Explained: ಈ ಬಾರಿಯ ಟಿ20 ವಿಶ್ವಕಪ್ ಹೇಗೆ ಭಿನ್ನ? ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳಿವು

T20 World Cup 2021- All you need to Know- ಅ. 17ರಂದು ಪ್ರಾರಂಭಗೊಂಡಿರುವ ಈ ಬಾರಿಯ ವಿಶ್ವಕಪ್​ನಲ್ಲಿ 16 ತಂಡಗಳಿವೆ. ವಿಶ್ವ ಶ್ರೇಯಾಂಕದಲ್ಲಿ ಟಾಪ್-8 ತಂಡಗಳು ಸೂಪರ್-12 ಹಂತಕ್ಕೆ ನೇರ ಪ್ರವೇಶ ಹೊಂದಿಗೆ. ಇನ್ನುಳಿದ 4 ಸ್ಥಾನಗಳಿಗೆ ಬೇರೆ ಎಂಟು ತಂಡಗಳ ಮಧ್ಯೆ ಪೈಪೋಟಿ ಇರುತ್ತದೆ.

ಟಿ20 ವಿಶ್ವಕಪ್.

ಟಿ20 ವಿಶ್ವಕಪ್.

 • Share this:
  ಅಧಿಕೃತವಾಗಿ T20 ವರ್ಲ್ಡ್ ಕಪ್ ಭಾನುವಾರ ಪಪುವಾ ನ್ಯೂಗಿನಿ ಹಾಗೂ ಒಮನ್ ನಡುವೆ ಆರಂಭಗೊಂಡಿದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣಾ ಆಫ್ರಿಕಾದಿಂದ ಆರಂಭಿಸಿ ಸೂಪರ್ 12 ತಂಡಗಳು ಮೈದಾನಕ್ಕಿಳಿಯುವುದಕ್ಕೆ ಕ್ರಿಕೆಟ್ ಪ್ರೇಮಿಗಳು ಅಕ್ಟೋಬರ್ 23 ರ ವರೆಗೆ ಕಾಯಬೇಕಾಗುತ್ತದೆ. ಈ ವರ್ಷದ T20 ವಿಶ್ವಕಪ್‌ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸ್ವರೂಪವು (ಫಾರ್ಮ್ಯಾಟ್) ಮಂದಗತಿಯ ಕಿರಿಕಿರಿಗೆ ಕಾರಣವಾಗಿವೆ ಎಂದರೆ ತಪ್ಪಾಗಲಾರದು.

  ಟೂರ್ನಮೆಂಟ್‌ನ ಸ್ವರೂಪವೇನು?

  ಅಕ್ಟೋಬರ್ 23 ರವರೆಗೆ ನಡೆಯುವ ಐದು ದಿನಗಳ ಪಂದ್ಯಾಟವು ವಾಸ್ತವವಾಗಿ ವಿಸ್ತರಿತ ಅರ್ಹತೆಯಾಗಿದೆ. T20 ವರ್ಲ್ಡ್ ಕಪ್ ಅನ್ನು 16 ತಂಡಗಳೊಂದಿಗೆ ಆಡಲಾಗುತ್ತಿದೆ. ಅವರನ್ನು ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ ಹಾಗೂ 16 ರಲ್ಲಿ ಎಂಟು ತಂಡಗಳು ರೌಂಡ್ ರಾಬಿನ್ ಪಂದ್ಯಾಟಗಳನ್ನು ಆಡುತ್ತವೆ ಅಗ್ರ ನಾಲ್ಕು ತಂಡಗಳು ಸೂಪರ್ 12 ಅನ್ನು ಪ್ರವೇಶಿಸುತ್ತವೆ.

  ಮಾರ್ಚ್ 20, 2021 ರ ವೇಳೆಗೆ ICC, T20I ಶ್ರೇಯಾಂಕಗಳ ಆಧಾರದ ಮೇಲೆ ಗುಂಪುಗಳನ್ನು ಆಯ್ಕೆ ಮಾಡಲಾಗಿದೆ. ಆ ಎಂಟು ತಂಡಗಳಲ್ಲಿ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸ್ವಯಂಚಾಲಿತ ಅರ್ಹತಾ ತಂಡಗಳಾಗಿವೆ ಮತ್ತು ಉಳಿದವುಗಳು ಅರ್ಹತಾ ಸುತ್ತಿನ ಮೂಲಕ ತಮ್ಮ ಸ್ಥಾನಗಳನ್ನು ಕಾಯ್ದಿರಿಸಿಕೊಂಡಿವೆ.

  ಅಂತಿಮವಾಗಿ, ಸಂಪೂರ್ಣ ತಂಡವನ್ನು ಸೂಪರ್ 12 ಕ್ಕೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಮತ್ತು ಸೂಪರ್ 12 ಅನ್ನು ಸೆಟ್ ಮಾಡಿದ ನಂತರ, ಗ್ರೂಪ್ 1 ಮತ್ತು ಗ್ರೂಪ್ 2 ಎಂದು ವಿಂಗಡಿಸಲಾಗಿದೆ, ಎರಡು ಗುಂಪುಗಳಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಇಬ್ಬರು ಫೈನಲಿಸ್ಟ್‌ಗಳು ನವೆಂಬರ್ 14 ರಂದು ದುಬೈನಲ್ಲಿ ಮುಖಾಮುಖಿಯಾಗುತ್ತಾರೆ.

  ಸೂಪರ್ 12 ರಲ್ಲಿ ಎಷ್ಟು ತಂಡಗಳಿವೆ?

  ಎಂಟು ತಂಡಗಳು ನೇರವಾಗಿ ಸೂಪರ್ 12 ಕ್ಕೆ ಪ್ರವೇಶಿಸಿವೆ - ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ. ಮತ್ತೊಮ್ಮೆ, ಇದನ್ನು ICC T20I ಶ್ರೇಯಾಂಕದ ಆಧಾರದ ಮೇಲೆ ನಿರ್ಧರಿಸಲಾಗಿದೆ.

  2016 ರ ಎಡಿಶನ್‌ಗಿಂತ (ಆವೃತ್ತಿಗಿಂತ) ಫಾರ್ಮ್ಯಾಟ್ ಹೇಗೆ ಭಿನ್ನವಾಗಿದೆ?

  ICC World T20 ಯ ಕೊನೆಯ ಆವೃತ್ತಿಯನ್ನು ಸೂಪರ್ 10 ಫಾರ್ಮ್ಯಾಟ್‌ನಲ್ಲಿ ಆಡಲಾಯಿತು. ಸೂಪರ್ 10 ಎಂಟು ನೇರ ಪ್ರವೇಶಗಳನ್ನು ಹೊಂದಿದ್ದು, ಬಾಂಗ್ಲಾದೇಶ ಹಾಗೂ ಅಪ್ಘಾನಿಸ್ತಾನ ತಂಡಗಳು ಗ್ರೂಪ್ ಎ ಹಾಗೂ ಗ್ರೂಪ್ ಬಿಯಿಂದ ಅರ್ಹತೆ ಪಡೆದಿವೆ. ಈ ಬಾರಿ ಐಸಿಸಿ ತಂಡವನ್ನು ವಿಸ್ತರಿಸಿದೆ.

  16-ತಂಡಗಳ ಪಂದ್ಯಾವಳಿಯನ್ನು ಒಂದು ತಿಂಗಳ ಕಾಲ ಏಕೆ ಆಡಲಾಗುತ್ತಿದೆ?

  45 ಪಂದ್ಯಗಳನ್ನು ಹೊಂದಿರುವ 16 ತಂಡಗಳ ಪಂದ್ಯಾವಳಿಗೆ 28 ದಿನಗಳು ದೀರ್ಘವಾಗಿವೆ. ಕೆಲವೇ ತಿಂಗಳುಗಳ ಹಿಂದೆ, Uefa, ಯುರೋ 2020 ಅನ್ನು ಸಂಘಟಿಸಿದ್ದು ಈ ಪಂದ್ಯಾಟವನ್ನು ಯುರೋಪ್‌ನಲ್ಲಿರುವ ಏಳು ದೇಶಗಳಾದ್ಯಂತ ಆಡಲಾಯಿತು. ಟೂರ್ನಿಮೆಂಟ್ 24 ತಂಡಗಳೊಂದಿಗೆ 51 ಫಿಕ್ಚರ್ಸ್‌ಗಳು, ಜೂನ್ 11 ರಿಂದ ಜುಲೈ 11 ರವರೆಗೆ ಆಡಿದರು. ಅದೇ ರೀತಿ 2018 ರ ರಷ್ಯಾದ ಫಿಫಾ ವಿಶ್ವಕಪ್‌ನಲ್ಲಿ 32 ತಂಡಗಳು ಹಾಗೂ 64 ಪಂದ್ಯಗಳನ್ನು ಜೂನ್ 14 ರಿಂದ ಜುಲೈ 15 ರವರೆಗೆ ಆಡಿದರು. ಅವಧಿ ಪ್ರಕಾರ, ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿದ್ದು, T20 ವರ್ಲ್ಡ್ ಕಪ್‌ನ ಬಹುತೇಕ ಎಲ್ಲಾ ಪಂದ್ಯಗಳು ದೊಡ್ಡದಾದ ಫುಟ್‌ಬಾಲ್ ಪಂದ್ಯಾವಳಿಗಳಿಗೆ ಹೊಂದಿಕೆಯಾಗುತ್ತದೆ.

  ಐಸಿಸಿಯ ವಕ್ತಾರರೊಬ್ಬರು ಇದು 45 ಪಂದ್ಯಾಟಗಳು ಎಂಬುದಾಗಿ ತಿಳಿಸಿದ್ದು, ಪಂದ್ಯಾವಳಿಯ ಆರಂಭವು ಈವೆಂಟ್‌ನ ನ್ಯೂನತೆಗೆ ಸಾಕ್ಷಿಯಾಗಿದೆ ಹಾಗೂ ನಾಲ್ಕರ (ಪ್ರತೀ ತಂಡದಲ್ಲಿ) ನಾಲ್ಕು ಗುಂಪುಗಳಿರಬೇಕು ಎಂಬುದನ್ನು ಅಂಗೀಕರಿಸಿಕೊಂಡಿದ್ದಾರೆ. ನ್ಯಾಯುಯುತವಾಗಿ ಹೇಳಬೇಕೆಂದರೆ T20 ವರ್ಲ್ಡ್ ಕಪ್‌ನ ಕೋವಿಡ್ ಕಾರಣ ಬದಲಾವಣೆಯು ಭಾರತದಿಂದ ಮಧ್ಯ ಪ್ರಾಚ್ಯದವರೆಗೆ ಪಂದ್ಯಾಟ ನಡೆಯುವ ಸ್ಥಳಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಯುಎಇ ಮೂರು ಕೇಂದ್ರಗಳನ್ನು ಮಾತ್ರ ಹೊಂದಿದೆ – ದುಬೈ, ಅಬುಧಾಬಿ ಮತ್ತು ಶಾರ್ಜಾ ಈ ಮೂರು ಸ್ಥಳಗಳಲ್ಲಿ ಸೂಪರ್ 12 ಪಂದ್ಯಗಳನ್ನು ಆಯೋಜಿಸಬೇಕಾಗಿದೆ. ನಂತರ ಮತ್ತೊಮ್ಮೆ, ತಂಡಗಳಿಗೆ ಪಂದ್ಯಗಳ ನಡುವೆ ದೀರ್ಘವಾದ ವಿರಾಮಗಳನ್ನು ನೀಡಲಾಗಿದೆ. ಉದಾಹರಣೆಗೆ, ಭಾರತದ ಮೊದಲ ಪಂದ್ಯ ಪಾಕಿಸ್ತಾನ ವಿರುದ್ಧ ಅಕ್ಟೋಬರ್ 24 ರಂದು ನಡೆಯಲಿದೆ. ಅದೇ ರೀತಿ ವಿರಾಟ್ ಕೊಹ್ಲಿ ನೇತೃತ್ವದ ತಂಡವು ನ್ಯೂಜಿಲ್ಯಾಂಡ್ ವಿರುದ್ಧ ಏಳು ದಿನಗಳ ನಂತರ ಅಕ್ಟೋಬರ್ 31 ರಂದು ತಮ್ಮ ಮುಂದಿನ ಪಂದ್ಯವನ್ನು ಆಡಲಿವೆ. ಒಂದು T20 ಆಟವು ಮೂರು ಗಂಟೆಗಳ ಸ್ಪರ್ಧೆಯಾಗಿದೆ.

  ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

  ವರ್ಲ್ಡ್ ಕಪ್ ಲೊ-ಕಿ ಓಪನರ್ (ದುರ್ಬಲ ತಂಡಗಳ ನಡುವಿನ ಪಂದ್ಯ) ಅನ್ನು ಹೊಂದಿದೆಯೇ?

  ಪಪುವಾ ನ್ಯೂಗಿನಿಯ ಟಿ 20 ಐ ಶ್ರೇಯಾಂಕ 15 ನೇ ಸ್ಥಾನದಲ್ಲಿದ್ದರೆ, ಒಮನ್ 18 ನೇ ಸ್ಥಾನದಲ್ಲಿದೆ. ಇವುಗಳು ಸಾಂಪ್ರದಾಯಿಕ ಕ್ರಿಕೆಟ್ ರಾಷ್ಟ್ರಗಳಲ್ಲ. ಈ ಕುರಿತು ICC ವಕ್ತಾರರನ್ನು ಕೇಳಿದಾಗ ಅವರು 2018 ಫಿಫಾದ ಆರಂಭಿಕ ಪಂದ್ಯವನ್ನು ಬೆಟ್ಟುಮಾಡಿ ತೋರಿಸಿದರು. ನಿಮ್ಮ ಅಭಿಪ್ರಾಯವನ್ನು ಆಧರಿಸಿ 2018 ರ ಫಿಫಾ ವರ್ಲ್ಡ್ ಕಪ್‌ನ ಆರಂಭಿಕ ಪಂದ್ಯಾಟವು ಕಳಪೆಯಾಗಿತ್ತು – ರಷ್ಯಾ ವರ್ಸಸ್ ಸೌದಿ ಅರೇಬಿಯಾ ಅತಿ ಕಡಿಮೆ ಶ್ರೇಯಾಂಕ ಪಡೆದುಕೊಂಡ ತಂಡಗಳಾಗಿದ್ದವು. ಈ ಮಾಹಿತಿಗೆ ಇನ್ನಷ್ಟು ವಿಷಯಗಳನ್ನು ಸೇರ್ಪಡಿಸಿದ ವಕ್ತಾರರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ ಮಾಹಿತಿಯ ಅನ್ವಯ ಅತಿಥೇಯ ತಂಡವು ಓಪನಿಂಗ್ ಪಂದ್ಯದಲ್ಲಿರಬೇಕು ಹಾಗಾಗಿ ಒಮನ್ ತಂಡ ಉದ್ಘಾಟನಾ ಪಂದ್ಯ ಆಡಿದೆ.

  2018 ರ ಫಿಫಾದ ಅತಿಥೇಯ ರಾಷ್ಟ್ರವಾಗಿ ಮಿಂಚಿದ್ದ ರಷ್ಯಾ ಫುಟ್‌ಬಾಲ್ ದೇಶವಾಗಿ ಗುರುತಿಸಿಕೊಂಡಿರುವ ದೇಶವಾಗಿದೆ. ಫುಟ್‌ಬಾಲ್ ಪ್ರಸಿದ್ಧ ಆಟಗಾರರಾದ ಲೆವ್ ಯಾಶಿನ್ ಮತ್ತು ಇಗೊರ್ ನೆಟ್ಟೊರ ದಂತಕಥೆಗಳಿಗೆ ಸಾಕ್ಷಿಯಾದ ದೇಶವಾಗಿದೆ. ಅದೇ ರೀತಿ ದೇಶವು ಸ್ಪಾರ್ಟಕ್ ಮಾಸ್ಕೋ, ಜೆನಿಟ್ ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಲೋಕೋಮೋಟಿವ್ ಮಾಸ್ಕೋದಂತಹ ಪರಂಪರೆಯ ಯುರೋಪಿಯನ್ ಕ್ಲಬ್‌ಗಳನ್ನು ಹೊಂದಿದೆ. ಕ್ರಿಕೆಟ್ ವಿಷಯದಲ್ಲಿ ಅದರಲ್ಲೂ ಟಿ20 ಪಂದ್ಯಾಟಕ್ಕೆ ಬಂದಾಗ ಒಮನ್ ಹಾಗೂ ಪಪುವಾ ಐಸಿಸಿಯ ಪೂರ್ಣ ಸದಸ್ಯರಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಾಗುತ್ತದೆ.

  ಅಭಿಮಾನಿಗಳ ದೃಷ್ಟಿಕೋನ ಹೇಗಿದೆ?

  ಟಿ 20 ವಿಶ್ವಕಪ್ ಓಪನರ್‌ಗಾಗಿ ಒಮಾನ್‌ನಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ಅಲ್ ಅಮೆರಾತ್ ಕ್ರಿಕೆಟ್ ಮೈದಾನವು ಸ್ಥಳೀಯ ಅಭಿಮಾನಿಗಳ ಆಸಕ್ತಿಯ ಕೊರತೆಯನ್ನು ಸೂಚಿಸುತ್ತದೆ ಒಟ್ಟಿನಲ್ಲಿ ಇದು ಉದಾಸೀನತೆಯ ಪ್ರದರ್ಶನವನ್ನು ಮಾಡುತ್ತಿದೆ. ಅದಾಗ್ಯೂ ಐಸಿಸಿ ವಕ್ತಾರರು ಮಂದಮಟ್ಟದ ಕಲ್ಪನೆ ಇದಾಗಿದೆ ಎಂಬುದನ್ನು ಅಂಗೀಕರಿಸಲಿಲ್ಲ. ಇದು ವಿಶ್ವಕಪ್ ಆಗಿದೆ ಹಾಗಾಗಿ ಪ್ರತಿಯೊಂದು ಪಂದ್ಯಾಟವೂ ಪ್ರಮುಖವಾದುದು. ಇಂದು ಮೈದಾನಕ್ಕೆ ಇಳಿಯುವ ತಂಡಗಳು ತೀವ್ರವಾಗಿ ಅಂಗೀಕರಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ (ಮಂದಮಟ್ಟದ ಕಲ್ಪನೆ) ಎಂದು ತಿಳಿಸಿದ್ದಾರೆ.

  ಈ ಬಾರಿ ಐಸಿಸಿ ಪೂಲ್ ( ಗುಂಪು) ಅನ್ನು ಏಕೆ ವಿಸ್ತರಿಸಿದೆ?

  ಜೂನ್ 2018 ರಲ್ಲಿ ಐಸಿಸಿ ತನ್ನ ಎಲ್ಲಾ 104 ಸದಸ್ಯರಿಗೆ ಅಂತರಾಷ್ಟ್ರೀಯ ಸ್ಥಾನಮಾನ ನೀಡಿತು. 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ನ ಸೇರ್ಪಡೆಗಾಗಿ ಆಟದ ಜಾಗತಿಕ ಸಂಸ್ಥೆಯು ಒತ್ತಡ ಹೇರುತ್ತಿದೆ ಹಾಗೂ T20 ಅನ್ನು ಚತುರ್ವಾರ್ಷಿಕ ಪ್ರದರ್ಶನದಲ್ಲಿ ವ್ಯಾಪಕವಾಗಿ ಅನುಮೋದಿಸಿದ ಸ್ವರೂಪ ಎಂದು ಪರಿಗಣಿಸಲಾಗಿದೆ. ಈ ದೃಷ್ಟಿಯಿಂದ ವಿಸ್ತರಣೆಯನ್ನು ನಡೆಸಲಾಗುತ್ತಿದೆ. ವಾಸ್ತವವಾಗಿ, ಐಸಿಸಿ 2021 ಮತ್ತು 2022 ರಲ್ಲಿ ಒಂದರ ಹಿಂದೆ ಒಂದರಂತೆ ಟಿ 20 ವಿಶ್ವಕಪ್‌ಗಳನ್ನು ಸಂಯೋಜಿಸಲು 2021 ಚಾಂಪಿಯನ್ಸ್ ಟ್ರೋಫಿಯನ್ನು ರದ್ದುಗೊಳಿಸಿತು (ಮೂಲತಃ 2020 ಮತ್ತು 2021 ಕ್ಕೆ ನಿಗದಿಯಾಗಿತ್ತು).

  ಪಂದ್ಯಾವಳಿಯನ್ನು ಯಾರು ಆಯೋಜಿಸುತ್ತಾರೆ?

  ಅಧಿಕೃತ ಆತಿಥೇಯ (ಹೋಸ್ಟ್) ಭಾರತವಾಗಿದ್ದರೂ, ವಿಶ್ವಕಪ್‌ನ ಈ ಆವೃತ್ತಿಯನ್ನು ಭಾರತದಲ್ಲಿ ಕೋವಿಡ್ -19 ಪರಿಸ್ಥಿತಿಯಿಂದಾಗಿ ಓಮನ್ ಮತ್ತು ಯುಎಇಗೆ ಸ್ಥಳಾಂತರಿಸಲಾಯಿತು. ಜೂನ್‌ನಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. 12 ಮೊದಲ ಸುತ್ತಿನ ಪಂದ್ಯಾಟವನ್ನು ಯುಎಇಯ ಶಾರ್ಜಾ ಮತ್ತು ಅಬುಧಾಬಿ ಮತ್ತು ಒಮಾನ್‌ನಲ್ಲಿ ಅಲ್‌ಅಮೆರತ್‌ನಲ್ಲಿ ಆಡಲಾಗುತ್ತದೆ. 30 ಸೂಪರ್ 12 ಪಂದ್ಯಗಳು ಶಾರ್ಜಾ, ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿದೆ. ಸೆಮಿಫೈನಲ್ ಪಂದ್ಯಗಳು ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿದ್ದು, ಫೈನಲ್ ನವೆಂಬರ್ 14 ರಂದು ದುಬೈನಲ್ಲಿ ನಡೆಯಲಿದೆ.

  ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಭಾರತ ಯಾಕೆ ಒಮ್ಮೆಯೂ ಸೋತಿಲ್ಲ: ಸೆಹ್ವಾಗ್ ಬಳಿ ಇದೆ ಉತ್ತರ

  ಪಾಯಿಂಟ್ಸ್ ಹಾಗೂ ಟೈ:

  ತಂಡಗಳು ಜಯಿಸಲು ಎರಡು ಪಾಯಿಂಟ್‌ಗಳನ್ನು ಪಡೆದುಕೊಳ್ಳುತ್ತದೆ ಅದೇ ರೀತಿ ಟೈ ಅಥವಾ ಯಾವುದೇ ಫಲಿತಾಂಶಗಳಿಲ್ಲ ಎಂಬುದನ್ನು ಸೂಚಿಸಲು ಒಂದು ಅಂಕವನ್ನು ಪಡೆದುಕೊಳ್ಳುತ್ತದೆ. ಗೆಲುವಿನ ಸಂಖ್ಯೆಗಳು, ನಿವ್ವಳ ರನ್ ದರ, ಫಲಿತಾಂಶ ಮೊದಲಾದ ಅಂಶಗಳನ್ನು ಆಧರಿಸಿ ತಂಡದ ಸ್ಥಾನವನ್ನು ನಿರ್ಧರಿಸುತ್ತವೆ. ಪಂದ್ಯವು ಟೈ ಆದಲ್ಲಿ, ಜಯಶಾಲಿಯನ್ನು ನಿರ್ಧರಿಸುವವರೆಗೆ ತಂಡಗಳು ಸೂಪರ್ ಓವರ್‌ಗಳನ್ನು ಆಡುತ್ತವೆ. ಕೆಟ್ಟ ಹವಾಮಾನದ ಸಂದರ್ಭದಲ್ಲಿ ಸೆಮಿಫೈನಲ್ ಮತ್ತು ಫೈನಲ್ ಮಾತ್ರ ಮೀಸಲು ದಿನಗಳನ್ನು ಹೊಂದಿರುತ್ತದೆ. ಮೊದಲ ಎರಡು ಸುತ್ತುಗಳಲ್ಲಿ ಫಲಿತಾಂಶ ಪಡೆಯಲು ಪ್ರತಿ ಇನ್ನಿಂಗ್ಸ್‌ನಲ್ಲಿ ಕನಿಷ್ಠ ಐದು ಓವರ್‌ಗಳನ್ನು ಆಡಬೇಕು. ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ, ತಂಡಗಳು ಎರಡೂ ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ ಹತ್ತು ಓವರ್‌ಗಳನ್ನು ಆಡಬೇಕಾಗುತ್ತದೆ.

  ಪ್ರೇಕ್ಷಕರು ಇರುತ್ತಾರೆಯೇ?

  ಯುಎಇಯಲ್ಲಿರುವ ಕ್ರೀಡಾಂಗಣಗಳಿಗೆ ಲಸಿಕೆ ಹಾಕಿದ ಕ್ರಿಕೆಟ್ ಪ್ರೇಮಿಗಳಿಗೆ ಕ್ರೀಡಾಂಗಣಗಳ ಸಾಮರ್ಥ್ಯದ ಗರಿಷ್ಠ 70% ದವರೆಗೆ ಸ್ಟೇಡಿಯಂ ನಲ್ಲಿ ಕ್ರಿಕೆಟ್ ವೀಕ್ಷಣೆಗೆ ಪಾಲ್ಗೊಳ್ಳಲು ಮಾಡಲು ಅನುಮತಿ ನೀಡಲಾಗಿದ್ದು, ಓಮನ್ ಕ್ರೀಡಾಂಗಣದಲ್ಲಿ 3,000 ಅಭಿಮಾನಿಗಳಿಗೆ ಅವಕಾಶವಿದೆ.

  Translated From English by Agency
  Published by:Vijayasarthy SN
  First published: