Explained: ಮತ್ತೆ ಕೊರೊನಾ ಸ್ಫೋಟ ಗ್ಯಾರಂಟಿ? ದೇಶದ ಪ್ರಮುಖ ನಗರಗಳಲ್ಲಿ ಹೆಚ್ಚುತ್ತಿರುವ ಸೋಂಕು

ಈ ಪ್ರಕರಣಗಳ ದಿಢೀರ್‌ ಏರಿಕೆ ಮೂರನೇ ಅಲೆಯನ್ನು ಸೂಚಿಸುತ್ತದೆ ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯುಎಸ್ ಮತ್ತು ಯುರೋಪಿನ (US and Europe) ಹೆಚ್ಚಿನ ಹೊಸ ಕೊರೊನಾ ವೈರಸ್ ( Coronavirus) ಪ್ರಕರಣಗಳು ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟುತ್ತಿದ್ದಂತೆ, ಭಾರತವೂ ಸನ್ನಿಹಿತವಾದ ಉಲ್ಬಣದ ಲಕ್ಷಣಗಳನ್ನು (Detected) ತೋರಿಸಲು ಪ್ರಾರಂಭಿಸಿದೆ. ಭಾರತದಲ್ಲಿ( India) ಮಂಗಳವಾರ 9,000ಕ್ಕೂ ಹೆಚ್ಚು ಹೊಸ ಸೋಂಕುಗಳು ಪತ್ತೆಯಾಗಿದ್ದು ಇದು ಡಿಸೆಂಬರ್ 8ರಿಂದ ವರದಿಯಾದ ಅತ್ಯಧಿಕ ಪ್ರಕರಣಗಳಾಗಿದೆ. ಇನ್ನು, ಬುಧವಾರ 13,500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಮತ್ತಷ್ಟು ಆತಂಕ(Alarming) ಮೂಡಿಸುವಂತೆ ಮಾಡಿದೆ. ಮಹಾರಾಷ್ಟ್ರ, ಗುಜರಾತ್ ಮತ್ತು ದೆಹಲಿಯಲ್ಲಿ ಮೇಲ್ಮುಖ ಪ್ರವೃತ್ತಿಯು ಕನಿಷ್ಠ ಒಂದು ವಾರದಿಂದ ಗಮನಾರ್ಹವಾಗಿದೆ, ಆದರೆ ಈ ಹೆಚ್ಚಳದ ( Increase) ಪ್ರಮಾಣ ಚಿಕ್ಕದಾಗಿದ್ದು ಮತ್ತು ಕೇರಳದಲ್ಲಿ( Kerala) ಇಳಿಮುಖವಾಗುತ್ತಿರುವ ಸಂಖ್ಯೆಗಳಿಂದ ಸರಿದೂಗಿಸಲ್ಪಟ್ಟಿತ್ತು.

ಇದರಿಂದ ಉಲ್ಬಣವು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಗೋಚರಿಸುತ್ತಿರಲಿಲ್ಲ. ಆದರೆ ಅದು ಈಗ ಬದಲಾಗುತ್ತಿದೆ. ದೈನಂದಿನ ಪ್ರಕರಣಗಳ ಎಣಿಕೆಗಳ 7-ದಿನಗಳ ಸರಾಸರಿ ಹೆಚ್ಚಾಗುತ್ತಿದ್ದು, ದೈನಂದಿನ ಏರಿಳಿತಗಳನ್ನು ಸುಗಮಗೊಳಿಸುತ್ತದೆ. ಈ ಹಿನ್ನೆಲೆ ಮಂಗಳವಾರ 10 ದಿನಗಳ ನಂತರ ದೇಶದಲ್ಲಿ ಸರಾಸರಿ 7,000 ಪ್ರಕರಣಗಳನ್ನು ದಾಟಿದೆ.

ಇದನ್ನೂ ಓದಿ: Covid-19: ಮೂರನೇ ಅಲೆ‌ ಭಯದ ನಡುವೆ 3 ಸ್ವದೇಶಿ ಡೋಸ್​​ಗಳಿಗೆ CDSCO ಒಪ್ಪಿಗೆ

ದೆಹಲಿಯಲ್ಲಿ ತೀವ್ರ ಹೆಚ್ಚಳ..!
ಸಾಮಾನ್ಯವಾಗಿ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ದೆಹಲಿ ಮತ್ತು ಮುಂಬೈನಲ್ಲಿ ತೀಕ್ಷ್ಣವಾದ ತಿರುವು ನಡೆಯುತ್ತಿದೆ. 8 ತಿಂಗಳ ನಂತರ ದೆಹಲಿ ಮತ್ತೆ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡುವ ಮೊದಲ ಐದು ರಾಜ್ಯಗಳಲ್ಲಿ ಒಂದಾಗಿದೆ. ಬುಧವಾರ 923 ಪ್ರಕರಣಗಳನ್ನು ವರದಿ ಮಾಡಿದ್ದು, ಇದು ಹಿಂದಿನ ದಿನದ ಎಣಿಕೆಗಿಂತ 2 ಪಟ್ಟು ಹೆಚ್ಚು ಎಂಬುದು ಇಲ್ಲಿ ಗಮನಾರ್ಹವಾಗಿದೆ. ಕಳೆದ ಎರಡು ವಾರಗಳಲ್ಲಿ, ಕೋವಿಡ್ ಪಾಸಿಟಿವಿಟಿ ದರವು ರಾಷ್ಟ್ರ ರಾಜಧಾನಿಯಲ್ಲಿ ಏರುತ್ತಿದೆ ಮತ್ತು ಬುಧವಾರ ಶೇಕಡಾ 1.29ಕ್ಕೆ ಜಿಗಿದಿದೆ.

ಮುಂಬೈನಲ್ಲೂ ಏರಿಕೆ
ಮುಂಬೈ ಇನ್ನೂ ದೊಡ್ಡ ಏರಿಕೆಗೆ ಸಾಕ್ಷಿಯಾಗಿದೆ. ಬುಧವಾರ, ಮಹಾ ನಗರ 2,510 ಹೊಸ ಪ್ರಕರಣಗಳನ್ನು ವರದಿ ಮಾಡಿದೆ, ಇದು ಆರು ತಿಂಗಳಿನಿಂದ ಅತಿ ಹೆಚ್ಚು ಪ್ರಕರಣಗಳನ್ನು ಪತ್ತೆಹಚ್ಚುತ್ತಿರುವ ಸಂಪೂರ್ಣ ಕೇರಳ ರಾಜ್ಯಕ್ಕಿಂತ ಹೆಚ್ಚಾಗಿದೆ ಎಂಬುದು ಇಲ್ಲಿ ಪ್ರಮುಖ ಅಂಶ. ಮುಂಬೈನಲ್ಲಿ ಪ್ರತಿದಿನ ಸುಮಾರು 51,000 ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಅದರಲ್ಲಿ ಸುಮಾರು 2,200 ವರದಿಗಳು ಸಕಾರಾತ್ಮಕವಾಗಿವೆ ಎಂದು ಮುಂಬೈನಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ಅಲ್ಲದೆ, ಪಾಸಿಟಿವಿಟಿ ದರ ಶೇ. 4 ರಷ್ಟಿದ್ದು, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ಆತಂಕಕ್ಕೆ ಕಾರಣವಾಗಿದೆ ಎಂದೂ ಹೇಳಿದ್ದಾರೆ. ಹಾಗೂ, ಮಹಾರಾಷ್ಟ್ರದ ಜನತೆ ಕೋವಿಡ್ - 19 ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ. ನಮ್ಮ ಸರ್ಕಾರ ಹೆಚ್ಚು ನಿರ್ಬಂಧ ವಿಧಿಸುತ್ತಿದೆ ಎಂದೂ ಪ್ರತಿಕ್ರಿಯೆ ನೀಡಿದ್ದಾರೆ.

ಓಮೈಕ್ರಾನ್ ರೂಪಾಂತರ ಕಾರಣ
ಪ್ರಪಂಚದ ಬೇರೆಡೆ ಇರುವ ಟ್ರೆಂಡ್‌ಗಳಿಗೆ ಅನುಗುಣವಾಗಿ ಈ ಉಲ್ಬಣವು ಓಮೈಕ್ರಾನ್ ರೂಪಾಂತರಕ್ಕೆ ಕಾರಣವೆಂದು ಹೇಳಬಹುದು. ಆದರೂ, ದೃಢಪಡಿಸಿದ ಓಮಿಕ್ರಾನ್ ಸೋಂಕುಗಳ ನಿಜವಾದ ಸಂಖ್ಯೆಯು ಇನ್ನೂ 1,000ಕ್ಕಿಂತ ಕಡಿಮೆಯಿದೆ. ಆದರೆ ಯಾವುದೇ ನಿರ್ದಿಷ್ಟ ರೂಪಾಂತರದ ಪತ್ತೆಗೆ ಸಾಮಾನ್ಯವಾಗಿ ಜೀನೋಮ್ ಅನುಕ್ರಮದ ಅಗತ್ಯವಿರುತ್ತದೆ ಮತ್ತು ಅದು ಸಮಯ ತೆಗೆದುಕೊಳ್ಳುತ್ತದೆ. ಇದಲ್ಲದೆ, ಕೊರೊನಾ ಪಾಸಿಟಿವ್‌ ಪ್ರಕರಣಗಳ ಒಂದು ಸಣ್ಣ ಭಾಗವನ್ನು ಮಾತ್ರ ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುತ್ತದೆ. ಈ ಹಿನ್ನೆಲೆ, ಭಾರತದಲ್ಲಿನ ಓಮಿಕ್ರಾನ್ ಪ್ರಕರಣಗಳ ನೈಜ ಸಂಖ್ಯೆಯು ವರದಿಯಾದ ಸಂಖ್ಯೆಗಿಂತ ಹಲವಾರು ಪಟ್ಟು ಹೆಚ್ಚು ಎಂದು ನಿರೀಕ್ಷಿಸಲಾಗಿದೆ.

 ರಾಜ್ಯದಲ್ಲಿ ಮೂರನೇ ಅಲೆಯ ಸೂಚನೆ..?
ಬೆಂಗಳೂರು ನಗರದಲ್ಲಿ ಬುಧವಾರ 400 ಹೊಸ ಕೋವಿಡ್ -19 ಸೋಂಕುಗಳು ದಾಖಲಾಗಿವೆ, ಮಂಗಳವಾರದ 269 ಪ್ರಕರಣಗಳಿಗೆ ಹೋಲಿಸಿದರೆ, ಇದು ಸುಮಾರು 50% ಏರಿಕೆಯಾಗಿದೆ. ಇನ್ನೊಂದೆಡೆ, ಕರ್ನಾಟಕದಲ್ಲಿ ದೈನಂದಿನ ಸೋಂಕಿನ ಸಂಖ್ಯೆಯು ಒಂದು ದಿನದಲ್ಲಿ 356 ರಿಂದ 566 ಕ್ಕೆ ಏರಿತು. ಈ ಹೆಚ್ಚಳವು ತೀಕ್ಷ್ಣವಾಗಿದೆ, ಅಂದರೆ ಸುಮಾರು 60% ಏರಿಕೆ.

ಆದರೂ ಆರೋಗ್ಯ ಅಧಿಕಾರಿಗಳು ಮಾತ್ರ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಇದು ಶೇ. 15ಕ್ಕಿಂತ ಹೆಚ್ಚಿಲ್ಲ ಎಂದು ಹೇಳಿದರು. ಹಾಗೂ, ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸೋಂಕಿನ ತೀವ್ರತೆ ಕಡಿಮೆಯಾಗಿದೆ ಎಂದು ಆತಂಕ ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಈ ಪ್ರಕರಣಗಳ ದಿಢೀರ್‌ ಏರಿಕೆ ಮೂರನೇ ಅಲೆಯನ್ನು ಸೂಚಿಸುತ್ತದೆ ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರಿನ ದೈನಂದಿನ ಸೋಂಕುಗಳು ಕ್ರಮವಾಗಿ ಸುಮಾರು 3 ಮತ್ತು 4 ತಿಂಗಳುಗಳಲ್ಲಿ ವರದಿಯಾದ ಅತಿ ಹೆಚ್ಚು ಎಂಬುದು ಸಹ ಇಲ್ಲಿ ಗಮನಿಸಬೇಕಾದ ಅಂಶ. ರಾಜ್ಯದಲ್ಲಿ ಈ ಹಿಂದೆ ಅಕ್ಟೋಬರ್ 3 ರಂದು 664 ಮತ್ತು ಬೆಂಗಳೂರಿನಲ್ಲಿ ಸೆಪ್ಟೆಂಬರ್ 15 ರಂದು 462 ದೈನಂದಿನ ಸೋಂಕುಗಳು ದಾಖಲಾಗಿದ್ದವು.

ಬೆಂಗಳೂರಿಗರಲ್ಲೂ ಇರಲಿ ಕಾಳಜಿ..!
ಕಳೆದ ಒಂದು ವಾರದಲ್ಲಿ ಬೆಂಗಳೂರು ನಗರದಲ್ಲಿ ಕೋವಿಡ್ ಸಂಖ್ಯೆ ವಿಪರೀತವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಸಿದ್ದಾರೆ . ಡಿಸೆಂಬರ್ 25 ರಂದು 152, ಡಿಸೆಂಬರ್‌ 26ರಂದು 248 ಮತ್ತು ಡಿಸೆಂಬರ್ 27 ರಂದು 172 ಪ್ರಕರಣಗಳು ವರದಿಯಾಗಿದ್ದವು ಎಂದೂ ಹೇಳಿದರು. ಇನ್ನು, ಬೆಂಗಳೂರು ಪೂರ್ವ, ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಹೆಚ್ಚು ಸೋಂಕುಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಕೋಲ್ಕತ್ತದಲ್ಲೂ ಏರಿಕೆ..!
ಪಶ್ಚಿಮ ಬಂಗಾಳದಲ್ಲೂ ಪ್ರಕರಣಗಳು ಹೆಚ್ಚಾಗತೊಡಗಿವೆ. ಬುಧವಾರ, ಜುಲೈ 4 ರಿಂದ ರಾಜ್ಯದಲ್ಲಿ ಮೊದಲ ಬಾರಿಗೆ 1,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಕಳೆದೆರಡು ದಿನಗಳಲ್ಲಿ, ಈ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ. ಮಂಗಳವಾರ ಪಶ್ಚಿಮ ಬಂಗಾಳದಲ್ಲಿ 752 ಪ್ರಕರಣಗಳು ವರದಿಯಾಗಿದ್ದರೆ, ಈ ಪೈಕಿ ಅಲ್ಲಿನ ರಾಜಧಾನಿ ಕೋಲ್ಕತ್ತದಲ್ಲೇ 380ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಕೆಲವು ದಿನಗಳ ಹಿಂದೆ 100 ಪ್ರಕರಣ ದಾಟಿದ್ದ ಮಹಾನಗರದಲ್ಲಿ ಇದು 3 ಪಟ್ಟಿಗಿಂತ ಹೆಚ್ಚು ಏರಿಕೆಯೇ ಸರಿ. ಕೆಲ ದಿನಗಳ ಹಿಂದಷ್ಟೇ ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 200 ದಾಟಿತ್ತು.

ಇದನ್ನೂ ಓದಿ: Explained: ಕೊರೊನಾ ರೂಪಾಂತರಗಳನ್ನು ಸದೆಬಡೆಯಲು ಭಾರತ ರೆಡಿಯಾಗಿದೆ, ಏನೇನು ತಯಾರಿ ನಡೆದಿದೆ ನೋಡಿ...

ಹಬ್ಬದ ಸಂಭ್ರಮ
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು, “ನಾವು ಮುಂದಿನ ಕೆಲವು ದಿನಗಳವರೆಗೆ ಕಾದು ನೋಡಬೇಕಾಗಿದೆ. ಆದರೆ ಜನರು ಅಳವಡಿಸಿಕೊಳ್ಳಲು ಪ್ರಾರಂಭಿಸಿದ ಸಡಿಲತೆಯ ಮಟ್ಟ ಮತ್ತು ಹಬ್ಬದ ಸಂಭ್ರಮವನ್ನು ಗಮನಿಸಿದರೆ ಇದು ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಹೆಚ್ಚಳದ ಬಗ್ಗೆ ಹೇಳಿದರು. ವಾರಗಳವರೆಗೆ 2%ಕ್ಕಿಂತ ಕಡಿಮೆಯಿದ್ದ ಸಕಾರಾತ್ಮಕ ದರವು, ಮಂಗಳವಾರ ಸುಮಾರು 2.4%ಕ್ಕೆ ಏರಿದೆ. ಕೋಲ್ಕತ್ತ ನಗರದಾದ್ಯಂತ ಅನೇಕ ಲ್ಯಾಬ್‌ಗಳು ಸಕಾರಾತ್ಮಕತೆಯ ದರದಲ್ಲಿ ಹಠಾತ್ ಜಿಗಿತವನ್ನು ಕಾಣುತ್ತಿವೆ ಮತ್ತು ಹಲವಾರು ಕುಟುಂಬಗಳಲ್ಲಿ ಒಟ್ಟಿಗೆ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಳ್ಳುತ್ತಿದೆ ಎಂದೂ ಹೇಳಿದರು.

ಕೋಲ್ಕತ್ತಾ ಜೊತೆಗೆ, ಉತ್ತರ 24 ಪರಗಣ ಜಿಲ್ಲೆಯಲ್ಲೂ ಸಹ ಧನಾತ್ಮಕ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಾಣುತ್ತಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಸಹ ಇದೇ ರೀತಿಯ ಟ್ರೆಂಡ್‌ಗಳು ಕಂಡುಬರುತ್ತಿವೆ.


Published by:vanithasanjevani vanithasanjevani
First published: