Teacher's Day Special: ನೂರಾರು ಮಕ್ಕಳ ಜೀವನ ರೂಪಿಸಿದ ವಿದ್ಯಾದೇವತೆ ಮಾಲತಿ ಗುರುಮಾ; ಇವರ ಸಾಧನೆ ಅಪ್ರತಿಮ

ಈ ವಿಶೇಷ ದಿನದಂದು ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಶಿಕ್ಷಕರನ್ನು ಸ್ಮರಣೆ ಮಾಡಿಕೊಳ್ಳುತ್ತಾರೆ. ಆದರೆ, ಇಂದು ನಾವು ನಿಮಗೆ ಪರಿಚಯಿಸಲಿರುವ ಶಿಕ್ಷಕರ ಬಗ್ಗೆ ನೀವು ಬಹಳ ಹಿಂದೆಯೇ ಮರೆತು ಹೋಗಿರುತ್ತೀರಿ. ಅಂತಹ ವ್ಯಕ್ತಿಯ ಬಗ್ಗೆ ನಾವಿಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಮಾಲತಿ ಗುರುಮಾ

ಮಾಲತಿ ಗುರುಮಾ

  • Share this:
ಇಂದು ಎಲ್ಲೆಲ್ಲೂ ಸಂಭ್ರಮದ ವಾತಾವರಣ. ಈ ಸಂಭ್ರಮಕ್ಕೆ ಕಾರಣವೆಂದು ಈಗಾಗಲೇ ನಿಮಗೆ ಗೊತ್ತಾಗಿರಬೇಕು. ಶಿಕ್ಷಕರು (Teacher's) ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು (Gift) ಸ್ಮರಿಸುತ್ತಾ ಇಂದು ಇಡೀ ದೇಶಕ್ಕೆ ದೇಶವೇ ಶಿಕ್ಷಕರ ದಿನವನ್ನು (Teacher's Day) ಸಂಭ್ರಮದಿಂದ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಶಿಕ್ಷಕರನ್ನು ಸ್ಮರಣೆ ಮಾಡಿಕೊಳ್ಳುತ್ತಾರೆ. ಆದರೆ, ಇಂದು ನಾವು ನಿಮಗೆ ಪರಿಚಯಿಸಲಿರುವ ಶಿಕ್ಷಕರ ಬಗ್ಗೆ ನೀವು ಬಹಳ ಹಿಂದೆಯೇ ಮರೆತು ಹೋಗಿರುತ್ತೀರಿ. ಅಂತಹ ವ್ಯಕ್ತಿಯ (Person) ಬಗ್ಗೆ ನಾವಿಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಹಸುವಿನ ಕೊಟ್ಟಿಗೆಗೂ ಊರವರ ಸಾಧನೆಗೂ ಏನು ಸಂಬಂಧ 
ಆ ಅದ್ಬುತ ಶಿಕ್ಷಕಿ ಒಡಿಸ್ಸಾ ರಾಜ್ಯದ ಕಟಕ್ ಜಿಲ್ಲೆಯ ಮಹಾಂಗಾ ಬ್ಲಾಕ್‌ನಲ್ಲಿರುವ ಜಾತಿಪರಿಲೋ ಎಂಬ ಗ್ರಾಮಕ್ಕೆ ಹೋದ ತಕ್ಷಣ ನಮಗೆ ಮೊದಲನೆಯದಾಗಿ ಎದುರಾಗುವುದು, ಒಂದು ಮರಕ್ಕೆ ಕಟ್ಟಿದ ಕೆಲವು ಹಸುಗಳು ಮತ್ತು ಕರುಗಳು ಇರುವ ದನದ ಕೊಟ್ಟಿಗೆಯನ್ನು ನೀವು ಕಾಣಬಹುದು.

ಇದನ್ನೂ ಓದಿ: Teacher's Day 2022: ಮೀಮ್ಸ್ ಮೂಲಕ ಟ್ವಿಟರ್‌ನಲ್ಲಿ ಗುರುವಂದನೆ! ಇಲ್ಲಿ ಯಾರಿಗೆ ಯಾರು ಶಿಕ್ಷಕರು ಅಂತ ನೋಡಿ

ಏನಿದು ಯಾರೋ ಮಹಾನ್‌ ಶಿಕ್ಷಕಿ ಬಗ್ಗೆ ಹೇಳ್ತಿವಿ ಅಂದವರು ಇದು ಯಾವುದೋ ದನದ ಕೊಟ್ಟಿಗೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನಿಮಗೆ ಅನಿಸುತ್ತದೆ ಅಲ್ಲವೇ? ಆದರೆ ಈ ಹಸುಗಳ ವಿಶ್ರಾಂತಿ ಸ್ಥಳವೇ ರಾಜ್ಯ, ದೇಶ ಮತ್ತು ವಿದೇಶಗಳ ವಿವಿಧ ಭಾಗಗಳಲ್ಲಿ ಗೌರವಾನ್ವಿತ ಹುದ್ದೆಗಳನ್ನು ಪಡದಿರುವ ಶಿಕ್ಷಣದ ತೊಟ್ಟಿಲು ಎಂದು ಇದು ಹೆಸರು ಪಡೆದಿದೆ. ಈ ಹಸುವಿನ ಕೊಟ್ಟಿಗೆಯು ಈ ಹಿಂದೆ ಸುವರ್ಣ ದಿನಗಳನ್ನು ಕಂಡಿದೆ.

ಮಾಲತಿ ಗುರುಮಾರವರ ಗ್ರಾಮ ಶಾಲೆ
ಈ ಗೋಶಾಲೆಯು ಈ ಹಿಂದೆ ಮಾಲತಿ ಗುರುಮಾ ಎಂದು ಆ ಗ್ರಾಮದಲ್ಲಿ ಕರೆಯಲಾಗುವ ಮಾಲತಿ ದಾಸ್ ಅವರು ನಡೆಸುತ್ತಿದ್ದ ಗ್ರಾಮ ಶಾಲೆ ಆಗಿತ್ತು. ಆದರೆ ಕಾಲ ಸರಿದಂತೆ ಈ ಗ್ರಾಮಶಾಲೆಯು ಮುಚ್ಚಿಹೋಗಿದೆ. ಅದರ ನಂತರವೇ ಇದು ದನದ ಕೊಟ್ಟಿಗೆ ಆಗಿ ಬದಲಾಗಿದೆ. ಈಗ ಆ ಸ್ಥಳದಲ್ಲಿಯೇ ಮಾಲತಿ ಗುರುಮಾ ಅವರು ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆಯುತ್ತಿದ್ದಾರೆ. ಆದರೆ ಸಾವಿರಾರು ವಿದ್ಯಾರ್ಥಿಗಳನ್ನು ರೂಪಿಸಿದ ಈ ಮಹಾನ್‌ ಶಿಕ್ಷಕಿಯನ್ನು ನೋಡಿಕೊಳ್ಳಲು ಈಗ ಯಾರು ಇಲ್ಲ ಎಂಬುದು ನಿಜಕ್ಕೂ ವಿಷಾದನೀಯ ಸಂಗತಿ.

ಗೋಶಾಲೆಯ ಈಗಿನ ಪರಿಸ್ಥಿತಿ ಹೇಗಿದೆ?
ಈ ಚಟ್ಟಾಲಿ ಗ್ರಾಮಶಾಲೆಯು ಈಗ ಯಾವ ಕಾರ್ಯಚಟುವಟಿಕೆ ಇಲ್ಲದೇ ತನ್ನ ಹಳೆಯ ದಿನಗಳನ್ನು ಮೆಲುಕು ಹಾಕುವಂತೆ ಮೂಕ ಸಾಕ್ಷಿಯಾಗಿ ನಿಂತಿದೆ. ಅಲ್ಲಿ ಆಗೊಮ್ಮೆ ಈಗೊಮ್ಮೆ ಮಕ್ಕಳು ಓಡಾಡುತ್ತಾರೆ ಆದರೂ ಯಾರೂ ಇಲ್ಲಿ ಶಿಕ್ಷಣ ಕಲಿಯುಲು ಬರುವುದಿಲ್ಲ.

ಇದನ್ನೂ ಓದಿ: Art on Coconut: ತೆಂಗಿನಕಾಯಿಯಲ್ಲಿ ಅರಳಿದ ಕಲಾಕೃತಿಗಳು, ಕಲಾವಿದನ ಕೈಚಳಕ ನೋಡಿ

ಗೋಶಾಲೆಯು ಈಗ ಪೂರ್ಣವಾಗಿ ಹಾಳಾಗಿ ಹೋಗಿದೆ. ಗೋಶಾಲೆಯ ಛಾವಣಿಯು ಪೂರ್ತಿ ರಂಧ್ರಗಳಿಂದ ಹಾಳಾಗಿದೆ. ಗೋಡೆಗಳೆಲ್ಲವೂ ಬಿರುಕು ಬಿಟ್ಟಿವೆ. ಇದರ ಕಟ್ಟಡವು ಯಾವುದೇ ಸಮಯದಲ್ಲಿ ಬೇಕಾದರೂ ಬೀಳಬಹುದು ಆದರೂ, ಇಲ್ಲಿಯೇ ಬಹಳ ಸಮಯದಿಂದ ಮಾಲತಿ ಗುರುಮಾ ವಾಸ ಮಾಡುತ್ತಿದ್ದರು. ಆದರೆ ಈಗ ಅಪಾಯದ ಮುನ್ಸೂಚನೆ ಇರುವ ಕಾರಣ ಬೇರೆ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಹಾಗಿದ್ರೆ ಈ ಮಾಲತಿ ಗುರುಮಾ ಯಾರು?
ಈ ಮಾಲತಿ ಗುರುಮಾ ಅವರು ಹಲವು ವರ್ಷಗಳ ಕಾಲ ಗ್ರಾಮದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡಿದ ವಿದ್ಯಾದೇವತೆ ಆಗಿದ್ದಾರೆ. ಆಕೆಯ ವಯಸ್ಸು ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಂದಾಗಿ, ಅವರು ಏಳು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣವನ್ನು ನೀಡುವುದನ್ನು ನಿಲ್ಲಿಸಿದ್ದಾರೆ. ಆದರೂ ಯಾರ ಸಹಾಯಕ್ಕಾಗಿಯೂ ಆಸೆ ಪಡದೇ ಗೌರವಯುತವಾಗಿ ಜೀವನ ನಡೆಸುತ್ತಿದ್ದಾರೆ.

ಇದರ ಕುರಿತು “ಇತ್ತೀಚಿನ ದಿನಗಳಲ್ಲಿ ನನ್ನ ಆರೋಗ್ಯ ಅಷ್ಟೊಂದು ಚೆನ್ನಾಗಿ ಇರುತ್ತಿಲ್ಲ. ಹಾಗಾಗಿ ಮಕ್ಕಳಿಗೆ ಪಾಠ ಮಾಡುವುದನ್ನು ನಿಲ್ಲಿಸಿದ್ದೇನೆ’ ಎಂದು ಮಾಲತಿ ದಾಸ್ ತಮ್ಮ ಶಾಲೆಯ ವರಾಂಡದಲ್ಲಿ ಕುಳಿತು ಹೇಳಿದರು.

ಹಳೆ ದಿನಗಳನ್ನು ನೆನಪಿಸಿಕೊಂಡ ಪ್ರಮೀಳಾ ದೇಹುರಿ ಶಾಲೆ ಬಗ್ಗೆ ಏನಂದ್ರು
ಆ ಶಿಕ್ಷಣದ ವೈಭವದ ದಿನಗಳನ್ನು ನೆನಪಿಸಿಕೊಂಡ ಗ್ರಾಮಸ್ಥೆ ಪ್ರಮೀಳಾ ದೇಹುರಿ ಅವರು “ಮಾಲತಿ ಗುರುಮಾ ಅವರು ನೂರಾರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕಲಿಸಿದ್ದಾರೆ. ನಮಗೆ ತಿಳಿದಿರುವಂತೆ, ಶಿಕ್ಷಣ ನೀಡುವ ಕೆಲಸಕ್ಕೆ ಎಂದಿಗೂ ಅವರು ಹಣವನ್ನು ತೆಗೆದುಕೊಂಡಿಲ್ಲ.

ಇದನ್ನೂ ಓದಿ:  Ann Mary: ಕಾನೂನು ವಿದ್ಯಾರ್ಥಿನಿಗೆ ಬಸ್​ ಓಡಿಸೋ ಕ್ರೇಜ್​: ಒಜ್ಜದ ರಾಜ್ಯದಲ್ಲಿ ಈಕೆಯದ್ದೇ ಹವಾ

ಆದರೂ ಪೋಷಕರು ತಮ್ಮ ಸಾಮರ್ಥ್ಯಗಳಿನುಸಾರವಾಗಿ ಕೆಲವರು ರೂ. 1 ಅಥವಾ 50 ಪೈಸೆಯಷ್ಟು ನಿಡುತ್ತಾರೆ. ಎಂತಹ ಸಂಕಷ್ಟ ಬಂದರೂ ಸಹ ಯಾರ ನೆರವನ್ನು ಅವರು ಇಂದಿಗೂ ಕೇಳಿಲ್ಲ. ಕೆಲವೊಮ್ಮೆ, ಅವರ ಹಳೆಯ ವಿದ್ಯಾರ್ಥಿಗಳು ಅವರನ್ನು ಭೇಟಿ ಮಾಡುತ್ತಾರೆ ಮತ್ತು ಸ್ವಲ್ಪ ಹಣವನ್ನು ನೀಡುತ್ತಾರೆ. ಅದು ಅವರ ಒಂದು ವಾರಕ್ಕೆ ಅಥವಾ 15 ದಿನಗಳ ಜೀವನವನ್ನು ಸಾಗಿಸುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ಅವರ ಯೋಗಕ್ಷೇಮದ ಬಗ್ಗೆ ಕಾಳಜಿ ಹೊಂದಿರುವ ಗ್ರಾಮಸ್ಥರೆಲ್ಲರೂ ಸೇರಿ ಅವರಿಗೆ ಸರ್ಕಾರದಿಂದ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ” ಎಂದು ಪ್ರಮೀಳಾ ಹೇಳಿದರು.

ಶಿಕ್ಷಕಿಯ ಬಗ್ಗೆ ಬಿಜಯ್ ಕುಮಾರ್ ಹೇಳಿದ್ದು ಹೀಗೆ  
“ನಾನು ಈ ಹಿಂದೆ ಮಾಲತಿ ಗುರುಮಾ ಅವರ ವಿದ್ಯಾರ್ಥಿಯಾಗಿದ್ದೆ. ನಾನೀಗ ಎಂಇ ಸ್ಕೂಲ್ ಟೀಚರ್ ಆಗಿದ್ದೇನೆ ಎಂದರೆ ಅದಕ್ಕೆ ನೇರ ಕಾರಣವೇ ಅವರ ಬೋಧನಾ ಶೈಲಿ. ಆದರೆ ಅಂತಹ ಮಹಾನ್‌ ಶಿಕ್ಷಕಿ ಇಂದಿಗೂ ಆ ದನದ ಕೊಟ್ಟಿಗೆಯಲ್ಲಿ ವಾಸ ಮಾಡುತ್ತಿದ್ದಾರೆ. ಇಂದಿಗೂ ಅವರಿಗೆ ಸರಕಾರದಿಂದ ನೆರವು ಸಿಕ್ಕಿಲ್ಲ. ನಾವು ಸಹಾಯ ಮಾಡುತ್ತೇವೆ ಎಂದರೆ ಗುರುಮಾ ಅವರು ಒಪ್ಪುವುದಿಲ್ಲ ಎಂದು ಬಿಜಯ್ ಕುಮಾರ್ ಸಾಹು ಹೇಳಿದರು.
Published by:Ashwini Prabhu
First published: