Blackout Challenge: ಮಕ್ಕಳ ಸಾವಿಗೆ ಕಾರಣವಾಗುತ್ತಿದೆಯಂತೆ ಟಿಕ್‌ ಟಾಕ್‌ನ ಮಾರಣಾಂತಿಕ ಬ್ಲಾಕ್‌ಔಟ್ ಗೇಮ್‌!

ಆಟಗಳು ಆಟವಾಗಿದ್ದರೆ ಅದರಿಂದ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಮಟ್ಟವು ಉತ್ತಮಗೊಳ್ಳುತ್ತದೆ ಎಂಬುದು ನಿಜವಾದರೂ, ಈಗೀಗ ಈ ಆನ್‌ಲೈನ್‌ ಗೇಮ್‌ಗಳು ಮಕ್ಕಳ ಪ್ರಾಣವನ್ನೆ ಬಲಿ ತೆಗೆದುಕೊಳ್ಳುತ್ತಿವೆ. ಈ ಸುದ್ದಿ ಕೇಳಿ ಎಲ್ಲ ಪೋಷಕರು ಒಮ್ಮೆ ಆಘಾತಕ್ಕೆ ಒಳಗಾಗುವುದು ಸಹಜ. ಹಾಗಾದ್ರೆ ಇಂತಹ ಅಪಾಯಕಾರಿ ಗೇಮ್‌ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ...

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
“ಇಂದಿನ ಮಕ್ಕಳೇ (Children), ದೇಶದ ಭಾವಿ ಪ್ರಜೆಗಳು” ಎಂಬ ಗಾದೆ ಮಾತೊಂದಿದೆ, ಆದರೆ ಈ ಆನ್‌ಲೈನ್‌ (Online) ಯುಗಕ್ಕೆ ಆ ಮಾತು ಸೂಕ್ತವೆನಿಸುತ್ತಿಲ್ಲ. ಏಕೆಂದರೆ ಮಕ್ಕಳ ಗಮನ ತಮ್ಮ ಜೀವನ ಕಟ್ಟಿಕೊಳ್ಳುವದರತ್ತ ಇರದೇ ಸಾವಿನ (Death) ಬಾಯಿಗೆ ಹೋಗುವ ಪರಿಪಾಠ ಹೆಚ್ಚಾಗುತ್ತಿದೆ. ಇತ್ತಿಚೀನ ಮಕ್ಕಳಿಗೆ ಪುರಾಣದ ಕಥೆಗಳು, ತೆನಾಲಿ ರಾಮನ ಕಥೆಗಳು ಅಥವಾ ಹಳೆ ಕಾಲದ ಆಟಗಳಾದ (Games) ಲಗೋರಿ, ಚಿನ್ನಿ ದಾಂಡು, ಮರಕೋತಿ ಆಟಗಳೆಲ್ಲ ಇಂದಿನ ಮಕ್ಕಳಿಗೆ ಅವುಗಳ ಗಂಧ-ಗಾಳಿ ಕೂಡ ಇಲ್ಲ. ಆದರೆ ಹೊಸದಾಗಿ ಯಾವ ಮೊಬೈಲ್‌ ಗೇಮ್‌ ಬಿಟ್ಟಿದಾರೆ ಎಂಬುದರ ಬಗ್ಗೆ ಸ್ಪಷ್ಟ ಅರಿವು ಈಗೀನ ಕಾಲದ ಮಕ್ಕಳಿಗೆ ಇದ್ದೆ ಇರುತ್ತದೆ.

ಆದರೆ ಈ ಸ್ಪಷ್ಟ ಬೇರೆ ವಿದ್ಯೆಯ ಕಡೆಗೆ ಇರದಿರುವುದು ನಮ್ಮ ಮಕ್ಕಳ ಒಲವು ಎತ್ತ ಕಡೆ ಎಂಬ ಪ್ರಶ್ನೆ ಪ್ರತಿ ಪೋಷಕನಿಗೂ ಕಾಡುತ್ತಿರುವುದು ಸುಳ್ಳಲ್ಲ.  ಆಟಗಳು ಆಟವಾಗಿದ್ದರೆ ಅದರಿಂದ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಮಟ್ಟವು ಉತ್ತಮಗೊಳ್ಳುತ್ತದೆ ಎಂಬುದು ನಿಜವಾದರೂ ಈಗೀಗ ಈ ಆನ್‌ಲೈನ್‌ ಗೇಮ್‌ಗಳು ಮಕ್ಕಳ ಪ್ರಾಣವನ್ನೆ ಬಲಿ ತೆಗೆದುಕೊಳ್ಳುತ್ತಿವೆ ಎಂಬ ಸುದ್ದಿ ಎಲ್ಲ ಪೋಷಕರು ಒಮ್ಮೆ ಆಘಾತಕ್ಕೆ ಒಳಗಾಗುವುದು ಸಹಜ ಸಂಗತಿ ಆಗಿದೆ. ಆ ಗೇಮ್‌ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಈಗ ಈ ಗೇಮ್‌ ಬಗ್ಗೆ ಯಾಕೆ ಹೇಳ್ತಿದೀನಿ ಅಂತ ನಿಮಗೆ ಈಗಾಗಲೇ ಗೊತ್ತಾಗಿರಬೇಕಲ್ವಾ. ನೀವು ಈ ಸುದ್ದಿಯನ್ನು ಎಲ್ಲ ಕಡೆ ಕೇಳಿಯೇ ಇರ್ತಿರಿ. ಇಲ್ಲಿ ಈಗ ಕೇವಲ ಆ ಸುದ್ದಿ ಮಾತ್ರ ಹೇಳದೇ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸುತ್ತೆವೆ. ಅದರ ಬಗ್ಗೆ ಮಾಹಿತಿ ತಿಳಿದು ನೀವು ನಿಮ್ಮ ಮಕ್ಕಳ ಕುರಿತು ಕಾಳಜಿ ವಹಿಸಬೇಕೆಂದರೆ ಈ ಲೇಖನವನ್ನು ಓದುವುದನ್ನು ಮುಂದುವರಿಸಿ.

ಬ್ಲ್ಯಾಕ್‌ಔಟ್ ಚಾಲೆಂಜ್
2021 ರಲ್ಲಿ ವೈರಲ್ 'ಬ್ಲ್ಯಾಕ್‌ಔಟ್ ಚಾಲೆಂಜ್' ನಲ್ಲಿ ಭಾಗವಹಿಸಿ ಸಾವನ್ನಪ್ಪಿದ ಇಬ್ಬರು ಬಾಲಕಿಯರ ಪೋಷಕರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ‘ವಿಡಿಯೋ ಸಾಮಾಜಿಕ ಮಾಧ್ಯಮ ಪ್ಲಾಟ್‌ಪಾರ್ಮ್‌’ ಆದ ಟಿಕ್‌ ಟಾಕ್ ವಿರುದ್ಧ ಮೊಕದ್ದಮೆಯನ್ನು ಹೂಡಿದ್ದಾರೆ. ಲಲಾನಿ ಎರಿಕಾ ವಾಲ್ಟನ್(8 ವರ್ಷ ವಯಸ್ಸು) ಮತ್ತು ಅರ್ರಿಯಾನಿ ಜೈಲೀನ್ ಅರೋಯೊ(9 ವರ್ಷ ವಯಸ್ಸು) ಈ ಇಬ್ಬರು ಬಾಲಕಿಯರ ಪೋಷಕರು ಟಿಕ್‌ ಟಾಕ್ "ಉದ್ದೇಶಪೂರ್ವಕವಾಗಿ" ಮಕ್ಕಳಿಗೆ ಮಾರಕ ವೀಡಿಯೊಗಳನ್ನು ಒದಗಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ, ನೈಲಾ ಆಂಡರ್ಸನ್ ಎಂಬ 10 ವರ್ಷದ ಬಾಲಕಿಯ ತಾಯಿ ತನ್ನ ಮಗಳು 'ಬ್ಲಾಕ್‌ಔಟ್ ಚಾಲೆಂಜ್' ತೆಗೆದುಕೊಂಡು ಅದರಿಂದ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಟಿಕ್‌ ಟಾಕ್ ವಿರುದ್ಧ ಮೊಕದ್ದಮೆ ಹೂಡಿದ್ದರು. ಇದೇ ರೀತಿ ಟಿಕ್‌ ಟಾಕ್‌ ಮೊಕದ್ದಮೆಗಳು ಈ ಹಿಂದೆಯೂ ಕೂಡ ದಾಖಲಾಗಿವೆ. ಅವುಗಳಲ್ಲಿ 14 ವರ್ಷದ ಆಸ್ಟ್ರೇಲಿಯಾದ ಬಾಲಕ, 10 ವರ್ಷದ ಇಟಾಲಿಯನ್ ಬಾಲಕಿ, ಯುನೈಟೆಡ್ ಸ್ಟೇಟ್ಸ್‌ನ ಕೊಲೊರಾಡೋದಲ್ಲಿ 12 ವರ್ಷದ ಬಾಲಕ ಮತ್ತು ಯುಎಸ್‌ನ ಒಕ್ಲಹೋಮಾದಲ್ಲಿ 12 ವರ್ಷದ ಬಾಲಕ ಹೀಗೆ ಕ್ರಮವಾಗಿ ಏಪ್ರಿಲ್ 2020, ಜನವರಿ 2021, ಏಪ್ರಿಲ್ 2021 ಮತ್ತು ಜುಲೈ 2021 ರಲ್ಲಿ ಬ್ಲ್ಯಾಕ್‌ಔಟ್ ಸವಾಲನ್ನು ತೆಗೆದುಕೊಂಡು ಮಕ್ಕಳು ಸಾವನ್ನಪ್ಪಿರುವ ಪ್ರಕರಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇದನ್ನೂ ಓದಿ: Kichha Sudeep: ಕಿಚ್ಚ ಸುದೀಪ್‌ ವಿರುದ್ಧ ಯುವಕನ ವಿಡಿಯೋ! ಇದು ಆಕ್ರೋಶವೋ? ಅವಹೇಳನವೋ?

ಈ ಪಟ್ಟಿಯನ್ನು ಒಮ್ಮೆ ಕಣ್ಣು ಹಾಯಿಸಿದರೆ ಇನ್ನು 20 ವರ್ಷ ದಾಟಿರದ ಮಕ್ಕಳೆ ಈ ಪಟ್ಟಿಯಲ್ಲಿ ಕಾಣ ಸಿಗುತ್ತಾರೆ. ಇವರಿಗೆ ಇಷ್ಟೊಂದು ಧೈರ್ಯ ಎಲ್ಲಿಂದ ಬರುತ್ತದೆ? ಈ ಗೇಮ್‌ಗಳಲ್ಲಿ ಸಾಯುವಂತಹ ಆಟಗಳು ಏನಿರುತ್ತವೆ? ಆ ಆಟಗಳ ಸವಾಲು ಸ್ವೀಕರಿಸುವದರಿಂದ ನಿಜಕ್ಕೂ ಮಕ್ಕಳು ಸಾವಿನ ಬಾಗಿಲು ತಟ್ಟುತ್ತಿದ್ದಾರೆಯೇ? ಎಂಬ ಅನೇಕ ಪ್ರಶ್ನೆಗಳು ಸಹಜವಾಗಿ ಮುನ್ನೆಲೆಗೆ ಬರುತ್ತಿವೆ. ಅವುಗಳ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳೊಣ ಬನ್ನಿ.

ಬ್ಲಾಕ್ಔಟ್ ಸವಾಲು ಎಂದರೇನು?
‘ವೀಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್‌ಪಾರ್ಮ್‌’ ಆದ ಟಿಕ್‌ ಟಾಕ್ ನ ಗೇಮ್‌ಗಳಲ್ಲಿ ಈ 'ಬ್ಲಾಕ್ಔಟ್ ಸವಾಲು' ಮಕ್ಕಳು ಸಾವನ್ನಪ್ಪುವ ಗೇಮ್‌ ಎಂದೇ ಕುಖ್ಯಾತಿ ಪಡೆದಿದೆ. ಈ ಬ್ಲಾಕ್‌ಔಟ್‌ ಗೇಮ್‌ನಿಂದ ಈಗಾಗಲೇ ಸಾಕಷ್ಟು ಮಕ್ಕಳು ತಮ್ಮ ಜೀವವನ್ನು ಕಳೆದುಕೊಂಡಿರುವುದು ನಿಜಕ್ಕೂ ದುಖಃಕರ ಸಂಗತಿ ಆಗಿದೆ.

ಬ್ಲಾಕ್‌ಔಟ್‌ ಗೇಮ್‌ನಲ್ಲಿ ಇರುವ ಸವಾಲೇನು?
ಈ ಬ್ಲಾಕ್‌ಔಟ್‌ ಗೇಮ್‌ನಲ್ಲಿ ಮಕ್ಕಳು ಗಟ್ಟಿಯಾಗಿ ಉಸಿರುಗಟ್ಟಿಸಿಕೊಳ್ಳಬೇಕು. ಅದು ಎಷ್ಟರ ಮಟ್ಟಿಗೆ ಎಂದರೆ ಅವರಿಗೆ ಆಮ್ಲಜನಕದ ಕೊರತೆಯಿಂದಾಗಿ ಮಕ್ಕಳು ಪ್ರಜ್ಞಾಹೀನರಾಗುವವರೆಗೆ ತಮ್ಮನ್ನು ತಾವು ಉಸಿರುಗಟ್ಟಿಸಿಕೊಳ್ಳಲು ಪ್ರೋತ್ಸಾಹಿಸುವ ಒಂದು ಸವಾಲು ಆಗಿದೆ. ಕೇಳಿದೀರಲ್ಲ, ಈ ಗೇಮ್‌ನ ಸವಾಲು ಈ ರೀತಿ ಮಾಡಿದರೆ ಸವಾಲು ತೆಗೆದುಕೊಂಡ ಯಾರೇ ಆದರೂ ಕೂಡ ಸಾವಿನ ಬಾಯಿಗೆ ಹೋಗುವುದು ಖಚಿತ ಎಂಬುದು ಇಲ್ಲಿ ಎಲ್ಲರಿಗೂ ತುಂಬಾ ಸರಳವಾಗಿ ಅರ್ಥವಾಗುತ್ತದೆ.

ಈ ವೈರಲ್ ಗೇಮ್‌ ಟ್ರೆಂಡ್‌ ಅನ್ನು ಯಾರು ಪ್ರಾರಂಭಿಸಿದರು ಎಂಬುದು ಇನ್ನು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ದಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿನ “ನೋ ಯುವರ್ ಮೀಮ್” ವರದಿಯು ಜನಪ್ರಿಯ ಮೇಮ್‌ಗಳನ್ನು ವಿವರಿಸುವಾಗ ಈ ಬ್ಲಾಕ್‌ಔಟ್‌ ಗೇಮ್‌ ಬಗ್ಗೆ ಕೂಡ ವರದಿ ಮಾಡಿತ್ತು. ಈ ಡೇಂಜರಸ್‌ ಬ್ಲ್ಯಾಕ್‌ಔಟ್ ಸವಾಲನ್ನು ಪ್ರಯತ್ನಿಸುವಾಗ ಮೂರು ಚಿಕ್ಕ ಮಕ್ಕಳು ಜನವರಿ 2021 ರಲ್ಲಿ ಇಟಲಿಯಲ್ಲಿ ಸಾವನ್ನಪ್ಪಿದ ನಂತರ ಈ ಸವಾಲು ವ್ಯಾಪಕವಾಗಿ ಮಾಧ್ಯಮ ಗಮನವನ್ನು ಪಡೆದುಕೊಂಡಿದೆ ಎಂದು ಈ ವರದಿಯಲ್ಲಿ ಪ್ರಕಟಗೊಂಡಿದೆ.

ಇದನ್ನೂ ಓದಿ:  Marriage Dhoka: ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ! ಮೇಕಪ್‌ ನೋಡಿ ಮೋಸ ಹೋದ ಹುಡುಗ

ಈ ಹಿಂದೆ ಭಾರತದಲ್ಲಿ ಟಿಕ್‌ ಟಾಕ್‌ ಅತ್ಯಂತ ಜನಪ್ರಿಯವಾದ ವಿಡಿಯೋ ಸಾಮಾಜಿಕ ಮಾಧ್ಯಮ ಪ್ಲಾಟ್‌ಪಾರ್ಮ್‌ ಆಗಿತ್ತು. ಆದರೆ 2020 ರಲ್ಲಿ ಚೀನಾ ದೇಶದ ಎಲ್ಲ ಅಪ್ಲಿಕೇಶನ್‌ಗಳನ್ನು ಭಾರತವು ಸಂಪೂರ್ಣವಾಗಿ ನಿಷೇಧ ಮಾಡಿತು. ಆದರೂ ಪೋಷಕರು ಮಕ್ಕಳನ್ನು ಸಾವಿನ ಬಾಯಿಗೆ ತಳ್ಳುವ ಈ ತರಹದ ಗೇಮ್‌ಗಳಿಂದ ಸಂಪೂರ್ಣವಾಗಿ ದೂರವಿರಿಸುತ್ತಿಲ್ಲ ಏಕೆ? ಈ ಗೇಮ್‌ಗಳನ್ನು ಇಡೀ ಜಗತ್ತೇ ಸಂಪೂರ್ಣವಾಗಿ ನಿಷೇಧ ಮಾಡುತ್ತದೆಯೇ? ಎಂಬ ಪ್ರಶ್ನೆಗಳನ್ನು ಮುನ್ನೆಲೆಗೆ ತಂದು ಈ ವಿಷಯವನ್ನು ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡಲೇ ಚರ್ಚೆ ನಡೆಸಬೇಕಾಗಿರುವುದು ಅಗತ್ಯ ಕ್ರಮವಾಗಿದೆ.

ಇತ್ತೀಚಿನ ಬ್ಲಾಕ್‌ಔಟ್‌ ಮೊಕದ್ದಮೆ ?
ಇತ್ತೀಚಿನ ಮೊಕದ್ದಮೆಯನ್ನು ಪರಿಶೀಲಿಸುವುದಾದರೆ, ಟೆಕ್ಸಾಸ್‌ನ ಲಲಾನಿ ಟೆಂಪಲ್‌ (8 ವರ್ಷ ವಯಸ್ಸು) ಮತ್ತು ವಿಸ್ಕಾನ್ಸಿನ್‌ನ ಮಿಲ್ವಾಕಿಯ ಅರಿಯಾನಿ (9 ವರ್ಷ ವಯಸ್ಸು) ಅವರ ಕುಟುಂಬಗಳು ಸಾಮಾಜಿಕ ಮಾಧ್ಯಮ ವಿಕ್ಟಿಮ್ಸ್ ಲಾ ಸೆಂಟರ್ (SMVLC) ಸಹಭಾಗಿತ್ವದಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳಿಂದ ಹಾನಿಗೆ ಒಳಗಾದ ಬಳಕೆದಾರರ ಮೊಕದ್ದಮೆಯನ್ನು ಕಾನೂನುಬದ್ಧವಾಗಿ ಪರಿಹರಿಸುವ ಹೊಣೆಯನ್ನು ಈ ಸಂಸ್ಥೆ ಹೊತ್ತುಕೊಂಡಿದೆ ಎಂದು ಹೇಳಬಹುದು. ಈ ಸಂಸ್ಥೆಯು ಜೂನ್ 30 ರಂದು ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿದ್ದರು.

ಟಿಕ್‌ಟಾಕ್ ಮತ್ತು ಅದರ ಮೂಲ ಕಂಪನಿ ಬೈಟ್‌ಡ್ಯಾನ್ಸ್ "ಟಿಕ್‌ಟಾಕ್‌ನ 'ಬ್ಲಾಕ್‌ಔಟ್ ಚಾಲೆಂಜ್' ನಲ್ಲಿ ಭಾಗವಹಿಸುವ ಮಕ್ಕಳು ಸ್ವಯಂ ಕತ್ತು ಹಿಸುಕಿಕೊಂಡು ತಮ್ಮನ್ನು ತಾವೇ ಸಾಯಿಸಿಕೊಂಡಿದ್ದಾರೆ ಎಂದು ಈ ಸವಾಲಿನಲ್ಲಿ ಸಾವನ್ನಪ್ಪಿದ ಕುಟುಂಬದವರು ಆರೋಪಿಸಿರುವ ಹೇಳಿಕೆಗೆ ಪ್ರತ್ಯುತ್ತರ ನೀಡಿದೆ. ಈ ಸವಾಲು ಈ ಸಾಮಾಜಿಕ ಮಾಧ್ಯಮದ ಬಳಕೆದಾರರಿಗೆ ಬೆಲ್ಟ್‌ಗಳು, ಪರ್ಸ್ ಸ್ಟ್ರಿಂಗ್‌ಗಳು ಅಥವಾ ಇತರ ಹಾನಿಕಾರಕ ವಸ್ತುಗಳನ್ನು ಬಳಸಿ ಉಸಿರುಗಟ್ಟಿಸುವುದನ್ನು ಪ್ರಚೋದಿಸುತ್ತದೆ. ಹಾಗೇಯೇ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಅವಕಾಶ ನೀಡುತ್ತದೆ ಮತ್ತು ಟಿಕ್‌ಟಾಕ್‌ ಅನ್ನು ಅತಿ ಹೆಚ್ಚು ಎಂದರೆ ಒಂದು ವ್ಯಸನದಂತೆ ಬಳಕೆ ಮಾಡುವ ಬಳಕೆದಾರರಿಗೆ ಮತ್ತು ಅವರ ಪೋಷಕರಿಗೆ ಎಚ್ಚರಿಕೆ ಸಂದೇಶ ನೀಡುವುದರಲ್ಲಿ ಕೂಡ ಈ ಟಿಕ್‌ ಟಾಕ್‌ ವಿಫಲವಾಗಿದೆ ಎಂದು ಇನ್ನು ಇತರ ಅಂಶಗಳು ಸೇರಿದಂತೆ ಹಲವಾರು ದೂರುಗಳನ್ನು ಪಟ್ಟಿಯನ್ನು ʼಸಾಮಾಜಿಕ ಮಾಧ್ಯಮ ವಿಕ್ಟಿಮ್ಸ್ ಲಾ ಸೆಂಟರ್ʼ ಮಾಡಿಕೊಂಡಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಟಿಕ್‌ ಟಾಕ್‌ನ ಪ್ರತಿಕ್ರಿಯೆ?
ಈ ಬ್ಲಾಕ್‌ಔಟ್‌ ಸವಾಲಿನಿಂದ ಸಾವನ್ನಪ್ಪಿರುವ ಮಕ್ಕಳ ಕುಟುಂಬದವರ ದುರಂತ ನಷ್ಟಕ್ಕಾಗಿ ಕಂಪನಿಯು "ಸಹಾನುಭೂತಿ" ಯನ್ನು ವ್ಯಕ್ತಪಡಿಸುವಂತೆ ಟಿಕ್‌ಟಾಕ್ ಮುಖ್ಯಸ್ಥರನ್ನು ಸ್ಯಾಕ್ರಮೆಂಟೊ ಬೀ ವರದಿಯ ಬಗ್ಗೆ ಕೇಳಿದಾಗ,ಇದು ಯಾವುದಕ್ಕೂ ಟಿಕ್‌ ಟಾಕ್‌ನ ಮುಖ್ಯಸ್ಥರು ತಲೆ ಕೆಡಿಸಿಕೊಳ್ಳದೇ ಈ ಬ್ಲಾಕ್‌ಔಟ್‌ ಸವಾಲು ಟಿಕ್‌ಟಾಕ್‌ಗಿಂತ ಮುಂಚೆಯೇ ಇದೆ ಎಂದು ಉಡಾಫೆ ಮಾತನಾಡಿದ್ದಾರೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: IAS Tina Dabi: 2ನೇ ಮದುವೆ ಬಳಿಕ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ IAS ಟೀನಾ ದಾಬಿ

ಹಾಗಾದರೆ ಮಕ್ಕಳನ್ನು ಸಾವಿಗೆ ತಳ್ಳುವ ಈ ಗೇಮ್‌ಗಳಿಂದ ಮುಕ್ತಿ ಯಾವಾಗ ಸಿಗುತ್ತದೆ. ಈ ತಕ್ಷಣವೇ ಈ ಗೇಮ್‌ ಅನ್ನು ವಿಶ್ವದಾದ್ಯಂತ ನಿಷೇಧ ಮಾಡುವದೇ ಉತ್ತಮವಾಗಿದೆ ಮತ್ತು ಈ ತರಹದ ಗೇಮ್‌ಗಳನ್ನು ಮಕ್ಕಳು ಆಡದಂತೆ ಪೋಷಕರು ಕೂಡ ಎಚ್ಚರವಹಿಸಬೇಕಾಗಿದೆ. ಮಕ್ಕಳು ಮೊಬೈಲ್‌ ಅಲ್ಲಿ ಏನು ನೋಡುತ್ತಿದ್ದಾರೆ, ಯಾವ ಗೇಮ್‌ಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಆಗಾಗ ಪರಿಶೀಲಿಸುತ್ತಿರಬೇಕು. ಆಧುನಿಕ ತಂತ್ರಜ್ಞಾನದಲ್ಲಿ ಮೊಬೈಲ್‌ನಲ್ಲಿ ಮಕ್ಕಳು ಯಾವ ಅಪ್ಲಿಕೇಶನ್‌ ಬಳಸುತ್ತಿದ್ದಾರೆ ಎಂಬುದನ್ನು ತಿಳಿಯಲು ಅನೇಕ ಅಪ್ಲಿಕೇಶನ್‌ಗಳು ಬಂದಿವೆ. ಅವುಗಳನ್ನು ಬಳಸಿ ಮಕ್ಕಳು ತಪ್ಪು ದಾರಿಗೆ ಹೋಗುತ್ತಿದ್ದರೆ ಅವರನ್ನು ಸರಿ ದಾರಿಗೆ ತಂದು ನಡೆಸುವ ಕರ್ತವ್ಯ ಪ್ರತಿಯೊಬ್ಬ ಪೋಷಕರದಾಗಿದೆ.
Published by:Ashwini Prabhu
First published: