• Home
 • »
 • News
 • »
 • explained
 • »
 • Explained: ಸಮಾಜದಲ್ಲಿ ನಡೆಯುವ ಭೀಕರ ಹತ್ಯೆಗಳಿಗೆ ಸಿನಿಮಾ ನಂಟಿದೆಯಾ? ತಜ್ಞರು ಹೇಳೋದೇನು?

Explained: ಸಮಾಜದಲ್ಲಿ ನಡೆಯುವ ಭೀಕರ ಹತ್ಯೆಗಳಿಗೆ ಸಿನಿಮಾ ನಂಟಿದೆಯಾ? ತಜ್ಞರು ಹೇಳೋದೇನು?

ಅಫ್ತಾಬ್

ಅಫ್ತಾಬ್

ಚಲನಚಿತ್ರಗಳು ಸಮಾಜದ ಮೇಲೆ ಹಾಗೂ ಸಮಾಜದಲ್ಲಿರುವ ಜನರ ಮೇಲೆ ಆಳವಾದ ಪರಿಣಾಮ ಬೀರುವುದರಿಂದ ತಯಾರಾಗುವ ಚಿತ್ರಗಳೂ ಉತ್ತಮ ಉದ್ದೇಶವನ್ನು ಹೊಂದಿರಬೇಕು ಎಂದೇ ಜನರು ಅಭಿಪ್ರಾಯಪಡುತ್ತಾರೆ.

 • Trending Desk
 • Last Updated :
 • Bangalore [Bangalore], India
 • Share this:

  ದಿನ ಕಾಲದಲ್ಲಿ ಪ್ರತಿಯೊಂದು ಘಟನೆಗಳಿಗೂ ಚಲನಚಿತ್ರವನ್ನು ದೂರುವವರು ಹಲವಾರು ಜನರಿದ್ದಾರೆ. ಮುಖ್ಯವಾಗಿ ಕೊಲೆ ಪ್ರಕರಣಗಳಲ್ಲಿ ಹೆಚ್ಚಾಗಿ ಚಲನಚಿತ್ರಗಳದ್ದೇ ಪ್ರಭಾವವಿರುತ್ತದೆ ಎಂಬುವುದೇ ಸಮಾಜದ ನಂಬಿಕೆಯಾಗಿದೆ. ಚಲನಚಿತ್ರಗಳು ಸಮಾಜದ ಮೇಲೆ ಹಾಗೂ ಸಮಾಜದಲ್ಲಿರುವ ಜನರ ಮೇಲೆ ಆಳವಾದ ಪರಿಣಾಮ ಬೀರುವುದರಿಂದ ತಯಾರಾಗುವ ಚಿತ್ರಗಳೂ ಉತ್ತಮ ಉದ್ದೇಶವನ್ನು ಹೊಂದಿರಬೇಕು ಎಂದೇ ಜನರು ಅಭಿಪ್ರಾಯಪಡುತ್ತಾರೆ.


  ಶ್ರದ್ಧಾ ಕೊಲೆಗಾರನಿಗೆ ಕೊಲೆ ಮಾಡಲು ಸ್ಫೂರ್ತಿಯಾಗಿದ್ದೇನು?


  ಇತ್ತೀಚೆಗೆ ತಾನೇ ತನ್ನ ಲಿವ್ ಇನ್ ರಿಲೇಶನ್‌ಶಿಪ್ ಸಂಗಾತಿಯಿಂದ ಕೊಲೆಯಾಗಿ ಹಲವಾರು ತುಂಡುಗಳಾದ ಶ್ರದ್ಧಾ ವಾಕರ್ ಪ್ರಕರಣಕ್ಕೂ ಇಂಗ್ಲಿಷ್ ಟಿವಿ ಸರಣಿ "ಡೆಕ್ಸ್ಟರ್” ಗೂ ಸಾಮ್ಯತೆ ಇದೆ ಎಂಬುವುದು ಜಗಜ್ಜಾಹೀರಾಗಿದೆ. ಶ್ರದ್ಧಾಳನ್ನು ಕೊಲೆ ಮಾಡಿ ಆಕೆಯ ದೇಹವನ್ನು ಅನೇಕ ತುಂಡುಗಳನ್ನಾಗಿ ಕತ್ತರಿಸಿದ ಆಕೆಯ ಪ್ರೇಮಿ ತಾನು ಈ ಟಿವಿ ಸರಣಿಯಿಂದ ಪ್ರೇರಣೆಗೊಂಡು ಶ್ರದ್ಧಾಳನ್ನು ಕೊಲೆಮಾಡಿದ್ದೇನೆ ಎಂದು ಬಹಿರಂಗವಾಗಿಯೇ ತಿಳಿಸಿದ್ದಾನೆ.


  ದೃಶ್ಯಂ ಚಿತ್ರ ಯಾವ ಕೊಲೆಗೆ ಸ್ಫೂರ್ತಿ?


  ಇದೇ ರೀತಿ ಹಿಂದಿಯ ದೃಶ್ಯಂ ಕೂಡ ಗಾಜಿಯಾಬಾದ್‌ನಲ್ಲಿ ನಡೆದ ನಾಲ್ಕು ವರ್ಷಗಳ ಹಿಂದಿನ ಕೊಲೆ ಪ್ರಕರಣಕ್ಕೂ ಸಿನಿಮಾ ನಂಟಿದೆ.  ತನ್ನ ತಂದೆಯನ್ನು ಖುದ್ದು ತಾಯಿಯೇ ಈ ಚಿತ್ರದಲ್ಲಿರುವ ಅಂಶಗಳನ್ನು ಬಳಸಿಕೊಂಡು ಕೊಂದಿದ್ದಾಳೆ ಎಂದು ಸ್ವತಃ ಮಗಳೇ ಪೊಲೀಸರಿಗೆ ಸಾಕ್ಷ್ಯ ನುಡಿದಿದ್ದಾರೆ. ದೃಶ್ಯಂನಲ್ಲಿ ಮಾಡಿದಂತೆಯೇ ತಂದೆಯ ಮೃತದೇಹವನ್ನು ಮನೆಯ ಕೆಳಗೆ ಸಿಮೆಂಟ್ ಹೊಂಡದಲ್ಲಿ ಹೂಳಲಾಯಿತು ಎಂದು ಮಗಳು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.


  Deadly Murder: ಪ್ರಿಯತಮೆಯನ್ನು ಕೊಂದು 35 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ, ಆಮೇಲೆ ಮಾಡಿದ್ದು ಕೇಳಿದ್ರೆ ಮೈ  ಜುಂ ಎನ್ನುತ್ತೆ!


  ಕೊಲೆ ಮಾಡಲು ಸಿನಿಮಾ ಸ್ಫೂರ್ತಿಯಾಗಲು ಕಾರಣವೇನು?


  ಹಿಂಸಾಚಾರವನ್ನು ಮಾಡುವ ಜನರು ಚಲನಚಿತ್ರಗಳನ್ನು ಪ್ರೇರಣೆಯಾಗಿ ಬಳಸಿಕೊಳ್ಳುವುದಕ್ಕೆ ಕಾರಣವೇನೆಂದರೆ ಅವುಗಳ ಅವರ ಮೇಲೆ ಬೀರುವ ವಿರೇಚಕ ಪರಿಣಾಮ, ಎಂಬುವುದು ಸಂಶೋಧನೆಗಳಿಂದ ತಿಳಿದು ಬಂದಿದೆ ಎಂದು ಲೋಕನಾಯಕ ಜಯಪ್ರಕಾಶ್ ನಾರಾಯಣ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ್‌ನ ಅಪರಾಧಶಾಸ್ತ್ರದ ಪ್ರಾಧ್ಯಾಪಕ ಡಾ.ಬ್ಯೂಲಾ ಶೇಖರ್ ತಿಳಿಸುತ್ತಾರೆ. ಕ್ಯಾಥರ್ಸಿಸ್ (ವಿರೇಚಕ ಪರಿಣಾಮ) ಬಲವಾದ ಭಾವನೆಗಳ ಮುಕ್ತವಾದ ಅಭಿವ್ಯಕ್ತಿಯ ಮೂಲಕ ಜನರಿಗೆ ಮಾನಸಿಕ ಪರಿಹಾರವನ್ನು ನೀಡುತ್ತದೆ ಎಂದು ಶೇಖರ್ ತಿಳಿಸಿದ್ದಾರೆ.


  ಕೊಲೆಗೀಡಾದ ಶ್ರದ್ಧಾ ವಾಕರ್ ಹಾಗೂ ಆರೋಪಿ ಅಫ್ತಾಬ್


  ಡೆಕ್ಸ್ಟರ್ ಚಿತ್ರ ಪ್ರೇರಣೆ


  ಶ್ರದ್ಧಾ ವಾಕರ್ ಕೊಲೆ ದೆಹಲಿಯನ್ನೇ ಬೆಚ್ಚಿ ಬೀಳಿಸಿದ್ದು, ತನ್ನನ್ನು ವಿವಾಹವಾಗುವಂತೆ ಶ್ರದ್ಧಾ ಪೂನವಾಲಾನನ್ನು ಕಾಡಿಸುತ್ತಿದ್ದಳು ಹೀಗಾಗಿಯೇ ನಾನು ಆಕೆಯನ್ನು ಕೊಲ್ಲಬೇಕಾಯಿತು ಎಂದು ತಿಳಿಸುವ ಪೂನಾವಾಲಾ ಕೊಂಚವೂ ಪಾಪಪ್ರಜ್ಞೆ ಅಥವಾ ಪಶ್ಚತ್ತಾಪವನ್ನು ಹೊಂದಿಲ್ಲ. ದೇಹವನ್ನು ಅನೇಕ ತುಂಡುಗಳನ್ನಾಗಿ ಕತ್ತರಿಸುವುದಕ್ಕೆ ಪ್ರೇರಣೆ ನೀಡಿದ್ದು ಡೆಕ್ಸ್ಟರ್ ಚಿತ್ರವಾಗಿದೆ ಎಂದು ವೀರಾವೇಶವಾಗಿ ಹೇಳಿಕೊಂಡಿದ್ದಾನೆ. ಡೆಕ್ಸ್ಟರ್ ಸರಣಿ ಕೊಲೆಗಾರನ ಸುತ್ತ ಹೆಣೆದ ಚಿತ್ರಕಥೆಯಾಗಿದೆ. ಬಂಧನದಿಂದ ಆರು ತಿಂಗಳ ಕಾಲ ತಪ್ಪಿಸಿಕೊಳ್ಳುತ್ತಿದ್ದ ಪೂನಾವಾಲಾನನ್ನು ಕಳೆದ ಶನಿವಾರ ಬಂಧಿಸಲಾಗಿದೆ


  ಕೊಲೆಗೆ ಪ್ರೇರಣೆಯಾಗಿದ್ದ ಚಿತ್ರಗಳು


  ಜನರು ಅಪರಾಧ ಎಸಗಲು ಚಲನಚಿತ್ರಗಳಿಂದ ಪ್ರೇರಿತರಾಗುವುದು ಮತ್ತು ಅದರಿಂದ ಪಾರಾಗುವುದು ಹೊಸದೇನಲ್ಲ, ಕೊಲೆ ನಡೆಸುವ ಘೋರತೆ ಹಾಗೂ ಅದಕ್ಕೆ ಬಳಸುವ ಅಭಿವೃದ್ಧಿಶೀಲ ಯೋಜನೆಗಳು ಮತ್ತು ಇದಕ್ಕೆ ಕಾರ್ಯತತ್ಪರರಾಗುವ ಆರೋಪಿಗಳ ನಿಖರವಾದ ಯೋಜನೆ ಯಾರನ್ನು ಬೇಕಾದರೂ ಬೆಚ್ಚಿಬೀಳಿಸುತ್ತದೆ.


  ವಾಕರ್ ಹತ್ಯೆಯು ತೀರಾ ಇತ್ತೀಚಿನದು ಮತ್ತು ಅದರ ಪರಿಣಾಮವು ಅತ್ಯಂತ ಭಯಾನಕವಾಗಿದ್ದರೂ, ಚಿತ್ರದ ನೈಜತೆಯನ್ನು ಪ್ರೇರೇಪಿಸುವ ಹಲವಾರು ನಿದರ್ಶನಗಳಿವೆ. 1971 ರ ಸೈಕಲಾಜಿಕಲ್ ಥ್ರಿಲ್ಲರ್ ಚಲನಚಿತ್ರ ಪರ್ವಾನಾದಲ್ಲಿ ಅಮಿತಾಬ್ ಬಚ್ಚನ್ ಪ್ರೇಮಿಯಾಗಿ ಮಾರ್ಪಟ್ಟ ಕೊಲೆಗಾರನಾಗಿ ನಟಿಸಿದ್ದಾರೆ. ಈ ಚಿತ್ರವು ಸಿನಿಪ್ರಿಯರ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಎಂಬ ಟೀಕೆಗೆ ಒಳಗಾಯಿತು.


  ಇದನ್ನೂ ಓದಿ: Explainer: ಅನುಪಮಾ ಗುಲಾಟಿ ಪ್ರಕರಣದ ಕರಾಳತೆ ನೆನಪಿಸಿದ ಶ್ರದ್ಧಾ ಕೊಲೆ ಕೇಸ್​​: ಪತ್ನಿಯನ್ನು 72 ತುಂಡು ಮಾಡಿದ್ದ ಪತಿ!


  ಡಿಸೆಂಬರ್ 2010 ರಲ್ಲಿ, ಡೆಹ್ರಾಡೂನ್‌ನಲ್ಲಿ ಪತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಅವಳ ದೇಹವನ್ನು 70 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದನು. ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ "ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್" ನಿಂದ ಈತ ಕೊಲೆಗೆ ಪ್ರೇರಣೆ ಪಡೆದುಕೊಂಡೆನು ಎಂದು ಪೊಲೀಸರ ಬಳಿ ಹೇಳಿದ್ದಾನೆ ಎಂಬುದು ವರದಿಯಾಗಿದೆ.


  ಚಲನಚಿತ್ರಗಳನ್ನು ದೂಷಿಸುವುದು ಸರಿಯಲ್ಲ


  ದೃಶ್ಯಂ ಚಿತ್ರದ ಎರಡನೇ ಭಾಗವನ್ನು ನಿರ್ದೇಶಿಸಿರುವ ಅಭಿಷೇಕ್ ಪಾಠಕ್ ಹೇಳುವಂತೆ ಚಲನಚಿತ್ರಗಳು ಕೇವಲ ಸಮಾಜಕ್ಕೆ ಕೆಟ್ಟದ್ದನ್ನು ಮಾಡುತ್ತದೆ ಎಂದು ಹೇಳುವುದು ಸರಿಯಲ್ಲ ಕೆಟ್ಟ ಜನರು ಅದರಲ್ಲಿರುವ ಕೆಟ್ಟ ಅಂಶವನ್ನು ಮಾತ್ರವೇ ಬಳಸಿಕೊಂಡು ಸಂಪೂರ್ಣ ಚಿತ್ರಕಥೆಯನ್ನೇ ಬದಲಾಯಿಸಿಬಿಡುತ್ತಾರೆ. ಆದರೆ ಎಲ್ಲಾ ಚಿತ್ರಗಳಲ್ಲೂ ಸಮಾಜಕ್ಕೆ ಉದ್ದೇಶ ಸಾರುವ ಒಳ್ಳೆಯ ಅಂಶಗಳೂ ಇವೆ ಎಂದು ತಿಳಿಸುತ್ತಾರೆ. ಪ್ರೇರಿತ ಅಪರಾಧಗಳಿಗೆ ಮನರಂಜನಾ ಕ್ಷೇತ್ರವೇ ಮುಖ್ಯ ಕಾರಣವೆಂದು ದೂರುವುದು ಸರಿಯಲ್ಲ ಎಂಬುದು ಅಭಿಷೇಕ್ ಮಾತಾಗಿದೆ.

  Published by:Precilla Olivia Dias
  First published: