• Home
  • »
  • News
  • »
  • explained
  • »
  • Explainer: ಸಂಸತ್ತಿನಲ್ಲಿ ಯಾವ ಪ್ರಕಾರದ ಪ್ರಶ್ನೆಗಳನ್ನು ಕೇಳಲಾಗುತ್ತದೆ..? ಅನುಸರಿಸಬೇಕಾದ ನಿಯಮಗಳೇನು..?

Explainer: ಸಂಸತ್ತಿನಲ್ಲಿ ಯಾವ ಪ್ರಕಾರದ ಪ್ರಶ್ನೆಗಳನ್ನು ಕೇಳಲಾಗುತ್ತದೆ..? ಅನುಸರಿಸಬೇಕಾದ ನಿಯಮಗಳೇನು..?

ಸಂಸತ್ತು

ಸಂಸತ್ತು

ಒಬ್ಬ ಸಂಸದರು ನಿರ್ದಿಷ್ಟ ದಿನದಂದು ನೋಟೀಸ್ ನೀಡಿದ ಐದು ಪ್ರಶ್ನೆಗಳಿಗೆ ಮೌಖಿಕ ಹಾಗೂ ಲಿಖಿತ ಉತ್ತರಗಳನ್ನು ನೀಡಬಹುದು.

  • Share this:

    ಸಂಸತ್ತು ಪ್ರಜಾಪ್ರಭುತ್ವ ಹಾಗೂ ಸಂಸದೀಯ ಕಾರ್ಯವಿಧಾನಗಳ ಪವಿತ್ರ ಸ್ಥಳವೆನಿಸಿದ್ದು ಈ ಕಾರ್ಯವಿಧಾನಗಳನ್ನು ಜನರ ಇಚ್ಛೆಗೆ ಅನುಸಾರವಾಗಿ ಆರಚಣೆಗೆ ತರಲಾಗುತ್ತದೆ. ಆದರೆ ಲೋಕಸಭೆ ಹಾಗೂ ರಾಜ್ಯಸಭೆಯ ಪ್ರಕ್ರಿಯೆಗಳಲ್ಲಿ ಒಳಗೊಂಡಿರುವ ನಿಯಮಗಳು ಹಾಗೂ ಪರಿಭಾಷೆಗಳನ್ನು ಗ್ರಹಿಸಲು, ಅರ್ಥೈಸಿಕೊಳ್ಳಲು ಕಷ್ಟವಿದೆ. ನ್ಯೂಸ್ 18 ಸಿರೀಸ್ ಹೌಸ್ ಟಾಕ್ ಈ ಕುರಿತು ಸಮಗ್ರ ಹಾಗೂ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮುಂದಿಡಲಿದೆ.ಕೇಂದ್ರದ ಸರ್ಕಾರವು ಸಂಸತ್ತಿನ ಮೂಲಕ ಭಾರತದ ಜನರ ಹೊಣೆಗಾರಿಕೆಯನ್ನು ಹೊಂದಿದೆ ಹಾಗೂ ಸಂಸದರು ಸರಕಾರವನ್ನು ಪ್ರಶ್ನೆಗಳ ಮೂಲಕ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ. ಆಡಳಿತ ಹಾಗೂ ಸರಕಾರಿ ಚಟುವಟಿಕೆಯ ಪ್ರತಿಯೊಂದು ಅಂಶಗಳ ಮೇಲೆ ಪ್ರತಿಪಕ್ಷವು ಪ್ರಶ್ನೆಗಳ ದಾಳಿ ನಡೆಸಿ ಸರಕಾರದ ತಪ್ಪು ಹಾಗೂ ಸರಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುವ ಕುರಿತು ನೀವು ಅರಿತುಕೊಳ್ಳಬೇಕಾದ ಹಾಗೂ ತಿಳಿಯಬೇಕಾದ ಅಂಶಗಳೇನು ಎಂಬುದನ್ನು ನೋಡೋಣ.


    ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಯಾವಾಗ ಕೇಳಲಾಗುತ್ತದೆ..?


    ಲೋಕಸಭೆಯಲ್ಲಿ ಸದನ ಸಭೆ ಸೇರಿದ ಮೊದಲ ಗಂಟೆಯನ್ನು “ಪ್ರಶ್ನೋತ್ತರ” ಎಂದು ಕರೆಯಲಾಗುತ್ತದೆ. ಇದು ಸದಸ್ಯರಿಗೆ ಪ್ರಶ್ನೆಗಳನ್ನು ಕೇಳುವ ಅಂತರ್ಗತ ಮತ್ತು ಅನಿಯಮಿತ ಸಂಸದೀಯ ಹಕ್ಕನ್ನು" ಚಲಾಯಿಸಲು ಅನುವು ಮಾಡಿಕೊಡುತ್ತದೆ. ಈ ಪ್ರಶ್ನಾವಳಿಯ ಸಮಯವು ಲೋಕಸಭೆಯಲ್ಲಿ ಬೆಳಗ್ಗೆ 11ರಿಂದ ಆರಂಭಗೊಂಡು ಮಧ್ಯಾಹ್ನ 12 ಗಂಟೆಯವರೆಗೆ ನಡೆಯುತ್ತದೆ. ಆದರೆ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಸಮಯ ಮಧ್ಯಾಹ್ನ 12ರಿಂದ 1 ಗಂಟೆಯವರೆಗೆ ನಡೆಯುತ್ತದೆ. ‘ಶೂನ್ಯ ಅವಧಿ’ ಎಂದು ಕರೆಯುವ ಸಮಯದಲ್ಲಿ ಕೂಡ ಪ್ರಶ್ನೆಗಳನ್ನು ಕೇಳಬಹುದಾಗಿದೆ. ಪ್ರಶ್ನೆಯನ್ನು ಕೇಳುವ ಮೊದಲು ಸದಸ್ಯರು ನೋಟಿಸ್‌ ನೀಡಬೇಕಾಗುತ್ತದೆ.


    ಪ್ರಶ್ನೆಯ ನೋಟಿಸ್‌ ಅನ್ನು ಸಂಬಂಧಿತ ಸದನದ ಸೆಕ್ರೆಟರಿಯೆಟ್‌ಗೆ ನೀಡಬೇಕು. ಸೂಚನೆ ಸ್ವೀಕರಿಸಿದ ದಿನಾಂಕ ಹಾಗೂ ಉತ್ತರ ನೀಡುವ ದಿನಾಂಕವನ್ನು ಹೊರತುಪಡಿಸಿ 15 ದಿನಗಳನ್ನು ಪರಿಗಣಿಸಲಾಗುತ್ತದೆ.


    ಯಾವ ಪ್ರಕಾರದ ಪ್ರಶ್ನೆ ಕೇಳಲಾಗುತ್ತದೆ?


    ಎರಡೂ ಸದನಗಳಿಗೆ, ಒಬ್ಬ ಸದಸ್ಯರು ಒಂದು ನಿರ್ದಿಷ್ಟ ದಿನಕ್ಕೆ ಐದು ಪ್ರಶ್ನೆಗಳಿಗೆ ಮಾತ್ರ ನೋಟಿಸ್ ನೀಡಬಹುದು ಮತ್ತು ಯಾವ ರೀತಿಯ ಪ್ರಶ್ನೆಗಳನ್ನು ಅನುಮತಿಸಬಹುದು ಎಂಬುದಕ್ಕೆ ಕಠಿಣ ಮಾರ್ಗಸೂಚಿಗಳಿದ್ದು ಅದಕ್ಕೆ ಸದಸ್ಯರು ಬದ್ಧರಾಗಿರಬೇಕು ಎಂದು ನಿಯಮಗಳು ಹೇಳುತ್ತವೆ. ಒಂದು ಪ್ರಶ್ನೆಯು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯವನ್ನು ಆಧರಿಸಿರಬೇಕು ಹಾಗೂ ವಾದ, ತೀರ್ಮಾನ ಮತ್ತು ಮಾನಹಾನಿಕರ ಹೇಳಿಕೆಗಳನ್ನು ಒಳಗೊಂಡಿರಬಾರದು. ಇನ್ನು ಪ್ರಶ್ನೆಯು ನೀತಿಯ ದೊಡ್ಡ ಸಮಸ್ಯೆಯನ್ನು ಉಲ್ಲೇಖಿಸಬಾರದು ಹಾಗೂ ಆಡಳಿತದ ಸಣ್ಣ ವಿವರಗಳು ಹಾಗೂ ಸರಕಾರದ ದಿನನಿತ್ಯದ ಕೆಲಸಗಳ ಆಂತರ್ಯವನ್ನು ಪ್ರವೇಶಿಸಬಾರದು.


    ಸ್ಟಾರ್ ಮಾಡಿದ ಹಾಗೂ ಅನ್‌ಸ್ಟಾರ್ ಮಾಡಿದ ಪ್ರಶ್ನೆಗಳು ಎಂದರೇನು?


    ಒಬ್ಬ ಸಂಸದರು ನಿರ್ದಿಷ್ಟ ದಿನದಂದು ನೋಟೀಸ್ ನೀಡಿದ ಐದು ಪ್ರಶ್ನೆಗಳಿಗೆ ಮೌಖಿಕ ಹಾಗೂ ಲಿಖಿತ ಉತ್ತರಗಳನ್ನು ನೀಡಬಹುದು. ಆದರೆ ಸದನವು ಒಂದು ದಿನದಲ್ಲಿ ಉತ್ತರಿಸಬಹುದಾದ ಎರಡೂ ಪ್ರಕಾರದ ಪ್ರಶ್ನೆಗಳ ಒಟ್ಟು ಸಂಖ್ಯೆಯನ್ನು ಮಿತಿಗೊಳಿಸುತ್ತದೆ.


    ಸದಸ್ಯನು ತನ್ನ ನೋಟಿಸ್‌ನಲ್ಲಿ ನಕ್ಷತ್ರ ಚಿಹ್ನೆ ಇರುವ ಮೌಖಿಕ ಉತ್ತರ ಪಡೆಯಬಹುದಾದ ಪ್ರಶ್ನೆ ಸೂಚಿಸುವ ಅವಕಾಶವಿದೆ. ಈ ರೀತಿಯ ಪ್ರಶ್ನೆಗಳನ್ನು ಸ್ಟಾರ್ ಮಾಡಿದ ಇಲ್ಲವೇ ನಕ್ಷತ್ರ ಹಾಕಿದ ಪ್ರಶ್ನೆ ಎಂದು ಕರೆಯಲಾಗುತ್ತದೆ. ಲೋಕಸಭೆಯಲ್ಲಿ ಒಂದು ದಿನದ ಪ್ರಶ್ನೋತ್ತರ ಸಮಯದಲ್ಲಿ 20ಕ್ಕಿಂತ ಹೆಚ್ಚು ನಕ್ಷತ್ರ ಹಾಕಿದ ಪ್ರಶ್ನೆಗಳನ್ನು ಪರಿಗಣಿಸುವುದಿಲ್ಲ ಹಾಗೂ ರಾಜ್ಯಸಭೆಯಲ್ಲಿ ನಕ್ಷತ್ರ ಹಾಕಿದ 15 ಪ್ರಶ್ನೆಗಳನ್ನು ಅನುಮತಿಸಲಾಗುತ್ತದೆ.


    ನಕ್ಷತ್ರ ಹಾಕದ ಪ್ರಶ್ನೆ ಎಂದರೆ ಸಂಸದರ ಲಿಖಿತ ಉತ್ತರವನ್ನು ಕೇಳಿದ ಪ್ರಶ್ನೆಯಾಗಿದೆ. ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಸಂಸತ್ತಿನ ಮೇಜಿನ ಮೇಲೆ ಇರಿಸಲಾಗುತ್ತದೆ. ತದನಂತರ ಇಂತಹ ಪ್ರಶ್ನೆಗಳು ಪೂರಕ ಪ್ರಶ್ನೆಗಳಿಗೆ ಅವಕಾಶ ನೀಡುವುದಿಲ್ಲ. ಲೋಕಸಭೆಯಲ್ಲಿ ಲಿಖಿತ ಉತ್ತರಗಳಿಗಾಗಿ ಪ್ರತಿದಿನ 230 ಪ್ರಶ್ನೆಗಳನ್ನು ಆಯ್ಕೆಮಾಡಿದರೆ ರಾಜ್ಯಸಭೆಯಲ್ಲಿ ಈ ಪ್ರಶ್ನೆಗಳ ಮಿತಿ 160 ಆಗಿದೆ.


    ಬೇರೆ ಪ್ರಕಾರದ ಪ್ರಶ್ನೆಗಳಿವೆಯೇ?


    ಇನ್ನು ಹೆಸರೇ ಸೂಚಿಸುವಂತೆ, ತುರ್ತು ಚರ್ಚೆಗೆ ಸಂಬಂಧಿಸಿದಂತೆ ‘ಶಾರ್ಟ್ ನೋಟೀಸ್ ಪ್ರಶ್ನೆಗಳು' ಕೂಡ ಇವೆ. ಇಂತಹ ಪ್ರಶ್ನೆಗಳಿಗೆ 10 ದಿನಗಳಿಗಿಂತ ಮುಂಚಿತವಾಗಿ ನೋಟಿಸ್ ನೀಡಬಹುದು ಹಾಗೂ ಅವುಗಳಿಗೆ ಉತ್ತರವನ್ನು ಮೌಖಿಕವಾಗಿ ನೀಡಬೇಕಾಗುತ್ತದೆ. ಸಂಸತ್ತಿನಲ್ಲಿ ಎಲ್ಲಾ ಪ್ರಶ್ನೆಗಳನ್ನು ಸರಕಾರ ಹಾಗೂ ಅದರ ಮಂತ್ರಿಗಳಿಗೆ ಮಾತ್ರ ನಿರ್ದೇಶಿಸುವ ಅಗತ್ಯವಿಲ್ಲ ಹಾಗೂ ಖಾಸಗಿ ಸದಸ್ಯರಿಂದಲೂ ಉತ್ತರಗಳನ್ನು ಪಡೆಯುವ ಅವಕಾಶವಿದೆ.


    ಸರಾಸರಿ ಎಷ್ಟು ಪ್ರಶ್ನೆಗಳನ್ನು ಕೇಳಬಹುದು?


    PRS ಶಾಸಕಾಂಗ ಸಂಶೋಧನೆಯ ಪ್ರಕಾರ, 2009 ಮತ್ತು 2014ರ ನಡುವಿನ 15 ನೇ ಲೋಕಸಭೆಯ ಸಂಪೂರ್ಣ ಅವಧಿಯಲ್ಲಿ 1,43,635 ಪ್ರಶ್ನೆಗಳನ್ನು ಕೇಳಲಾಯಿತು. ಸಂಸತ್ತು ಸಾಮಾನ್ಯವಾಗಿ ಪ್ರತಿ ವರ್ಷ ಮೂರು ಅಧಿವೇಶನಗಳಲ್ಲಿ ಸಭೆ ನಡೆಸುವುದರಿಂದ, ಪ್ರತಿ ಅಧಿವೇಶನದಲ್ಲೂ 9,500ಕ್ಕಿಂತ ಹೆಚ್ಚು ಪ್ರಶ್ನೆಗಳನ್ನು ಕೇಳಿದಂತಾಗಿದೆ.


    17ನೇ ಲೋಕಸಭೆಯ ಮೊದಲ ಎರಡು ವರ್ಷಗಳ 2021ರ ವರದಿಯು ಸದನದಲ್ಲಿ ಪ್ರತಿ ಮೌಖಿಕ ಉತ್ತರಗಳ ಸರಾಸರಿ ಸಂಖ್ಯೆಯು ಕ್ರಮವಾಗಿ 3.07, 2.96 ಮತ್ತು 4.34 ರಿಂದ 14, 15 ಮತ್ತು 16 ನೇ ಲೋಕಸಭೆಯಲ್ಲಿ 5.37ಕ್ಕೆ ಏರಿದೆ ಎಂದು ತಿಳಿಸಿದೆ.



    First published: