• Home
 • »
 • News
 • »
 • explained
 • »
 • Invention Story: ಈ ಮಗ ಅಮ್ಮನಿಗೋಸ್ಕರ ರೋಬೋಟ್​ ಮಾಡಿದ್ದಾನೆ, ನೀವ್ ಏನ್ ಮಾಡಿದ್ದೀರಾ?

Invention Story: ಈ ಮಗ ಅಮ್ಮನಿಗೋಸ್ಕರ ರೋಬೋಟ್​ ಮಾಡಿದ್ದಾನೆ, ನೀವ್ ಏನ್ ಮಾಡಿದ್ದೀರಾ?

ಸಾಂಧರ್ಭಿಕ ಚಿತ್ರ

ಸಾಂಧರ್ಭಿಕ ಚಿತ್ರ

ಇಂದಿನ ಕಾಲದಲ್ಲಿ ಹೆತ್ತ ಅಪ್ಪ ಅಮ್ಮನನ್ನು ಕಡೆಗಾಣಿಸುವವರೇ ಹೆಚ್ಚು. ಹಾಗಿದ್ದಾಗ ಇಲ್ಲೊಬ್ಬ ಮಗ ತಾಯಿಗೋಸ್ಕರ ರೋಬೋಟ್‌ ತಯಾರಿಸಿದ್ದಾನೆ. ತಾಯಿ ಮನೆಗೆಲಸದಲ್ಲಿ ಹೆಣಗಾಡುತ್ತಿರುವುದನ್ನು ನೋಡಲಾಗದೇ 17 ವರ್ಷದ ಮಗ ಆಕೆಗೆ ಸಹಾಯವಾಗಲಿ ಅನ್ನೋ ಕಾರಣಕ್ಕೆ ರೋಬೋಟ್‌ ತಯಾರಿಸಿದ್ದಾನೆ.

 • Share this:

  ಇಂದಿನ ಕಾಲದಲ್ಲಿ (Todays time) ಹೆತ್ತ ಅಪ್ಪ ಅಮ್ಮನನ್ನು(Father- mother) ಕಡೆಗಾಣಿಸುವವರೇ ಹೆಚ್ಚು. ಹಾಗಿದ್ದಾಗ ಇಲ್ಲೊಬ್ಬ ಮಗ (Son) ತಾಯಿಗೋಸ್ಕರ ರೋಬೋಟ್‌ (Robot) ತಯಾರಿಸಿದ್ದಾನೆ. ತಾಯಿ ಮನೆಗೆಲಸದಲ್ಲಿ ಹೆಣಗಾಡುತ್ತಿರುವುದನ್ನು ನೋಡಲಾಗದೇ 17 ವರ್ಷದ (17 Year Old) ಮಗ ಆಕೆಗೆ ಸಹಾಯವಾಗಲಿ ಅನ್ನೋ ಕಾರಣಕ್ಕೆ ರೋಬೋಟ್‌ ತಯಾರಿಸಿದ್ದಾನೆ. ಅಂದಹಾಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ರೋಬೋಟ್‌ ತಯಾರಿಸಿದವನ ಹೆಸರು ಮುಹಮ್ಮದ್‌ ಶಿಯಾದ್‌ ಚಾಥೋತ್‌ ಅಂತ. ಕೇರಳದ (Kerala) ವೆಂಗಾಡ್‌ನ ಇ ಕೆ ನಾಯನಾರ್ ಸ್ಮಾರಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 12ನೇ (12 Puc) ತರಗತಿಯ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ (Computer Science Student). ಅಷ್ಟಕ್ಕೂ ಹೀಗೆ ರೋಬೋಟ್‌ ತಯಾರಿಸಲು ಕಾರಣವಾಗಿದ್ದು ಒಂದು ಸಣ್ಣ ಘಟನೆ.


  ರೋಬೋಟ್‌ ಆವಿಷ್ಕಾರಕ್ಕೆ ಕಾರಣವಾಯ್ತು ತಾಯಿಯ ಮಾತು!


  2019 ರಲ್ಲಿ, ಕಣ್ಣೂರಿನ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿರೋವಾಗ, ಮುಹಮ್ಮದ್ ಶಿಯಾದ್ ಚಾಥೋತ್ ಮತ್ತು ಅವರ ಕುಟುಂಬಕ್ಕೆ ರೋಬೋಟ್ ಫುಡ್‌ ಸಪ್ಲೈ ಮಾಡಿತು. ಶಿಯಾದ್‌ನ ತಾಯಿ ಆಯಿಷಾ, "ನಮ್ಮ ಮನೆಯಲ್ಲೂ ಇಂಥ ರೋಬೋಟ್ ಇದ್ದರೆ ತುಂಬಾ ಚೆನ್ನಾಗಿರುತ್ತೆ" ಅಂತ ಹೇಳುತ್ತಾರೆ.


  ಆಗ ಮುಹಮ್ಮದ್‌ ಗೆ ಇನ್ನೂ 14 ವರ್ಷ. ಆತ ತಾಯಿಗೆ “ನಾನು ನಿನಗಾಗಿ ಇದೇ ರೀತಿಯ ರೋಬೋಟ್‌ ಅನ್ನ ತಯಾರಿಸಬಲ್ಲೆ ಅಂತ ಹೇಳ್ತಾನೆ. ಆಯಿಷಾ ಅದನ್ನು ತಮಾಷೆಯಾಗಿ ತೆಗೆದುಕೊಂಡರೂ, ಈಗಾಗಲೇ ಕೆಲವು ಹೋಮ್ ಆಟೊಮೇಷನ್ ಯೋಜನೆಗಳನ್ನು ಮಾಡಿದ ಶಿಯಾದ್, ತನ್ನ ಮಾತನ್ನು ಉಳಿಸಿಕೊಳ್ಳುವಲ್ಲಿ ಬದ್ದನಾಗಿದ್ದ.


  ಈ ಹಿಂದೆ, ನಾನು ಮನೆಯಲ್ಲಿ ದೀಪಗಳು, ಫ್ಯಾನ್‌ಗಳು ಮತ್ತು ಇತರ ಪ್ರತಿಯೊಂದು ವಿದ್ಯುತ್ ಸಾಧನಗಳನ್ನು ನಿಯಂತ್ರಿಸಲು ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದೆ. ಹಾಗಾಗಿ ಈ ರೋಬೋಟ್ ಪ್ರಾಜೆಕ್ಟ್ ಬಗ್ಗೆ ನನಗೂ ವಿಶ್ವಾಸವಿತ್ತು” ಎನ್ನುತ್ತಾರೆ 17 ವರ್ಷದ ಶಿಯಾದ್.‌ ‌


  ಸಾಂಧರ್ಭಿಕ ಚಿತ್ರ


  ರೋಬೋಟ್‌ ತಯಾರಿಕೆಯ ಹಾದಿ!


  ರೋಬೋಟ್‌ ತಯಾರಿಕೆಯ ಮೊದಲ ಹಂತವಾಗಿ ಅದೇ ರೆಸ್ಟೊರೆಂಟ್‌ನಲ್ಲಿ ಯಂತ್ರದ ಬಗ್ಗೆ ಶಿಯಾದ್ ವಿಚಾರಿಸಿದಾಗ 3 ಲಕ್ಷದಿಂದ 4 ಲಕ್ಷ ಖರ್ಚಾಗಿದೆ ಎಂಬ ಪ್ರತಿಕ್ರಿಯೆ ಬಂದಿತ್ತು. ಆದರೆ ನಂತರ ಅವರ ಸಂಶೋಧನೆಯ ಮೂಲಕ, ಅದರ ನಿರ್ಮಾಣಕ್ಕೆ ಕಡಿಮೆ ವೆಚ್ಚವಾಗುವಂಥ ಪರಿಣಾಮಕಾರಿ ಮಾರ್ಗಗಳಿವೆ ಎಂದು ಕಂಡುಹಿಡಿದರು.


  ಇನ್ನು, ರೋಬೋಟ್  ಮಾಡಲು  ಇಂಟರ್‌ ನೆಟ್‌ ನಲ್ಲಿ ಯಾವುದೇ ನೇರ ಮಾಹಿತಿ ಸಿಗಲಿಲ್ಲ.‌ ಆದರೆ ರೆಸ್ಟೊರೆಂಟ್‌ನಲ್ಲಿರುವ ಯಂತ್ರವು ನಿಗದಿತ ಮಾರ್ಗವನ್ನು ಅನುಸರಿಸುತ್ತಿರುವುದನ್ನು ನಾನು ಗಮನಿಸಿದೆ. ನನ್ನ ಸಂಶೋಧನೆಯ ಬಗ್ಗೆ ಮತ್ತು ತಂತ್ರಜ್ಞಾನವನ್ನು ವಿವರಿಸುವ ಅನೇಕ ವೀಡಿಯೊಗಳನ್ನು ಹುಡುಕಲು ಕಾರಣವಾಯಿತು ಎನ್ನುತ್ತಾರೆ ಶಿಯಾದ್.


  ಹೀಗೆ ಒಂದು ವರ್ಷದೊಳಗೆ, ಶಿಯಾದ್ ಪ್ಲಾಸ್ಟಿಕ್ ಸ್ಟೂಲ್ ಮತ್ತು ಅದರ ಅಡಿಯಲ್ಲಿ ಅಲ್ಯೂಮಿನಿಯಂ ಪ್ಲಾಟ್‌ಫಾರ್ಮ್ ಅನ್ನು ನಾಲ್ಕು ಟೈರ್‌ಗಳೊಂದಿಗೆ ಸರಿಪಡಿಸುವ ಮೂಲಕ ರೋಬೋಟ್‌ ನ ಮೂಲ ಮಾದರಿ ತಯಾರಿಸಿದರು. ಚಲನೆಗೆ ಮೋಟಾರ್‌ನೊಂದಿಗೆ 12-ವೋಲ್ಟ್ ಗೇರ್ ಅನ್ನು ಬಳಸಿದರು. ಆದರೆ ಅವರು ಅದನ್ನು ಮನುಷ್ಯನಂತೆ ರೋಬೋಟ್ ಆಗಿ ಪರಿವರ್ತಿಸಲು ಹಲವಾರು ಸವಾಲುಗಳನ್ನು ಎದುರಿಸಬೇಕಾಯ್ತು.


  ಈ ಬಗ್ಗೆ ವಿವರಿಸಿದ ಶಿಯಾದ್‌, ರೋಬೋಟ್‌ ನ ಮಾಡೆಲ್‌ ನ ಮೇಲಿನ ಭಾಗವು ಅಡುಗೆಮನೆಯಿಂದ ಡೈನಿಂಗ್ ಟೇಬಲ್‌ಗೆ ಆಹಾರವನ್ನು ತೆಗೆದುಕೊಳ್ಳಲು ಮತ್ತು ಬಡಿಸಲು 180 ಡಿಗ್ರಿಗಳನ್ನು ತಿರುಗಿಸುವ ಅಗತ್ಯವಿದೆ. ಇಲ್ಲಿ ಯಾಂತ್ರಿಕ ವಿಷಯಗಳು ಸ್ವಲ್ಪ ಸವಾಲಿನದಾಗಿದ್ದವು ಎನ್ನುತ್ತಾರೆ. ಈ ಮಧ್ಯೆ, ಕಳೆದ ತಿಂಗಳಷ್ಟೇ ಸಹಪಾಠಿ ಅರ್ಜುನ್ ಅವರ ಸಹಾಯದಿಂದ ಕೋಡಿಂಗ್ ಅನ್ನು ಪೂರ್ಣಗೊಳಿಸಿದ ಬಳಿಕ ರೋಬೋಟ್ 'ಪಥೂಟಿ' ಕಾರ್ಯರೂಪಕ್ಕೆ ಬಂದಿತು ಎನ್ನುತ್ತಾರೆ.


  ಅಷ್ಟಕ್ಕೂ ಯಾಕೆ ಹೆಣ್ಣಿನ ಮಾದರಿ ರೊಬೋಟ್‌ ಅನ್ನೇ ತಯಾರಿಸಲಾಗಿದೆ ಎಂಬುದನ್ನು ಶಿಯಾದ್‌ ವಿವರಿಸುತ್ತಾರೆ. ತನ್ನ ತಾಯಿಯ ಆಸೆ ಈ ರೋಬೋಟ್‌ ಹೆಣ್ಣಿನ ಮಾದರಿಯದ್ದಾಗಿರಬೇಕು ಎಂಬುದು. ಹೀಗಾಗಿ ನಾನು ಇದನ್ನೇ ಆಯ್ಕೆ ಮಾಡಿಕೊಂಡೆ ಎನ್ನುತ್ತಾರೆ. ಅಲ್ಲದೇ, ನನ್ನ ಸಹೋದರ, ತಂದೆ ಮತ್ತು ನಾನು ಮತ್ತು ತಾಯಿ ಎಲ್ಲರೂ ಮನೆಕೆಲಸಗಳಲ್ಲಿ ರೋಬೋಟ್‌ ಅನ್ನು ಸಮಾನವಾಗಿ ತೊಡಗಿಸಿಕೊಂಡಿದ್ದೇವೆ.


  ಇನ್ನು, ಅಡುಗೆಮನೆಯಿಂದ ಡೈನಿಂಗ್‌ ಏರಿಯಾಗೆ ರೋಬೋಟ್ ಅನುಸರಿಸಿದ ಕಪ್ಪು ನಿರೋಧನ ಟೇಪ್ನ 'ಮಾರ್ಗ'ವನ್ನು ಸೂಚಿಸಲು ಅವರ ತಂದೆ 'ಪಥೂಟಿ' ಅನ್ನೋ ಹೆಸರನ್ನು ಸೂಚಿಸಿದರಂತೆ. "ಜನರು ಇದನ್ನು ಮಲಯಾಳಂ ಚಲನಚಿತ್ರದ ಉಲ್ಲೇಖವಾಗಿ 'ಆಂಡ್ರಾಯ್ಡ್ ಪಥೂಟಿ' ಎಂದು ಕರೆಯುತ್ತಾರೆ. ಇದು ಮನೆಕೆಲಸಗಳನ್ನು ಮಾಡುವ ರೋಬೋಟ್‌ನ ಕಥೆಯನ್ನು ನಿರೂಪಿಸುತ್ತದೆ" ಎಂದು ಶಿಯಾದ್ ಹೇಳುತ್ತಾರೆ.


  ತಿಂಡಿ, ಊಟ ಬಡಿಸುತ್ತೆ 'ಪಥೂಟಿ' !‌


  ನಮ್ಮ ಮನೆಯಲ್ಲಿ ಅಡುಗೆ ಮನೆಯಿಂದ ಡೈನಿಂಗ್‌ ಹಾಲ್‌ ಅಂತರ ಸ್ವಲ್ಪ ಹೆಚ್ಚು. ಹಾಗಾಗಿ ಬೆಳಗಿನ ಹೊತ್ತು ಎಲ್ಲರೂ ಗಡಿಬಿಡಿಯಲ್ಲಿರುವಾಗ ಆಯೆಷಾ ಗಾಬರಿಯಲ್ಲಿಯೇ ಇರುತ್ತಾರೆ. ಆದ್ರೆ ಇದೀಗ ಪಥೂಟಿ ಎಲ್ಲರಿಗೂ ಆಹಾರ ತಂದುಕೊಡುತ್ತದೆ. ಜೊತೆಗೆ ತನ್ನ ತಾಯಿಯ ಔಷಧಗಳ ಬಗ್ಗೆಯೂ ನೆನಪಿಸುತ್ತದೆ ಎಂದು ಶಿಯಾದ್‌ ತಂದೆ ಅಬ್ದುಲ್ ರಹಮಾನ್ ಹೇಳುತ್ತಾರೆ.


  ಈ ಮಧ್ಯೆ, ರೋಬೋಟ್ ನಿರ್ಮಾಣದ ಒಟ್ಟು ವೆಚ್ಚ 10,000 ರೂ.ಗಿಂತ ಕಡಿಮೆ ಎಂದು ಶಿಯಾದ್ ಹೇಳುತ್ತಾರೆ. ಇದು ಅಗ್ಗವಾಗಿರಬಹುದು ಆದರೆ ನಾನು ಅದನ್ನು ಪ್ರಯೋಗವಾಗಿ ಮಾಡಿದ್ದರಿಂದ, ಹಲವಾರು ವೈಫಲ್ಯಗಳು ಮತ್ತು ಮರು-ಖರೀದಿಗಳು ಇದ್ದವು ಎನ್ನುತ್ತಾರೆ. ಒಂದು ಬಾರಿ ರೋಬೋಟ್‌ ಊಟಕ್ಕೆಂದು ಕುಳಿತಿದ್ದ ತಮ್ಮ ಮೇಲೆ ಆಹಾರ ಪದಾರ್ಥಗಳನ್ನು ಸುರಿಯಿತು. ಅದು ತಮಾಷೆಯ ಸನ್ನಿವೇಶವಾಗಿತ್ತು. ಅಲ್ದೇ ಸಾಕಷ್ಟು ಕಿರಿಕಿರಿಯೂ ಆಯ್ತು ಎನ್ನುತ್ತಾರೆ ರೆಹಮಾನ್.


  ಇನ್ನು, ರೋಬೋಟ್ ಅನ್ನು ಅಲ್ಟ್ರಾಸಾನಿಕ್ ಸಂವೇದಕದಿಂದ ನಿಯಂತ್ರಿಸಲಾಗುತ್ತದೆ. ಹೆಚ್ಚುವರಿಯಾಗಿ, MIT ಅಪ್ಲಿಕೇಶನ್ ಮತ್ತು atmega microcontroller ಮೂಲಕ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಹಸ್ತಚಾಲಿತವಾಗಿ ಮತ್ತು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ದೇ, 6 ಕೆಜಿಯಷ್ಟು ಭಾರವನ್ನು ಸಾಗಿಸುತ್ತದೆ. ಪಥೂಟಿ ಪ್ರತಿ ದಿನ ಬೆಳಗ್ಗೆ ಕುಟುಂಬವನ್ನು ಎಬ್ಬಿಸುತ್ತದೆ. "ಕಾಫಿ ಸಿದ್ಧವಾಗಿದ್ದರೆ, ಅದು ನಮಗೆ ಹಾಸಿಗೆಗೂ ತಂದುಕೊಡುತ್ತದೆ  ಎಂದು ಶಿಯಾದ್ ಹೇಳುತ್ತಾರೆ.


  ಇಂದು ರಾಜ್ಯಾದ್ಯಂತ ಜನರು ಪಥೂಟಿಯನ್ನು ಭೇಟಿ ಮಾಡಲು ಕಣ್ಣೂರಿನ ಶಿಯಾದ್ ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆ ಶಿಯಾದ್‌ ಅವರಿಗೆ ಕೇರಳದ ವಿವಿಧ ಸ್ಥಳಗಳಲ್ಲಿ ನಡೆಯುವ ಟೆಕ್ ಈವೆಂಟ್‌ಗಳಿಗೂ ಆಹ್ವಾನ ನೀಡಲಾಗುತ್ತಿದೆ.


  ಇನ್ನಷ್ಟು ಅಭಿವೃದ್ಧಿಸುವ ಗುರಿ


  ಟೇಪ್ ಬಳಸಿ ಮಾರ್ಗವನ್ನು ಮೊದಲೇ ಹೊಂದಿಸದೆ ಪಥೂಟಿ ಪ್ರಯಾಣ ಮಾಡುವುದು ಶಿಯಾದ್ ಅವರ ಮುಂದಿನ ಯೋಜನೆಯಾಗಿದೆ. ತಂತ್ರಜ್ಞಾನವನ್ನು ಮೈಕ್ರೋಕಂಟ್ರೋಲರ್‌ನಿಂದ ಮೈಕ್ರೊಪ್ರೊಸೆಸರ್‌ಗೆ ಬದಲಾಯಿಸಿದರೆ, ಅದು ನೆಲವನ್ನು ಸ್ವಚ್ಛಗೊಳಿಸುವುದು, ಪಾತ್ರೆಗಳನ್ನು ತೊಳೆಯುವುದು ಮತ್ತು ಆಹಾರವನ್ನು ತಯಾರಿಸುವುದು ಮುಂತಾದ ಇತರ ಚಟುವಟಿಕೆಗಳನ್ನು ಸಹ ಮಾಡಬಹುದು ಎಂದು ಅವರು ಹೇಳುತ್ತಾರೆ. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಆದರೆ ನಾನು ಖಚಿತವಾಗಿ ಅದನ್ನು ಮಾಡುತ್ತೇನೆ" ಎಂದು ಶಿಯಾದ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.


  ಇನ್ನು ಮಗನ ಸಾಧನೆಗೆ ಖುಷಿ ವ್ಯಕ್ತಪಡಿಸುವ ಆಯಿಷಾ, “ಪಥೂಟಿ ಯಿಂದ ನಮಗೆ ನಿಜವಾಗಿಯೂ ಸಹಾಯವಾಗಿದೆ. ಆಹಾರ ಸಿದ್ಧವಾದಾಗಲೆಲ್ಲಾ ಅದನ್ನು ಡೈನಿಂಗ್ ಟೇಬಲ್‌ಗೆ ತೆಗೆದುಕೊಂಡು ಹೋಗಿ ಸಹಾಯ ಮಾಡುತ್ತೆ. ಬೇರೆ ಯಾವುದೇ ವಸ್ತುಗಳನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಒಯ್ಯುತ್ತದೆ. ಶಿಯಾದ್ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರುವ ರೋಬೋಟ್‌ ಇತರ ಮನೆಕೆಲಸಗಳನ್ನು ಸಹ ಮಾಡಬಹುದೆಂದು ನಾನು ಆಶಿಸ್ತೇನೆ" ಎನ್ನುತ್ತಾರೆ.


  ಆಟೋಮೇಷನ್ ರೊಬೊಟಿಕ್ಸ್ ಸ್ಟಾರ್ಟಪ್ ಕನಸು


  ತನ್ನ ಕೆಲವು ಸಹಪಾಠಿಗಳೊಂದಿಗೆ ಆಟೋಮೇಷನ್ ರೊಬೊಟಿಕ್ಸ್ ಎಂಬ ಸ್ಟಾರ್ಟಪ್ ಅನ್ನು ಪ್ರಾರಂಭಿಸುವ ಮೂಲಕ ದೊಡ್ಡ ಕನಸು ಕಾಣುತ್ತಿದ್ದಾರೆ ಶಿಯಾದ್.‌ “ನಾವು ಪಥೂಟಿಗೆ ಪೇಟೆಂಟ್ ಪಡೆಯಲು ಮತ್ತು ಭವಿಷ್ಯದಲ್ಲಿ ಹೋಮ್ ಆಟೊಮೇಷನ್‌ನಲ್ಲಿ ಹೊಸ ಆಲೋಚನೆಗಳೊಂದಿಗೆ ಬರಲು ಆಶಿಸುತ್ತಿದ್ದೇವೆ. ಅಲ್ಲದೆ, ಯಾವುದೇ ನಗರದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಓದುವುದು ನನ್ನ ದೊಡ್ಡ ಕನಸು" ಎನ್ನುತ್ತಾರೆ. ‌


  ಒಟ್ಟಾರೆ ಚಿಕ್ಕ ವಯಸ್ಸಿನಲ್ಲೇ ಇಂಥ ಸಾಧನೆ ಮಾಡಿರುವ ಶಿಯಾದ್‌ ಇಚ್ಛಾಶಕ್ತಿಯನ್ನು ಮೆಚ್ಚಲೇಬೇಕು.

  Published by:Sandhya M
  First published: