• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಶ್ರೀಲಂಕಾ ದಿವಾಳಿಯಾಗೋಕೆ ಸಾವಯವ ಕೃಷಿ ಪದ್ಧತಿಯೇ ಕಾರಣವಾ? ತಜ್ಞರು ಹೌದೆನ್ನುತ್ತಿದ್ದಾರೆ!

Explained: ಶ್ರೀಲಂಕಾ ದಿವಾಳಿಯಾಗೋಕೆ ಸಾವಯವ ಕೃಷಿ ಪದ್ಧತಿಯೇ ಕಾರಣವಾ? ತಜ್ಞರು ಹೌದೆನ್ನುತ್ತಿದ್ದಾರೆ!

ಶ್ರೀಲಂಕಾದ ಮಾರುಕಟ್ಟೆ ದೃಶ್ಯ

ಶ್ರೀಲಂಕಾದ ಮಾರುಕಟ್ಟೆ ದೃಶ್ಯ

Reason for Food Crisis in Srilanka: ದೈನಂದಿನ ಆಹಾರ ಪದಾರ್ಥಗಳಾದ ಅಕ್ಕಿ, ಸಕ್ಕರೆ ಮತ್ತು ಈರುಳ್ಳಿ ಬೆಲೆಗಳು ಗಗನಕ್ಕೇರಿವೆ. ಸೀಮೆಎಣ್ಣೆ ಹಾಗೂ ಅಡುಗೆ ಅನಿಲದ ಬೆಲೆಗಳು ದುಪ್ಪಟ್ಟಾಗುತ್ತಿವೆ. ರಫ್ತುಬೆಳೆಗಳಾದ ದಾಲ್ಚಿನ್ನಿ, ಮೆಣಸು, ರಬ್ಬರ್, ಏಲಕ್ಕಿ, ಲವಂಗ, ಜಾಯಿಕಾಯಿ, ವೀಳ್ಯದ ಎಲೆಗಳು, ಕೊಕೋ, ವೆನಿಲ್ಲಾ ಉತ್ಪಾದನೆಯ ಮೇಲೆ ಆರ್ಥಿಕ ಹೊಡೆತ ಬೀಳಲಿದೆ.

ಮುಂದೆ ಓದಿ ...
  • Trending Desk
  • 2-MIN READ
  • Last Updated :
  • Share this:

Food Crisis in Srilanka: ಕೋವಿಡ್-19 ಸಾಂಕ್ರಾಮಿಕ ನಿಭಾಯಿಸಲು ದ್ವೀಪ ರಾಷ್ಟ್ರ ಶ್ರೀಲಂಕಾ ಹೆಣಗಾಡುತ್ತಿರುವ ನಡುವೆಯೇ ಗಂಭೀರ ಆರ್ಥಿಕ ಪರಿಸ್ಥಿತಿಯನ್ನೂ ಎದುರಿಸುತ್ತಿದ್ದು ಆಹಾರದ ಕೊರತೆ ಸಮಸ್ಯೆ ಎದುರಿಸುತ್ತಿದೆ. ಇಳಿಮುಖವಾಗುತ್ತಿರುವ ವಿದೇಶಿ ವಿನಿಮಯ ನಿಕ್ಷೇಪಗಳು, ನಷ್ಟವಾಗುತ್ತಿರುವ ಕರೆನ್ಸಿ ಹಾಗೂ ಗಗನಕ್ಕೇರಿರುವ ಆಹಾರ ಹಣದುಬ್ಬರ ಜೊತೆಯಾಗಿ ಸೇರಿ ಆರ್ಥಿಕ ಬಿಕ್ಕಟ್ಟನ್ನುಂಟು ಮಾಡಿವೆ. ದಶಕಗಳಿಂದಲೂ ನಡೆಯುತ್ತಿದ್ದ ಅಂತರ್ಯುದ್ಧದಿಂದ ನಲುಗಿದ್ದ ದೇಶ ಇದೀಗ ಆರ್ಥಿಕ ಹೊರೆಯಿಂದ ಕಂಗೆಟ್ಟಿದೆ. ಆಹಾರ ಬೆಲೆಗಳ ಏರಿಕೆ ಮತ್ತು ಅಗತ್ಯ ಆಹಾರ ಪದಾರ್ಥಗಳ ಸಂಗ್ರಹದ ಕೊರತೆಯಿಂದಾಗಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಸಾರ್ವಜನಿಕ ಭದ್ರತಾ ಸುಗ್ರೀವಾಜ್ಞೆಯಡಿಯಲ್ಲಿ ಆರ್ಥಿಕ ತುರ್ತುಸ್ಥಿತಿ ಘೋಷಿಸಿದರು.


ಆರ್ಥಿಕ ದುರಂತದ ಹೊಡೆತದಿಂದ ರಾಸಾಯನಿಕ ರಸಗೊಬ್ಬರಗಳ ಆಮದನ್ನು ನಿಷೇಧಿಸಲಾಯಿತು. ಇದರಿಂದಾಗಿ ಸಾವಯವ ಕೃಷಿ ಪದ್ಧತಿಯನ್ನು ಆಚರಣೆಗೆ ತರುವ ಪ್ರಪಂಚದ ಮೊದಲ ರಾಷ್ಟ್ರವಾಗಿ ಈ ಸಾಗರ ರಾಷ್ಟ್ರ ರೂಪುಗೊಳ್ಳಲೂಬಹುದು. ಕೃಷಿ ಪದ್ಧತಿಯಲ್ಲಿ ಈ ದಿಢೀರ್ ಬದಲಾವಣೆಯಿಂದಾಗಿ ಆಹಾರ ಉತ್ಪನ್ನಗಳಲ್ಲಿ ತೀವ್ರ ನಷ್ಟ ಉಂಟಾಗಲಿದ್ದು, ಕೃಷಿ ಬೆಳೆಗಳ ನಷ್ಟಕ್ಕೂ ಕಾರಣವಾಗಬಹುದು ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಈ ಕುರಿತು ಇನ್ನಷ್ಟು ಅಂಶಗಳತ್ತ ಗಮನ ಹರಿಸೋಣ.


ಪರಿಣಾಮಗಳು


ದೈನಂದಿನ ಆಹಾರ ಪದಾರ್ಥಗಳಾದ ಅಕ್ಕಿ, ಸಕ್ಕರೆ ಮತ್ತು ಈರುಳ್ಳಿ ಬೆಲೆಗಳು ಗಗನಕ್ಕೇರಿವೆ. ಸೀಮೆಎಣ್ಣೆ ಹಾಗೂ ಅಡುಗೆ ಅನಿಲದ ಬೆಲೆಗಳು ದುಪ್ಪಟ್ಟಾಗುತ್ತಿವೆ. ರಫ್ತುಬೆಳೆಗಳಾದ ದಾಲ್ಚಿನ್ನಿ, ಮೆಣಸು, ರಬ್ಬರ್, ಏಲಕ್ಕಿ, ಲವಂಗ, ಜಾಯಿಕಾಯಿ, ವೀಳ್ಯದ ಎಲೆಗಳು, ಕೊಕೋ, ವೆನಿಲ್ಲಾ ಉತ್ಪಾದನೆಯ ಮೇಲೆ ಆರ್ಥಿಕ ಹೊಡೆತ ಬೀಳಲಿದೆ.


ಶ್ರೀಲಂಕಾ ಸರಕಾರ ಹೇಳುವಂತೆ ಹಣದುಬ್ಬರಕ್ಕೆ ಎರಡು ಪ್ರಾಥಮಿಕ ಕಾರಣಗಳಿವೆ. ಸಾಂಕ್ರಾಮಿಕ ರೋಗದಿಂದಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಡೆತ ಬಿದ್ದಿರುವುದು, ಹಾಗೂ ಆಹಾರ ಪದಾರ್ಥಗಳ ಸಂಗ್ರಹ. ಪ್ರವಾಸೋದ್ಯಮದಲ್ಲಿನ ಕುಸಿತವು ವಿದೇಶಿ ವಿನಿಮಯದ ಮೇಲೂ ಪರಿಣಾಮ ಬೀರಿದೆ ಎಂಬುದು ಇಲ್ಲಿ ಪ್ರಮುಖಾಂಶವಾಗಿದೆ.


ಆರ್ಥಿಕ ಬಿಕ್ಕಟ್ಟು ಈಗ ಪ್ರತಿಕೂಲ ಸ್ಥಿತಿ ತಲುಪಿದ್ದು ಮಾಜಿ ಸೇನಾ ಜನರಲ್ ಅನ್ನು ಅಗತ್ಯ ಸೇವೆಗಳ ಆಯುಕ್ತರಾಗಿ ನೇಮಿಸಿದ್ದು ಆಹಾರ ದಾಸ್ತಾನುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉತ್ಪನ್ನಗಳ ಮಾರಾಟ ಖಚಿತಪಡಿಸಿಕೊಳ್ಳಲು ಅಧಿಕಾರಿಯನ್ನು ನೇಮಿಸಲಾಗಿದೆ.


ಊಹಿಸಲು ಸಾಧ್ಯವಿಲ್ಲದಷ್ಟು ಹದಗೆಟ್ಟಿದೆ


ಶ್ರೀಲಂಕಾದ ಪ್ರಮುಖ ಚಹಾ ಉತ್ಪಾದಕರಾದ ಅಂತೆಯೇ ಸಾವಯವ ಬದಲಾವಣೆಗೆ ಮುಂದಾಳತ್ವ ವಹಿಸಲು ಅಧ್ಯಕ್ಷರಾದ ರಾಜಪಕ್ಸೆ ಅಯ್ಕೆ ಮಾಡಿದ 46 ತಜ್ಞರಲ್ಲಿ ಒಬ್ಬರಾದ ಹರ್ಮನ್ ಗುಣರತ್ನೆ ಹೇಳುವಂತೆ ದೇಶದ ಪರಿಸ್ಥಿತಿಯು ಊಹಿಸಲಾಗದಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂದಾಗಿದೆ.ನಿಷೇಧದಿಂದಾಗಿ ಚಹಾ ಉದ್ಯಮ ಅಸ್ತವ್ಯಸ್ತಗೊಂಡಿದ್ದು ನಾವ ಸಾವಯವ ಪದ್ಧತಿ ಅನುಸರಿಸಿದಲ್ಲಿ 50% ನಷ್ಟ ಅನುಭವಿಸಲಿದ್ದೇವೆ ಎಂಬುದು ಅವರ ಚಿಂತೆಯಾಗಿದೆ.


ಈ ನಿಷೇಧದಿಂದಾಗಿ ದೇಶದ ಸರಾಸರಿ ವಾರ್ಷಿಕ 300 ದಶಲಕ್ಷ ಕೆಜಿ ಚಹಾ ಉತ್ಪಾದನೆಯನ್ನು ಅರ್ಧಕ್ಕೆ ಇಳಿಮುಖಗೊಳಿಸಲಿದೆ ಎಂದು ತಿಳಿಸಿದ ಗುಣರತ್ನೆ ಚಹಾ ಉದ್ಯಮ ಕ್ಷೇತ್ರಕ್ಕಾಗುವ ಅಪಾಯ ತೆರೆದಿಟ್ಟಿದ್ದಾರೆ. ಇದಲ್ಲದೆ, ಸಾವಯವ ಚಹಾದ ಉತ್ಪಾದನೆಗೆ 10 ಪಟ್ಟು ಹೆಚ್ಚು ವೆಚ್ಚವಾಗುವುದರಿಂದ, ಅದರ ಮಾರುಕಟ್ಟೆಯೂ ಸೀಮಿತವಾಗಿದೆ. ವಿದೇಶಿ ಕರೆನ್ಸಿ ವಿನಿಮಯ ಇಲ್ಲದೇ ಇರುವುದರಿಂದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಸೆಂಟ್ರಲ್ ಬ್ಯಾಂಕ್ ಮಾಜಿ ಡೆಪ್ಯುಟಿ ಗವರ್ನರ್ ವಿಜೇವಾರ್ಡನ್ ತಿಳಿಸಿದ್ದಾರೆ.


ದ್ವೀಪ ರಾಷ್ಟ್ರದ ರೈತರು ಕೃಷಿಗೆ ಹೆಚ್ಚು ರಾಸಾಯನಿಕ ಬಳಸುತ್ತಿದ್ದು ರಸಗೊಬ್ಬರಗಳ ಬಳಕೆಗಳನ್ನು ನಿರಾಕರಿಸಿದರೆ ಬೆಳೆಯಲ್ಲಿ ಗಣನೀಯ ಇಳಿಕೆ ಕಂಡುಬರಲಿದೆ ಎಂಬುದಾಗಿ ಸಮೀಕ್ಷೆಯು ತಿಳಿಸಿದೆ. ರೈತರಲ್ಲಿ ಕೇವಲ 20% ಜನರು ಮಾತ್ರವೇ ಸಾವಯವ ಕೃಷಿ ಪದ್ಧತಿ ಅನುಸರಿಸುವುದು ನಿಚ್ಚಳವಾಗಿದೆ ಎಂಬುದಾಗಿ ಸಮೀಕ್ಷೆ ತಿಳಿಸಿದೆ.


ಆಹಾರ ಭದ್ರತೆಯ ಅಪಾಯ


ಸಾವಯವ ಕೃಷಿ ಪದ್ಧತಿಗೆ ದೇಶವು ಒಳಗಾದಲ್ಲಿ ಆಹಾರದ ಭದ್ರತೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಸಾವಯವ ಕೃಷಿ ಪದ್ಧತಿಯಿಂದ ಕಡಿಮೆ ಇಳುವರಿ ಉಂಟಾಗಿ ಕೃಷಿ ಭೂಮಿ ಹೆಚ್ಚಾಗುತ್ತದೆ ಹಾಗೂ ಇದರಿಂದ ಅರಣ್ಯನಾಶ ಉಂಟಾಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.


ಸಾವಯವ ಕೃಷಿ ಪದ್ಧತಿಯಲ್ಲಿ ರೋಗಗಳು ಹಾಗೂ ಕೀಟಬಾಧೆಗಳು ಹೆಚ್ಚಾಗುವ ಅಪಾಯವಿದ್ದು ಇದರಿಂದ ಕೃಷಿಕರಿಗೆ ದೈಹಿಕ ಶ್ರಮ ಅಧಿಕವಾಗಲಿದೆ ಎಂಬುದು ತಜ್ಞರು ತಿಳಿಸಿರುವ ಮಾಹಿತಿಯಾಗಿದೆ. ಸಾವಯವ ಉತ್ಪನ್ನಗಳ ಹೆಚ್ಚುವರಿ ಸಂಸ್ಕರಣೆ ಮತ್ತು ಮಾರುಕಟ್ಟೆ ವೆಚ್ಚವೂ ಗಣನೀಯವಾಗಿ ಏರಿಕೆಯಾಗಲಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.


top videos
    First published: