Congress: ಕಾಂಗ್ರೆಸ್​ Vs ಕಾಂಗ್ರೆಸ್​; ಇನ್ನೂ ಪುಟಿದೇಳದ ಕೇಂದ್ರ ನಾಯಕತ್ವ: ದುಸ್ಥಿತಿಯಲ್ಲಿ ಹಳೆಯ ಪಕ್ಷ

ಮೋದಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ 2014 ರಿಂದ ಕಾಂಗ್ರೆಸ್ ನ ಹೆಜ್ಜೆಗುರುತು ಕುಗ್ಗುತ್ತಾ ಹೋಯಿತು. ಕಾಂಗ್ರೆಸ್ ಪ್ರಸ್ತುತ ಆರು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ ಪಂಜಾಬ್, ಛತ್ತೀಸ್‌ಗಡ ಮತ್ತು ರಾಜಸ್ಥಾನದಲ್ಲಿ ಬಹುಮತ ಪಡೆದುಕೊಂಡಿದ್ದು ಮೂರು ಮುಖ್ಯಮಂತ್ರಿಗಳನ್ನು ಹೊಂದಿದೆ. ಜಾರ್ಖಂಡ್, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಪಕ್ಷವು ಕೇವಲ  ಮೈತ್ರಿ ಪಾಲುದಾರ. ಆದರೆ ಇಲ್ಲಿನ ಸಾಧನೆ ಗಮನಿಸಿದರೆ ಸಂಪೂರ್ಣ ನಗಣ್ಯ ಎಂದೇ ಹೇಳಬಹುದು.

ಫೈಲ್​ ಫೋಟೋಸ್​​

ಫೈಲ್​ ಫೋಟೋಸ್​​

 • Share this:
  ಕಾಂಗ್ರೆಸ್​ ಪಕ್ಷ ತಾನು ಹಿಂದೆಂದು ಅನುಭವಿಸದಷ್ಟು ಕೆಟ್ಟ ಕಾಲವನ್ನು ಈ ಕಾಲಮಾನದಲ್ಲಿ ನೋಡುತ್ತಿದ್ದು,  ಪಕ್ಷವು ತನ್ನ ಪ್ರಭಾವವನ್ನು ತನ್ನ ಪಕ್ಷದೊಳಗೆ ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿದೆ. ಪಕ್ಷದ ಹಿರಿಯ ನಾಯಕರೇ ಬಹಿರಂಗವಾಗಿ ತಮ್ಮ ಉನ್ನತ ನಾಯಕತ್ವದ ವಿರುದ್ದ ಬಂಡೆದ್ದು ಪದೇ, ಪದೇ ಬಹಿರಂಗವಾಗಿ ಮಾತನಾಡುತ್ತಲೇ ಇದ್ದಾರೆ. ಇದನ್ನು ಕಾಂಗ್ರೆಸ್​- ಕಾಂಗ್ರೆಸ್​ ವಿರುದ್ದವೇ ಹೋರಾಡುತ್ತಿದೆ ಎಂದು ಹೇಳಬಹುದು.

  ನಿರಂತರ ಒಳಜಗಳ, ಪಕ್ಷ ಸಂಘಟನೆಗೆ ನೀಡದ ಒತ್ತು ಹಾಗೂ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹತ್ತಿರದಲ್ಲೇ ಇದ್ದರೂ ಸಹ ಸಮರ್ಥ ನಾಯಕತ್ವ ನೀಡಲು ಹಿಂದೇಟು ಹಾಕುತ್ತಿರುವುದು ಹೀಗೆ ಒಂದು ಹಳೆಯ ಪಕ್ಷವು ಸಾಲ, ಸಾಲು ವೈಫಲ್ಯಗಳಿಂದ ಅವನತಿಯ ಹಾದಿ ಹಿಡಿದಿದೆ ಎಂದೇ ಹೇಳಬಹುದು. 2024ರ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್​ ಪುಟಿದೇಳದಿದ್ದರೆ ಇತಿಹಾಸದ ಪುಟ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಲೋಕಸಭಾ ಚುನಾವಣೆ ಸೋಲಿನ ಕಾರಣ ನೀಡಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಇದು 2019 ರಲ್ಲಿ ಹಳೆಯ ಪಕ್ಷದ ಪತನ ನಿಧಾನಕ್ಕೆ ಆರಂಭವಾಯಿತು. ಇದೆಲ್ಲ ನಡೆದು ಎರಡು ವರ್ಷಗಳಾಗಿವೆ, ಸೋನಿಯಾ ಗಾಂಧಿ ಹಂಗಾಮಿ ಉಸ್ತುವಾರಿ ಹೊತ್ತುಕೊಂಡಿದ್ದಾರೆ, ಆದರೂ ಸಹ ಪಕ್ಷವು ತನ್ನ ಉನ್ನತ ನಾಯಕತ್ವವನ್ನು ಬದಲಿಸುವ ಬಗ್ಗೆ ಇನ್ನೂ ನಿರ್ಧಾರಕ್ಕೆ ಬಂದಿಲ್ಲ.


  ಮೋದಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ 2014 ರಿಂದ ಕಾಂಗ್ರೆಸ್ ನ ಹೆಜ್ಜೆಗುರುತು ಕುಗ್ಗುತ್ತಾ ಹೋಯಿತು. ಕಾಂಗ್ರೆಸ್ ಪ್ರಸ್ತುತ ಆರು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ ಪಂಜಾಬ್, ಛತ್ತೀಸ್‌ಗಡ ಮತ್ತು ರಾಜಸ್ಥಾನದಲ್ಲಿ ಬಹುಮತ ಪಡೆದುಕೊಂಡಿದ್ದು ಮೂರು ಮುಖ್ಯಮಂತ್ರಿಗಳನ್ನು ಹೊಂದಿದೆ. ಜಾರ್ಖಂಡ್, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಪಕ್ಷವು ಕೇವಲ  ಮೈತ್ರಿ ಪಾಲುದಾರ. ಆದರೆ ಇಲ್ಲಿನ ಸಾಧನೆ ಗಮನಿಸಿದರೆ ಸಂಪೂರ್ಣ ನಗಣ್ಯ ಎಂದೇ ಹೇಳಬಹುದು.


  ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇರಳದ ಪ್ರಭಾವಿ ನಾಯಕ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಕೆ ಪಿ ಅನಿಲ್ ಕುಮಾರ್ ಮಂಗಳವಾರ ಅಮಾನತುಗೊಂಡಿದ್ದರಿಂದ ಪಕ್ಷದ ಒಳ ಜಗಳಕ್ಕೆ ಹೊಸದೊಂದು ರಾಜ್ಯ ಸೇರ್ಪಡೆಗೊಂಡಿದೆ.   ಪ್ರಸ್ತುತ, ಕಾಂಗ್ರೆಸ್ ಇತರ ಮೂರು ರಾಜ್ಯಗಳಲ್ಲಿ ಬಂಡಾಯವನ್ನು ಎದುರಿಸುತ್ತಿದೆ - ಪಂಜಾಬ್, ಛತ್ತೀಸ್‌ಗಡ ಮತ್ತು ರಾಜಸ್ಥಾನ.


  "ಕಾಂಗ್ರೆಸ್ ಪಕ್ಷದೊಂದಿಗಿನ ನನ್ನ 43 ವರ್ಷಗಳ ಸಂಬಂಧವನ್ನು ನಾನು ಕೊನೆಗೊಳಿಸುತ್ತಿದ್ದೇನೆ" ಎಂದು ಕುಮಾರ್ ತಿರುವನಂತಪುರಂನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕಳೆದ ತಿಂಗಳು ಅವರ ವಿರುದ್ಧ ಪಕ್ಷ ತೆಗೆದುಕೊಂಡ ಕ್ರಮದ ನಂತರ ಅವರು ತಮ್ಮ ವಿವರಣೆಯನ್ನು ಸಲ್ಲಿಸಿದ್ದರು, ಆದರೂ ಸಹ ಅಮಾನತು ಇನ್ನೂ ರದ್ದಾಗಿರಲಿಲ್ಲ. ಇದರಿಂದ ಬೇಸತ್ತ ನಾಯಕ ರಾಜೀನಾಮೆಯನ್ನು ಘೋಷಿಸಿದರು, ಕೆಪಿಸಿಸಿ ಮುಖ್ಯಸ್ಥ ಕೆ ಸುಧಾಕರನ್ ಅವರು ಪತ್ರಿಕಾ ಟಿಪ್ಪಣಿಯನ್ನು ಬಿಡುಗಡೆ ಮಾಡಿದರು, ಕುಮಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಲಾಯಿತು ಎಂದು ಹೇಳಿದರು.


  ಎಐಸಿಸಿ ಕೇರಳ ರಾಜ್ಯದಲ್ಲಿ ಪಕ್ಷದ ಜಿಲ್ಲಾ ಮುಖ್ಯಸ್ಥರ ಆಯ್ಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಕ್ಕಾಗಿ ಕೇರಳದ ಕಾಂಗ್ರೆಸ್ ಆಗಸ್ಟ್ 29 ರಂದು ಅನಿಲ್ ಕುಮಾರ್ ಮತ್ತು ಮಾಜಿ ಶಾಸಕ ಕೆ ಶಿವದಾಸನ್ ನಾಯರ್ ಅವರನ್ನು "ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು". ಈ ಘಟನೆ ಇಷ್ಟೇಲ್ಲಾ ಘಟನೆಗಳಿಗೆ ಕಾರಣವಾಯಿತು.


  ಜಿ -23: ಪಕ್ಷದಲ್ಲಿ ಕಾಣಿಸಿದ ಮೊದಲ ಬಿರುಕು

  ಕಳೆದ ವರ್ಷ ಆಗಸ್ಟ್‌ನಲ್ಲಿ, ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಪತ್ರ ಬರೆದ ನಂತರ 23 ಹಿರಿಯ ಪರಿಣತ ನಾಯಕರುಗಳು ಮತ್ತು ಪಕ್ಷದ ಕೆಲವು ಪ್ರಬಲ ಮುಖಗಳು, ಪಕ್ಷದಲ್ಲಿ "ಮಹತ್ತರವಾದ ಬದಲಾವಣೆಗಳನ್ನು" ಮಾಡಲೇಬೇಕು ಎಂದು ಕೇಳಿದರು. ಈ ಪಟ್ಟಿಯಲ್ಲಿ ಐವರು ಮಾಜಿ ಮುಖ್ಯಮಂತ್ರಿಗಳು, ಹಾಲಿ ಸಂಸದರಾದ ಶಶಿ ತರೂರ್ ಮತ್ತು ಮನೀಶ್ ತಿವಾರಿ, ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಸದಸ್ಯರು ಮತ್ತು ಹತ್ತಾರು ವರ್ಷಗಳ ಮಾಜಿ ಕೇಂದ್ರ ಸಚಿವರು ವರ್ಷಗಳ ರಾಜಕೀಯ ಅನುಭವ ಹೊಂದಿದವರು ಸಹ ಇದ್ದಿದ್ದು ಸೋಜಿಗದ ಸಂಗತಿ.

  ಪತ್ರದಲ್ಲಿ, ಪೂರ್ಣ ಸಮಯ ಮತ್ತು ಪರಿಣಾಮಕಾರಿ ನಾಯಕತ್ವ, ಇಡೀ ದೇಶದಲ್ಲಿ ಗೋಚರಿಸುವ ಮತ್ತು ಸಕ್ರಿಯವಾಗಿರುವಂತೆ, ಕಾಂಗ್ರೆಸ್ ವರ್ಕಿಂಗ್ ಕಮಿಟಿಗೆ (CWC) ಚುನಾವಣೆ ಮತ್ತು ಪಕ್ಷದ ಪುನರುಜ್ಜೀವನದ ಗುರಿಯನ್ನು ಹೊಂದಿರುವ "ಸಾಂಸ್ಥಿಕ ನಾಯಕತ್ವ ಕಾರ್ಯವಿಧಾನ" ಕ್ಕೆ ಕರೆ ನೀಡಿದ ಪತ್ರ ಇದಾಗಿತ್ತು. ಸಹಿ ಹಾಕಿದವರು "ಸ್ವಾತಂತ್ರ್ಯದ ನಂತರ ದೇಶವು ಗಂಭೀರವಾದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ" ಪಕ್ಷದ ಪುನರುಜ್ಜೀವನವು ಅತ್ಯಗತ್ಯ ಎಂದು ಬರೆದಿದ್ದಾರೆ.

  ಫೆಬ್ರವರಿಯಲ್ಲಿ ನಡೆದ ಭಿನ್ನಮತದ ಇನ್ನೊಂದು ಸಾರ್ವಜನಿಕ ಸ್ವರೂಪ ಇತ್ತೀಚೆಗೆ ಸ್ಪೋಟಗೊಂಡಿತ್ತು, ಗುಲಾಂ ನಬಿ ಆಜಾದ್, ಆನಂದ್ ಶರ್ಮಾ ಮತ್ತು ಕಪಿಲ್ ಸಿಬಲ್ ಸೇರಿದಂತೆ G-23 ನಾಯಕರು (ಕೇರಳದ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸಾರ್ವಜನಿಕವಾಗಿ ತಮ್ಮ ಕೋಪ- ಅಸಮಾಧಾನ ಹೊರಹಾಕಿದರು. ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿ, ಮತ್ತು 'ಪಕ್ಷ ದುರ್ಬಲವಾಗುತ್ತಿದೆ ಮತ್ತು ಅದನ್ನು ಬಲಪಡಿಸಲು ಅವರು ಒಟ್ಟಾಗಿ' ಎಂದು ಹೇಳಿದರು.


  "ಇದು ಸತ್ಯವನ್ನು ಮಾತನಾಡಲು ಒದಗಿಬಂದ ಸಂದರ್ಭವಾಗಿದೆ ಮತ್ತು ನಾನು ಸತ್ಯವನ್ನು ಮಾತನಾಡುತ್ತೇನೆ. ನಾವು ಇಲ್ಲಿ ಏಕೆ ಜಮಾಯಿಸಿದ್ದೇವೆ ಎಂದರೆ?  ಕಾಂಗ್ರೆಸ್ ದುರ್ಬಲವಾಗುತ್ತಿರುವುದನ್ನು ನಾವು ನೋಡಿಕೊಂಡು ಸುಮ್ಮನಿರುವುದಕ್ಕೆ ಆಗುತ್ತಿಲ್ಲ. ನಾವು ಮೊದಲೇ ಕೂಡಿಕೊಂಡಿದ್ದೇವೆ ಮತ್ತು ನಾವು ಒಟ್ಟಾಗಿ ಕಾಂಗ್ರೆಸ್ ಅನ್ನು ಬಲಪಡಿಸಬೇಕು "ಎಂದು ಸಿಬಲ್ ಜಮ್ಮುವಿನಲ್ಲಿ ಮಹಾತ್ಮಾ ಗಾಂಧಿಗೆ ನೆನಪಿನ  ಕಾರ್ಯಕ್ರಮವನ್ನು ಉದ್ದೇಶಿಸಿ ಹೇಳಿದ್ದರು.


  ಈ ರೀತಿ ಪತ್ರ ಬರೆದ ಬಂಡಾಯ ನಾಯಕರಲ್ಲಿ ಒಬ್ಬರಾಗಿದ್ದ ಆಜಾದ್ ಅವರ ರಾಜ್ಯಸಭಾ ಅವಧಿ ಮುಗಿದ ನಂತರವೂ ಸಹ ಮರುನಾಮಕರಣ ಮಾಡಲಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.


  ಪಂಜಾಬ್: ಜಿಗುಟಾಗುತ್ತಿರುವ ಕ್ರಿಕೆಟಿಗ ಮತ್ತು ಕ್ಯಾಪ್ಟನ್​ ಸಂಬಂಧ

  ಪಂಜಾಬಿನಲ್ಲಿ, ನವಜೋತ್ ಸಿಂಗ್ ಸಿಧು ಅವರು ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ಉಸ್ತುವಾರಿ ಹರೀಶ್ ರಾವತ್ ರಿಂದ ಪದೇ ಪದೇ ಸಂಧಾನಕ್ಕೆ ಒಳಗಾದರೂ ಸಹ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯಾವುದೇ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಉಭಯ ನಾಯಕರು ದೀರ್ಘಕಾಲದವರೆಗೆ ತೆರೆಮರೆಯಲ್ಲೇ ಗುದ್ದಾಡುತ್ತಿದ್ದರು, ಒಮ್ಮೆಗೆ ಬಹಿರಂಗವಾಗಿ ಈ ಗುದ್ದಾಟ ತಾರಕಕ್ಕೆ ಏರಿದ ಮೇಲೆ, ಇವರಿಬ್ಬರ ಭಿನ್ನಾಭಿಪ್ರಾಯಗಳು ತಾರಕಕ್ಕೇರಿತು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ತಮ್ಮ ಕ್ರಿಕೆಟ್ ದಿನಗಳ ಸಹೋದ್ಯೋಗಿ ಸಿಧುವನ್ನು, ಆಗಸ್ಟ್ 2018 ರಲ್ಲಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದರು. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರೋಧದ ಹೊರತಾಗಿಯೂ ಸಿಧು ಪಾಕಿಸ್ತಾನಕ್ಕೆ ಹೋದರು ಮತ್ತು ಸಿಖ್ ಯಾತ್ರಿಕರಿಗೆ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ತೆರೆಯುವ ಇಸ್ಲಾಮಾಬಾದ್‌ನ ಉದ್ದೇಶದ ಬಗ್ಗೆ ಮಾತನಾಡಿದಾಗ ದೇಶದ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಜ್ವಾ ಅವರನ್ನು ಅಪ್ಪಿಕೊಂಡರು.

  ಮುಂದೆ 2019 ರಲ್ಲಿ, ಚಂಡೀಗಡದಿಂದ ಅವರ ಪತ್ನಿಗೆ ಲೋಕಸಭಾ ಟಿಕೆಟ್ ನಿರಾಕರಿಸಿದ ನಂತರ ಸಿಧು ಅವರು ಕ್ಯಾಪ್ಟನ್​ ಅವರನ್ನು ದೂಷಿಸಿದರು. ಈ ಆರೋಪವನ್ನು ಮುಖ್ಯಮಂತ್ರಿ ನಿರಾಕರಿಸಿದ್ದರು.


  ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2015 ರ ಕೋಟ್ಕಾಪುರ ಪೊಲೀಸ್ ಫೈರಿಂಗ್ ಘಟನೆಯ ತನಿಖಾ ವರದಿಯನ್ನು ರದ್ದುಗೊಳಿಸಿದ ನಂತರ ಈ ವರ್ಷ ಏಪ್ರಿಲ್ ನಲ್ಲಿ ಸಿಎಂ ಮತ್ತು ಸಿಧು ನಡುವಿನ ಉದ್ವಿಗ್ನತೆ ಭುಗಿಲೆದ್ದಿತು. 2015 ರ ನಂತರದ ಪೊಲೀಸ್ ಗುಂಡಿನ ಘಟನೆಗಳಲ್ಲಿ ನ್ಯಾಯದಾನ ವಿಳಂಬವಾಗುತ್ತಿದೆ ಎಂಬ ಆರೋಪದ ಮೇಲೆ ಸಿಧು ತಮ್ಮ ಟ್ವೀಟ್ ಮೂಲಕ ಸಿಎಂ ಮೇಲೆ ದಾಳಿ ನಡೆಸಿದ್ದರು. ಅಮೃತಸರ ಶಾಸಕರು 2019 ರಲ್ಲಿ ತಮ್ಮ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಬಂಡವಾಳ ಕಳೆದುಕೊಂಡ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2017 ರ ವಿಧಾನಸಭೆ ಚುನಾವಣೆಗೂ ಮುನ್ನ ಸಿದ್ದು ಬಿಜೆಪಿ ತೊರೆದ ನಂತರ ಕಾಂಗ್ರೆಸ್ ಸೇರಿದ್ದರು.

  ರಾಜಸ್ಥಾನ: ಅಸ್ತವ್ಯಸ್ತವಾದ ಸವಾರಿ

  ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಶೀತಲ ಸಮರವು 2018 ರ ವಿಧಾನಸಭಾ ಚುನಾವಣೆಯ ನಂತರ ಗೆಹ್ಲೋಟ್  ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವುದರೊಂದಿಗೆ ಪೈಲಟ್‌ಗೆ ಹಿನ್ನಡೆಯಾಯಿತು. ಪೈಲಟ್‌ನ ಬೆಂಬಲಿಗರು ಪಕ್ಷದ ವಿಜಯಕ್ಕೆ ಸಚಿನ್ ಕಾರಣ ಆದರೂ ಅವರಿಗೆ ಏಕೆ ಸ್ಥಾನವಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಕಳೆದ ವರ್ಷ ಜುಲೈನಲ್ಲಿ ಕಾಂಗ್ರೆಸ್ ಪೈಲಟ್ ಅವರನ್ನು ರಾಜಸ್ಥಾನದ ಉಪಮುಖ್ಯಮಂತ್ರಿ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥರನ್ನಾಗಿ ಮಾಡಿತು.

  ಗೆಹ್ಲೋಟ್ ವಿರುದ್ಧ ಬಂಡಾಯವೆದ್ದರು ಮತ್ತು ರಾಜಸ್ಥಾನ ಸ್ಪೀಕರ್ ಅವರು ಎರಡು ಕಾಂಗ್ರೆಸ್ ಶಾಸಕಾಂಗಕ್ಕೆ ಹಾಜರಾಗಲು ಪಕ್ಷದ ವಿಪ್ ಅನ್ನು ಧಿಕ್ಕರಿಸಿದ ನಂತರ ಅನರ್ಹತೆ ನೋಟಿಸ್ ಕಳುಹಿಸಿದರು. ರಾಜಸ್ಥಾನದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ತರಹದ ವೈಫಲ್ಯಕ್ಕೆ ಹೆದರಿ, ಅವರನ್ನು ಪಕ್ಷದ ಹೈಕಮಾಂಡ್ ಪಕ್ಷದಲ್ಲಿ ಉಳಿಯಲು ಸಾಕಷ್ಟು ಸಮಾಧಾನಪಡಿಸಿತು. ಸಿಂಧಿಯಾ ಕಳೆದ ವರ್ಷ ತನ್ನ 20 ನಿಷ್ಠಾವಂತ ಶಾಸಕರೊಂದಿಗೆ ಬಿಜೆಪಿಗೆ ಹಾರುವ ಮೂಲಕ ಕಮಲ್ ನಾಥ್ ಸರ್ಕಾರವನ್ನು ಮಧ್ಯಪ್ರದೇಶದಲ್ಲಿ ಬೀಳಿಸಿದ್ದರು.

  ಛತ್ತೀಸ್‌ಗಡ: 50-50ಯಲ್ಲಿದೆ ಕಾಂಗ್ರೆಸ್​​ ಭವಿಷ್ಯ

  ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಆರೋಗ್ಯ ಸಚಿವ ಟಿಎಸ್ ಸಿಂಗ್ ದೇವ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕಳೆದ ತಿಂಗಳು ದೆಹಲಿಗೆ ಕರೆಸಿಕೊಂಡಿದೆ, ಅಲ್ಲಿ ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳುವಂತೆ ಮತ್ತು ಅದನ್ನು ಶೀಘ್ರದಲ್ಲೇ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದರು. ಛತ್ತೀಸ್‌ಗಡದ ರಾಜಕೀಯ ಸಭೆಯಲ್ಲಿ ಸಿಎಂ ಹೇಳಿದ ಎರಡೂವರೆ ವರ್ಷಗಳ ಸೂತ್ರ ಚರ್ಚೆಯಲ್ಲಿದೆ ಎಂಬ ಊಹೆಗಳು ಹರಿದಾಡುತ್ತಿವೆ.

  2018 ರಲ್ಲಿ ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮಾಡಿಕೊಂಡ ಒಪ್ಪಂದದ ಪ್ರಕಾರ, 2.5 ವರ್ಷಗಳ ನಂತರ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತು ಆದರೆ ಭಗೇಲ ತಮ್ಮ ಸ್ಥಾನ ಬಿಟ್ಟುಕೊಡಲು ನಿರಾಕರಿಸಿದ್ದರು. ಇಬ್ಬರು ರಾಜಕಾರಣಿಗಳ ನಡುವೆ ಭಿನ್ನಾಭಿಪ್ರಾಯ ಬೆಳೆಯಲು ಇದು ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ಹೇಳುತ್ತವೆ. ವಾರಗಳ ಹಿಂದೆ, ರಾಜ್ಯದಲ್ಲಿ ಆರೋಗ್ಯ ರಕ್ಷಣೆಯನ್ನು ಹೆಚ್ಚಿಸಲು ಖಾಸಗಿ ಹೂಡಿಕೆಯನ್ನು ಮಾಡಿಕೊಳ್ಳುವ ಬಘೇಲ್ ಸರ್ಕಾರದ ಯೋಜನೆಯ ವಿರುದ್ದ ದೇವೋ ಹರಿಹಾಯ್ದಿದ್ದರು.


  ಇದನ್ನೂ ಓದಿ: Uttara Pradesh: ಮಾಜಿ ಶಾಸಕನ ಮಗನ ಮೇಲೆ ಅತ್ಯಾಚಾರ ಆರೋಪ: ಮದುವೆಯಾಗುವುದಾಗಿ ನಂಬಿಸಿ ಮೋಸ

  ಪಕ್ಷದಲ್ಲಿ ಮತ್ತೆ ಆಂತರಿಕ ಕಲಹ ತಲೆದೋರಿತು, ಆರೋಗ್ಯ ಸಚಿವರು ಪಕ್ಷದ ಕಚೇರಿ ರಾಜೀವ್ ಭವನವನ್ನು ಸರ್ಗುಜದಲ್ಲಿ ಉದ್ಘಾಟಿಸಿದರು ಮತ್ತು ಆವರಣವನ್ನು ಆಹಾರ ಸಚಿವ ಅಮರ್‌ಜೀತ್ ಭಗತ್ ರಿಬ್ಬನ್ ಕತ್ತರಿಸುವ ಮೂಲಕ ಮರು ಉದ್ಘಾಟಿಸಿದರು. ಇಬ್ಬರೂ ನಾಯಕರ ಬೆಂಬಲಿಗರು ಕೂಡ ಹೊಡೆದಾಡಿಕೊಂಡಿದ್ದರು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: