ವಿಕಿರಣಶೀಲತೆಯ ಆವಿಷ್ಕಾರ ಮತ್ತು ಸಂಶೋಧನೆಯಲ್ಲಿ (Research) ಪ್ರವರ್ತಕ ಮಹಿಳೆಯರಲ್ಲಿ ಒಬ್ಬರಾದ ಸ್ಟೆಫಾನಿಯಾ ಮರಸಿನಿಯಾನು (Stefania Maracineanu) ಅವರ 140ನೇ ಜನ್ಮ ವಾರ್ಷಿಕೋತ್ಸವವನ್ನು ಗೂಗಲ್ ಇಂದು ವಿಶೇಷವಾಗಿ ಆಚರಿಸಿದೆ. ಭೌತಶಾಸ್ತ್ರಜ್ಞೆ ಸ್ಟೆಫಾನಿಯಾ ಮರಸಿನಿಯಾಗೆ ಗೂಗಲ್ ಡೂಡಲ್ ಗೌರವ ಸಲ್ಲಿಸಿದ್ದು, ಅವರ ಸಾಧನೆಯನ್ನು ನೆನಪಿಸಿಕೊಂಡಿದೆ. ಮರಸಿನಿಯಾನು 1910ರಲ್ಲಿ ಭೌತಿಕ ಮತ್ತು ರಾಸಾಯನಿಕ ವಿಜ್ಞಾನದಲ್ಲಿ (Physical and Chemical Sciences) ಪದವಿ ಪಡೆದು ಬುಚಾರೆಸ್ಟ್‌ನಲ್ಲಿರುವ ಸೆಂಟ್ರಲ್ ಸ್ಕೂಲ್ ಫಾರ್ ಗರ್ಲ್ಸ್, ಪ್ಲೋಯೆಸ್ಟಿ, ಐಸಿ, ಮತ್ತು ಕ್ಯಾಂಪುಲುಂಗ್‌ನಲ್ಲಿರುವ ಪ್ರೌಢಶಾಲೆಗಳಲ್ಲಿ ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಶಿಕ್ಷಕಿ ವೃತ್ತಿಯಲ್ಲಿ ತೊಡಗಿದ್ದಾಗಲೇ ಇವರು ರೊಮೇನಿಯನ್ ವಿಜ್ಞಾನ ಸಚಿವಾಲಯದಿಂದ ವಿದ್ಯಾರ್ಥಿವೇತನವನ್ನು ಗಳಿಸಿದರು ಮತ್ತು ನಂತರ ಪ್ಯಾರಿಸ್‌ನ ರೇಡಿಯಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಪದವಿ ಸಂಶೋಧನೆಯನ್ನು ಮುಂದುವರಿಸಲು ನಿರ್ಧರಿಸಿದರು.
ಮೇರಿ ಕ್ಯೂರಿ ನಿರ್ದೇಶನದ ಅಡಿಯಲ್ಲಿ ವಿಶ್ವಾದ್ಯಂತ ವಿಕಿರಣಶೀಲತೆಯ ಅಧ್ಯಯನ ಕೇಂದ್ರ
1919ರಲ್ಲಿ ಅವರು ಮೇರಿ ಕ್ಯೂರಿಯೊಂದಿಗೆ ಸೋರ್ಬೋನ್‌ನಲ್ಲಿ ವಿಕಿರಣಶೀಲತೆಯ ಕೋರ್ಸ್ ತೆಗೆದುಕೊಂಡರು. ಬಳಿಕ 1926ರವರೆಗೆ ರೇಡಿಯಂ ಇನ್‌ಸ್ಟಿಟ್ಯೂಟ್‌ನಲ್ಲಿ ಕ್ಯೂರಿಯವರೊಂದಿಗೆ ಸಂಶೋಧನೆ ನಡೆಸಿದರು. ಈ ವೇಳೆ ಪ್ಯಾರಿಸ್‌ನ ರೇಡಿಯಮ್ ಇನ್‌ಸ್ಟಿಟ್ಯೂಟ್ ಭೌತಶಾಸ್ತ್ರಜ್ಞ ಮೇರಿ ಕ್ಯೂರಿ ಅವರ ನಿರ್ದೇಶನದ ಅಡಿಯಲ್ಲಿ ವಿಶ್ವಾದ್ಯಂತ ವಿಕಿರಣಶೀಲತೆಯ ಅಧ್ಯಯನದ ಕೇಂದ್ರವಾಗಿತ್ತು. ವಿಕಿರಣಶೀಲತೆಯ ಆವಿಷ್ಕಾರ ಮತ್ತು ಸಂಶೋಧನೆ ಎಂಬ ವಿಷಯದ ಕುರಿತು ಸ್ಟೆಫಾನಿಯಾ ಮರಸಿನಿಯಾನು ಭೌತಶಾಸ್ತ್ರಜ್ಞೆ ಮೇರಿ ಕ್ಯೂರಿಯವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದರು. ಈ ಹಿಂದೆ ಮೇರಿ ಕ್ಯೂರಿ ಕಂಡು ಹಿಡಿದ ರೊಮೇನಿಯನ್ ಪೊಲೊನಿಯಂ ಕುರಿತು ತನ್ನ ಪಿಎಚ್ಡಿ ಪ್ರಬಂಧದ ಕೆಲಸವನ್ನು ಪ್ರಾರಂಭಿಸಿದರು.
ಆಲ್ಫಾ ಕ್ಷಯವನ್ನು ಅಳೆಯುವ ವಿಧಾನಗಳನ್ನು ರೂಪಿಸಿದ ಮರಾಸಿನಿಯಾನು
ಇನ್‌ಸ್ಟಿಟ್ಯೂಟ್‌ನಲ್ಲಿ, ಮರಾಸಿನಿಯಾನು ಪೊಲೊನಿಯಮ್‌ನ ಅರ್ಧ-ಜೀವಿತಾವಧಿಯನ್ನು ಸಂಶೋಧಿಸಿದರು ಮತ್ತು ಆಲ್ಫಾ ಕ್ಷಯವನ್ನು ಅಳೆಯುವ ವಿಧಾನಗಳನ್ನು ರೂಪಿಸಿದರು. ಪೊಲೊನಿಯಮ್‌ನಿಂದ ಆಲ್ಫಾ ಕಿರಣಗಳು ಲೋಹದ ಕೆಲವು ಪರಮಾಣುಗಳನ್ನು ವಿಕಿರಣಶೀಲ ಐಸೊಟೋಪ್‌ಗಳಾಗಿ ವರ್ಗಾಯಿಸಿದರೆ ಎಂಬ ಈಕೆಯ ಆಲೋಚನೆ ಸಂಶೋಧನೆಗೆ ಕಾರಣವಾಯಿತು. ಆಕೆಯ ಸಂಶೋಧನೆಯು ಕೃತಕ ವಿಕಿರಣಶೀಲತೆಯ ಮೊದಲ ಉದಾಹರಣೆಯಾಗಿದೆ.
ಇದನ್ನೂ ಓದಿ: Dengue: ಮಳೆಗಾಲದಲ್ಲಿ ಮನೆ ಬಾಗಿಲಿಗೆ ಬರುತ್ತೆ ಡೆಂಗ್ಯೂ! ಇದರಿಂದ ತಪ್ಪಿಸಿಕೊಳ್ಳುವ ಮಾರ್ಗಗಳೇನು?
ಭೌತಶಾಸ್ತ್ರದಲ್ಲಿ ತನ್ನ ಪಿಎಚ್‌ಡಿ ಪೂರ್ಣಗೊಳಿಸಲು, ಮರಸಿನಿಯಾನು ಪ್ಯಾರಿಸ್‌ನ ಸೊರ್ಬೊನ್ನೆ ವಿಶ್ವವಿದ್ಯಾಲಯಕ್ಕೆ ಸೇರಿದಳು. ಮೇಡಾನ್‌ನಲ್ಲಿರುವ ಖಗೋಳ ವೀಕ್ಷಣಾಲಯದಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ ನಂತರ, ಅವರು ರೊಮೇನಿಯಾಕ್ಕೆ ಮರಳಿದರು ಮತ್ತು ವಿಕಿರಣಶೀಲತೆಯ ಅಧ್ಯಯನಕ್ಕಾಗಿ ತನ್ನ ತಾಯ್ನಾಡಿನಲ್ಲಿ ಮೊದಲ ಪ್ರಯೋಗಾಲಯವನ್ನು ಸ್ಥಾಪಿಸಿದರು.
ಕೃತಕ ಮಳೆಯ ಕುರಿತು ಸಂಶೋಧನೆ
ಮರಸಿನಿಯಾನು ತನ್ನ ಹೆಚ್ಚಿನ ಸಮಯವನ್ನು ಕೃತಕ ಮಳೆಯ ಕುರಿತು ಸಂಶೋಧನೆಗೆ ಮೀಸಲಿಟ್ಟಿದ್ದರು. ಇದರ ಫಲಿತಾಂಶಗಳನ್ನು ಪರೀಕ್ಷಿಸಲು ಅಲ್ಜೀರಿಯಾಕ್ಕೆ ಮರಸಿನಿಯಾನು ಪ್ರವಾಸ ಕೈಗೊಂಡರು. ಜೊತೆಗೆ ಮರಸಿನಿಯಾನು ಭೂಕಂಪಗಳು ಮತ್ತು ಮಳೆಯ ನಡುವಿನ ಸಂಪರ್ಕವನ್ನು ಸಹ ಅಧ್ಯಯನ ಮಾಡಿದರು, ಭೂಕಂಪಕ್ಕೆ ಕಾರಣವಾಗುವ ಕೇಂದ್ರಬಿಂದುವಿನಲ್ಲಿ ವಿಕಿರಣಶೀಲತೆಯ ಗಮನಾರ್ಹ ಹೆಚ್ಚಳವಿದೆ ಎಂದು ವರದಿ ಮಾಡಿದ ಮೊದಲಿಗರಾದರು.
ಕೃತಕ ವಿಕಿರಣಶೀಲತೆಯನ್ನು ಕಂಡುಹಿಡಿದ ಮರಾಸಿನಾನು
ಮೇರಿ ಕ್ಯೂ ರಿಯ ಮಗಳು ಐರೀನ್ ಜೋಲಿಯಟ್-ಕ್ಯೂರಿ ಎಂಬ ಮತ್ತೋರ್ವ ವಿಜ್ಞಾನಿ ಕೃತಕ ವಿಕಿರಣಶೀಲತೆಯ ಬಗ್ಗೆ ತನ್ನ ಕೆಲಸದ ಅವಲೋಕನಗಳ ಹೆಚ್ಚಿನ ಭಾಗವನ್ನು ಉಲ್ಲೇಖಿಸದೆಯೇ ಬಳಸಿದ್ದಾರೆ ಎಂದು ಮರಾಸಿನಾನು ವಿರೋಧಿಸಿದ್ದರು.
ಪ್ಯಾರಿಸ್‌ನಲ್ಲಿ ತನ್ನ ಸಂಶೋಧನೆಯ ವರ್ಷಗಳಲ್ಲಿ ಕೃತಕ ವಿಕಿರಣಶೀಲತೆಯನ್ನು ಕಂಡುಹಿಡಿದಿದ್ದೇನೆ ಎಂದು ಮರಾಸಿನಿಯಾನು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾಳೆ, ಇದು 10 ವರ್ಷಗಳ ಹಿಂದೆ ಪ್ರಸ್ತುತಪಡಿಸಿದ ಡಾಕ್ಟರೇಟ್ ಪ್ರಬಂಧದಿಂದ ಸಾಕ್ಷಿಯಾಗಿದೆ ಎಂದು ಪ್ರಬಂಧದ ವಿಷಯಗಳನ್ನು ಕದ್ದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಜಂಟಿ ನೊಬೆಲ್ ಪ್ರಶಸ್ತಿಯನ್ನು ಪಡೆದ ದಂಪತಿಗಳು
1935ರಲ್ಲಿ ಐರೀನ್ ಕ್ಯೂರಿ ಮತ್ತು ಅವರ ಪತಿ ಕೃತಕ ವಿಕಿರಣಶೀಲತೆಯ ಆವಿಷ್ಕಾರಕ್ಕಾಗಿ ಜಂಟಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಆ ವರ್ಷ ಮರಾಸಿನಿಯಾನು ನೊಬೆಲ್ ಪ್ರಶಸ್ತಿಗೆ ಸ್ಪರ್ಧಿಸಲಿಲ್ಲ . ಆದರೆ ಆವಿಷ್ಕಾರದಲ್ಲಿ ಅವರ ಪಾತ್ರವನ್ನು ಗುರುತಿಸಬೇಕೆಂದು ಕೇಳಿಕೊಂಡರು.
ಇದನ್ನೂ ಓದಿ: Mythological Story: ಪ್ರತಿದಿನ ನಿಮ್ಮ ಮಕ್ಕಳಿಗೆ ಕಥೆ ಹೇಳ್ತಿರಾ? ಹಾಗಿದ್ರೆ ತಪ್ಪದೇ ಈ ಪೌರಾಣಿಕ ಕಥೆಗಳನ್ನು ಹೇಳಿ
ಮರಸಿನಿಯಾನು ಅವರ ಆವಿಷ್ಕಾರದ ಕುರಿತಾದ ಕೆಲಸಗಳನ್ನು 1936 ರಲ್ಲಿ ರೊಮೇನಿಯಾದ ಅಕಾಡೆಮಿ ಆಫ್ ಸೈನ್ಸಸ್ ಗುರುತಿಸಿತು, ಅಲ್ಲಿ ಅವರು ಸಂಶೋಧನಾ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಆಯ್ಕೆಯಾದರು, ಆದರೆ ಇವರ ಆವಿಷ್ಕಾರಕ್ಕಾಗಿ ಮರಸಿನಿಯಾನು ಎಂದಿಗೂ ಜಾಗತಿಕ ಮನ್ನಣೆಯನ್ನು ಮಾತ್ರ ಪಡೆಯಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ