Chile: ಹೊಸ ಪ್ರಗತಿಪರ ಸಂವಿಧಾನವನ್ನೇ ಘಂಟಾಘೋಷವಾಗಿ ತಿರಸ್ಕರಿಸಿದ ಚಿಲಿಯ ಜನತೆ! ಕಾರಣ?

ಹಕ್ಕುಪತ್ರವನ್ನು ಬದಲಿಸುವ ಹೊಸ ಸಂವಿಧಾನವನ್ನು ಚಿಲಿಯ ಜನತೆ ಘಂಟಾಘೋಷವಾಗಿ ತಿರಸ್ಕರಿಸಿದ್ದಾರೆ. ಹೊಸ ಸಂವಿಧಾನವು ಹೊಸ ಪ್ರಗತಿಶೀಲ ಯುಗಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದು ವಾದಿಸಿದ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಅವರಿಗೆ ಕಟುವಾದ ಹಿನ್ನಡೆಯನ್ನುಂಟು ಮಾಡಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
41 ವರ್ಷಗಳ ಹಿಂದೆ ಜನರಲ್ ಆಗಸ್ಟೋ ಪಿನೋಚೆಟ್ ನಿರಂಕುಶತ್ವದಲ್ಲಿ ವಿಧಿಸಿದ ಹಕ್ಕುಪತ್ರವನ್ನು ಬದಲಿಸುವ ಹೊಸ ಸಂವಿಧಾನವನ್ನು (New Constitution) ಚಿಲಿಯ (Chile) ಜನತೆ ಘಂಟಾಘೋಷವಾಗಿ ತಿರಸ್ಕರಿಸಿದ್ದು, ಹೊಸ ಸಂವಿಧಾನವು ಹೊಸ ಪ್ರಗತಿಶೀಲ ಯುಗಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದು ವಾದಿಸಿದ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ (Gabriel Boric) ಅವರಿಗೆ ಕಟುವಾದ ಹಿನ್ನಡೆಯನ್ನುಂಟು ಮಾಡಿದೆ. ಜನಾಭಿಪ್ರಾಯ ಸಂಗ್ರಹಣೆಯಲ್ಲಿ 99% ಮತಗಳನ್ನು ಎಣಿಕೆ ಮಾಡಲಾಗಿದ್ದು, ಮತದಾನ ನಡೆಸಿದ ರಾಜ್ಯಗಳಲ್ಲಿ 38.1% ನಷ್ಟು ಅನುಮೋದನೆಯ ಮತದೊಂದಿಗೆ (Vote) ನಿರಾಕರಣೆಯು 61.9% ಬೆಂಬಲವನ್ನು ಹೊಂದಿತ್ತು. ಅನುಮೋದನೆ ಶಿಬಿರವು ಸೋಲನ್ನು ಒಪ್ಪಿಕೊಂಡಿದ್ದು ವಕ್ತಾರರಾದ ವ್ಲಾಡೊ ಮಿರೊಸೆವಿಕ್ ಈ ಫಲಿತಾಂಶಕ್ಕೆ ನಾವು ಮನ್ನಣೆ ನೀಡುತ್ತಿದ್ದು ಚಿಲಿಯ ಜನರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು (Opinion) ನಾವು ನಮ್ರತೆಯಿಂದ ಆಲಿಸುತ್ತೇವೆ ಎಂದು ಹೇಳಿದ್ದಾರೆ.

ಹೊಸ ದಾಖಲೆಗಾಗಿ ಮನವೊಲಿಸುವ ಪ್ರಯತ್ನ ಮಾಡಿದ ಬೋರಿಕ್, ಚಿಲಿಯ ಜನರು ಚಿಲಿಗೆ ಪ್ರಸ್ತುತಪಡಿಸಿದ ಸಾಂವಿಧಾನಿಕ ಪ್ರಸ್ತಾವನೆಯೊಂದಿಗೆ ತೃಪ್ತರಾಗಿಲ್ಲ ಎಂದು ಸ್ಪಷ್ಟಪಡಿಸಿದ್ದು, ಫಲಿತಾಂಶಗಳು ಇದನ್ನು ಸಾರಿವೆ ಎಂದು ಹೇಳಿದ್ದಾರೆ.

ಸರ್ವಾಧಿಕಾರದ ಯುಗದ ಸಂವಿಧಾನ:
ಹೆಚ್ಚಿನ ಚಿಲಿಯನ್ನರು ಸರ್ವಾಧಿಕಾರದ ಯುಗದ ಸಂವಿಧಾನವನ್ನು ಬದಲಾಯಿಸಲು ಒಲವು ತೋರಿದರು ಮತ್ತು ಸಂವಿಧಾನವನ್ನು ತಿದ್ದುಪಡಿ ಮಾಡುವ ಪ್ರಕ್ರಿಯೆಯು ಮತದಾನದೊಂದಿಗೆ ಕೊನೆಗೊಳ್ಳುವುದಿಲ್ಲ ಎಂದು ಬೋರಿಕ್ ಸ್ಪಷ್ಟಪಡಿಸಿದ್ದಾರೆ. ಒಂದೇ ದೇಶವಾಗಿ ನಮ್ಮೆಲ್ಲರನ್ನೂ ಒಂದುಗೂಡಿಸುವ ಹೊಸ ಹಕ್ಕುಪತ್ರದ ರಚನೆಗೆ ನಾಯಕರು ಹೆಚ್ಚು ಸಂಕಲ್ಪ, ಹೆಚ್ಚು ಸಂವಾದ ಹಾಗೂ ಹೆಚ್ಚಿನ ಗೌರವದಿಂದ ಕೆಲಸ ಮಾಡುವುದು ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಬಹುಪಾಲು ಪ್ರತಿನಿಧಿಗಳು ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲದ, ಸಾಂವಿಧಾನಿಕ ಸಭೆಯಿಂದ ಬರೆಯಲಾದ ಪ್ರಸ್ತಾವಿತ ಹಕ್ಕುಪತ್ರದ ಕುರಿತು ಚಿಲಿಯನ್ನರು ಜಾಗರೂಕರಾಗಿದ್ದಾರೆ ಎಂದು ಚುನಾವಣಾ ಪೂರ್ವಮತದಾನವು ಬಹಿರಂಗಪಡಿಸಿದ್ದು, 19 ಮಿಲಿಯನ್ ಜನರಿರುವ ದೇಶದಲ್ಲಿ ನಿರಾಕರಣೆಯನ್ನು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ ಎಂದು ಸಿಟಿಜನ್ಸ್ ಹೌಸ್ ಫಾರ್ ರಿಜೆಕ್ಷನ್‌ನ ವಕ್ತಾರ ಕಾರ್ಲೋಸ್ ಸಲಿನಾಸ್ ತಿಳಿಸಿದ್ದು, ಬಹುಪಾಲು ಚಿಲಿಯ ಜನರು ನಿರಾಕರಣೆಯನ್ನು "ಭರವಸೆಯ ಮಾರ್ಗ" ಎಂಬುದಾಗಿ ನೋಡಿದ್ದಾರೆ ಎಂದು ಹೇಳಿದರು.

ವಿಶ್ವದಲ್ಲೇ ಪ್ರಗತಿಪರವಾಗಿರುವ ಹಕ್ಕುಪತ್ರ:
ಇಂದು ನೀವು ಎಲ್ಲಾ ಚಿಲಿಯನ್ನರ ಅಧ್ಯಕ್ಷರಾಗಿರಬೇಕು ಹಾಗೂ ನಾವೆಲ್ಲರೂ ಜೊತೆಯಾಗಿ ಮುಂದುವರಿಯಬೇಕು ಎಂದು ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಅವರ ಸರ್ಕಾರಕ್ಕೆ ಹೇಳಲು ಬಯಸುತ್ತೇವೆ ಎಂಬುದಾಗಿ ಕಾರ್ಲೋಸ್ ತಿಳಿಸಿದ್ದಾರೆ.

ಇದನ್ನೂ ಓದಿ:  Mohali Jhula Accident: ಎದೆ ಝಲ್ ಅನಿಸುತ್ತೆ! ಮುರಿದುಬಿದ್ದ 50 ಅಡಿ ಎತ್ತರದ ಜಾತ್ರೆಯ ತೊಟ್ಟಿಲು

ಪ್ರಸ್ತಾವಿತ ಹೊಸ ಹಕ್ಕುಪತ್ರಕ್ಕೆ ಸೋಲಿನ ನಿರೀಕ್ಷೆಗಳ ಹೊರತಾಗಿಯೂ, ನಿರಾಕರಣೆ ಶಿಬಿರವು ಇಷ್ಟು ದೊಡ್ಡ ಅಂತರವನ್ನು ಹೊಂದುತ್ತದೆ ಎಂಬುದಾಗಿ ಯಾವುದೇ ವಿಶ್ಲೇಷಕರು ಅಥವಾ ಸಮೀಕ್ಷೆದಾರರು ಅಂದಾಜಿಸಿರಲಿಲ್ಲ. ಇದರಿಂದ ಚಿಲಿಯನ್ನರು ವಿಶ್ವದಲ್ಲೇ ಪ್ರಗತಿಪರವಾಗಿರುವ ಹಕ್ಕುಪತ್ರವನ್ನು ಬೆಂಬಲಿಸಲು ಸಿದ್ಧರಾಗಿಲ್ಲ ಎಂಬುದನ್ನು ತೋರಿಸುತ್ತದೆ ಹಾಗೂ ಇದು ದಕ್ಷಿಣ ಅಮೆರಿಕಾದ ದೇಶವನ್ನು ಮೂಲಭೂತವಾಗಿ ಬದಲಾಯಿಸಬಹುದು.

ಪ್ರಸ್ತಾವಿತ ಹಕ್ಕುಪತ್ರವು ಪುರುಷ ಮತ್ತು ಮಹಿಳಾ ಪ್ರತಿನಿಧಿಗಳ ನಡುವೆ ಸಮಾನವಾಗಿ ಒಡಂಬಡಿಕೆಯಿಂದ ಬರೆಯಲಾದ ವಿಶ್ವದಲ್ಲೇ ಮೊದಲನೆಯ ದಾಖಲೆಯಾಗಿದ್ದರೂ, ವಿಮರ್ಶಕರು ದಾಖಲೆಯು ತುಂಬಾ ದೀರ್ಘವಾಗಿದೆ ಹಾಗೂ ಸ್ಪಷ್ಟತೆಯ ಕೊರತೆ ಇದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಹಾಗೂ ಕೆಲವೊಂದು ಮಾಪನಗಳಲ್ಲಿ ತುಂಬಾ ಆಳವಾದ ಮಾಹಿತಿಗಳನ್ನು ಹಂಚಿಕೊಂಡಿದೆ ಎಂದು ನಮೂದಿಸಿದ್ದಾರೆ. ರಾಜ್ಯ, ಸ್ವಾಯತ್ತ ಸ್ಥಳೀಯ ಪ್ರದೇಶಗಳನ್ನು ಸ್ಥಾಪಿಸುವುದು ಮತ್ತು ಪರಿಸರ ಮತ್ತು ಲಿಂಗ ಸಮಾನತೆಗೆ ಆದ್ಯತೆ ನೀಡುವುದು ಸೇರಿದಂತೆ ಈ ಹಕ್ಕುಪತ್ರದಲ್ಲಿ ಚಿಲಿ ದೇಶವನ್ನು ಬುಹುರಾಷ್ಟ್ರೀಯ ರಾಷ್ಟ್ರವೆಂದು ನಿರೂಪಿಸಲಾಗಿದೆ.

ಉತ್ತಮ ರಚನೆಯನ್ನು ಒಳಗೊಂಡಿರುವ ಹೊಸ ಸಂವಿಧಾನ
ಚಿಲಿಯ ರಾಜಧಾನಿ ಸ್ಯಾಂಟಿಯಾಗೊದಲ್ಲಿ ನಡೆದ ಮತದಾನದ ನಂತರ ರಾಬರ್ಟೊ ಬ್ರಿಯೊನ್ಸ್ ಹೇಳುವಂತೆ ಈಗ ರಚಿಸಲಾದ ಹೊಸ ಸಂವಿಧಾನವು ಎಲ್ಲಾ ಚಿಲಿಯನ್ನರನ್ನು ದೃಷ್ಟಿಯಲ್ಲಿರಿಸಿಲ್ಲ ಅಸಮಾನತೆಯಿಂದಿದೆ ಹೀಗಾಗಿ ಉತ್ತಮ ರಚನೆಯನ್ನು ಒಳಗೊಂಡಿರುವ ಹೊಸ ಸಂವಿಧಾನವನ್ನು ನಾವೆಲ್ಲರೂ ಬಯಸುತ್ತೇವೆ ಎಂದು ಹೇಳಿದ್ದಾರೆ.

36 ರ ಹರೆಯಲ್ಲಿಯೇ ಚಿಲಿಯ ಅತ್ಯಂತ ಕಿರಿಯ ಅಧ್ಯಕ್ಷರೆಂದೆನಿಸಿರುವ ಬೋರಿಕ್‌ಗೆ ಈ ಫಲಿತಾಂಶವು ಅತಿ ದೊಡ್ಡ ಹೊಡೆತವನ್ನುಂಟು ಮಾಡಿದ್ದು, ಹೊಸ ಸಂವಿಧಾನದೊಂದಿಗೆ ತಮ್ಮ ಅದೃಷ್ಟ ಪರೀಕ್ಷೆ ಮಾಡುವ ನಿಟ್ಟಿನಲ್ಲಿದ್ದರು, ಏಕೆಂದರೆ ಬೋರಿಕ್ ಅಧಿಕಾರ ವಹಿಸಿಕೊಂಡಾಗಿನಿಂದ ಅವರ ಅನುಮೋದನೆ ದರ್ಜೆಗಳು ಕುಸಿಯುತ್ತಿರುವ ಸಮಯದಲ್ಲಿ ಕೆಲವು ಮತದಾರರು ಜನಮತಗಣನೆಯನ್ನು ಬೋರಿಕ್ ಅವರ ಸರಕಾರದ ಜನಮತಗಣನೆಯಂತೆ ನೋಡಿದ್ದಾರೆ ಎಂಬುದಾಗಿ ವಿಶ್ಲೇಷಕರು ಹೇಳಿದ್ದಾರೆ.

ಇದನ್ನೂ ಓದಿ:  Levana Hotel Lucknow: ಲಕ್ನೋದ ಹೋಟೆಲ್ ಲೆವಾನಾದಲ್ಲಿ ಅಗ್ನಿ ಅವಘಡ, ಹೊರ ಬರಲಾಗದೆ ಅತಿಥಿಗಳ ಪರದಾಟ!

ಕೇವಲ 80% ಕ್ಕಿಂತ ಕಡಿಮೆ ಚಿಲಿಯ ಜನರು ದೇಶದ ಸಂವಿಧಾನವನ್ನು ಬದಲಾಯಿಸುವ ಪರವಾಗಿ ಮತ ಚಲಾಯಿಸಿದರು. ನಂತರ 2021 ರಲ್ಲಿ, ಅವರು ಸಾಂವಿಧಾನಿಕ ಸಮಾವೇಶಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು.
Published by:Ashwini Prabhu
First published: