Explained: 22 ನಾಯಿಗಳ ಮಧ್ಯೆ 2 ವರ್ಷ ಕೋಣೆಯಲ್ಲಿ ಬಂಧಿಯಾಗಿದ್ದ ಬಾಲಕ! ಪಾಪಿ ತಂದೆ-ತಾಯಿ ಈ ಶಿಕ್ಷೆ ಕೊಟ್ಟಿದ್ದೇಕೆ?

ಕೋಂಡ್ವಾದ ಕೃಷ್ಣೈ ಕಟ್ಟಡದಲ್ಲಿ, ಹೆತ್ತವರೇ 22 ನಾಯಿಗಳ ಮಧ್ಯೆ 11 ವರ್ಷದ ಮಗುವನ್ನು 2 ವರ್ಷಗಳ ಕಾಲ ಬಂಧಿಯಾಗಿ ಇಟ್ಟಿದ್ದ ಘಟನೆ ನಡೆದಿದೆ. ಸ್ವಂತ ಮಗನ ಬಗ್ಗೆ ಕಾಳಜಿ ವಹಿಸದೆ, ಆತನನ್ನು ಹೊಲಸಿನ ನಡುವೆ ಮತ್ತು ನಾಯಿಗಳ ಮಧ್ಯೆ ಬಿಟ್ಟು ಬಿಡುವ ಅಪರಾಧವನ್ನು ಆತನ ಹೆತ್ತವರೇ ಮಾಡಿದ್ದಾರೆ ಎಂಬುವುದು ನಂಬಲು ಅಸಾಧ್ಯವಾದರೂ ಇದೊಂದು ಕಹಿ ಸತ್ಯ. ಅಷ್ಟಕ್ಕೂ ಹೆತ್ತವರೇ ಪಾಪಿಗಳಂತೆ ವರ್ತಿಸಿದ್ದು ಏಕೆ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ...

ನಾಯಿ ಜೊತೆ ಬಾಲಕ ಬಂಧಿಯಾಗಿದ್ದ ಅಪಾರ್ಟ್‌ಮೆಂಟ್

ನಾಯಿ ಜೊತೆ ಬಾಲಕ ಬಂಧಿಯಾಗಿದ್ದ ಅಪಾರ್ಟ್‌ಮೆಂಟ್

  • Share this:
ಕಾಡಲ್ಲಿ ಪ್ರಾಣಿಗಳ (Animals) ಜೊತೆ ಬೆಳೆದು, ಅವುಗಳಂತೆಯೇ ವರ್ತಿಸುತ್ತಿದ್ದ ಟಾರ್ಜನ್ (Tarzan), ಮೋಗ್ಲಿಯ (Mowgli) ಕಥೆಗಳನ್ನು (Stories) ನಾವೆಲ್ಲಾ ಕೇಳಿರುತ್ತೇವೆ. ಆದರೆ ನಾಡಲ್ಲಿ, ನಾಗರೀಕ ಸಮಾಜದ (Civilized society) ನಡುವೆ ಇದ್ದರೂ, ಪ್ರಾಣಿಗಳ ಜೊತೆಗಿದ್ದು ಅವುಗಳಂತೆಯೇ ವರ್ತಿಸುವವರ ಬಗ್ಗೆ ಎಂದಾದರೂ ಕೇಳಿದ್ದೀರಾ? ಪುಣೆಯ (Pune) ಕೊಂಡ್ವಾ ಪ್ರದೇಶದಲ್ಲಿ (Kondwa region) ಪುಟ್ಟ ಬಾಲಕನೊಬ್ಬನ (Little boy) ಸ್ಥಿತಿ ಹೀಗೆ ಆಗಿದೆ. ಕಥೆಯ ಪಾತ್ರಗಳಾದ (Character) ಟಾರ್ಜನ್, ಮೋಗ್ಲಿ ಪ್ರಾಣಿಗಳ ಅಕ್ಕರೆಯಲ್ಲಿ ಬೆಳೆದವರು, ಆದರೆ ಕೋಂಡ್ವಾದ ಬಾಲಕನ ದುಸ್ಥಿತಿಗೆ, ಅಕ್ಕರೆಯಿಂದ ಸಾಕಬೇಕಿದ್ದ ಹೆತ್ತವರೇ (Parents) ಕಾರಣರಾಗಿದ್ದಾರೆ.

22 ನಾಯಿಗಳ ಮಧ್ಯೆ 2 ವರ್ಷಗಳ ಕಾಲ ಬಂಧಿಯಾದ ಬಾಲಕ

ಹೌದು, ಕೋಂಡ್ವಾದ ಕೃಷ್ಣೈ ಕಟ್ಟಡದಲ್ಲಿ, ಹೆತ್ತವರೇ, 22 ನಾಯಿಗಳ ಮಧ್ಯೆ 11 ವರ್ಷದ ಮಗುವನ್ನು 2 ವರ್ಷಗಳ ಕಾಲ ಬಂಧಿಯಾಗಿ ಇಟ್ಟಿದ್ದ ಘಟನೆ ನಡೆದಿದೆ. ಸ್ವಂತ ಮಗನ ಬಗ್ಗೆ ಕಾಳಜಿ ವಹಿಸದೆ, ಆತನನ್ನು ಹೊಲಸಿನ ನಡುವೆ ಮತ್ತು ನಾಯಿಗಳ ಮಧ್ಯೆ ಬಿಟ್ಟು ಬಿಡುವ ಅಪರಾಧವನ್ನು ಆತನ ಹೆತ್ತವರೇ ಮಾಡಿದ್ದಾರೆ ಎಂಬುವುದು ನಂಬಲು ಅಸಾಧ್ಯವಾದರೂ ಇದೊಂದು ಕಹಿ ಸತ್ಯ. ಅಲ್ಲಿನ ನಿವಾಸಿಯೊಬ್ಬರು ಆ ಹುಡುಗನ ಪರಿಸ್ಥಿತಿಯನ್ನು ಕಂಡು, ಸಾಮಾಜಿಕ ಕಾರ್ಯಕರ್ತರಿಗೆ ಮಾಹಿತಿ ನೀಡಿದ ಬಳಿಕ, ಅವರು ಪೊಲೀಸರನ್ನು ಸ್ಥಳಕ್ಕೆ ಕರೆಸಿದಾಗ ಈ ಕರಾಳ ಸತ್ಯ ಬಯಲಾಯಿತು.

ಬಾಲಕನ ದುಸ್ಥಿತಿಯ ಬಗ್ಗೆ ತಿಳಿಸಿದ ಪಕ್ಕದ ನಿವಾಸಿ

ಆ ಹುಡುಗನನ್ನು ಅಲ್ಲಿಂದ ರಕ್ಷಿಸಿದಾಗ, ಆತನಿಗೆ ತಾನು ಯಾರೆಂಬುವುದು ಬಹುಪಾಲು ಮರೆತೇ ಹೋಗಿತ್ತು. ಆ ಹುಡುಗ, ಆತನ ಹೆತ್ತವರು ಮತ್ತು ನಾಯಿಗಳು, ಒಂದು ಬೆಡ್‍ರೂಮ್‍ನ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದರು. ಹೆತ್ತವರು ಆತನಿಗೆ ನಾಯಿಗಳಿಗೆ ಕಚ್ಚಲು ಮತ್ತು ಅವುಗಳಂತೆ ವರ್ತಿಸಲು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Viral News: ಚಿಕ್ಕೋಳಿದ್ದಾಗ ಮಕ್ಕಳು ನೋಡಿ ನಗ್ತಿದ್ರು, ಈಗ ಈಕೆಯ ಕಣ್ಣಿಗೆ ದುನಿಯಾ ಫಿದಾ

ಇದನ್ನೆಲ್ಲಾ ಗಮನಿಸಿ, ಕೊನೆಗೂ ಎಚ್ಚೆತ್ತ, ಅಲ್ಲಿನ ನಿವಾಸಿಯೊಬ್ಬರು, ಮಕ್ಕಳಿಗೆ ಸಂಬಂಧಿಸಿದ ಎನ್‍ಜಿಓ ಒಂದಕ್ಕೆ ಕರೆ ಮಾಡಿ, ಬಾಲಕನ ದುಸ್ಥಿತಿಯ ಬಗ್ಗೆ ತಿಳಿಸಿದ್ದರು. ಅದಕ್ಕೆ ಸ್ಪಂದಿಸಿದ ಅಲ್ಲಿನ ಕಾರ್ಯಕರ್ತರು, ಮೇ 4 ಕ್ಕೆ ಆಪಾರ್ಟ್‍ಮೆಂಟ್‍ಗೆ ಭೇಟಿ ನೀಡಿದ್ದು, ಆ ಹುಡುಗನ ವಾಸ ಸ್ಥಾನದಲ್ಲಿನ ಅಸ್ವಚ್ಛತೆಯನ್ನು ಕಂಡು ಗಾಬರಿಯಾಗಿದ್ದರು.

ಬುದ್ಧಿಮಾತು ಹೇಳಿದರು ಸರಿಹೋಗದ ಹೆತ್ತವರು

ಸಾಮಾಜಿಕ ಕಾರ್ಯಕರ್ತರು, ಆ ಬಾಲಕನ ಹೆತ್ತವರಿಗೆ ಬುದ್ಧಿಮಾತು ಹೇಳಿ, ಅಲ್ಲಿಂದ ಮರಳಿದ್ದರು. ಮರುದಿನ ಮತ್ತೆ ಬಾಲಕನ ಸ್ಥಿತಿಯನ್ನು ಪರೀಕ್ಷಿಸಲು ಹೋದ ಅವರಿಗೆ ಅಚ್ಚರಿ ಕಾದಿತ್ತು. ಮನೆಗೆ ಹೊರಗಿನಿಂದ ಬೀಗ ಹಾಕಿ, ಆ ಬಾಲಕನನ್ನು ಮನೆಯೊಳಗೆ ಕೂಡಿ ಹಾಕಲಾಗಿತ್ತು. ಕಿಟಕಿಯಿಂದ ಒಳಗೆ ಇಣುಕಿ ನೋಡಿದಾಗ, ಆತ ನಾಯಿಗಳ ಜೊತೆ ಒಂಟಿಯಾಗಿದ್ದ. ಅವರು ಮಕ್ಕಳ ಕಲ್ಯಾಣ ಸಮಿತಿಗೆ ಈ ಕುರಿತು ಮಾಹಿತಿ ನೀಡಿ, ಆತನನ್ನು ರಕ್ಷಿಸಲು ಆದೇಶ ನೀಡುವಂತೆ ಕೋರಿಕೆ ಸಲ್ಲಿಸಿದರು.

ನಾಯಿಗಳನ್ನು ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿ ಇಡುವುದು ಪ್ರಾಣಿ ಹಿಂಸೆಗೆ ಸಮ

ಈ ಕುರಿತು, ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ ಮಗುವನ್ನು ರಕ್ಷಿಸುವುದು ಸುಲಭದ ಕೆಲಸವಾಗಿರಲಿಲ್ಲ. ಜೊತೆಗಿದ್ದ ನಾಯಿಗಳು, ಆಕ್ರಮಣ ಮಾಡುವ ಸಾಧ್ಯತೆ ಇತ್ತು. “ಮಗುವನ್ನು ರಕ್ಷಿಸಲು ಪೊಲೀಸರಿಗೆ ನಿಜಕ್ಕೂ ಕಷ್ಟವಾಗಿತ್ತು. ಎಲ್ಲಾ ನಾಯಿಗಳು ಬೀದಿ ನಾಯಿಗಳಾಗಿದ್ದವು ಮತ್ತು ಅವುಗಳಿಗೆ ಸ್ಟೆರಲೈಸ್ ಮಾಡಿರಲಿಲ್ಲ. ನಾಯಿಗಳನ್ನು ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿ ಇಡುವುದು ಕೂಡ ಪ್ರಾಣಿ ಹಿಂಸೆಗೆ ಸಮ” ಎಂದು ಹಿರಿಯ ಪೊಲೀಸ್ ಇನ್‍ಸ್ಪೆಕ್ಟರ್ ಸರ್ದಾರ್ ಪಾಟೀಲ್ ಹೇಳಿದರು.

ದಂಪತಿ ವಿರುದ್ಧ ತನಿಖೆ

ದಂಪತಿ ಯಾವುದೇ ಅನುಮತಿ ಪಡೆದಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಯು ನಿರ್ಧಾರವನ್ನು ತಿಳಿಸಿದ ಬಳಿಕ, ಆ ದಂಪತಿಯನ್ನು ಬಂಧಿಸಲಾಗುವುದು. ಬಾಲಕನ ಮನೆಯಲ್ಲಿದ್ದ ನಾಯಿಗಳನ್ನು, ಆಶ್ರಯ ತಾಣಕ್ಕೆ ಕೊಂಡೊಯ್ಯುವಂತೆ, ಪೊಲೀಸರು ನಗರ ಪಾಲಿಕೆಗೆ ಪತ್ರ ಬರೆದಿದ್ದಾರೆ.

ನಾಯಿಯಂತೆ ವರ್ತಿಸುತ್ತಿದ್ದ ಮಗು

“ಮಗು ಒಂದು ನಾಯಿಯಂತೆ ವರ್ತಿಸುತ್ತಿರುವುದನ್ನು ಗಮನಿಸಿ ನಮಗೆ ಅಘಾತವಾಯಿತು. ಸರಿಯಾದ ಪೋಷಣೆ ಇಲ್ಲದೆ, ಆತ ದುರ್ಬಲನಾಗಿದ್ದಾನೆ ಮತ್ತು ಆತನ ಮನಸ್ಸಿನ ಮೇಲೂ ಪ್ರಭಾವ ಆಗಿದೆ. ಆ ದಂಪತಿ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಬದಲಿಗೆ ಹೊರಗಿನಿಂದ ಆಹಾರ ಆರ್ಡರ್ ಮಾಡುತ್ತಿದ್ದರು. ಅವರು ಮನೆಯಲ್ಲಿ ಅಡುಗೆ ಮಾಡಲು ಸಿಲಿಂಡರ್ ಅಥವಾ ಯಾವುದೇ ವ್ಯವಸ್ಥೆಯನ್ನು ಹೊಂದಿರಲಿಲ್ಲ.

ದಂಪತಿ ವ್ಯಾಪಾರವನ್ನು ಹೊಂದಿದ್ದರು, ಆದರೆ ಅದು ನಿಂತುಹೋಗಿತ್ತು. ಅಂದಿನಿಂದ ಅವರಿಬ್ಬರೂ ಏನೂ ಮಾಡುತ್ತಿಲ್ಲ. ಅವರು ತಿಂಡಿಯ ಪೊಟ್ಟಣದ ರ್‍ಯಾಪರ್ ಗಳನ್ನು ಕೂಡ ಮನೆಯೊಳಗೆ ಬೀಸಾಡಿಟ್ಟಿದ್ದರು. ಇನ್ನೂ ಅಸಹ್ಯವೆಂದರೆ, ಸಾಕು ಪ್ರಾಣಿಗಳು ಮನೆಯಲ್ಲೇ ಮಲ-ಮೂತ್ರ ವಿಸರ್ಜನೆ ಮಾಡಿದ್ದರಿಂದ ಸೊಸೈಟಿಯ ಆವರಣದಲ್ಲಿ ಮತ್ತು ಸುತ್ತಮುತ್ತ ಕೆಟ್ಟ ವಾಸನೆ ಹರಡಿತ್ತು ”ಎಂದು ಧ್ಯಾನ ದೇವಿ ಚೈಲ್ಡ್‌‌‌‌‌‌‌ಲೈನ್‍ನ ನಿರ್ದೇಶಕಿ ಅನುರಾಧ ಸಹಸ್ರ ಬುಧೆ ಹೇಳಿದರು.

ಇದನ್ನೂ ಓದಿ: ಸೂಪರ್ ಆಗಿದ್ರೂ ಈ ಊರಿನ ಯುವಕರಿಗೆ ಯಾರೂ ಹೆಣ್ಣು ಕೊಡಲ್ಲ! ಮದುವೆಯಾಗಿ ಬಂದ್ರೂ ಹೆಣ್ಮಕ್ಕಳಿಗೆ ಗಂಡ ಮುಖ್ಯವೇ ಅಲ್ಲ

ಹೆತ್ತವರು ಈ ರೀತಿ ಮಾಡಲು ಕಾರಣವೇನು?

ಆ ಹುಡುಗನ್ನು ಶಾಲೆಗೆ ಕಳುಹಿಸಿದಾಗ ಆತ ನಾಯಿಯಂತೆ ವರ್ತಿಸಿದ್ದಾನೆ ಮತ್ತು ಬೇರೆ ಮಕ್ಕಳನ್ನು ಕಚ್ಚಿದ್ದಾನೆ ಎಂದು ಕಾಣುತ್ತದೆ. ಹಾಗಾಗಿ ಅವನ ಹೆತ್ತವರು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿ, ಅವನನ್ನು ಮನೆಯಲ್ಲೇ ಕೂಡಿ ಹಾಕಿದ್ದರು. “ಅವರು ಯಾವತ್ತೂ ಅವನನ್ನು ಹೊರಗೆ ಕರೆದುಕೊಂಡು ಹೋಗಿಲ್ಲ. ಅವನನ್ನು ರಕ್ಷಿಸಿ ಹೊರಗೆ ಕರೆದುಕೊಂಡು ಬಂದಾಗ, ಆಕಾಶ ಮತ್ತು ತನ್ನ ಸುತ್ತಮುತ್ತಲಿನ ವಸ್ತುಗಳನ್ನು ನೋಡಿ ಅಶ್ಚರ್ಯಚಕಿತನಾದಂತೆ ಕಂಡು ಬಂತು” ಎಂದು ಆಕೆ ಹೇಳಿದರು.

ನಾಯಿಗಳು ಸತ್ತಿದ್ದರೂ ಶವವನ್ನು ಹೊರಗೆ ತೆಗೆದಿರಲಿಲ್ಲ

ಆ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಮತ್ತು ನಾಯಿಯಂತೆ ವರ್ತಿಸುತ್ತಿರುವ ಆತನಿಗೆ ಸೂಕ್ತ ಕೌನ್ಸಿಲಿಂಗ್ ಅಗತ್ಯವಿದೆ ಎಂದು ಹೇಳಲಾಗಿದೆ. “ಪೋಷಕರು ಅನರ್ಹರಾಗಿದ್ದರೆ, ಮಗುವನ್ನು ನಾವು ಅಲ್ಲಿ ಬಿಡಲು ಸಾಧ್ಯವಿಲ್ಲ. ಆ ಮನೆಯಲ್ಲಿ ಎರಡು ನಾಯಿಗಳು ಸತ್ತಿದ್ದರೂ ಶವವನ್ನು ಹೊರಗೆ ತೆಗೆದಿರಲಿಲ್ಲ. ಆ ಮನೆ ಗಲೀಜಾಗಿದ್ದಿದ್ದು ಮಾತ್ರವಲ್ಲ, ಮಗುವಿಗೂ ಎಷ್ಟೋ ದಿನಗಳಿಂದ ಸ್ನಾನ ಮಾಡಿಸಿರಲಿಲ್ಲ. ಕ್ರಿಮಿಕೀಟಗಳಿಂದ ಅವನ ಜೀವಕ್ಕೆ ಅಪಾಯವಿತ್ತು” ಎಂದು ಸಹಸ್ರಬುಧೆ ಹೇಳಿದ್ದಾರೆ.
Published by:Ashwini Prabhu
First published: