Explained: ಬೆಂಗಳೂರಿನಲ್ಲಿ ಬದುಕು ಜಟಕಾ 'ಗುಂಡಿ’! ರಾಜಧಾನಿ ರಸ್ತೆಯಲ್ಲಿರೋದು 10,282 ಹೊಂಡ!

ಇನ್ನೇನು ಮುಂಗಾರು ಮಳೆ ಅಬ್ಬರ ಶುರುವಾಗಲಿದೆ. ಈಗಾಗಲೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಾಜಧಾನಿಯ ರಸ್ತೆಗಳಂತೂ ಕಿತ್ತುಹೋಗಿ, ವಾಹನ ಸವಾರರಿಗೇ ಸವಾಲು ಹಾಕುತ್ತಿದೆ. ಸದಾ ಗುಂಡಿಗಳಿಂದಲೇ ತುಂಬಿರುವ ರಸ್ತೆಗಳಲ್ಲಿ ಈಗ ನೀರು ತುಂಬಿಕೊಂಡು, ಅದೃಷ್ಟ ಇದ್ದವ ಸೇಫ್ ಆಗಿ ಮನೆ ಸೇರುತ್ತಾನೆ ಎನ್ನುವಂತಾಗಿದೆ. ನೀವು ನಂಬಲಿಕ್ಕಿಲ್ಲ ಬೆಂಗಳೂರಲ್ಲಿ ಬರೋಬ್ಬರಿ 10,282 ರಸ್ತೆಗುಂಡಿಗಳು ಇವೆಯಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಮಳೆ (Rain) ಬಂದರೆ ಬದುಕು (Life) ಚಿಂದಿ ಚಿತ್ರಾನ್ನವಾಗುವುದರಲ್ಲಿ ಎರಡು ಮಾತಿಲ್ಲ. ವಾರದಿಂದ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆಯಿಂದ (Pre Monsoon Rain) ಇದು ಸಾಬೀತಾಗಿದೆ. ಇನ್ನೇನು ಮುಂಗಾರು ಮಳೆ ಅಬ್ಬರ ಶುರುವಾಗಲಿದೆ. ಈಗಾಗಲೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಾಜಧಾನಿಯ ರಸ್ತೆಗಳಂತೂ (Road) ಕಿತ್ತುಹೋಗಿ, ವಾಹನ ಸವಾರರಿಗೇ (Vehicles Rider) ಸವಾಲು ಹಾಕುತ್ತಿದೆ. ಸದಾ ಗುಂಡಿಗಳಿಂದಲೇ (Potholes) ತುಂಬಿರುವ ರಸ್ತೆಗಳಲ್ಲಿ ಈಗ ನೀರು ತುಂಬಿಕೊಂಡು, ಅದೃಷ್ಟ ಇದ್ದವ ಸೇಫ್ (Safe) ಆಗಿ ಮನೆ ಸೇರುತ್ತಾನೆ ಎನ್ನುವಂತಾಗಿದೆ. ನೀವು ನಂಬಲಿಕ್ಕಿಲ್ಲ ಬೆಂಗಳೂರಲ್ಲಿ ಬರೋಬ್ಬರಿ 10,282 ರಸ್ತೆಗುಂಡಿಗಳು ಇವೆಯಂತೆ! ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ

ರಾಜಧಾನಿಯಲ್ಲಿ 10,282 ರಸ್ತೆ ಗುಂಡಿಗಳು ಇವೆ!

ಬಿಬಿಎಂಪಿಯೇ ನೀಡಿರುವ ಮಾಹಿತಿ ಪ್ರಕಾರ ರಾಜಧಾನಿ ಬೆಂಗಳೂರು ನಗರದಾದ್ಯಂತ ಬರೋಬ್ಬರಿ 10,282 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. 202 ರಸ್ತೆ ಗುಂಡುಗಳು ಗಂಭೀರ ಸ್ವರೂಪದ ಗುಂಡಿಗಳು ಎಂದು ಗುರುತಿಸಲಾಗಿದೆ. ಇನ್ನು ಈಸ್ಟ್ ವಲಯದಲ್ಲಿ 2295 ರಸ್ತೆ ಗುಂಡಿಗಳಿವೆ.

ಎಲ್ಲೆಲ್ಲಿ ಎಷ್ಟೆಷ್ಟು ರಸ್ತೆ ಗುಂಡಿಗಳಿವೆ?

ಬೊಮ್ಮನಹಳ್ಳಿ ವಲಯದಲ್ಲಿ 1,076 ರಸ್ತೆ ಗುಂಡಿಗಳು, ದಾಸರಹಳ್ಳಿ ವಲಯದಲ್ಲಿ 867 ರಸ್ತೆ ಗುಂಡಿಗಳು, ಪೂರ್ವ ವಲಯದಲ್ಲಿ 2,066 ರಸ್ತೆ ಗುಂಡಿಗಳು, ಮಹದೇವಪುರ ವಲಯದಲ್ಲಿ 729 ರಸ್ತೆ ಗುಂಡಿಗಳು, ಆರ್.ಆರ್.ನಗರ ವಲಯದಲ್ಲಿ 1,068 ರಸ್ತೆ ಗುಂಡಿಗಳು, ದಕ್ಷಿಣ ವಲಯದಲ್ಲಿ 1,414 ರಸ್ತೆ ಗುಂಡಿಗಳು, ಪಶ್ಚಿಮ ವಲಯದಲ್ಲಿ 1,232 ರಸ್ತೆ ಗುಂಡಿಗಳು ಹಾಗೂ ಯಲಹಂಕ ವಲಯದಲ್ಲಿ 755 ರಸ್ತೆ ಗುಂಡಿಗಳು ಸೇರಿದಂತೆ ಒಟ್ಟು 10,282 ರಸ್ತೆ ಗುಂಡಿಗಳಿವೆಯಂತೆ.

ರಸ್ತೆ ಗುಂಡಿ ಮುಚ್ಚಲು 5 ವರ್ಷಗಳಲ್ಲಿ 215 ಕೋಟಿ ವೆಚ್ಚ

ಇನ್ನು ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಕೋಟ್ಯಾಂತರ ರೂಪಾಯಿ ವಿನಿಯೋಗಿಸುತ್ತಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ 2017ರಿಂದ 2022ರವರೆಗೆ ಅಂದರೆ ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 215 ಕೋಟಿ ರೂಪಾಯಿಗಳನ್ನು ರಸ್ತೆ ಗುಂಡಿ ದುರಸ್ತಿಗಾಗಿ ಖರ್ಚು ಮಾಡಲಾಗಿದೆ. 2017ರಲ್ಲಿ 47.8 ಕೋಟಿ ರೂಪಾಯಿ, 2018ರಲ್ಲಿ 49.2 ಕೋಟಿ ರೂಪಾಯಿ, 2020ರಲ್ಲಿ 54.8 ಕೋಟಿ ರೂಪಾಯಿ, 2021ರಲ್ಲಿ 16.4 ಕೋಟಿ ರೂಪಾಯಿ ಹಾಗೂ 2022ರಲ್ಲಿ ಈ ಮೇವರೆಗೂ 47 ಕೋಟಿ ರೂಪಾಯಿ ಒಟ್ಟಾರೆ 215 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.

ಇದನ್ನೂ ಓದಿ: Crime News: ರಾಜ್ಯದ ಪಾಲಿಗಿಂದು 'ಸಾವಿನ ಸಂಡೇ'! ವಿವಿಧ ಪ್ರಕರಣಗಳಲ್ಲಿ ಐದಕ್ಕೂ ಹೆಚ್ಚು ಮಂದಿ ದುರ್ಮರಣ

ರಸ್ತೆ ಗುಂಡಿಗಳಿಂದ ಪ್ರಾಣಕ್ಕೇ ಸಂಚಕಾರ

ರಸ್ತೆ ಗುಂಡಿಗಳಲ್ಲಿ ವಾಹನ ಸವಾರರು ಬಿದ್ದು ಗಂಭೀರ ಗಾಯಮಾಡಿಕೊಂಡ ಘಟನೆ ನಡೆದಿದೆ. ಅದೆಷ್ಟೋ ಮಂದಿ ರಸ್ತೆ ಗುಂಡಿಗಳಲ್ಲಿ ಬಿದ್ದು ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. 2021-22ನೇ ಸಾಲಿನಲ್ಲಿ ಬರೋಬ್ಬರಿ 13 ಮಂದಿ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ.

ಯಾವ ವಲಯದಲ್ಲಿ ಸಾವನ್ನಪ್ಪಿದ್ದಾರೆ?

ಯಲಹಂಕ ವಲಯದಲ್ಲಿ ಇಬ್ಬರು, ಆರ್‌ಟಿ ನಗರದಲ್ಲಿ ಒಬ್ಬರು, ಪೀಣ್ಯದಲ್ಲಿ ಒಬ್ಬರು, ಕಾಮಾಕ್ಷಿಪಾಳ್ಯದಲ್ಲಿ ಒಬ್ಬರು, ಬಾಣಸವಾಡಿಯಲ್ಲಿ ಒಬ್ಬರು, ವೈಟ್‌ಫೀಲ್ಡ್ ವಿಭಾಗದಲ್ಲಿ  3 ಮಂದಿ, ಪುಲಕೇಶಿನಗರದಲ್ಲಿ ಒಬ್ಬರು, ಯಶವಂತರಪುರದಲ್ಲಿ ಒಬ್ಬರು, ಚಿಕ್ಕಪೇಟೆಯಲ್ಲಿ ಒಬ್ಬರು ಸೇರಿದಂತೆ ಒಟ್ಟು 12 ಅಪಘಾತಗಳು ನಡೆದಿದ್ದು, ಇವುಗಳಲ್ಲಿ ಒಟ್ಟು 13 ಜನ ಬಲಿಯಾಗಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಮತ್ತು ಒಂಬತ್ತು ಪುರುಷರು ಸೇರಿದ್ದಾರೆ. ಆರು ಜನರು 19 ರಿಂದ 30 ವರ್ಷದೊಳಗಿನವರಾಗಿದ್ದರೆ, ಒಬ್ಬರು ಹಿರಿಯ ನಾಗರಿಕರಾಗಿದ್ದರು.

ರಸ್ತೆ ಗುಂಡಿ ಉಂಟಾಗಲು ಕಾರಣವೇನು?

ಬಿಬಿಎಂಪಿಯು ಇಡೀ ನಗರಕ್ಕೆ 9 ಸಾವಿರ ಕೋಟಿಗಿಂತ ಹೆಚ್ಚಿನ ಬಜೆಟ್ ಮಂಡಿಸುತ್ತದೆ. ಆದರೆ ರಸ್ತೆ ನಿರ್ವಹಣೆಗೆ ಅಂತ ಪ್ರತ್ಯೇಕ ಹಣ ಮೀಸಲಿಟ್ಟಿದ್ದು ಕಡಿಮೆ. ಬಿಬಿಎಂಪಿ ಪ್ರಕಾರ, ಹೆಚ್ಚಿನ ರಸ್ತೆಗಳ ಕಾಮಗಾರಿಯನ್ನು ಮುಖ್ಯಮಂತ್ರಿ ನಗರೋತ್ಥಾನ ಅನುದಾನದಲ್ಲಿ ರಿಪೇರಿ ಮಾಡಿಸಿಕೊಳ್ಳಲಾಗುತ್ತದೆ. ಇದೂ ರಸ್ತೆ ಗುಂಡಿ ಶೀಘ್ರವೇ ಮುಚ್ಚಲು ಇರುವ ತೊಡಕುಗಳಲ್ಲಿ ಒಂದಾಗಿದೆ.

ಇಂಜಿನಿಯರ್‌ಗಳಿಗೆ ಕನಿಷ್ಠ 20 ವರ್ಷವಾದರೂ ಬೇಕು!

“ಬೆಂಗಳೂರು ಸುಮಾರು 14,000 ಕಿ.ಮೀ ರಸ್ತೆಗಳನ್ನು ಹೊಂದಿದೆ. 10ರಷ್ಟು ರಸ್ತೆಗಳು ಹಾಳಾಗಿರುವುದನ್ನು ಪರಿಗಣಿಸಿದರೆ, 1,400 ಕಿ.ಮೀ.ವರೆಗಿನ ಎಲ್ಲ ಗುಂಡಿಗಳನ್ನು ಸರಿಪಡಿಸಲು ಆ ಬಜೆಟ್‌ನಲ್ಲಿ ಎಂಜಿನಿಯರ್‌ಗಳು 20 ವರ್ಷಗಳನ್ನು ತೆಗೆದುಕೊಳ್ಳುತ್ತಾರೆ,'' ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಹೇಳಿದ್ದಾಗಿ ಪತ್ರಿಕೆಯೊಂದು ಉಲ್ಲೇಖಿಸಿತ್ತು.

ಡಾಂಬರ್‌ ಘಟಕಗಳ ಅಸಮರ್ಪಕ ಕಾರ್ಯ

ನಗರದ ರಸ್ತೆಗಳು ಗರಿಷ್ಠ ಹಾನಿಯನ್ನು ಅನುಭವಿಸುತ್ತಿದ್ದರೂ, 90 ಪ್ರತಿಶತದಷ್ಟು ಬಿಟುಮೆನ್ ಪ್ಲಾಂಟ್‌ಗಳು ಮುಚ್ಚಲ್ಪಟ್ಟಿವೆ ಮತ್ತು ತುರ್ತು ದುರಸ್ತಿ ಮಾಡಲು ಸಾಧ್ಯವಾಗದಿರುವುದು ವಿಪರ್ಯಾಸವಾಗಿದೆ. ಬೆಂಗಳೂರಿನಲ್ಲಿ ಕನಿಷ್ಠ 20 ಅಂತಹ ಘಟಕಗಳಿವೆಯಂತೆ. ಹೀಗಾಗಿ ಕಚ್ಚಾವಸ್ತು ಸಿಗದ ಕಾರಣ ಮಳೆಗಾಲದಲ್ಲಿ ಗುಂಡಿಗಳನ್ನು ತುಂಬುವುದು ಕಷ್ಟವಾಗಿದೆ. ನಗರದಲ್ಲಿ ಸಾಕಷ್ಟು ಡಾಂಬರ್ ಪ್ಲಾಂಟ್‌ಗಳ ಪರವಾನಿಗೆಯನ್ನು ಜಿಲ್ಲಾಡಳಿತ ರದ್ದುಗೊಳಿಸಿದ್ದು, ಮಳೆಗಾಲದಲ್ಲಿ ಕೊರತೆಯನ್ನು ಮತ್ತಷ್ಟು ಹೆಚ್ಚಿಸಿರುವುದು ರಸ್ತೆ ಗುಂಡಿಗಳ ದುರಸ್ತಿ ವಿಳಂಬಕ್ಕೆ ಕಾರಣವಾಗಿದೆ.

ಕಳಪೆ ಗುಣಮಟ್ಟದ ರಸ್ತೆಗಳು

ರಾಜಧಾನಿಯ ಪ್ರಮುಖ ರಸ್ತೆಗಳಷ್ಟೇ ಅಲ್ಲ, ಸಾಮಾನ್ಯ ರಸ್ತೆಗಳೂ ಸಹ ಸದಾ ವಾಹನಗಳು, ಜನರಿಂದಲೇ ತುಂಬಿರುತ್ತವೆ. ಇಂತಹ ರಸ್ತೆಗಳ ಗುಣಮಟ್ಟ ಎಷ್ಟು ಕೆಟ್ಟದಾಗಿರುತ್ತೆ ಅಂದರೆ ಅದನ್ನು ನೋಡಿದರೇ ತಿಳಿಯುತ್ತದೆ.

ರಸ್ತೆ ಮೇಲೆಯೇ ಆಗಾಗ ನಡೆಯುತ್ತಿರುವ ಕಾಮಗಾರಿಗಳು

OFC (ಆಪ್ಟಿಕಲ್ ಫೈಬರ್ ಕೇಬಲ್) ಆಪರೇಟರ್‌ಗಳು, BWSSB, ಬೆಸ್ಕಾಂ, GAIL, ಖಾಸಗಿ ವ್ಯಕ್ತಿಗಳು ರಸ್ತೆಗಳನ್ನು ಕಾಮಗಾರಿಗೋಸ್ಕರ ಆಗಾಗ ಅಗೆಯುತ್ತಲೆ ಇರುತ್ತಾರೆ. ಖಾಸಗಿ ವ್ಯಕ್ತಿಗಳಂತೂ ತಮ್ಮ ಮನೆಗಳನ್ನು ಒಳಚರಂಡಿ ಮಾರ್ಗಗಳಿಗೆ ಸಂಪರ್ಕಿಸುತ್ತಿದ್ದಾರೆ. ಆಗ ರಸ್ತೆ ಹಾಳು ಮಾಡುವುದು ಸಾಮಾನ್ಯವಾಗಿತೆ,

ನೀರಿನ ಸೋರಿಕೆಯಿಂದ ರಸ್ತೆ ಗುಣಮಟ್ಟಕ್ಕೆ ಧಕ್ಕೆ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಪೈಪ್‌ಲೈನ್ ನೀರಿನ ಸೋರಿಕೆ ಸಂಭವಿಸಿದಾಗ, ರಸ್ತೆಯ ಮೇಲ್ಮೈ ದುರ್ಬಲಗೊಳ್ಳುತ್ತದೆ ಮತ್ತು ಗುಂಡಿಗಳು ಜಾಸ್ತಿಯಾಗಲು ಪ್ರಾರಂಭಿಸುತ್ತವೆ. ಆದರೆ ಬಿಡಬ್ಲ್ಯೂಎಸ್‌ಎಸ್‌ಬಿ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಾಗ, ಅದು ರಸ್ತೆಯನ್ನು ಅಗೆದು ಮಣ್ಣು ಮತ್ತು ಜೆಲ್ಲಿಯಿಂದ ತುಂಬುತ್ತದೆ, ಈ ವೇಳೆ (ರಸ್ತೆಯನ್ನು ಸರಿಯಾಗಿ ಸಂಕುಚಿತಗೊಳಿಸುವ ಬದಲು ಮತ್ತು ಅದರ ಮೇಲೆ ಹಲವಾರು ಪದರಗಳ ಬಿಟುಮೆನ್ ಅನ್ನು ಹಾಕುತ್ತದೆ. ಹೀಗಾಗಿ ಮೇಲ್ಮೈ ಇನ್ನಷ್ಟು ಅಪಾಯಕಾರಿಯಾಗುತ್ತದೆ. ಇದು  ಒಂದು ಹಳ್ಳಕ್ಕೆ ಹೋಲುತ್ತದೆ. ವಿದ್ಯುತ್ ಪೈಪ್‌ಲೈನ್ ಹಾಕುವಾಗ ಕೂಡ ಬೆಸ್ಕಾಂ ಇದೇ ಕೆಲಸ ಮಾಡುತ್ತದೆ.

ಇದನ್ನೂ ಓದಿ: Explained: ಪ್ರತಿ ಮಳೆಗಾಲದಲ್ಲೂ ಬೆಂಗಳೂರು ಮುಳುಗುವುದೇಕೆ? ಈ ಬಾರಿಯೂ ತಪ್ಪೋದಿಲ್ವ ಜನರಿಗೆ ಸಂಕಷ್ಟ?

ವಾಹನಗಳ ನಿರಂತರ ಓಡಾಟ

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಾ ಇರುತ್ತದೆ. ಬೇರೆ ಬೇರೆ ಉದ್ದೇಶಗಳಾಗಿ ಬೇರೆ ಊರು ಅಥವಾ ರಾಜ್ಯದಿಂದ ರಾಜಧಾನಿಗೆ ಬರುವ ವಾಹನಗಳ ಸಂಖ್ಯೆಯೂ ಹೆಚ್ಚಿರುತ್ತದೆ. ನೀವು ಕೇವಲ ಸಂಖ್ಯೆಗಳ ಮೂಲಕ ಹೋದರೆ ಸುಮಾರು 500 ವಾಹನಗಳು ಪ್ರತಿ ಕಿಮೀ ರಸ್ತೆಯನ್ನು ಆಕ್ರಮಿಸುತ್ತವೆ. ಅಂದರೆ ಪ್ರತಿ ಎರಡು ಮೀಟರ್‌ಗೆ ಒಂದು ವಾಹನವಿದೆ.  ಆದರೆ ಬೆಂಗಳೂರಿನ ಹೆಚ್ಚಿನ ರಸ್ತೆಗಳು ತುಂಬಾ ಕಿರಿದಾಗಿದೆ. ಈಗಿರುವ ವಾಹನಗಳ ಸಂಖ್ಯೆಗೆ ಅನುಗುಣವಾಗಿ ರಸ್ತೆಗಳನ್ನು ಅಗಲೀಕರಣ ಮಾಡದಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ.
Published by:Annappa Achari
First published: