Explained: ಧೂಮಪಾನಿಗಳು COVID-19 ಕೆಟ್ಟ ಪರಿಣಾಮಗಳಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ; ಅಧ್ಯಯನಗಳ ವರದಿ ಇಲ್ಲಿದೆ

Smokers are at high risk from COVID-19: ಧೂಮಪಾನಿಗಳು ಬೇಗ ಕೊರೋನಾ ವೈರಸ್​ ರೋಗಕ್ಕೆ ತುತ್ತಾಗುತ್ತಾರ? ಧೂಮಪಾನ ಮಾಡದ ವ್ಯಕ್ತಿಗಳಿಗಿಂತ ಧೂಮಪಾನ ಮಾಡುವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದಲ್ಲಿದೆ ಉತ್ತರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Coronavirus Pandemic ಸಮಯದಲ್ಲಿ ಸಂಶೋಧಕರು ಅನಿರೀಕ್ಷಿತ ಸಂಶೋಧನೆಯಲ್ಲಿ ತಪ್ಪಾದ ಹೇಳಿಕೆಯನ್ನು ನೀಡಿದ್ದರು, ಅದೆಂದರೆ ಧೂಮಪಾನಿಗಳು ಕೋವಿಡ್‌ನ ಕೆಟ್ಟ ಪರಿಣಾಮಗಳಿಂದ ಸಂರಕ್ಷಣೆ ಪಡೆದುಕೊಂಡಿದ್ದಾರೆ. ಮೊದಲಿಗೆ ಚೀನಾದಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳ ವಿಮರ್ಶೆಯಲ್ಲಿ ಪತ್ತೆಯಾದ ಈ "ಧೂಮಪಾನಿಗಳ ವಿರೋಧಾಭಾಸ" ವನ್ನು ನಂತರ ಇಟಲಿ ಮತ್ತು ಫ್ರಾನ್ಸ್‌ನ ಅಧ್ಯಯನಗಳಲ್ಲಿ ವರದಿ ಮಾಡಲಾಯಿತು.

  ಆದರೆ ಬ್ರಿಟನ್‌ನಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದು ಬಂದ ಅಂಶವೇನೆಂದರೆ ಧೂಮಪಾನ ಮಾಡದವರಿಗಿಂತ 80% ದಷ್ಟು ಧೂಮಪಾನಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಾಗಿದೆ. ಹಾಗಾದರೆ ಸಂಭವಿಸಿದ್ದಾದರೂ ಏನು? ವಿಜ್ಞಾನವು ಈ ಸತ್ಯವನ್ನು ಸುಳ್ಳೆಂದು ಏಕೆ ತಿಳಿಸಿತು ಎಂಬುದು ಗೊಂದಲಕಾರಿಯಾಗಿದೆ. ಗಣಿತಜ್ಞ ಪಿಯರೆ-ಸೈಮನ್ ಲ್ಯಾಪ್ಲೇಸ್ ಹೇಳುವಂತೆ ಅಸಾಧಾರಣ ಸತ್ಯ ಏನೆಂದರೆ ವಿಜ್ಞಾನವು ಏನಾದರೊಂದನ್ನು ಸುಳ್ಳು ಸತ್ಯವೆಂಬುದನ್ನು ಬಹಿರಂಗಪಡಿಸಲು ಅದಕ್ಕೆ ಬಲವಾದ ಸಾಕ್ಷಿ ಇರಬೇಕು ಎಂದು ತಿಳಿಸಿದ್ದಾರೆ. ತಂಬಾಕಿನಿಂದ ಹಾನಿಗೊಳಗಾದ ಶ್ವಾಸಕೋಶಗಳನ್ನು ಹೊಂದಿರುವ ಧೂಮಪಾನಿಗಳಿಗೆ ಉಸಿರಾಟದ ಕಾಯಿಲೆಯಿಂದಾಗಿ ಉತ್ತಮ ಫಲಿತಾಂಶಗಳನ್ನು ಹೊಂದುವುದು ಎಂದರೆ ಅಲೌಕಿಕವಾಗಿದೆ ಎಂದು ಹೇಳುತ್ತಾರೆ.

  ಹಾಗಾದರೆ ಈ ವಿಷಯದ ಕುರಿತು ಇನ್ನಷ್ಟು ವಿಶ್ಲೇಷಣೆಗಳನ್ನು ನಡೆಸೋಣ:

  ವಿಜ್ಞಾನವು ಅನಿಶ್ಚಿತವಾಗಿರುವುದರಿಂದ ಮಾನವರಿಗೆ ಸಾಕಷ್ಟು ಗೊಂದಲಗಳನ್ನುಂಟು ಮಾಡುವುದು ಸಹಜವಾಗಿದೆ. ಉದಾಹರಣೆಗೆ ಹವಾಮಾನ ಮುನ್ಸೂಚನೆಯನ್ನು ತೆಗೆದುಕೊಂಡಾಗ, ಮಳೆ ಬರುವ ಅವಕಾಶ 10% ಇದೆ ಎಂಬುದು ತಿಳಿದಲ್ಲಿ ನೀವು ಛತ್ರಿಯನ್ನು ತೆಗೆದುಕೊಂಡು ಹೋಗುವುದಿಲ್ಲ. 10 ರಲ್ಲಿ ಒಂಭತ್ತು ಬಾರಿ ಈ ಅಂಶ ನಿಜವಾಗಿದ್ದರೂ ಒಂದು ಬಾರಿ ಇದಕ್ಕಾಗಿ ನಾವು ವಿಷಾದಿಸಬೇಕಾಗುತ್ತದೆ. ಆ ಸಮಯದಲ್ಲಿ ಹವಾಮಾನ ತಜ್ಞರ ವಿಶ್ಲೇಷಣೆ ತಪ್ಪಾಗಿರುವುದಾಗಿ ನಾವು ಅಂದುಕೊಳ್ಳುತ್ತೇವೆ. ಇದನ್ನು ನಾವು ಇನ್ನಷ್ಟು ವಿಷದವಾಗಿ ಅರಿತುಕೊಂಡಾಗ ತಪ್ಪು ಹವಾಮಾನ ತಜ್ಞರದ್ದಲ್ಲ. ನಮ್ಮ ವಿಶ್ವಾಸದ ಮೇಲಾಗಿದೆ. 10% ಮಳೆಯಾಗುವ ಅವಕಾಶವಿದೆ ಎಂಬುದು ನಮ್ಮ ಅಂತರಾತ್ಮದ ಮಾತಾಗಿದ್ದರೂ ಇಂದು ಮಳೆಯಾಗುವುದಿಲ್ಲ ಎಂದೇ ನಾವೇ ಭಾವಿಸುತ್ತೇವೆ.

  ಪ್ರತಿಯೊಂದು ಸಂಭವನೀಯತೆಯನ್ನು ಆಧರಿಸಿದೆ:

  ಹೀಗೆ ವಿಜ್ಞಾನವು ಕೆಲಸ ಮಾಡುತ್ತದೆ. ಪ್ರತಿಯೊಂದು ಸಂಭವನೀತೆಯನ್ನು ಆಧರಿಸಿದೆ. ಪ್ರತಿಯೊಂದು ಹೊಸ ಮಾಹಿತಿಯು ಸಂಭವನೀತೆಯನ್ನು ನವೀಕರಿಸುವಂತೆ ಕಾರ್ಯನಿರ್ವಹಿಸುತ್ತದೆ. ಇನ್ನು ಕೋವಿಡ್ ಬಗ್ಗೆ ಹೇಳುವುದಾದರೆ ಜನವರಿ 2020 ರಲ್ಲಿ ಈ ವೈರಸ್ ಕುರಿತು ಸ್ವಲ್ಪ ವಿಷಯ ಗೊತ್ತಾಗಿತ್ತು. ಇದನ್ನು ಸಂಭವನೀಯಗೊಳಿಸುವಂತೆ ಮತ್ತಷ್ಟು ಪುರಾವೆಗಳು ದೊರೆತಾಗ ನಾವು ಅದನ್ನು ನಂಬುತ್ತೇವೆ.

  ಇದೇ ಮಾತು ಧೂಮಪಾನಿಗಳ ವಿಷಯದಲ್ಲೂ ಅನ್ವಯವಾಗುತ್ತದೆ. ಸಾಂಕ್ರಾಮಿಕಕ್ಕೂ ಮುನ್ನ ಧೂಮಪಾನವು ಶ್ವಾಸಕೋಶಗಳಿಗೆ ಒಳ್ಳೆಯದಲ್ಲ ಎಂಬುದು ಸಾಕ್ಷಿ ಇತ್ತು. ಆದರೆ ಹೊಸ ಮಾಹಿತಿಯಂತೆ ಸಂಭವನೀಯತೆಗಳನ್ನು ನವೀಕರಿಸಬಹುದಾಗಿತ್ತು ಆದರೆ ಧೂಮಪಾನವು ರಕ್ಷಣಾತ್ಮಕವಾಗಿದೆ ಎಂಬುದು ವಿಜ್ಞಾನ ತಿಳಿಸಿರುವ ವಿಷಯವಾಗಿತ್ತು.

  ಇದನ್ನೂ ಓದಿ: Climate Change: ಹವಾಮಾನ ಬದಲಾವಣೆಯು ತಿನ್ನುವ ಅನ್ನಕ್ಕೆ ಸಂಚಕಾರ ತರಲಿದೆ; ಅಧ್ಯಯನಗಳು

  ಧೂಮಪಾನಿಗಳ ವಿರೋಧಾಭಾಸದ ಹೆಚ್ಚಿನ ಪತ್ರಿಕೆಗಳನ್ನು ಇತರ ವಿಜ್ಞಾನಿಗಳು ಪರಿಶೀಲಿಸಲಿಲ್ಲ. ಈ ರೀತಿಯ ಹೇಳಿಕೆಗಳನ್ನು ನೀಡಲು ತಂಬಾಕು ಕಂಪನಿಯವರು ಈ ರೀತಿಯ ಸುದ್ದಿಗಳಿಗೆ ಹಣ ನೀಡಿದ್ದರು ಎಂಬುದು ಗೊತ್ತಾದ ಒಡನೆಯೇ ವರದಿಯನ್ನು ಹಿಂತೆಗೆದುಕೊಳ್ಳಲಾಯಿತು.

  ಇದನ್ನೂ ಓದಿ: Weight Loss Tips: ನವರಾತ್ರಿಯಲ್ಲಿ ಉಪವಾಸ ಮಾಡುವವರು ಈ ರೀತಿ ಮಾಡಿದ್ರೆ ದೇಹ ತೂಕ ಇಳಿಸಿಕೊಳ್ಳಬಹುದು..!

  ಇನ್ನು ಈ ರೀತಿಯ ಅಧ್ಯಯನವು ಪತ್ರಿಕೆಗಳಲ್ಲಿ ಸಣ್ಣದಾಗಿ ಮೂಡಿಬಂದಿತ್ತು. ಯಾವುದೇ ಸುದ್ದಿಯನ್ನು ಖಾತ್ರಿಪಡಿಸುವಾಗ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಬೇಕು ಎಂಬ ಅಂಶಕ್ಕೆ ಒತ್ತು ನೀಡಲಾಯಿತು. ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಧೂಮಪಾನ ಮಾಡದವರಿಗಿಂತ ಶೀಘ್ರವಾಗಿ ಮರಣ ಹೊಂದಿದರು. ಧೂಮಪಾನಿಗಳ ವಿರೋಧಾಭಾಸವನ್ನು ವಿಜ್ಞಾನವು ತಪ್ಪಾಗಿ ಗ್ರಹಿಸಲಿಲ್ಲ ಬದಲಿಗೆ ಆಸಕ್ತಿಕರ ಸಂಶೋಧನೆಯಾಗಿ ಅಸಾಧಾರಣ ಕ್ಲೇಮ್‌ಗಳನ್ನು ಉಂಟುಮಾಡಿತು. ಒಟ್ಟಾರೆ ಕೋವಿಡ್ ನಮಗೆ ತಿಳಿಸಿಕೊಟ್ಟಿರುವ ಅಂಶಗಳೆಂದರೆ ಧೂಮಪಾನ, ವಿಟಮಿನ್ ಡಿ, ಜಿಂಕ್, ಬ್ಲೀಚ್, ಗಾರ್ಗ್ಲಿಂಗ್ ಅಯೋಡಿನ್ ಅಥವಾ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಉನ್ನತ ಮಟ್ಟದಲ್ಲಿ ತಿಳಿಸಿಕೊಟ್ಟಿದೆ.
  Published by:Sharath Sharma Kalagaru
  First published: