Healthy Heart: ಶ್, ಇದು ಹೃದಯಗಳಾ ವಿಷಯ! ಅವರಿವರ ಮಾತು ಕೇಳೋದು ಬಿಡಿ, ಸ್ವಲ್ಪ ಹಾರ್ಟ್‌ನ ಮಾತೂ ಕೇಳಿ!

ಹೃದ್ರೋಗ ತಜ್ಞ ಡಾ. ಕೆ.ಕೆ.ತಲ್ವಾರ್ ಅವರು ಹೃದಯ ಸಂಬಂಧಿ ಅರಿಥ್ಮಿಯಾ ಅಥವಾ ಅನಿಯಮಿತ ಬಡಿತಗಳನ್ನು ಪತ್ತೆ ಹಚ್ಚುವ ಕೆಲವು ಅತ್ಯುತ್ತಮ ಮಾರ್ಗಗಳನ್ನು ಪ್ರವರ್ತಿಸಿದ್ದಾರೆ. ಅವರು ಅನೇಕ ವರ್ಷಗಳಿಂದ ನಿರಂತರವಾಗಿ ಯುವ ಜನರಲ್ಲಿ ಹೆಚ್ಚಾಗುತ್ತಿರುವ ಈ ಮಾನಸಿಕ ಒತ್ತಡಗಳನ್ನು ಕಂಡು ಕೊಂಡಿದ್ದಾರೆ. ಹಾಗಾದ್ರೆ ಹೃದಯದ ಆರೋಗ್ಯ ಕಾಪಾಡೋದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಂತೂ ಈ ಹಠಾತ್ ಹೃದಯ ಸಂಬಂಧಿ ಸಾವುಗಳು (Cardiac death) ತುಂಬಾನೇ ಆಗುತ್ತಿರುವುದನ್ನು ನಾವು ಕೇಳುತ್ತಿದ್ದೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಈ ಹಠಾತ್ ಹೃದಯ ಸಂಬಂಧಿ ಸಾವುಗಳು ಯುವ ಜನರಲ್ಲಿ (Youths) ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ತುಂಬಾನೇ ಗಂಭೀರವಾದ ವಿಷಯವಾಗಿದೆ ಎಂದು ಹೇಳಬಹುದು. ತುಂಬಾನೇ ಆರೋಗ್ಯಪೂರ್ಣವಾಗಿ (Healthy) ಕಾಣುವವರು ಸಹ ಇತ್ತೀಚೆಗೆ ಈ ಕಾರ್ಡಿಯಕ್ ಅರೆಸ್ಟ್ ನಿಂದ (Cardiac arrest) ಸಾವನ್ನಪ್ಪಿದ್ದಾರೆ ಎಂಬ ಸುದ್ದಿಗಳು ನಾವು ತುಂಬಾನೇ ಕೇಳುತ್ತಿದ್ದೇವೆ. ಇದಕ್ಕೇನು ಮುಖ್ಯವಾದ ಕಾರಣ ಅಂತ ಹುಡುಕುತ್ತಾ ಹೋದರೆ, ಇದಕ್ಕೆ ಸಿಗುವ ಕಾರಣಗಳು ಅನೇಕವು ಇರುತ್ತವೆ.

ಹೃದ್ರೋಗ ತಜ್ಞ ಡಾ.ಕೆ.ಕೆ.ತಲ್ವಾರ್ ಅವರು ಹೃದಯ ಸಂಬಂಧಿ ಅರಿಥ್ಮಿಯಾ ಅಥವಾ ಅನಿಯಮಿತ ಬಡಿತಗಳನ್ನು ಪತ್ತೆ ಹಚ್ಚುವ ಕೆಲವು ಅತ್ಯುತ್ತಮ ಮಾರ್ಗಗಳನ್ನು ಪ್ರವರ್ತಿಸಿದ್ದಾರೆ ಮತ್ತು ಏಮ್ಸ್ ನಲ್ಲಿ ಹೃದಯ ವೈಫಲ್ಯ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದ್ದಾರೆ. ಅವರು ಅನೇಕ ವರ್ಷಗಳಿಂದ ನಿರಂತರವಾಗಿ ಯುವ ಜನರಲ್ಲಿ ಹೆಚ್ಚಾಗುತ್ತಿರುವ ಈ ಮಾನಸಿಕ ಒತ್ತಡಗಳನ್ನು ಕಂಡು ಕೊಂಡಿದ್ದಾರೆ.

ಭಾರತೀಯರು ಹೆಚ್ಚು ಹೃದಯಾಘಾತಕ್ಕೆ ಒಳಗಾಗುವುದೇಕೆ?
"ವಾಸ್ತವವೆಂದರೆ, ಆನುವಂಶಿಕವಾಗಿ ನಾವು ದಕ್ಷಿಣ ಏಷ್ಯಾದವರು ಬೇರೆ ಇತರೆ ರಾಷ್ಟ್ರಗಳ ಜನರಿಗೆ ಹೋಲಿಸಿದರೆ ನಾವು ಹೆಚ್ಚು ಈ ಹೃದಯಾಘಾತಕ್ಕೆ ಒಳಗಾಗುತ್ತೇವೆ ಮತ್ತು ಸುಮಾರು 10 ವರ್ಷಗಳ ಮುಂಚೆಯೇ ಈ ಹೃದಯ ಸಂಬಂಧಿ ಸಮಸ್ಯೆಗಳನ್ನು ಅನುಭವಿಸುತ್ತೇವೆ. ಚಿಕ್ಕ ವಯಸ್ಸಿನ ರೋಗಿಗಳ ಸಂಖ್ಯೆ ಇತ್ತೀಚೆಗೆ ತುಂಬಾನೇ ಹೆಚ್ಚುತ್ತಿದೆ" ಎಂದು ದೆಹಲಿಯ ಪಿಎಸ್ಆರ್‌ಐ ನ ಹೃದ್ರೋಗ ವಿಭಾಗದ ಅಧ್ಯಕ್ಷರು ಹೇಳುತ್ತಾರೆ.

ಅದರಲ್ಲಿ ಬಹಳಷ್ಟು ಯುವ ಭಾರತೀಯರು ರೋಗ ನಿರ್ಣಯವಾಗದೆ ಉಳಿದಿದ್ದಾರೆ ಮತ್ತು ತಮ್ಮ ಕಳಪೆ ಜೀವನಶೈಲಿಯನ್ನು ಹಾಗೆಯೇ ಮುಂದುವರಿಸಿದ್ದಾರೆ ಎಂದು ಹೇಳಬಹುದು.

"ಆಗಾಗ್ಗೆ ಯುವಕರು ನನ್ನ ಬಳಿಗೆ ಬಂದು, ಅವರು ಆರೋಗ್ಯಕರ ಮತ್ತು ಸದೃಢರಾಗಿದ್ದಾರೆ, ಪ್ರತಿದಿನ ಅವರು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಾಕಷ್ಟು ಕ್ಯಾಲೋರಿಗಳನ್ನು ಬರ್ನ್ ಮಾಡುತ್ತಾರೆ ಅಂತೆಲ್ಲಾ ಹೇಳುತ್ತಾರೆ. ಆದರೆ ಅವರ ಆ ತಕ್ಷಣದ ರಕ್ತ ಪರೀಕ್ಷಾ ವರದಿಗಳು ಚಿಂತೆ ಮಾಡುವಂತಹ ಯಾವುದೇ ಕಾರಣವನ್ನು ತೋರಿಸಿರುವುದಿಲ್ಲ” ಎಂದು ಹೇಳಿದರು. “ಅವರಿಗೆ ಗೊತ್ತಿಲ್ಲದ ಒಂದು ಸಂಗತಿಯೆಂದರೆ, ಈ ದಿನಗಳಲ್ಲಿ ಹೆಚ್ಚಾಗಿ ಮಾತನಾಡಲಾಗುತ್ತಿರುವ ಪ್ಲೇಕ್ ಸ್ಫೋಟಗಳ ಹೊರತಾಗಿ, ನಿಶ್ಯಬ್ದವಾದ ಅಂತರ್ಗತ ಹೃದಯದ ಸ್ಥಿತಿಗಳು ಇರಬಹುದು, ಅದು ತೊಂದರೆದಾಯಕವಾಗಿಲ್ಲ, ಆದರೆ ಕಠಿಣ ವ್ಯಾಯಾಮದ ಒಂದು ಕ್ಷಣದಲ್ಲಿ ಆ ನೋವು ಪ್ರಕಟಗೊಳ್ಳುತ್ತದೆ ಮತ್ತು ಇದು ಅನೇಕರನ್ನು ಸಾವಿಗೆ ದೂಡುತ್ತದೆ” ಎಂದು ಹೇಳಿದರು.

ಅವರ ಸಾಮಾನ್ಯ ದೈನಂದಿನ ರಕ್ತ ವರದಿಗಳು ತಮ್ಮ ಜೀವನಶೈಲಿಯನ್ನು ಹಾಗೆಯೇ ಮುಂದುವರಿಸಲು ಅವರನ್ನು ಪ್ರೋತ್ಸಾಹಿಸುತ್ತವೆ. ಅವರ ಅನಾರೋಗ್ಯಕರ ಆಹಾರ ಕ್ರಮ, ವಾರಾಂತ್ಯದ ರಾತ್ರಿಗಳಲ್ಲಿ ಧೂಮಪಾನ ಮತ್ತು ಅತಿಯಾದ ಮದ್ಯಪಾನವು ಮಾಡುವುದು ಈ ರೀತಿಯ ಹಠಾತ್ ಹೃದಯ ಸಂಬಂಧಿ ರೋಗಗಳಿಗೆ ಆಹ್ವಾನ ನೀಡುತ್ತವೆ ಎಂದು ಹೇಳಬಹುದು. ಕಳೆದ ಒಂದು ದಶಕದಲ್ಲಿ, ಮದ್ಯಪಾನ ಸೇವನೆ ಮಾಡುವವರ ಸರಾಸರಿ ವಯಸ್ಸು ಕಡಿಮೆಯಾಗಿದೆ. ಆದ್ದರಿಂದ ಮದ್ಯವ್ಯಸನವು ಈಗ ಯುವ ಜನರಲ್ಲಿ ಪ್ರಮುಖ ಸಮಸ್ಯೆಯಾಗಿ ಹೊರ ಹೊಮ್ಮುತ್ತಿದೆ ಎಂದು ಹೇಳಬಹುದು.

ಜೀವನಶೈಲಿ ಅಸ್ವಸ್ಥತೆ ಪ್ರಮುಖ ಕಾರಣ
ಅವುಗಳ ಅಂತರ್ಗತ ಹೃದಯದ ಸ್ಥಿತಿಯನ್ನು ಪತ್ತೆ ಹಚ್ಚದೆ, ಇವು ವೇಗವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಹೃದಯವನ್ನು ಮತ್ತಷ್ಟು ಒತ್ತಡಗೊಳಿಸುತ್ತವೆ. ಆದ್ದರಿಂದ ಅವರು ನಿಯಮಿತವಾಗಿ ವ್ಯಾಯಾಮ ಮಾಡಿದರೂ ಸಹ, ಜೀವನಶೈಲಿ ಅಸ್ವಸ್ಥತೆಯು ಒಂದು ಪ್ರಮುಖ ಅಪಾಯದ ಅಂಶವಾಗಿದೆ. ಏಕೆಂದರೆ ಇದು ವ್ಯಾಯಾಮದಿಂದ ಉಂಟಾಗುವ ಒತ್ತಡವನ್ನು ಸಹ ಮೀರಿಸುತ್ತದೆ "ಎಂದು ಡಾ. ತಲ್ವಾರ್ ಅವರು ಹೇಳುತ್ತಾರೆ.

ಗುರುಗ್ರಾಮದ ಫೋರ್ಟಿಸ್ ನ ಹಾರ್ಟ್ ಅಂಡ್ ವ್ಯಾಸ್ಕುಲರ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷ ಡಾ. ಟಿ.ಎಸ್.ಕ್ಲೇರ್ ಅವರು ಹೇಳುವಂತೆ "ಬಹಳಷ್ಟು ಭಾರತೀಯರು ಆರೋಗ್ಯಕರವಾಗಿಯೇ ಕಾಣುತ್ತಾರೆ, ಆದರೆ ವೈದ್ಯಕೀಯವಾಗಿ ಅವರು ಅಷ್ಟೊಂದು ಆರೋಗ್ಯವಾಗಿರದೆ ಇರಬಹುದು, ಅವರ ಅಂತರ್ಗತ ಹೃದಯ ಕಾಯಿಲೆಯನ್ನು ಗಮನಿಸಿದರೆ ಮಾತ್ರ ಅವರು ಆರೋಗ್ಯದಿಂದ ಇದ್ದಾರೆಯೇ ಅಥವಾ ಇಲ್ಲವೇ ಎಂದು ತಿಳಿಯಬಹುದು” ಎಂದು ವೈದ್ಯರು ಹೇಳಿದರು.

ಇದನ್ನೂ ಓದಿ: Explained: ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ಇವೆರಡರ ನಡುವಿನ ವ್ಯತ್ಯಾಸವೇನು; ಇವುಗಳ ಸಾಮಾನ್ಯ ರೋಗಲಕ್ಷಣ ಯಾವುದು?

‘ಸೈಲೆಂಟ್ ಟ್ರಿಗರ್’ ಗಳು ಎಂದರೇನು?
"ಕುಟುಂಬದಲ್ಲಿ ಆನುವಂಶಿಕ ಅರಿಥ್ಮಿಕ್ ಸಾಮರ್ಥ್ಯ, ಸ್ವಯಂಪ್ರೇರಿತ ಆನುವಂಶಿಕ ವ್ಯತ್ಯಾಸ, ದಪ್ಪ ಹೃದಯದ ಸ್ನಾಯು (ಹೈಪರ್ಟ್ರೋಫಿಕ್ ಕಾರ್ಡಿಯೋಮಯೋಪತಿ) ಮತ್ತು ಲಯಬದ್ಧ ಅಸ್ವಸ್ಥತೆಗಳು ಇರಬಹುದು, ನೀವು ಅವುಗಳನ್ನು ನಿರ್ದಿಷ್ಟವಾಗಿ ಪರೀಕ್ಷಿಸುವವರೆಗೂ ಅದರಲ್ಲಿರುವ ಸಮಸ್ಯೆಗಳು ನಮಗೆ ಹೊರಗೆ ಕಾಣಿಸುವುದಿಲ್ಲ. ಉದಾಹರಣೆಗೆ, ಯುವಕರಲ್ಲಿ ಹಠಾತ್ ಹೃದಯ ಸಾವಿಗೆ ಅತ್ಯಂತ ಸಾಮಾನ್ಯ ಕಾರಣವೆಂದರೆ ಹೃದಯದ ಸ್ನಾಯು ತುಂಬಾ ದಪ್ಪವಾಗಿ ಬೆಳೆಯಲು ಕಾರಣವಾಗುವ ಆನುವಂಶಿಕ ಸ್ಥಿತಿಯಾಗಿದೆ ಎಂದು ಹೇಳಬಹುದು.

ಹೀಗೆ ಹೃದಯದ ಸ್ನಾಯು ದಪ್ಪವಾಗಿ ಬೆಳೆದರೆ ಹೃದಯಕ್ಕೆ ರಕ್ತವನ್ನು ಪಂಪ್ ಮಾಡಲು ಕಷ್ಟವಾಗುತ್ತದೆ ಮತ್ತು ತೀವ್ರವಾದ ವ್ಯಾಯಾಮದ ಸಮಯದಲ್ಲಿ ಹೃದಯ ಬಡಿತವನ್ನು ಇದು ವೇಗಗೊಳಿಸುತ್ತದೆ. ಹಠಾತ್ ಹೃದಯದ ಸಾವು ಆಗಾಗ್ಗೆ ಹೃದಯದಲ್ಲಿ ದೋಷಪೂರಿತ ವಿದ್ಯುತ್ ಸಂಕೇತಗಳಿಂದ ಉಂಟಾಗುತ್ತದೆ. ಅತ್ಯಂತ ವೇಗದ ಹೃದಯ ಬಡಿತವು ರಕ್ತವನ್ನು ಪಂಪ್ ಮಾಡುವ ಬದಲು ಕೆಳ ಹೃದಯದ ಕೋಣೆಗಳು ನಡುಗುವಂತೆ ಮಾಡುತ್ತದೆ. ಈ ಅನಿಯಮಿತ ಹೃದಯದ ಲಯವನ್ನು ವೆಂಟ್ರಿಕ್ಯುಲರ್ ಫೈಬ್ರಿಲೇಶನ್ ಎಂದು ಕರೆಯಲಾಗುತ್ತದೆ ಮತ್ತು ಭಾರವಾದ ತೂಕಗಳನ್ನು ಎತ್ತುವ ವ್ಯಾಯಾಮಗಳನ್ನು ಮಾಡುವಂತಹ ಸಮಯದಲ್ಲಿ ಹೀಗೆ ಒತ್ತಡ ಬೀಳಬಹುದು.

ಲಾಂಗ್ ಕ್ಯೂಟಿ ಸಿಂಡ್ರೋಮ್
ಲಾಂಗ್ ಕ್ಯೂಟಿ ಸಿಂಡ್ರೋಮ್ ಎಂಬುದು ಹೃದಯದ ಲಯ ಸ್ಥಿತಿಯಾಗಿದ್ದು, ಇದು ವೇಗದ, ಅಸ್ತವ್ಯಸ್ತವಾದ ಹೃದಯ ಬಡಿತಗಳಿಗೆ ಕಾರಣವಾಗಬಹುದು. ಇದು ಅನೇಕ ವೇಳೆ ವ್ಯಕ್ತಿಯು ಮೂರ್ಛೆ ಹೋಗುವುದು ಮತ್ತು ಯುವಕರಲ್ಲಿ ಹಠಾತ್ ಸಾವಿಗೂ ಸಹ ಇದು ಸಂಬಂಧಿಸಿದೆ" ಎಂದು ಡಾ. ತಲ್ವಾರ್ ಅವರು ಹೇಳುತ್ತಾರೆ. ಜಿಮ್ ನಲ್ಲಿ ಯುವಕರು ಪ್ರೋಟೀನ್ ಮತ್ತು ಸ್ನಾಯು-ವರ್ಧನೆ ಪೂರಕಗಳ ಅನಿಯಂತ್ರಿತ ಬಳಕೆಯ ಬಗ್ಗೆ ಅವರು ಎಚ್ಚರಿಕೆ ನೀಡುತ್ತಾರೆ, ಅವರು ಸ್ಟಿರಾಯ್ಡ್ ಗಳಿಂದ ತುಂಬಿರಬಹುದು ಮತ್ತು ವಿಶೇಷವಾಗಿ ವ್ಯಾಯಾಮದ ಸಮಯದಲ್ಲಿ ಹೃದಯದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಬಹುದು ಎಂದು ಹೆದರುತ್ತಾರೆ.

ಇದನ್ನೂ ಓದಿ:  Andropause: ಪುರುಷರನ್ನೂ ಕಾಡುತ್ತದೆಯಂತೆ ಋತುಬಂಧ! ಆಂಡ್ರೋಪಾಸ್‌ಗೆ ಕಾರಣ, ಲಕ್ಷಣ, ಚಿಕಿತ್ಸೆ ಬಗ್ಗೆ ಇಲ್ಲಿದೆ ವಿವರ

ಹೀಗೆ ಈ ಅಟ್ಯಾಕ್ ಆದ ಮೊದಲ ಆರು ನಿಮಿಷಗಳಲ್ಲಿ ರೋಗಿಯನ್ನು ಪುನರುಜ್ಜೀವನಗೊಳಿಸದಿದ್ದರೆ ಹಠಾತ್ ಹೃದಯ ಸ್ತಂಭನವು ಹಠಾತ್ ಸಾವಿಗೆ ಕಾರಣವಾಗುತ್ತದೆ. ಮಾನವನ ಹೃದಯವು ನಿಮಿಷಕ್ಕೆ ಸುಮಾರು 60 ರಿಂದ 100 ಬಾರಿ ಬಡಿದುಕೊಳ್ಳುತ್ತದೆ ಮತ್ತು ಈ ದರದಲ್ಲಿನ ಯಾವುದೇ ಏರಿಳಿತ, ತುಂಬಾ ನಿಧಾನ (ಬ್ರಾಡಿಕಾರ್ಡಿಯಾ) ಅಥವಾ ತುಂಬಾ ವೇಗವಾಗಿ (ಟಾಚಿಕಾರ್ಡಿಯಾ) ಬಡಿದುಕೊಳ್ಳಲು ಶುರುವಾದರೆ ಕಾರ್ಡಿಯಾಕ್ ಅರಿಥ್ಮಿಯಾ ಎಂದು ಕರೆಯಲ್ಪಡುತ್ತದೆ. ಆದ್ದರಿಂದ ಹೃದಯ ಬಡಿತದಲ್ಲಿ ಹಠಾತ್ ಹೆಚ್ಚಳವು ಕೆಲವೊಮ್ಮೆ ಮಾರಣಾಂತಿಕ ಸಹ ಆಗಬಹುದು.

ಕಾರ್ಡಿಯಾಕ್ ಎಪಿಸೋಡ್ ಗಳನ್ನು ನಾವು ಹೇಗೆ ತಡೆಗಟ್ಟಬಹುದು, ಯಾವಾಗ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಅಂತ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ಯುವ ಭಾರತೀಯರ ಅಪಾಯದ ಪ್ರೊಫೈಲ್ ಅನ್ನು ಗಮನಿಸಿದರೆ, ಡಾ. ತಲ್ವಾರ್ ಈ ಕೆಳಗಿನ ಪರೀಕ್ಷೆಗಳನ್ನು ಶಿಫಾರಸು ಮಾಡುತ್ತಾರೆ.

  1.  ಒಬ್ಬ ವ್ಯಕ್ತಿಗೆ 30 ವಯಸ್ಸು ದಾಟಿದ ನಂತರ, ಅವರಲ್ಲಿ ಚಯಾಪಚಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಲಿಪಿಡ್ ಪ್ರೊಫೈಲ್, ಸಕ್ಕರೆ, ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯ ನಿರ್ವಹಣೆಯ ವಾರ್ಷಿಕ ಸ್ಕ್ರೀನಿಂಗ್ ಮತ್ತು ನಿಯಮಿತ ಇಸಿಜಿಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು.

  2. ನೀವು ಪ್ರತಿದಿನ ಜಿಮ್ ಗೆ ಹೋಗಿ ಗಂಟೆಗಟ್ಟಲೆ ತೀವ್ರವಾದ ತಾಲೀಮುಗಳನ್ನು ಮಾಡುತ್ತಿದ್ದರೆ, ನೀವು ಜಿಮ್ ನಲ್ಲಿರುವ ತರಬೇತುದಾರರಿಗಿಂತ ಮೊದಲು ವೈದ್ಯರನ್ನು ಸಂಪರ್ಕಿಸಿ. ನಿಮ್ಮ ರೋಗನಿರೋಧಕ ತಪಾಸಣೆ ಮತ್ತು ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಲದೆ ಕಠಿಣ ವ್ಯಾಯಾಮಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಿರಿ ಮತ್ತು ನಿಮ್ಮ ಮಿತಿಗಳನ್ನು ಮೀರಿ ತಾಲೀಮು ಮಾಡಬೇಡಿ.

  3.  ಪ್ರೋಟೀನ್ ಪೂರಕಗಳು ಯಾವುವು ಮತ್ತು ನಿಮ್ಮ ದೇಹಕ್ಕೆ ಅವು ಯಾವ ರೀತಿಯಾಗಿ ಸೂಕ್ತ ಎಂಬುದನ್ನು ಮೊದಲು ಅರಿತುಕೊಳ್ಳಿರಿ ಮತ್ತು ವೈದ್ಯಕೀಯ ಸಲಹೆ ಇಲ್ಲದೆ ಸೇವಿಸಬೇಡಿ.

  4. 40 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಭಾರತೀಯರು ಪ್ರತಿ ವರ್ಷ ಒತ್ತಡ-ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು, ಯಾವುದೇ ರೋಗವು ಹೃದಯಕ್ಕೆ ಒತ್ತಡವನ್ನು ಉಂಟು ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.

  5. ಟ್ರೆಡ್ ಮಿಲ್ ಟೆಸ್ಟ್ (ಟಿಎಂಟಿ) ಅನ್ನು ನಿಯಂತ್ರಿತ ಸಂದರ್ಭಗಳಲ್ಲಿ ಮಾಡುತ್ತಿರುವುದರಿಂದ ಭಯಪಡುವ ಅವಶ್ಯಕತೆ ಇರುವುದಿಲ್ಲ ಮತ್ತು ನಿಮ್ಮ ಹೃದಯದ ಒತ್ತಡವನ್ನು ಹೆಚ್ಚಿಸುವ ಸಮಸ್ಯೆಯನ್ನು ಗುರುತಿಸಲು ನಿಮಗೆ ಈ ಟೆಸ್ಟ್ ಸಹಾಯ ಮಾಡುತ್ತದೆ.


ಇದನ್ನೂ ಓದಿ:  Explained: ಬ್ಲ್ಯೂ ಬೇಬಿ ಸಿಂಡ್ರೋಮ್ ಎಂದರೇನು? ಚರ್ಮ ನೀಲಿ ಬಣ್ಣಕ್ಕೆ ತಿರುಗುವ ಹಿಂದಿದೆ ಈ ಕಾರಣ!

ಡಾ. ಕ್ಲೇರ್ ಈ ಪಟ್ಟಿಗೆ ಮೂರು ಅಂಶಗಳನ್ನು ಸೇರಿಸಿದ್ದಾರೆ ನೋಡಿ:

  1. ಲಾಂಗ್ ಕ್ಯೂಟಿ ಸಿಂಡ್ರೋಮ್20 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯನು ಪ್ರತಿ ವರ್ಷ ರಕ್ತದಲ್ಲಿನ ಸಕ್ಕರೆ, ಇಸಿಜಿ, ಲಿಪಿಡ್ ಪ್ರೊಫೈಲ್ ಮತ್ತು ವ್ಯಾಯಾಮ ಒತ್ತಡ ಪರೀಕ್ಷೆಯನ್ನು ತಪ್ಪದೆ ಮಾಡಿಸಿಕೊಳ್ಳಬೇಕು.

  2. ಧೂಮಪಾನಿಗಳು, ಮಧುಮೇಹಿಗಳು, ಬೊಜ್ಜು ಮತ್ತು ಅಪಾಯದಲ್ಲಿರುವವರು ವಾರ್ಷಿಕ ವ್ಯಾಯಾಮ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

  3. ಓಟ ಅಥವಾ ಮ್ಯಾರಥಾನ್ ಗಳಲ್ಲಿ ಭಾಗವಹಿಸುವ ಮೊದಲು ಹೃದಯದ ತಪಾಸಣೆ ಮಾಡಿಸಿಕೊಳ್ಳಿ.

Published by:Ashwini Prabhu
First published: