• Home
  • »
  • News
  • »
  • explained
  • »
  • Explained: ವಿಶ್ವದ ಈ ಪ್ರಸಿದ್ಧ ಸ್ಥಳಗಳು ಶೀಘ್ರವೇ ಕಣ್ಮರೆಯಾಗುತ್ತಂತೆ! ನೋಡಬೇಕು ಅಂದ್ರೆ ಬೇಗ ಹೊರಡಿ

Explained: ವಿಶ್ವದ ಈ ಪ್ರಸಿದ್ಧ ಸ್ಥಳಗಳು ಶೀಘ್ರವೇ ಕಣ್ಮರೆಯಾಗುತ್ತಂತೆ! ನೋಡಬೇಕು ಅಂದ್ರೆ ಬೇಗ ಹೊರಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಶ್ವದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳ ಪೈಕಿ ಬಹುತೇಕ ಪ್ರದೇಶಗಳು ಶೀಘ್ರವೇ ನಾಶವಾಗುತ್ತಂತೆ. ಪರಿಸರ ಹಾಗೂ ಹವಾಮಾನ ತಜ್ಞರು, ಖ್ಯಾತ ವಿಜ್ಞಾನಿಗಳೆಲ್ಲ ಇಂಥದ್ದೊಂದು ಆಘಾತಕಾರಿ ವಿಚಾರ ಹೇಳಿದ್ದಾರೆ. ಹಾಗಿದ್ರೆ ಪ್ರಸಿದ್ಧ ಸ್ಥಳಗಳೆಲ್ಲ ಶೀಘ್ರವೇ ಕಣ್ಮರೆಯಾಗುವುದು ಏಕೆ? ಈ ಪಟ್ಟಿಯಲ್ಲಿ ಯಾವೆಲ್ಲಾ ಸ್ಥಳಗಳಿವೆ? ಭಾರತದ ಯಾವ ಪ್ರದೇಶಕ್ಕೆ ಅಪಾಯ ಕಾದಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…

ಮುಂದೆ ಓದಿ ...
  • Share this:

ಜಗತ್ತು (World) ತುಂಬಾ ಸುಂದರ.. ಜನ್ಮ ಪೂರ್ತಿ ಸುತ್ತಿದ್ರೂ ಈ ಜಗತ್ತನ್ನು ನೋಡಿ ಮುಗಿಸೋದು ಸಾಧ್ಯವೇ ಇಲ್ಲ. ಆದರೆ ಜೀವನ (Life) ಮುಗಿಯೋದ್ರೊಳಗೆ ಹೋಗಲೇ ಬೇಕು, ನೋಡಲೇ ಬೇಕಾದ ಅದೆಷ್ಟೋ ಪ್ರದೇಶಗಳಿವೆ (Place). ಅವುಗಳಲ್ಲಿ ಒಂದೋ, ಎರಡೋ ಪ್ರದೇಶಗಳಿಗೆ ನೀವು ಹೋಗಿರಲೂ ಬಹುದು. ಹಾಗೊಂದು ವೇಳೆ ಅಂತಹ ಪ್ರದೇಶಗಳನ್ನು ನೋಡಲೇಬೇಕು ಅಂತಿದ್ದರೆ ದಯವಿಟ್ಟು ಬೇಗ ಪ್ಲಾನ್ (Plane) ಮಾಡಿ. ಯಾಕೆಂದ್ರೆ ವಿಶ್ವದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳ (Tourist place) ಪೈಕಿ ಬಹುತೇಕ ಪ್ರದೇಶಗಳು ಶೀಘ್ರವೇ ನಾಶವಾಗುತ್ತಂತೆ. ಪರಿಸರ ಹಾಗೂ ಹವಾಮಾನ ತಜ್ಞರು, ಖ್ಯಾತ ವಿಜ್ಞಾನಿಗಳೆಲ್ಲ ಇಂಥದ್ದೊಂದು ಆಘಾತಕಾರಿ ವಿಚಾರ ಹೇಳಿದ್ದಾರೆ. ಹಾಗಿದ್ರೆ ಪ್ರಸಿದ್ಧ ಸ್ಥಳಗಳೆಲ್ಲ ಶೀಘ್ರವೇ ಕಣ್ಮರೆಯಾಗುವುದು ಏಕೆ? ಈ ಪಟ್ಟಿಯಲ್ಲಿ ಯಾವೆಲ್ಲಾ ಸ್ಥಳಗಳಿವೆ? ಭಾರತದ ಯಾವ ಪ್ರದೇಶಕ್ಕೆ ಅಪಾಯ ಕಾದಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ. ಪರಸರ ದಿನಾಚರಣೆ ಹಿನ್ನೆಲೆಯಲ್ಲಾದರೂ ಈ ಬಗ್ಗೆ ಗಮನ ಹರಿಸೋಣ…


ವಿಶ್ವ ಪ್ರಸಿದ್ಧ ತಾಣಗಳಿಗೆ ಅಪಾಯ ಬಂದಿದ್ದೇಕೆ?


ಇದು ಮೊದಲು ಕೇಳಬೇಕಾದ ಪ್ರಶ್ನೆ. ಇದಕ್ಕೆ ಉತ್ತರ ಮಾನವರ ದುರಾಸೆ. ಆಧುನಿಕತೆಯ ನೆಪದಲ್ಲಿ ವಿವಿಧ ರೀತಿಯ ಪರಿಸರ ಮಾಲಿನ್ಯಕ್ಕೆ ಮಾನವ ಕಾರಣನಾಗಿದ್ದಾನೆ. ನದಿ, ಸಮುದ್ರದ ನೀರೆಲ್ಲ ಮಲೀನವಾಗುತ್ತಿದೆ. ಅರಣ್ಯ ನಾಶದಿಂದ ಹವಾಮಾನ ವೈಪರಿತ್ಯವಾಗುತ್ತಿದೆ. ಇದರ ಪರಿಣಾಮವೇ ಸೂಕ್ಷ್ಮ ಪ್ರದೇಶಗಳು ತನ್ನ ಸೂಕ್ಷತೆ ಕಳೆದುಕೊಂಡು ನಾಶವಾಗುತ್ತವೆಯಂತೆ.


ಅಮೆಜಾನ್ ಕಾಡಿಗೂ ಕಾದಿದೆ ಅಪಾಯ!


ಅಮೆಜಾನ್ ಜಗತ್ತಿನಲ್ಲೇ ದೊಡ್ಡ ನದಿ, 1100ಕ್ಕೂ ಹೆಚ್ಚು ಉಪನದಿಗಳು ಈ ನದಿಯನ್ನು ಸೇರಿಕೊಳ್ಳುತ್ತವೆ. ಈ ನದಿಗಳ ಸುತ್ತ 70 ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣದ ಅಮೆಜಾನ್ ಅರಣ್ಯವಿದೆ. ಇದು ಜಗತ್ತಿನ ಅತಿದೊಡ್ಡ ಅರಣ್ಯ ಪ್ರದೇಶವಾಗಿತ್ತು. ಅದೇಷ್ಟೋ ಜಾತಿಯ ಗಿಡ, ಮರ ಬಳ್ಳಿ, ಪ್ರಾಣಿ, ಪಕ್ಷಿ, ಕ್ರಿಮಿ ಕೀಟ, ಹೂ, ಹಣ್ಣು, ಸರಿಸೃಪಗಳು ಇಲ್ಲಿವೆ. ಅಲ್ಲದೇ ಅದೆಷ್ಟೋ ಅಪರಿಚಿತ ಬುಡಕಟ್ಟು ಜನಾ್ಂಗ ಕೂಡ ಇಲ್ಲಿ ವಾಸಿಸುತ್ತಿದೆ. ಆದರೆ ಈ ಅಮೆಜಾನ್ ಅರಣ್ಯ ಶೀಘ್ರವೇ ನಾಶವಾಗಲಿದ್ಯಂತೆ.


ಈಗಾಗಲೇ ಕಣ್ಮಕೆಯಾಗುತ್ತಿದೆ ಅಮೂಲ್ಯ ಪೃಕೃತಿ


ಅಮೆಜಾನ್ ಅರಣ್ಯದ ಗಾತ್ರ ಶೇಡಕಾ 40ರಷ್ಟು ಈಗಾಗಲೇ ಕುಗ್ಗಿದ್ಯಂತೆ. ಬ್ರೆಜಿಲ್, ಬೊಲೀವಿಯಾ, ಕೊಲಂಬಿಯಾ, ವೆನಿಜುವೆಲಾ ಮುಂತಾದ ದೇಶಗಳಲ್ಲಿ ಬೃಹತ್ ಕಂಪೆನಿಗಳು ಕಾಡುಗಳನ್ನು ಕಡಿದು ಹಾಕಿ, ಭೂಮಿಯನ್ನು ವಶಪಡಿಸಿಕೊಳ್ಳುತ್ತಿವೆ. ಇಲ್ಲಿನ ಅಪೂರ್ವ ಖನಿಜ ಸಂಪತ್ತನ್ನು ವಶಪಡಿಸಿಕೊಳ್ಳಲು ಕೂಡ ಕಾಡುಗಳನ್ನು ನಾಶಮಾಡಲಾಗುತ್ತದೆ. ಈ ಅರಣ್ಯಗಳ ನಡುವಿನ ಆದಿವಾಸಿ ಹಳ್ಳಿಗಳು ನಾಶವಾಗುತ್ತಿವೆ. ಪ್ರಕೃತಿ ವಿಕೋಪ, ಮಾನವನ ಹಸ್ತಕ್ಷೇಪ ಎಲ್ಲ ಸೇರಿದಾಗ ಮುಂದಿನ ಕೇವಲ ಐವತ್ತು ವರ್ಷಗಳಲ್ಲಿ ಅಮೆಜಾನ್ ಅರಣ್ಯ ಭೂಮಿಯ ಮೇಲಿಂದ ಮಾಯವಾಗಲು ಸಾಧ್ಯವಿದೆ ಎನ್ನುತ್ತಾರೆ ತಜ್ಞರು.


ಭಾರತಕ್ಕೂ ಇದೆ ಅಪಾಯ!


ಭಾರತದ ಪ್ರಸಿದ್ಧ ತಾಣಗಳೂ ಹವಾಮಾನ ವೈಪರಿತ್ಯಕ್ಕೆ ಬಲಿಯಾಗಲಿದ್ಯಂತೆಯ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಹಾಗೂ ಬದ್ರಿನಾಥ್ ಸೇರಿದಂತೆ ಹಲವು ಪ್ರದೇಶಗಳು ಅಪಾಯದಲ್ಲಿವೆಯಂತೆ. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಎರಡು ಶತಮಾನಗಳಿಂದ ಹಿಮಾಲಯ ಪ್ರದೇಶದ ಅಧ್ಯಯನ ನಡೆಸುತ್ತಿದೆ. ಕಳೆದ ಎರಡು ಶತಮಾನಗಳಲ್ಲಿ ಇಲ್ಲಿ ರಿಕ್ಟರ್ 5 ಪ್ರಮಾಣದ ಭೂಕಂಪಗಳು ಸರ್ವೇ ಸಾಮಾನ್ಯವಾಗಿ ನಡೆಯುತ್ತವೆ ಎಂದು ಇವರ ದಾಖಲೆಗಳು ಹೇಳುತ್ತದೆ. ಇಲ್ಲಿ ನೂರು ವರ್ಷಗಳಿಗೆ ಒಂದಾದರೂ ತೀವ್ರ ಭೂಕಂಪ ನಡೆಯುವುದು ಶತಸಿದ್ಧ.


ಇದನ್ನೂ ಓದಿ: Explained: 2050ರಲ್ಲಿ ಮುಳುಗೇ ಹೋಗುತ್ತಾ ಮಂಗಳೂರು? ಮುಂಬೈಗೂ ಕಾದಿದೆ ಮಾರಿಹಬ್ಬ ಅಂತಿದೆ ಈ ರಿಪೋರ್ಟ್!


ಮುಳುಗೇ ಹೋಗಲಿದೆ ಮಾಲ್ಡೀವ್ಸ್!


ಭಾರತದ ಆಗೇಯ ದಿಕ್ಕಿನಲ್ಲಿ 250 ಮೈಲು ದೂರದಲ್ಲಿ ಹಿಂದೂ ಮಹಾಸಾಗರದ ನಡುವೆ ಇರುವ ಸುಂದರ ದ್ವೀಪ ಸಮುದಾಯ ಮಾಲ್ಡೀವ್ಸ್. ಸುಮಾರು 1200ಕ್ಕೂ ಹೆಚ್ಚು ಚಿಕ್ಕ, ದೊಡ್ಡ ದ್ವೀಪಗಳ ಒಕ್ಕೂಟ ಇದು. ಕೇವಲ ಎರಡು ಚದರ ಕಿಲೋ ಮೀಟರ್ ವಿಸ್ತೀರ್ಣದ ಮಾಲೆ ದ್ವೀಪ ಇಲ್ಲಿನ ರಾಜಧಾನಿ. ಇಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಉಳಿದ ದ್ವೀಪಗಳಲ್ಲಿ ನಿವಾಸಿಗಳಿಗಿಂತ ಪ್ರವಾಸಿಗಳೇ ಹೆಚ್ಚು. ಆದರೆ ಈ ಪ್ರವಾಸಿ ತಾಣ ಇನ್ನು ಹೆಚ್ಚು ಕಾಲ ಭೂಮಿಯ ಮೇಲೆ ಉಳಿಯುವುದಿಲ್ಲ.


ಸಮುದ್ರ ಮಟ್ಟದ ಹೆಚ್ಚಳದಿಂದ ಅಪಾಯ


ವರ್ಷದಿಂದ ವರ್ಷಕ್ಕೆ ಪ್ರಾಕೃತಿಕ ಕಾರಣಗಳಿಂದಾಗಿ ಸಮುದ್ರ ಮಟ್ಟ ಹೆಚ್ಚುತ್ತ ಹೋಗುತ್ತಿದೆ. ಇನ್ನು ಕೆಲವು ವರ್ಷಗಳಲ್ಲಿ ಈ ದ್ವೀಪ ಸಮುದಾಯವನ್ನು ಸಮುದ್ರ ನುಂಗಿ ಹಾಕಲಿದೆ. 2004 ಡಿಸೆಂಬರ್‌ನಲ್ಲಿ ಸುಮಾಮಿ ಹೊಡೆತಕ್ಕೆ ಮಾಲ್ಡೀವ್ಸ್ ತತ್ತರಿಸಿತ್ತು. ಸಮುದ್ರದಿಂದ ಅಲೆಗಳು ಎರಡು ಅಡಿ ಮಾತ್ರ ಮೇಲೇರಿ ಬಂದಿದ್ದವು. ಆದರೆ ಅಷ್ಟಕ್ಕೇ ರಾಜಧಾನಿ ಮಾಲೆಯ ಒಂದಿಂಚೂ ಜಾಗ ಬಿಡದೆ ಎಲ್ಲ ಭೂಮಿ ಸಮುದ್ರದ ಕೆಳಗೆ ಸರಿದಿತ್ತು. ಒಂದು ಗಂಟೆಯ ಕಾಲ ಎಲ್ಲ ಜನರೂ ಮೊಣಕಾಲಿನಷ್ಟು ನೀರಿನಲ್ಲಿ ಜೀವ ಹಿಡಿದುಕೊಂಡು ನಿಂತಿದ್ದರು!


ಮಾಲ್ಡೀವ್ಸ್‌ಗೆ ಅಪಾಯ ಎದುರಾಗಿದ್ದೇಕೆ?


ಬಿಸಿಯೇರುವಿಕೆಯ ಕಾರಣ ಧ್ರುವದ ಹಿಮಗುಡ್ಡೆಗಳು ಕರಗಿ ಸಮುದ್ರದ ನೀರಿನ ಮಟ್ಟ ಮೇಲೇರುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ವಿಶ್ವಸಂಸ್ಥೆಯ ಪರ್ಯಾವರಣ ಸಂಸ್ಥೆ ಐಪಿಸಿಸಿಯ ತಜ್ಞರ ಭವಿಷ್ಯವಾಣಿಯ ಪ್ರಕಾರ ಈ ಶತಮಾನದ ಕೊನೆಯಲ್ಲಿ ಸಮುದ್ರಮಟ್ಟ ಕನಿಷ್ಟ 2 ಅಡಿಗಳಷ್ಟು ಮೇಲಕ್ಕೆ ಏರಲಿದೆ. ಮುಂದಿನ 30 ವರ್ಷಗಳಲ್ಲಿ ಮಾಲ್ಡೀವ್ಸ್ ನೆಲವೆಲ್ಲ ಸಮುದ್ರದೊಳಗೆ ಹೋಗಲಿದೆ!


ಗ್ರೇಟ್ ಬ್ಯಾಲಿಯರ್ ಲೀಫ್ ಸವೆಯುತ್ತಿದೆ!


ಆಸ್ಟ್ರೇಲಿಯ ಭೂಖಂಡದ ಈಶಾನ್ಯ ಭಾಗದಲ್ಲಿ ಬೆಳೆದಿರುವ ಗ್ರೇಟ್ ಬ್ಯಾರಿಯರ್ ರೀಫ್ ಜಗತ್ತಿನ ಏಳು ಪ್ರಾಕೃತಿಕ ಅದ್ಭುತಗಳಲ್ಲಿ ಒಂದಾಗಿದೆ. ಹವಳದ ಬಂಡೆಗಳ ಈ ಬೃಹತ್ ಪರ್ವತ ಶ್ರೇಣಿ ಆಸ್ಟ್ರೇಲಿಯಾದ ಸುಪ್ರಸಿದ್ಧ ಪ್ರವಾಸೀ ಆಕರ್ಷಣೆಗಳಲ್ಲಿ ಒಂದು. ಗ್ರೇಟ್ ಬ್ಯಾರಿಯರ್ ರೀಫ್‌ನ ನಿರ್ಮಾಣ ಮಾಡಿರುವುದು ಕೋರಲ್ ಪೋಲಿಪ್ ಎಂಬ ಪುಟಾಣಿ ಜೀವಿಗಳು, ಬಿಲಿಯಗಟ್ಟಲೆ ಸಮುದ್ರಜೀವಿಗಳು ಸುಮಾರು ಆರು ಲಕ್ಷ ವರ್ಷಗಳ ಸುದೀರ್ಘ ಕಾಲದಲ್ಲಿ ಮಾಡಿರುವ ವಿರಾಟ್ ರಚನೆ ಇದು. ಆದರೆ ಮಾನವನ ಕೆಲವೇ ದಶಕಗಳ ಅತಿರೇಕದಿಂದಾಗಿ ವಿನಾಶದ ಅಂಚಿಗೆ ಬಂದಿದೆ.


ಭೂಮಿ ಬಿಸಿಯೇರುವಿಕೆಯಿಂದ ಅಪಾಯ


ಭೂಮಿಯ ಬಿಸಿಯೇರುವಿಕೆಯಿಂದ ಈ ಹವಳಗಳು ಕರಗುತ್ತಿವೆ. ನದಿಗಳಿಂದ ಹರಿದು ಬರುವ ಕಲುಷಿತ ನೀರಿನಿಂದ ಮೀನುಗಳು ನಾಶವಾಗುತ್ತವೆ. ಆರು ಲಕ್ಷ ವರ್ಷಗಳ ಈ ಮಹಾನ್ ನಿರ್ಮಾಣ ಮುಂದಿನ ಕೆಲವೇ ವರ್ಷಗಳಲ್ಲಿ ಕುಸಿದು ಬೀಳಲಿದೆ ಎಂದು ಎಚ್ಚರಿಕೆ ಕೊಡುತ್ತಿದ್ದಾರೆ.


ವೆನಿಸ್ ದ್ವೀಪ ಶೀಘ್ರವೇ ಕಣ್ಮರೆ


ಇಟಲಿಯ ಒಂದು ಸುಂದರ ದ್ವೀಪ ಪ್ರದೇಶ ವೆನಿಸ್. ಕಾಲುವೆಗಳ ನಗರಿ ಎಂದು ಇದರ ಬಿರುದು. ಸಮುದ್ರದ ನಡುವೆ ಜವುಗುಮಣ್ಣಿನ ದಿನ್ನೆಗಳ ತಳಹದಿಯಲ್ಲಿ ನೂರಕ್ಕೂ ಹೆಚ್ಚು ಪುಟಾಣಿ ದ್ವೀಪಗಳನ್ನು ಸೇರಿಸಿ ಬೆಳೆಸಿದ್ದ ಅಪೂರ್ವ ಪಟ್ಟಣವಾಗಿತ್ತು ವೆನಿಸ್. ಇದಕ್ಕೆ ತೇಲುವ ಪಟ್ಟಣ ಎಂದು ಬಿರುದಿತ್ತು. ಈ ಪಟ್ಟಣ ಇದೀಗ ಮುಳುಗುತ್ತಿದೆ!


ಸಮುದ್ರದ ನೀರಿನಿಂದ ಅನಾಹುತ


ಸಮುದ್ರದ ನೀರು ಮೇಲೆದ್ದು ಬಂದು ಅನಾಹುತ ನಡೆಸುತ್ತಿದೆ, ಪಟ್ಟಣದ ತಳಹದಿಯನ್ನೇ ನಿಧಾನವಾಗಿ ಕೊರೆಯುತ್ತಿದೆ. ಮೆಡಿಟರೇನಿಯನ್ ಸಮುದ್ರ ಈ ಶತಮಾನದ ಕೊನೆಯ ವೇಳೆಗೆ 140 ಸೆಂಟಿಮೀಟರ್‌ಗಳಷ್ಟು ಮೇಲಕ್ಕೆ ಏರಲಿದೆ ಎಂದು ತಜ್ಞರು ಹೇಳುತ್ತಾರೆ. ವರ್ಷದಿಂದ ವರ್ಷಕ್ಕೆ ನೆರೆಯ ಹಾವಳಿ ಹೆಚ್ಚುತ್ತಿದೆ.


ಇದನ್ನೂ ಓದಿ: Explained: ಚಂಡಮಾರುತಗಳಿಗ್ಯಾಕೆ ವಿಚಿತ್ರ ಹೆಸರುಗಳು? ಅವುಗಳ ಅರ್ಥ, ಆ ಹೆಸರಿನ ಕಾರಣ ಏನು ಗೊತ್ತಾ?


ಮೃತ ಸಮುದ್ರಕ್ಕೂ ಇದೆಯಂತೆ ಸಾವು!


ಜೋರ್ಡಾನ್ ಮತ್ತು ಇಸ್ರೇಲ್‌ನ ನಡುವೆ ಇರುವ ಒಂದು ವಿಶಾಲ ಜಲರಾಶಿಗೆ 'ಮೃತ ಸಮುದ್ರ' ಎಂದು ಹೆಸರು. ಈ ಸಮುದ್ರದ ಸುತ್ತಲೂ ಭೂ ಪ್ರದೇಶ ಇದೆ. ಸಮುದ್ರ ಮಟ್ಟದಿಂದ 1,300 ಅಡಿಯಷ್ಟು ಕೆಳಗಿರುವ ಈ ಪ್ರದೇಶಕ್ಕೆ ಜಗತ್ತಿನಲ್ಲೇ ಅತ್ಯಂತ ತಗ್ಗಿನಲ್ಲಿರುವ ಜಾಗ ಎಂಬ ಖ್ಯಾತಿ ಇದೆ. ಮೃತ ಸಮುದ್ರದ ಸುತ್ತ ಹಲವಾರು ಸ್ನಾನಗೃಹಗಳು, ಸ್ಥಾಗಳು ಮತ್ತು ರಿಸೋರ್ಟ್‌ಗಳು ಬೆಳೆದಿವೆ. ಈ ಅದ್ಭುತ ಈಗ ಕಾಣೆಯಾಗುವ ಹಂತದಲ್ಲಿದೆ.

Published by:Annappa Achari
First published: