Explained: ಸೂರ್ಯನ ಆಯಸ್ಸಿನ ಅರ್ಧಭಾಗ ಕಂಪ್ಲೀಟ್! ನಿಗಿನಿಗಿ ಕೆಂಡದಂತಹ ನಕ್ಷತ್ರ ಎಷ್ಟು ವರ್ಷ ಬದುಕಲಿದೆ?

ಸೌರ ಮಂಡಲದಲ್ಲಿ ಅಂದಾಜು 4.57 ಶತಕೋಟಿ ವರ್ಷಗಳಿಂದ ಸಿಡಿಯುವ ಭಾರೀ ಗಾತ್ರದ ಬೆಂಕಿಯುಂಡೆಗಳು, ಸೌರ ಜ್ವಾಲೆಗಳು ಸೂರ್ಯನ ಆಯಸ್ಸಿನ ಗುಟ್ಟನ್ನು ತಿಳಿಸಿವೆ.

ಸೂರ್ಯ

ಸೂರ್ಯ

  • Share this:
ಖಗೋಳ ಶಾಸ್ತ್ರದಲ್ಲಿ (Astronomy) ಮೊದಲ ಸ್ಥಾನ ಪಡೆಯುವುದು ಸೌರ ಮಂಡಲ  (Solar System) ಎನ್ನುವುದು ವಿಶೇಷ. ಬ್ರಹ್ಮಾಂಡದ ಬಗೆಗಿನ ನಮ್ಮ ಜ್ಞಾನದ ವ್ಯಾಪ್ತಿ ಈಗ ಮತ್ತಷ್ಟು ವಿಸ್ತಾರಗೊಳ್ಳಲಿದೆ. ಏಕೆಂದರೆ ಸೌರ ಮಂಡಲದಲ್ಲಿ ದಿನನಿತ್ಯವೂ ಕೌತುಕ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಸೌರ ಮಂಡಲದಲ್ಲಿ ಅಂದಾಜು 4.57 ಶತಕೋಟಿ ವರ್ಷಗಳಿಂದ ಸಿಡಿಯುವ ಭಾರೀ ಗಾತ್ರದ ಬೆಂಕಿಯುಂಡೆಗಳು, ಸೌರ ಜ್ವಾಲೆಗಳು (Solar Flare) ಸೂರ್ಯನ (Sun) ಮಧ್ಯತಂರವನ್ನು ತಿಳಿಸುತ್ತವೆ. ಈ ಎಲ್ಲ ಬ್ರಹ್ಮಾಂಡದ ಅತ್ಯಂತ ನಿಖರವಾದ ನಕ್ಷೆಯನ್ನು ತೋರಿಸುವ ಕೀರ್ತಿಗೆ ಪಾತ್ರವಾಗಿರುವ ಗಯಾ ಬಾಹ್ಯಾಕಾಶ (Gaia Spacecraft) ನೌಕೆಯು ನಮ್ಮ ಸೌರವ್ಯೂಹದ ಮಧ್ಯದಲ್ಲಿರುವ ಹೊಳೆಯುವ ನಕ್ಷತ್ರ ಸೂರ್ಯನ ಹಿಂದಿನ ಮತ್ತು ಮುಂದಿನ ಭವಿಷ್ಯವನ್ನು ಬಹಿರಂಗಪಡಿಸಿದೆ.

ಈ ವರ್ಷದ ಜೂನ್‌ನಲ್ಲಿ ಗಯಾ ಬಾಹ್ಯಾಕಾಶ ನೌಕೆ ಬಿಡುಗಡೆ ಮಾಡಿದ ಹೊಸ ದತ್ತಾಂಶದಿಂದ ಸೂರ್ಯನ ಕುರಿತು ಇರುವ ಇತ್ತೀಚಿನ ಮಾಹಿತಿಯು ಬೆಳಕಿಗೆ ಬಂದಿದೆ. ಇತ್ತೀಚಿನ ದತ್ತಾಂಶಗಳೆಲ್ಲ‌ ಸೇರಿ ಇದು ನೂರಾರು ಮಿಲಿಯನ್ ನಕ್ಷತ್ರಗಳ ಆಂತರಿಕ ಗುಣಲಕ್ಷಣಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಅವುಗಳು ಎಷ್ಟು ಬಿಸಿಯಾಗಿರುತ್ತವೆ? ಎಷ್ಟು ದೊಡ್ಡದಾಗಿರುತ್ತವೆ? ಅವು ಯಾವ ದ್ರವ್ಯರಾಶಿಗಳನ್ನು ಒಳಗೊಂಡಿರುತ್ತವೆ? ಎಂಬೆಲ್ಲ ಮಾಹಿತಿಯನ್ನು ಈ ದತ್ತಾಂಶ ಹೊಂದಿದೆ ಎಂದು ಹೇಳಬಹುದು.

ಇದನ್ನೂ ಓದಿ: Explained: ಜೇಮ್ಸ್ ವೆಬ್ ಟೆಲಿಸ್ಕೋಪ್‌ನ ಮೊದಲ ಚಿತ್ರಗಳಿಂದ ಕಲಿತ 5 ವಿಷಯಗಳಿವು

ಖಗೋಳಶಾಸ್ತ್ರಜ್ಞರು ಈ ದತ್ತಾಂಶವನ್ನು ಬಳಸಿಕೊಂಡು, ನಮ್ಮ ಸೂರ್ಯನಂತೆ ಒಂದೇ ರೀತಿಯ ದ್ರವ್ಯರಾಶಿ ಮತ್ತು ಸಂಯೋಜನೆಯ ನಕ್ಷತ್ರಗಳು ಇರುವ ಗುಂಪನ್ನು ಗುರುತಿಸಿದ್ದಾರೆ ಮತ್ತು ಮುಂದೆ ಭವಿಷ್ಯದಲ್ಲಿ ನಮ್ಮ ನಕ್ಷತ್ರವು ಹೇಗೆ ವಿಕಸನಗೊಳ್ಳಲಿದೆ ಎಂಬುದನ್ನು ಕಂಡುಹಿಡಿದಿದ್ದಾರೆ.

ಮಧ್ಯಂತರದಲ್ಲಿರುವ ಸೂರ್ಯ ನಕ್ಷತ್ರ
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಸುಮಾರು 4.57 ಶತಕೋಟಿ ವರ್ಷಗಳ ಅಂದಾಜುಗಳಲ್ಲಿ ಸೂರ್ಯನು ಪ್ರಸ್ತುತವಾಗಿ ಮಧ್ಯಂತರದಲ್ಲಿದ್ದು, ಹೀಲಿಯಂನೊಂದಿಗೆ ಹೈಡ್ರೋಜನ್ನಿನ ಸಂಯೋಗ ಹೊಂದಿದೆ ಮತ್ತು ಸಾಮಾನ್ಯವಾಗಿ ಸ್ಥಿರವಾಗಿರುತ್ತದೆ ಎಂದು ಹೇಳಿದೆ. ಹೊಸ ಸೌರ ಚಕ್ರವು ಮೇಲೆರುತ್ತಿದ್ದಂತೆ, ಕಳೆದ ವಾರ ಸೂರ್ಯನು 17 ಕರೋನಲ್ ಮಾಸ್ ಇಜೆಕ್ಷನ್‌ಗಳು ಮತ್ತು ಒಂಬತ್ತು ಸನ್‌ಸ್ಪಾಟ್‌ಗಳೊಂದಿಗೆ ಸ್ಫೋಟಿಸಿತು.

ಹೈಡ್ರೋಜನ್ ಖಾಲಿಯಾಗಲಿದೆ
ಅದರ ಜೊತೆಗೆ ಮುಂದೆ ಭವಿಷ್ಯದಲ್ಲಿ ಹೈಡ್ರೋಜನ್ ಅದರ ಮಧ್ಯಭಾಗದಲ್ಲಿ ಖಾಲಿಯಾಗುವುದರಿಂದ ಮತ್ತು ಸಮ್ಮಿಳನ ಪ್ರಕ್ರಿಯೆಯಲ್ಲಿ ಬದಲಾವಣೆಗಳು ಪ್ರಾರಂಭವಾಗುವುದರಿಂದಅದು ಕೆಂಪು ದೈತ್ಯ ನಕ್ಷತ್ರವಾಗಿ ಉಬ್ಬುತ್ತದೆ. ಪ್ರಕ್ರಿಯೆಯಲ್ಲಿ ಅದರ ಮೇಲ್ಮೈ ತಾಪಮಾನವನ್ನು ಕಡಿಮೆ ಮಾಡುತ್ತದೆ. ಇದು ಹೇಗೆ ಸಂಭವಿಸುತ್ತದೆ ಎಂಬುದನ್ನು ನಿಖರವಾಗಿ ಕಂಡುಹಿಡಿಯಲು ವಿಜ್ಞಾನಿಗಳು ಆಸಕ್ತಿ ಹೊಂದಿದ್ದಾರೆ.  ನಕ್ಷತ್ರವು ಎಷ್ಟು ದ್ರವ್ಯರಾಶಿಯನ್ನು ಹೊಂದಿರುತ್ತದೆ ಮತ್ತು ಅದರ ರಾಸಾಯನಿಕ ಸಂಯೋಜನೆಯನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ:  GSAT-24 ಸಂವಹನ ಉಪಗ್ರಹ ಉಡಾವಣೆ ಮಾಡಿದ ಭಾರತ- ಇದರಿಂದಾಗುವ ಪರಿಣಾಮಗಳೇನು? ಇಲ್ಲಿದೆ ವಿವರ

ಈ ವಿಷಯಕ್ಕೆ ಗಯಾ ದತ್ತಾಂಶ ಹೆಚ್ಚು ಉಪಯುಕ್ತವಾಗಿದೆ. ಫ್ರಾನ್ಸ್‌ನ ಅಬ್ಸರ್ವೇಟೋಯಿರ್ ಡೆ ಲಾ ಕೋಟ್ ಡಿ'ಅಜುರ್‌ನಿಂದ ಒರ್ಲಾಗ್ ಕ್ರೀವಿ ಅವರು ಬಾಹ್ಯಾಕಾಶ ನೌಕೆ ನೀಡಬಹುದಾದ ಅತ್ಯಂತ ನಿಖರವಾದ ನಾಕ್ಷತ್ರಿಕ ಅವಲೋಕನಗಳನ್ನು ಹುಡುಕುತ್ತಾ ದತ್ತಾಂಶವನ್ನು ಸಂಗ್ರಹಿಸಲಾಗಿತ್ತು. ಈ ನಿಟ್ಟಿನಲ್ಲಿ 3000K ಮತ್ತು 10,000K ನಡುವಿನ ಮೇಲ್ಮೈ ತಾಪಮಾನವನ್ನು ಹೊಂದಿರುವ ನಕ್ಷತ್ರಗಳ ಮೇಲೆ ಲಕ್ಷ್ಯ ಕೇಂದ್ರೀಕರಿಸಲಾಗಿತ್ತೆಂದಿದ್ದಾರೆ. ನಾವು ಹೆಚ್ಚಿನ ನಿಖರ ಮಾಪನಗಳೊಂದಿಗೆ ನಕ್ಷತ್ರಗಳ ನಿಜ ಮಾದರಿಯನ್ನು ಹೊಂದಲು ನಾವು ಬಯಸಿದ್ದೇವೆ ಎಂದು ಓರ್ಲಾಗ್ ಅವರು ಮಾದರಿಯನ್ನು ಫಿಲ್ಟರ್ ಮಾಡಿದಾಗ ಸೂರ್ಯನಂತೆಯೇ ಇರುವ ದ್ರವ್ಯರಾಶಿ ಮತ್ತು ರಾಸಾಯನಿಕ ಸಂಯೋಜನೆಯನ್ನು ಹೊಂದಿರುವ ನಕ್ಷತ್ರಗಳು ಇರುವುದನ್ನು ತೋರಿಸಿದರು.

ಸೂರ್ಯ ನಕ್ಷತ್ರದ ಮುಂದಿನ ಭವಿಷ್ಯ ಏನಾಗಿರುತ್ತದೆ?
ದತ್ತಾಂಶ ಮತ್ತು ವಿಶ್ಲೇಷಣೆಯಿಂದ ತಿಳಿದು ಬಂದ ವಿಚಾರವೇನೆಂದರೆ, ಸೂರ್ಯ ಸುಮಾರು 8 ಶತಕೋಟಿ ವರ್ಷಗಳಲ್ಲಿ ಗರಿಷ್ಠ ತಾಪಮಾನವನ್ನು ಮುಂದೆ ತಲುಪುತ್ತಾನೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ. ನಂತರ ಅದು ತಣ್ಣಗಾಗಿ ಮತ್ತು ಗಾತ್ರದಲ್ಲಿ ಹೆಚ್ಚಾಗುತ್ತದೆ. ಅದು ಕೆಂಪು ದೈತ್ಯ ನಕ್ಷತ್ರವಾಗುತ್ತದೆ. 1011 ಶತಕೋಟಿ ವರ್ಷಗಳಲ್ಲಿ ಸೂರ್ಯನು ತನ್ನ ಅಂತ್ಯವನ್ನು ತಲುಪುತ್ತಾನೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯು, ಸೂರ್ಯನು ತನ್ನ ಜೀವನದ ಅಂತ್ಯವನ್ನು ತಲುಪುತ್ತಾನೆ. ಅದು ಅಂತಿಮವಾಗಿ ಮಂದ ಬಿಳಿ ಕುಬ್ಜವಾಗುತ್ತದೆ ಎಂದು ಹೇಳಿದೆ.
Published by:Ashwini Prabhu
First published: