• ಹೋಂ
  • »
  • ನ್ಯೂಸ್
  • »
  • Explained
  • »
  • Business: ಆಂಧ್ರದ ಶಿಕ್ಷಕಿ ತಯಾರಿಸುವ ಚಹಾ ಕಪ್‌ಗಳಿಗೆ ವಿದೇಶದಲ್ಲೂ ಬಾರಿ ಡಿಮ್ಯಾಂಡ್!​ ಈ ಕಪ್‌ಗಳ ವಿಶೇಷತೆ ಏನು ಗೊತ್ತಾ?

Business: ಆಂಧ್ರದ ಶಿಕ್ಷಕಿ ತಯಾರಿಸುವ ಚಹಾ ಕಪ್‌ಗಳಿಗೆ ವಿದೇಶದಲ್ಲೂ ಬಾರಿ ಡಿಮ್ಯಾಂಡ್!​ ಈ ಕಪ್‌ಗಳ ವಿಶೇಷತೆ ಏನು ಗೊತ್ತಾ?

ಶಿಕ್ಷಕಿ ಜಯಲಕ್ಷ್ಮೀಯವರು

ಶಿಕ್ಷಕಿ ಜಯಲಕ್ಷ್ಮೀಯವರು

ಸಾಮಾನ್ಯವಾಗಿ ನಾವು ಚಹಾ ಕಾಫಿ ಕುಡಿದಾದ ನಂತರ ಕುಡಿದ ಕಪ್ ಅನ್ನು ತೊಳೆದಿಡುತ್ತೇವೆ ಆದರೆ ಇದೇ ಕಪ್ ಅನ್ನು ಸೇವಿಸುವುದು ಹೇಗಿರುತ್ತದೆ ಎಂದಾದರೂ ಆಲೋಚಿಸಿದ್ದೀರಾ? ಹೌದು ಆಂಧ್ರದ ಶಿಕ್ಷಕಿ ಒಬ್ಬರು ತಯಾರಿಸಿದ ಈ ಟೀ ಕಪ್​ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು.

  • Share this:

    ಸಾಮಾನ್ಯವಾಗಿ ನಾವು ಚಹಾ (Tea) ಕಾಫಿ (Coffee) ಕುಡಿದಾದ ನಂತರ ಕುಡಿದ ಕಪ್ ಅನ್ನು ತೊಳೆದಿಡುತ್ತೇವೆ ಆದರೆ ಇದೇ ಕಪ್ (Cup) ಅನ್ನು ಸೇವಿಸುವುದು ಹೇಗಿರುತ್ತದೆ ಎಂದಾದರೂ ಆಲೋಚಿಸಿದ್ದೀರಾ? ಹೌದು ಪ್ಲಾಸ್ಟಿಕ್‌ಗೆ (Plastic) ಪರ್ಯಾಯವಾಗಿರುವ ಈ ಕಪ್‌ಗಳನ್ನು ತಿನ್ನುವ ಇಲ್ಲವೇ ಎಡಿಬಲ್ ಕಪ್‌ಗಳು ಎಂದೇ ಕರೆಯಲಾಗುತ್ತದೆ. ಇಂತಹುದೇ ಕಪ್‌ಗಳನ್ನು ತಯಾರಿಸಿ ಇದೀಗ ಲಕ್ಷ ಲಕ್ಷ ವರಮಾನ ಗಳಿಸುತ್ತಿರುವ ಮಾಜಿ ಶಾಲಾ ಶಿಕ್ಷಕಿಯೊಬ್ಬರು (School Teacher) ಜೀವನದಲ್ಲಿ ಹತಾಶೆ, ಸೋಲು ಅನುಭವಿಸುತ್ತಿರುವವರಿಗೆ ಉತ್ತಮ ಮಾರ್ಗದರ್ಶಿಯಾಗಿದ್ದಾರೆ.


    ಸ್ವದೇಶಿ ಉತ್ಪನ್ನಗಳನ್ನು ಬಳಸಿ ತಯಾರಿಸುವ ಸೇವಿಸಲು ಸಾಧ್ಯವಾಗಿರುವ ಈ ಕಪ್‌ಗಳಿಗೆ ವಿದೇಶದಲ್ಲೂ ಉತ್ತಮ ಬೇಡಿಕೆ ಇದೆ ಎಂದರೆ ಆಕೆಯ ಪ್ರಯತ್ನ ನಿಜಕ್ಕೂ ಮೆಚ್ಚುವಂತಹದ್ದು.


    ಅಕ್ಕಿಹಿಟ್ಟು ಹಾಗೂ ರಾಗಿಹಿಟ್ಟಿನ ಕಪ್‌ಗಳು


    ಎಡಿಬಲ್ ಕಪ್‌ಗಳನ್ನು ತಯಾರಿಸಿ ಬದುಕು ಕಟ್ಟಿಕೊಳ್ಳುತ್ತಿರುವ ಅನೇಕ ಉದ್ಯಮಿಗಳಲ್ಲಿ ಜಯಲಕ್ಷ್ಮೀ ಕೂಡ ಒಬ್ಬರು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಜಯಲಕ್ಷ್ಮೀ ಕಾರಾಣಾಂತರಗಳಿಂದ ಶಿಕ್ಷಕಿ ವೃತ್ತಿಯನ್ನು ತ್ಯಜಿಸಬೇಕಾಯಿತು.


    ಆಗ ಕೈ ಹಿಡಿದು ಮೇಲಕ್ಕೆತ್ತಿದ್ದೇ ಈ ಕಪ್‌ಗಳನ್ನು ತಯಾರಿಸುವ ಉದ್ಯೋಗ ಎಂದು ತಿಳಿಸಿದ್ದಾರೆ. ಮುಖ್ಯವಾಗಿ ರಾಗಿ ಹಿಟ್ಟು ಹಾಗೂ ಅಕ್ಕಿ ಹಿಟ್ಟು ಬಳಸಿ ಸೇವಿಸಬಹುದಾದ ಕಪ್‌ಗಳನ್ನು ಜಯಲಕ್ಷ್ಮೀ ತಯಾರಿಸುತ್ತಿದ್ದಾರೆ.


    ಆಂಧ್ರದ ವಿಶಾಖಪಟ್ಟಣಂನ ರೆಸಪುವನಿಪಲೆಂ ನಲ್ಲಿ ಸಣ್ಣ ಘಟಕವನ್ನು ಹೊಂದಿರುವ ಜಯಲಕ್ಷ್ಮೀ ಆರೋಗ್ಯಕರ ರೀತಿಯಲ್ಲಿ ಕಪ್‌ಗಳನ್ನು ತಯಾರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.


     Tea cups made by Andhra teachers are in demand even abroad What is the specialty of these cups
    ಶಿಕ್ಷಕಿ ಜಯಲಕ್ಷ್ಮೀಯವರು


    ಸಾಮಾನ್ಯವಾಗಿ ಇಂತಹ ಕಪ್‌ಗಳನ್ನು ತಯಾರಿಸುವಾಗ ಹಲವಾರು ವಸ್ತುಗಳನ್ನು ಸೇರಿಸುತ್ತಾರೆ, ಒಮ್ಮೊಮ್ಮೆ ಅದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಕೂಡ ಇರುತ್ತದೆ ಹಾಗೂ ರಾಸಾಯನಿಕ ವಸ್ತುಗಳನ್ನು ಒಳಗೊಂಡಿರುವ ಅಪಾಯವಿರುತ್ತದೆ.


    ಆದರೆ ನಾನು ತಯಾರಿಸುವ ಕಪ್‌ಗಳು ಅಕ್ಕಿಹಿಟ್ಟು ಹಾಗೂ ರಾಗಿಯನ್ನು ಬಳಸಿ ನಿರ್ಮಿಸುವಂತಹದ್ದು ಯಾವುದೇ ಹಾನಿಕಾರಕ ವಸ್ತುಗಳನ್ನು ಬಳಸುವುದಿಲ್ಲ ಎಂದು ತಿಳಿಸಿದ್ದಾರೆ.


    ನಿರಂತರ ಅನ್ವೇಷಣೆ


    ತಿನ್ನಬಹುದಾದ ಕಪ್‌ಗಳನ್ನು ಹೇಗೆ ತಯಾರಿಸಬಹುದು ಎಂಬುದನ್ನು ಕುರಿತು ಜಯಲಕ್ಷ್ಮೀ ಹಲವಾರು ಸೂತ್ರಗಳ ಮೊರೆಹೋಗಿದ್ದಾರೆ ಹಾಗೂ ಬರೋಬ್ಬರಿ ಎರಡು ತಿಂಗಳುಗಳ ಕಾಲ ಹಲವಾರು ಅನ್ವೇಷಣೆಗಳನ್ನು ನಡೆಸಿದ್ದಾರೆ.


    ಸಾಂಕ್ರಾಮಿಕದ ಸಮಯದಲ್ಲಿ ಹೇರಿದ್ದ ಲಾಕ್‌ಡೌನ್ ಈ ಉದ್ಯಮದತ್ತ ನನ್ನನ್ನು ಪ್ರೇರೇಪಿಸಿತು ಎಂಬುದು ಶಿಕ್ಷಕಿಯ ಮಾತಾಗಿದೆ.


    ಜಯಲಕ್ಷ್ಮೀ ತಯಾರಿಸುವ ಕಪ್‌ಗಳಿಗೆ ಸ್ವದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಭರ್ಜರಿ ಬೇಡಿಕೆ ಇದೆ. ತಿಂಗಳಿಗೆ ಸರಿಸುಮಾರು 30,000 ದಿಂದ 40,000 ಕಪ್‌ಗಳನ್ನು ತಯಾರಿಸುವ ಜಯಲಕ್ಷ್ಮೀ ವರ್ಷಕ್ಕೆ ರೂ 7 ರಿಂದ ರೂ 10 ಲಕ್ಷ ಆದಾಯ ಸಂಪಾದಿಸುತ್ತಾರೆ.


    ಕೈಹಿಡಿದ ಉದ್ಯಮ ಇಂದು ಲಕ್ಷ ಲಕ್ಷ ವರಮಾನ


    ಸೇವಿಸುವ ಇಲ್ಲವೇ ಖಾದ್ಯ ಕಪ್ ತಯಾರಿಸುವ ವ್ಯವಹಾರವನ್ನು ಆರಂಭಿಸುವ ಮೊದಲು ಜಯಲಕ್ಷ್ಮೀ ವಿಶಾಖಪಟ್ಟಣಂನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.


    ಆದರೆ 2020 ರಲ್ಲಿ, ಖಾಸಗಿ ಕಂಪನಿಯಲ್ಲಿ ಖಾತೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಅವರ ಪತಿ ಶ್ರೀನಿವಾಸ್ ರಾವ್ ಅವರು ಯಕೃತ್ತು ಸಂಬಂಧಿತ ಕಾಯಿಲೆಯಿಂದ ಅನಾರೋಗ್ಯಕ್ಕೆ ಒಳಗಾದರು.


    ಶಸ್ತ್ರಚಿಕಿತ್ಸೆಯ ನಂತರ ಪೂರ್ಣವಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕೆಂಬ ಸಲಹೆಯ ಮೇರೆಗೆ ಶ್ರೀನಿವಾಸ್ ವಿಶ್ರಾಂತಿ ತೆಗೆದುಕೊಳ್ಳಬೇಕಾಯಿತು ಇತ್ತ ಜಯಲಕ್ಷ್ಮೀ ಪತಿಯ ಆರೋಗ್ಯದ ಸಲುವಾಗಿ ಮನೆಯಲ್ಲಿಯೇ ಅವರನ್ನು ನೋಡಿಕೊಳ್ಳಬೇಕಾಯಿತು.


    ಹಾಗಾಗಿ ಶಿಕ್ಷಕಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಇದೇ ಸಮಯದಲ್ಲಿ ಸಾಂಕ್ರಾಮಿಕ ಕೂಡ ಇಡಿಯ ವಿಶ್ವವವನ್ನೇ ನಲುಗಿಸಿತ್ತು. ಶಸ್ತ್ರಚಿಕಿತ್ಸೆಯ ನಂತರ ಕೋವಿಡ್ ಶ್ರೀನಿವಾಸ್‌ಗೂ ತಗುಲಿತ್ತು ಹಾಗೂ ಆ ಸಮಯದಲ್ಲಿ ಸಂಪೂರ್ಣ ಕುಟುಂಬ ಹೆಚ್ಚಾಗಿ ಬಳಲಿತ್ತು ಎಂಬುದಾಗಿ ಜಯಲಕ್ಷ್ಮೀ ತಿಳಿಸುತ್ತಾರೆ.


    ಕೊರೋನಾ ಸಮಯದಲ್ಲಿ ಉದ್ಯಮದ ಯೋಚನೆ ಹೊಳೆಯಿತು


    ದಂಪತಿಗಳಿಬ್ಬರೂ ತಮ್ಮ ತಮ್ಮ ಉದ್ಯೋಗಗಳನ್ನು ತ್ಯಜಿಸಿದ್ದರಿಂದ ಮುಂದೇನು ಎಂಬ ಚಿಂತೆ ಕಾಡುತ್ತಿತ್ತು ಹಾಗೂ ಅಗತ್ಯವಾಗಿ ದಿನದ ಖರ್ಚುಗಳನ್ನು ಪೂರೈಸಲು ಹಣದ ಅವಶ್ಯಕತೆ ಕೂಡ ಇತ್ತು.


    ಇದೇ ಸಮಯದಲ್ಲಿ ಸ್ವಂತ ಉದ್ಯಮ ಮಾಡಿದರೆ ಹೇಗೆ ಎಂಬ ಆಲೋಚನೆ ಗರಿಗೆದರಿತು ಎಂದು ಜಯಲಕ್ಷ್ಮೀ ತಿಳಿಸಿದ್ದಾರೆ. ಆದರೆ ಜಯಲಕ್ಷ್ಮೀ ವ್ಯವಹಾರದಲ್ಲಿ ಅಷ್ಟೇನೂ ಪರಿಣಿತರಾಗಿರಲಿಲ್ಲ ಹಾಗೂ ಉದ್ಯಮದ ಒಳಹೊರಗುಗಳನ್ನು ಅರಿತುಕೊಂಡವರಾಗಿರಲಿಲ್ಲ.


    ಅದಾಗ್ಯೂ ದಿನನಿತ್ಯಕ್ಕೆ ಅನುಕೂಲಕರವಾಗಿರುವ ಹಾಗೂ ಶೀಘ್ರದಲ್ಲೇ ಕಾರ್ಯಸಾಧ್ಯವಾದ ವ್ಯವಹಾರ ಕಲ್ಪನೆಗಳನ್ನು ಆಕೆ ಅನ್ವೇಷಿಸಲು ಆರಂಭಿಸಿದರು.


    ತನ್ನ ಉದ್ಯಮ ನಿತ್ಯದ ಜೀವನದಲ್ಲಿ ಪ್ರಯೋಜನಕಾರಿಯಾಗಿರಬೇಕು ಹಾಗೂ ಜನರಿಗೆ ಉಪಕಾರಿಯಾಗಿರಬೇಕು ಎಂಬ ನಿಟ್ಟಿನಲ್ಲಿ ಆಕೆ ಯೋಚಿಸಿದರು.


    ಶಿಕ್ಷಕಿ ಜಯಲಕ್ಷ್ಮೀ ತಯಾರಿಸಿದ ಕಪ್​ಗಳು


    ಯೂಟ್ಯೂಬ್ ವಿಡಿಯೋಗಳ ಸಹಾಯ


    ಜನರು ನಿತ್ಯವೂ ಸೇವಿಸುವ ಚಹಾ ಹಾಗೂ ಕಾಫಿ ಕುಡಿಯುವ ಕಪ್‌ಗಳನ್ನು ನಿರ್ಮಿಸುವ ಉದ್ಯಮದ ಯೋಚನೆ ಜಯಲಕ್ಷ್ಮೀಯ ತಲೆಯಲ್ಲಿ ಹೊಳೆದಿತ್ತಾದರೂ ಪ್ಲಾಸ್ಟಿಕ್, ಕಾಗದ ಹಾಗೂ ಮಣ್ಣಿನ ಕಪ್‌ಗಳನ್ನು ಅದಾಗಲೇ ಸಾಕಷ್ಟು ಜನರು ತಯಾರಿಸುತ್ತಿದ್ದರು.


    ಇವರೆಲ್ಲರಿಗಿಂತಲೂ ಭಿನ್ನವಾಗಿ ತಾನು ಏನು ಮಾಡಬಹುದು ಎಂಬುದನ್ನು ಜಯಲಕ್ಷ್ಮೀ ಯೋಚಿಸಿದರು. ತಿನ್ನಬಹುದಾದ ಟೀ ಕಪ್‌ಗಳ ವಿಡಿಯೋವನ್ನು ಅವರು ಯೂಟ್ಯೂಬ್‌ನಲ್ಲಿ ಕಂಡಾಗ ಇದನ್ನು ಕುರಿತು ಆಕೆ ಇನ್ನಷ್ಟು ಹುಡುಕಾಡಿದರು.


    ಪ್ರಸ್ತುತ ಇಂತಹ ಕಪ್‌ಗಳನ್ನು ತಯಾರಿಸುವ ಬ್ರ್ಯಾಂಡ್‌ನ ಪರವಾನಗಿಯನ್ನು ತೆಗೆದುಕೊಳ್ಳುವ ಯೋಜನೆಯನ್ನು ಜಯಲಕ್ಷ್ಮೀ ನಿರ್ಧಾರ ತಾಳಿದ್ದರೂ ಆ ಕಪ್‌ಗಳನ್ನು ಬಳಸಿದ ನಂತರ ಅದರ ಗುಣಮಟ್ಟ ಮತ್ತಿತ್ತರ ಅಂಶಗಳು ಹೇಗಿರುತ್ತವೆ ಎಂಬ ಅನುಮಾನ ಜಯಲಕ್ಷ್ಮೀಗೆ ಬಂದಿತು.


    ಹಾಗಾಗಿ ನಾನೇ ನನ್ನದೇ ಆದ ಉತ್ಪನ್ನವನ್ನು ಹೊರತರಬೇಕೆಂಬ ನಿರ್ಧಾರವನ್ನು ಮಾಡಿದೆ ಎಂದು ಅವರು ತಿಳಿಸುತ್ತಾರೆ.


    ಪುದುಚೇರಿ ಮೂಲದ ಬ್ರ್ಯಾಂಡ್‌ನಿಂದ ಕೆಲವು ಖಾದ್ಯ ಕಪ್‌ಗಳನ್ನು ಖರೀದಿಸಿದಾಗ ಗುಣಮಟ್ಟದ ಸಮಸ್ಯೆ ಉಂಟಾಗಿರುವುದನ್ನು ಜಯಲಕ್ಷ್ಮೀ ತಿಳಿಸಿದ್ದಾರೆ.


    ಆ ಕಪ್‌ಗಳನ್ನು ಮೈದಾದಿಂದ ತಯಾರಿಸಲಾಗಿತ್ತು, ಹಾಗಾಗಿ ಜನರಿಗೆ ವಿತರಿಸುವ ಕಪ್ ಆರೋಗ್ಯಕರವಾಗಿರಬೇಕೆಂದು ನಾನು ಬಯಸಿದೆ ಎಂದು ಜಯಲಕ್ಷ್ಮೀ ತಿಳಿಸುತ್ತಾರೆ.


    ಕಪ್‌ಗಳ ತಯಾರಿಗೆ ಸ್ವದೇಶಿ ವಸ್ತುಗಳನ್ನೇ ಬಳಸಬೇಕು ಎಂಬುದು ನನ್ನ ಬಯಕೆಯಾಗಿತ್ತು ಎಂದು ಆಕೆ ನುಡಿಯುತ್ತಾರೆ. ಅದಕ್ಕಾಗಿಯೇ ಆ ದಿಸೆಯಲ್ಲಿ ಹಲವಾರು ಪ್ರಯೋಗಗಳನ್ನು ನಾನು ಮಾಡಿದೆ ಎಂದು ತಿಳಿಸುತ್ತಾರೆ.


    ಉದ್ಯಮವನ್ನು ಪ್ರಾರಂಭಿಸಲು, ಜಯಲಕ್ಷ್ಮಿ ಅವರು ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ (ಪಿಎಂಎಫ್‌ಎಂಇ) ಯೋಜನೆಯ ಪ್ರಧಾನ ಮಂತ್ರಿ ವ್ಯವಸ್ಥೆಯಿಂದ ಸಾಲ ಪಡೆದುಕೊಂಡಿದ್ದಾರೆ ಹಾಗೂ ಬ್ಯಾಂಕ್‌ನಲ್ಲಿ ಚಿನ್ನಾಭರಣಗಳನ್ನು ಗಿರವಿ ಇಟ್ಟಿರುವುದಾಗಿ ತಿಳಿಸಿದ್ದಾರೆ.


    ಯಂತ್ರೋಪಕರಣಗಳ ಖರೀದಿ


    ಕಪ್‌ಗಳ ತಯಾರಿಗೆ ಸುಮಾರು 15 ಕೆಜಿ ಕಚ್ಚಾ ಪದಾರ್ಥಗಳು ಅಗತ್ಯವಿದೆ ಎಂದು ತಿಳಿಸಿರುವ ಜಯಲಕ್ಷ್ಮೀ ಬೇರೆ ಬೇರೆ ಅನ್ವೇಷಣೆಗಳನ್ನು ನಡೆಸುವ ಸಂದರ್ಭದಲ್ಲಿ 1 ಲಕ್ಷ ರೂ ಖರ್ಚಾಯಿತು ಎಂದು ತಿಳಿಸಿದ್ದಾರೆ.


    ಆದರೆ ಅಂತಿಮವಾಗಿ ಅಕ್ಕಿ ಹಿಟ್ಟು ಹಾಗೂ ರಾಗಿ ಹಿಟ್ಟು ಬಳಸಿ ಕಪ್‌ಗಳನ್ನು ತಯಾರಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. ಕಪ್‌ಗಳ ತಯಾರಿಕೆಗಾಗಿ ಬೆಂಗಳೂರು ಹಾಗೂ ಹೈದ್ರಾಬಾದ್‌ನಿಂದ ಯಂತ್ರೋಪಕರಣಗಳನ್ನು ಖರೀದಿಸಿದೆ ಹಾಗೂ ಅಂತಿಮವಾಗಿ ಫೆಬ್ರವರಿ 2021 ರಲ್ಲಿ ಉತ್ಪಾದನಾ ಘಟಕವನ್ನು ಆರಂಭಿಸಿರುವುದಾಗಿ ಜಯಲಕ್ಷ್ಮೀ ತಿಳಿಸಿದ್ದಾರೆ.


    ಸೇವಿಸಬಹುದಾದ ಟೀ ಕಪ್‌ಗಳು 20 ನಿಮಿಷದವರೆಗೆ ಬಿಸಿಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಜಯಲಕ್ಷ್ಮೀ ತಿಳಿಸಿದ್ದಾರೆ.


    ತಾವು ತಯಾರಿಸುವ ಟೀ ಕಪ್‌ಗಳ ಗುಣಮಟ್ಟ ಹಾಗೂ ಆಕಾರಕ್ಕೆ ಮಹತ್ವ ಕೊಡುವ ಜಯಲಕ್ಷ್ಮೀ, ಗ್ರಾಹಕರಿಗೆ ಮೋಸವಾಗದಂತೆ ಉತ್ತಮ ರೀತಿಯಲ್ಲಿ ಕಪ್‌ಗಳನ್ನು ತಯಾರಿಸಿಕೊಡುವುದಾಗಿ ತಿಳಿಸಿದ್ದಾರೆ.


    ಎರಡು ವಿಭಿನ್ನ ಗಾತ್ರಗಳಲ್ಲಿ ಕಪ್‌ಗಳನ್ನು ತಯಾರಿಸುವ ಜಯಲಕ್ಷ್ಮೀ 60 ಮಿಲಿ ಮತ್ತು 80 ಮಿಲಿ ಆಕಾರದಲ್ಲಿ ಚಹಾ ಕಪ್‌ಗಳನ್ನು ತಯಾರಿಸುತ್ತಾರೆ ಹಾಗೂ ಇದಕ್ಕೆ ತಗುಲುವ ವೆಚ್ಚ ರೂ 2.5 ರಿಂದ ರೂ 3.5 ಪೈಸೆ ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ: Farmer Success Story: ಕೃಷಿಯಲ್ಲಿ ನಷ್ಟ; ಕೈ ಕಟ್ಟಿ ಕೂರದೇ ಕೋಳಿ ಸಾಕಾಣಿಕೆಯಲ್ಲಿ ಯಶಸ್ಸು ಕಂಡ ರೈತ


    ಮಸಾಲೆ ಮಿಶ್ರಿತ ಕಪ್‌ಗಳು


    ಚಹಾ ಕಪ್‌ಗಳಲ್ಲಿ ಅಕ್ಕಿ ಹಿಟ್ಟು ಹಾಗೂ ರಾಗಿ ಹಿಟ್ಟುಗಳನ್ನು ಬಳಸುವುದು ಮಾತ್ರವಲ್ಲದೆ ಸುವಾಸನೆಗಾಗಿ ಚಾಕಲೇಟ್, ಸ್ಟ್ರಾಬೆರಿ, ವೆನಿಲ್ಲಾ, ಏಲಕ್ಕಿ ಮೊದಲಾದ ಸಾಮಾಗ್ರಿಗಳನ್ನು ಸೇರಿಸುತ್ತಾರೆ ಎಂದು ತಿಳಿಸಿದ್ದಾರೆ.




    ಪಾನೀಯಕ್ಕೆ ಕೂಡ ಈ ಮಸಾಲೆಗಳಿಂದ ಸುವಾಸನೆ ದೊರೆಯುತ್ತದೆ ಎಂಬುದು ಜಯಲಕ್ಷ್ಮೀಯವರ ಮಾತಾಗಿದೆ. ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ಆನ್‌ಲೈನ್ ತಾಣಗಳನ್ನು ಆಶ್ರಯಿಸಿಕೊಂಡಿರುವ ಜಯಲಕ್ಷ್ಮೀ ಫೇಸ್‌ಬುಕ್, ಯೂಟ್ಯೂಬ್ ಮೊದಲಾದ ತಾಣಗಳಲ್ಲಿ ಉತ್ಪನ್ನಗಳ ಪ್ರಚಾರ ನಡೆಸಿರುವುದಾಗಿ ತಿಳಿಸಿದ್ದಾರೆ.


    ಅದೇ ರೀತಿ ತಮ್ಮ ಉತ್ಪನ್ನಗಳ ಮಾರಾಟವನ್ನು ಇದೇ ತಾಣಗಳಲ್ಲಿ ಮಾಡುತ್ತಿದ್ದಾರೆ.


    30 ರಿಂದ 40,000 ಕಪ್‌ಗಳ ತಯಾರಿ


    ದಿನಕ್ಕೆ ಸುಮಾರು 3,000 ದಿಂದ 4,000 ಕಪ್‌ಗಳು ಹಾಗೂ ತಿಂಗಳಿಗೆ 30 ಸಾವಿರದಿಂದ 40,000 ಕಪ್‌ಗಳನ್ನು ತಯಾರಿಸಲಾಗುತ್ತದೆ ಎಂದು ತಿಳಿಸಿರುವ ಜಯಲಕ್ಷ್ಮೀ ವರ್ಷಕ್ಕೆ 7 ರಿಂದ 10 ಲಕ್ಷದವರೆಗೆ ಆದಾಯ ಗಳಿಸಲು ಸಾಧ್ಯವಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.


    ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಇರಾದೆ ಹೊಂದಿರುವ ಜಯಲಕ್ಷ್ಮೀ ಚಾಟ್ ಕಪ್‌ಗಳು, ಐಸ್‌ಕ್ರೀಮ್ ಬೌಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಉದ್ದೇಶ ಹೊಂದಿದ್ದಾರೆ.


    ಆಂಧ್ರಪ್ರದೇಶ ಮಾತ್ರವಲ್ಲದೆ ಒಡಿಶಾ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಛತ್ತೀಸ್‌ಗಢದಂತಹ ರಾಜ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಜಯಲಕ್ಷ್ಮೀಗೆ ಕಪ್‌ಗಳ ತಯಾರಿಕೆಗೆ ಆರ್ಡರ್‌ಗಳು ದೊರೆಯುತ್ತಿವೆ ಎಂಬುದು ಆಕೆ ಹೇಳಿದ್ದಾರೆ.


    ಒಟ್ಟಿನಲ್ಲಿ ಪ್ರಯತ್ನಿಸಿದರೆ ಏನೂ ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಜಯಲಕ್ಷ್ಮೀ ಉತ್ತಮ ಉದಾಹರಣೆಯಾಗಿದ್ದಾರೆ.

    Published by:Gowtham K
    First published: