• Home
  • »
  • News
  • »
  • explained
  • »
  • Explained: 2023 ರಲ್ಲಿ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಅಂಶಗಳಿವು, ಎಲ್ಲರ ಚಿತ್ತ ಬಜೆಟ್​ನತ್ತ!

Explained: 2023 ರಲ್ಲಿ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಅಂಶಗಳಿವು, ಎಲ್ಲರ ಚಿತ್ತ ಬಜೆಟ್​ನತ್ತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Economic Changes: ವರ್ಷವು ಬದಲಾದಂತೆ ಅಭಿವೃದ್ಧಿಗೊಳ್ಳುತ್ತಿದ್ದಂತೆ ಜಾಗತಿಕ ಬೆಳವಣಿಗೆಯೂ ಅಭಿವೃದ್ಧಿಗೊಳ್ಳಬೇಕು, ಆದರೆ ಈ ಬೆಳವಣಿಗೆಯ ಮಟ್ಟ ನಿರೀಕ್ಷೆಗಿಂತ ಸ್ಥಿರವಾಗಿ ಕೆಳಮಟ್ಟಕ್ಕೆ ಇಳಿದಿವೆ. ಇದನ್ನು ಆಧರಿಸಿ ಮುಂದಿನ ವರ್ಷ ಯಾವೆಲ್ಲಾ ಅಂಶಗಳನ್ನು ಎದುರು ನೋಡಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • Share this:

ಇನ್ನೇನು ಕೆಲವೇ ದಿನಗಳಲ್ಲಿ ನಾವು ಹೊಸ ವರ್ಷಕ್ಕೆ (New Year)  ಕಾಲಿಡಲಿದ್ದೇವೆ. 2022 ನೋವು (Sad), ನಲಿವು (Happy), ಆತಂಕ, ನಿರಾಳತೆ, ಸುಖ, ಕಷ್ಟ ಹೀಗೆ ಪ್ರತಿಯೊಂದು ವಿಧದಲ್ಲೂ ಅನೇಕ ಅಂಶಗಳ ಮಿಶ್ರಣವೆಂದೆನಿಸಿದೆ ಎಂದರೆ ತಪ್ಪಿಲ್ಲ.  ಉಕ್ರೇನ್ ರಷ್ಯಾದ ಯುದ್ಧ (Ukraine And Russia War), ಹಣದುಬ್ಬರ  (Recession)  ನಿಯಂತ್ರಣಕ್ಕಾಗಿ ಕೇಂದ್ರೀಯ ಬ್ಯಾಂಕುಗಳ ದರ ಹೆಚ್ಚಳ, ಇದೀಗ ಚೀನಾದಲ್ಲಿ (China) ಪುನಃ ಅಲ್ಲೋಲ ಕಲ್ಲೋಲವನ್ನೆಬ್ಬಿಸಿರುವ ಸಾಂಕ್ರಾಮಿಕ ರೋಗ (Pandemic) ಹೀಗೆ ಪ್ರತಿಯೊಂದು ಘಟನಾವಳಿಗಳ ಮಿಶ್ರಣ ಈ 2022 ಎನ್ನಬಹುದು.


ವರ್ಷವು ಬದಲಾದಂತೆ ಅಭಿವೃದ್ಧಿಗೊಳ್ಳುತ್ತಿದ್ದಂತೆ ಜಾಗತಿಕ ಬೆಳವಣಿಗೆಯೂ ಅಭಿವೃದ್ಧಿಗೊಳ್ಳಬೇಕು, ಆದರೆ ಈ ಬೆಳವಣಿಗೆಯ ಮಟ್ಟ ನಿರೀಕ್ಷೆಗಿಂತ ಸ್ಥಿರವಾಗಿ ಕೆಳಮಟ್ಟಕ್ಕೆ ಇಳಿದಿವೆ. ಇದನ್ನು ಆಧರಿಸಿ ಮುಂದಿನ ವರ್ಷ ಯಾವೆಲ್ಲಾ ಅಂಶಗಳನ್ನು ಎದುರು ನೋಡಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


ಆರ್ಥಿಕ ಚೇತರಿಕೆಯ ಆಶಾವಾದ ಕುಸಿದಿದೆ


ಸಾಂಕ್ರಾಮಿಕ ರೋಗದ ಭಯ ಕಡಿಮೆಯಾಗುತ್ತಿದ್ದಂತೆ, ಇತ್ತ ಕಡೆ ಜಾಗತಿಕ ಆರ್ಥಿಕತೆಯಲ್ಲಿ ಭರವಸೆ ಕಳೆದುಕೊಳ್ಳುವಂತೆ ಮಾಡಿದ 2022 ಹಲವು ಏಳುಬೀಳುಗಳನ್ನು ಕಂಡಿದೆ ಎಂದೇ ಹೇಳಬಹುದು.


ಚೇತರಿಕೆಯ ಭರವಸೆಯೊಂದಿಗೆ 2022 ಪ್ರಾರಂಭವಾಯಿತು, ಆದರೆ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನ ಮೇಲೆ ನಡೆಸಿರುವ ಆಕ್ರಮಣವು ಎರಡನೇ ಮಹಾಯುದ್ಧದ ನಂತರ ಯುರೋಪಿನಲ್ಲಿ ಅತಿದೊಡ್ಡ ಭೂ ಸಂಘರ್ಷವನ್ನು ಉಂಟುಮಾಡಿದೆ.


ಹೀಗಾಗಿ ಹೊಸ ವರ್ಷದ ಆರಂಭದಲ್ಲಿ ಆರ್ಥಿಕ ಚೇತರಿಕೆಯ ಆಶಾವಾದವು ಕುಸಿಯಿತು ಎಂದೇ ಹೇಳಬಹುದು.


ನಿರಂತರವಾಗಿ ಮುಂದುವರಿಯುತ್ತಿರುವ ಯುದ್ಧ


ಯುದ್ಧವು ನಿರಂತರವಾಗಿ ಮುಂದುವರಿಯುತ್ತಿದ್ದು 2023 ರಲ್ಲೂ ಆರ್ಥಿಕ ಪ್ರಗತಿ ಅಷ್ಟೊಂದು ಸುಧಾರಣೆಯನ್ನು ಕಾಣುವುದು ಸಂಶಯ ಎಂಬ ಅನುಮಾನವನ್ನು ಹುಟ್ಟುಹಾಕಿದೆ.


ಹೆಚ್ಚಿದ ಆಹಾರ ಮತ್ತು ಇಂಧನ ಬೆಲೆಗಳು ಹಣದುಬ್ಬರದ ವಿರುದ್ಧದ ಹೋರಾಟವನ್ನು ಹೆಚ್ಚಿಸುವ ಅಪಾಯವನ್ನು ಸೂಚಿಸುತ್ತಿವೆ. ಪ್ರಮುಖವಾಗಿ  ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಗಳು, ಚೀನಾದಲ್ಲಿ ಏರಿಕೆಯಾಗಿರುವ ಸಾಂಕ್ರಾಮಿಕ ರೋಗ ಮತ್ತು ಕೇಂದ್ರ ಬ್ಯಾಂಕ್-ಎಂಜಿನಿಯರ್ಡ್ ಕುಸಿತದ ನಿರೀಕ್ಷೆಯನ್ನ ನೋಡಿದರೆ  ಜಾಗತಿಕ ಆರ್ಥಿಕ ಹಿಂಜರಿತವು ಸನ್ನಿಹಿತವಾಗಿದೆ ಎಂಬುದನ್ನ ಅಲ್ಲಗೆಳೆಯುವಂತಿಲ್ಲ.


ಈ ಬಾರಿಯ ಬಜೆಟ್​ ಅಂಶವೇನು?


ಯೂನಿಯನ್ ಬಜೆಟ್‌ನತ್ತ ಎಲ್ಲಾ ಜನಸಾಮಾನ್ಯರ ಚಿತ್ತ ನೆಟ್ಟಿರುತ್ತದೆ. ಇದು ಕೇಂದ್ರದ ಲೆಕ್ಕಪತ್ರಗಳ ಪ್ರಸ್ತುತಿಗಿಂತಲೂ ಹೆಚ್ಚು ಮುಖ್ಯವಾಗಿರುತ್ತದೆ. ಈ ಬಜೆಟ್ ಸರ್ಕಾರದ ಪ್ರತಿಯೊಂದು ಅಂಕಿಅಂಶಗಳು ಚಟುವಟಿಕೆಗಳು, ಹೀಗೆ ವಿಶಾಲ ನೀತಿಯ ಅಂಶವನ್ನು ಪ್ರಸ್ತುತಪಡಿಸುತ್ತದೆ.


ಆರ್ಥಿಕ ಬೆಳವಣಿಗೆ ಕುಂಠುತ್ತಾ ಸಾಗುತ್ತಿರುವ ಈ ವರ್ಷದಲ್ಲಿ ಅದನ್ನೇ ಮುಖ್ಯ ಕಾಳಜಿಯನ್ನಾಗಿರಿಸಿಕೊಂಡು ಈ ಬಾರಿಯ ಕೇಂದ್ರ ಬಜೆಟ್‌ ಅನ್ನು ಮಂಡಿಸಲಾಗುತ್ತಿದೆ. ಚೀನಾದಿಂದ ವ್ಯವಹಾರವನ್ನು ಆದಷ್ಟು ದೂರಮಾಡಿಕೊಳ್ಳಲು ಬಯಸುತ್ತಿರುವ ಪ್ರಪಂಚದ ಅದೆಷ್ಟೋ ಕಂಪನಿಗಳು ಭಾರತವನ್ನು ಹೂಡಿಕೆಯ ತಾಣವಾಗಿ ಪರಿಗಣಿಸಿವೆ. ಹಾಗಾಗಿ, ಭಾರತ ತಂತ್ರಜ್ಞಾನ ಹಾಗೂ ಕೈಗಾರಿಕಾ ರಂಗದಲ್ಲಿ ಹಲವಾರು ಕಂಪನಿಗಳಿಗೆ ಆಸರೆಯಾಗಬಹುದು ಎಂದು ಆಶಿಸುವ ಸಮಯದಲ್ಲಿಯೇ ಬಜೆಟ್ ಪ್ರಸ್ತಾವನೆಯಾಗುತ್ತಿದೆ.


ಇದರ ಬೆನ್ನಲ್ಲೇ ಚುನಾವಣಾ ಪ್ರಕ್ರಿಯೆ ಕೂಡ ನಡೆಯಲಿದ್ದು ಇದು ಕೂಡ ಪರಿಗಣಿಸಬೇಕಾದ ವಿಷಯವೇ ಆಗಿದೆ. 2024 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿರುವುದರಿಂದ ಬಜೆಟ್‌ನಲ್ಲಿ ಪ್ರಸ್ತಾವನೆಯಾಗುವ ಕೆಲವು ನೀತಿ ಹಾಗೂ ಪ್ರಸ್ತಾಪಗಳು ನಡೆಯಲಿರುವ ಚುನಾವಣಾ ಅಂಶಗಳಿಂದ ಪ್ರಭಾವಿತಗೊಳ್ಳುವ ಸಾಧ್ಯತೆ ಹೆಚ್ಚು.


ಯಾವೆಲ್ಲಾ ಅಂಶಗಳನ್ನು ಆಧರಿಸಿ ಬಜೆಟ್ ಮಂಡನೆಯಾಗಲಿದೆ?


ಮೇಲಿನ ಈ ಎಲ್ಲಾ ಕಾರಣದಿಂದ ಈ ಬಾರಿ ಬಜೆಟ್ ಯಾವ ಅಂಶಗಳನ್ನು ಆಧರಿಸಿ ಪ್ರಸ್ತಾವನೆಯಾಗುತ್ತದೆ ಮತ್ತು ಭಾರತವು ನಿರ್ಧಾರಗಳನ್ನು ಕೈಗೊಳ್ಳುವ ಈ ಸಮಯದಲ್ಲಿ ಬಜೆಟ್ ಯಾವ ಅಂಶಗಳಿಗೆ ಪ್ರಾಮುಖ್ಯತೆ ನೀಡಲಿದೆ ಎಂಬುದನ್ನು ನಿರ್ಣಯಿಸಬಹುದಾಗಿದೆ.


ಸರ್ಕಾರವು ಆರ್ಥಿಕತೆಗೆ ಎಷ್ಟು ಬೆಂಬಲವನ್ನು ನೀಡುತ್ತದೆ ಎಂಬುದನ್ನು ಆಧರಿಸಿ ಕೇಂದ್ರ ಬಜೆಟ್ ಪ್ರಸ್ತಾವನೆಗೊಳ್ಳಲಿದೆ. ಇದೇ ಸಮಯದಲ್ಲಿ ಬಜೆಟ್ ಹಣಕಾಸಿನ ಕುರಿತು ಗಮನಹರಿಸಲಾಗುತ್ತದೆ.


ಇದನ್ನೂ ಓದಿ: ಆ್ಯಸಿಡ್ ಮಾರಾಟಕ್ಕೆ ಸುಪ್ರೀಂ ನಿಷೇಧ ಹೇರಿದ್ರೂ ಸಹ ಇಂದಿಗೂ ಹೇಗೆ ಸಿಗ್ತಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ


ಬಜೆಟ್ ಚಿತ್ತ ಯಾವುದರತ್ತ ನೆಟ್ಟಿದೆ?


ವಿಶೇಷವಾಗಿ ಬಂಡವಾಳ ವೆಚ್ಚದ ಮೇಲೆ ಸರ್ಕಾರವು ಯಾವ ಪ್ರಮಾಣದಲ್ಲಿ ವೆಚ್ಚವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂಬುದನ್ನು ನೋಡಬೇಕಾಗಿದೆ.


ಆದಾಯ ತೆರಿಗೆಗಳಲ್ಲಿ ಕಡಿತವನ್ನು ಘೋಷಿಸಬಹುದೇ ಅಥವಾ ಬಂಡವಾಳ ಲಾಭದ ತೆರಿಗೆಯು ಆಡಳಿತವನ್ನು ಸರಾಗಗೊಳಿಸಬಹುದೇ ಮತ್ತು ಆರ್ಥಿಕತೆಯಲ್ಲಿ ಹೂಡಿಕೆಗಳನ್ನು ಸುಗಮಗೊಳಿಸುವ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸವಾಲುಗಳನ್ನು ಅದು ಹೇಗೆ ನಿಭಾಯಿಸುತ್ತದೆ ಎಂಬ ಅಂಶಗಳ ಮೇಲೆ ಬಜೆಟ್ ಗಮನ ಹರಿಸಲಿದೆ ಎನ್ನಲಾಗುತ್ತಿದೆ.


ಭಾರತದ ಆರ್ಥಿಕತೆ ಇನ್ನೂ ಸದೃಢಗೊಂಡಿಲ್ಲ


ಭಾರತವು 2022 ರಲ್ಲಿ ಉತ್ತಮ ಕಾರ್ಯನಿರ್ವಹಣೆಯ ಆರ್ಥಿಕತೆಯನ್ನು ಹೊಂದಿದ್ದರೂ ಸಹ, ಕೋವಿಡ್ -19 ರ ಕಾರಣದಿಂದಾಗಿ ಭಾರತೀಯ ಆರ್ಥಿಕತೆಯು ಇನ್ನೂ ಹೆಚ್ಚು ಸದೃಢಗೊಂಡಿಲ್ಲ ಎಂದೇ ಹೇಳಬಹುದು.


ಹೆಚ್ಚಿನ ಅಭಿವೃದ್ಧಿ ಹೊಂದಿದ ಮತ್ತು ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳಿಗಿಂತ ಭಿನ್ನವಾಗಿ, ಭಾರತದ ಹೆಚ್ಚಿನ ಆರ್ಥಿಕ ಬೆಳವಣಿಗೆಯು ಉತ್ತಮ ಸುಧಾರಣೆಯನ್ನು ಕಂಡಿತು ಜೊತೆಗೆ ಸಾಂಕ್ರಾಮಿಕ ಪರಿಣಾಮವು ಮೊದಲು ಹಣದುಬ್ಬರವನ್ನು ತಗ್ಗಿಸಿತು.


ಭಾರತವು ಎಂಟು ಸತತ ತ್ರೈಮಾಸಿಕಗಳ ಕುಸಿತ ಬೆಳವಣಿಗೆಯ ನಂತರ ಹಾಗೂ ಹಣದುಬ್ಬರ ಪಥದಲ್ಲಿ ಕೊಂಚ ಚೇತರಿಕೆಯನ್ನು ಕಂಡ ಸಮಯದಲ್ಲೇ ಸಾಂಕ್ರಾಮಿಕ ರೋಗದ ಪರಿಣಾಮಕ್ಕೆ ಸಿಲುಕಿದೆ.  ಹೀಗಾಗಿ, ಭಾರತಕ್ಕೆ ಸಹಜ ಸ್ಥಿತಿಗೆ ಮರಳುವುದು ಏರಿಳಿತಗಳ ಹಾವು ಏಣಿ ಆಟವಾಗಲಿದೆ.


ಜಾಗತಿಕವಾಗಿ ಮತ್ತು ದೇಶೀಯವಾಗಿ ಬಡ್ಡಿದರಗಳ ಪಥ ಹೇಗಿರುತ್ತದೆ?


2022 ರ ವರ್ಷವು ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಹಣದುಬ್ಬರದ ವಿರುದ್ಧ ಹೋರಾಟವನ್ನು ಹೆಚ್ಚಿಸಿವೆ. ಇಲ್ಲಿಯವರೆಗೆ US ಫೆಡರಲ್ ರಿಸರ್ವ್ ಸತತ ಏಳು ಸಭೆಗಳಲ್ಲಿ ಬಡ್ಡಿದರ 4.25 ರಿಂದ 4.5% ಕ್ಕೆ ಬಡ್ಡಿದರಗಳನ್ನು ಹೆಚ್ಚಿಸಿದೆ.


ಫೆಡರಲ್ ಬ್ಯಾಂಕ್ ಬಿಡುಗಡೆ ಮಾಡಿರುವ ಯೋಜನೆಗಳು ಮುಂದಿನ ವರ್ಷದ ವೇಳೆಗೆ ಬಡ್ಡಿದರಗಳು 5.1% ಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಸೂಚಿಸುತ್ತದೆ.


ಇದೀಗ ಸೆಂಟ್ರಲ್ ಬ್ಯಾಂಕ್ ಪ್ರಸ್ತುತಪಡಿಸಿರುವ ಲೆಕ್ಕಾಚಾರಗಳು ಮುಂದಿನ ವರ್ಷ ಯಾವುದೇ ದರ ಕಡಿತದ ಸಾಧ್ಯತೆಯನ್ನು ತಳ್ಳಿಹಾಕಿವೆ. ಹೀಗಾಗಿ ದರಗಳು ಹೆಚ್ಚು ಕಾಲ ಉಳಿಯುವ ಸಾಧ್ಯತೆ ಇದೆ.


ಹಣದುಬ್ಬರ ನಿಭಾಯಿಸಲು ಬಡ್ಡಿದರ ಏರಿಕೆ


ದೇಶೀಯ ವಲಯದಲ್ಲಿ ಆರ್‌ಬಿಐ ಹಣಕಾಸು ನೀತಿ ಸಮಿತಿ (MPC) ಏರಿಕೆಯಾಗುತ್ತಿರುವ ಹಣದುಬ್ಬರವನ್ನು ನಿಭಾಯಿಸಲು ದರಗಳನ್ನು ಹೆಚ್ಚಿಸುತ್ತಿದೆ.


ಇದುವರೆಗೆ ಬಡ್ಡಿದರ 4% ದಿಂದ 6.25% ಕ್ಕೆ ಏರಿಸಿದೆ. RBI/MPC ಬಡ್ಡಿದರದ ವಿಧಾನದ ಬಗ್ಗೆ ಯಾವುದೇ ಯೋಜನೆಗಳನ್ನು ನೀಡದೇ ಇದ್ದರೂ ಕಳೆದ MPC ಸಭೆಯಲ್ಲಿ ತಿಳಿಸಿರುವಂತೆ ಹಣದುಬ್ಬರ ಚಿಂತಾಕ್ರಾಂತವಾಗಿ ಮುಂದುವರಿಯಲಿದೆ ಎಂಬುದಾಗಿ ಸಮಿತಿಯ ಬಹುಪಾಲು ಸದಸ್ಯರು ತಿಳಿಸಿದ್ದಾರೆ.


ಇದನ್ನೂ ಓದಿ: ಆರ್ಥಿಕತೆಯಲ್ಲಿ ಕುಸಿತ; ಹಣ ಸಹಾಯಕ್ಕಾಗಿ IMF ಮೊರೆ ಹೋದ ಬಾಂಗ್ಲಾದೇಶ


ಹಣದುಬ್ಬರ ಪ್ರಗತಿಗೆ ಇದು ಸಕಾಲ ತಜ್ಞರ ಅಭಿಪ್ರಾಯ


ಇನ್ನು ಕೆಲವರು ಹಣದುಬ್ಬರದಲ್ಲಿ ಆರ್ಥಿಕ ನೀತಿಯ ಪ್ರಭಾವವು ನಿಧಾನಗತಿಯಲ್ಲಿ ಪರಿಣಾಮ ಬೀರುವುದರಿಂದ ಹಣದುಬ್ಬರದ ಪ್ರಗತಿ ಹಾಗೂ ಅದು ಹೇಗೆ ವಿಕಸನಗೊಳ್ಳುತ್ತಿದೆ ಎಂಬುದನ್ನು ವಿಶ್ಲೇಷಿಸಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ.


ಇನ್ನು ಕೆಲವು ಸದಸ್ಯರು ಅಭಿಪ್ರಾಯಪಟ್ಟಿರುವಂತೆ ಮುಂದಿನ ಎಂಪಿಸಿ ಸಭೆಯಲ್ಲಿ ಮತ್ತೊಂದು ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದಾಗಿದೆ. ಆದರೆ ಸಮಿತಿಯಲ್ಲಿ ಇದಕ್ಕೆ ಅಭಿಪ್ರಾಯ ಭೇದಗಳಿದ್ದು ಅದನ್ನು ಪರಿಗಣಿಸಿ ವಿರಾಮವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.


ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆರ್ಥಿಕತೆ ಕುಂಠಿತ


ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆರ್ಥಿಕತೆಯ ಕುಂಠಿತವು ಯುಎಸ್ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಪ್ರಭಾವವನ್ನು ಬೀರಲಾರಂಭಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತದ ರಫ್ತು ನಿಧಾನಗೊಳ್ಳುತ್ತಿದೆ ಹಾಗೂ ಕೈಗಾರಿಕಾ ಉತ್ಪಾದನೆ ಕುಸಿತವನ್ನು ಕಂಡಿದೆ.


ಹೀಗಾಗಿ, ಈ ವರ್ಷದ ದ್ವಿತೀಯಾರ್ಧದಲ್ಲಿ ಮತ್ತು ಮುಂದಿನ ವರ್ಷಕ್ಕೆ ದೇಶದ ಬೆಳವಣಿಗೆಯ ನಿರೀಕ್ಷೆಗಳು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆರ್ಥಿಕತೆಗಳು ಎಷ್ಟು ತೀವ್ರವಾಗಿ ನಿಧಾನವಾಗುತ್ತವೆ ಎಂಬುದಕ್ಕೆ ಹೆಚ್ಚು ಸಾಕ್ಷಿಯನ್ನೊದಗಿಸಿವೆ.


ರಷ್ಯಾ-ಉಕ್ರೇನ್ ಸಂಘರ್ಷವು ಕೊನೆಗೊಳ್ಳುವ ಸಾಧ್ಯತೆಗಳು ಏನು?


ರಷ್ಯಾ ಉಕ್ರೇನ್‌ನೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗೆ ಸಿದ್ಧವಾಗಿದೆ ಎಂದು ವ್ಲಾಡಿಮಿರ್ ಪುಟಿನ್ ಸೂಚಿಸಿದ್ದಾರೆ. ಆದರೆ ಇದರ ನಡುವೆಯೇ ರಷ್ಯಾ ಉಕ್ರೇನ್‌ನ ಪಟ್ಟಣಗಳ ಮೇಲೆ ಬಾಂಬ್ ದಾಳಿ ನಡೆಸಿದೆ ಎಂಬ ಮಾಹಿತಿ ದೊರಕಿದೆ.


ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಕೊರೋನಾ ಹಾವಳಿ, ಜಾಗತಿಕ ಮಟ್ಟದಲ್ಲಿ ಇದರ ಪರಿಣಾಮ ಏನಾಗಬಹುದು?


ಎರಡೂ ದೇಶಗಳ ನಿಲುವು ಹಾಗೂ ನಿರ್ಧಾರಗಳನ್ನು ಪರಿಗಣಿಸಿದರೆ ಮಾತುಕತೆಗಳು ತಕ್ಷಣವೇ ಕಾರ್ಯರೂಪಕ್ಕೆ ಬಂದು ಶಾಂತಿ ಒಪ್ಪಂದವಾಗಿ ನಿರ್ಣಯಗೊಳ್ಳುವ ನಿರೀಕ್ಷೆಗಳು ಈ ಕ್ಷಣದಲ್ಲಿ ಮಂಕಾಗಿವೆ ಎನ್ನಬಹುದು.

Published by:Sandhya M
First published: