ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ (T. Raja Singh) ಅವರು ಪ್ರವಾದಿ ಮುಹಮ್ಮದ್ (Prophet Muhammad) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಬೆನ್ನಲ್ಲೇ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನೂರಾರು ಜನರು ಹೈದ್ರಾಬಾದ್‌ನಲ್ಲಿ ಪ್ರತಿಭಟನೆ (Protest) ನಡೆಸಿದ್ದು, ಸದ್ಯ ಶಾಸಕರನ್ನು ಬಂಧಿಸಲಾಗಿದೆ (Arrest). ರಾಜಾ ಸಿಂಗ್ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾಗಿ ಸುದ್ದಿಮೂಲಗಳು ವರದಿ ಮಾಡಿವೆ. ಸಾಮಾಜಿಕ ಮಾಧ್ಯಮದಲ್ಲಿ ಅಸಮಂಜಸ ಹೇಳಿಕೆಗಳನ್ನು ನೀಡಿದ್ದು ಶಾಸಕರ ವಿರುದ್ಧ ಸೆಕ್ಷನ್ 295 (ಎ), ಮತ್ತು 153 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾಜಾ ಸಿಂಗ್ ಹೈದರಾಬಾದ್‌ನ (Hyderabad) ಗೋಶಾಮಹಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ರಾಜಾ ಸಿಂಗ್ ಯಾರು? ಅವರ ಹಿನ್ನಲೆ ಮತ್ತು ವಿವಾದಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.
ರಾಜಾ ಸಿಂಗ್ ಯಾರು?
ತೆಲುಗು ದೇಶಂ ಪಕ್ಷದ ಸದಸ್ಯರಾಗಿದ್ದ ರಾಜಾ ಸಿಂಗ್, ಬಿಜೆಪಿಗೆ ಸೇರ್ಪಡೆಗೊಂಡರು ಹಾಗೂ ಪ್ರಸ್ತುತ ತೆಲಂಗಾಣದಲ್ಲಿ ಪಕ್ಷದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿರಿಸಿಕೊಂಡು ರಾಜಾ ಸಿಂಗ್ ಹಲವಾರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ದ್ವೇಷವನ್ನುಂಟು ಮಾಡುವ ಕಾಮೆಂಟ್‌ಗಳನ್ನು ಮಾಡಿದ್ದರಿಂದ ರಾಜಾ ಸಿಂಗ್ ಅವರನ್ನು 2020 ರಲ್ಲಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಿಂದ ನಿಷೇಧಿಸಲಾಯಿತು.
ಇದನ್ನೂ ಓದಿ: Congress Election: ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಯಲ್ಲಿ ವಿಳಂಬ ಏಕೆ? ಬಯಲಾಯ್ತು ಮಹತ್ವದ ಕಾರಣ!
ಸಾಮಾಜಿಕ ತಾಣದ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವುದು ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಪೋಸ್ಟ್‌ಗಳನ್ನು ರಾಜಾ ಸಿಂಗ್ ಹಂಚಿಕೊಳ್ಳುತ್ತಿದ್ದರು ಎಂಬ ಹಿನ್ನಲೆಯಲ್ಲಿ ಸಾಮಾಜಿಕ ತಾಣ ಅವರನ್ನು ನಿರ್ಬಂಧಿಸಿತ್ತು. ಇನ್ನು ಸಿಂಗ್ ಅವರು ಪ್ರತಿಯಾಗಿ ಹೇಳಿಕೆ ನೀಡಿದ್ದು, ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳನ್ನು ನಾನು 2019 ರಿಂದ ಬಳಸಲುತ್ತಿಲ್ಲವೆಂದು ಸಿಂಗ್ ಸ್ಪಷ್ಟೀಕರಣವನ್ನು ನೀಡಿದ್ದರು.
ಬಿಜೆಪಿಗೆ ಮತ ಹಾಕುವಂತೆ ಮತದಾರರಿಗೆ ಬೆದರಿಕೆ
ಪ್ರತಿಭಟನೆಯ ನಡುವೆ ಕಳೆದ ವಾರ ಹೈದ್ರಾಬಾದ್‌ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಹಾಸ್ಯನಟ ಮುನಾವರ್ ಫರುಕಿ ವಿರುದ್ಧ ರಾಜಾ ಸಿಂಗ್ ಥಳಿಸುವುದಾಗಿ ಬೆದರಿಕೆ ಹಾಕಿದ್ದು, ಕಾರ್ಯಕ್ರಮವನ್ನು ನಿಲ್ಲಿಸುವಂತೆ ಹಾಗೂ ಸೆಟ್ ಅನ್ನು ಸುಟ್ಟುಹಾಕುವುದಾಗಿ ಧಮಕಿ ಹಾಕಿದ್ದರು ಎಂದು ಮುನಾವರ್ ತಿಳಿಸಿದ್ದಾರೆ. ಇನ್ನು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮತ ಹಾಕುವಂತೆ ಮತದಾರರನ್ನು ಬೆದರಿಸಿದ್ದರ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಅವರಿಗೆ ನೋಟೀಸ್ ಜಾರಿ ಮಾಡಿತ್ತು. ಬಿಜೆಪಿಗೆ ಮತ ಹಾಕದೇ ಇದ್ದರೆ ಬುಲ್ಡೋಜರ್ ಹತ್ತಿಸುವುದಾಗಿ ಮತದಾರರನ್ನು ಸಿಂಗ್ ಬೆದರಿಸಿದ್ದರು ಎಂಬ ಆರೋಪವಿದೆ.
ಮೇಘಸ್ಫೋಟದಿಂದ ಪಾರಾಗಿದ್ದ ರಾಜಾಸಿಂಗ್!
ಜುಲೈನಲ್ಲಿ, ದಕ್ಷಿಣ ಕಾಶ್ಮೀರದ ಅಮರನಾಥದ ಪವಿತ್ರ ಗುಹೆ ದೇಗುಲದ ಬಳಿ ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಿಂದ ರಾಜಾ ಸಿಂಗ್ ಅದ್ಭುತವಾಗಿ ಪಾರಾಗಿದ್ದರು.
ಪ್ರಸ್ತುತ ವಿವಾದವೇನು?
ವೈರಲ್ ಆಗಿರುವ ವಿಡಿಯೋದಲ್ಲಿ ರಾಜಾ ಸಿಂಗ್ ಅವರು ಜನಸ್ಫೋಟ ಕಾರಣಕ್ಕೆ ನೇರವಾಗಿ ಮುಸ್ಲೀಮರೇ ಹೊಣೆ ಎಂದು ಹೇಳಿದ್ದಾರೆ. ಪ್ರವಾದಿಯ ಹೆಸರು ಹೇಳದೆಯೇ ಅವಹೇಳನಕಾರಿ ಹೇಳಿಕೆಯನ್ನು ಸಿಂಗ್ ನಡೆಸಿದ್ದಾರೆ. ನಗರದಲ್ಲಿ ನೂರಾರು ಸಮುದಾಯದ ಜನರು ಹೇಳಿಕೆಯನ್ನು ಖಂಡಿಸಿ ಸಿಂಗ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ISIS Terrorist: ಭಾರತದ ಮಹಾನಾಯಕನ ಹತ್ಯೆಗೆ ಸ್ಕೆಚ್, ರಷ್ಯಾದಲ್ಲಿ ಐಸಿಸ್ ಬಾಂಬರ್ ಅರೆಸ್ಟ್!
ಇತ್ತೀಚೆಗೆ ಅಮಾನತ್ತುಗೊಂಡಿರುವ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಜಾಗತಿಕ ಆಕ್ರೋಶವನ್ನುಂಟು ಮಾಡಿದ ಕೆಲವೇ ತಿಂಗಳುಗಳ ನಂತರ ಸಿಂಗ್ ಅವರು ಮಾಡಿರುವ ಹೇಳಿಕೆ ಧಾರ್ಮಿಕ ಅಸಮಾನತೆಗೆ ಕಾರಣವಾಗಿದೆ. ನೂಪುರ್ ಶರ್ಮಾರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಹಾಗೂ ವಕ್ತಾರೆ ನ್ಯಾಯಾಲಯದಲ್ಲಿ FIR ಗಳನ್ನು ಎದುರಿಸುತ್ತಿದ್ದಾರೆ. ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಕಾರಣ ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯಾಲಾಲ್ ಶಿರಚ್ಛೇದನವನ್ನು ನಡೆಸಿದ ಇಬ್ಬರು ದುಷ್ಕರ್ಮಿಗಳು ವಿಡಿಯೋ ಮಾಡಿ ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ