HOME » NEWS » Explained » STUDY SAYS CHOCOLATES POTATO CHIPS EATING MAY INCREASE THE RISK OF KIDNEY DISEASES STG HG

ಆಲೂಗೆಡ್ಡೆ ಚಿಪ್ಸ್, ಚಾಕೊಲೇಟ್ ತಿನ್ನುವುದು ಬಹು ಬೇಗನೆ ಮೂತ್ರ ಪಿಂಡದ ಕಾಯಿಲೆಗೆ ಆಹ್ವಾನ ನೀಡಿದಂತೆ: ಅಧ್ಯಯನ

ಆಲೂಗೆಡ್ಡೆ ಚಿಪ್ಸ್, ಬ್ರೆಡ್, ಬೇಕರಿ ತಿನಿಸುಗಳು ಮತ್ತು ಚಾಕೊಲೇಟ್ ಅಂದ್ರೆ ನಿಮಗೆ ಅಚ್ಚುಮೆಚ್ಚೇ? ಹಾಗಾದರೆ ಇನ್ನು ಮುಂದೆ ಈ ಬಗ್ಗೆ ಸ್ವಲ್ಪ ಜೋಪಾನ. ಆಲೂಗೆಡ್ಡೆ ಚಿಪ್ಸ್ ಅಥವಾ ಚಾಕೊಲೇಟ್‌ನಂತಹ ಸಂಸ್ಕರಿಸಿದ ಆಹಾರವನ್ನು ಸೇವಿಸುವುದರಿಂದ ಕರುಳಿನಲ್ಲಿ ಸೋರುವಿಕೆ ಉಂಟು ಮಾಡುವುದಲ್ಲದೇ ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಬಹುದು.

news18-kannada
Updated:April 3, 2021, 11:40 AM IST
ಆಲೂಗೆಡ್ಡೆ ಚಿಪ್ಸ್, ಚಾಕೊಲೇಟ್ ತಿನ್ನುವುದು ಬಹು ಬೇಗನೆ ಮೂತ್ರ ಪಿಂಡದ ಕಾಯಿಲೆಗೆ ಆಹ್ವಾನ ನೀಡಿದಂತೆ: ಅಧ್ಯಯನ
ಆಲೂಗೆಡ್ಡೆ ಚಿಪ್ಸ್
  • Share this:
ಆರೋಗ್ಯವೇ ಭಾಗ್ಯವೆನ್ನುವ ಮಾತನ್ನು ನಿಜವೆಂದು ತೋರಿಸಿಕೊಟ್ಟ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂದು ಆರೋಗ್ಯವನ್ನು ಕಾಪಾಡಿಕೊಳ್ಳಲು ವಾಕಿಂಗ್, ಜಾಗಿಂಗ್ ಮತ್ತು ಯೋಗ ಏನೆಲ್ಲಾ ಅಳವಡಿಸಿಕೊಂಡಿದ್ದೇವೆ. ಆದರೆ ಸರಿಯಾದ ಆಹಾರ ಕ್ರಮವನ್ನು ಅಳವಡಿಸಿಕೊಳ್ಳದ ಹೊರತು ಈ ಎಲ್ಲಾ ಪ್ರಯತ್ನಗಳು ಫಲ ನೀಡುವುದಿಲ್ಲ. ಇಂದು ಬಹುತೇಕರು ಮನೆಯಲ್ಲೇ ಕೆಲಸ ಮಾಡುವ ಕಾರಣ ಪ್ಯಾಕೆಟ್ ಚಿಪ್ಸ್, ಒತ್ತಡ ನಿವಾರಣೆಗೆ ಚಾಕೊಲೇಟ್‌
ಮೊರೆ ಹೋಗುತ್ತಿದ್ದಾರೆ. ಆದರೆ ನೆನಪಿಡಿ ಈ ಎಲ್ಲಾ ಆಹಾರ ಪದಾರ್ಥಗಳು ನಿಮ್ಮ ಅರಿವಿಗೆ ಬಾರದಂತೆ ನಿಮ್ಮ ಕಿಡ್ನಿಯ ಮೇಲೆ ಪರಿಣಾಮ ಬೀರುತ್ತಿದೆ. ಇದು ನಾವು ಹೇಳ್ತಿರೋದಲ್ಲ ಸಂಶೋಧಕರ ತಂಡ ಬಿಚ್ಚಿಟ್ಟಿರುವ ವರದಿ.

ಆಲೂಗೆಡ್ಡೆ ಚಿಪ್ಸ್, ಬ್ರೆಡ್, ಬೇಕರಿ ತಿನಿಸುಗಳು ಮತ್ತು ಚಾಕೊಲೇಟ್ ಅಂದ್ರೆ ನಿಮಗೆ ಅಚ್ಚುಮೆಚ್ಚೇ? ಹಾಗಾದರೆ ಇನ್ನು ಮುಂದೆ ಈ ಬಗ್ಗೆ ಸ್ವಲ್ಪ ಜೋಪಾನ. ಆಲೂಗೆಡ್ಡೆ ಚಿಪ್ಸ್ ಅಥವಾ ಚಾಕೊಲೇಟ್‌ನಂತಹ ಸಂಸ್ಕರಿಸಿದ ಆಹಾರವನ್ನು ಸೇವಿಸುವುದರಿಂದ ಕರುಳಿನಲ್ಲಿ ಸೋರುವಿಕೆ ಉಂಟು ಮಾಡುವುದಲ್ಲದೇ ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಬಹುದು. ಆಸ್ಟ್ರೇಲಿಯದ ಮೊನಾಶ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವು , ಅತಿ ಹೆಚ್ಚು ಶಾಖದಿಂದ ತಯಾರಿಸಿದ ಆಹಾರ ಅಥವಾ ಸಂಸ್ಕರಿಸಿದ ಆಹಾರಗಳಲ್ಲಿ ಅಡ್ವಾನ್ಸ್ಡ್ ಗ್ಲೈಕೇಶನ್ ಅಂಡ್ ಪ್ರಾಡಕ್ಟ್ಸ್ (ಎಜಿಇಎಸ್​​) ಎಂಬ ಹಾನಿಕಾರಕ ಕೆಮಿಕಲ್​ ಇದೆ ಎನ್ನುವ ಅಂಶವನ್ನು ಬಹಿರಂಗಪಡಿಸಿವೆ. ಈ ಹಾನಿಕಾರಕ ಕೆಮಿಕಲ್​​ಗಳು ಆಹಾರವನ್ನು ಹುರಿದಾಗ, ಬೇಯಿಸಿದಾಗ ಆಹಾರಗಳಿಗೆ ಒಂದು ವಿಶೇಷವಾದ ರುಚಿ ಮತ್ತು ಸುವಾಸನೆಯನ್ನು ನೀಡುತ್ತದೆ. ಎಜಿಇಎಸ್​​ಗಳು ಮೇಲ್‌ಲಾರ್ಡ್ ರಿಯಾಕ್ಷನ್ ಎನ್ನುವ ಅಂಶವನ್ನು ಪ್ರಚೋದಿಸುತ್ತವೆ. ದೇಹದಲ್ಲಿ ಅಪಾಯದ ಮುನ್ಸೂಚನೆಗಳು ಉರಿಯೂತ ಮತ್ತು ಮೂತ್ರಪಿಂಡ ಕಾಯಿಲೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ರೋಡೆಂಟ್‌ಗಳ ಮೇಲೆ ಈ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಆದರೆ ಇದೆಲ್ಲದರ ನಡುವೆ ಇನ್ನೊಂದು ಸಂತಸದ ಸಂಗತಿ ಇದೆ. ಓಟ್ಸ್, ಬೇಯಿಸಿದ ಅನ್ನ, ಕೆಂಪಕ್ಕಿ, ಬಾರ್ಲಿ, ಕಾಳುಗಳಾದ ಕಪ್ಪು ಬೀನ್ಸ್, ಬಟಾಣಿ, ಹಸಿ ಆಲೂಗೆಡ್ಡೆ ಮತ್ತು ಬೇಯಿಸಿದ ಆಲೂಗಡ್ಡೆಯಂತಹ ನಾರಿನಾಂಶದ ಆಹಾರವನ್ನು ತಿನ್ನುವುದರಿಂದ ಕರುಳಿನ ಆರೋಗ್ಯ ಚೆನ್ನಾಗಿರುವುದಲ್ಲದೇ, ಮೂತ್ರಪಿಂಡದ ಆರೋಗ್ಯವನ್ನು ರಕ್ಷಿಸುತ್ತದೆ ಎಂದು Science Advances ಪತ್ರಿಕೆಯ ವರದಿಯೊಂದು ಬಹಿರಂಗಪಡಿಸಿದೆ.

ನೀವು ಸೇವಿಸುವ ಈ ಆಹಾರಗಳು ನಿಮ್ಮ ಕೆಳಭಾಗದ ಕರುಳಿಗೆ ಇಳಿಯುತ್ತದೆ. ಆ ಮೂಲಕ ನಿಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿ ಕಾರ್ಯ ನಿರ್ವಹಿಸುತ್ತದೆ. ಕರುಳಿನ ಬ್ಯಾಕ್ಟೀರಿಯಾವು ಈ ಆಹಾರವನ್ನು ಫರ್ಮೆಂಟ್​ ಮಾಡುವ ಮೂಲಕ ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಸರಾಗ ಜೀರ್ಣಕ್ರಿಯೆಗೆ ನೆರವಾಗುತ್ತದೆ ಎಂದು ಲೇಖಕಿ ಹಾಗೂ ಮೊನಾಶ್ ಸೆಂಟ್ರಲ್ ಕ್ಲಿನಿಕಲ್ ಸ್ಕೂಲ್​​ನ ಮಧುಮೇಹ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮೆಲಿಂಡಾ ಕೊಗ್ಲಾನ್ ತಿಳಿಸುತ್ತಾರೆ.

ಜಾಗತಿಕವಾಗಿ, ಶೇಕಡಾ 10 ರಷ್ಟು ಜನರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಲ್ಲದೇ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಕ್ಯಾನ್ಸರ್, ಜಠರ ಮತ್ತು ಕರುಳಿನ ಕಾಯಿಲೆಗಳಿಗೆ ಸಂಸ್ಕರಿಸಿದ ಆಹಾರ ಸೇವನೆಯೇ ಪ್ರಮುಖ ಕಾರಣವೆನ್ನುವುದು ತಿಳಿದುಬಂದಿದೆ.
"ಆಹಾರದ ಬದಲಾವಣೆಯೂ ಕೂಡ ನಮ್ಮ ನಡವಳಿಕೆಯ ಬದಲಾವಣೆಯಂತೆಯೇ, ಇದನ್ನು ದೀರ್ಘಕಾಲ ಕಾಪಾಡಿಕೊಳ್ಳುವುದು ಕಷ್ಟ ಪಡಲೇಬೇಕು. ಅತಿ ಹೆಚ್ಚಿನ ನಾರಿನಂಶವುಳ್ಳ ಆಹಾರ ಸೇವನೆ, ಹಬೆಯಲ್ಲಿ ಆಹಾರವನ್ನು ಬೇಯಿಸುವ ಪದ್ಧತಿ ಅಳವಡಿಸಿಕೊಳ್ಳುವುದರ ಮೂಲಕ ಈ ಎಲ್ಲಾ ಆರೋಗ್ಯ ಸಮಸ್ಯೆಯನ್ನು ನಾವು ಮೆಟ್ಟಿ ನಿಲ್ಲಬಹುದು ಎನ್ನುವುದು ಕೊಗ್ಲಾನ್ ಅವರ ಅಭಿಪ್ರಾಯ.
First published: April 3, 2021, 11:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories