Booster Dose: ಕೋವಿಡ್-19 ಎರಡು ಡೋಸ್ ಗಳಿಗಿಂತಲೂ ಬೂಸ್ಟರ್ ಡೋಸ್ ನ ಅಡ್ಡಪರಿಣಾಮ ಪ್ರಬಲ! ಈ ಬಗ್ಗೆ ಸಂಶೋಧನೆ ಹೇಳಿದ್ದು ಹೀಗೆ

ಕೋವಿಡ್-19 ಬೂಸ್ಟರ್ ಡೋಸ್ ನಿಂದಾಗುವ ಅಡ್ಡಪರಿಣಾಮಗಳು ಪ್ರಬಲ ಲಸಿಕೆಯ ಆರಂಭಿಕ ಡೋಸ್ ಗಳಿಗಿಂತಲೂ ಕೋವಿಡ್-19 ಬೂಸ್ಟರ್ ಡೋಸ್ ನಿಂದಾಗುವ ಅಡ್ಡಪರಿಣಾಮಗಳು ಪ್ರಬಲವಾಗಿವೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ ಎಂದು ಜಾಮಾ ನೆಟ್‌ವರ್ಕ್ ಓಪನ್ ನಲ್ಲಿ ಪ್ರಕಟವಾದ ಹೊಸ ಅಧ್ಯಯನ ತಿಳಿಸಿದೆ.

ಬೂಸ್ಟರ್ ಡೋಸ್

ಬೂಸ್ಟರ್ ಡೋಸ್

  • Share this:
ಈ ಕೋವಿಡ್-19 (Covide-19) ಲಸಿಕೆಗಳು (Vaccine) ಜನರನ್ನು (Person) ತೀವ್ರ ಅನಾರೋಗ್ಯ (Illness) ಮತ್ತು ಸಾವಿನಿಂದ (Death) ರಕ್ಷಿಸಬಹುದಾದರೂ, ಆರಂಭಿಕ ಎರಡು ಡೋಸ್ ಗಳ (Dose) ನಂತರ ಇದರಿಂದ ಒದಗುವ ರಕ್ಷಣೆಯು (Protection) ತಿಂಗಳುಗಳು (Months) ಕಳೆದಂತೆ ಕ್ಷೀಣಿಸಲು ಪ್ರಾರಂಭಿಸುತ್ತದೆ ಎನ್ನುವುದು ಅಷ್ಟೇ ಸತ್ಯವಾದ ವಿಷಯ. ಅದಕ್ಕಾಗಿ ನಮ್ಮ ದೇಹದಲ್ಲಿನ (Body) ಆ ರೋಗನಿರೋಧಕ ಶಕ್ತಿಯನ್ನು(Immunity Power) ಹಾಗೆಯೇ ಕಾಪಾಡಿಕೊಳ್ಳಲು ಬೂಸ್ಟರ್ ಡೋಸ್ (Booster Dose) ಅನ್ನು ನೀಡಲಾಗುತ್ತಿದೆ. ಆದರೆ ಇದು ಕೆಲವು ಅಡ್ಡಪರಿಣಾಮಗಳನ್ನು (Side Effects) ಸಹ ಹೊಂದಿದೆ ಎಂದು ತಿಳಿದು ಬಂದಿದೆ.

ಕೆಲವು ಜನರು ಈ ಲಸಿಕೆಗಳಿಂದ ಅಡ್ಡಪರಿಣಾಮಗಳನ್ನು ಹೊಂದಿರುತ್ತಾರೆ, ಇದು ಅವರ ದೇಹವು ರಕ್ಷಣೆಯನ್ನು ನಿರ್ಮಿಸುತ್ತಿದೆ ಎಂಬುದರ ಸಾಮಾನ್ಯ ಸಂಕೇತಗಳಾಗಿವೆ. ಈ ಅಡ್ಡಪರಿಣಾಮಗಳು ದೈನಂದಿನ ಚಟುವಟಿಕೆಗಳನ್ನು ಮಾಡುವ ಅವರ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು, ಆದರೆ ಅವು ಕೆಲವೇ ದಿನಗಳಲ್ಲಿ ವಾಸಿಯಾಗುತ್ತವೆ. ಕೆಲವು ಜನರಿಗೆ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ ಮತ್ತು ಅಲರ್ಜಿಯ ಪ್ರತಿಕ್ರಿಯೆಗಳು ವಿರಳ.

ಕೋವಿಡ್-19 ಬೂಸ್ಟರ್ ಡೋಸ್ ನಿಂದಾಗುವ ಅಡ್ಡಪರಿಣಾಮಗಳು ಪ್ರಬಲ

ಲಸಿಕೆಯ ಆರಂಭಿಕ ಡೋಸ್ ಗಳಿಗಿಂತಲೂ ಕೋವಿಡ್-19 ಬೂಸ್ಟರ್ ಡೋಸ್ ನಿಂದಾಗುವ ಅಡ್ಡಪರಿಣಾಮಗಳು ಪ್ರಬಲವಾಗಿವೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ ಎಂದು ಜಾಮಾ ನೆಟ್‌ವರ್ಕ್ ಓಪನ್ ನಲ್ಲಿ ಪ್ರಕಟವಾದ ಹೊಸ ಅಧ್ಯಯನ ತಿಳಿಸಿದೆ.

ಇದನ್ನೂ ಓದಿ:  Explained: ಮತ್ತೆ ಹೊಸ ರೂಪದಲ್ಲಿ ಬಂತಾ ಒಮೈಕ್ರಾನ್‌? ಭಾರತದಲ್ಲಿ ಮತ್ತಷ್ಟು ಉಲ್ಬಣಿಸುತ್ತಾ ಕೋವಿಡ್?

ಈ ಅಧ್ಯಯನವನ್ನು ಮಲ್ಟಿಸ್ಟೇಟ್ ಮೇಯೋ ಕ್ಲಿನಿಕ್ ಎಂಟರ್ಪ್ರೈಸ್ ನಿಂದ ಡಿಸೆಂಬರ್ 2020 ರಿಂದ ಅಕ್ಟೋಬರ್ 2021 ರವರೆಗೆ ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್ (ಇಎಚ್ಆರ್) ಡೇಟಾವನ್ನು ಬಳಸಿಕೊಂಡು ನಡೆಸಲಾಯಿತು. ಇದರಲ್ಲಿ ಭಾಗವಹಿಸಿದವರಲ್ಲಿ 3 ಡೋಸ್ ಕೋವಿಡ್-19 ಎಂಆರ್‌ಎನ್‌ಎ ಲಸಿಕೆಗಳನ್ನು ಪಡೆದ 47,999 ವ್ಯಕ್ತಿಗಳು ಸೇರಿದ್ದಾರೆ. ಸೆಪ್ಟೆಂಬರ್ ನಿಂದ ನವೆಂಬರ್ 2021 ರವರೆಗೆ ಡೇಟಾವನ್ನು ವಿಶ್ಲೇಷಿಸಲಾಗಿದೆ. ಆಯಾಸ, ವಾಕರಿಕೆ ಮತ್ತು ತಲೆನೋವಿನಂತಹ ಕಡಿಮೆ ತೀವ್ರತೆಯ ಪ್ರತಿಕೂಲ ಘಟನೆಗಳಿಗೆ ಗಮನಾರ್ಹವಾಗಿ ಹೆಚ್ಚಿದ ವರದಿ ಕಂಡು ಬಂದಿದೆ.

ಅಡ್ಡ ಪರಿಣಾಮಗಳ ವಿಧಗಳು ಇಲ್ಲಿವೆ ನೋಡಿ

ಕೋವಿಡ್-19 ಗಾಗಿ ಬೂಸ್ಟರ್ ಡೋಸ್ ಪಡೆದ ನಂತರ, ನೀವು ಚುಚ್ಚುಮದ್ದನ್ನು ಪಡೆದ ಸ್ಥಳದಲ್ಲಿ ನೋವು, ಊದಿಕೊಂಡ ತೋಳಿನಂತಹ ಕೆಲವು ತಾತ್ಕಾಲಿಕ ರೋಗಲಕ್ಷಣಗಳನ್ನು ನೀವು ಅನುಭವಿಸಬಹುದು. ನಿಮಗೆ ಜ್ವರವು ಬರಬಹುದು ಮತ್ತು ಒಂದು ಅಥವಾ ಎರಡು ದಿನಗಳವರೆಗೆ ಮೈ ಕೈ ನೋವುಗಳು, ತಲೆನೋವು ಮತ್ತು ತುಂಬಾನೇ ಆಯಾಸವನ್ನು ಅನುಭವಿಸಬಹುದು. ಶೀತ ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳು ಸಹ ಸಂಭವಿಸಬಹುದು. ವಾಕರಿಕೆ, ಅತಿಸಾರ ಮತ್ತು ವಾಂತಿ ಇವೆಲ್ಲವೂ ಬೂಸ್ಟರ್ ಡೋಸ್ ನಿಂದಾಗುವ ಸಾಮಾನ್ಯ ಅಡ್ಡಪರಿಣಾಮಗಳಾಗಿವೆ.

ಈ ರೋಗಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನೀವು ಅನಾರೋಗ್ಯದಿಂದ ಬಳಲುತ್ತಿದ್ದೀರಿ ಎಂದು ಅರ್ಥವಲ್ಲ. ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಲಸಿಕೆಯ ಡೋಸ್ ಗೆ ಪ್ರತಿಕ್ರಿಯಿಸುತ್ತಿದೆ ಮತ್ತು ಕರೋನ ವೈರಸ್ ವಿರುದ್ಧ ರಕ್ಷಣೆಯನ್ನು ನಿರ್ಮಿಸುತ್ತಿದೆ ಎಂದು ಇದು ಅರ್ಥೈಸುತ್ತದೆ.

ಬೂಸ್ಟರ್ ಡೋಸ್ ಪಡೆದ ನಂತರ ಹೀಗೇಕೆ ಆಗುತ್ತದೆ?

ಇದು ನಿಖರವಾಗಿ ಅಡ್ಡ ಪರಿಣಾಮಗಳನ್ನು ಉಂಟು ಮಾಡುವ ಲಸಿಕೆಯಲ್ಲ, ಬದಲಿಗೆ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಲಸಿಕೆಗೆ ಪ್ರತಿಕ್ರಿಯಿಸುವ ಸೂಚನೆಯಾಗಿದೆ. ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಸಕ್ರಿಯವಾಗಿದೆ ಮತ್ತು ನಿಜವಾದ ರೋಗದಿಂದ ಅಥವಾ ಲಸಿಕೆಗೆ ಪ್ರತಿಕ್ರಿಯಿಸುವ ಸೋಂಕಿನ ವಿರುದ್ಧ ಹೋರಾಡುತ್ತಿದೆ ಎಂಬುದರ ಸಂಕೇತಗಳಾಗಿವೆ.

ಇದನ್ನೂ ಓದಿ:  Explained: ವಿದೇಶಗಳನ್ನು ಕಂಗೆಡಿಸುತ್ತಿರುವ ಮಂಕಿಪಾಕ್ಸ್! ಏನಿದು ಕಾಯಿಲೆ? ಇದರ ಲಕ್ಷಣಗಳೇನು?

ತಜ್ಞರ ಪ್ರಕಾರ, ಬೂಸ್ಟರ್ ಡೋಸ್ ನ ಮೂಲಕ ಉಂಟಾಗುವ ಅಡ್ಡಪರಿಣಾಮಗಳು ಬಲವಾಗಿರಬಹುದು, ಏಕೆಂದರೆ ಪ್ರತಿರಕ್ಷಣಾ ವ್ಯವಸ್ಥೆಯು ನಂತರದ ಲಸಿಕೆ ಡೋಸ್ ಗಳಿಗೆ ಹೆಚ್ಚು ಬಲವಾಗಿ ಪ್ರತಿಕ್ರಿಯಿಸುತ್ತದೆ.

ಬೂಸ್ಟರ್ ನಂತರದ ರೋಗಲಕ್ಷಣಗಳು ಕೋವಿಡ್-19 ರ ರೋಗಲಕ್ಷಣಗಳನ್ನು ಹೋಲುತ್ತವೆ ಎಂಬುದನ್ನು ಗಮನಿಸುವುದು ಯೋಗ್ಯವಾಗಿದೆ. ಏಕೆಂದರೆ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಕೋವಿಡ್-19 ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದರ್ಥ.

ಈ ಅಡ್ಡಪರಿಣಾಮಗಳನ್ನು ನಿವಾರಿಸುವುದು ಹೇಗೆ?

ಈ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು, ನೀವು ಸಮತೋಲಿತ ಆಹಾರವನ್ನು ಸೇವಿಸಿ, ಹೈಡ್ರೇಟ್ ಆಗಿರಿ ಮತ್ತು ಸಾಕಷ್ಟು ನಿದ್ರೆ ಮಾಡಿ ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಜನರು ತಮ್ಮ ಬೂಸ್ಟರ್ ಡೋಸ್ ಪಡೆದ ನಂತರ ಮದ್ಯಪಾನ, ಧೂಮಪಾನ ಮತ್ತು ಜಂಕ್ ಫುಡ್ ನಿಂದ ದೂರವಿರಲು ಸೂಚಿಸಲಾಗಿದೆ.

ಲಸಿಕೆ ಪಡೆದ ನಂತರ ಅನುಭವಿಸುವ ಯಾವುದೇ ನೋವು ಮತ್ತು ಅಸ್ವಸ್ಥತೆಗೆ ಯಾವುದೇ ಬೇರೆ ಔಷಧಿಯನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.

ತೀವ್ರ ಅಲರ್ಜಿಯ ಪ್ರತಿಕ್ರಿಯೆಗಳು

ಕೋವಿಡ್-19 ಲಸಿಕೆ ಸೇರಿದಂತೆ ಯಾವುದೇ ಲಸಿಕೆಯ ನಂತರ ದೀರ್ಘಕಾಲೀನ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದಾದ ಪ್ರತಿಕೂಲ ಪರಿಣಾಮಗಳು ಅತ್ಯಂತ ಅಸಾಮಾನ್ಯವಾಗಿವೆ. ಪ್ರತಿಕೂಲ ಪರಿಣಾಮಗಳು ಸಂಭವಿಸಿದರೆ, ಅವು ಸಾಮಾನ್ಯವಾಗಿ ಲಸಿಕೆ ಡೋಸ್ ಪಡೆದ ಆರು ವಾರಗಳಲ್ಲಿ ಸಂಭವಿಸುತ್ತವೆ.

ತೀವ್ರವಾದ ಅಲರ್ಜಿಯ ಪ್ರತಿಕ್ರಿಯೆಯು ಉಸಿರಾಟದಲ್ಲಿ ತೊಂದರೆ, ರಕ್ತದೊತ್ತಡದಲ್ಲಿ ಕುಸಿತ, ಗಂಟಲಿನ ಊತ ಅಥವಾ ದದ್ದುಗಳಿಗೆ ಕಾರಣವಾಗಬಹುದು.

ನಿರ್ದಿಷ್ಟ ಕೋವಿಡ್-19 ಲಸಿಕೆಯನ್ನು ಪಡೆದ ನಂತರ ತೀವ್ರ ಅಲರ್ಜಿಯ ಪ್ರತಿಕ್ರಿಯೆ ಹೊಂದಿರುವ ಯಾರಾದರೂ ಅದೇ ಕೋವಿಡ್-19 ಲಸಿಕೆಯ ಮತ್ತೊಂದು ಡೋಸ್ ಅನ್ನು ಪಡೆಯಬಾರದು.

ಕೋವಿಡ್-19 ಬೂಸ್ಟರ್ ಡೋಸ್ ಯಾವಾಗ ತೆಗೆದುಕೊಳ್ಳಬೇಕು?

ಎರಡನೇ ಡೋಸ್ ತೆಗೆದುಕೊಂಡ ಒಂಬತ್ತು ತಿಂಗಳ ನಂತರ ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದು. ಇತ್ತೀಚಿನ ಅಪ್ಡೇಟ್ ನಲ್ಲಿ ವಿದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿರುವ ನಾಗರಿಕರು ಎರಡನೇ ಡೋಸ್ ನಂತರ ಮೂರು ತಿಂಗಳ ನಂತರ ಬೂಸ್ಟರ್ ಡೋಸ್ ಅನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಭಾರತ ಸರ್ಕಾರ ಹೇಳಿದೆ.

ಇದನ್ನೂ ಓದಿ: Explained: ಫ್ಯಾಟ್ ಸರ್ಜರಿ ಎಂದರೇನು? ಇದು ಕೊಬ್ಬು ಕರಗಿಸುತ್ತಾ ಅಥವಾ ಪ್ರಾಣವನ್ನೇ ತೆಗೆಯುತ್ತಾ?

ಇತರ ದೇಶಗಳು ವಿಧಿಸಿದ ಅಂತಹ ಅವಶ್ಯಕತೆಗಳನ್ನು ಪೂರೈಸಬೇಕಾದ ಅಂತರರಾಷ್ಟ್ರೀಯ ಪ್ರಯಾಣಿಕರ ಅನುಕೂಲಕ್ಕಾಗಿ ಈ ಘೋಷಣೆಯನ್ನು ಮಾಡಲಾಗಿದೆ. ಹೊಸ ನಿಯಮಗಳ ಅಡಿಯಲ್ಲಿ ಜನರು ತಮ್ಮ ಮೂರನೇ ಡೋಸ್ ಗಳನ್ನು ಕೋವಿನ್ ಪ್ಲಾಟ್‌ಫಾರ್ಮ್ ನಲ್ಲಿ ಕಾಯ್ದಿರಿಸಬಹುದು.
Published by:Ashwini Prabhu
First published: