HOME » NEWS » Explained » SYNTHETIC CHEMICALS IN PLASTICS CALLED PHTHALATES ARE DAMAGING CHILDRENS BRAIN DEVELOPMENT STG HG

ರಾಕ್ಷಸರೂಪಿ ಪ್ಲಾಸ್ಟಿಕ್​​ನಲ್ಲಿದೆ ಥಾಲೇಟ್ಸ್ ಎಂಬ ವಿಷ: ಈ ರಾಸಾಯನಿಕದಿಂದ ಮಕ್ಕಳ ಮೆದುಳಿನ ಬೆಳವಣಿಗೆಗೂ ಹಾನಿ!

ಮಕ್ಕಳ ಆಹಾರವನ್ನು ತಯಾರಿಸುವ ಪ್ರಮುಖ ಕಂಪನಿಯೊಂದು ಉದ್ದೇಶ ಪೂರ್ವಕವಾಗಿಯೇ ಇಂತಹ ವಿಷಕಾರಿ ರಾಸಾಯನಿಕವನ್ನು ತಮ್ಮ ಉತ್ಪನ್ನದಲ್ಲಿ ಮಾರಾಟ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.

news18-kannada
Updated:February 23, 2021, 11:34 AM IST
ರಾಕ್ಷಸರೂಪಿ ಪ್ಲಾಸ್ಟಿಕ್​​ನಲ್ಲಿದೆ ಥಾಲೇಟ್ಸ್ ಎಂಬ ವಿಷ: ಈ ರಾಸಾಯನಿಕದಿಂದ ಮಕ್ಕಳ ಮೆದುಳಿನ ಬೆಳವಣಿಗೆಗೂ ಹಾನಿ!
ಮಗು (Photo: Google)
  • Share this:
ಪ್ಲಾಸ್ಟಿಕ್ ಇದೀಗ ಸರ್ವವ್ಯಾಪಿ ಆಗಿದೆ. ಇದು ಭೌತಿಕವಾಗಿ ಮಾತ್ರವಲ್ಲ, ಅನೇಕ ಜೀವಿಗಳ ಮೇಲೆಯೂ ಹಾನಿ ಮಾಡುತ್ತಿದೆ. ಇದೀಗ ಮತ್ತೊಂದು ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಪ್ಲಾಸ್ಟಿಕ್​ನಲ್ಲಿರುವ ಥಾಲೇಟ್ಸ್ ಎಂಬ ರಾಸಾಯನಿಕ ಮಕ್ಕಳ ಮೆದುಳಿನ ಬೆಳವಣಿಗೆ ಮೇಲೆ ಹಾನಿ ಮಾಡುತ್ತದೆ. ಹೀಗಾಗಿ ಅವುಗಳನ್ನು ನಿಷೇಧ ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ.

TENDR (Targeting Environmental Neuro-Development Risks) ಎನ್ನುವ ಒಂದು ಪ್ರಾಜೆಕ್ಟ್​​ನ  ವಿಜ್ಞಾನಿಗಳು ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವೃತ್ತಿಪರರು ಈ ಕುರಿತು ಅಪಾಯವನ್ನು ಮನಗಂಡಿದ್ದಾರೆ. ಇವರು ನ್ಯೂರೋಟಾಕ್ಸಿಕ್ ರಾಸಾಯನಿಕಗಳು ಮತ್ತು ಮಾಲಿನ್ಯಕಾರಕಗಳು ಮಕ್ಕಳ ಮೆದುಳಿನ ಮೇಲೆ ಏನೆಲ್ಲ ಪರಿಣಾಮ ಬೀರುತ್ತವೆ ಎನ್ನುವುದನ್ನು ಈ ತಂಡ ಸಾಕ್ಷಿ ಸಮೇತ ಅಧ್ಯಯನ ಮಾಡಿದೆ.

'ಮಕ್ಕಳ ಮೆದುಳಿನ ಮೇಲೆ ಈ ರಾಸಾಯನಿಕಗಳ ಪ್ರಭಾವವನ್ನು ವಿವರಿಸಲು ನಮ್ಮಲ್ಲಿ ಸಾಕಷ್ಟು ಪುರಾವೆಗಳಿವೆ' ಎಂದು ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕಿ ಸ್ಟೆಫನ್ ಎಂಗಲ್ ಹೇಳಿದ್ದಾರೆ.

ಮಕ್ಕಳ ಆಹಾರವನ್ನು ತಯಾರಿಸುವ ಪ್ರಮುಖ ಕಂಪನಿಯೊಂದು ಉದ್ದೇಶ ಪೂರ್ವಕವಾಗಿಯೇ ಇಂತಹ ವಿಷಕಾರಿ ರಾಸಾಯನಿಕವನ್ನು ತಮ್ಮ ಉತ್ಪನ್ನದಲ್ಲಿ ಮಾರಾಟ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ತನಿಖೆಯಿಂದ ಕಂಡುಕೊಂಡ ಮಾಹಿತಿಗಳೇ ನಮಗೆ ಎಚ್ಚರಿಕೆ ಗಂಟೆಯಾಗಬೇಕು ಎಂದು ಟಾಕ್ಸಿಕಾಲಾಜಿಜ್ಟ್ ಲಿಂಡಾ ಬಿರ್ನ್ಬಾಮ್ ತಿಳಿಸಿದ್ದಾರೆ.

ಹೀಗೆ ಥಾಲೇಟ್ಸ್ ಎಂಬ ರಾಸಾಯನಿಕ ಮನುಷ್ಯನ ಆರೋಗ್ಯದ ಮೇಲೆ ದಷ್ಪರಿಣಾಮ ಬೀರುವುದನ್ನು ಕಂಡುಕೊಂಡಿರುವ ಈ ತಂಡ ಅದರ ನಿಯಂತ್ರಣಕ್ಕೆ ಕಾನೂನು ಹೊರಾಟವನ್ನು ಕೈಗೊಂಡಿದೆ.

ಎಲ್ಲೆಲ್ಲಿಯೂ ರಾಸಾಯನಿಕಗಳು:

ಥಾಲೆಟ್ಸ್ ಎಂಬ ಈ ರಾಸಾಯನಿಕವನ್ನು ಪ್ಲಾಸ್ಟಿಕ್ ಅನ್ನು ಮೃದು ಮಾಡಲು ಬಳಸುತ್ತಾರೆ. ಅಲ್ಲದೇ ಸುಗಂಧ ದ್ರವ್ಯ ಮುಂತಾದ ಶೃಂಗಾರ ಸಾಧನಗಳ ಸುವಾಸನೆಯನ್ನು ಬಹಳ ಸಮಯ ಇರುವಂತೆ ಮಾಡಲೂ ಇದೇ ರಾಸಾಯನಿಕವನ್ನು ಉಪಯೋಗಿಸುತ್ತಾರೆ. ಈ ಥಾಲೇಟ್ಸ್ ರಾಸಾಯನಿಕದಿಂದ ಮಧುಮೇಹ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿನ ಪ್ರಮಾಣದಲ್ಲಿದೆ ಎನ್ನುತ್ತಿದೆ ತಜ್ಞರ ತಂಡ.ಎಲ್ಲಿ ಪ್ಲಾಸ್ಟಿಕ್ ಇದೆ ಎನ್ನುವುದಕ್ಕಿಂತ ಎಲ್ಲಿ ಪ್ಲಾಸ್ಟಿಕ್ ಇಲ್ಲ ಎನ್ನುವುದನ್ನು ಹೇಳೋದು ಕಷ್ಟ. ಹಲ್ಲುಜ್ಜುವ ಬ್ರಶ್, ನೀರಿನ ಕೊಡ, ಬಕೆಟ್, ಮಿಕ್ಸರ್, ಮಕ್ಕಳ ಆಟಿಕೆ, ಸ್ಕೂಲ್ ಬ್ಯಾಗ್, ಪೆನ್, ಮೊಬೈಲ್, ಟೆಬಲ್, ಬಸ್, ಕುರ್ಚಿ, ನೀರಿನ ನಲ್ಲಿ, ರೆಫ್ರಿಜರೇಟರ್, ಲೈಟ್ ಸ್ವಿಚ್ ಹೀಗೆ ಎಲ್ಲೆಲ್ಲಿಯೂ ಪ್ಲಾಸ್ಟಿಕ್, ಎಲ್ಲೆಲ್ಲಿ ಪ್ಲಾಸ್ಟಿಕ್ ಇದೆಯೋ ಅಲ್ಲಲ್ಲಿ ಥಾಲೇಟ್ಸ್ ಕೂಡ ಇರುತ್ತದೆ. ಹೀಗಾಗಿ ವಾತಾವರಣದಲ್ಲಿ ಶೇ. 25ರಷ್ಟು ಪ್ಲಾಸ್ಟಿಕ್ ತುಂಬಿ ಹೋಗಿದೆ.

ಇಡೀ ಜಗತ್ತಿನಲ್ಲಿ ವಾರ್ಷಿಕವಾಗಿ ಸುಮಾರು 8.4 ದಶಲಕ್ಷ ಮೆಟ್ರಿಕ್ ಟನ್ ಥಾಲೇಟ್ಸ್ ಮತ್ತು ಇತರ ಪ್ಲಾಸ್ಟಿಸೈಜರ್​​ಗಳನ್ನು ಸೇರಿಸಲಾಗುತ್ತಿದೆ ಎಂದು ಕೈಗಾರಿಕಾ ವ್ಯಾಪಾರ ಸಂಘ ಯುರೋಪಿಯನ್ ಪ್ಲಾಸ್ಟಿಸೈಜರ್ಸ್ ಹೇಳಿದೆ. ಇದರಿಂದ ಭೂಮಿಗೆ ಆಪತ್ತು ಕಾದಿದೆ ಎಂದು ಈ ಸಂಘ ಎಚ್ಚರಿಕೆ ನೀಡುತ್ತಿದೆ.

ಥಾಲೇಟ್ಸಿನಿಂದ ದುಷ್ಪರಿಣಾಮ:

ಮಾನವರಲ್ಲಿ ಮಕ್ಕಳಾಗದೇ ಇರುವುದಕ್ಕೂ ಥಾಲೆಟ್ಸ್ ಕಾರಣ. ಅಲ್ಲದೇ ಪುರುಷರಲ್ಲಿ ಸಂತಾನ ಹೀನತೆಗೂ ಇದೇ ಕಾರಣ ಹಾಗೂ ಗರ್ಭಧಾರಣೆ ಸಂದರ್ಭದಲ್ಲಿ ಈ ರಾಸಾಯನಿಕ ಪ್ರಭಾವ ಬೀರುತ್ತದೆ. ಇನ್ನು ಮಕ್ಕಳ ಬಾಲ್ಯದ ಸ್ಥೂಲಕಾಯ, ಅಸ್ತಮಾ, ಹೃದಯರಕ್ತನಾಳದ ಸಮಸ್ಯೆಗಳು, ಕ್ಯಾನ್ಸರ್ ಮತ್ತು ಸಂತಾನೋತ್ಪತ್ತಿ ಸಮಸ್ಯೆ, ವೃಷಣಗಳ ಸಮಸ್ಯೆ, ಕಡಿಮೆ ವೀರ್ಯಾಣುಗಳ ಸಂಖ್ಯೆ ಮತ್ತು ವಯಸ್ಕ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆ ಆಗುವುದು ಇದೆಲ್ಲದಕ್ಕೂ ಥಾಲೇಟ್ಸ್ ಒಂದಿಲ್ಲೊಂದು ರೀತಿಯಲ್ಲಿ ಕಾರಣವಾಗುತ್ತದೆಯಂತೆ.

ಸೀಸ, ಆರ್ಸೆನಿಕ್, ಕ್ಯಾಡ್ಮಿಯಮ್ ಮತ್ತು ಪಾದರಸದಂತಹ ವಿಷಕಾರಿ ಲೋಹಗಳಿಗಿಂತ ಥಾಲೇಟ್ಸ್​​ಗಳು ಹೆಚ್ಚು ಅಪಾಯಕಾರಿ ಎನ್ನಲಾಗುತ್ತಿದೆ. ಇದು ಬೇಗನೆ ದೇಹವನ್ನು ಸೇರಿಕೊಂಡು ಬಿಡುತ್ತದೆ. ಜೊತೆಗೆ ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ಒಂದು ವೇಳೆ ಗರ್ಭಾಶಯದಲ್ಲಿಯೇ ಈ ರಾಸಾಯನಿಕ ಒಳ ಹೋದರೆ ಹೆಚ್ಚಿನ ಹಾನಿ ಸಂಭವಿಸಬಹುದು ಎನ್ನುತ್ತಿದ್ದಾರೆ ತಜ್ಞರು.

ಹೀಗೆ ಪ್ಲಾಸ್ಟಿಕ್​ನಲ್ಲಿ ಥಾಲೇಟ್ಸ್ ಎಂಬ ರಾಸಾಯನಿಕ ವಸ್ತು ಇರುವುದರಿಂದ ಇದು ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ತಟ್ಟೆಯಲ್ಲಿ ನೀವು ಬಿಸಿ ಆಹಾರ ತಿನ್ನುವಾಗ ಇದು ಆ ವಿಷಪೂರಿತ ರಾಸಾಯನಿಕ ಆಹಾರದಲ್ಲಿ ಬೆರೆಯುತ್ತದೆ. ಅಲ್ಲದೇ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಶೇಖರಿಸಿ ಇಟ್ಟ ತಂಪು ಪಾನೀಯಗಳನ್ನು ಕುಡಿಯುವುದರಿಂದ ಇದು ದೇಹದೊಳಗೆ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದು ಕ್ಯಾನ್ಸರ್ ಖಾಯಿಲೆಗೂ ಕಾರಣವಾಗುತ್ತದೆ, ಜೊತೆಗೆ ಹಾರ್ಮೋನುಗಳ ವ್ಯತ್ಯಾಸ ಮಾಡುವುದಲ್ಲದೇ ದೃಷ್ಟಿ ದೋಷಕ್ಕೂ ಕಾರಣವಾಗಬಹುದು.

ಅಚ್ಚರಿಯ ವಿಷಯವೇನು ಗೊತ್ತೇ? ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ 1 ಕಿ.ಮೀ. ಆಳದಲ್ಲಿರುವ ಜೆಲ್ಲಿ ಫಿಶ್​ಗಳಲ್ಲಿ ಕೂಡ ಥಾಲೇಟ್ಸ್ ಇರುವುದನ್ನು ಪತ್ತೆ ಹಚ್ಚಲಾಗಿದೆ. ಇನ್ನು ಮನುಷ್ಯರ ಮೂತ್ರದಲ್ಲಿಯೂ ಈ ರಾಸಾಯನಿಕ ಕಂಡು ಬಂದರೆ, ಅಂತಹವರಿಗೆ ಮಕ್ಕಳೇ ಆಗುವುದಿಲ್ಲ ಎನ್ನುವುದನ್ನು ನಂಬಲೇಬೇಕು. ಅಲ್ಲದೇ ಶ್ವಾಸಕೋಶದ ತೊಂದರೆ ಹಾಗೂ ಮೂತ್ರಪಿಂಡ ತೊಂದರೆಗೂ ಇದು ಕಾರಣ ಆಗುತ್ತದೆ.

ಇಷ್ಟೆಲ್ಲ ಘೋರ ಪರಿಣಾಮಗಳು ಈ ವಿಷಕಾರಿ ರಾಸಾಯನಿಕದಿಂದ ಉಂಟಾಗುತ್ತವೆ. ಹೀಗಾಗಿ ಈ ಬಗ್ಗೆ ಪರಿಸರ ಹೋರಾಟಗಾರು ಹಾಗೂ ವಿಜ್ಞಾನಿಗಳು ಎಚ್ಚರಿಕೆಯನ್ನು ನೀಡುತ್ತಲೇ ಇದ್ದಾರೆ. ಆದರೂ ಪ್ಲಾಸ್ಟಿಕ್ ಬಳಕೆ ಕಡಿಮೆ ಆಗಿಲ್ಲ. ಎಲ್ಲರ ಜೀವನದಲ್ಲಿ ಪ್ಲಾಸ್ಟಿಕ್ ಹಾಸುಹೊಕ್ಕಾಗಿದೆ. ಆದರೆ ಅನೇಕ ಕಡೆಗಳಲ್ಲಿ ಪ್ಲಾಸ್ಟಿಕ್ ನಿಷೇಧ ಎನ್ನುವುದು ಕೇವಲ ಕಾಗಗದ ಮೇಲೆ ಮಾತ್ರ. ಅದರ ನಿಜವಾದ ಪರಿಪಾಲನೆ ಯಾವಾಗಿನಿಂದ ಶುರುವಾಗುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ. ಸರ್ಕಾರ ಅಷ್ಟೇ ಅಲ್ಲ, ಜನರೂ ಎಚ್ಚೆತ್ತುಕೊಳ್ಳಬೇಕಿದೆ.
Published by: Harshith AS
First published: February 23, 2021, 11:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories