• ಹೋಂ
  • »
  • ನ್ಯೂಸ್
  • »
  • Explained
  • »
  • Langya HenipaVirus: ಏನಿದು ಚೀನಾದಲ್ಲಿ ಪತ್ತೆಯಾದ ಹೊಸ ವೈರಸ್? ಮನುಕುಲಕ್ಕೆ ವಿನಾಶಕಾರಿಯೇ 'ಲಾಂಗ್ಯಾ'?

Langya HenipaVirus: ಏನಿದು ಚೀನಾದಲ್ಲಿ ಪತ್ತೆಯಾದ ಹೊಸ ವೈರಸ್? ಮನುಕುಲಕ್ಕೆ ವಿನಾಶಕಾರಿಯೇ 'ಲಾಂಗ್ಯಾ'?

ಶ್ರೂಗಳಿಂಜ (ಇಲಿಯನ್ನು ಹೋಲುವ ಸಣ್ಣ ಕೀಟನಾಶಕ ಸಸ್ತನಿ) ಹರಡುತ್ತಿದೆ ಸೋಂಕು

ಶ್ರೂಗಳಿಂಜ (ಇಲಿಯನ್ನು ಹೋಲುವ ಸಣ್ಣ ಕೀಟನಾಶಕ ಸಸ್ತನಿ) ಹರಡುತ್ತಿದೆ ಸೋಂಕು

ಕೋವಿಡ್-19 ವೈರಸ್ ಪತ್ತೆಯಾದ ಮೂರು ವರ್ಷಗಳ ನಂತರ ಇದೀಗ ಚೀನಾದ ವಿಜ್ಞಾನಿಗಳು ಮನುಕುಲಕ್ಕೆ ಮಾರಕವಾಗಬಹುದಾದ ಹೊಸ ವೈರಸ್ ಒಂದನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ. ಇದುವರೆಗೆ ಲಾಂಗ್ಯಾ (Langya) ಎಂದು ಕರೆಯಲಾದ ಲಾಂಗ್ಯಾ ಹೆನಿಪಾವೈರಸ್ (Langya Henipavirus) ಕೋವಿಡ್‌ನಷ್ಟು ಮಾರಣಾಂತಿಕ ಅಥವಾ ವೇಗವಾಗಿ ಹರಡುತ್ತಿರುವಂತೆ ಕಂಡುಬರುವುದಿಲ್ಲ ಎಂಬುದು ಪ್ರಸ್ತುತ ಸಮಾಧಾನಕರ ಸಂಗತಿಯಾಗಿದೆ.

ಮುಂದೆ ಓದಿ ...
  • Share this:

ಕೋವಿಡ್-19 ವೈರಸ್ ಪತ್ತೆಯಾದ ಮೂರು ವರ್ಷಗಳ ನಂತರ ಇದೀಗ ಚೀನಾದ (China) ವಿಜ್ಞಾನಿಗಳು ಮನುಕುಲಕ್ಕೆ ಮಾರಕವಾಗಬಹುದಾದ ಹೊಸ ವೈರಸ್ ಒಂದನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ. ಇದುವರೆಗೆ ಲಾಂಗ್ಯಾ (Langya) ಎಂದು ಕರೆಯಲಾದ ಲಾಂಗ್ಯಾ ಹೆನಿಪಾವೈರಸ್ (Langya Henipavirus) ಕೋವಿಡ್‌ನಷ್ಟು ಮಾರಣಾಂತಿಕ ಅಥವಾ ವೇಗವಾಗಿ ಹರಡುತ್ತಿರುವಂತೆ ಕಂಡುಬರುವುದಿಲ್ಲ ಎಂಬುದು ಪ್ರಸ್ತುತ ಸಮಾಧಾನಕರ ಸಂಗತಿಯಾಗಿದೆ. ತೈವಾನ್‌ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) (Centers for Disease Control) (CDC) ಯ ಮಾಹಿತಿಯ ಪ್ರಕಾರ, ವೈರಸ್‌ನಿಂದ ಈಗಾಗಲೇ 35 ಜನರಿಗೆ ಸೋಂಕು ತಗುಲಿದ್ದರೂ, ಯಾರೂ ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿಲ್ಲ ಅಥವಾ ಸಾವನ್ನಪ್ಪಿಲ್ಲ ಎಂದಾಗಿದೆ.


ವೈರಸ್ ಎಲ್ಲಿ ಪತ್ತೆಯಾಯಿತು?
ಚೀನಾದ ಶಾಂಡೋಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ ಈ ವೈರಸ್ ಪತ್ತೆಯಾಗಿದೆ. ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ “ಚೀನಾದಲ್ಲಿರುವ ಫೆಬ್ರೈಲ್ ರೋಗಿಗಳಲ್ಲಿ ಎ ಝೂನೋಟಿಕ್ ಹೆನಿಪವೈರಸ್” (“A Zoonotic Henipavirus in Febrile Patients in China”) ಎಂಬ ಶೀರ್ಷಿಕೆಯ ಅಧ್ಯಯನದಲ್ಲಿ ಈ ಹೊಸ ವೈರಸ್ ಕುರಿತಾದ ಮಾಹಿತಿ ತಿಳಿದುಬಂದಿದೆ. ಈ ಅಧ್ಯಯನವು ಚೀನಾದಲ್ಲಿನ ಸೋಂಕುಗಳ ಅಂಕಿಅಂಶಗಳನ್ನು ಒಳಗೊಂಡಿದೆ. ಚೀನಾ, ಸಿಂಗಾಪುರ್ ಮತ್ತು ಆಸ್ಟ್ರೇಲಿಯಾ ಮೂಲದ ಹನ್ನೆರಡು ವಿಭಿನ್ನ ಸಂಶೋಧಕರು ಲೇಖನಕ್ಕಾಗಿ ಕಾರ್ಯನಿರ್ವಹಿಸಿದ್ದಾರೆ.


ವೈರಸ್‌ನ ಲಕ್ಷಣಗಳೇನು?
ವೈರಸ್ ಹೊಂದಿರುವ ಹೆಚ್ಚಿನ ರೋಗಿಗಳು ಜ್ವರ, ಆಯಾಸ, ಕೆಮ್ಮು, ತಲೆನೋವು, ಸ್ನಾಯು ನೋವು, ಹಸಿವಿಲ್ಲದಿರುವುದು, ತಲೆನೋವು, ವಾಕರಿಕೆ ಮತ್ತು ವಾಂತಿ ಸೇರಿದಂತೆ ಜ್ವರ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಆಯಾಸವು ಅತ್ಯಂತ ಸಾಮಾನ್ಯ ರೋಗ ಲಕ್ಷಣವಾಗಿದ್ದರೂ ವೈರಸ್ ಸೋಂಕಿತ ರೋಗಿಗಳಲ್ಲಿ ಕಡಿಮೆ ಬಿಳಿ ರಕ್ತ ಕಣಗಳ ಎಣಿಕೆಗಳ ಮೇಲೆ ಪರಿಣಾಮವನ್ನು ಬೀರುವಂತಿದ್ದು ಇದರೊಂದಿಗೆ ಯಕೃತ್ತಿನ ವೈಫಲ್ಯ ಮತ್ತು ಮೂತ್ರಪಿಂಡದ ಕಾರ್ಯವನ್ನು ಇಳಿಮುಖಗೊಳಿಸುತ್ತದೆ.


ಇದನ್ನೂ ಓದಿ:  Monkeypox ನಿಮ್ಮನ್ನು ದೈಹಿಕವಾಗಷ್ಟೇ ಅಲ್ಲ, ಮಾನಸಿಕವಾಗಿಯೂ ಕಾಡುತ್ತದೆಯಂತೆ!


ಇನ್ನು ವೈರಸ್‌ಗೆ ತುತ್ತಾಗಿದ್ದಾರೆ ಎಂದು ಗುರುತಿಸಲಾದ 35 ಜನರಲ್ಲಿ ಒಂಬತ್ತು ಮಂದಿಯಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ.


ವೈರಸ್ ಹೇಗೆ ಹರಡುತ್ತದೆ?
ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಶ್ರೂಗಳಲ್ಲಿ (ಇಲಿಯನ್ನು ಹೋಲುವ ಸಣ್ಣ ಕೀಟನಾಶಕ ಸಸ್ತನಿ) ಈ ವೈರಸ್ ಹೆಚ್ಚುವರಿ ದರದಲ್ಲಿ ಕಂಡುಬಂದಿದ್ದು ನಾಯಿ ಹಾಗೂ ಆಡಿನಂತಹ ಸಾಕುಪ್ರಾಣಿಗಳಲ್ಲಿ ವೈರಸ್ ಅಷ್ಟೊಂದು ತೀವ್ರ ದರದಲ್ಲಿಲ್ಲ.


ಇದುವರೆಗೆ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡಿಲ್ಲ ಆದರೆ ಒಮ್ಮೆ ಇದು ಹರಡಿದಲ್ಲಿ ಪರಿಸ್ಥಿತಿ ಬದಲಾಗಲೂಬಹುದು ಎಂಬುದಾಗಿ ಸಿಡಿಸಿ (CDC) ಅಧಿಕಾರಿಗಳು ಎಚ್ಚರಿಸಿದ್ದಾರೆ ಎಂದು ತೈಪೆ ಟೈಮ್ಸ್ ವರದಿ ಮಾಡಿದೆ. ವೈರಸ್‌ನ ಮೂಲ ಹಾಗೂ ಅದು ಹೇಗೆ ಹರಡುತ್ತದೆ ಎಂಬುದನ್ನು ಇನ್ನಷ್ಟು ನಿಖರವಾಗಿ ಪತ್ತೆಹಚ್ಚಲು ಸಂಶೋಧಕರು ಹೆಚ್ಚು ಕಾರ್ಯನಿರ್ವಹಿಸುತ್ತಿದ್ದು, ವೈರಸ್‌ಗೆ ತುತ್ತಾದವರಲ್ಲಿ ಯಾವುದೇ ಸಾಮಾನ್ಯ ದುರ್ಬಲತೆಯ ಇತಿಹಾಸವಿಲ್ಲ ಅಂತೆಯೇ ಕುಟುಂಬದ ಸದಸ್ಯರಂತಹ ನಿಕಟ ಸಂಪರ್ಕಗಳಿಗೆ ಸೋಂಕು ತಗುಲಿಲ್ಲ ಎಂದು ನಂಬಲಾಗಿದೆ.


ಹೊಸ ವೈರಸ್ ಕುರಿತು ಆತಂಕ ಇದ್ದೇ ಇದೆ:
ವೈರಸ್ ಅನ್ನು ಪರೀಕ್ಷಿಸಲು ಮತ್ತು ಅನುಕ್ರಮಗೊಳಿಸಲು ನ್ಯೂಕ್ಲಿಯಿಕ್ ಆ್ಯಸಿಡ್ ಪರೀಕ್ಷೆಯನ್ನು ಸ್ಥಾಪಿಸಲು ಏಜೆನ್ಸಿ ಕಾರ್ಯನಿರ್ವಹಿಸುತ್ತಿದೆ ಮತ್ತು ಇತರ ಅಂಶಗಳನ್ನು ಗುರುತಿಸಲು ಚೀನಾದ ಕೃಷಿ ಕೌನ್ಸಿಲ್‌ನೊಂದಿಗೆ ಕೆಲಸ ಮಾಡುತ್ತಿದೆ. ವೈರಸ್‌ಗಳು ಶಾಂಡೋಂಗ್ ಮತ್ತು ಹೆನಾನ್ ಪ್ರಾಂತ್ಯಗಳ ಸ್ಥಳೀಯ ವರ್ಗಗಳಲ್ಲಿ ಕಂಡುಬರುತ್ತವೆ ಎಂದು ತೈವಾನೀಸ್ ಸಿಡಿಸಿ (CDC) ಉಪನಿರ್ದೇಶಕ ಚುವಾಂಗ್ ಜೆನ್-ಹ್ಸಿಯಾಂಗ್ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Monkeypox V/s Marburg Virus: ಮಾನವರಿಗೆ ಯಾವುದು ಮಾರಣಾಂತಿಕ? ಮಂಕಿಪಾಕ್ಸ್ ಅಥವಾ ಮಾರ್ಬರ್ಗ್?


ಹೆನಿಪಾವೈರಸ್‌ನಲ್ಲಿ (henipavirus) ಹೊಸ ವೈರಸ್‌ನ ಆಗಮನವು ಇತರ ಎರಡು ಹೆನಿಪಾವೈರಸ್‌ಗಳಾದ ಹೆಂಡ್ರಾ ವೈರಸ್ (Hendra virus) ಮತ್ತು ನಿಫಾ ವೈರಸ್‌ಗಳ (Nipah virus) ಅಧ್ಯಯನವನ್ನು ಗಮನದಲ್ಲಿಟ್ಟುಕೊಂಡು ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ಈ ಎರಡೂ ವೈರಸ್‌ಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು ಮತ್ತು ಇವೆರಡೂ ಹೆಚ್ಚು ಮರಣ ಪ್ರಮಾಣವನ್ನು ಹೊಂದಿವೆ. ಕುದುರೆಗಳಿಗೆ ಈ ವೈರಸ್ ವಿರುದ್ಧ ಹೆಂಡ್ರಾ ಲಸಿಕೆ ಇದ್ದು, ಮಾನವರಿಗೆ ಹೆನಿಪಾವೈರಸ್ ವಿರುದ್ಧ ಯಾವುದೇ ಲಸಿಕೆ ಇಲ್ಲ. ವೈರಾಣುಗಳು ಸಿಂಗಲ್ - ಸ್ಟ್ರಾಂಡೆಡ್ ಆರ್‌ಎನ್‌ಎ (RNA ) ವೈರಸ್‌ಗಳ ಪ್ಯಾರಾಮಿಕ್ಸೊವಿರಿಡೆ (Paramyxoviridae) ಕುಟುಂಬದ ಸದಸ್ಯವಾಗಿದೆ.

top videos
    First published: