ಆಪ್ತರೊಂದಿಗೆ 10 ನಿಮಿಷ ಫೋನ್‌ನಲ್ಲಿ ಮಾತನಾಡುವುದರಿಂದ ಒಂಟಿತನ ದೂರ: ಅಧ್ಯಯನ

ಮೊದಲ ವಾರ ಸ್ವಯಂಸೇವಕರು ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜನರಿಗೆ ವಾರದಲ್ಲಿ 5 ದಿನ ಕರೆ ಮಾಡಿದರು. ಇದು ತಮಗೆ ಉತ್ತಮವೆಂದು ಅವರು ಹೇಳಿಕೊಂಡಿದ್ದರು. ನಂತರದ ವಾರಗಳಲ್ಲಿ ವಾರಕ್ಕೆ 2 ಕರೆಗಳು ಅಥವಾ 5 ಕರೆಗಳನ್ನು ಸ್ವೀಕರಿಸಬೇಕೆ ಎಂಬುದನ್ನು ಅವರೇ ಆಯ್ಕೆ ಮಾಡಿಕೊಂಡರು.

Photo: Google

Photo: Google

 • Share this:
  ವಾರದಲ್ಲಿ 10 ನಿಮಿಷಗಳ ಕಾಲ ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡುವುದು ಹಾಗೂ ಸಂಭಾಷಣೆಯ ಮೇಲೆ ನಿಯಂತ್ರಣವನ್ನಿಟ್ಟುಕೊಳ್ಳುವುದರಿಂದ ಒಂಟಿತನವನ್ನು ಕಡಿಮೆ ಮಾಡಬಹುದು ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಅಧ್ಯಯನದಲ್ಲಿ ಭಾಗವಹಿಸಿದ 240 ಜನರ ಪೈಕಿ ಅರ್ಧದಷ್ಟು ಜನರು ಒಂದು ತಿಂಗಳ ಅವಧಿಯಲ್ಲಿ ಸ್ವಯಂಸೇವಕರಿಂದ ಸಂಕ್ಷಿಪ್ತ ದೂರವಾಣಿ ಕರೆಗಳನ್ನು ಸ್ವೀಕರಿಸಲು ಆಯ್ಕೆಯಾಗಿದ್ದರು. ಈ ಪೈಕಿ ಸರಾಸರಿ ಶೇ.20ರಷ್ಟು ಜನರು ಕಡಿಮೆ ಒಂಟಿತನವನ್ನು ಅನುಭವಿಸುತ್ತಿರುವ ಬಗ್ಗೆ JAMA ಸೈಕಿಯಾಟ್ರಿ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ವರದಿ ತಿಳಿಸಿದೆ.

  ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜನರು ಸ್ವಯಂಸೇವಕರಿಂದ ಸಂವಹನ ಕೌಶಲ್ಯಗಳ ಬಗ್ಗೆ ಸಂಕ್ಷಿಪ್ತ ತರಬೇತಿ ಪಡೆದುಕೊಂಡಿದ್ದರು. ಇದರಲ್ಲಿ ಅವರು ಯಾವ ವಿಷಯದ ಕುರಿತು ಮಾತನಾಡುತ್ತಿದ್ದಾರೆಂಬುದರ ಬಗ್ಗೆ ಕೇಳಿಸಿಕೊಳ್ಳುವುದು ಮತ್ತು ಪ್ರಶ್ನೆಗಳನ್ನು ಕೇಳುವುದು ಒಳಗೊಂಡಿತ್ತು ಎಂದು ಅಧ್ಯಯನದ ಪ್ರಮುಖ ಲೇಖಕ, ಟೆಕ್ಸಾಸ್ ವಿಶ್ವವಿದ್ಯಾಲಯದ ಡೆಲ್ ಮೆಡಿಕಲ್ ಶಾಲೆಯ ಫ್ಯಾಕ್ಟರ್ ಹೆಲ್ತ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮನಿಂದರ್ ಕಹ್ಲೋನ್ ಹೇಳಿದ್ದಾರೆ.

  ಅಧ್ಯಯನದಲ್ಲಿ ಭಾಗವಹಿಸಿದ್ದವರು ಮೀಲ್ಸ್ ಆನ್ ವೀಲ್ಸ್ ಸೆಂಟ್ರಲ್ ಟೆಕ್ಸಾಸ್‌ನ ಎಲ್ಲಾ ಗ್ರಾಹಕರ ಸಂಭಾಷಣೆಗಳನ್ನು ಮುನ್ನಡೆಸಿದರು. ಇದು ಕರೆಗಳ ಕಾರ್ಯಸೂಚಿಯನ್ನು ವ್ಯಾಖ್ಯಾನಿಸಲು ಅವಕಾಶ ಮಾಡಿಕೊಟ್ಟಿತು. ‘ಕೆಲವೊಮ್ಮೆ ಕಾರ್ಯಸೂಚಿಯು ಅವರಿಗೆ ನಿಯಂತ್ರಣವಿದೆ ಎಂಬುದನ್ನು ತಿಳಿಸಿತು’ ಎಂದು ಕಹ್ಲೋನ್ ಹೇಳಿದ್ದಾರೆ. ‘ಅವರು ತಮ್ಮ ಜೀವನದ ಇತರ ಅಂಶಗಳಲ್ಲಿ ನಿಯಂತ್ರಣ ಹೊಂದಿಲ್ಲದಿರಬಹುದು, ಆದರೆ ಅವರು ಸಂಭಾಷಣೆಯನ್ನು ನಿಯಂತ್ರಿಸಬಹುದು’ ಎಂದು ಅವರು ತಿಳಿಸಿದ್ದಾರೆ.

  ಮೊದಲ ವಾರ ಸ್ವಯಂಸೇವಕರು ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜನರಿಗೆ ವಾರದಲ್ಲಿ 5 ದಿನ ಕರೆ ಮಾಡಿದರು. ಇದು ತಮಗೆ ಉತ್ತಮವೆಂದು ಅವರು ಹೇಳಿಕೊಂಡಿದ್ದರು. ನಂತರದ ವಾರಗಳಲ್ಲಿ ವಾರಕ್ಕೆ 2 ಕರೆಗಳು ಅಥವಾ 5 ಕರೆಗಳನ್ನು ಸ್ವೀಕರಿಸಬೇಕೆ ಎಂಬುದನ್ನು ಅವರೇ ಆಯ್ಕೆ ಮಾಡಿಕೊಂಡರು. ಮೊದಲ ವಾರದಲ್ಲಿ ಸಂಭಾಷಣೆಗಳು 10 ನಿಮಿಷಗಳಿಗಿಂತ ಸ್ವಲ್ಪ ಹೆಚ್ಚಾಗಿದ್ದವು ಎಂದು ಕಹ್ಲೋನ್ ಹೇಳಿದ್ದಾರೆ. ಆದರೆ ಉಳಿದ ತಿಂಗಳ ಅಧ್ಯಯನದ ಸಮಯದಲ್ಲಿ ಅವು 10 ನಿಮಿಷಗಳಿಗೆ ಸಮನಾದವು. ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜರನು ತಮ್ಮದೇ ಆದ ದೈನಂದಿನ ಜೀವನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು ಮತ್ತು ಅವರ ಸ್ವಯಂಸೇವಕರ ಜೀವನದ ಬಗ್ಗೆಯೂ ಕೇಳುತ್ತಿದ್ದರು.

  ಫೋನ್ ಕರೆಗಳನ್ನು ಸ್ವೀಕರಿಸಿದ ಜನರು ಮತ್ತು ಒಂಟಿತನ, ಆತಂಕ ಮತ್ತು ಖಿನ್ನತೆ ಹೊಂದಿರದ ಜನರ ಗುಂಪಿನ ಮನಸ್ಥಿತಿಯ ಬಗ್ಗೆ ತಿಂಗಳ ಪ್ರಾರಂಭ ಮತ್ತು ಕೊನೆಯಲ್ಲಿ ವೈಜ್ಞಾನಿಕ ಮಾಪಕಗಳಲ್ಲಿ ಅಳೆಯಲಾಗುತ್ತಿತ್ತು. ಆತಂಕ ಮತ್ತು ಖಿನ್ನತೆಯ ಮಟ್ಟ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಸಂಶೋಧಕರು ಈ ರೀತಿ ಮಾಡುತ್ತಿದ್ದರು. ಏಕೆಂದರೆ ಕರೆಗಳಿಂದ ಏನಾದರೂ ಪರಿಣಾಮ ಬೀರಬಹುದೇ ಎಂಬುದನ್ನು ಕಂಡುಕೊಳ್ಳಲು ಇದು ಸಹಕಾರಿಯಾಗಿತ್ತು ಎಂದು ಕಹ್ಲೋನ್ ಹೇಳಿದ್ದಾರೆ.

  ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ 240 ಜನರ ಪೈಕಿ ಬಹುತೇಕರು ವಾರದಲ್ಲಿ ಯಾರೊಂದಿಗಾದರೂ 10 ನಿಮಿಷಗಳ ಕಾಲ ಮಾತನಾಡುವುದನ್ನು ರೂಢಿಸಿಕೊಂಡರೆ ಖಿನ್ನತೆ ಮತ್ತು ಆತಂಕ ದೂರವಾಗುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದರಿಂದ ಒಂಟಿತನದ ಅನುಭವವನ್ನು ಕೂಡ ದೂರ ಮಾಡಬಹುದಾಗಿದೆ. ಈ ಫಲಿತಾಂಶಗಳು ‘ಒಂಟಿತನ ಪ್ರಭಾವಕ್ಕಿಂತಲೂ ಹೆಚ್ಚು ಗಮನಾರ್ಹವಾದವು, ಏಕೆಂದರೆ ಆ ಫಲಿತಾಂಶಗಳನ್ನು ನಾವು ಅಗತ್ಯವಾಗಿಯೂ ನಿರೀಕ್ಷಿಸಿರಲಿಲ್ಲ’ ಎಂದು ಕಹ್ಲೋನ್ ಹೇಳಿದ್ದಾರೆ.

  ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಅನೇಕ ಜನರು ಒಂಟಿತನದ ಅನುಭವಕ್ಕೆ ತುತ್ತಾಗಿರುತ್ತಾರೆ. ಅಂತಹವರಿಗೆ ಬೇಕಾಗಿರುವುದು ಕೆಲ ಸಾಂತ್ವನದ ಮಾತುಗಳು. ಆ ಮಾತುಗಳಿಂದ ಅವರ ಜೀವನಶೈಲಿಯಲ್ಲಿ ಹೊಸ ಬದಲಾವಣೆ ಮೂಡುತ್ತದೆ. ಒಂಟಿತನ, ಖಿನ್ನತೆ ಮತ್ತು ಆತಂಕದಿಂದ ಬಳಲುವ ಜನರನ್ನು ಹಾಗೆಯೇ ಇರಲು ಬಿಟ್ಟರೆ ಅದು ಮುಂದೆ ಅಪಾಯಕಾರಿ ಮಟ್ಟ ತಲುಪುತ್ತದೆ. ಈ ರೀತಿಯ ಗುಣಲಕ್ಷಣ ಹೊಂದಿರುವ ಅಥವಾ ಒಂಟಿತನದ ಅನುಭವ ಹೊಂದಿರುವ ಜನರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಒಂದೆರಡು ಸಾಂತ್ವನದ ಮಾತುಗಳನ್ನು ಹೇಳಿ ಅವರಿಗೆ ಹೊಸ ಚೈತನ್ಯ ನೀಡಬೇಕಾಗಿದೆ ಎಂದು ಅಧ್ಯಯನವು ತಿಳಿಸಿದೆ.
  Published by:Harshith AS
  First published: