Eco Friendly House: ಚಳಿಗಾಲದಲ್ಲಿ ಬೆಚ್ಚಗೆ, ಬೇಸಿಗೆಯಲ್ಲಿ ತಂಪಾಗಿರಿಸುವ ಕಡಿಮೆ ವೆಚ್ಚದ ಪರಿಸರಸ್ನೇಹಿ ಮನೆ; ಇಲ್ಲಿದೆ ವಿವರ

ಅತನ್‌ಗುಡಿ ಟೈಲ್ಸ್ ಬಹಳ ಮಿತವ್ಯಯದ್ದಾಗಿದೆ. ಪ್ರತಿ ಸ್ಕ್ವೇರ್ ಫೀಟ್‌ಗೆ 55 ರೂ ನಿಂದ 70 ರೂ ವಿನಂತೆ ಟೈಲ್ಸ್ ಲಭ್ಯವಾಗಲಿದೆ. ಈ ಟೈಲ್ಸ್ ಸ್ಥಳೀಯ ವಾಸ್ತುಶಿಲ್ಪದ ಅರಿವನ್ನು ಜನರಲ್ಲಿ ಮೂಡಿಸುತ್ತದೆ. ಅದೇ ರೀತಿ ನಿರ್ದಿಷ್ಟ ಪ್ರದೇಶದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸುತ್ತದೆ ಎಂದು ಸಂಸ್ಥೆಯ ಆಶಿಕಾ ವಿವರಿಸುತ್ತಾರೆ.

ಬಿಲ್ಡ್ ಹೋಮ್‌ನ ಸಿಇಒ ಅಭಿಜಿತ್ ಆರ್ ಪ್ರಿಯಾನ್ ಹಾಗೂ ಬೆಂಗಳೂರಿನಲ್ಲಿ ನಿರ್ಮಿಸಿರುವ ಪರಿಸರಸ್ನೇಹಿ ಮನೆ

ಬಿಲ್ಡ್ ಹೋಮ್‌ನ ಸಿಇಒ ಅಭಿಜಿತ್ ಆರ್ ಪ್ರಿಯಾನ್ ಹಾಗೂ ಬೆಂಗಳೂರಿನಲ್ಲಿ ನಿರ್ಮಿಸಿರುವ ಪರಿಸರಸ್ನೇಹಿ ಮನೆ

 • Share this:
  ಬೆಂಗಳೂರು ಮೂಲದ ಸಂಸ್ಥೆ ಬಿಲ್ಡ್‌ಎಹೋಮ್ ( BuildAhome) ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಾದ ಅತನ್‌ಗುಡಿ ಟೈಲ್ಸ್ ಮತ್ತು ಪೊರೊಥರ್ಮ್ ಬ್ಲಾಕ್‌ಗಳನ್ನು (Porotherm Blocks) ಬಳಸಿ ಪರಿಸರಸ್ನೇಹಿ ಮನೆಯನ್ನು (Eco Friendly House) ನಿರ್ಮಿಸಿದೆ. ಸಂಸ್ಥೆಯು ಮನೆ ನಿರ್ಮಾಣದಲ್ಲಿ ಉಕ್ಕು (Steel) ಹಾಗೂ ಸಿಮೆಂಟ್ (Cement) ಬಳಕೆಯನ್ನು ಕಡಿಮೆ ಮಾಡಿದ್ದು ಇದರಿಂದ ಬೇಸಿಗೆಯಲ್ಲಿ (Summer) ಮನೆ ತಂಪಾಗಿರುತ್ತದೆ ಹಾಗೂ ಪ್ರತೀ ವರ್ಷ ಸಾವಿರಾರು ಲೀಟರ್ ನೀರನ್ನು ಉಳಿಸುತ್ತದೆ.

  ಟರ್ನ್‌ಕೀ ಮನೆ ನಿರ್ಮಾಣ ಸೇವೆಗಳನ್ನು ಒದಗಿಸುವ ಬೆಂಗಳೂರು ಮೂಲದ ಕಂಪನಿಯಾದ ಬಿಲ್ಡ್ ಹೋಮ್‌ನ ಸಿಇಒ ಅಭಿಜಿತ್ ಆರ್ ಪ್ರಿಯಾನ್ ಅವರು ಸೆಪ್ಟೆಂಬರ್ 2016 ರಲ್ಲಿ ತಮ್ಮ ಉದ್ಯಮವನ್ನು ಆರಂಭಿಸಿದಾಗ, ಅವರ ಮನಸ್ಸಿನಲ್ಲಿ ಒಂದು ನಿರ್ಧಾರ ಮಾಡಿದ್ದರು. ಅದು ಗ್ರಾಹಕರಿಗೆ ನಿಗದಿತ ಸಮಯದೊಳಗೆ ಹಾಗೂ ಒಪ್ಪಿದ ಬೆಲೆಗಳಿಗೆ ಮನೆಗಳನ್ನು ಪೂರೈಸುವುದಾಗಿತ್ತು. ಆದರೆ ಗುತ್ತಿಗೆದಾರರು ಹಾಗೂ ವಾಸ್ತುಶಿಲ್ಪಿಗಳು ಅಪ್ರಮಾಣಿಕರಾಗಿದ್ದು ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸದೆಯೇ ಹೆಚ್ಚು ಹಣವನ್ನು ತೆಗೆದುಕೊಂಡರು.

  ಮನೆ ನಿರ್ಮಾದಲ್ಲಿ ಬಳಕೆಯಾಗುವ ಉಕ್ಕು ಹಾಗೂ ಸಿಮೆಂಟ್‌ನ ಅತಿಯಾದ ಪ್ರಮಾಣದಿಂದ ತೀವ್ರ ಪ್ರಮಾಣದ ಇಂಗಾಲ ಹೊರಸೂಸುತ್ತದೆ ಎಂಬುದನ್ನು ಅಭಿಜಿತ್ ಕಂಡುಕೊಂಡರು. ಬೆಂಗಳೂರಿನ ಸಿಮೆಂಟ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿದಾಗ, ಕಟ್ಟಡವನ್ನು ಸಮೀಪಿಸಿದ ಕೂಡಲೇ, ಅದು ಉಂಟುಮಾಡುವ ಮಾಲಿನ್ಯದ ಪ್ರಮಾಣವನ್ನು ಅವರು ನೋಡಿದರು. ನಾವು ಮನೆ ಕಟ್ಟಲು ಬಳಸುವ ಸ್ಟೀಲ್ ಮತ್ತು ಸಿಮೆಂಟ್ ಪ್ರಮಾಣವನ್ನು ಕಡಿಮೆ ಮಾಡಲು ಏನಾದರೂ ಮಾರ್ಗವಿದೆಯೇ ಎಂದು ಯೋಚಿಸುವಂತೆ ಮಾಡಿತು. ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸಲು ಇದು ಅವರನ್ನು ಪ್ರೇರೇಪಿಸಿತು ಅಂತೆಯೇ ಬಾಗಿಲುಗಳು, ಕಿಟಕಿಗಳು ಇತ್ಯಾದಿಗಳಿಗಾಗಿ ಮರಗಳನ್ನು ಕತ್ತರಿಸುವುದು ಮೊದಲಾದ ಪರಿಸರಕ್ಕೆ ಹಾನಿಯುಂಟ ಮಾಡುವ ಅಂಶಗಳು ಅವರ ಮನಸ್ಸಿಗೆ ಘಾಸಿಯನ್ನುಂಟು ಮಾಡಿತು. 3,000 ಚದರ ಅಡಿಗಳ ಮನೆಗಾಗಿ, ಕನಿಷ್ಠ ಎರಡು ದೊಡ್ಡ ಮರಗಳನ್ನು ಕತ್ತರಿಸಬೇಕಾಗುತ್ತದೆ. ಎಂದು ಅಭಿಜಿತ್ ದಿ ಬೆಟರ್ ಇಂಡಿಯಾಕ್ಕೆ ಹೇಳುತ್ತಾರೆ.

  ಇಲ್ಲಿಯವರೆಗೆ ಸಂಸ್ಥೆಯು ಕರ್ನಾಟಕ ಹಾಗೂ ತಮಿಳುನಾಡಿನಾದ್ಯಂತ 400 ಮನೆಗಳನ್ನು ನಿರ್ಮಿಸಿದೆ. ಇದರಲ್ಲಿ ಪರಿಸರಸ್ನೇಹಿ ಮನೆಗಳೂ ಇವೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಸಂಸ್ಥೆಯು ಲಂಡನ್ ಮೂಲದ ಗ್ರಾಹಕರಿಗಾಗಿ ಉರ್ವಿ ಹೆಸರಿನ ಮನೆಗಳನ್ನು ಕರ್ನಾಟಕದ ಮಂಗಳೂರಿನಲ್ಲಿ 2018 ರಲ್ಲಿ ನಿರ್ಮಿಸಲು ಆರಂಭಿಸಿತು.

  ಅಭಿಜಿತ್ ಮತ್ತು ಅವರ ವಾಸ್ತುಶಿಲ್ಪಿಗಳು ಮತ್ತು ಇಂಜಿನಿಯರ್‌ಗಳ ತಂಡವು ಉರ್ವಿ ಹಿಂದೆ ಮಾಡಿದ ಮೊದಲ ಕೆಲಸವೆಂದರೆ ಸಿಮೆಂಟ್ ಬ್ಲಾಕ್‌ಗಳನ್ನು ಪೊರೊಥೆರ್ಮ್‌ಗೆ ಬದಲಾಯಿಸಿದರು. ಇದು ಮಣ್ಣಿನಿಂದ ಮಾಡಿದ ಟೊಳ್ಳಾದ ಬ್ಲಾಕ್ ವಾಲಿಂಗ್ ವ್ಯವಸ್ಥೆಯಾಗಿದ್ದು ಅದು ಪ್ರಮಾಣಿತ ಇಟ್ಟಿಗೆಯಂತೆಯೇ ಪರಿಣಾಮಕಾರಿಯಾಗಿದೆ. ಈ ಪೊರೊಥೆರ್ಮ್ ಬ್ಲಾಕ್‌ಗಳು ಅಡ್ಡಲಾಗಿ ಅಥವಾ ಲಂಬವಾಗಿ ರಂಧ್ರವಿರುವ ಮಣ್ಣಿನ ಬ್ಲಾಕ್‌ಗಳಾಗಿವೆ. ಅವುಗಳನ್ನು ನೈಸರ್ಗಿಕ ಜೇಡಿಮಣ್ಣು, ಕಲ್ಲಿದ್ದಲು ಬೂದಿ, ಅಕ್ಕಿ ಹೊಟ್ಟು ಮತ್ತು ಗ್ರಾನೈಟ್ ಸ್ಲರಿಗಳಿಂದ ತಯಾರಿಸಲಾಗುತ್ತದೆ ಮತ್ತು ಅವುಗಳ ಉಷ್ಣ ನಿರೋಧಕ ಗುಣಲಕ್ಷಣಗಳಿಂದಾಗಿ ಪೊರೊಥೆರ್ಮ್ ಎಂದು ಕರೆಯುತ್ತಾರೆ.

  ಬ್ಲಾಕ್‌ನ ರಂಧ್ರವು ಅಸಾಧಾರಣವಾದ ವಾಲಿಂಗ್ ವ್ಯವಸ್ಥೆಯನ್ನು ಒದಗಿಸುತ್ತದೆ, ಇದು ಉಷ್ಣ ನಿರೋಧಕವನ್ನು ಸುಗಮಗೊಳಿಸುತ್ತದೆ. ಇದರ ಪರಿಣಾಮವಾಗಿ ಬೇಸಿಗೆ ಋತುಗಳಲ್ಲಿ ತಂಪಾದ ಒಳಾಂಗಣಗಳು ಮತ್ತು ಶೀತ ಋತುವಿನಲ್ಲಿ ಬೆಚ್ಚಗಿನ ಆಂತರಿಕ ಪರಿಸ್ಥಿತಿಗಳು ಉಂಟಾಗುತ್ತವೆ. ಆದ್ದರಿಂದ ಪೊರೊಥರ್ಮ್ ಬ್ಲಾಕ್‌ಗಳನ್ನು ಬಳಸುವುದು ಸುಲಭವಾಗಿದ್ದು, ಆರ್ಥಿಕ ಮತ್ತು ಪರಿಸರ ಸ್ನೇಹಿಯಾಗಿದೆ. ಏತನ್ಮಧ್ಯೆ, ಬಳಸಿದ ಜೇಡಿಮಣ್ಣನ್ನು ಹೆಚ್ಚಾಗಿ ನೀರಿನ ಟ್ಯಾಂಕ್‌ಗಳ ನಿರ್ಜಲೀಕರಣದಿಂದ ಪಡೆಯಲಾಗುತ್ತದೆ ಮತ್ತು ಕಲ್ಲಿದ್ದಲು ಬೂದಿ, ಅಕ್ಕಿ ಹೊಟ್ಟು ಮತ್ತು ಗರಗಸದ ಧೂಳಿನಂತಹ ನೈಸರ್ಗಿಕ ಸೇರ್ಪಡೆಗಳನ್ನು ಮಾತ್ರ ಈ ಬ್ಲಾಕ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ.

  ಪರಿಸರ ಸ್ನೇಹಿ ಮನೆಯ ನಿರ್ಮಾಣ

  ಉರ್ವಿ ಮತ್ತು ಇತರ ಯೋಜನೆಗಳಿಗೆ ಸಾಕ್ಷಿಯಾಗಿದ್ದ, ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕೇರಳದ ದಂತವೈದ್ಯರಿಗಾಗಿ 14 ತಿಂಗಳ ಅವಧಿಯಲ್ಲಿ (ಕೋವಿಡ್ -19 ಕಾರಣದಿಂದಾಗಿ ಮೂರು ತಿಂಗಳ ವಿಳಂಬ ಸೇರಿದಂತೆ), ಕಂಪನಿಯು ನಗರದ ಜಾಲಹಳ್ಳಿ ಪ್ರದೇಶದಲ್ಲಿ 4,500 ಚದರ ಅಡಿಗಳ ಒಟ್ಟು ನಿರ್ಮಿತ ಪ್ರದೇಶದೊಂದಿಗೆ ಮೂರು ಅಂತಸ್ತಿನ ಪರಿಸರ ಸ್ನೇಹಿ ಮನೆಯನ್ನು 70 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿತು.

  ಉರ್ವಿಯಂತೆಯೇ, ಅಭಿಜಿತ್ ಮತ್ತು ಅವರ ತಂಡವು ಇಲ್ಲಿಯೂ ಪೊರೊಥೆರ್ಮ್ ಬ್ಲಾಕ್‌ಗಳನ್ನು ಬಳಸಲು ನಿರ್ಧರಿಸಿತು. ಹೆಸರೇ ಸೂಚಿಸುವಂತೆ, ಇದು ಸರಂಧ್ರವಾಗಿದೆ. (ಪೋರಸ್) ಈ ಮನೆಯ ಎಲ್ಲಾ ಪರಿಸರ ಸ್ನೇಹಿ ಮತ್ತು ಸಮರ್ಥನೀಯ ಅಂಶಗಳು ಬಹಳ ಪ್ರಾಥಮಿಕವಾಗಿವೆ. ಪೊರೋಥರ್ಮ್ ಬ್ಲಾಕ್‌ಗಳು ಸರಳ ಪರಿಕಲ್ಪನೆಯ ಮೇಲೆ ಕೆಲಸ ಮಾಡುತ್ತವೆ, ಇದು ಘನ ವಸ್ತುಗಳಿಗಿಂತ ಬಿಸಿಯಾಗಲು ನಿರ್ವಾತವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೊರಗಿನ ಗೋಡೆಗಳ ಮೇಲೆ, ಬಿಲ್ಡ್‌ಹೋಮ್ ಎಂಟು-ಇಂಚಿನ ಪೊರೊಥೆರ್ಮ್ ಬ್ಲಾಕ್ ಅನ್ನು ಬಳಸಿದರು, ಇದು ಮೂರು ರಂದ್ರಗಳೊಂದಿಗೆ ಬರುತ್ತದೆ. ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ (ಒಂಬತ್ತು ಗಂಟೆಗಳು), ಬ್ಲಾಕ್‌ನ ಹೊರ ಮೇಲ್ಮೈ ಬಿಸಿಯಾಗುತ್ತದೆ, ಇದು ನಿರ್ವಾತವನ್ನು ಬಿಸಿ ಮಾಡುತ್ತದೆ ಮತ್ತು ಇದು ಸುಮಾರು ಮೂರು ಬಾರಿ ನಡೆಯುತ್ತದೆ. ಶಾಖವು ಮನೆಯೊಳಗೆ ಪ್ರವೇಶಿಸುವ ಅಥವಾ ಕೋಣೆಯ ಉಷ್ಣಾಂಶಕ್ಕೆ ಹರಡುವ ಹೊತ್ತಿಗೆ, ಹೊರಗಿನ ತಾಪಮಾನವು ಸಂಜೆಯಾಗುತ್ತಲೇ ಹೊರಗಿನ ಬ್ಲಾಕ್‌ಗಳ ಮೇಲ್ಮೈಯನ್ನು ತಣ್ಣಗಾಗಿಸುವಾಗತ್ತದೆ.

  ಇದರಿಂದಾಗಿ ನಮಗೆ ಮನೆಯೊಳಗೆ ಸುತ್ತುವರಿದ ತಾಪಮಾನವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಪೊರೊಥೆರ್ಮ್ ಬ್ಲಾಕ್‌ಗಳಿಂದ ಮಾಡಿದ ಮನೆಯಲ್ಲಿ ವಾಸಿಸುತ್ತಿದ್ದರೆ, ಬೆಂಗಳೂರು ಮತ್ತು ಮಂಗಳೂರಿನಂತಹ ನಗರಗಳಲ್ಲಿ ನಿಮಗೆ ಬೇಸಿಗೆಯಲ್ಲಿ ಎಸಿ ಅಥವಾ ಚಳಿಗಾಲದಲ್ಲಿ ಹೀಟರ್ ಅಗತ್ಯವಿಲ್ಲ ಎಂದು ಅಭಿಜಿತ್ ವಿವರಿಸುತ್ತಾರೆ.

  ಡಾ. ಸಂಜೀವ್ ಅವರ ಮನೆಯ ನಿರ್ಮಾಣದಲ್ಲಿ ಬಳಸಿದ ಇನ್ನೊಂದು ಪ್ರಮುಖ ವಸ್ತುವೆಂದರೆ ಅತನ್‌ಗುಡಿ ಟೈಲ್ಸ್‌ಗಳು. ಇವುಗಳು ಪರಿಸರ ಸ್ನೇಹಿಯಾಗಿದ್ದು ಕೈಯಿಂದ ಮಾಡಿದ ಟೈಲ್ಸ್‌ಗಳಾಗಿವೆ. ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಾದ ಮರಳು, ಸಿಮೆಂಟ್ ಮತ್ತು ನೈಸರ್ಗಿಕವಾಗಿ ಸಿಗುವ ಆಕ್ಸೈಡ್‌ಗಳಿಂದ ತಯಾರಿಸಲಾಗುತ್ತದೆ. ಇದು ನೈಸರ್ಗಿಕ ಬಣ್ಣವನ್ನು ಹೊಂದಿದ್ದು ಸುಮಾರು 45 ದಿನಗಳವರೆಗೆ ಸೂರ್ಯನ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ ಮತ್ತು ಅವುಗಳ ಯಂತ್ರ ಸಂಕುಚಿತ ಆವೃತ್ತಿಗಳಿಗಿಂತ ಭಿನ್ನವಾಗಿ ನೇರವಾಗಿ ಸೈಟ್‌ನಲ್ಲಿ ಬಳಸಲಾಗುತ್ತದೆ.

  ಬೆಂಗಳೂರಿನಲ್ಲಿ ನಿರ್ಮಿಸಿರುವ ಪರಿಸರಸ್ನೇಹಿ ಮನೆ.


  ಕೈಯಿಂದ ಮಾಡಿದ ಟೈಲ್ಸ್‌ಗಳನ್ನು ಬೆಂಗಳೂರು ಸಮೀಪದ ಮಂಜುನಾಥ ಫ್ಲೋರಿಂಗ್ ಎಂಬ ಮಾರಾಟಗಾರರಿಂದ ಪಡೆಯುತ್ತೇವೆ ಎಂದು ತಿಳಿಸಿರುವ ಅಭಿಜಿತ್ ಸುಮಾರು ಏಳು ಮನೆಯ ಯೋಜನೆಗಳಿಗೆ ಟೈಲ್ಸ್‌ಗಳನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಟೈಲ್ಸ್‌ನ ಹೊಳಪಿಗಾಗಿ ನೆಲವನ್ನು ಒಂದು ಹನಿ ತೆಂಗಿನೆಣ್ಣೆಯಿಂದ ಒರೆಸಬೇಕು. ವೆಚ್ಚದ ದೃಷ್ಟಿಯಿಂದ, ಅತನ್‌ಗುಡಿ ಟೈಲ್ಸ್ ಬಹಳ ಮಿತವ್ಯಯದ್ದಾಗಿದೆ. ಪ್ರತಿ ಸ್ಕ್ವೇರ್ ಫೀಟ್‌ಗೆ 55 ರೂ ನಿಂದ 70 ರೂ ವಿನಂತೆ ಟೈಲ್ಸ್ ಲಭ್ಯವಾಗಲಿದೆ. ಈ ಟೈಲ್ಸ್ ಸ್ಥಳೀಯ ವಾಸ್ತುಶಿಲ್ಪದ ಅರಿವನ್ನು ಜನರಲ್ಲಿ ಮೂಡಿಸುತ್ತದೆ. ಅದೇ ರೀತಿ ನಿರ್ದಿಷ್ಟ ಪ್ರದೇಶದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸುತ್ತದೆ ಎಂದು ಸಂಸ್ಥೆಯ ಆಶಿಕಾ ವಿವರಿಸುತ್ತಾರೆ.

  ಪೊರೋಥರ್ಮ್ ಬ್ಲಾಕ್‌ಗಳ ಜೊತೆಗೆ, ಬಿಲ್ಡ್‌ಹೋಮ್ ಸ್ಕ್ರೀನಿಂಗ್ ಉದ್ದೇಶಗಳಿಗಾಗಿ ಜಾಲಿ ಬ್ಲಾಕ್‌ಗಳನ್ನು ಸಹ ಬಳಸಿದೆ. ಜಾಲಿ ಎಂಬುದು ರಂದ್ರ ಅಥವಾ ಲ್ಯಾಟಿಸ್ಡ್ ಸ್ಕ್ರೀನ್‌ನ ಪದವಾಗಿದೆ, ಸಾಮಾನ್ಯವಾಗಿ ಕ್ಯಾಲಿಗ್ರಫಿ ಮತ್ತು ಜ್ಯಾಮಿತಿಯ ಬಳಕೆಯಿಂದ ಅಲಂಕಾರಿಕ ಮಾದರಿಯನ್ನು ನಿರ್ಮಿಸಲಾಗಿದೆ.

  ಜಾಲಿ ಗೋಡೆಯು ವಸ್ತುಗಳನ್ನು ಉಳಿಸುತ್ತದೆ ಮತ್ತು ನಿರ್ಮಾಣದ ವೇಗವನ್ನು ಹೆಚ್ಚಿಸುತ್ತದೆ. "ಘನ ಗೋಡೆಗಳಿಗೆ ಸಂಪೂರ್ಣ ಅವಶ್ಯಕತೆ ಇಲ್ಲದಿದ್ದಾಗ, ಜಾಲಿ ಗೋಡೆಯನ್ನು ಬಳಸುವುದು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಸಂಸ್ಥೆಯು ಇನ್ನೂ ಕೆಲವೊಂದು ರಚನೆಗಳನ್ನು ಉತ್ತಮ ಬೆಳಕು ಹಾಗೂ ಗಾಳಿ ವ್ಯವಸ್ಥೆಗಾಗಿ ನಿರ್ಮಿಸಿದೆ. ಮಳೆನೀರಿನ ಕೊಯ್ಲು ಹಾಗೂ ರಿಚಾರ್ಜ್ ಪಿಟ್ ಇಲ್ಲದೆಯೇ ಪರಿಸರ ಸ್ನೇಹಿ ಮನೆಯ ನಿರ್ಮಾಣವಾಗಿದೆ. ಇದರಿಂದ ಡಾ. ಸಂಜೀವ್ ಅವರ ಮನೆಯ ನಿರ್ಮಾಣವು 40,000 ಲೀಟರ್‌ಗಳಷ್ಟು ನೀರನ್ನು ಪ್ರತೀ ವರ್ಷ ಉಳಿಸುತ್ತದೆ ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

  ಇದನ್ನು ಓದಿ: Explained: ಅನಾಥಾಶ್ರಮದಲ್ಲಿ ರಾಜಕಾರಣಿಗಳ, ಸೆಲೆಬ್ರೆಟಿಗಳ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ ಮಕ್ಕಳ ರಕ್ಷಣಾ ನಿರ್ದೇಶನಾಲಯ: ಏಕೆ ಗೊತ್ತಾ?

  ಉಷ್ಣ ನಿರೋಧನವನ್ನು ಸುಧಾರಿಸಲು ಮತ್ತು ಚಪ್ಪಡಿಯಲ್ಲಿ ಕಾಂಕ್ರೀಟ್ ಬಳಕೆಯನ್ನು ಕಡಿಮೆ ಮಾಡಲು ಸಂಸ್ಥೆಯು ಮಾಡಿದ ಇನ್ನೊಂದು ಅಂಶವೆಂದರೆ ಸೀಲಿಂಗ್‌ನಲ್ಲಿ ಫಿಲ್ಲರ್ ವಸ್ತುಗಳನ್ನು ಬಳಸಿರುವುದಾಗಿದೆ. ಲ್ಯಾಮಿನೇಟೆಡ್ ಮರದ ನೆಲ ಹಾಸನ್ನು ಹಾಸಿದ್ದು WPC (ವುಡ್ ಪಾಲಿಮರ್ ಕಾಂಪೋಸಿಟ್) ನಿಂದ ತಯಾರಿಸಲಾಗಿದೆ. ಇದನ್ನು ಪ್ಲೈವುಡ್ ಅಥವಾ ಕೃಷಿ ತ್ಯಾಜ್ಯದ ಅವಶೇಷಗಳಿಂದ ಮಾಡಲಾಗಿದೆ, ಇದು ಗೆದ್ದಲು-ಸ್ನೇಹಿ ಮತ್ತು ಹವಾಮಾನ ಸ್ನೇಹಿಯಾಗಿದೆ.

  ಕಾಂಕ್ರೀಟ್‌ನ ಬಳಕೆ:

  ಸಿಮೆಂಟ್ ಇಲ್ಲದೆಯೇ ಮನೆ ನಿರ್ಮಾಣ ಕಾರ್ಯಸಾಧ್ಯವೇ ಎಂಬುದನ್ನು ಕೇಳಿದಾಗ ಅಭಿಜಿತ್ ಅದನ್ನು ನಂಬುವುದಿಲ್ಲ. ಪೊರೊಥೆರ್ಮ್ ಬ್ಲಾಕ್‌ಗಳು ಅಥವಾ ಇತರ ಪರಿಸರ ಸ್ನೇಹಿ ಬ್ಲಾಕ್‌ಗಳನ್ನು ಜೋಡಿಸಲು ಸಿಮೆಂಟ್ ಅನ್ನು ಬಳಸಲಾಗಿದೆ. ಈ ಮನೆಗಳಿಗೆ ಸಿಮೆಂಟ್‌ನ ಅವಶ್ಯಕತೆ ತೀರಾ ಕಡಿಮೆ ಎಂದು ಹೇಳುವ ಅಭಿಜಿತ್ ಸಿಮೆಂಟ್ ಅನ್ನು ಋಣಾತ್ಮಕ ಅಂಶವಾಗಿ ಇಲ್ಲಿ ಪರಿಗಣಿಸಿಲ್ಲ. ಮೇಲ್ಛಾವಣಿಯ ಮೌಲ್ಡ್‌ಗೆ ಸಿಮೆಂಟ್ ಬಳಕೆ ಅನಿವಾರ್ಯವಾಗಿದೆ. ಸಿಮೆಂಟ್ ಅಗತ್ಯವಿಲ್ಲವೆಂದು ನಾನು ಹೇಳುವುದಿಲ್ಲ ಎಂದು ತಿಳಿಸಿರುವ ಅಭಿಜಿತ್ ಸಿಮೆಂಟ್ ಅನ್ನು ಕನಿಷ್ಠ ಪ್ರಮಾಣದಲ್ಲಿ ಬಳಸಿ ಮನೆ ನಿರ್ಮಿಸಬಹುದು ಎಂಬುದು ಅಭಿಜಿತ್ ಅಭಿಪ್ರಾಯವಾಗಿದೆ.
  Published by:HR Ramesh
  First published: