Wild Animals: ವಿದೇಶಿ ಪ್ರಾಣಿಗಳ ಕಳ್ಳಸಾಗಣೆಗೆ ಬ್ರೇಕ್! ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳೇನು?

ವಿಲಕ್ಷಣ ಪ್ರಾಣಿಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಮಾಹಿತಿಯನ್ನು ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಬೇಕು ಎಂದು ಕೇಂದ್ರ ಸಚಿವಾಲಯ ಸಲಹೆ ಸೂಚನೆ ನೀಡಿತ್ತು. ಈಗ ಸಚಿವಾಲಯದ ಸಲಹಾ ರಚನೆಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಎತ್ತಿ ಹಿಡಿದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚಿನ ದಿನಗಳಲ್ಲಿ (Now a Days) ಕೊರೋನಾ (Corona) ಎನ್ನುವುದು ಜಗತ್ತಿನ ಸಾಮಾನ್ಯ ವೈರಸ್ (Common Virus) ಆಗಿ ಬಾಧಿಸುತ್ತಿದೆ. ಕೆಲವು ಪ್ರದೇಶಗಳಲ್ಲಿ ಕಾಡು ಪ್ರಾಣಿಗಳು (Wild Animals) ಸಹ ಕೊರೋನಾ ವೈರಸ್ ನಿಂದ ಪ್ರಭಾವಿತವಾಗಿವೆ. ಇಂತಹ ಸಮಯದಲ್ಲಿ ಕಾಡು ಪ್ರಾಣಿಗಳ ಅಕ್ರಮ ಸಾಗಣೆ ಮತ್ತು ಝೂನೋಟಿಕ್ ರೋಗಗಳ ಬಗ್ಗೆ ವಿಶ್ವಾದ್ಯಂತ ಕಾಳಜಿ ಹೆಚ್ಚಿತ್ತು. ಜೂನ್ 2020 ರಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ವಿಲಕ್ಷಣ ಪ್ರಾಣಿಗಳ ಆಮದು ಮತ್ತು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಲಹೆ ನೀಡಿತ್ತು. ವಿದೇಶಗಳಲ್ಲಿ ಪಳಗಿಸಲಾದ ಹಲವು ಜಾತಿಯ ವಿಲಕ್ಷಣ ಪ್ರಾಣಿಗಳ ಬಗ್ಗೆ ಈ ಸಲಹೆ ನೀಡಲಾಗಿತ್ತು.

  ವಿಲಕ್ಷಣ ಪ್ರಾಣಿಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಮಾಹಿತಿಯನ್ನು ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಬೇಕು ಎಂದು ಕೇಂದ್ರ ಸಚಿವಾಲಯ ಸಲಹೆ ಸೂಚನೆ ನೀಡಿತ್ತು. ಈಗ ಸಚಿವಾಲಯದ ಸಲಹಾ ರಚನೆಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಎತ್ತಿ ಹಿಡಿದಿದೆ. ಭಾರತದಲ್ಲಿ ಪ್ರಾಣಿಗಳ ಕಳ್ಳ ಸಾಗಣೆ, ಅದರ ಪರಿಣಾಮ, ಪ್ರಾಮುಖ್ಯತೆ ಮತ್ತು ಇತ್ಯಾದಿ ಬಗ್ಗೆ ತಜ್ಞರು ಏನು ಹೇಳಿದ್ದಾರೆ ನೋಡೋಣ.

  ವಿಲಕ್ಷಣ ಜಾತಿಯ ಪ್ರಾಣಿಗಳು ಯಾವುವು?

  ಸಚಿವಾಲಯದ ಪ್ರಕಾರ, ವಿದೇಶದಿಂದ ಸಾಗಿಸುವ ಪ್ರಾಣಿ ಅಥವಾ ಸಸ್ಯ ಪ್ರಭೇದಗಳನ್ನು ವಿಲಕ್ಷಣ ಲೈವ್ ಜಾತಿಗಳು ಎಂದು ಕರೆಯುತ್ತಾರೆ. ದಿ ಹಿಂದೂ ಪ್ರಕಾರ, ಅನೇಕ ಜಾತಿಯ ಪಕ್ಷಿಗಳು, ಸರೀಸೃಪಗಳು, ಸಣ್ಣ ಸಸ್ತನಿಗಳು, ಮೀನುಗಳು ಮತ್ತು ಕೆಲವು ಸಸ್ಯಗಳನ್ನು ಇತರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.

  ಇದನ್ನೂ ಓದಿ: ಹೊಂಚುಹಾಕಿ ದಾಳಿ ಮಾಡಿದ ಉಗ್ರರು; ಬಿಎಸ್​ಎಫ್ ಯೋಧ ಹುತಾತ್ಮ

  ಅಳಿವಿನಂಚಿನಲ್ಲಿರುವ ಪ್ರಭೇದಗಳ ಕಾಡು ಪ್ರಾಣಿ ಮತ್ತು ಸಸ್ಯಗಳ (CITES) ಅಂತಾರಾಷ್ಟ್ರೀಯ ವ್ಯಾಪಾರದ ಅನುಬಂಧಗಳು I, II ಮತ್ತು III ಅಡಿಯಲ್ಲಿ ಪಟ್ಟಿ ಮಾಡಲಾದ ಪ್ರಾಣಿಗಳನ್ನು ಮಾತ್ರ ಸಚಿವಾಲಯವು ವಿಲಕ್ಷಣ ಪ್ರಾಣಿಗಳೆಂದು ಪರಿಗಣಿಸಿದೆ.

  ಕ್ಯಾಬಿನೆಟ್ ಏಕೆ ಇಂತಹ ಕ್ರಮ ಕೈಗೊಂಡಿದೆ?

  ಭಾರತದಲ್ಲಿ ಅನೇಕ ಪ್ರಾಣಿಗಳು ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ (CITES) ಅಡಿಯಲ್ಲಿ ಬರುತ್ತವೆ. ಅಂತಹ ತಳಿಗಳನ್ನು ಹೊಂದಿರುವ ವಿವರಗಳನ್ನು ರಾಜ್ಯ ಅಥವಾ ಕೇಂದ್ರ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲು ಯಾವುದೇ ಏಕೀಕೃತ ಮಾಹಿತಿ ವ್ಯವಸ್ಥೆ ಲಭ್ಯವಿಲ್ಲ.

  ಸಲಹೆ ಏನು ?

  - ವಿದೇಶಿ ತಳಿಯ ಪ್ರಾಣಿಗಳನ್ನು ಹೊಂದಿರುವವರು ಮುಂದಿನ ಆರು ತಿಂಗಳಲ್ಲಿ ಸ್ವಯಂಪ್ರೇರಣೆಯಿಂದ ವಿವರಗಳನ್ನು ಬಹಿರಂಗಪಡಿಸಬೇಕು. ಇದು ಪರಿಸರ ಸಚಿವಾಲಯಕ್ಕೆ ಮಾಹಿತಿ ಸಂಗ್ರಹಕ್ಕೆ ಸಹಕಾರಿ ಆಗುತ್ತದೆ.

  - ಪ್ರಾಣಿಗಳನ್ನು ಇಟ್ಟುಕೊಳ್ಳಲು ನೋಂದಣಿ, ಹೊಸ ಸಂತತಿ ಮಾಹಿತಿ, ಆಮದು, ವಿನಿಮಯ ಮಾಹಿತಿ ನೀಡುವುದು.

  - ಇದು ವಿದೇಶಿ ಜಾತಿ ಪ್ರಾಣಿಗಳ ಉತ್ತಮ ನಿರ್ವಹಣೆಗೆ ಸಹಾಯ ಮಾಡುತ್ತದೆ. ಸರಿಯಾದ ಪಶು ವೈದ್ಯಕೀಯ ಆರೈಕೆ, ವಸತಿ, ಜಾತಿಗಳ ಯೋಗಕ್ಷೇಮದ ಮಾರ್ಗದರ್ಶನ ಮಾಡುವುದು.

  - ವಿಲಕ್ಷಣ ಪ್ರಾಣಿಗಳ ಡೇಟಾಬೇಸ್ ಝೂನೋಟಿಕ್ ಕಾಯಿಲೆಗಳ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

  - ಪ್ರಾಣಿಗಳು ಮತ್ತು ಮನುಷ್ಯರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಕಾಲಕಾಲಕ್ಕೆ ಮಾರ್ಗದರ್ಶನ ಲಭ್ಯವಿದೆ.

  - ಸಲಹೆ ನೀಡಿದ ದಿನಾಂಕದಿಂದ ಆರು ತಿಂಗಳ ಒಳಗೆ ವಿಲಕ್ಷಣ ಪ್ರಾಣಿಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸಚಿವಾಲಯ ಹೇಳಿದೆ.

  - ಆರು ತಿಂಗಳ ನಂತರ ಮಾಡಿದ ಯಾವುದೇ ಘೋಷಣೆಗೆ, ಘೋಷಕರು ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನಿಬಂಧನೆಗಳ ಪ್ರಕಾರ ದಸ್ತಾವೇಜನ್ನು ಅನುಸರಿಸುವುದು.

  - ಅಂತಹ ಜಾತಿಗಳನ್ನು ಹೊಂದಿರುವವರು ವೆಬ್‌ಸೈಟ್‌ಗೆ (www.parivesh.nic.in) ಭೇಟಿ ನೀಡಿ, ಸ್ಟಾಕ್ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯ ನಮೂನೆಗಳನ್ನು ಭರ್ತಿ ಮಾಡುವುದು.

  - ಯಾರಾದರೂ ವಿದೇಶಿ ಪ್ರಾಣಿಗಳನ್ನು ಆಮದು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅವರು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯಕ್ಕೆ (DGFT) ಪರವಾನಗಿಗೆ ಅರ್ಜಿ ಸಲ್ಲಿಸಬೇಕು.

  - ಆಮದುದಾರರು ಅರ್ಜಿಯೊಂದಿಗೆ ಸಂಬಂಧಿತ ರಾಜ್ಯ ಮುಖ್ಯ ವನ್ಯಜೀವಿ ವಾರ್ಡನ್ ಅವರ ನಿರಾಕ್ಷೇಪಣಾ ಪ್ರಮಾಣಪತ್ರ ಲಗತ್ತಿಸಬೇಕು.

  ಸಲಹಾ ಅಡೆತಡೆಗಳು, ಅವುಗಳ ಪ್ರಾಮುಖ್ಯತೆ ಏನು?

  ಅಕ್ರಮ ಸಾಕುಪ್ರಾಣಿ ವ್ಯಾಪಾರವನ್ನು ನಿಯಂತ್ರಿಸಲು ಇದು ಮೊದಲ ಹೆಜ್ಜೆಯಾಗಿದೆ. ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾದ ವನ್ಯಜೀವಿ ಅಪರಾಧ ತಡೆ ಘಟಕದ ಮುಖ್ಯಸ್ಥ ಜೋಸ್ ಲೂಯಿಸ್ ಪ್ರಕಾರ, ವಿದೇಶಿ ಪ್ರಾಣಿಗಳು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿವೆ.

  ಇದನ್ನೂ ಓದಿ: ಜೀವವೈವಿಧ್ಯದ ಮಹತ್ವ ಸಾರುವ GZRRC ಮೃಗಾಲಯದ ವಿರುದ್ಧ ಅರ್ಜಿ ವಜಾಗೊಳಿಸಿದ ಸುಪ್ರೀಂ

  ಕಾಡಿಗೆ ಬಿಟ್ಟರೆ ಇಲ್ಲಿನ ಪರಿಸರ ಅಸಮತೋಲನದಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. CITES ಅಡಿಯಲ್ಲಿ ಪಟ್ಟಿ ಮಾಡಲಾದ ಪ್ರಾಣಿಗಳನ್ನು ರಾಜ್ಯ ಅರಣ್ಯ ಇಲಾಖೆ ಪರೀಕ್ಷಿಸಿರುವುದು ಇದೇ ಮೊದಲು.
  Published by:renukadariyannavar
  First published: