• ಹೋಂ
  • »
  • ನ್ಯೂಸ್
  • »
  • Explained
  • »
  • Explained ಸಿಂಧೂ ಜಲ ಒಪ್ಪಂದ ಮಾರ್ಪಡಿಸಲು ಪಾಕ್‌ಗೆ ನೋಟಿಸ್:‌ 62 ವರ್ಷಗಳ ಬಳಿಕ ಭಾರತ ಹೀಗೆ ನಿರ್ಧರಿಸಿದ್ದೇಕೆ?

Explained ಸಿಂಧೂ ಜಲ ಒಪ್ಪಂದ ಮಾರ್ಪಡಿಸಲು ಪಾಕ್‌ಗೆ ನೋಟಿಸ್:‌ 62 ವರ್ಷಗಳ ಬಳಿಕ ಭಾರತ ಹೀಗೆ ನಿರ್ಧರಿಸಿದ್ದೇಕೆ?

ಸಿಂಧೂ ನದಿ

ಸಿಂಧೂ ನದಿ

ಭಾರತ-ಪಾಕಿಸ್ತಾನ ವಿಭಜನೆ ವೇಳೆ ಸಿಂಧೂ ನದಿ ನೀರಿನ ಹಂಚಿಕೆ ಮತ್ತು ನೀರಿನ ಹಕ್ಕುಗಳ ಕುರಿತು ಭಾರತವನ್ನು ಪಾಕ್‌ ವಿರೋಧಿಸಿತ್ತು. ಆದರೆ ಇದೀಗ ಕಾಲಚಕ್ರ ತಲೆಕೆಳಗಾಗಿದ್ದು, ಒಪ್ಪಂದವು ಸರಿಯಾಗಿಲ್ಲ ಎಂದು ಆರೋಪಿಸಿ ಭಾರತ ಪಾಕ್‌ಗೆ ನೋಟಿಸ್‌ ನೀಡಿದೆ.

  • Trending Desk
  • 4-MIN READ
  • Last Updated :
  • Share this:

    ಪಾಕ್‌-ಭಾರತದ (Pakistan-India) ನಡುವೆ ಈಗಾಗಲೇ ಇರುವ ವಿವಾದ, ಜಟಾಪಟಿಗಳ ಜೊತೆ ಸಿಂಧೂ ಜಲ ಒಪ್ಪಂದ (Indus Water Treaty) ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತಿದೆ. ಭಾರತ ಮತ್ತು ಪಾಕಿಸ್ತಾನವು 1610 ಕಿಲೋಮೀಟರ್ ಉದ್ದದ ಗಡಿ ಮತ್ತು ಆರು ನದಿಗಳಾದ ಸಿಂಧೂ, ಝೇಲಂ, ಚೆನಾಬ್, ರಾವಿ, ಸಟ್ಲೇಜ್‌ ನದಿಗಳ ನೀರನ್ನು ಹಂಚಿಕೊಳ್ಳುತ್ತವೆ. ಸಿಂಧೂ ನದಿ ವ್ಯವಸ್ಥೆಯು ವಿಶ್ವದ ಅತಿದೊಡ್ಡ ನೀರಾವರಿ ವ್ಯವಸ್ಥೆಗೆ ಮೂಲವಾಗಿದ್ದು, ಇದರಲ್ಲಿ 20 ದಶಲಕ್ಷ ಹೆಕ್ಟೇರ್ ಪ್ರದೇಶವಿದೆ ಮತ್ತು ವಾರ್ಷಿಕ 12 ದಶಲಕ್ಷ ಹೆಕ್ಟೇರ್ ನೀರಾವರಿ ಸಾಮರ್ಥ್ಯವಿದೆ.


    ಭಾರತ-ಪಾಕಿಸ್ತಾನ ವಿಭಜನೆ ವೇಳೆ ಸಿಂಧೂ ನದಿ ನೀರಿನ ಹಂಚಿಕೆ ಮತ್ತು ನೀರಿನ ಹಕ್ಕುಗಳ ಕುರಿತು ಭಾರತವನ್ನು ಪಾಕ್‌ ವಿರೋಧಿಸಿತ್ತು. ಆದರೆ ಇದೀಗ ಕಾಲಚಕ್ರ ತಲೆಕೆಳಗಾಗಿದ್ದು, ಒಪ್ಪಂದವು ಸರಿಯಾಗಿಲ್ಲ ಎಂದು ಆರೋಪಿಸಿ ಭಾರತ ಪಾಕ್‌ಗೆ ನೋಟಿಸ್‌ ನೀಡಿದೆ.


    62 ವರ್ಷಗಳ ನಂತರ ಸಿಂಧೂ ಜಲ ಒಪ್ಪಂದವನ್ನು ಮಾರ್ಪಡಿಸಲು ಭಾರತ ಬಯಸುತ್ತಿರುವುದೇಕೆ?


    ಸಿಂಧೂ ಜಲಾನಯನ ಭಾಗವಾಗಿರುವ ಆರು ನದಿಗಳ ನೀರಿನ ಹಂಚಿಕೆ ಕುರಿತಾದ 1960ರ ಸಿಂಧೂ ಜಲ ಒಪ್ಪಂದಕ್ಕೆ ಕೆಲವೊಂದು ಮಾರ್ಪಾಡುಗಳನ್ನು ಮಾಡುವಂತೆ ಭಾರತವು ಪಾಕಿಸ್ತಾನಕ್ಕೆ ನೋಟಿಸ್ ನೀಡಿದ್ದು, ಪಾಕ್‌ಗೆ ಇರಿಸು ಮುರಿಸು ಉಂಟಾಗಿದೆ.


    ಇದನ್ನೂ ಓದಿ: Pakistan Team: ಪಾಕ್​ ತಂಡದಲ್ಲಿ ಮೋಡಿ ಮಾಡಿದ್ದ ಇಬ್ಬರು ಹಿಂದೂ ಕ್ರಿಕೆಟಿಗರು, ದೇಶ ಬಿಟ್ಟಿದ್ದು ಮಾತ್ರ ಈ ಕಾರಣಕ್ಕೆ!


    ಹೌದು, ಸಿಂಧೂ ಜಲಾನಯನ ಭಾಗವಾಗಿರುವ ಆರು ನದಿಗಳ ನೀರನ್ನು ಹೇಗೆ ಹಂಚಿಕೊಳ್ಳಲಾಗಿದೆ ಎಂಬುದರ ಕುರಿತು ಒಪ್ಪಂದವನ್ನು ಮರು ಮಾತುಕತೆ ನಡೆಸುವಂತೆ ಭಾರತವು ಪಾಕಿಸ್ತಾನಕ್ಕೆ ಕರೆ ನೀಡಿದೆ. ಈ ಹಿಂದೆ ನೀರು ಹಂಚಿಕೆ ವಿಚಾರದಲ್ಲಿ ವಿವಾದಗಳಿದ್ದರೆ, ಈ ಬಾರಿ ವಿವಾದ ಬಗೆಹರಿಸುವ ವಿಧಾನವೇ ವಿವಾದಕ್ಕೆ ಕಾರಣವಾಗಿ ಬಿಟ್ಟಿದೆ.


    1960 ರಲ್ಲಿ ವಿಶ್ವಬ್ಯಾಂಕ್‌ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಈ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆ ವೇಳೆ ವಿಶ್ವಬ್ಯಾಂಕ್ ನೇಮಿಸಿದ ತಟಸ್ಥ ತಜ್ಞರು ಮತ್ತು ವಿಶ್ವಬ್ಯಾಂಕ್‌ನಿಂದ ರಚಿಸಲ್ಪಟ್ಟ ನ್ಯಾಯಾಲಯದ ಮಧ್ಯಸ್ಥಿಕೆಯ ಮೂಲಕ ಏಕಕಾಲಿಕ ವಿವಾದ ಪರಿಹಾರ ಕಾರ್ಯವಿಧಾನಗಳಿಗೆ ಪಾಕಿಸ್ತಾನದ ಒತ್ತಡದ ಬಗ್ಗೆ ಭಾರತವು ಪ್ರಸ್ತುತ ತನ್ನ ಹತಾಶೆಯನ್ನು ವ್ಯಕ್ತಪಡಿಸಿದ್ದು, ಸಿಂಧೂ ಜಲ ಒಪ್ಪಂದದ ಬಗ್ಗೆ ಮರು ಮಾತುಕತೆ ನಡೆಸುವಂತೆ ಪಾಕಿಸ್ತಾನಕ್ಕೆ ಕರೆ ನೀಡಿದೆ.


    ಆದರೆ ಪಾಕಿಸ್ತಾನ ಈ ಪ್ರಸ್ತಾಪವನ್ನು ತಿರಸ್ಕರಿಸುವ ಎಲ್ಲಾ ಸಾಧ್ಯತೆಗಳು ಎದ್ದು ಕಾಣುತ್ತಿದ್ದು, ವಿವಾದ ಎಲ್ಲಿಗೆ ತಲುಪುತ್ತದೆಯೋ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಒಟ್ಟಾರೆ ಭಾರತ 62 ವರ್ಷಗಳ ನಂತರ ಸಿಂಧೂ ಜಲ ಒಪ್ಪಂದವನ್ನು ಮಾರ್ಪಡಿಸಲು ಭಾರತ ಬಯಸುತ್ತಿದ್ದು, ಇದಕ್ಕೆ ಒಪ್ಪಂದದ ಕೆಲ ತಪ್ಪಾದ ಕ್ರಮಗಳೇ ಕಾರಣ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.


    ಏನಿದು ಸಿಂಧೂ ಜಲ ಒಪ್ಪಂದ?


    - ಭಾರತ ಮತ್ತು ಪಾಕಿಸ್ತಾನವು 1960 ರಲ್ಲಿ ಹೆಚ್ಚುವರಿ ಸಹಿದಾರರಾಗಿ ವಿಶ್ವ ಬ್ಯಾಂಕ್‌ನೊಂದಿಗೆ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದವು ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರನ್ನು ಎರಡು ದೇಶಗಳ ನಡುವೆ ಸಮಾನವಾಗಿ ವಿಭಜಿಸುವ ಸಲುವಾಗಿ ಏರ್ಪಟ್ಟಿತ್ತು.


    - ಒಪ್ಪಂದದ ಅಡಿಯಲ್ಲಿ, ಮೂರು ಪೂರ್ವ ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್ ನೀರನ್ನು ಭಾರತಕ್ಕೆ ಮತ್ತು ಮೂರು ಪಶ್ಚಿಮ ನದಿಗಳಾದ ಚೆನಾಬ್, ಸಿಂಧೂ ಮತ್ತು ಝೀಲಂನಿಂದ ಪಾಕಿಸ್ತಾನಕ್ಕೆ ಹಂಚಲಾಯಿತು.


    - ಭಾರತವು ಸಿಂಧೂ ಒಪ್ಪಂದದ ಪ್ರಕಾರ ಒಟ್ಟು 20% ನಷ್ಟು ನೀರಿನ ಲಾಭ ಪಡೆದರೆ, ಪಾಕಿಸ್ತಾನವು 80% ರಷ್ಟು ಲಾಭವನ್ನು ಪಡೆಯುತ್ತದೆ.


    - ಈ ಒಪ್ಪಂದವು ಭಾರತಕ್ಕೆ ಪಶ್ಚಿಮ ನದಿ ನೀರನ್ನು ಸೀಮಿತ ನೀರಾವರಿ ಬಳಕೆಗೆ ಮತ್ತು ವಿದ್ಯುತ್ ಉತ್ಪಾದನೆ, ನ್ಯಾವಿಗೇಷನ್, ಮೀನು, ಕೃಷಿ ಮುಂತಾದವುಗಳಿಗೆ ಬಳಸಲು ಅನುವು ಮಾಡಿ ಕೊಡುತ್ತದೆ.


    - ಸಿಂಧೂ ಜಲ ಒಪ್ಪಂದವನ್ನು ವಿಶ್ವದ ಅತ್ಯಂತ ಯಶಸ್ವಿ ನೀರು ಹಂಚಿಕೆಯ ಪ್ರಯತ್ನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.


    ಕಿಶನ್‌ ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಯೋಜನೆ


    * ಈ ಒಪ್ಪಂದವು ನೀರಿನ ಹಂಚಿಕೆಯ ಮೇಲೆ ವಿಶ್ವಾಸಯುತ ಒವಾತಾವರಣ ನಿರ್ಮಿಸಿದೆಯಾದರೂ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ನೆಲೆಗೊಂಡಿರುವ ಕಿಶನ್‌ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಯೋಜನೆಗಳ ಕುರಿತು ದೊಡ್ಡ ವಿವಾದವನ್ನು ಹುಟ್ಟು ಹಾಕಿದೆ.




    * ಝೀಲಂ ನದಿಯ ಉಪನದಿಯಾಗಿರುವ ಕಿಶನ್‌ಗಂಗಾ ನದಿಗೆ ಅಡ್ಡಲಾಗಿ ಬಂಡಿಪೋರಾ ಜಿಲ್ಲೆಯಲ್ಲಿ ಕಿಶನ್‌ಗಂಗಾ ಯೋಜನೆಯನ್ನು 2018 ರಲ್ಲಿ ಉದ್ಘಾಟನೆ ಮಾಡಲಾಯಿತು. ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯ ಮೇಲೆ ರಾಟ್ಲೆ ಜಲವಿದ್ಯುತ್ ಯೋಜನೆಯು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ.


    * ಭಾರತ ನಿರ್ಮಿಸುತ್ತಿರುವ ಕಿಶನ್‌ಗಂಗಾ (330 ಮೆಗಾವ್ಯಾಟ್) ಮತ್ತು ರಾಟ್ಲೆ (850 ಮೆಗಾವ್ಯಾಟ್) ಜಲವಿದ್ಯುತ್ ಸ್ಥಾವರಗಳ ನಿರ್ಮಾಣದ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವೆ ಭಿನ್ನಾಭಿಪ್ರಾಯವಿದೆ.


    * ಎರಡು ಜಲವಿದ್ಯುತ್ ಸ್ಥಾವರಗಳ ತಾಂತ್ರಿಕ ವಿನ್ಯಾಸದ ಲಕ್ಷಣಗಳು ಒಪ್ಪಂದಕ್ಕೆ ವಿರುದ್ಧವಾಗಿದೆ ಎಂಬ ಕುರಿತು ಉಭಯ ದೇಶಗಳ ನಡುವೆ ಭಿನ್ನ ಅಭಿಪ್ರಾಯವಿದೆ.


    * ಈ ಎರಡು ಸ್ಥಾವರಗಳು ಕ್ರಮವಾಗಿ ಝೇಲಂ ಮತ್ತು ಚೆನಾಬ್ ನದಿಗಳಲ್ಲಿವೆ. ಒಪ್ಪಂದದ ಅನುಬಂಧಗಳಲ್ಲಿ ನಿರ್ದಿಷ್ಟಪಡಿಸಿದ ನಿರ್ಬಂಧಗಳಿಗೆ ಒಳಪಟ್ಟು ಈ ನದಿಗಳಲ್ಲಿ ಜಲವಿದ್ಯುತ್ ಸೌಲಭ್ಯಗಳನ್ನು ನಿರ್ಮಿಸಲು ಭಾರತಕ್ಕೆ ಅನುಮತಿ ಇದೆ.


    ಭಾರತೀಯ ಅಣೆಕಟ್ಟು ಯೋಜನೆ ಬಗ್ಗೆ ಪಾಕ್‌ ಕಳವಳ


    ವಿದ್ಯುತ್ ಉತ್ಪಾದನೆಗೆ ಉದ್ದೇಶಿಸಿರುವ ಭಾರತೀಯ ಅಣೆಕಟ್ಟುಗಳ ವಿನ್ಯಾಸದ ಬಗ್ಗೆ ಪಾಕಿಸ್ತಾನ ಕಳವಳ ವ್ಯಕ್ತಪಡಿಸಿದ್ದು, ಇದು ತನ್ನ 80% ನೀರಾವರಿ ಬೆಳೆಗಳಿಗೆ ನೀರನ್ನು ಒದಗಿಸುವ ನದಿಗಳ ಹರಿವನ್ನು ತಡೆಯುತ್ತದೆ ಎಂದು ಹೇಳಿಕೊಂಡಿದೆ. ಆ ಮೂಲಕ ಭಾರತವು ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಪಾಕ್ ಆರೋಪಿಸಿದೆ. 2013 ರಲ್ಲಿ ಮಧ್ಯಂತರ ನ್ಯಾಯಾಲಯದ ಮಧ್ಯಂತರ ಆದೇಶವು ಕಿಶನ್​ ಗಂಗಾ ಅಣೆಕಟ್ಟಿನ ನಿರ್ಮಾಣವನ್ನು ಪುನರಾರಂಭಿಸಲು ಭಾರತಕ್ಕೆ ಅವಕಾಶ ನೀಡಿತ್ತು.


    hyderabad karnataka liberation day history nmpg mrq
    ರಾಷ್ಟ್ರ ಧ್ವಜ


    ಪಾಕ್‌ನ ಆರೋಪಗಳನ್ನು ನಿರಾಕರಿಸಿರುವ ಭಾರತ ಒಪ್ಪಂದದ ಕುಂದುಕೊರತೆ ಪರಿಹಾರ ಪ್ರಕ್ರಿಯೆಯ ಸುತ್ತ ಪಾಕಿಸ್ತಾನವು ವಿಳಂಬ ತಂತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸಿದೆ. ವಿಶ್ವಬ್ಯಾಂಕ್ ಸ್ವತಃ ಈ ಹಿಂದೆ ಶ್ರೇಣೀಕೃತ ಕಾರ್ಯವಿಧಾನಕ್ಕೆ ಭರವಸೆ ನೀಡಿತ್ತು, ಅದನ್ನೇ ಭಾರತ ಕೂಡ ಬಯಸುತ್ತಿದೆ. ಏಕಕಾಲಿಕ ಪ್ರಕ್ರಿಯೆಗಳನ್ನು ಹೊಂದಿರುವ ಈ ಸಮಸ್ಯೆಯನ್ನು ಪರಿಹರಿಸಲು, ಒಪ್ಪಂದದ ಭಾರತೀಯ ಕಮಿಷನರ್ ಜನವರಿ 25 ರಂದು ಪಾಕಿಸ್ತಾನದ ಪ್ರತಿರೂಪಕ್ಕೆ ಪತ್ರವನ್ನು ಬರೆದು ಒಪ್ಪಂದವನ್ನೇ ಮಾರ್ಪಡಿಸುವಂತೆ ಕೋರಿದ್ದಾರೆ.


    ನೋಟೀಸ್‌ಗೆ ಪ್ರತಿಕ್ರಿಯಿಸಲು ಪಾಕ್‌ಗೆ ಮೂರು ತಿಂಗಳ ಗಡುವು


    ನೋಟಿಸ್‌ಗೆ ಉತ್ತರಿಸಲು ಇಸ್ಲಾಮಾಬಾದ್‌ಗೆ ಮೂರು ತಿಂಗಳ ಕಾಲಾವಕಾಶವಿದೆ. ಆದರೂ, ಒಪ್ಪಂದವನ್ನು ಮಾರ್ಪಡಿಸುವ ದೆಹಲಿಯ ಪ್ರಸ್ತಾಪವನ್ನು ಇಸ್ಲಾಮಾಬಾದ್ ಅಂಗೀಕರಿಸುತ್ತದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.


    ಆದರೆ ಆದಾಗ್ಯೂ ಈ ಪ್ರಸ್ತಾಪವನ್ನು ಪಾಕಿಸ್ತಾನ ಒಪ್ಪಿಕೊಳ್ಳದಿದ್ದರೆ, ಅಗತ್ಯವಿದ್ದರೆ ಭಾರತವು ಒಪ್ಪಂದವನ್ನು ರದ್ದುಗೊಳಿಸುವಂತೆ ಕರೆ ನೀಡಬಹುದು ಎನ್ನಲಾಗಿದೆ.


    ಪಾಕ್‌ಗೆ ಖಡಕ್‌ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ ಭಾರತದ ಗಣ್ಯರು


    ಭಾರತ ಸರ್ಕಾರವು ಈ ಹಿಂದೆ ಪಾಕಿಸ್ತಾನದೊಂದಿಗಿನ ಹಗೆತನದ ನಡುವೆ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದೆ. 2001-02ರಲ್ಲಿ ಉಭಯ ದೇಶಗಳ ನಡುವಿನ ಮಿಲಿಟರಿ ಬಿಕ್ಕಟ್ಟಿನ ಸಂದರ್ಭದಲ್ಲಿ, ಭಾರತದ ಕೇಂದ್ರ ಜಲಸಂಪನ್ಮೂಲ ರಾಜ್ಯ ಸಚಿವ ಬಿಜೋಯ ಚಕ್ರವರ್ತಿ ಭಾರತವು ಅಂತಹ ರಾಜತಾಂತ್ರಿಕ ಕ್ರಮವನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದರು.


    ಇದನ್ನೂ ಓದಿ: Pakistan Crisis: ಅಬ್ಬಬ್ಬಾ! ಹಾಲಿಗೆ ₹200, ಚಿಕನ್‌ ದರ ₹900; ಇದು ಪಾಕಿಸ್ತಾನದ ಸದ್ಯದ ಪರಿಸ್ಥಿತಿ!


    "ನಾವು ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಲು ನಿರ್ಧರಿಸಿದರೆ, ನಂತರ ಪಾಕಿಸ್ತಾನದಲ್ಲಿ ಬರಗಾಲ ಉಂಟಾಗುತ್ತದೆ ಮತ್ತು ಆ ದೇಶದ ಜನರು ಪ್ರತಿ ಹನಿ ನೀರಿಗಾಗಿ ಭಿಕ್ಷೆ ಬೇಡಬೇಕಾಗುತ್ತದೆ" ಎಂದು ಚಕ್ರವರ್ತಿ ಮೇ 2002 ರಲ್ಲಿ ಹೇಳಿದ್ದರು.


    ತೀರಾ ಇತ್ತೀಚೆಗೆ, ಸೆಪ್ಟೆಂಬರ್ 2016 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಭಾರತೀಯ ಸೇನಾ ಬ್ರಿಗೇಡ್ ಪ್ರಧಾನ ಕಚೇರಿಯ ಮೇಲೆ ಭಯೋತ್ಪಾದಕ ದಾಳಿಯ bಳಿಕ, ಸಿಂಧೂ ಜಲ ಒಪ್ಪಂದದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ "ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದರು.


    ಫೆಬ್ರವರಿ 2019 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸುಮಾರು 40 ಭದ್ರತಾ ಸಿಬ್ಬಂದಿಯನ್ನು ಕೊಂದ ಭಯೋತ್ಪಾದಕ ದಾಳಿಯ ನಂತರ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳುವ ಮೂಲಕ ಖಡಕ್‌ ಸಂದೇಶ ರವಾನಿಸಿದ್ದರು.


    ಆಗಸ್ಟ್ 2019 ರಲ್ಲಿ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು "ಒಪ್ಪಂದವನ್ನು ಉಲ್ಲಂಘಿಸದೆ ನೀರನ್ನು ನಿರ್ಬಂಧಿಸುವ ಪ್ರಕ್ರಿಯೆಯು ಅಂದರೆ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಿಲ್ಲಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ" ಎಂದು ಹೇಳಿದ್ದರು.




    ಆದಾಗ್ಯೂ, ಪಾಕಿಸ್ತಾನದ ಮಾಜಿ ಭಾರತೀಯ ಹೈಕಮಿಷನರ್ ಶರತ್ ಸಬರ್ವಾಲ್ ಅವರು ಪರಸ್ಪರ ಒಪ್ಪಿಗೆಯ ಮೂಲಕ ಮಾತ್ರ ಒಪ್ಪಂದವನ್ನು ರದ್ದುಗೊಳಿಸಬಹುದು. ಭಾರತದ ಏಕಪಕ್ಷೀಯ ವಾಪಸಾತಿಯು ಪಾಕಿಸ್ತಾನದಿಂದ ಅಂತರರಾಷ್ಟ್ರೀಯ ಪ್ರಚಾರವನ್ನು ಪ್ರಚೋದಿಸುತ್ತದೆ, ಇದು ಒಳಗೊಂಡಿರುವ ಅಮೂಲ್ಯ ಸಂಪನ್ಮೂಲದಿಂದಾಗಿ ಪ್ರಭಾವಿ ದೇಶಗಳಲ್ಲಿ ಸಹಾನುಭೂತಿಯನ್ನು ಉಂಟು ಮಾಡುವ ಸಾಧ್ಯತೆಯಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    Published by:Precilla Olivia Dias
    First published: