪ್ರತಿಶತವು ನೀರಿನಿಂದ ಆವೃತವಾಗಿದ್ದರೂ ಅದರಲ್ಲಿ 96.5 ಪ್ರತಿಶತ ಸಮುದ್ರದ (Sea)  ನೀರು ತುಂಬಿದೆ. ಇದು ಕುಡಿಯಲು ಬಳಸಲು ಯೋಗ್ಯವಾಗಿರುವುದಿಲ್ಲ. ಮತ್ತು 2.5% ಸಿಹಿ ನೀರು (Sweet Water), ಸುಮಾರು 1% ಉಪ್ಪು ನೀರು ನೆಲದಲ್ಲಿದೆ. ಹೀಗಾಗಿ ಕುಡಿಯುವ ಮತ್ತು ಬಳಕೆಗಾಗಿ ಇರುವ ನೀರು ಕೇವಲ ಸ್ವಲ್ಪ ಭಾಗವಷ್ಟೇ. ಬೇಸಿಗೆ ಬಂತೆಂದರೆ ಜನ ಜಾನುವಾರು ಸೇರಿ ಪ್ರಾಣಿ (Animal), ಪಕ್ಷಿ (Bird), ಸಸ್ಯ ಸಂಕುಲ (Plants) ನೀರಿಗಾಗಿ ಪರದಾಡುವಂತಾಗುತ್ತದೆ. ಭೂಮಿಯ ಮೇಲೆ ಬಳಸಲಾಗದಷ್ಟು ನೀರಿದ್ದರೂ ಅದು ವ್ಯರ್ಥವಾಗಿ ಉಳಿದಿದೆ. ಇದನ್ನು ಮನಗಂಡ ಹಲವು ವಿಜ್ಞಾನಿಗಳು (Scientists) ಸಮುದ್ರದ ನೀರನ್ನು ಕುಡಿಯಲು ಯೋಗ್ಯವಾದ ನೀರಾಗಿ ಪರಿವರ್ತಿಸಲು ಸಂಶೋಧನೆಗಳನ್ನು ನಡೆಸುತ್ತಲೇ ಇದ್ದಾರೆ.

  ಅಗತ್ಯತೆಯೇ ಆವಿಷ್ಕಾರದ ತಾಯಿ ಎನ್ನುವಂತೆ ಸಮುದ್ರ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಿಕೊಳ್ಳಬೇಕಾಗಿರುವ ಪರಿಸ್ಥಿತಿ ಈಗಾಗ್ಲೇ ಬಂದೊದಗಿದೆ. ಭೂಮಿಯ ಮೇಲಿನ ನೀರನ್ನು ಕುಡಿಯುವ ನೀರಾಗಿ, ಬಳಕೆಗೆ ಯೋಗ್ಯವಾಗಿ ಪರಿವರ್ತಿಸಿದರೆ ನೀರಿನ ಸಮಸ್ಯೆ ಸ್ವಲ್ಪ ಬಗೆ ಹರಿಯುತ್ತದೆ. ಇದನ್ನೇ ಸಾಕಾರಗೊಳಿಸುವ ಪ್ರಯತ್ನವನ್ನು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಸಂಶೋಧಕರು ನಡೆಸಿದ್ದಾರೆ. ಫಿಲ್ಟರ್‌ಗಳನ್ನು ಬಳಸದೆಯೇ ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಪೋರ್ಟಬಲ್ ಸಾಧನವನ್ನು ಸಂಶೋಧಕರು (Researchers) ಕಂಡು ಹಿಡಿದಿದ್ದಾರೆ.

  ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಸಂಶೋಧಕರು 10 ಕೆ.ಜಿಗಿಂತ ಕಡಿಮೆ ತೂಕದ ಪೋರ್ಟಬಲ್ ಡಿಸಲೀಕರಣ ಘಟಕವನ್ನು ಅಭಿವೃದ್ಧಿಪಡಿಸಿದ್ದಾರೆ, ಇದು ಕುಡಿಯುವ ನೀರನ್ನು ಉತ್ಪಾದಿಸಲು ಕಣಗಳು ಮತ್ತು ಲವಣಗಳನ್ನು ತೆಗೆದುಹಾಕಬಹುದಾದ ಸಾಧನವಾಗಿದೆ. ಈ ಸಾಧನ ಸಮದ್ರ ನೀರನ್ನು ಕುಡಿಯುವ ನೀರನ್ನಾಗಿ ಮಾಡುವುದರ ಜೊತೆಗೆ, ಕುಡಿಯಲು, ಬಳಸಲು ಯೋಗ್ಯವಲ್ಲದ ನೀರನ್ನು ಸಹ ಅದರಲ್ಲಿರುವ ಬೇಡದ ಕಣಗಳು (Particles) ಮತ್ತು ಲವಣಗಳನ್ನು (Salts) ತೆಗೆಯುವ ಮೂಲಕ ಗುಣಮಟ್ಟದ ನೀರನ್ನಾಗಿ ಮಾಡುತ್ತದೆ.

  ಏನಿದು ಪೋರ್ಟಬಲ್ ಸಾಧನ?

  ಸೂಟ್‌ಕೇಸ್ ಗಾತ್ರದ ಸಾಧನವು ಕಾರ್ಯನಿರ್ವಹಿಸಲು ಸೆಲ್ ಫೋನ್ ಚಾರ್ಜರ್‌ಗಿಂತ ಕಡಿಮೆ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದನ್ನು ಚಿಕ್ಕದಾದ, ಪೋರ್ಟಬಲ್ ಸೌರ ಫಲಕದಿಂದ ಚಾಲನೆ ಮಾಡಬಹುದು, ಇದನ್ನು ಆನ್‌ಲೈನ್‌ನಲ್ಲಿ ಸುಮಾರು $50 ಗೆ ಖರೀದಿಸಬಹುದು (ಪ್ರಸ್ತುತ ವಿನಿಮಯ ದರದಲ್ಲಿ ಸುಮಾರು 3,800 ರೂ) ಎಂದು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುದ್ದಿ ಸಂಸ್ಥೆಗೆ ತಿಳಿಸಿದೆ.

  ವಿಶ್ವ ಆರೋಗ್ಯ ಸಂಸ್ಥೆ (WHO) ಗುಣಮಟ್ಟದ ಮಾನದಂಡಗಳನ್ನು ಮೀರಿದ ಕುಡಿಯುವ ನೀರನ್ನು ಈ ಸಾಧನವು ಸ್ವಯಂಚಾಲಿತವಾಗಿ ಉತ್ಪಾದಿಸುತ್ತದೆ ಎಂದು ಅದು ಹೇಳಿದೆ. ಬಟನ್ ಒತ್ತುವ ಮೂಲಕ ಕಾರ್ಯನಿರ್ವಹಿಸುವ ಈ ಸಾಧನ ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಕೆಲಸ ಮಾಡುತ್ತದೆ.

  ಇತರೆ ಪೋರ್ಟಬಲ್ ಡೀಸಲೈನೇಷನ್‌ ಘಟಕಗಳು ನೀರನ್ನು ಶುದ್ಧ ಮಾಡಲು ಫಿಲ್ಟರ್‌ಗಳ ಅಗತ್ಯತೆಯನ್ನು ಸಾಮಾನ್ಯವಾಗಿ ಹೊಂದಿರುತ್ತವೆ, ಆದರೆ ಈ ಸಾಧನವು ಕುಡಿಯುವ ನೀರಿನಿಂದ ಕಣಗಳನ್ನು ತೆಗೆದುಹಾಕಲು ವಿದ್ಯುತ್ ಶಕ್ತಿಯನ್ನು ಬಳಸುತ್ತದೆ. ಬದಲಿ ಫಿಲ್ಟರ್‌ಗಳ ಅಗತ್ಯವನ್ನು ತೆಗೆದುಹಾಕುವುದು ದೀರ್ಘಾವಧಿಯ ನಿರ್ವಹಣೆಯ ಅವಶ್ಯಕತೆಗಳನ್ನು ಬಹಳವಾಗಿ ಕಡಿಮೆ ಮಾಡುತ್ತದೆ.

  ಇದು ಸಣ್ಣ ದ್ವೀಪಗಳಲ್ಲಿನ ಸಮುದಾಯಗಳು ಅಥವಾ ಸಮುದ್ರಯಾನ ಸರಕು ಹಡಗುಗಳಂತಹ ದೂರದ ಮತ್ತು ತೀವ್ರವಾಗಿ ಸಂಪನ್ಮೂಲ-ಸೀಮಿತ ಪ್ರದೇಶಗಳಲ್ಲಿ ಘಟಕವನ್ನು ನಿಯೋಜಿಸಲು ಸಾಧ್ಯವಾಗಿಸುತ್ತದೆ ಎಂದು ಸಂಶೋಧಕರ ತಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೈಸರ್ಗಿಕ ವಿಕೋಪಗಳಿಂದ ಪಲಾಯನ ಮಾಡುವ ನಿರಾಶ್ರಿತರಿಗೆ ಅಥವಾ ದೀರ್ಘಾವಧಿಯ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸುವ ಸೈನಿಕರಿಗೆ ಸಹಾಯ ಮಾಡಲು ಇದನ್ನು ಬಳಸಬಹುದು ಎಂದು ಅದು ಹೇಳಿದೆ.

  ಇದನ್ನೂ ಓದಿ : Kindness: ದೇವರೇ ಡ್ಯೂಟಿಯಲ್ಲಿದ್ದಾರೆ! ರಸ್ತೆ ಬದಿ ವ್ಯಾಪಾರಿಗಳಿಗೆ ತಂಪು ನೀರು, ವಿಡಿಯೋಗೆ ನೆಟ್ಟಿಗರು ಫಿದಾ

  ನೀರನ್ನು ಶುದ್ಧೀಕರಣ ಮಾಡುವ ಈ ಸಾಧನದ ಸಂಶೋಧಕರು ಹೇಳುವ ಪ್ರಕಾರ "ಇದು ನಿಜವಾಗಿಯೂ ನಾನು ಮತ್ತು ನನ್ನ ಗುಂಪಿನ 10 ವರ್ಷಗಳ ಪ್ರಯಾಣದ ಯಶಸ್ಸು, ನಾವು ವೈಯಕ್ತಿಕ ನಿರ್ಲವಣೀಕರಣ ಪ್ರಕ್ರಿಯೆಗಳ ಹಿಂದೆ ಭೌತಶಾಸ್ತ್ರದ ಮೇಲೆ ವರ್ಷಗಳ ಕಾಲ ಕೆಲಸ ಮಾಡಿದ್ದೇವೆ, ಆದರ ಪ್ರತಿಫಲವಾಗಿ ಆ ಎಲ್ಲಾ ಪ್ರಗತಿಗಳನ್ನು ಸಮುದ್ರದಲ್ಲಿ ಪ್ರದರ್ಶಿಸಿದ್ದೇವೆ, ಇದು ನಮಗೆ ನಿಜವಾಗಿಯೂ ಅರ್ಥಪೂರ್ಣ ಮತ್ತು ಲಾಭದಾಯಕ ಅನುಭವವಾಗಿದೆ" ಎಂದು ಸಂಶೋಧಕರ ತಂಡದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಹಾಗೂ ಬಯೋಲಾಜಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾದ ಜೊಂಗ್ಯೂನ್ ಹಾನ್ ಹೇಳಿದ್ದಾರೆ.

  ಪೋರ್ಟಬಲ್ ಘಟಕ ಹೇಗೆ ಕಾರ್ಯನಿರ್ವಹಿಸುತ್ತದೆ..?
  ಇದು ಒಂದು ಫಿಲ್ಟರ್-ಮುಕ್ತ ತಂತ್ರಜ್ಞಾನವಾಗಿದೆ. ಈ ಘಟಕವು ಅಯಾನ್ ಸಾಂದ್ರತೆಯ ಧ್ರುವೀಕರಣ (ICP) ಎಂಬ ತಂತ್ರವನ್ನು ಅವಲಂಬಿಸಿದೆ, ಇದನ್ನು 10 ವರ್ಷಗಳ ಹಿಂದೆ ಹ್ಯಾನ್‌ನ ಗುಂಪು ಉಲ್ಲೇಖಿಸಿದೆ ಎಂದು ಪ್ರಕಟಣೆ ತಿಳಿಸಿದೆ. ಸಾಮಾನ್ಯವಾಗಿ ಫಿಲ್ಟರ್‌ಗಳ ಮೂಲಕ ನೀರನ್ನು ತಳ್ಳಲು ಹೆಚ್ಚಿನ ಒತ್ತಡದ ಪಂಪ್‌ಗಳ ಅಗತ್ಯವಿರುತ್ತದೆ ಎನ್ನುತ್ತಾರೆ ಸಂಶೋಧಕರು.

  ನೀರನ್ನು ಫಿಲ್ಟರ್ ಮಾಡುವ ಬದಲು, ಈ ಪ್ರಕ್ರಿಯೆಯು ವಿದ್ಯುತ್ ಶಕ್ತಿಯನ್ನು ಅನ್ವಯಿಸುತ್ತದೆ. ಅದು ಧನಾತ್ಮಕ ಅಥವಾ ಋಣಾತ್ಮಕ ಆವೇಶದ ಕಣಗಳನ್ನು ಉಂಟುಮಾಡುತ್ತದೆ. ಉಪ್ಪು ಅಣುಗಳು, ಬ್ಯಾಕ್ಟೀರಿಯಾಗಳು, ವೈರಸ್‌ಗಳು ಸೇರಿದಂತೆ ಅವುಗಳನ್ನು ನೀರಿನಿಂದ ತೆಗೆದು ಹಾಕಲು ಚಾರ್ಜ್ಡ್ ಕಣಗಳನ್ನು ನೀರಿನ ಎರಡನೇ ಸ್ಟ್ರೀಮ್ ಆಗಿ ಪರಿವರ್ತಿಸಲಾಗುತ್ತದೆ. ಈ ಪ್ರಕ್ರಿಯೆಯು ಘನವಸ್ತುಗಳನ್ನು ತೆಗೆದುಹಾಕುತ್ತದೆ ಹಾಗೂ ಶುದ್ಧ ನೀರು ಚಾನಲ್ ಮೂಲಕ ಹಾದುಹೋಗಲು ಅನುವು ಮಾಡಿಕೊಡುತ್ತದೆ.

  ಇದನ್ನೂ ಓದಿ : Car Accident: ಅಪಘಾತ ನಿಲ್ಲಿಸಲು ಕಿಟಕಿಯೊಳಗೆ ಹಾರಿ ಕಾರು ನಿಲ್ಲಿಸಿದ ಯುವಕ! ವಿಡಿಯೋ ವೈರಲ್

  ಇದಕ್ಕೆ ಕಡಿಮೆ-ಒತ್ತಡದ ಪಂಪ್ ಮಾತ್ರ ಅಗತ್ಯವಿರುವುದರಿಂದ, ICP ಇತರ ತಂತ್ರಗಳಿಗಿಂತ ಕಡಿಮೆ ಶಕ್ತಿಯನ್ನು ಬಳಸುತ್ತದೆ. ಆದರೆ ICP ಯಾವಾಗಲೂ ಚಾನಲ್ ಮಧ್ಯದಲ್ಲಿ ತೇಲುತ್ತಿರುವ ಎಲ್ಲಾ ಲವಣಗಳನ್ನು ತೆಗೆದುಹಾಕುವುದಿಲ್ಲ. ಆದ್ದರಿಂದ ಸಂಶೋಧಕರು ನೀರಿನಲ್ಲಿ ಉಳಿದ ಉಪ್ಪು, ಅಯಾನುಗಳನ್ನು ತೆಗೆದುಹಾಕಲು ಎಲೆಕ್ಟ್ರೋಡಯಾಲಿಸಿಸ್ ಎಂದು ಕರೆಯಲ್ಪಡುವ ಎರಡನೇ ಪ್ರಕ್ರಿಯೆಯನ್ನು ಸಂಯೋಜಿಸಿದ್ದಾರೆ.

  ಸಮುದ್ರದ ಬಳಿ ಪರೀಕ್ಷೆ

  ವಿಭಿನ್ನ ಲವಣಾಂಶ ಮತ್ತು ಪ್ರಕ್ಷುಬ್ಧತೆಯ ಮಟ್ಟಗಳೊಂದಿಗೆ ನೀರನ್ನು ಬಳಸಿಕೊಂಡು ಲ್ಯಾಬ್ ಪ್ರಯೋಗಗಳನ್ನು ನಡೆಸಿದ ನಂತರ, ತಂಡವು ಬೋಸ್ಟನ್‌ನ ಕಾರ್ಸನ್ ಬೀಚ್‌ನಲ್ಲಿ ಸಾಧನವನ್ನು ಕ್ಷೇತ್ರ-ಪರೀಕ್ಷೆ ಮಾಡಿದರು. ಯೂನ್ ಮತ್ತು ಕ್ವಾನ್ ದಡದ ಬಳಿ ಸಾಧನವನ್ನು ಸ್ಥಾಪಿಸಿದರು ಮತ್ತು ಫೀಡ್ ಟ್ಯೂಬ್ ಅನ್ನು ನೀರಿಗೆ ಎಸೆದರು. ಸುಮಾರು ಅರ್ಧ ಗಂಟೆಯಲ್ಲಿ ಸ್ಪಷ್ಟವಾದ, ಕುಡಿಯಬಹುದಾದ ನೀರನ್ನು ಪಡೆದುಕೊಂಡರು. ಇದರ ಪರಿಣಾಮವಾಗಿ ನೀರು ವಿಶ್ವ ಆರೋಗ್ಯ ಸಂಸ್ಥೆಯ ಗುಣಮಟ್ಟದ ಮಾರ್ಗಸೂಚಿಗಳನ್ನು ಪಡೆದುಕೊಂಡಿತು.
  Published by:Ashwini Prabhu
  First published: