Explained: ಶಿಶಿಲದಲ್ಲಿ ಕಡಿಮೆಯಾಗ್ತಿದೆ ದೇವರ ಮೀನಿನ ಸಂಖ್ಯೆ! ಹತ್ತಿರದಲ್ಲಿದ್ದೇ ಹೊಂಚು ಹಾಕುವ ಕಳ್ಳ ಯಾರು ಗೊತ್ತಾ?

ಶಿಶಿಲೇಶ್ವರ ದೇವಸ್ಥಾನದಲ್ಲಿ ಹರಕೆ ಸಲ್ಲಿಸಿ ಈ ಮೀನುಗಳಿಗೆ ಆಹಾರವನ್ನು ನೀಡಿದರೆ ಮನುಷ್ಯನ ದೇಹಕ್ಕೆ ಅಂಟಿರುವ ಚರ್ಮರೋಗ ಸೇರಿದಂತೆ ಇತರೇ ವ್ಯಾಧಿಗಳು ಗುಣಮುಖವಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಈ ಮೀನುಗಳ ಸಂತತಿಯೂ ಕಡಿಮೆಯಾಗುತ್ತಿದೆ ಎನ್ನುವ ಆತಂಕ ಶುರುವಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ...

ಶಿಶಿಲದಲ್ಲಿ ಕಾಣಸಿಗುವ ಅಪರೂಪದ ಮೀನುಗಳು

ಶಿಶಿಲದಲ್ಲಿ ಕಾಣಸಿಗುವ ಅಪರೂಪದ ಮೀನುಗಳು

  • Share this:
ದಕ್ಷಿಣ ಕನ್ನಡ: ಕರಾವಳಿ (Coastal) ಅಂದ್ರೆ ಮೀನಿಗೂ (Fish) ಬರವಿಲ್ಲ, ತೀರ್ಥ ಕ್ಷೇತ್ರಗಳಿಗೂ ಕೊನೆಯೆಲ್ಲ. ಅದರಲ್ಲೂ ಕರ್ನಾಟಕದ (Karnataka) ಕರಾವಳಿಯುದ್ಧಕ್ಕೂ ಅನೇಕ ದೇವಸ್ಥಾನಗಳು (Temple), ಪ್ರೇಕ್ಷಣೀಯ ಸ್ಥಳಗಳು (Tourist Placecs) ಇವೆ. ಅವುಗಳ ಪೈಕಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Beltangadi) ತಾಲೂಕಿನ ಶಿಶಿಲ (Shishila) ಕೂಡ ಒಂದು. ಇಲ್ಲಿನ ಕಲ್ಯಾಣಿಯಲ್ಲಿ ವಿಶೇಷವಾದ ಮೀನುಗಳು (Fish) ಕಂಡು ಬರುತ್ತವೆ. ಅದನ್ನು ‘ದೇವರ ಮೀನುಗಳು’ ಅಂತಾನೆ ಕರೆಯುತ್ತಾರೆ. ಕಪಿಲಾ ತಟದಲ್ಲಿರುವ ಶಿಶಿಲೇಶ್ವರ ಕ್ಷೇತ್ರದಲ್ಲಿ ಮೀನುಗಳ ಸಮೃದ್ಧವಾದ ಸಾಮ್ರಾಜ್ಯವೇ ಇದೆ.  ಶಿಶಿಲೇಶ್ವರ ದೇವಸ್ಥಾನದಲ್ಲಿ ಹರಕೆ ಸಲ್ಲಿಸಿ ಈ ಮೀನುಗಳಿಗೆ ಆಹಾರವನ್ನು ನೀಡಿದರೆ ಮನುಷ್ಯನ ದೇಹಕ್ಕೆ ಅಂಟಿರುವ ಚರ್ಮರೋಗ ಸೇರಿದಂತೆ ಇತರೇ ವ್ಯಾಧಿಗಳು ಗುಣಮುಖವಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಈ ಮೀನುಗಳ ಸಂತತಿಯೂ ಕಡಿಮೆಯಾಗುತ್ತಿದೆ ಎನ್ನುವ ಆತಂಕ ಶುರುವಾಗಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮೀನುಗಳಿಂದಲೇ ಪ್ರಸಿದ್ಧಿ ಪಡೆದ ದೇಗುಲ

ಶಿಶಿಲ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ. ಮಂಗಳೂರಿನಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿದೆ. ಕಪಿಲಾ ತಟದಲ್ಲಿರುವ ಶಿಶಿಲೇಶ್ವರ ಕ್ಷೇತ್ರದಲ್ಲಿ ಮೀನುಗಳ ಸಮೃದ್ಧವಾದ ಸಾಮ್ರಾಜ್ಯವೇ ಇದೆ.  ಶಿಶಿಲೇಶ್ವರ ದೇವಸ್ಥಾನದಲ್ಲಿ ಹರಕೆ ಸಲ್ಲಿಸಿ ಈ ಮೀನುಗಳಿಗೆ ಆಹಾರವನ್ನು ನೀಡಿದರೆ ಮನುಷ್ಯನ ದೇಹಕ್ಕೆ ಅಂಟಿರುವ ಚರ್ಮರೋಗ ಸೇರಿದಂತೆ ಇತರೇ ವ್ಯಾಧಿಗಳು ಗುಣಮುಖವಾಗುತ್ತದೆ ಎನ್ನುವ ನಂಬಿಕೆ ಇದೆ.

ಕಪಿಲ ನದಿಯಿಂದ ಪರಿಶುದ್ಧವಾದ ದೇಗುಲ

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಶಿಶಿಲೇಶ್ವರ ದೇವಸ್ಥಾನ ಶುಭ್ರವಾಗಿ ಹರಿಯುವ ಕಪಿಲಾ ನದಿಯ ತಟದಲ್ಲಿದೆ. ಘಟ್ಟ ಪ್ರದೇಶಗಳಿಂದ ಹರಿಯುವ ಈ ನದಿಯಲ್ಲಿ ನೀರಿನ ಜೊತೆಗೆ ಹೆಚ್ಚಿನ ಪ್ರಮಾಣದ ಮೀನುಗಳೂ ಹರಿದುಬರುತ್ತಿದೆ. ಈ ಮೀನುಗಳಲ್ಲಿ ಹೆಚ್ಚಿನ ಮೀನುಗಳು ಇದೇ ಶಿಶಿಲೇಶ್ವರ ದೇವಸ್ಥಾನದ ತದಿ ತಟದಲ್ಲೇ ಬೀಡು ಬಿಟ್ಟಿವೆ. ದೇವಸ್ಥಾನಕ್ಕೆ ಬಂದ ಭಕ್ತ ಈ‌ ಮೀನುಗಳ ದರ್ಶನ ಮಾಡದೆ ತೆರಳೋದೂ ಬಲು ವಿರಳ ಎನ್ನುವ ಮಟ್ಟಿಗೆ ಇಲ್ಲಿ ಮೀನಿಗೆ ಪ್ರಾಮುಖ್ಯತೆಯಿದೆ.

ಇದನ್ನೂ ಓದಿ: Explained: ವಿಶ್ವದ ಈ ಪ್ರಸಿದ್ಧ ಸ್ಥಳಗಳು ಶೀಘ್ರವೇ ಕಣ್ಮರೆಯಾಗುತ್ತಂತೆ! ನೋಡಬೇಕು ಅಂದ್ರೆ ಬೇಗ ಹೊರಡಿ

ಇಲ್ಲಿನ ಮೀನನ್ನು ದೇವರಂತೆ ನೋಡುತ್ತಾರೆ ಭಕ್ತರು!

ಇಲ್ಲಿ ದೇವರಷ್ಟೇ ಪ್ರಾಮುಖ್ಯತೆ ಈ ಮೀನುಗಳಿಗೂ ಇವೆ. ಈ ನಂಬಿಕೆಯ ಕಾರಣದಿಂದಾಗಿಯೇ ಇಲ್ಲಿನ ಜನರಿಗೆ ಈ ಮೀನುಗಳ ಮೇಲೆ  ದೇವರಷ್ಟೇ ಪೂಜನೀಯ ಭಾವವಿದೆ. ಕ್ಷೇತ್ರಕ್ಕೆ ಭೇಟಿ ನೀಡುವ ಪ್ರತಿಯೊರ್ವ ಭಕ್ತನೂ ಕಪಿಲಾ ತಟಕ್ಕೆ ಬಂದು ಮೀನುಗಳಿಗೆ ಒಂದು ಹಿಡಿ ಆಹಾರವನ್ನು ನೀಡದೆ ಹಿಂದಿರುಗುವುದಿಲ್ಲ. ಅತ್ತ ಮತ್ತೊಂದು ಪುಣ್ಯಕ್ಷೇತ್ರ ಶೃಂಗೇರಿಯಲ್ಲೂ ಮೀನಿಗೆ ಇಂಥದ್ದೇ ಮಹತ್ವದ ಸ್ಥಾನ ನೀಡಲಾಗಿದೆ. ವಿಶೇಷವಾದ ಮೀನೊಂದಕ್ಕೆ ಚಿನ್ನದ ಮೂಗುತಿಯೂ ಹಾಕಲಾಗಿದೆ ಎನ್ನಲಾಗ್ತಿದೆ.

ಶಿಶಿಲದಲ್ಲಿ ಕಡಿಮೆಯಾಗುತ್ತಿದೆಯಾ ಮೀನಿನ ಸಂತತಿ?

ಹೌದು ಇಂಥದ್ದೊಂದು ಅನುಮಾನ ಇದೀಗ ಕಾಡುತ್ತಿದೆ. ಶ್ರೀ ಶಿಶಿಲೇಶ್ವರ ದೇವಸ್ಥಾನದ ಮತ್ಸ್ಯ ತೀರ್ಥದಲ್ಲಿ ‘ ದೇವರ ಮೀನು ’ ಅಥವಾ ಮಹಸೀರ್ ಅಥವಾ ತುಳುವಿನಲ್ಲಿ ಪೆರುವೇಲು ಎಂದು ಕರೆಯಲ್ಪಡುವ ಪವಿತ್ರ ಮೀನಿನ ಸಂಖ್ಯೆ ಇಳಿಮುಖವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬ್ರಿಟೀಷ್ ಸರ್ಕಾರದ ಗಮನ ಸೆಳೆದಿದ್ದ ಕ್ಷೇತ್ರ

ಈ ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಇದು ತನ್ನ ನೈಸರ್ಗಿಕ ಸೌಂದರ್ಯ ಮತ್ತು ಹೆಚ್ಚಿನ ಸಂಖ್ಯೆಯ ಪವಿತ್ರ ಮೀನುಗಳಿಗೆ ಹೆಸರುವಾಸಿಯಾಗಿದೆ. ಪವಿತ್ರ ಮೀನಿನ ಮಹತ್ವವನ್ನು ತಿಳಿದ ಬ್ರಿಟಿಷ್ ಸರ್ಕಾರವು 1930 ರಲ್ಲಿ ಶಿಶಿಲದ ದೇವಾಲಯದ ಸಮೀಪವಿರುವ ಕಪಿಲಾ ನದಿಯ ಎರಡು ಕಿಮೀ ವ್ಯಾಪ್ತಿಯಲ್ಲಿ ಮೀನುಗಾರಿಕೆಯನ್ನು ನಿರ್ಬಂಧಿಸಿತ್ತು. ಇದನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಭಕ್ತರು ಮೀನಿಗೆ ‘ಸೇವೆ’ ಎಂದು ಉಪ್ಪಿಟ್ಟು ಅನ್ನ ನೀಡುತ್ತಾರೆ.

ನೀರು ನಾಯಿಯಿಂದ ಕಡಿಮೆಯಾಯ್ತಾ ಮೀನಿನ ಸಂಖ್ಯೆ

ಮೀನುಗಳ ಸಂಖ್ಯೆಯು ತೀವ್ರವಾಗಿ ಕಡಿಮೆಯಾಗಿದೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಹೆಚ್ಚಿದ ನೀರುನಾಯಿಗಳು ಮೀನುಗಳನ್ನು ಹೆಚ್ಚು ಬೇಟೆಯಾಡುತ್ತಿವೆ ಎಂದು ಶಂಕಿಸಲಾಗಿದೆ. ಈ ಸಮಸ್ಯೆಯನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಅನೇಕ ಭಕ್ತರು ಮತ್ತು ಸ್ಥಳೀಯರು ನೀರುನಾಯಿಗಳನ್ನು ನೋಡಿದ್ದಾರೆ. ಅವರನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಿದ್ದೇವೆ ಅಂತ ಅಲ್ಲಿನ ಆಡಳಿತ ಮಂಡಳಿ ಹೇಳಿದೆ.

ಬೆಳ್ತಂಗಡಿ ಸುತ್ತಮುತ್ತ ನೀರು ನಾಯಿಗಳ ಕಾಟ!

ನೀರು ನಾಯಿಗಳು ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಬರದಂತೆ ಅರಣ್ಯ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು. ನೀರುನಾಯಿಗಳ ರಕ್ಷಣೆಗೆ ದೇವರ ಮೀನುಗಳ ಬೆಲೆ ತೆರಬಾರದು' ಎಂದರು. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಬೆಳ್ತಂಗಡಿ ಸುತ್ತಮುತ್ತ ನೀರುನಾಯಿಗಳ ಕಾಟ ಹೆಚ್ಚಾಗಿದೆ. ವನ್ಯಜೀವಿ (ರಕ್ಷಣೆ) ಕಾಯ್ದೆಯ ಶೆಡ್ಯೂಲ್ 1ರ ಅಡಿಯಲ್ಲಿ ನೀರುನಾಯಿಗಳು ಬರುವುದರಿಂದ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ ಎಂದು ಉಪ್ಪಿನಂಗಡಿ ವ್ಯಾಪ್ತಿಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಆಹಾರ ಸರಪಳಿ ವ್ಯವಸ್ಥೆಯಂತಿದೆ

“ನೀರು ಶುದ್ಧವಾಗಿದ್ದರೆ ಮಾತ್ರ ನೀರುನಾಯಿಗಳು ಇರುತ್ತವೆ. ನೀರುನಾಯಿಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಿಸುವುದು ಸಾಧ್ಯವಾಗುವುದಿಲ್ಲ, ಏಕೆಂದರೆ ಅದು ಅವುಗಳ ಸಾವಿಗೆ ಕಾರಣವಾಗಬಹುದು. ಅವರು ಮೀನುಗಳನ್ನು ತಿನ್ನುತ್ತವೆ, ಬಿಡುತ್ತವೆ.  ಇದು ಹೆಚ್ಚು ಕಡಿಮೆ ಆಹಾರ ಸರಪಳಿಯಂತಿದೆ. ಈ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಅಂತ ಹೇಳಿದ್ದಾರೆ.

ಈ  ಹಿಂದೆ ನಡೆದಿತ್ತು ಮೀನುಗಳ ಮಾರಣಹೋಮ

1996 ರ ಮೇ 5  ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಎನ್ನುವ ಗ್ರಾಮದಲ್ಲಿನ ಮೀನುಗಳು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಸಿಲುಕಿ ಸಾವನ್ನಪ್ಪಿದ ಕಹಿ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಸಾವನ್ನಪ್ಪಿದ ಮೀನುಗಳ  ನೆನಪಿಗಾಗಿ ಇಲ್ಲಿನ ಜನರು ಸ್ಮಾರಕ ನಿರ್ಮಿಸಿ, ಪ್ರೀತಿ ಮೆರೆದಿದ್ದಾರೆ.  ಶಿಶಿಲ ಗ್ರಾಮದಲ್ಲಿ ನಡೆದ ಈ ದುರ್ಘಟನೆಯಲ್ಲಿ ಸುಮಾರು 6 ಲಾರಿ ಲೋಡಿನಷ್ಟು ದೇವರ ಮೀನುಗಳು ಸಾವನ್ನಪ್ಪಿದ್ದವು. ಈ ಕಹಿ ಘಟನೆಯನ್ನು ಮರೆಯದ ಇಲ್ಲಿನ ಜನ ಇವುಗಳ ಮೇಲೆ ಇರುವ ತಮ್ಮ ಪ್ರೀತಿಯ ದ್ಯೋತಕವಾಗಿ ಇವುಗಳಿಗಾಗಿ ಇಲ್ಲಿ ಸ್ಮಾರಕವನ್ನೂ ನಿರ್ಮಿಸಿದ್ದಾರೆ.

ಒಂದು ಲಕ್ಷಕ್ಕೂ  ಅಧಿಕ ಮೀನುಗಳ ಸಾವು

ಮೀನುಗಳ ಸಾವಿನ ಸಂಖ್ಯೆ ಲಕ್ಷಕ್ಕೂ ದಾಟಿತ್ತು. ಒಂದು ಸಾವಿರ ಜನ ನದಿಗಳು 15 ದಿನಗಳ ಕಾಲ ಪ್ರತಿದಿನ ಸತ್ತ ಮೀನುಗಳನ್ನು ಹೊರತೆಗೆಯಲು. ನದಿ ದಂಡೆಯಲ್ಲಿ ಸತ್ತ ಮೀನುಗಳ ರಾಶಿ ಹಾಕಲಾಗಿದೆ. ಸುಮಾರು 15 ಲೋಡ್ ಸತ್ತ ಮೀನುಗಳು ಸಿಕ್ಕಿದ್ದು, ಸುಮಾರು 4 ಕಿ.ಮೀ ನದಿಯ ಸಂಪೂರ್ಣ ಮೀನುಗಳ ಶವ ಕಂಡುಬಂದಿದೆ. ಈ ಎಲ್ಲಾ ಘಟನೆಯಾಗಿ ಇಂದಿಗೆ 25 ವರ್ಷಗಳಾದರೂ ಗ್ರಾಮಸ್ಥರು ಆ ಕರಾಳ ನೆನಪಲ್ಲೇ ಇದ್ದಾರೆ.

ಇದನ್ನೂ ಓದಿ: Explained: ಅಪಾಯ ಮಟ್ಟ ಮೀರಿದ ಜಾಗತಿಕ ತಾಪಮಾನ; 2026ಕ್ಕೆ ಎದುರಾಗಲಿದೆಯೇ ಮಹಾ ಕಂಟಕ?

ಮತ್ಸ್ಯ ದುರಂತದಲ್ಲಿ ಮಡಿದ ಮೀನುಗಳಿಗೆ ಗ್ರಾಮಸ್ಥರು ಮತ್ಸ್ಯ ಸ್ಮಾರಕವನ್ನು ಮಾಡಿದ್ದಾರೆ. ಪ್ರತಿ ವರ್ಷ ಮೇ 25 ರಂದು ವಿಶೇಷ ಪೂಜೆ ಮಾಡಲಾಗುತ್ತದೆ. ಮತ್ಸ್ಯ ಸಂರಕ್ಷಣಾ ಸಮಿತಿಯನ್ನು ಗ್ರಾಮಸ್ಥರೇ ಮಾಡಿದ್ದಾರೆ. ಆದರೀಗ ಮೀನುಗಳು ಕಡಿಮೆ ಆಗ್ತಿರೋದು ಆತಂತಕ್ಕೆ ಕಾರಣವಾಗಿದೆ.
Published by:Annappa Achari
First published: