• Home
 • »
 • News
 • »
 • explained
 • »
 • Explained: ಕೋಟ್ಯಂತರ ಜೀವ ಕಾಪಾಡಿದ್ದ ORS ನ ಸಂಶೋಧಕ ಡಾ. ದಿಲೀಪ್ ಅವರ ಬಗ್ಗೆ ಕಂಪ್ಲೀಟ್‌ ಮಾಹಿತಿ

Explained: ಕೋಟ್ಯಂತರ ಜೀವ ಕಾಪಾಡಿದ್ದ ORS ನ ಸಂಶೋಧಕ ಡಾ. ದಿಲೀಪ್ ಅವರ ಬಗ್ಗೆ ಕಂಪ್ಲೀಟ್‌ ಮಾಹಿತಿ

ಡಾ. ದಿಲೀಪ್‌ ಮಹಲ್‌ ನಬೀಸ್‌

ಡಾ. ದಿಲೀಪ್‌ ಮಹಲ್‌ ನಬೀಸ್‌

ಓಆರ್‌ಎಸ್‌ (ORS) ಅನ್ನು ಸಂಶೋಧಿಸುವ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಜೀವಗಳನ್ನು ಕಾಪಾಡಿದ್ದ ಖ್ಯಾತ ವೈದ್ಯ ಡಾ. ದಿಲೀಪ್‌ ಮಹಲ್‌ ನಬೀಸ್‌ ಅವರು ಇತ್ತೀಚೆಗೆ ಕೋಲ್ಕತ್ತದಲ್ಲಿ ನಿಧನರಾದರು. 87 ವರ್ಷದ ವೈದ್ಯ ಡಾ. ದಿಲೀಪ್‌ ಅವರು ಶ್ವಾಸಕೋಶದ ಸೋಂಕು ಮತ್ತು ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಇವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.

ಮುಂದೆ ಓದಿ ...
 • News18 Kannada
 • Last Updated :
 • West Bengal, India
 • Share this:

ಅತಿಸಾರ ಅಥವಾ ಇತರೆ ಯಾವುದೇ ಕಾರಣದಿಂದ ದೇಹ ನಿರ್ಜಲೀಕರಣಗೊಂಡಾಗ ನೀಡುವ ಓಆರ್‌ಎಸ್‌ (ORS) (ಓರಲ್‌ ರೀಹೈಡ್ರೇಷನ್‌ ಸೊಲ್ಯೂಷನ್‌) ಅನ್ನು ಸಂಶೋಧಿಸುವ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಜೀವಗಳನ್ನು (Lives) ಕಾಪಾಡಿದ್ದ ಖ್ಯಾತ ವೈದ್ಯ ಡಾ. ದಿಲೀಪ್‌ ಮಹಲ್‌ ನಬೀಸ್‌ (Dilip Mahalanabis) ಅವರು ಇತ್ತೀಚೆಗೆ ಕೋಲ್ಕತ್ತದಲ್ಲಿ ನಿಧನರಾದರು. 87 ವರ್ಷದ ವೈದ್ಯ ಡಾ. ದಿಲೀಪ್‌ ಅವರು ಶ್ವಾಸಕೋಶದ ಸೋಂಕು ಮತ್ತು ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಇವರನ್ನು ಪಶ್ಚಿಮ ಬಂಗಾಳ (West Bengal) ರಾಜಧಾನಿಯಾದ ಕೊಲ್ಕತ್ತಾದ (Kolkata) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಪ್ರತಿಷ್ಠಿತ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಸದಸ್ಯರೂ ಆಗಿದ್ದ ಡಾ. ದಿಲೀಪ್‌ ಅವರು 1971ರಲ್ಲಿ ಸಂಶೋಧಿಸಿದ ಒಆರ್‌ಎಸ್‌ ಥೆರಪಿ, ವೈದ್ಯಕೀಯ ಕ್ಷೇತ್ರದಲ್ಲಿ 20ನೇ ಶತಮಾನದ ಅತ್ಯಂತ ಮಹತ್ವದ ಸಂಶೋಧನೆ ಎಂದು ಲ್ಯಾನ್ಸೆಟ್‌ ತನ್ನ ವರದಿಯಲ್ಲಿ ತಿಳಿಸಿತ್ತು. ನೊಬೆಲ್‌ ಪುರಸ್ಕಾರಕ್ಕೆ ಅರ್ಹರಾಗಿದ್ದ ಈ ವೈದ್ಯರಿಗೆ, ಕನಿಷ್ಠ ಭಾರತ ಸರ್ಕಾರ ಕೂಡಾ ಯಾವುದೇ ಪದ್ಮ ಪ್ರಶಸ್ತಿಯನ್ನೂ ಇದುವರೆಗೆ ನೀಡಿಲ್ಲ.


ಜೀವನ ಮತ್ತು ವೃತ್ತಿ


 • ಡಾ. ದಿಲೀಪ್‌ ಮಹಲ್‌ ನಬೀಸ್‌ ಅವರು 1934 ರಲ್ಲಿ ಅವಿಭಜಿತ ಬಂಗಾಳದ ಕಿಶೋರ್‌ಗಂಜ್‌ನಲ್ಲಿ ಜನಿಸಿದರು.

 • ಮಹಲ್‌ ನಬೀಸ್‌ ಅವರು 1958 ರಲ್ಲಿ ಪದವಿ ಪಡೆದ ನಂತರ ಕಲ್ಕತ್ತಾ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದಲ್ಲಿ ಇಂಟರ್ನ್ ಆಗಿ ಸೇರಿದರು.

 • ವರದಿಯ ಪ್ರಕಾರ, 1950 ರ ದಶಕದಲ್ಲಿ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಯನ್ನು ಸ್ಥಾಪಿಸಲಾಯಿತು. ಇದಕ್ಕೆ ದಿಲೀಪ್‌ ಅವರು ಸಹ ಆಯ್ಕೆಯಾದರು. ಇದರಿಂದ ಅವರಿಗೆ ಇಂಗ್ಲೆಂಡ್‌ನಲ್ಲಿ ವೈದ್ಯಕೀಯ ಅಧ್ಯಯನ ಮಾಡುವ ಅವಕಾಶ ಸಿಕ್ಕಿತು ಎಂದು ವರದಿಗಳು ಹೇಳುತ್ತವೆ.

 • ಇವರು ಲಂಡನ್ ಮತ್ತು ಎಡಿನ್‌ಬರ್ಗ್‌ನಲ್ಲಿ ಪದವಿಗಳನ್ನು ಪಡೆದ ನಂತರ ಅವರು ಲಂಡನ್‌ನ ಕ್ವೀನ್ ಎಲಿಜಬೆತ್ ಆಸ್ಪತ್ರೆಯ ರಿಜಿಸ್ಟ್ರಾರ್ ಆಗಿ ಆಯ್ಕೆಯಾದರು. ಈ ಆಸ್ಪತ್ರೆಗೆ ರಿಜಿಸ್ಟ್ರಾರ್‌ ಆಗಿ ಆಯ್ಕೆಯಾದ ಮೊದಲ ಭಾರತೀಯರಾಗಿದ್ದರು.

 • ಅವರು 1960 ರ ದಶಕದಲ್ಲಿ ಕೋಲ್ಕತ್ತಾದ ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಮೆಡಿಕಲ್ ರಿಸರ್ಚ್ ಅಂಡ್ ಟ್ರೈನಿಂಗ್‌ ನಲ್ಲಿ ಕಾರ್ಯ ನಿರ್ವಹಿಸಿದರು. ಅಲ್ಲಿ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಮಾಧ್ಯಮದ ವರದಿ ಪ್ರಕಾರ ಮೌಖಿಕ ಪುನರ್ಜಲೀಕರಣ ಚಿಕಿತ್ಸೆಯ ಸಂಶೋಧನೆ ನಡೆಸಿದರು.


ಓಆರ್‌ಎಸ್‌ ಸಂಶೋಧನೆ ಹೇಗಾಯಿತು?
1971ರಲ್ಲಿ ಬಾಂಗ್ಲಾದೇಶದ ವಿಮೋಚನಾ ಯುದ್ಧ ಆರಂಭವಾದಾಗ ಲಕ್ಷಾಂತರ ನಿರಾಶ್ರಿತರು ಪಶ್ಚಿಮ ಬಂಗಾಳದ ಶಿಬಿರಗಳಲ್ಲಿ ಆಶ್ರಯ ಪಡೆದರು. ಈ ವೇಳೆ ಶುಚಿತ್ವದ ಹಾಗೂ ಶುದ್ಧ ಕುಡಿಯುವ ನೀರಿನ ತೊಂದರೆಯಿಂದಾಗಿ ಕಾಲರಾ, ಅತಿಸಾರ ಎಂಬಂತಹ ರೋಗಗಳು ತೀವ್ರವಾಗಿ ಹರಡಲು ಆರಂಭವಾದವು. ಈ ಸೋಂಕುಗಳಿಗೆ ಬಹಳಷ್ಟು ಮಕ್ಕಳು ಬಲಿಯಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಡಾ. ಮಹಲ್‌ ನಬೀಸ್‌ ಮೌಖಿಕ ಪುನರ್ಜಲೀಕರಣ ಚಿಕಿತ್ಸೆ ಆದ ಓರಲ್‌ ರಿಹೈಡ್ರೆಷನ್‌ ಥೆರಪಿ(ORT) ಅನ್ನು ಕಂಡುಹಿಡಿದರು.


ಇದನ್ನೂ ಓದಿ:  Gyaneshwer Chaubey: ನಾನು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡು ಹಿಡಿದು ಜಗತ್ತನ್ನೇ ಬೆರಗುಗೊಳಿಸಿದ ವಿಜ್ಞಾನಿ!


ಉಪ್ಪು, ಗ್ಲೂಕೋಸ್‌ ಹಾಗೂ ಬೇಕಿಂಗ್‌ ಸೋಡಾ ಮಿಶ್ರಣದಿಂದಾಗಿ ಅತಿಸಾರಕ್ಕೆ ಸುಲಭ ಚಿಕಿತ್ಸೆ ಕಂಡುಹಿಡಿದರು. ಇದರಿಂದ ಲಕ್ಷಾಂತರ ಜನರ ಜೀವ ಉಳಿಯಿತು. ಮಕ್ಕಳ ಸಾವಿನ ಪ್ರಮಾಣ ಗಣನೀಯವಾಗಿ ತಗ್ಗಿತು. ಒಆರ್‌ಟಿ ಮುಂದೆ ಒಆರ್‌ಎಸ್‌ ಎಂದು ಜನಪ್ರಿಯವಾಯಿತು. ಅವರ ಚಿಕಿತ್ಸೆಯ ಬಗ್ಗೆ ಜಾನ್ಸ್‌ ಹಾಪ್ಕಿನ್ಸ್‌ ಮೆಡಿಕಲ್‌ ಜರ್ನಲ್‌ ಹಾಗೂ ಲಾನ್ಸೆಟ್‌ನಲ್ಲಿ ಪ್ರಕಟವಾಯಿತು. ಲಾನ್ಸೆಟ್‌ ಇದನ್ನು 20ನೇ ಶತಮಾನದ ಶ್ರೇಷ್ಠ ವೈದ್ಯಕೀಯ ಸಂಶೋಧನೆ ಎಂದು ಕೊಂಡಾಡಿತು. 1980ರಿಂದ 1990ರ ದಶಕದಲ್ಲಿ ಮಹಲ್‌ ನಬೀಸ್‌ ಅವರು ಜಿನೇವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅತಿಸಾರ ನಿಯಂತ್ರಣ ಕಾರ್ಯಕ್ರಮದ ವೈದ್ಯಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದರು.


“ಕಾಲರಾದಿಂದ ಅನೇಕ ಸಾವುಗಳು ಸಂಭವಿಸಿವೆ. ಇದರಿಂದ ನನಗೆ ಭಯದ ಜೊತೆ ಆಶ್ಚರ್ಯವೂ ಕೂಡ ಆಯಿತು. ಬಂಗಾವ್‌ನ ಆಸ್ಪತ್ರೆಯಲ್ಲಿ ಕೇವಲ ಎರಡು ಕೊಠಡಿಗಳು ಮಾತ್ರ ಇದ್ದವು. ತೀವ್ರವಾಗಿ ಅಸ್ವಸ್ಥರಾಗಿದ್ದ ಕಾಲರಾ ರೋಗಿಗಳು ನೆಲದ ಮೇಲೆಯೇ ಮಲಗಿದ್ದರು. ಇದರಿಂದ ಅಂದು ನನ್ನ ಮನಸ್ಸಿಗೆ ಆದ ನೋವು ಅಷ್ಟಿಷ್ಟಲ್ಲ.


WHO ಗೆ ನೀಡಿದ ಸಂದರ್ಶನವೊಂದರಲ್ಲಿ ನಬೀಸ್ ಅವರು ಹೀಗೆ ಹೇಳಿದ್ದರು
ನಾನು ಕಂಡು ಹಿಡಿದ ಓಆರ್‌ಎಸ್‌ ಅನ್ನು ನೀಡಲು ಆರಂಭಿಸಿದ 48 ಗಂಟೆಗಳಲ್ಲಿ ರೋಗಿಗಳು ಸ್ವಲ್ಪ ಸುಧಾರಿಸಿಕೊಂಡರು ಸಹ, ಆ ಭೀಕರ ಯುದ್ದದ ಸಮಯದಲ್ಲಿ ಎಲ್ಲ ರೋಗಿಗಳಿಗೆ ಅದನ್ನು ನೀಡಲು ನಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಅದರ ಜೊತೆಗೆ ನನ್ನ ತಂಡದ ಇಬ್ಬರು ಸದಸ್ಯರು ಮಾತ್ರ ಈ ದ್ರವವನ್ನು ಸರಿಯಾಗಿ ನೀಡಲು ತರಬೇತಿ ಪಡೆದಿದ್ದರು” ಎಂದು ಡಾ. ದಿಲೀಪ್‌ ಮಹಲ್‌ ನಬೀಸ್‌ ಅವರು 2009 ರಲ್ಲಿ WHO ಗೆ ನೀಡಿದ ಸಂದರ್ಶನವೊಂದರಲ್ಲಿ  ಹೇಳಿದ್ದರು.


“ಆ ಸಮಯದಲ್ಲಿ ಉತ್ತಮ ವೈದ್ಯಕೀಯ ಜ್ಞಾನವುಳ್ಳ ಜನರನ್ನು ಸಮಾಲೋಚಿಸುವ ಅವಕಾಶ ಆಗಲಿ, ಸೌಲಭ್ಯವಾಗಲಿ ನನಗಿರಲಿಲ್ಲ. ನಾನು ಏನೇ ಮಾಡಬೇಕೆಂದರೂ ಸಹ ಆ ನಿರ್ಧಾರವನ್ನು ನಾನೇ ನಿರ್ಧರಿಸಬೇಕಿತ್ತು. ಆದ್ದರಿಂದ ಉತ್ತಮವಾದ ಆಯ್ಕೆ ಮಾಡಲೇಬೇಕಾದ ಪರಿಸ್ಥಿತಿ ಯುದ್ದದ ಸಮಯದಲ್ಲಿ ನನಗೆ ಒದಗಿ ಬಂದಿತು. ಆಗಿನಿಂದ ORS ಅನ್ನು ಕಾಲರಾ ಮತ್ತು ಅತಿಸಾರದಂತಹ ರೋಗಿಗಳಿಗೆ ಹೆಚ್ಚು ನೀಡುವ ಆಯ್ಕೆ ಬಿಟ್ಟು ನನಗೆ ಬೇರೆ ಯಾವ ಆಯ್ಕೆಗಳೂ ಸಹ ಇರಲಿಲ್ಲ.


ಇದನ್ನೂ ಓದಿ:Real Hero: ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಸರೆಯಾದ ಸ್ಕಾಲರ್‌ಶಿಪ್ ಮಾಸ್ಟರ್! ನಿವೃತ್ತ ಶಿಕ್ಷಕರ ಸಾಧನೆ ಕಥೆ ಇಲ್ಲಿದೆ ಓದಿ


ಜಗತ್ತಿನಲ್ಲಿ ಉತ್ತಮ ಆಶಯವಿರುವ ಕೆಲಸ ಉತ್ತಮ ಫಲಿತಾಂಶವನ್ನೆ ನೀಡುತ್ತದೆ ಎಂಬ ಭರವಸೆಯೊಂದಿಗೆ, ಈ ಔಷಧಿಯನ್ನು ನೀಡುವ ಕೆಲಸವನ್ನು ಆರಂಭಿಸಿದೆ. ಇದು ಕೆಲಸ ಮಾಡಬಹುದೆಂದು ನನಗೆ ವಿಶ್ವಾಸವಿತ್ತು. ಓಆರ್‌ಎಸ್‌ ನಿಜವಾಗಿಯೂ ಕೆಲಸ ಮಾಡಿದೆ. ಇದು ನನಗೆ ಅತ್ಯಂತ ದೊಡ್ಡ ಸಮಾಧಾನದ ವಿಷಯವಾಗಿದೆ” ಎಂದು ಡಾ. ದಿಲೀಪ್‌ ಈ ಹಿಂದೆ ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.


ಪೇಟೆಂಟ್‌ ಪಡೆಯದ ಡಾ. ದಿಲೀಪ್‌ ಅವರ ಓಆರ್‌ಎಸ್‌ ಸಂಶೋಧನೆ


 • ಅವರು ತಮ್ಮ ಓರಲ್ ರೀಹೈಡ್ರೇಶನ್‌ ಸೊಲ್ಯೂಷನ್‌ (ORS) ಸಂಶೋಧನೆಗೆ ಎಂದಿಗೂ ಪೇಟೆಂಟ್ ಮಾಡಿರಲಿಲ್ಲ.

 • ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಅವರು 1975 ರಿಂದ 1979 ರವರೆಗೆ ಅಫ್ಘಾನಿಸ್ತಾನ, ಈಜಿಪ್ಟ್ ಮತ್ತು ಯೆಮೆನ್‌ನಲ್ಲಿ WHO ಸಂಸ್ಥೆಯಲ್ಲಿ ಕಾಲರಾ ನಿಯಂತ್ರಣ ವಿಭಾಗದಲ್ಲಿ ಕೆಲಸ ಮಾಡಿದರು.

 • 1980 ರ ದಶಕದಲ್ಲಿ, ಅವರು ಬ್ಯಾಕ್ಟೀರಿಯಾದ ಕಾಯಿಲೆಗಳ ನಿರ್ವಹಣೆಯ ಸಂಶೋಧನೆಯಲ್ಲಿ WHO ಸಲಹೆಗಾರರಾಗಿ ಕೆಲಸ ಮಾಡಿದರು.

 • ಬೆಂಗಾಲಿ ಟ್ರಿಬ್ಯೂನ್ ಪ್ರಕಾರ, ಡಾ. ದಿಲೀಪ್‌ ಮಹಲ್‌ ನಬೀಸ್‌ 1990 ರಲ್ಲಿ ಢಾಕಾದ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಡೈರಿಯಾಲ್ ಡಿಸೀಸ್ ರಿಸರ್ಚ್‌ನಲ್ಲಿ ಕ್ಲಿನಿಕಲ್ ರಿಸರ್ಚ್ ಆಫೀಸರ್ ಆಗಿ ನೇಮಕಗೊಂಡರು.


ಗೌರವ -ಪ್ರಶಸ್ತಿಗಳು

 • ಡಾ. ದಿಲೀಪ್‌ ಅವರ ಕಾರ್ಯ ಸಾಧನೆಗೆ WHO ನಂತಹ ಪ್ರತಿಷ್ಠಿತ ಸಂಸ್ಥೆಗಳು ಸೇರಿದಂತೆ ಇತರ ಸಂಸ್ಥೆಗಳಿಂದಲೂ ಕೂಡ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದಾರೆ.

 • ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ದಿಲೀಪ್‌ ಮಹಲ್‌ ನಬೀಸ್‌ಗೆ 2002 ರಲ್ಲಿ ಕೊಲಂಬಿಯಾ ಮತ್ತು ಕಾರ್ನೆಲ್ ವಿಶ್ವವಿದ್ಯಾನಿಲಯವು ಪೊಲಿನ್ ಪ್ರಶಸ್ತಿಯನ್ನು ನೀಡಿತು.

 • ಇವರಿಗೆ 2006 ರಲ್ಲಿ ವೈದ್ಯಕೀಯ ವಿಜ್ಞಾನಕ್ಕೆ ನೀಡಿದ ಕೊಡುಗೆಗಾಗಿ ಥಾಯ್ ಸರ್ಕಾರದ ಪ್ರಿನ್ಸ್ ಮಹಿಡೋಲ್ ಪ್ರಶಸ್ತಿಯನ್ನು ನೀಡಲಾಯಿತು.


ಡಾ. ಮಹಲ್‌ ನಬೀಸ್‌ ಅವರ ಬಗ್ಗೆ ವೈದ್ಯಕೀಯ ಇತರ ತಜ್ಞರಲ್ಲಿ ಇರುವ ಅಭಿಪ್ರಾಯಗಳಿವು:
"ಡಾ. ದಿಲೀಪ್‌ ಮಹಲ್‌ ನಬೀಸ್‌ ಒಬ್ಬ ಉತ್ತಮ ವೈದ್ಯ, ವಿಜ್ಞಾನಿ ಮತ್ತು ವಿನಮ್ರ ಮತ್ತು ಕರುಣಾಮಯಿ ವ್ಯಕ್ತಿಯಾಗಿದ್ದರು. ಅವರು ಸಾಕಷ್ಟು ಪರಿಶ್ರಮ ಜೀವಿಗಳಾಗಿದ್ದರು” ಎಂದು ಕೋಲ್ಕತ್ತಾದ ಮಕ್ಕಳ ಆರೋಗ್ಯ ಸಂಸ್ಥೆಯ (ICH) ನಿರ್ದೇಶಕ ಅಪುರ ಘೋಷ್ ಅವರು ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದರು.


ಇದನ್ನೂ ಓದಿ:  Maitreyee: ಭಾರತವೇ ಹೆಮ್ಮೆ ಪಡುವ ಕೆಲಸ ಮಾಡಿದ ಯುವ ನರವಿಜ್ಞಾನಿ ಮೈತ್ರೇಯಿ


ಮಹಲ್‌ ನಬೀಸ್‌ ಅವರು ಕಡಿಮೆ ವೆಚ್ಚದ ವಿಧಾನಗಳ ಮೂಲಕ ಕಾಲರಾ ಮತ್ತು ಕರುಳಿನ ಕಾಯಿಲೆಗಳ ಚಿಕಿತ್ಸೆಗಳಿಗೆ ಔಷಧಿ ಕಂಡುಹಿಡಿದಿರುವ ಪ್ರವರ್ತಕರಾಗಿದ್ದಾರೆ ಎಂದು ಘೋಷ್ ಹೇಳಿದರು. "ಅವರ ವೈಜ್ಞಾನಿಕ ಕೊಡುಗೆಗಳು ಎಂದೆಂದಿಗೂ ಸ್ಮರಣೀಯವಾಗಿರುತ್ತವೆ" ಎಂದು ಘೋಷ್ ಉದ್ಗರಿಸಿದರು. ಒಂದೆರಡು ವರ್ಷಗಳ ಹಿಂದೆ, ಕೆಲವು ವರದಿಗಳ ಪ್ರಕಾರ, “ಅವರು ಮೊದಲು ಮಕ್ಕಳ ವೈದ್ಯರಾಗಿ ಪ್ರಾರಂಭಿಸಿದ ICH ಸಂಸ್ಥೆಗೆ ತಮ್ಮ ಒಟ್ಟಾರೆ ಜೀವನ ಉಳಿತಾಯದ 1 ಕೋಟಿ ರೂ.ಗಳನ್ನು ದಾನ ಮಾಡಿದ ದೊಡ್ಡ ಮನಸ್ಸು ಅವರದು” ಎಂದು ಹೇಳುತ್ತವೆ.


"ಆದರೆ ಈಗ ಅವರ ಮರಣವು ವೈದ್ಯಕೀಯ ಲೋಕದಲ್ಲಿ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಮೌಖಿಕ ಪುನರ್ಜಲೀಕರಣವು ಮಕ್ಕಳಲ್ಲಿ ಕಾಣಿಸುವ ಅತಿಸಾರ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆಯಾಗಿದೆ. ORT ಅನ್ನು ಬಳಸುವ ಮೊದಲು, ಈ ರೋಗಗಳಿಗೆ ಅಭಿದಮನಿ ದ್ರವದ ದ್ರಾವಣವನ್ನು ಮಾತ್ರ ಬಳಸಲಾಗುತ್ತಿತ್ತು.


ಇದರ ವೆಚ್ಚ ದುಬಾರಿಯಾಗಿತ್ತು ಮತ್ತು ತಯಾರಿಸುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಆದರೆ ಡಾ.ಮಹಲ್‌ ನಬೀಸ್‌ ಅವರ ನಿರಂತರ ಪ್ರಯತ್ನದಿಂದಾಗಿ, ಇಂದು ORT ಯು ಮನೆಮಾತಾಗಿದೆ ”ಎಂದು ಪುಣೆಯ ಡಾ.ಡಿ.ವೈ.ಪಾಟೀಲ್ ವೈದ್ಯಕೀಯ ಕಾಲೇಜಿನ ಪೀಡಿಯಾಟ್ರಿಕ್ಸ್ ಪ್ರಾಧ್ಯಾಪಕ ಡಾ.ಸಂಪದಾ ತಾಂಬೋಲ್ಕರ್ ಅವರುಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದರು.

Published by:Ashwini Prabhu
First published: