Heart Disease: ಮಹಿಳೆಯರಲ್ಲಿ ಹೃದಯಾಘಾತ ಸಂಖ್ಯೆ ಹೆಚ್ಚಳ; ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸಬೇಡಿ

ಇತ್ತೀಚಿನ ದಿನಮಾನಗಳಲ್ಲಿ ಹೃದಯ ಕಾಯಿಲೆ ಎಂಬುದು ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂಬ ಅಭಿಪ್ರಾಯವಿದೆ. ಆದರೆ, ಇದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಹೃದಯ ಕಾಯಿಲೆ ಎಂಬುದು ಹೆಣ್ಣು ಹಾಗೂ ಗಂಡು ಇಬ್ಬರ ಸಾವಿಗೂ ಹೆಚ್ಚು ಕಾರಣವಾಗುತ್ತಿರುವುದನ್ನು ಗಮನಿಸಬಹುದು. ಸ್ತ್ರೀಯಲ್ಲಿ ಹೃದಯದ ಕಾಯಿಲೆಯ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಕಳೆದ ಸೋಮವಾರದಂದು ಬಿಜೆಪಿಯ ನಾಯಕಿ ಹಾಗೂ ನಟಿ ಸೋನಾಲಿ ಫೋಗಟ್ (Sonali Phogat) ಅವರು ಗೋವಾದಲ್ಲಿ (Goa) ನಿಧನರಾದರು. ಈ ಬಗ್ಗೆ ವರದಿಗಳಲ್ಲಿ ಹೇಳಲಾಗಿರುವಂತೆ ಸೋನಾಲಿ ಅವರು ಮ್ಯಾಸಿವ್ ಹಾರ್ಟ್ ಅಟ್ಯಾಕ್ (Heart Attack) ನಿಂದ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. 42ರ ಪ್ರಾಯದವರಾಗಿದ್ದ ಸೋನಾಲಿ ನಿಧನರಾಗುವುದಕ್ಕೂ ಮುಂಚೆ ತಮಗೆ ಒಂದು ರೀತಿಯ ಅಸಮಾಧಾನ ಹಾಗೂ ಎದೆನೋವಾಗುತ್ತಿರುವ (Chest Pain) ಬಗ್ಗೆ ದೂರಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗದೆ ಅವರು ಕೊನೆಯುಸಿರೆಳಿದಿದ್ದಾರೆ. ಅಷ್ಟಕ್ಕೂ ಅವರ ನಿಧನಕ್ಕೆ (Death) ಸಂಬಂಧಿಸಿದಂತೆ ಇನ್ನೂ ಸ್ಪಷ್ಟ ವರದಿಗಳಿಗಾಗಿ ಕಾಯಲಾಗುತ್ತಿದೆ.

ಹೆಣ್ಣು ಹಾಗೂ ಗಂಡು ಇಬ್ಬರ ಸಾವಿಗೂ ಕಾರಣವಾಗುತ್ತಿರುವ ಹೃದಯ ಕಾಯಿಲೆ
ಏತನ್ಮಧ್ಯೆ, ಇತ್ತೀಚಿನ ದಿನಮಾನಗಳಲ್ಲಿ ಹೃದಯ ಕಾಯಿಲೆ ಎಂಬುದು ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂಬ ಅಭಿಪ್ರಾಯವಿದೆ. ಆದರೆ, ಇದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಹೃದಯ ಕಾಯಿಲೆ ಎಂಬುದು ಹೆಣ್ಣು ಹಾಗೂ ಗಂಡು ಇಬ್ಬರ ಸಾವಿಗೂ ಹೆಚ್ಚು ಕಾರಣವಾಗುತ್ತಿರುವುದನ್ನು ಗಮನಿಸಬಹುದು.

ಇಲ್ಲಿ ಇನ್ನೊಂದು ವಿಚಾರವೆಂದರೆ ಹೃದಯ ಕಾಯಿಲೆಗೆ ಸಂಬಂಧಿಸಿದಂತೆ ಅದು ತೋರಿಸುವ ಲಕ್ಷಣಗಳು ಪುರುಷ ಹಾಗೂ ಸ್ತ್ರೀಯರಲ್ಲಿ ಭಿನ್ನ ಭಿನ್ನವಾಗಿರುತ್ತವೆ. ಹಾಗಾಗಿ ಸ್ತ್ರೀಯಲ್ಲಿ ಹೃದಯದ ಕಾಯಿಲೆಯ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಹೃದಯ-ಸ್ನೇಹಿಯಾದ ಆಹಾರ ಕ್ರಮ, ನಿತ್ಯ ವ್ಯಾಯಾಮ ಹಾಗೂ ಜಿಡ್ಡಿನ ಜೀವನಶೈಲಿಯಿಂದ ದೂರ ಉಳಿಯುವುದು ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಹೆಣ್ಣಿನಲ್ಲಿ ಹೃದಯಾಘಾತದ ಲಕ್ಷಣಗಳು
ಪುರುಷನಂತೆಯೇ ಹೆಣ್ಣಿನಲ್ಲೂ ಸಹ ಹೃದಯಾಘಾತದ ಲಕ್ಷಣಗಳು ಸಮಾನವಾಗಿಯೇ ಇರುತ್ತದೆ. ಅದೇ ರೀತಿಯಾದಂತಹ ಎದೆ ನೋವು, ಹಾಗೂ ಹಲವು ನಿಮಿಷಗಳ ಕಾಲದವರೆಗೂ ಇರುವಂತಹ ಆಯಾಸ ಮತ್ತು ಬಳಲಿಕೆಗಳು ಹೆಣ್ಣಿನಲ್ಲೂ ಕಂಡುಬರುತ್ತವೆ. ಆದರೆ, ಎದೆನೋವು ಎಂಬುದು ಅಷ್ಟೊಂದು ಗಂಭೀರ ಪ್ರಮಾಣದಲ್ಲಿರುವುದಿಲ್ಲವಾದರೂ ಹೆಣ್ಣು ಎದೆನೋವಿಗೆ ಬದಲು ಹೆಚ್ಚು ಎದೆ ಒತ್ತಡ ಅಥವಾ ಗಟ್ಟಿತನವನ್ನು ಅನುಭವಿಸಬಹುದು. ಅಂದರೆ, ಹೆಣ್ಣು ಗಂಭೀರ ಎನ್ನಲಾಗುವ ಎದೆ ನೋವಿಲ್ಲದೆಯೇ ಹೃದಯಾಘಾತವನ್ನು ಅನುಭವಿಸಬಹುದೆನ್ನಲಾಗಿದೆ.

ಇದನ್ನೂ ಓದಿ: Tomato Flu: ಟೊಮ್ಯಾಟೋ ಜ್ವರದ ರೋಗಲಕ್ಷಣಗಳೇನು? ಚಿಕ್ಕಮಕ್ಕಳಲ್ಲಿ ಈ ರೋಗ ಕಂಡುಬರಲು ಕಾರಣವೇನು?

ಎದೆನೋವಿಗೆ ಸಂಬಂಧವಿಲ್ಲದಂತಹ ಲಕ್ಷಣಗಳಿವು

 • ಕುತ್ತಿಗೆ, ಗದ್ದ, ಹೆಗಲು, ಅಪ್ಪರ್ ಬ್ಯಾಕ್ ಅಥವಾ ಅಪ್ಪರ್ ಬೆಲ್ಲಿಯಲ್ಲಿ ಅಸಮಾಧಾನ ಅಥವಾ ಡಿಸ್ಕಂಫರ್ಟ್

 • ಉಸಿರಾಡಲು ಕಷ್ಟಕರವಾಗುವುದು

 • ಒಂದು ಅಥವಾ ಎರಡೂ ತೋಳುಗಳಲ್ಲಿ ನೋವುಂಟಾಗುವುದು

 • ನೌಸಿಯಾ ಅಥವಾ ವಾಂತಿ

 • ಬೆವರುವಿಕೆ

 • ತಲೆ ಸುತ್ತಿದಂತಾಗುವುದು

 • ಅಸಾಮಾನ್ಯವಾದ ಆಯಾಸ/ಬಳಲುವಿಕೆ

 • ಎದೆಯೂರಿತದಂತಹ ಅನುಭವ


ತೀವ್ರವಾಗಿರುವಂತಹ ಎದೆನೋವು ಸಾಮಾನ್ಯವಾಗಿ ಹೃದಯಾಘಾತದೊಂದಿಗೆ ಸಂಬಂಧಿಸಿರುವುದರಿಂದ ಈ ಮೇಲಿನ ಲಕ್ಷಣಗಳ ಬಗ್ಗೆ ಅಷ್ಟೊಂದು ಗಮನ ಹೋಗುವುದಿಲ್ಲ. ಏಕೆಂದರೆ ಸ್ತ್ರೀಯರ ಹೃದಯದಲ್ಲಿರುವ ಚಿಕ್ಕ ಅಪಧಮನಿಗಳೂ ಸಹ ಬ್ಲಾಕೇಜ್ ಹೊಂದಿರುವುದರಿಂದ ಹೃದಯಕ್ಕೆ ರಕ್ತದ ಸರಬರಾಜಿಗೆ ಅಡೆ-ತಡೆ ಉಂಟಾಗುತ್ತದೆ. ಇದನ್ನು ಸ್ಮಾಲ್ ವೆಸೆಲ್ ಹಾರ್ಟ್ ಡಿಸೀಸ್ ಎಂದು ಕರೆಯಲಾಗುತ್ತದೆ ಹಾಗೂ ಇದು ಹೆಚ್ಚು ಮಹಿಳೆಯರಲ್ಲಿ ಕಂಡುಬರುತ್ತದೆ.

ಈ ಸ್ಥಿತಿಯು ಮಹಿಳೆಯರಲ್ಲಿ ವಿಶ್ರಾಂತಿ ಪಡೆಯುವಾಗ ಅಥವಾ ಮಲಗಿದ್ದ ಸಂದರ್ಭದಲ್ಲೂ ಸಂಭವಿಸಬಹುದಾಗಿದೆ. ಮಾನಸಿಕ ಒತ್ತಡಗಳೂ ಸಹ ಮಹಿಳೆಯರಲ್ಲಿ ಹೃದಯಾಘಾತ ಉಂಟಾಗಲು ಉತ್ತೇಜನ ನೀಡುತ್ತವೆ. ತೀವ್ರತರ ಎದೆನೋವಿಗೆ ಹೋಲಿಸಿದರೆ ಇವು ಕಡಿಮೆ ಅನಿಸುವುದರಿಂದ ಸಹಜವಾಗಿ ಮಹಿಳೆಯರು ಪುರುಷರಿಗಿಂತ ಕಡಿಮೆ ಪ್ರಮಾಣದಲ್ಲಿ ರೋಗನಿರ್ಣಯಕ್ಕೆ ಒಳಪಡುತ್ತಾರೆ. ಪುರುಷರಂತೆ ಅಪಧಮನಿಗಳಲ್ಲಿ ಯಾವುದೇ ಗಂಭೀರ ಸ್ವರೂಪದ ಅಡೆ-ತಡೆಯಿಲ್ಲದೆಯೂ ಮಹಿಳೆಯರು ಪುರುಷರಿಗಿಂತ ಹೆಚ್ಚು ಹೃದಯಾಘಾತಕ್ಕೆ ಒಳಪಡುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Breast Cancer Prevention: ಸ್ತನ ಕ್ಯಾನ್ಸರ್ ಬರದಂತೆ ಹೇಗೆ ತಡೆಯೋದು? ನಿಮಗಾಗಿಯೇ ಇಲ್ಲಿದೆ ವಿವರ

ಹೃದಯಾಘಾತ ಉಂಟಾಗಲು ಇರುವ ಕೆಲ ಅಂಶಗಳು
ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟ, ಹೆಚ್ಚಾದ ರಕ್ತದೊತ್ತಡ, ಬೊಜ್ಜು ಇವು ಮುಖ್ಯ ಕಾರಣಗಳಾದರೂ ಕೆಲ ಇತರೆ ಅಂಶಗಳೂ ಸಹ ಮುಖ್ಯ ಪಾತ್ರವಹಿಸುತ್ತವೆ ಹಾಗೂ ಅವುಗಳೆಂದರೆ

 • ಸಕ್ಕರೆ ಕಾಯಿಲೆ : ಸಕ್ಕರೆ ಕಾಯಿಲೆಯು ಮಹಿಳೆಯರಲ್ಲಿ ನೋವನ್ನು ಅನುಭವಿಸುವ ಶೈಲಿಯನ್ನೇ ಬದಲಾಯಿಸುವಂತಹ ಸಾಮರ್ಥ್ಯ ಹೊಂದಿದ್ದರಿಂದ ಮಹಿಳೆಯರು ಸೈಲೆಂಟ್ ಹಾರ್ಟ್ ಅಟ್ಯಾಕ್ ಅನುಭವಿಸುವ ಸಾಧ್ಯತೆ ಇರುತ್ತದೆ.

 • ಮಾನಸಿಕ ಒತ್ತಡ : ಒತ್ತಡ ಎಂಬುದು ನಿತ್ಯ ಜೀವನಕ್ಕೆ ಒಂದು ರೀತಿಯ ಶತ್ರು ಇದ್ದಂತಾಗಿದ್ದು ಜೀವನಶೈಲಿಯ ಮೇಲೆ ಅಪಾರ ಪರಿಣಾಮ ಬೀರುತ್ತದೆ.

 • ಧೂಮಪಾನ : ತಂಬಾಕಿನಲ್ಲಿರುವ ನಿಕೋಟಿನ್ ಪುರುಷರಿಗಿಂತ ಮಹಿಳೆಯರ ಮೇಲೆ ಅತಿ ಹೆಚ್ಚು ಪರಿಣಾಮ ಬೀರುತ್ತದೆ.

 • ನಿಷ್ಕ್ರೀಯತೆ/ಜಡತ್ವ/ಆಲಸ್ಯ : ಜಡತ್ವದಿಂದ ಕೂಡಿದ ಜೀವನಶೈಲಿ ಹಾಗೂ ಯಾವುದೇ ದೈಹಿಕ ಚಟುವಟಿಕೆ ಇಲ್ಲದಿರುವುದು ಹೃದಯ ಕಾಯಿಲೆ ಉಂಟಾಗಲು ಉತ್ತೇಜನ ನೀಡುತ್ತದೆ.

 • ಋತುಬಂಧ/ಮಿನೋಪೌಸ್ : ಋತುಬಂಧದ ನಂತರ ತಗ್ಗುವ ಈಸ್ಟ್ರೋಜನ್ ಪ್ರಮಾಣ ಹೃದಯ ಕಾಯಿಲೆ ಉಂಟಾಗಲು ಕಾರಣವಾಗಬಹುದು.

 • ಕೌಟುಂಬಿಕ ಇತಿಹಾಸ : ಮಹಿಳೆಯರ ಕುಟುಂಬದಲ್ಲಿ ಹೃದಯಾಘಾತದ ಇತಿಹಾಸವಿದ್ದರೆ ಅಂತಹ ಮಹಿಳೆಯರು ಹೃದಯ ಕಾಯಿಲೆ ಅನುಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

 • ಉರಿಯೂತದ ಕಾಯಿಲೆಗಳು : ಅರ್ಥ್ರೈಟಿಸ್, ಲುಪುಸ್ ಗಳಂತಹ ಆರೋಗ್ಯ ಸ್ಥಿತಿಗಳು ಹೃದಯ ಕಾಯಿಲೆಗಳು ಬರುವಂತೆ ಉತ್ತೇಜನ ನೀಡುತ್ತವೆ


ಮುನ್ನೆಚ್ಚರಿಕೆಗಳು

 • ಸಕ್ರಿಯ ಹಾಗೂ ಆರೋಗ್ಯಕರ ಜೀವನಶೈಲಿ ನಿಮ್ಮದಾಗಿಸಿಕೊಳ್ಳಿ

 • ತಂಬಾಕು ತ್ಯಜಿಸಿ ಹಾಗೂ ಧೂಮಪಾನಕ್ಕೆ ಗುಡ್ ಬೈ ಹೇಳಿ

 • ತರಕಾರಿ, ಹಣ್ಣು, ಧಾನ್ಯಗಳ ಸೇವನೆ ಸಮೃದ್ಧವಾಗಿ ಮಾಡಿ

 • ಸ್ಯಾಚುರೇಟೆಡ್ ಟ್ರಾನ್ಸ್ ಫ್ಯಾಟ್ಸ್, ಸಕ್ಕರೆ ಹಾಗೂ ಹೆಚ್ಚು ಉಪ್ಪನ್ನು ತ್ಯಜಿಸಿ

 • ನಿತ್ಯ ವ್ಯಾಯಾಮ ಮಾಡಿ ಹಾಗೂ ನಿಯಮಿತವಾಗಿ ನಿಮ್ಮ ತೂಕದ ಬಗ್ಗೆ ಗಮನವಿರಿಸಿ

 • ಒತ್ತಡದಿಂದ ದೂರವಿರಿ

 • ಅಲ್ಕೋಹಾಲ್ ತ್ಯಜಿಸಿ ಇಲ್ಲದಿದ್ದರೆ ಮಿತವಾಗಿ ಸೇವಿಸಿ


ಇದನ್ನೂ ಓದಿ:  Heart Attack At Gym: ಜಿಮ್​ನಲ್ಲೇ ಹೆಚ್ಚು ಹೃದಯಾಘಾತ ಆಗೋದೇಕೆ? ತಡೆಯುವುದು ಹೇಗೆ?

ಮಹಿಳೆಯರಲ್ಲಿ ಹೃದಯ ಕಾಯಿಲೆ ಚಿಕಿತ್ಸೆ
ಹೃದಯ ಸಮಸ್ಯೆ ಸ್ತ್ರೀ ಹಾಗೂ ಪುರುಷರಲ್ಲಿ ಸಮನಾಗಿರುತ್ತದೆ. ಸರಿಯಾದ ಹಾಗೂ ಸಮರ್ಪಕವಾದ ಔಷಧಿಗಳ ಸೇವನೆ, ಆಂಜಿಯೋಪ್ಲಾಸ್ಟಿ, ಸ್ಟೆಂಟಿಂಗ್ ಎಲ್ಲವೂ ಒಂದೇ ರೀತಿಯಲ್ಲಿರುತ್ತದೆ. ಆದರೆ, ಪುರುಷರಿಗೆ ನೀಡುವಂತೆ ಎಸ್ಪಿರಿನ್ ಹಾಗೂ ಸ್ಟಾಟಿನ್ ಗಳನ್ನು ಮಹಿಳೆಯರಿಗೆ ಹೆಚ್ಚು ಬಳಸಲಾಗುವುದಿಲ್ಲ. ಚಿಕ್ಕ ಅಪಧಮನಿಗಳಲ್ಲೂ ಮಹಿಳೆ ಬ್ಲಾಕೇಜ್ ಹೊಂದುವುದರಿಂದ ಪುರುಷರಂತೆ ಮಹಿಳೆಯರ ಮೇಲೆ ಕೊರೋನರಿ ಬೈ ಪಾಸ್ ಸರ್ಜರಿಯನ್ನು ಮಾಡುವುದು ಬಲು ಕಡಿಮೆ.
Published by:Ashwini Prabhu
First published: