HOME » NEWS » Explained » TEENS WHO SPEND EXCESSIVE TIME ON SOCIAL MEDIA MAY ENGAGE IN CYBER BULLYING STUDY SUGGESTS STUDY STG HG

ನಿಂದನೆ, ಬೆದರಿಕೆಗಾಗಿಯೇ ಹೆಚ್ಚು ಬಳಕೆಯಾಗುತ್ತಿದೆ ಸಾಮಾಜಿಕ ಜಾಲತಾಣ: ಅಧ್ಯಯನದಿಂದ ಬಯಲು

ಆನ್‍ಲೈನ್‍ನಲ್ಲಿ ಹೆಚ್ಚು ಸಮಯ ಕಳೆಯುವವರು ಅದರಲ್ಲೂ ಸೈಬರ್ ಬುಲ್ಲಿಂಗ್‍ನಲ್ಲಿ ಹೆಚ್ಚಾಗಿ ಪುರುಷರು ಅಂದರೆ ಹದಿಹರೆಯದ ಯುವಕರೇ ಪಾಲ್ಗೊಳ್ಳುತ್ತಾರೆ ಎಂದು ಹೇಳಿದೆ.

news18-kannada
Updated:April 3, 2021, 9:46 AM IST
ನಿಂದನೆ, ಬೆದರಿಕೆಗಾಗಿಯೇ ಹೆಚ್ಚು ಬಳಕೆಯಾಗುತ್ತಿದೆ ಸಾಮಾಜಿಕ ಜಾಲತಾಣ: ಅಧ್ಯಯನದಿಂದ ಬಯಲು
ಸ್ಮಾರ್ಟ್​ಫೋನ್​
  • Share this:
ಇತ್ತೀಚಿನ ದಿನಗಳಲ್ಲಿ ಯುವಜನತೆ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಇನ್‍ಸ್ಟಾಗ್ರಾಂ, ಟಿಕ್‍ಟಾಕ್, ಸ್ನ್ಯಾಪ್ ಚಾಟ್ ಇನ್ನಿತರ ವೇದಿಕೆಗಳನ್ನು ನಿಂದನೆ, ಬೆದರಿಕೆಗಾಗಿಯೇ ಹೆಚ್ಚು ಬಳಸುತ್ತಿದ್ದಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಜರ್ನಲ್ ಆಫ್ ಚೈಲ್ಡ್ ಮತ್ತು ಅಡೋಲಸೆಂಟ್‌ ಕೌನ್ಸೆಲಿಂಗ್ ವರದಿಯ ಪ್ರಕಾರ, ಆನ್‍ಲೈನ್‍ನಲ್ಲಿ ಹೆಚ್ಚು ಸಮಯ ಕಳೆಯುವವರು ಅದರಲ್ಲೂ ಸೈಬರ್ ಬುಲ್ಲಿಂಗ್‍ನಲ್ಲಿ ಹೆಚ್ಚಾಗಿ ಪುರುಷರು ಅಂದರೆ ಹದಿಹರೆಯದ ಯುವಕರೇ ಪಾಲ್ಗೊಳ್ಳುತ್ತಾರೆ ಎಂದು ಹೇಳಿದೆ.

ಆನ್‍ಲೈನ್ ಸೈಬರ್ ಬುಲ್ಲಿಂಗ್‍ನಲ್ಲಿ ಭಾಗವಹಿಸುವ ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಆಗ ತಾನೆ ಹೆಚ್ಚು ಆಸಕ್ತಿವುಳ್ಳವರಾಗಿರುತ್ತಾರೆ ಅಂದರೆ ಅನಾಮಧೇಯರಾಗಿರುತ್ತಾರೆಯೇ ಹೊರತು ಅವರಲ್ಲಿ ಯಾವುದೇ ರೀತಿಯಲ್ಲೂ ಪ್ರತೀಕಾರದ ಭಾವನೆ ಇರುವುದಿಲ್ಲ ಎಂದು ಜಾರ್ಜಿಯಾ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಅಮಾಂಡ ಜಿಯಾರಾಂಡೋ ಹೇಳುತ್ತಾರೆ. ಈ ರೀತಿಯ ಹದಿಹರೆಯದವರು ಸಾಮಾನ್ಯವಾಗಿ ಇನ್ನು ವಿವೇಕದ ಮಜಲುಗಳನ್ನು ಕಲಿಯುವ ಹಂತದಲ್ಲಿರುತ್ತಾರೆ. ಇಂತಹವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಪಂಚದಾದ್ಯಂತ ವೀಕ್ಷಕರನ್ನು ನೀಡಿದಾಗ ಅವರಿಂದ ಉತ್ತಮ ಆಯ್ಕೆಗಳನ್ನು ನಿರೀಕ್ಷಿಸುತ್ತಾರೆ ಅಷ್ಟೇ ಎನ್ನುತ್ತಾರೆ.

ಸಾಮಾನ್ಯವಾಗಿ ವೈಯಕ್ತಿಕ ತೇಜೋವಧೆ, ದೌರ್ಜನ್ಯ ಅಥವಾ ತಾರತಮ್ಯ, ಮಾನಹಾನಿಕರ ವಿಚಾರಗಳ ಹರಡುವಿಕೆ, ವೈಯಕ್ತಿಕ ವಿಚಾರಗಳ ರವಾನೆ, ಸಾಮಾಜಿಕ ಕಡೆಗಣನೆ ಹೀಗೆ ಇನ್ನಿತರ ವಿಚಾರಗಳ ಕಾರಣ ಯುವಕರು ಸೈಬರ್ ಬುಲ್ಲಿಂಗ್‍ನಲ್ಲಿ ಕಾಣಿಸಿಕೊಳ್ಳುತ್ತಾರೆ.

ಹದಿಹರೆಯದವರು ಅಂದರೆ ಸುಮಾರು 13 ರಿಂದ 19 ವರ್ಷದೊಳಗಿನ 428 ಹದಿಹರೆಯದವರನ್ನು ಸರ್ವೇ ಮಾಡಲಾಯಿತು. ಇದರಲ್ಲಿ 214 (ಶೇ.50) ಹುಡುಗಿಯರು, 210 (ಶೇ.49.1) ಹುಡುಗರು, 4 ಮಂದಿ ಅನ್ಯರು (ಶೇ 0.9) ಪಾಲ್ಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಂಶೋಧನಕಾರರ ಪ್ರಕಾರ, ಈ ಹದಿಹರೆಯದವರು ಆನ್‍ಲೈನ್‍ನಲ್ಲಿದ್ದ ವೇಳೆ ಸಾಮಾಜಿಕ ಜಾಲತಾಣದ ಬಗೆಗಿನ ಹಲವು ವಿಚಾರಗಳನ್ನು ತಿಳಿದುಕೊಂಡು ನಂತರ ತಮಗೆ ವೈಯಕ್ತಿಕವಾಗಿ ಹತ್ತಿರವಾದವರ ಬಳಿ ವ್ಯವಹರಿಸುತ್ತಾರೆ ಎಂದು ಹೇಳುತ್ತಾರೆ.

ಅಲ್ಲದೆ ಇವರು ಸಾಮಾಜಿಕ ಜಾಲತಾಣ ಎಂಬ ಆನ್‍ಲೈನ್ ವೇದಿಕೆಗೆ ಹೊಸಬರಾಗಿರುವುದರಿಂದ ಹೆಚ್ಚು ಆಕ್ರಮಣಕಾರಿಗಳಾಗಿರುತ್ತಾರೆ. ಜೊತೆಗೆ ಸೈಬರ್ ಬುಲ್ಲಿಗಳಲ್ಲಿ ಪಶ್ಚಾತ್ತಾಪದ ಗುಣ ತೀರಾ ಕಡಿಮೆ ಇರುತ್ತದೆ. ಇಂತಹ ಗುಣವುಳ್ಳವರು ಸಾಮಾಜಿಕ ಜಾಲತಾಣದಿಂದ ಎದುರಾಗುವ ನೇರ ಪರಿಣಾಮಗಳನ್ನು ಎದುರಿಸಲು ಶಕ್ತರಾಗಿರುವುದಿಲ್ಲ ಎಂದೂ ತಿಳಿದು ಬಂದಿದೆ.

ಸೈಬರ್ ಬುಲ್ಲಿಗಳು ಕಡಿಮೆಯೆಂದರೂ ದಿನಕ್ಕೆ 7 ರಿಂದ 12 ಗಂಟೆಗಳ ಕಾಲ ಆನ್‍ಲೈನ್‍ನಲ್ಲಿ ಕಾಲ ಕಳೆಯುತ್ತಾರೆ. ಅಲ್ಲದೆ ಪುರುಷರು ಮಹಿಳೆಯರಿಗಿಂತ ಹೆಚ್ಚಾಗಿ ಸೈಬರ್ ಬುಲ್ಲಿಂಗ್‍ನಲ್ಲಿ ನಿರತರಾಗಿರುತ್ತಾರೆ. ಅಲ್ಲದೇ ಆಕ್ರಮಣಕಾರಿ ಪ್ರವೃತ್ತಿಯೂ ಪುರುಷರಲ್ಲೇ ಹೆಚ್ಚಾಗಿ ಇರುತ್ತದೆ ಎಂದು ಅಧ್ಯಯನ ಹೇಳಿದೆ.
ಅತಿಯಾದರೆ ಅಮೃತವೂ ವಿಷ ಎನ್ನುವ ರೀತಿ ಸಾಮಾಜಿಕ ಜಾಲತಾಣ ಎಷ್ಟು ಉಪಯುಕ್ತವೋ ಅಷ್ಟೇ ಹಾನಿಕಾರವೂ ಹೌದು. ಪ್ರಪಂಚದಾದ್ಯಂತ ಅತಿವೇಗದಲ್ಲಿ ಸಂಪರ್ಕಿಸುವ ಸಾಮಾಜಿಕ ಜಾಲತಾಣ ಕಸದ ಕೊಂಪೆ ರೀತಿಯಲ್ಲಿ ಆಗುತ್ತಿದೆ. ಇತಿ ಮಿತಿ ಇಲ್ಲದೇ ಬಳಕೆಯಾಗುತ್ತಿರುವ ಸಾಮಾಜಿಕ ಜಾಲತಾಣಗಳಿಂದ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದೆ. ಅನಾವಶ್ಯಕವಾಗಿ ಬಳಕೆಯಾಗುತ್ತಿರುವ ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಹಾಕುವ ಅನಿವಾರ್ಯತೆ ಖಂಡಿತವಾಗಿಯೂ ಇದೆ.
First published: April 3, 2021, 9:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories