HOME » NEWS » Explained » STUDY FINDS PEOPLE WHO WEAR GLASSES ARE LESS LIKELY TO GET TO COVID 19 STG LG

ಕನ್ನಡಕ ಧರಿಸುವವರಿಗೆ ಕೊರೋನಾ ಸೋಂಕು ತಗಲುವ ಸಾಧ್ಯತೆ ಕಡಿಮೆ: ಸಂಶೋಧನೆ

ಈ ಹಿಂದೆ ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಜನರ ಕಣ್ಣಿಗೆ ಕೊರೊನಾ ವೈರಸ್ ತಗಲುವುದನ್ನು ತಪ್ಪಿಸಲು ಕನ್ನಡಕ ಧರಿಸಿ ಎಂದು ವೈದ್ಯರು ಸಲಹೆ ನೀಡಿದ್ದರು. ಕಾಂಟ್ಯಾಕ್ಟ್ ಲೆನ್ಸ್ ಬದಲು ಕನ್ನಡಕ ಧರಿಸಿದವರಿಗೆ ವೈರಸ್ ತಗಲುವ ಸಾಧ್ಯತೆ ಇರುವುದಿಲ್ಲವೆಂದು ಸಂಶೋಧಕರು ತಿಳಿಸಿದ್ದಾರೆ.

news18-kannada
Updated:February 23, 2021, 2:19 PM IST
ಕನ್ನಡಕ ಧರಿಸುವವರಿಗೆ ಕೊರೋನಾ ಸೋಂಕು ತಗಲುವ ಸಾಧ್ಯತೆ ಕಡಿಮೆ: ಸಂಶೋಧನೆ
ಸಾಂದರ್ಭಿಕ ಚಿತ್ರ
  • Share this:
ನೀವು ಕನ್ನಡಕ ಧರಿಸುತ್ತೀರಾ..? ಹಾಗಾದರೆ ನಿಮಗೆ ಒಂದು ಗುಡ್ ನ್ಯೂಸ್ ಇದೆ. ಅದು ಏನು ಅಂತೀರಾ..? ಅಧ್ಯಯನವೊಂದರ ಪ್ರಕಾರ ಕನ್ನಡಕವನ್ನು ಧರಿಸುವ ಜನರು ಕೊರೋನಾ ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆಯಂತೆ. ಏಕೆಂದರೆ ಅವರು ತಮ್ಮ ಕಣ್ಣುಗಳನ್ನು ಕಡಿಮೆ ಉಜ್ಜುತ್ತಾರಂತೆ. ಭಾರತೀಯ ಸಂಶೋಧಕರು ಈ ವಿಷಯದ ಕುರಿತು ಮೆಡ್‌ಆರ್‌ಕ್ಸಿವ್ ವೆಬ್‌ಸೈಟ್‌ನಲ್ಲಿ ತಮ್ಮ ಅಧ್ಯಯನ ವರದಿಯನ್ನು ಪ್ರಕಟಿಸಿದ್ದಾರೆ. ಇದರ ಪ್ರಕಾರ ಒಟ್ಟು 304 ಜನರನ್ನು ಅಧ್ಯಯನ ಮಾಡಲಾಗಿದ್ದು. ಈ ಪೈಕಿ 10 ರಿಂದ 80 ವರ್ಷ ವಯೋಮಾನದ 223 ಪುರುಷರು ಮತ್ತು 81 ಹೆಣ್ಣುಮಕ್ಕಳಿದ್ದರು. ಕಳೆದ ಬೇಸಿಗೆ ಸಮಯದಲ್ಲಿ 2 ವಾರಗಳ ಕಾಲ ಉತ್ತರ ಭಾರತದ ಆಸ್ಪತ್ರೆಯಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಎಲ್ಲಾ ವಿಷಯಗಳು ಕೋವಿಡ್-19 ರೋಗಲಕ್ಷಣಗಳನ್ನು ವರದಿ ಮಾಡಿವೆ.

304 ಜನರ ಪೈಕಿ ಕೇವಲ ಶೇ.19ರಷ್ಟು ಜನರು ಮಾತ್ರ ತಾವು ಹೆಚ್ಚಿನ ಸಮಯದಲ್ಲಿ ಕನ್ನಡಕವನ್ನು ಧರಿಸಿದ್ದೇವೆಂದು ಹೇಳಿದ್ದಾರೆ. ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದವರು ತಮ್ಮ ಮುಖವನ್ನು ಒಂದು ಗಂಟೆಯಲ್ಲಿ ಸರಾಸರಿ 23 ಬಾರಿ ಮತ್ತು ಕಣ್ಣುಗಳನ್ನು 3 ಬಾರಿ ಮುಟ್ಟಿದ್ದಾರೆಂಬ ಅಂಶವನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಕನ್ನಡಕವನ್ನು ಧರಿಸುವ ಜನರಲ್ಲಿ ಕೋವಿಡ್-19 ರೋಗ ಹರಡುವ ಸಾಧ್ಯತೆ ಎರಡ್ಮೂರು ಪಟ್ಟು ಕಡಿಮೆ. ಕನ್ನಡ ಧರಿಸದ ಜನರು ಆಗಾಗ ತಮ್ಮ ಮುಖ ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದ ಅವರಿಗೆ ತಗಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.

ಮ್ಯಾಕ್​ಡೊನಾಲ್ಡ್​​​​ನಲ್ಲಿ 200 ರೂ.ಊಟ ಕೊಳ್ಳಲು ಹೋಗಿ 2 ಲಕ್ಷ ದಂಡ ಕಟ್ಟಿದ ಅಜ್ಜ...!; ಏಕೆ ಗೊತ್ತಾ?

ಅಧ್ಯಯನ ವರದಿ ಪ್ರಕಾರ ವೈರಸ್ ಹೇಗೆ ತಗುಲಿದೆ ಎಂಬುದನ್ನು ಕಂಡುಕೊಳ್ಳುವ ಪ್ರಮುಖ ವಿಧಾನವೆಂದರೆ ಕಲುಷಿತ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಸ್ಪರ್ಶಿಸುವುದು ಮತ್ತು ಉಜ್ಜುವುದಾಗಿದೆ. ಕನ್ನಡಕದ ದೀರ್ಘಕಾಲಿಕ ಬಳಕೆಯು ಕಣ್ಣುಗಳನ್ನು ಸ್ಪರ್ಶಿಸುವುದನ್ನು ತಡೆಯುತ್ತದೆ, ಆದ್ದರಿಂದ ಕೋವಿಡ್ -19 ಹರಡುವ ಸಾಧ್ಯತೆಗಳು ಕಡಿಮೆ. 8 ಗಂಟೆಗಳ ಕಾಲ ಕನ್ನಡಕವನ್ನು ಧರಿಸಿದವರಿಗೆ ವೈರಸ್ ತಗಲುವ ಸಾಧ್ಯತೆ ಕಡಿಮೆ ಎಂದು ಸಂಶೋಧನೆಯು ಸೂಚಿಸಿದೆ.

ಈ ಹಿಂದೆ ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಜನರ ಕಣ್ಣಿಗೆ ಕೊರೊನಾ ವೈರಸ್ ತಗಲುವುದನ್ನು ತಪ್ಪಿಸಲು ಕನ್ನಡಕ ಧರಿಸಿ ಎಂದು ವೈದ್ಯರು ಸಲಹೆ ನೀಡಿದ್ದರು. ಕಾಂಟ್ಯಾಕ್ಟ್ ಲೆನ್ಸ್ ಬದಲು ಕನ್ನಡಕ ಧರಿಸಿದವರಿಗೆ ವೈರಸ್ ತಗಲುವ ಸಾಧ್ಯತೆ ಇರುವುದಿಲ್ಲವೆಂದು ಸಂಶೋಧಕರು ತಿಳಿಸಿದ್ದಾರೆ.

ಡೈಲಿ ಮೇಲ್ ಪ್ರಕಾರ ಕಳೆದ ವರ್ಷ ಚೀನಾದ ಸಂಶೋಧಕರು ಕೋವಿಡ್ ರೋಗಿಗಳು ಸಾಮಾನ್ಯ ಜನಸಂಖ್ಯೆಗಿಂತ ಐದು ಪಟ್ಟು ಕಡಿಮೆ ಜನರು ಕನ್ನಡಕಗಳನ್ನು ಹೊಂದಿದ್ದಾರೆಂದು ಕಂಡುಹಿಡಿದಿದ್ದಾರೆ. ನಾನ್ಚಾಂಗ್ ವಿಶ್ವವಿದ್ಯಾನಿಲಯದ 2ನೇ ಅಂಗಸಂಸ್ಥೆಯ ಆಸ್ಪತ್ರೆ ಸಂಶೋಧಕರ ತಂಡವು ಮಾನವ ಜೀವಕೋಶಗಳಾದ ಎಸಿಇ -2 ಗ್ರಾಹಕಗಳನ್ನು ಪ್ರವೇಶಿಸಲು ಮತ್ತು ಸೋಂಕು ಹರಡಲು ವೈರಸ್ ತಗುಲಿರುವ ಗ್ರಾಹಕಗಳು ದೃಷ್ಟಿಯಲ್ಲಿ ಕಂಡುಬರುತ್ತವೆಂದು ಅವರು ನಂಬಿದ್ದಾರೆ.
Youtube Video
ಕನ್ನಡಕವನ್ನು ಧರಿಸುವ ಜನರು ಕೋವಿಡ್-19 ಸೋಂಕಿಗೆ ತುತ್ತಾಗುವುದು ಬಹುತೇಕ ಕಡಿಮೆ. ಕಣ್ಣುಗಳು ಮಾನವ ದೇಹಕ್ಕೆ ಪ್ರವೇಶಿಸಲು SARS-CoV-2 ನ ಪ್ರಮುಖ ಚಾನಲ್ ಎಂದು ಪರಿಗಣಿಸಲಾಗಿದೆ. ಹೀಗಾಗಿ ಕನ್ನಡಕ ಧರಿಸುವುದರಿಂದ ಕಣ್ಣಿಗೆ ಅವು ರಕ್ಷಣೆ ನೀಡುತ್ತವೆ. ಆದ್ದರಿಂದ ವೈರಸ್ ಕಣ್ಣುಗಳಿಗೆ ವರ್ಗಾವಣೆಯಾಗುವ ಅಪಾಯ ಕಡಿಮೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
Published by: Latha CG
First published: February 23, 2021, 1:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories