ದೇಶದ ಕಾನೂನು ಬಾಲ್ಯ ವಿವಾಹ (Marriage) ಪದ್ಧತಿಯನ್ನು ನಿಷೇಧಿಸಿದ್ದರೂ ಕೆಲವೊಂದು ಧರ್ಮಗಳಲ್ಲಿ ಈ ಆಚರಣೆ ಇಂದಿಗೂ ನಡೆದುಕೊಂಡು ಬರುತ್ತಿದೆ. ಹೆಚ್ಚಾಗಿ ಗ್ರಾಮೀಣ (Rural) ಭಾಗಗಳಲ್ಲಿ ಬಾಲ್ಯ ವಿವಾಹಗಳು ಇನ್ನೂ ಜಾರಿಯಲ್ಲಿರುವುದರಿಂದ ಇನ್ನೂ ವಿವಾಹಕ್ಕೆ ಪಕ್ವತೆಯನ್ನು ಹೊಂದಿರದ ಬಾಲಕ ಬಾಲಕಿಯರು ಒಂದು ರೀತಿಯ ಕೌಟುಂಬಿಕ (Family) ಹಿಂಸೆಗೆ ಒಳಗಾಗುತ್ತಿದ್ದಾರೆ. ಈ ಕುರಿತು ಮತ್ತಷ್ಟು ವಿವರಗಳನ್ನು ಲೇಖನದಲ್ಲಿ (Arical) ತಿಳಿಯೋಣ. 15 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿಯರ ವಿವಾಹವು ಕಾನೂನಿನಲ್ಲಿ ಅಪರಾಧವೆಂದು ಪರಿಗಣಿತವಾದಾಗ ಸಂಪ್ರದಾಯ ಹಾಗೂ ವೈಯಕ್ತಿಕ ಕಾನೂನಿನ (Law) ಆಧಾರದಲ್ಲಿ ವಿವಾಹಿತರಾಗಬಹುದೇ ಎಂಬುದನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಫೋಷಿಸಿದೆ.
ವಿವಾಹಕ್ಕೆ ಕಾನೂನುಬದ್ಧ ವಯಸ್ಸು ಮಹಿಳೆಯರಿಗೆ 18 ವರ್ಷಗಳು ಮತ್ತು ಪುರುಷರಿಗೆ 21 ವರ್ಷಗಳು. ಈ ವಯಸ್ಸಿನೊಳಗಿನ ವಿವಾಹವನ್ನು ಬಾಲ್ಯ ವಿವಾಹವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. 2017 ರಲ್ಲಿ, ಸುಪ್ರೀಂ ಕೋರ್ಟ್ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯೊಂದಿಗಿನ ಲೈಂಗಿಕತೆಯನ್ನು ಅತ್ಯಾಚಾರ ಎಂಬುದಾಗಿ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ಪರಿಶೀಲನೆ ಏನು?
ಸಂಪ್ರದಾಯ ಹಾಗೂ ವೈಯಕ್ತಿಕ ಕಾನೂನು ಅನುಮತಿಸಿದರೆ 15 ವರ್ಷ ವಯಸ್ಸಿನ ಹುಡುಗಿಯರು ವಿವಾಹವಾಗಬಹುದೇ ಎಂದು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಇತ್ತೀಚಿನ ಆದೇಶದ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಸಲ್ಲಿಸಿದ ಅರ್ಜಿಯನ್ನು ಆಧರಿಸಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ, 2012 ರ ನಿಬಂಧನೆಗಳನ್ನು ಪರಿಗಣಿಸದೆ ಮುಸ್ಲಿಂ ವೈಯಕ್ತಿಕ ಕಾನೂನಿನ ಆಧಾರದ ಮೇಲೆ ಮದುವೆಯಾಗಬಹುದು ಎಂದು ಹೇಳಿದೆ.
NCPCR (ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ) ವಾದವೇನು?
ಹೈಕೋರ್ಟ್ ಆದೇಶವು ಇತರ ನ್ಯಾಯಾಲಯಗಳಿಗೆ ಆದೇಶವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 14 ಮತ್ತು 15 ವರ್ಷ ವಯಸ್ಸಿನ ಹುಡುಗಿಯರನ್ನು ವಿವಾಹವಾದಾಗ, ಪೋಕ್ಸೊ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆ ಅಂತಹ ವಿವಾಹಗಳನ್ನು ಅಪರಾಧವೆಂದು ಪರಿಗಣಿಸಿದಾಗ ವೈಯಕ್ತಿಕ ಕಾನೂನು ಮತ್ತು ಸಂಪ್ರದಾಯದ ಮನವಿಯನ್ನು ಬಳಸಲಾಗುವುದಿಲ್ಲ ಎಂದು NCPCR ವಾದಿಸಿತು.
POCSO ಕಾಯಿದೆ ಮತ್ತು IPC ಯ ಅಡಿಯಲ್ಲಿ ವಿವಾಹಕ್ಕೆಒಪ್ಪಿಗೆಯ ವಯಸ್ಸನ್ನು 18 ವರ್ಷಗಳಿಗೆ ಇಳಿಸುವಂತೆ ಸುಪ್ರೀಂ ಕೋರ್ಟ್ ಸಂಸತ್ತಿಗೆ ಮನವಿ ಮಾಡಿದೆ ಅಂತೆಯೇ ಕಳೆದ ಡಿಸೆಂಬರ್‌ನಲ್ಲಿ, ಸರ್ಕಾರವು ಅದನ್ನು ಮಾಡಲು ಇನ್ನೂ ಯೋಜಿಸಿಲ್ಲ ಎಂದು ಸಂಸತ್ತಿಗೆ ತಿಳಿಸಿತು.
ಭಾರತದಲ್ಲಿ ಮದುವೆಯನ್ನು ನಿಯಂತ್ರಿಸುವ ವಿವಿಧ ಕಾನೂನುಗಳು ಯಾವುವು?
ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆ, 2021, ಬಾಲ್ಯವಿವಾಹ ನಿಷೇಧ ಕಾಯ್ದೆ (ಪಿಸಿಎಂಎ), 2006ಕ್ಕೆ ತಿದ್ದುಪಡಿ ಮಾಡುವುದಕ್ಕಾಗಿ, ಮಹಿಳೆಯರ ಕನಿಷ್ಠ ವಿವಾಹ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸಿದೆ. ಡಿಸೆಂಬರ್ 2021 ರಲ್ಲಿ ಹೆಚ್ಚಿನ ಚರ್ಚೆಗಾಗಿ ಇದನ್ನು ಸಂಸದೀಯ ಸ್ಥಾಯಿ ಸಮಿತಿಗೆ ಉಲ್ಲೇಖಿಸಲಾಯಿತು ಮತ್ತು ಅದರ ವರದಿಯನ್ನು ಸಲ್ಲಿಸಲು ಈಗಾಗಲೇ ಮೂರು ವಿಸ್ತರಣೆಗಳನ್ನು ಪಡೆದುಕೊಂಡಿದ್ದು, ಕೊನೆಯದು ಅಕ್ಟೋಬರ್ 2022 ರಲ್ಲಿ ನಡೆದಿದೆ.
ಕಳೆದ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಮುಸ್ಲಿಂ ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು ಇತರ ಧರ್ಮಗಳಿಗೆ ಸಮಾನವಾಗಿ ನಿಗದಿಪಡಿಸುವಂತೆ ಸಲ್ಲಿಸಿದ ಮತ್ತೊಂದು ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರವನ್ನು ವಿನಂತಿಸಿತು. NCW, NCPCR ನಂತೆ, ವೈಯಕ್ತಿಕ ಕಾನೂನು POCSO ಕಾಯಿದೆ ಮತ್ತು ಇತರ ಕಾನೂನುಗಳ ಶಾಸನಬದ್ಧ ನಿಬಂಧನೆಗಳನ್ನು ಅತಿಕ್ರಮಿಸಬಹುದೇ ಎಂಬ ಪ್ರಶ್ನೆಯನ್ನು ಮಾಡಿತು.
1872, ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯಿದೆ, 1936, ವಿಶೇಷ ವಿವಾಹ ಕಾಯಿದೆ, 1954 ಮತ್ತು ಹಿಂದೂ ವಿವಾಹ ಕಾಯಿದೆ, 1955 ರ ಅಡಿಯಲ್ಲಿ, ಪುರುಷನ ವಿವಾಹದ ಕನಿಷ್ಠ ವಯಸ್ಸು 21 ವರ್ಷಗಳು ಮತ್ತು ಮಹಿಳೆಗೆ 18 ವರ್ಷ ಎಂದು NCW ಅರ್ಜಿಯಲ್ಲಿ ತಿಳಿಸಿದೆ. ಭಾರತದಲ್ಲಿನ ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ, ಪ್ರೌಢಾವಸ್ಥೆಯನ್ನು ತಲುಪಿದ ವ್ಯಕ್ತಿಗಳು ಮದುವೆಯಾಗಲು ಅರ್ಹರಾಗಿರುತ್ತಾರೆ, ಅಂದರೆ ಅವರು ಇನ್ನೂ ಅಪ್ರಾಪ್ತರಾಗಿರುವಾಗಲೇ ವಿವಾಹಕ್ಕೆ ಅರ್ಹರು ಎಂದು ತಿಳಿಸಿದೆ.
ಅಸ್ಸಾಂ ಸರ್ಕಾರ ಏನು ತೀರ್ಪು ನೀಡಿದೆ?
ಇತ್ತೀಚೆಗೆ ಅಪ್ರಾಪ್ತ ಬಾಲಕಿಯರನ್ನು ಮದುವೆಯಾಗುವ ಪುರುಷರಿಗೆ ಎರಡು ವರ್ಷಗಳ ಕಠಿಣ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಅಸ್ಸಾಂ ಕ್ಯಾಬಿನೆಟ್ ತೀರ್ಪು ನೀಡಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ವರದಿಯನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸಾಂನಲ್ಲಿ ಸರಾಸರಿ 31.8% ಹುಡುಗಿಯರು "ನಿಷೇಧಿತ ವಯಸ್ಸಿನಲ್ಲಿ" ಮದುವೆಯಾಗುತ್ತಾರೆ ಮತ್ತು 11.7% ರಷ್ಟು ಪ್ರೌಢಾವಸ್ಥೆಗೆ ಮುಂಚೆಯೇ ತಾಯಂದಿರಾಗುತ್ತಾರೆ. ರಾಷ್ಟ್ರೀಯ ಸರಾಸರಿಯು ಕ್ರಮವಾಗಿ 23.3% ಮತ್ತು 6.8% ಆಗಿದೆ.
ಬಾಲ್ಯವಿವಾಹ ಹೆಚ್ಚಿರುವ ಇತರ ರಾಜ್ಯಗಳು ಯಾವುವು?
ಜೂನ್ 2017 ರಲ್ಲಿ ಯಂಗ್ ಲೈವ್ಸ್, ಇಂಡಿಯಾ ಮತ್ತು NCPCR 2011 ರ ಜನಗಣತಿಯ ಆಧಾರದ ಮೇಲೆ ಭಾರತದಲ್ಲಿ ಬಾಲ್ಯ ವಿವಾಹದ ಅಂಕೆ ಸಂಖ್ಯೆಯನ್ನು ಅಸ್ಸಾಂ, ಬಿಹಾರ, ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಸೇರಿದಂತೆ 13 ರಾಜ್ಯಗಳಲ್ಲಿರುವ 70 ಜಿಲ್ಲೆಗಳಲ್ಲಿ ಗುರುತಿಸಿದೆ.
ಬಂಗಾಳದಲ್ಲಿ ಬಾಲ್ಯವಿವಾಹ ಹೆಚ್ಚು. ಕಾರ್ಯಕರ್ತರು ಮತ್ತು ಆರೋಗ್ಯ ಕಾರ್ಯಕರ್ತರ ಪ್ರಕಾರ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಕಾನೂನಿನ ನಿಬಂಧನೆಗಳ ಕುರಿತು ಜಾಗೃತಿ ಅಭಿಯಾನಗಳು ಸೇರಿದಂತೆ ಉದ್ದೇಶಿತ ಮಧ್ಯಸ್ಥಿಕೆಗಳನ್ನು ಬಾಲ್ಯವಿವಾಹವನ್ನು ತಡೆಗಟ್ಟಲು ಮತ್ತು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು NFHS-5 ಡೇಟಾವು ಸುಧಾರಣೆಯನ್ನು ತೋರಿಸಿದೆ ಹಾಗೂ ಬದಲಾವಣೆಗೆ ಅವಕಾಶವಿದೆ ಎಂದು ತಿಳಿಸಿದೆ.
ಜಾರ್ಖಂಡ್‌ನಲ್ಲಿ, NFHS-5 (2021) ಪ್ರಕಾರ, 32.2% ಮಹಿಳೆಯರು 2016 ರಲ್ಲಿ 37.9% ಗೆ ಹೋಲಿಸಿದರೆ 18 ವರ್ಷ ತುಂಬುವ ಮೊದಲು ವಿವಾಹವಾದರು (NFHS 4); ಪಶ್ಚಿಮ ಬಂಗಾಳದಲ್ಲಿ, 41.6% ಮಹಿಳೆಯರು 18 ವರ್ಷ (NFHS-5) ತುಂಬುವ ಮೊದಲು ವಿವಾಹವಾದರು ಹಾಗೂ ಮಧ್ಯಪ್ರದೇಶವು ಬಾಲ್ಯವಿವಾಹದಲ್ಲಿ ಇಳಿಕೆ ಕಂಡಿದೆ (NFHS-4 ರಲ್ಲಿ 32.4% ರಿಂದ NFHS-5 ರಲ್ಲಿ 23.1%), ಆದರೂ 1000 ಜನನಗಳಿಗೆ 41.3 ರಂತೆ ಶಿಶು ಮರಣ ಪ್ರಮಾಣವು ಅಧಿಕವಾಗಿದೆ.
ವಯಸ್ಕರಾಗುವ ಮೊದಲು ವಿವಾಹವಾಗುವುದರಿಂದ ಉಂಟಾಗುವ ಪರಿಣಾಮಗಳೇನು?
ಯಂಗ್ ಲೈವ್ಸ್, ಇಂಡಿಯಾ-ಎನ್‌ಸಿಪಿಸಿಆರ್ ಅಧ್ಯಯನವು ವಯಸ್ಕರಾಗುವ ಮೊದಲು ಮದುವೆಯಾದ ಹುಡುಗಿಯರಿಗೆ ಸಂತಾನೋತ್ಪತ್ತಿ ಆಯ್ಕೆಗಳ ಕೊರತೆಯಿದೆ ಮತ್ತು ಶಿಕ್ಷಣ, ಸ್ವಾಯತ್ತತೆ ಮತ್ತು ಜೀವನೋಪಾಯದ ಕೊರತೆ ಸೇರಿದಂತೆ ಇತರ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದು ಸೂಚಿಸಿದೆ.
15-19 ವಯಸ್ಸಿನ 59% ಭಾರತೀಯ ಯುವತಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಮತ್ತು ವಯಸ್ಕರಾಗುವುದಕ್ಕಿಂತ ಮೊದಲು ಮಗುವನ್ನು ಹೆರುವುದು ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗೂ ಕಳಪೆ ಪೌಷ್ಟಿಕಾಂಶ ಕೊರತೆಗೆ ಕಾರಣವಾಗುತ್ತದೆ ಎಂದು ವರದಿ ತಿಳಿಸಿದೆ.
ಮಹಿಳೆಯರನ್ನು ಕಾಡುತ್ತಿರುವ ಶಿಕ್ಷಣದ ಸಮಸ್ಯೆ
10 ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಶಾಲಾ ಶಿಕ್ಷಣ ಹೊಂದಿರುವ ಮಹಿಳೆಯರ ರಾಷ್ಟ್ರೀಯ ಶೇಕಡಾವಾರು 41% ಆಗಿದ್ದು ಈ ಡೇಟಾ ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ, NFHS-5 ಪ್ರಕಾರ, 32.9% ಮಹಿಳೆಯರು 10 ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಶಾಲಾ ಶಿಕ್ಷಣವನ್ನು ಮುಗಿಸಿದ್ದಾರೆ.
PCMA (ಬಾಲ್ಯ ವಿವಾಹ ನಿಷೇಧ ಕಾಯ್ದೆ) ಯ ನಿಬಂಧನೆಗಳು ದುರುಪಯೋಗವಾಗಿದೆಯೇ?
ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವ ಅಥವಾ ಬಲವಂತದ ಮದುವೆಗಳು, ಕೌಟುಂಬಿಕ ದೌರ್ಜನ್ಯ ಮತ್ತು ಶಿಕ್ಷಣದ ಸಾಧ್ಯತೆಗಳ ಕೊರತೆಯಿಂದ ತಪ್ಪಿಸಿಕೊಳ್ಳಲು ಓಡಿಹೋದ ತಮ್ಮ ಹೆಣ್ಣುಮಕ್ಕಳನ್ನು ಶಿಕ್ಷಿಸಲು ಪೋಷಕರು ಸಾಮಾನ್ಯವಾಗಿ PCMA ಅನ್ನು ಬಳಸುತ್ತಾರೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತರು ಗುರುತಿಸಿದ್ದಾರೆ.
ಆದ್ದರಿಂದ, ಪಿತೃಪ್ರಭುತ್ವದ ವ್ಯವಸ್ಥೆಯಲ್ಲಿ, ವಯಸ್ಸಿನ ಮಿತಿಯಲ್ಲಿನ ಬದಲಾವಣೆಯು ಯುವ ವಯಸ್ಕರ ಮೇಲೆ ಪೋಷಕರ ಅಧಿಕಾರವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಕೌಟುಂಬಿಕ ಕಾನೂನು ಸುಧಾರಣೆಗೆ ಸಂಬಂಧಿಸಿದ 2008 ರ ಕಾನೂನು ಆಯೋಗದ ವರದಿಯು ಹುಡುಗರು ಮತ್ತು ಹುಡುಗಿಯರಿಗೆ 18 ವರ್ಷದ ಏಕರೂಪದ ಮದುವೆಯ ವಯಸ್ಸನ್ನು ಶಿಫಾರಸು ಮಾಡಿದೆ. 18 ನೇ ವಯಸ್ಸು ನಾಗರಿಕರು ಮತದಾನ ಮಾಡಬಹುದಾದ ವಯಸ್ಸಾಗಿರುವುದರಿಂದ, ಅವರು ಆ ವಯಸ್ಸಿನಲ್ಲಿ ಮದುವೆಯಾಗಲು ಅನುಮತಿಸಬೇಕು ಎಂದು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ