Thunderstorm: ಗುಡುಗು-ಮಳೆಯ ಅಪಾಯದಿಂದ ಪಾರಾಗಬೇಕೇ? ಈ ಕ್ರಮಗಳನ್ನು ಪಾಲಿಸಿ

ಈ ಗುಡುಗಿನ ಸದ್ದು ಕೇಳಿಸಿಕೊಂಡರನೇ ಹೃದಯ ನಡುಗುತ್ತದೆ. ಅಂತಹದರಲ್ಲಿ ಈ ಗುಡುಗು ನಾವಿರುವ ಸ್ಥಳದಲ್ಲಿ ಬಂದರೆ ಆಗ ಏನು ಮಾಡಬೇಕು, ಯಾವ ಸಲಹೆಗಳನ್ನು ಪಾಲಿಸಬೇಕು, ಇದರಿಂದ ಹೇಗೆ ಪಾರಾಗಬೇಕು ಎಂಬುದನ್ನು ಈ ಲೇಖನದಲ್ಲಿ ನಾವು ತಿಳಿಯೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಮಳೆಗಾಲ (Rainy Season) ತರುವ ಆಪತ್ತು ಒಂದಲ್ಲ ಎರಡಲ್ಲ. ಅದರಲ್ಲೂ ಗುಡುಗು ಸಹಿತ ಮಳೆಯು (Rain) ಅನೇಕ ಅಪಾಯಗಳನ್ನು ತರಬಲ್ಲದು. ಈ ಗುಡುಗಿನ ಸದ್ದು ಕೇಳಿಸಿಕೊಂಡರನೇ ಹೃದಯ ಗಡ-ಗಡ ಎಂದು ನಡುಗುತ್ತದೆ. ಅಂತಹದರಲ್ಲಿ ಈ ಗುಡುಗು ನಾವಿರುವ ಸ್ಥಳದಲ್ಲಿ ಬಂದರೆ ಆಗ ಏನು ಮಾಡಬೇಕು, ಯಾವ ಸಲಹೆಗಳನ್ನು ಪಾಲಿಸಿ, ಇದರಿಂದ ಪಾರಾಗಬೇಕು ಎಂಬುದನ್ನು ಈ ಲೇಖನದಲ್ಲಿ ನಾವು ತಿಳಿಯೋಣ. ಇತ್ತೀಚೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (NDMA) ಗುಡುಗು ಮತ್ತು ಮರಳು ತೂರುವ ಬಿರುಗಾಳಿ (storm) ಬೀಸುತ್ತಿರುವ ಸಮಯದಲ್ಲಿ ಸುರಕ್ಷಿತವಾಗಿರಲು ಕೆಲವು ಕ್ರಮಗಳನ್ನು ಜನತೆಯೊಂದಿಗೆ ಹಂಚಿಕೊಂಡಿದೆ. ಈಗ ದೇಶದ ಬಹುತೇಕ ಭಾಗಗಳಲ್ಲಿ ಮಾನ್ಸೂನ್‌ (Monsoon) ಮಳೆ ಆಗುತ್ತಿದೆ ಹಾಗೆಯೇ, ಹಲವು ರಾಜ್ಯಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಮತ್ತಷ್ಟು ಹೆಚ್ಚಿದೆ.

ಈಗ ಮಳೆಗಾಲದ ಸಮಯವಾಗಿರುವುದರಿಂದ ಚಂಡಮಾರುತ ಮತ್ತು ಬಿರುಗಾಳಿಗಳು ಜೋರಾಗಿಯೇ ಬೀಸುತ್ತಿರುತ್ತವೆ. ಇದರಿಂದ ಮಾನವರಿಗಷ್ಟೇ ಅಲ್ಲದೇ ಸಾಕು ಪ್ರಾಣಿಗಳು, ಬೆಳೆಗಳು ಮತ್ತು ವಾಹನಗಳಿಗೂ ತೀವ್ರ ಹಾನಿ ಸಂಭವಿಸುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (NDMA), ಇತ್ತೀಚಿನ ಟ್ವೀಟ್‌ನಲ್ಲಿ, ಸಂಭವನೀಯ ಗುಡುಗು ಮತ್ತು ಚಂಡಮಾರುತಕ್ಕೆ ಸಿದ್ಧವಾಗಿರಲು ಕೆಲವು ಕ್ರಮಗಳನ್ನು ಹಂಚಿಕೊಂಡಿದೆ. ಈ ಮಾರ್ಗಸೂಚಿಗಳನ್ನು ಚಂಡಮಾರುತ ಅಪ್ಪಳಿಸುವ ಮುನ್ನ, ಚಂಡಮಾರುತದ ಸಮಯದಲ್ಲಿ ಪರಿಗಣಿಸಬೇಕಾದ ಕ್ರಮಗಳು ಮತ್ತು ಚಂಡಮಾರುತದ ನಂತರ ಕೈಗೊಳ್ಳುವ ಕ್ರಮಗಳು ಎಂದು ವಿಂಗಡಿಸಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (NDMA), ಪಟ್ಟಿ ಮಾಡಿರುವ ಗುಡುಗು ಸಹಿತ ಮಳೆಯಾಗುವ ಮುಂಚೆ ಮಾಡಬೇಕಾದ ಮತ್ತು ಮಾಡಬಾರದ ಕ್ರಮಗಳು:

 • ತುರ್ತು ಸಮಯ ಜೀವ ಉಳಿಯುವಿಕೆ ಮತ್ತು ಸುರಕ್ಷತೆಗಾಗಿ ಅಗತ್ಯ ವಸ್ತುಗಳನ್ನು ಸರಳವಾಗಿ ಸಾಗಿಸಲು ಅನುವಾಗುವಂತೆ ಒಂದು ತುರ್ತು ಕಿಟ್ ಅನ್ನು ತಯಾರಿಸಿ.

 • ನಿಮ್ಮ ಮನೆಯನ್ನು ಒಂದು ಸಲ ಪರಿಶೀಲಿಸಿ, ರಿಪೇರಿ ಮಾಡಿ ಮತ್ತು ಮನೆಯನ್ನು ಸುರಕ್ಷಿತಗೊಳಿಸಿ. ಚೂಪಾದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ..

 • ಟಿವಿ ಚಾನೆಲ್‌ಗಳು ಮತ್ತು ರೇಡಿಯೊದಲ್ಲಿ ದಿನನಿತ್ಯ ಬರುವ ಮಳೆ ಕುರಿತು ಸುದ್ದಿ ಕೇಳುತ್ತಿರಿ.


ಇದನ್ನೂ ಓದಿ: Monsoon Makeup: ಮಳೆಗಾಲದಲ್ಲಿ ನಿಮ್ಮ ಮೇಕಪ್ ಹೇಗಿರಬೇಕು? ನಿಮಗೆ ಇಲ್ಲಿದೆ ಟಿಪ್ಸ್

ಚಂಡಮಾರುತ ಬೀಸುತ್ತಿರುವ ಸಮಯ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳು:

 • ಮನೆಯೊಳಗೆ ಮತ್ತು ವರಾಂಡಾಗಳು ಅಥವಾ ಬಾಲ್ಕನಿಗಳಲ್ಲಿ ಇರಲು ಪ್ರಯತ್ನಿಸಿ.

 • ವಿದ್ಯುತ್ ಉಪಕರಣಗಳನ್ನು ಬಂದ್‌ ಮಾಡಿ ಮತ್ತು ತಂತಿಯ ಟೆಲಿಫೋನ್‌ಗಳ ಬಳಕೆಯನ್ನು ಕತ್ತರಿಸಿ.

 • ಹರಿಯುತ್ತಿರುವ ನೀರನ್ನು ಬಳಸಬೇಡಿ ಮತ್ತು ಲೋಹದ ಕೊಳವೆಗಳಿಂದ ದೂರವಿರಿ.

 • ಲೋಹದ ಸೀಟ್‌ ಮತ್ತು ಛಾವಣಿಯ ರಚನೆಗಳಿಂದ ದೂರವಿರಿ.

 • ನೀವು ಬಸ್ ಅಥವಾ ಕಾರಿನೊಳಗೆ ಇದ್ದರೆ ಪ್ರಯಾಣಿಸುವುದನ್ನು ನಿಲ್ಲಿಸಿ.

 • ಮರದ ಕೆಳಗೆ ಅಥವಾ ಹತ್ತಿರ ಆಶ್ರಯ ಪಡೆಯಬೇಡಿ.

 • ವಿದ್ಯುತ್ ತಂತಿಗಳಿಂದ ದೂರವಿರಿ.

 • ಯಾವುದೇ ಲೋಹೀಯ ವಸ್ತುಗಳನ್ನು ಮುಟ್ಟಬೇಡಿ ಮತ್ತು ಬಳಸಬೇಡಿ.


ಚಂಡಮಾರುತ ಮುಗಿದ ನಂತರದ ಸಮಯ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳು:

 • ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಂದ ದೂರವಿರಿ

 • ವೃದ್ಧರು, ಮಕ್ಕಳು ಮತ್ತು ಅಂಗವಿಕಲರಿಗೆ ಸಹಾಯ ಮಾಡಿ ·

 • ಬಿದ್ದ ಮರಗಳು ಅಥವಾ ವಿದ್ಯುತ್ ತಂತಿಗಳಿಂದ ದೂರವಿರಿ ಮತ್ತು ಈ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಿ.


ಚಂಡಮಾರುತದ ಸಮಯದಲ್ಲಿ ಸಾಕು ಪ್ರಾಣಿಗಳ ಪೋಷಕರು ಯಾವ ರೀತಿ ಮಾರ್ಗಸೂಚಿಗಳನ್ನು ಅನುಸರಿಸಬೇಕಾದ ಕ್ರಮಗಳು:

 • ಪ್ರಾಣಿಗಳಿಗೆ ನಿಮ್ಮ ಮನೆಯಲ್ಲಿ ಅಥವಾ ಹತ್ತಿರದಲ್ಲಿ ಸುರಕ್ಷಿತ ಪ್ರದೇಶವನ್ನು ನೀಡಿ.

 • ಪ್ರಾಣಿಗಳನ್ನು ಹರಿವ ನೀರಿನಿಂದ ದೂರವಿಡಿ.

 • ನಿಮ್ಮ ಪ್ರಾಣಿಗಳು ಮರದ ಕೆಳಗೆ ಆಶ್ರಯ ಪಡೆಯದಂತೆ ಎಚ್ಚರ ವಹಿಸಿ.


ಇದನ್ನೂ ಓದಿ:  Monsoon Health Tips: ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕೇ? ಹಾಗಿದ್ರೆ ಈ ರೂಲ್ಸ್ ಫಾಲೋ ಮಾಡಿ

ಈ ಕ್ರಮಗಳನ್ನು ಸೂಕ್ತವಾಗಿ ಅನುಷ್ಠಾನಕ್ಕೆ ತರುವುದರ ಮೂಲಕ ಮಳೆಗಾಲದ ವಿಪತ್ತುಗಳಾದ ಗುಡುಗು ಸಹಿತ ಮಳೆ, ಚಂಡಮಾರುತ ಇತ್ಯಾದಿಗಳಿಂದ ಸುರಕ್ಷಿತರಾಗಿರಬಹುದು.
Published by:Ashwini Prabhu
First published: