• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಶತಕೋಟಿ ಡಾಲರ್ ಬ್ರ್ಯಾಂಡ್, ಪ್ರತಿಸ್ಪರ್ಧಿಗಳನ್ನು ಮೀರಿ ಮಾರುಕಟ್ಟೆ ಲೀಡರ್ ಆಗಿದ್ದು ಹೇಗೆ ಸರ್ಫ್ ಎಕ್ಸೆಲ್?

Explained: ಶತಕೋಟಿ ಡಾಲರ್ ಬ್ರ್ಯಾಂಡ್, ಪ್ರತಿಸ್ಪರ್ಧಿಗಳನ್ನು ಮೀರಿ ಮಾರುಕಟ್ಟೆ ಲೀಡರ್ ಆಗಿದ್ದು ಹೇಗೆ ಸರ್ಫ್ ಎಕ್ಸೆಲ್?

ಪ್ರತಿಸ್ಪರ್ಧಿಗಳನ್ನು ಮೀರಿ ಮಾರುಕಟ್ಟೆ ಲೀಡರ್ ಆಗಿದ್ದು ಹೇಗೆ ಸರ್ಫ್ ಎಕ್ಸೆಲ್?

ಪ್ರತಿಸ್ಪರ್ಧಿಗಳನ್ನು ಮೀರಿ ಮಾರುಕಟ್ಟೆ ಲೀಡರ್ ಆಗಿದ್ದು ಹೇಗೆ ಸರ್ಫ್ ಎಕ್ಸೆಲ್?

ತೀವ್ರ ಪೈಪೋಟಿಯ ನಡುವೆ ಕೂಡ ಸರ್ಫ್ ಎಕ್ಸೆಲ್ ಖ್ಯಾತಿಯನ್ನು ಗಿಟ್ಟಿಸಿಕೊಂಡಿದ್ದು ಮನೆ ಮನೆಯ ಬ್ರ್ಯಾಂಡ್ ಆಗಿ ಮನೆಮಾತಾಗಿದೆ. HUL ಪ್ರಯಾಣ ಹೇಗಿತ್ತು ಅಂತೆಯೇ ಇತರ ಬ್ರ್ಯಾಂಡ್‌ಗಳ ಪೈಪೋಟಿಯನ್ನು ಹಿಂದಿಕ್ಕಿ ಮಾರುಕಟ್ಟೆ ನಾಯಕ ಎಂದೆನಿಸಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

 • Trending Desk
 • 5-MIN READ
 • Last Updated :
 • Bangalore [Bangalore], India
 • Share this:

  ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ನ (HUL) ಐಕಾನಿಕ್ ಡಿಟರ್ಜೆಂಟ್ ಸರ್ಫ್ ಎಕ್ಸೆಲ್ 2022 ರಲ್ಲಿ ವಾರ್ಷಿಕ ಮಾರಾಟದಲ್ಲಿ $1 ಬಿಲಿಯನ್ ದಾಟಿದ ಮೊದಲ ಭಾರತೀಯ ಗೃಹ ಮತ್ತು ವೈಯಕ್ತಿಕ ಆರೈಕೆ ಬ್ರ್ಯಾಂಡ್ ಎಂದೆನಿಸಿದೆ. ಡಿಟರ್ಜೆಂಟ್ ಬ್ರ್ಯಾಂಡ್ ಕಳೆದ ವರ್ಷ ವಾರ್ಷಿಕ ಮಾರಾಟದಲ್ಲಿ 8,200 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ದಾಖಲಿಸಿದ್ದು, ಈ ಸಾಧನೆ ಸಾಧಿಸಿದ ಮೊದಲ HUL ಬ್ರ್ಯಾಂಡ್ ಎಂದೆನಿಸಿದೆ.


  ಇತರ ಬ್ರ್ಯಾಂಡ್‌ಗಳ ತೀವ್ರ ಪೈಪೋಟಿಯ ನಡುವೆ ಕೂಡ ಸರ್ಫ್ ಎಕ್ಸೆಲ್ ಖ್ಯಾತಿಯನ್ನು ಗಿಟ್ಟಿಸಿಕೊಂಡಿದ್ದು ಮನೆ ಮನೆಯ ಬ್ರ್ಯಾಂಡ್ ಆಗಿ ಮನೆಮಾತಾಗಿದೆ. HUL ಪ್ರಯಾಣ ಹೇಗಿತ್ತು ಅಂತೆಯೇ ಇತರ ಬ್ರ್ಯಾಂಡ್‌ಗಳ ಪೈಪೋಟಿಯನ್ನು ಹಿಂದಿಕ್ಕಿ ಮಾರುಕಟ್ಟೆ ನಾಯಕ ಎಂದೆನಿಸಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.


  ಇದನ್ನೂ ಓದಿ: 


  ಸರ್ಫ್ ಎಕ್ಸೆಲ್ ಸ್ಟೋರಿ ಇಲ್ಲಿದೆ ನೋಡಿ


  ಕಂಪನಿಯು ಲಾಭಾಂಶವುಳ್ಳ ಉತ್ಪನ್ನಗಳ ಮೇಲೆ ಹೆಚ್ಚಿನ ಗಮನ ನೀಡುತ್ತಿದ್ದು ಬ್ರ್ಯಾಂಡ್ ಈಗ ಭಾರತದ ಒಟ್ಟಾರೆ ಡಿಟರ್ಜೆಂಟ್‌ಗಳ ಮಾರುಕಟ್ಟೆಯ ಬಹುಭಾಗವನ್ನು ನಿಯಂತ್ರಿಸುತ್ತದೆ, ಇದು 2027 ರ ವೇಳೆಗೆ 70,000 ಕೋಟಿ ರೂಪಾಯಿಗಳನ್ನು ಮೀರುವ ನಿರೀಕ್ಷೆಯಿದೆ ಎಂಬುದು ತಿಳಿದುಬಂದಿದೆ.


  1950 ರ ದಶಕದ ಉತ್ತರಾರ್ಧದಲ್ಲಿ ಯುನಿಲಿವರ್‌ನಿಂದ ಸರ್ಫ್ ಎಂದು ಪರಿಚಯಿಸಲಾಯಿತು, ಈಗ ಸಾಂಪ್ರದಾಯಿಕ ಬ್ರ್ಯಾಂಡ್ ಯುಎಸ್ ಮತ್ತು ಯುರೋಪ್‌ನಂತಹ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿ ಮಧ್ಯಮ-ಆದಾಯದ ಕುಟುಂಬಗಳ ಗೃಹಿಣಿಯರನ್ನು ಗುರಿಯಾಗಿರಿಸಿಕೊಂಡಿದೆ.


  ಭಾರತದಲ್ಲಿ, ಆರಂಭದಿಂದಲೂ, ಸರ್ಫ್ ಪ್ರೀಮಿಯಂ ಬ್ರ್ಯಾಂಡ್ ಆಗಿದ್ದರೂ ಆ ಸಮಯದಲ್ಲಿ, ಹೆಚ್ಚಿನ ಗೃಹಿಣಿಯರು ಅಗ್ಗದ ಬಾರ್ ಸೋಪ್‌ಗಳನ್ನು ಬಳಸುತ್ತಿದ್ದರು.


  HUL ನ ಸರ್ಫ್ ಎಕ್ಸೆಲ್ ಬ್ರ್ಯಾಂಡ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಎಂದೆನಿಸಿದ್ದರೂ ಈ ಸಾಧನೆ ಸಾಧಿಸಲು ಬ್ರ್ಯಾಂಡ್ ಸಾಕಷ್ಟು ಕಷ್ಟಪಟ್ಟಿದೆ ಹಾಗೂ ಹೆಚ್ಚಿನ ಅಡೆತಡೆಗಳನ್ನು ದಾಟಿ ನಂಬರ್ ಒನ್ ಸ್ಥಾನಕ್ಕೇರಿದೆ. ದಾಗ್ ಅಚ್ಚಾ ಹೈ (ಕೊಳೆ ಒಳ್ಳೆಯದೇ) ಎಂಬ ಸ್ಲೋಗನ್ ಮೂಲಕವೇ ಮನೆ ಮಾತಾದ ಸರ್ಫ್ ಎಕ್ಸೆಲ್ ಜನಮಾನಸದಲ್ಲಿ ಹೆಸರುವಾಸಿಯಾಗಿದೆ.


  ಆರು ದಶಕಗಳ ಇತಿಹಾಸ ಹೊಂದಿರುವ ಬ್ರ್ಯಾಂಡ್


  ಸುಮಾರು ಆರು ದಶಕಗಳ ಇತಿಹಾಸ ಹೊಂದಿರುವ ಸರ್ಫ್ ಎಕ್ಸೆಲ್ ಬ್ರ್ಯಾಂಡ್ ಆರಂಭದಲ್ಲಿ ಯಶಸ್ಸನ್ನು ಕಂಡಿತು ಹಾಗೂ ಇದು ಬಿಡುಗಡೆಗೊಂಡ ಕೆಲವೇ ಸಮಯಗಳಲ್ಲಿ ಮಾರುಕಟ್ಟೆ ನಾಯಕ ಎಂದೆನಿಸಿತು. ಆದರೆ ನಿರ್ಮಾದಂತಹ ಇತರ ಉತ್ಪನ್ನಗಳ ಪೈಪೋಟಿ ಕೂಡ ಸರ್ಫ್ ಎಕ್ಸೆಲ್‌ ಎದುರಿಸಬೇಕಾಯಿತು ಹಾಗೂ ತನ್ನ ಅಭಿವೃದ್ಧಿ ಪಯಣದುದ್ದಕ್ಕೂ ಅನೇಕ ಕಠಿಣ ಸವಾಲುಗಳನ್ನು ಎದುರಿಸಿತು.


  ಇದನ್ನೂ ಓದಿ: explained: ಭಾರತದಲ್ಲಿ ಉದ್ಯೋಗಿಗಳನ್ನು ವಜಾ ಮಾಡಿದ ಗೂಗಲ್! ಕಠಿಣ ಪರಿಸ್ಥಿತಿ ಎದುರಿಸುತ್ತಿವೆಯಾ ಟೆಕ್‌ ಕಂಪನಿಗಳು?


  1970 ರ ದಶಕದಲ್ಲಿ HUL (ಆಗಿನ ಹಿಂದೂಸ್ತಾನ್ ಲಿವರ್ ಲಿಮಿಟೆಡ್) ನಂತಹ ಬಹುರಾಷ್ಟ್ರೀಯ ಉತ್ಪನ್ನಗಳ ಸ್ಪರ್ಧಾತ್ಮಕ ಉತ್ಪನ್ನಗಳಿಗೆ ಹೋಲಿಸಿದರೆ ರಸಾಯನಶಾಸ್ತ್ರಜ್ಞ ಕರ್ಸನ್ಭಾಯ್ ಪಟೇಲ್ ಅವರು 75 ಪ್ರತಿಶತ ರಿಯಾಯಿತಿಯಲ್ಲಿ ನಿರ್ಮಾವನ್ನು ಪ್ರಾರಂಭಿಸಿದಾಗ ಶೀಘ್ರವಾಗಿ ಹೊಸದಾದ ಸವಾಲಾಗಿ ಹೊರಹೊಮ್ಮಿತು. 1980 ರ ಹೊತ್ತಿಗೆ, HUL ಸೇರಿದಂತೆ ಇನ್ನಿತರ ಬ್ರ್ಯಾಂಡ್‌ಗಳನ್ನು ಹೊಡೆದುರುಳಿಸಿ ನಿರ್ಮಾ ಅತಿದೊಡ್ಡ ಡಿಟರ್ಜೆಂಟ್ ಬ್ರಾಂಡ್ ಎಂದೆನಿಸಿತು.


  ಹೆಜ್ಜೆ ಹೆಜ್ಜೆಗೂ ಪೈಪೋಟಿ ತೀವ್ರ ಸವಾಲು


  ಸರ್ಫ್ ಎಕ್ಸೆಲ್‌ಗೆ ಮೊದಲ ಎದುರಾಳಿಯಾಗಿ ಅಹಮದಾಬಾದ್ ಮೂಲದ ನಿರ್ಮಾ ತೀವ್ರ ಪೈಪೋಟಿ ನೀಡಿತು.1980 ರ ದಶಕದಲ್ಲಿ ಸರ್ಫ್ ಎಕ್ಸೆಲ್ ಅನ್ನು ಬಳಸಿಕೊಂಡು ನಿರ್ಮಾ ದೇಶದ ಅತ್ಯಂತ ಜನಪ್ರಿಯ ಡಿಟರ್ಜೆಂಟ್ ಬ್ರ್ಯಾಂಡ್ ಆಗಿ ಹೊರಹೊಮ್ಮಿತು ಎಂದೇ ಹೇಳಬಹುದು. ಇದಕ್ಕೆ ಉತ್ತರವಾಗಿ HUL ವೀಲ್ ಅನ್ನು ಪರಿಚಯಿಸಿತು ಹಾಗೂ ನಿರ್ಮಾಗಿಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯ ಗಮನ ಸೆಳೆಯುವ ಪ್ರಯತ್ನ ಮಾಡಿತು.


  ಆದಾಗ್ಯೂ, HUL ನ ಪ್ರೀಮಿಯಂ ಡಿಟರ್ಜೆಂಟ್ ಬ್ರ್ಯಾಂಡ್ ಸರ್ಫ್ ತನ್ನ ಹೆಚ್ಚಿನ ಬೆಲೆಯಿಂದಾಗಿ ಕೆಳಗಿಳಿಯಿತು ಹಾಗೂ ಜನಪ್ರಿಯತೆಯಲ್ಲೂ ಮುಗ್ಗರಿಸಿತು. ಸರ್ಫ್ ಎಕ್ಸೆಲ್ ತನ್ನ ಸುದೀರ್ಘ ಪ್ರಯಾಣದಲ್ಲಿ ಹಲವಾರು ಬಾರಿ ಇಂತಹ ಸವಾಲುಗಳನ್ನು ಎದುರಿಸಿತು. ಜೊತೆಗೆ ಬ್ರ್ಯಾಂಡ್ ಏರಿಯಲ್ ಮತ್ತು ಘಾಡಿಯಂತಹ ಇತರ ಬ್ರಾಂಡ್‌ಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸಲಾರಂಭಿಸಿತು. ದೀರ್ಘಕಾಲದವರೆಗೆ, ಸರ್ಫ್ ಎಕ್ಸೆಲ್ ತೀವ್ರ ಪೈಪೋಟಿಯಿಂದಾಗಿ ತೆರೆಮರೆಯಲ್ಲಿಯೇ ಉಳಿಯಿತು, ಆದರೆ ಕಡಿಮೆ ಬೆಲೆಯ ಬ್ರ್ಯಾಂಡ್‌ಗಳ ಉಪಸ್ಥಿತಿಯ ಜೊತೆಗೂ ಅದು ಪ್ರಬಲವಾಗಿ ಹೊರಹೊಮ್ಮಿತು ಮತ್ತು ತನ್ನ ಅಗ್ರ ಸ್ಥಾನವನ್ನು ಮರಳಿ ಪಡೆಯಿತು.


  ಕಡಿಮೆ ಬೆಲೆಯಲ್ಲಿ ಉತ್ಪನ್ನ ಪರಿಚಯಿಸಿದ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್


  ಪ್ರತಿಸ್ಪರ್ಧಿಗಳು ಬಿಡುಗಡೆ ಮಾಡಿದ ಕಡಿಮೆ ಬೆಲೆಯ ಉತ್ಪನ್ನಗಳಿಗೆ ಸರಿಸಮನಾಗಿ HUL ಭಾರತದಲ್ಲಿ ಹಲವಾರು ಇತರ ಡಿಟರ್ಜೆಂಟ್ ಬ್ರಾಂಡ್‌ಗಳನ್ನು ಪರಿಚಯಿಸಿದೆ, ಇದರೊಂದಿಗೆ ಬ್ರ್ಯಾಂಡ್ ಎಂದಿಗೂ ಸರ್ಫ್ ಎಕ್ಸೆಲ್‌ಗಿದ್ದ ಖ್ಯಾತಿಯ ಟ್ಯಾಗ್ ಅನ್ನು ಉಳಿಸಿಕೊಂಡಿದೆ. HUL ನ ಹೋಮ್ ಕೇರ್‌ ಕಾರ್ಯನಿರ್ವಾಹಕ ನಿರ್ದೇಶಕ ದೀಪಕ್ ಸುಬ್ರಾ ಸಂಸ್ಥೆಯ ಖ್ಯಾತಿಯ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಲಿಕ್ವಿಡ್ ಡಿಟರ್ಜೆಂಟ್‌ಗಳು ಮತ್ತು ಫ್ಯಾಬ್ರಿಕ್ ಕಂಡಿಷನರ್‌ಗಳ ಮೂಲಕ ವಿಭಾಗದ ಐಷಾರಾಮಿ ಪ್ರಪಂಚದ ಅಪೇಕ್ಷಣೀಯತೆ ಮತ್ತು ಸಮೂಹ ಮಾರುಕಟ್ಟೆಯ ಕಾರ್ಯ ಮತ್ತು ಅವಶ್ಯಕತೆಯ ನಡುವಿನ ಅಗತ್ಯತೆಯನ್ನು ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: Explained: ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾದ ನಟಿ ಸ್ವರಾ ಭಾಸ್ಕರ್; ಏನಿದು ಕಾಯ್ದೆ? ಮಾನದಂಡಗಳೇನು?


  ಸರ್ಫ್ ಎಕ್ಸೆಲ್‌ ತನ್ನ ಹಿಂದಿನ ಖ್ಯಾತಿ ಮರಳಿ ಪಡೆದುಕೊಂಡಿದ್ದು ಹೇಗೆ?


  ಕಳೆದ ಮೂರು ವರ್ಷಗಳಿಂದ ಸರ್ಫ್ ಎಕ್ಸೆಲ್ ತನ್ನ ಪ್ರತಿಸ್ಪರ್ಧಿಗಳಿಗಿಂತ ಇನ್ನಷ್ಟು ದೃಢವಾಗಿ ಮುನ್ನಡೆಯಲ್ಲಿರಲು ಸಹಾಯ ಮಾಡಿದ ಇತರ ಅಂಶಗಳಿವೆ. ತನ್ನದೇ ಶ್ರೇಣಿಯ ಬಾರ್‌ಗಳು ಮತ್ತು ಲಿಕ್ವಿಡ್ ಡಿಟರ್ಜೆಂಟ್‌ಗಳೊಂದಿಗೆ ಮಾರ್ಕೆಟಿಂಗ್ ಮತ್ತು ನಾವೀನ್ಯತೆಯು ಸರ್ಫ್ ಎಕ್ಸೆಲ್ ಮೈಲಿಗಲ್ಲನ್ನು ತಲುಪಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.


  ಏರುತ್ತಿರುವ ಹಣದುಬ್ಬರ ಹಾಗೂ ಬ್ರ್ಯಾಂಡ್‌ಗಿರುವ ಹೆಚ್ಚಿನ ಬೇಡಿಕೆ ಕೂಡ ಸರ್ಫ್ ಎಕ್ಸೆಲ್‌ಗೆ ಮಾರುಕಟ್ಟೆ ಲೀಡರ್ ಆಗಿ ಖ್ಯಾತಿಪಡೆಯಲು ಕಾರಣವಾಗಿದೆ. ಸಮಸ್ಯೆಗಳನ್ನು ಗುರುತಿಸುವ ಮೂಲಕ ಮತ್ತು ಹೊಸ ಪರಿಹಾರಗಳೊಂದಿಗೆ ಬರುವ ಮೂಲಕ ಅಂತೆಯೇ ಹೊಸ ಸ್ಪರ್ಧೆಗಳನ್ನು ಎದುರಿಸುವಲ್ಲಿ ಸಂಸ್ಥೆಯ ಮ್ಯಾನೇಜ್‌ಮೆಂಟ್‌ನ ಚುರುಕುತನದೊಂದಿಗೆ HUL ಹಲವಾರು ಬಾರಿ ಸರ್ಫ್ ಎಕ್ಸೆಲ್ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿದ್ದರೂ ಹೆಚ್ಚಿನ ಆದಾಯ ಉತ್ಪಾದನೆಗೆ ಕೊಡುಗೆ ನೀಡಿದೆ ಎಂಬುದು ಇಲ್ಲಿ ಗಮನಾರ್ಹವಾದ ಅಂಶವಾಗಿದೆ.


  ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದರೂ ಬ್ರ್ಯಾಂಡ್ ಖ್ಯಾತಿಗಳಿಸಿದ್ದು ಹೇಗೆ?


  HUL ತನ್ನ ಸರ್ಫ್ ಎಕ್ಸೆಲ್ ಸರಕುಗಳ ಬೆಲೆಯನ್ನು ಹಲವಾರು ಬಾರಿ ಹೆಚ್ಚಿಸಿದೆ, ಪ್ರತಿ ಬಾರಿ ಎರಡು-ಅಂಕಿಯ ಶೇಕಡಾವಾರು ಪಾಯಿಂಟ್‌ನಿಂದ, 2021 ರ ಅಂತ್ಯದಿಂದ, ಅದರ ಒಟ್ಟಾರೆ ಆದಾಯವನ್ನು ಹೆಚ್ಚಿಸಿದೆ.


  ಜಾಗತಿಕವಾಗಿ 500 ಮಿಲಿಯನ್ ಮನೆಗಳಲ್ಲಿ ಸರ್ಫ್ ಎಕ್ಸೆಲ್ ಬಳಕೆಯಾಗುತ್ತಿದ್ದು ಆಯಾಯ ಪ್ರದೇಶಕ್ಕೆ ತಕ್ಕಂತೆ ಬೇರೆ ಬೇರೆ ಹೆಸರುಗಳಲ್ಲಿ ಸರ್ಫ್ ಎಕ್ಸೆಲ್ ಹೆಸರುವಾಸಿಯಾಗಿದೆ. OMO, ಪರ್ಸಿಲ್, ರಿನ್ಸೊ, ಬ್ರೀಜ್ ಹಾಗೂ ಸರ್ಫ್ ಎಕ್ಸೆಲ್ ಹೀಗೆ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಯೂನಿಲಿವರ್ ಲಾಂಡ್ರಿ ಬ್ರ್ಯಾಂಡ್ 2022 ರಲ್ಲಿ $4.2 ಶತಕೋಟಿ ಮಾರಾಟದ ಮನ್ನಣೆಯನ್ನು ಗಳಿಸಿದೆ.
  1948 ರಲ್ಲಿ ನೆರೆಯ ಪಾಕಿಸ್ತಾನದಲ್ಲಿ ಬ್ರ್ಯಾಂಡ್ ಆರಂಭವಾಯಿತು ತದನಂತರ 1959 ರಲ್ಲಿ ಭಾರತದಲ್ಲಿ, ಸರ್ಫ್ ಎಕ್ಸೆಲ್ (ನಂತರ ಸರ್ಫ್) ಭಾರತದ ಲಾಂಡ್ರಿ ಕೇರ್ ವಿಭಾಗದಲ್ಲಿ ಪ್ರಮುಖ ಆಟಗಾರ ಎಂದೆನಿಸಿತು. HUL ನ ಪೋರ್ಟ್‌ಫೋಲಿಯೊವು ವ್ಹೀಲ್, ರಿನ್ ಮತ್ತು ಸನ್‌ಲೈಟ್‌ನಂತಹ ಇತರ ಡಿಟರ್ಜೆಂಟ್ ಬ್ರಾಂಡ್‌ಗಳನ್ನು ಸಹ ಒಳಗೊಂಡಿದೆ.


  ಬ್ರ್ಯಾಂಡ್ ಪರಿಚಯಿಸಿದ ಬೇರೆ ಬೇರೆ ಉತ್ಪನ್ನಗಳು


  ನಾಲ್ಕು ಕಿಲೋ ಸರ್ಫ್ ಎಕ್ಸೆಲ್ ಈಸಿ ವಾಶ್ ಡಿಟರ್ಜೆಂಟ್ ಪೌಡರ್ ಅನ್ನು 1,199 ರೂ.ಗೆ ಮಾರಾಟ ಮಾಡಲಾಗುತ್ತದೆ ಅದೇ ಗಾತ್ರದ ಏರಿಯಲ್‌ನ ಸಂಪೂರ್ಣ ಡಿಟರ್ಜೆಂಟ್ ಪೌಡರ್ ಅನ್ನು ಅಮೆಜಾನ್‌ನಲ್ಲಿ 1,320 ರೂ.ಗೆ ಮಾರಾಟ ಮಾಡಲಾಗುತ್ತದೆ. ಸರ್ಫ್ ಎಕ್ಸೆಲ್ ಇಂದು ದೇಶದಲ್ಲಿ ಹಲವಾರು ಲಿಕ್ವಿಡ್ ಬ್ರ್ಯಾಂಡ್‌ಗಳು, ಬಾರ್, ಡ್ರಮ್ ಡಿಸ್ಕೇಲರ್ ಮಾತ್ರೆಗಳು, ಪಾಡ್ಸ್ ಮತ್ತು ಡಿಟರ್ಜೆಂಟ್ ಪೌಡರ್ ಅನ್ನು ಮಾರಾಟ ಮಾಡುತ್ತಿದೆ.


  ಫ್ಯಾಬ್ರಿಕ್ ವಾಶ್ ಉತ್ಪನ್ನಗಳ ವಿಭಾಗದಲ್ಲಿ ಮಾರುಕಟ್ಟೆಯ ಅವಶ್ಯಕತೆ ಹಾಗೂ ಅಪೇಕ್ಷಣೀಯತೆಯ ನಡುವೆ ಸೇತುವೆಯನ್ನು ಸೃಷ್ಟಿಸಿದೆ ಎಂದು HUL ನ ಎಮ್‌ಡಿ ಮತ್ತು ಸಿಇಒ ಸಂಜೀವ್ ಮೆಹ್ತಾ ತಿಳಿಸಿದ್ದಾರೆ. ಸರ್ಫ್ ಬಾರ್‌ಗಳು ಮತ್ತು ಲಿಕ್ವಿಡ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಮಾರ್ಕೆಟಿಂಗ್ ಮತ್ತು ನಾವೀನ್ಯತೆ ಸೇರಿದಂತೆ ಹಲವಾರು ಕಾರಣಗಳು ಕಂಪನಿಯು ಖ್ಯಾತಿ ತಲುಪಲು ಸಹಾಯ ಮಾಡಿದೆ. ಸರ್ಫ್ ಎಕ್ಸೆಲ್ ಮಾರ್ಕೆಟಿಂಗ್ ಭಾರತೀಯ ಜಾಹೀರಾತಿನಲ್ಲಿ ಅತ್ಯಂತ ಸ್ಮರಣೀಯ ಪ್ರಯಾಣವನ್ನು ಮುನ್ನಡೆಸಿದಿಎ ಎಂದು ಸಂಜೀವ್ ತಿಳಿಸಿದ್ದಾರೆ.
  ಬ್ರ್ಯಾಂಡ್ ನಾವೀನ್ಯತೆಗಳಲ್ಲಿ ಸಾಕಷ್ಟು ಪ್ರಯತ್ನ ಮತ್ತು ಹೂಡಿಕೆಯನ್ನು ಮಾಡಿದೆ. ಲಿಕ್ವಿಡ್ ಮಾದರಿಗಳು, ಫ್ಯಾಬ್ರಿಕ್ ಕಂಡೀಷನರ್‌ಗಳು ಹಾಗೂ ಕಲೆ ತೆಗೆಯುವ ಮೆಶೀನ್ ಸಲ್ಯೂಷನ್‌ಗಳಂತಹ ಬೇರೆ ಬೇರೆ ಉತ್ಪನ್ನಗಳನ್ನು ಪರಿಚಯಿಸಿದೆ. ಹೀಗೆ ಬ್ರ್ಯಾಂಡ್ ತನ್ನ ಎಲ್ಲಾ ಉತ್ಪನ್ನ ವರ್ಗದಲ್ಲಿ ಎತ್ತರಕ್ಕೆ ಬೆಳೆದಿದೆ.

  Published by:Precilla Olivia Dias
  First published: