• ಹೋಂ
  • »
  • ನ್ಯೂಸ್
  • »
  • Explained
  • »
  • Ayman al-Zawahiri: ಅಲ್ ಖೈದಾ ಮುಖ್ಯಸ್ಥ ಜವಾಹಿರಿಯನ್ನೇ ಗುರಿ ಇಟ್ಟು ಕೊಂದಿದ್ದು ಹೇಗೆ ಅಮೇರಿಕಾ?

Ayman al-Zawahiri: ಅಲ್ ಖೈದಾ ಮುಖ್ಯಸ್ಥ ಜವಾಹಿರಿಯನ್ನೇ ಗುರಿ ಇಟ್ಟು ಕೊಂದಿದ್ದು ಹೇಗೆ ಅಮೇರಿಕಾ?

ಐಮನ್ ಅಲ್ ಜವಾಹಿರಿ ಮನೆ

ಐಮನ್ ಅಲ್ ಜವಾಹಿರಿ ಮನೆ

ಎಂದಿನಂತೆ ಜುಲೈ 31 ರಂದು ಸೂರ್ಯೋದಯವಾಗಿ ಹೆಚ್ಚು ಕಡಿಮೆ ಅರ್ಧ ಗಂಟೆ ಆಗಿ ಹೋಗಿತ್ತು. ಕಾಬೂಲ್ ಪಟ್ಟಣದ ಹೆಚ್ಚು ಜನವಸತಿಯಿಲ್ಲದ ಪ್ರದೇಶದಲ್ಲಿದ್ದ ವಸತಿ ಕಟ್ಟಡವೊಂದರಲ್ಲಿ ನಿತ್ಯ ದಿನಚರಿಯಂತೆ ಕಾಯಕಗಳ ಮುಗಿಸಿ ಬಾಲ್ಕನಿಗೆಂದು ಪ್ರಸ್ತುತ ಅಲ್ ಖೈದಾ ಆತಂಕಿ ಸಂಘಟನೆಯ ಮುಖ್ಯಸ್ಥನಾಗಿದ್ದ ಅಲ್ ಜವಾಹಿರಿ ಕಾಲಿಡುತ್ತಾನೆ. ಅದು ಅವನ ಎಂದಿನಂತೆಯ ನಿತ್ಯದ ದಿನಚರಿ. ಆದರೆ, ಅವನಿಗೆ ಗೊತ್ತಿರಲಿಲ್ಲ ಇದು ಅವನು ತನ್ನ ಜೀವನದಲ್ಲಿ ನೋಡುತ್ತಿರುವ ಕಟ್ಟ ಕಡೆಯ ಸೂರ್ಯೋದಯ ಎಂಬ ವಿಚಾರ.

ಮುಂದೆ ಓದಿ ...
  • Share this:

ಎಂದಿನಂತೆ ಜುಲೈ 31 ರಂದು ಸೂರ್ಯೋದಯವಾಗಿ ಹೆಚ್ಚು ಕಡಿಮೆ ಅರ್ಧ ಗಂಟೆ ಆಗಿ ಹೋಗಿತ್ತು. ಕಾಬೂಲ್ (Kabul) ಪಟ್ಟಣದ ಹೆಚ್ಚು ಜನವಸತಿಯಿಲ್ಲದ ಪ್ರದೇಶದಲ್ಲಿದ್ದ ವಸತಿ ಕಟ್ಟಡವೊಂದರಲ್ಲಿ ನಿತ್ಯ ದಿನಚರಿಯಂತೆ ಕಾಯಕಗಳ ಮುಗಿಸಿ ಬಾಲ್ಕನಿಗೆಂದು ಪ್ರಸ್ತುತ ಅಲ್ ಖೈದಾ (Al Qaeda) ಆತಂಕಿ ಸಂಘಟನೆಯ ಮುಖ್ಯಸ್ಥನಾಗಿದ್ದ ಅಲ್ ಜವಾಹಿರಿ (Al Zawahiri) ಕಾಲಿಡುತ್ತಾನೆ. ಅದು ಅವನ ಎಂದಿನಂತೆಯ ನಿತ್ಯದ ದಿನಚರಿ. ಆದರೆ, ಅವನಿಗೆ ಗೊತ್ತಿರಲಿಲ್ಲ ಇದು ಅವನು ತನ್ನ ಜೀವನದಲ್ಲಿ ನೋಡುತ್ತಿರುವ ಕಟ್ಟ ಕಡೆಯ ಸೂರ್ಯೋದಯ ಎಂಬ ವಿಚಾರ. ಥಟ್ಟನೆ ಡ್ರೋನ್ (Drone) ನಿರ್ದಿಷ್ಟ ಗುರಿ ಆಧರಿಸಿ ಅವನು ಉಪಸ್ಥಿತವಿದ್ದ ಬಾಲ್ಕನಿಯ ಮೇಲೆ ಸ್ಫೋಟಗೊಂಡೇ ಬಿಡುತ್ತವೆ. ಏನಾಗುತ್ತಿದೆ ಅನ್ನುವಷ್ಟರಲ್ಲೇ ಜವಾಹಿರಿಯ ಪ್ರಾಣ ಹಾರಿ ಹೋಗಿತ್ತೆನ್ನಬಹುದು.


ಆದರೆ, ಅವನ ಹೆಂಡತಿ ಹಾಗೂ ಮಕ್ಕಳು ಮನೆಯ ಒಳಗೆ ಸುರಕ್ಷಿತವಾಗಿದ್ದರು. ಅಲ್ಲದೆ, ಪಕ್ಕದ ನೆರೆಹೊರೆಯಲ್ಲೂ ಯಾವುದೇ ರೀತಿಯ ಸಾವು-ನೋವು ಸಂಭವಿಸಲಿಲ್ಲ. ಅಂದರೆ ಈ ಬಾರಿ ಅಮೆರಿಕವು ಅಷ್ಟು ಕರಾರುವಕ್ಕಾಗಿ ತಮ್ಮ ಗುರಿಯನ್ನು ಹೊಡೆದುರುಳಿಸಿದ್ದವು ಅದು ಕೂಡ ಯಾವುದೇ ಸದ್ದು ಗದ್ದಲಗಳಿಲ್ಲದೆ. ಏಕೆಂದರೆ ಈ ಹಿಂದೆ ಕೆಲವೊಮ್ಮೆ ಅಮೆರಿಕ ದಾಳಿ ಮಾಡಿದ್ದ ಕೆಲ ಸಂದರ್ಭಗಳಲ್ಲಿ ನಾಗರಿಕರ ಪ್ರಾಣಗಳು ಹೋಗಿದ್ದವು. ಹಾಗಾಗಿ ಅಮೆರಿಕದ ಮೇಲೆ ಈ ಬಾರಿ ತಾವು ಯಾವುದೇ ತಪ್ಪು ಮಾಡಬಾರದೆಂಬ ಒತ್ತಡವಿತ್ತು. ಅದನ್ನು ಅಂದುಕೊಂಡಂತೆಯೇ ಸಾಧಿಸಲಾಗಿದ್ದು ಈಗ ಒಸಾಮಾ ನಂತರ ಅವನ ಸ್ಥಾನ ತುಂಬಿದ್ದ ಅಲ್ ಖೈದಾ ಮುಖ್ಯಸ್ಥ ಇತಿಹಾಸ ಪುಟದಲ್ಲಿ ಶಾಶ್ವತವಾಗಿ ದಾಖಲಿಸಲ್ಪಟ್ಟಂತಾಗಿದೆ.


ಇದು ಸಾಧ್ಯವಾದದ್ದು ಹೇಗೆ?
ಹೀಗೆ ಕರಾರುವಕ್ಕಾಗಿ ಜವಾಹಿರಿಯನ್ನು ಮುಗಿಸುವುದು ಅಷ್ಟೊಂದು ಸರಳವಾದ ಕೆಲಸವಂತೂ ಅಲ್ಲವೇ ಅಲ್ಲ. ಅವನು ಸಾಕಷ್ಟು ಭದ್ರತೆಯೊಂದಿಗೆ ನೆಲೆಸಿದ್ದ. ಅವನ ನಿತ್ಯದ ದಿನಚರಿ ಹೇಗಿತ್ತು, ಯಾವಾಗ ಅವನು ಹೊರಬರುತ್ತಿದ್ದ, ಏನೆಲ್ಲ ಮಾಡುತ್ತಿದ್ದ, ಎಷ್ಟು ಸಮಯ ಛಾವಣಿಯ ಮೇಲೆ ಕಳೆಯುತ್ತಿದ್ದ, ಹೀಗೆ ಹಲವು ಅಂಶಗಳನ್ನು ಸತತವಾಗಿ ಮೇಲ್ವಿಚಾರಣೆ ಮಾಡಿ ತದನಂತರ ಯೋಜನೆ ಹಾಕಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅವನನ್ನು ಹತ್ಯೆ ಮಾಡಲಾಗಿದೆ.


ಅಮೆರಿಕವು ಇಲ್ಲಿ ಬಳಸಿದ್ದ ಏರ್ ಟು ಸರ್ಫೇಸ್ ಗೆ ಚಿಮ್ಮಿ ದಾಳಿ ಮಾಡುವ ಕ್ಷಿಪಣಿ ಪ್ರಮುಖವಾದ ಪಾತ್ರವಹಿಸಿದೆ ಎನ್ನಲಾಗಿದೆ. ಡ್ರೋನ್ ಮೂಲಕ ಸಾಗಿಸುಬಹುದಾದ ಈ ಹೆಲ್ ಫೈರ್ ಕ್ಷಿಪಣಿಗಳು ತಮ್ಮ ಕರಾರುವಕ್ಕಾದ ಗುರಿ ದಾಳಿಗೆ ಸೂಕ್ತವಾಗಿದ್ದು ಅಮೆರಿಕ ದಶಕದಿಂದ ಎಲ್ಲ ರೀತಿಯ ಆತಂಕಿ ದಾಳಿಯ ಸಂದರ್ಭದಲ್ಲಿ ಇದನ್ನೇ ಬಳಸುತ್ತ ಬಂದಿದೆ. ಈ ಕ್ಷಿಪಣಿಯನ್ನು ವಾಹನ, ಹಡುಗು, ವಿಮಾನ ಎಲ್ಲ ಮಾಧ್ಯಮಗಳ ಮೂಲಕವೂ ಬಳಸಬಹುದಾಗಿದ್ದು ಸದ್ಯ ಜವಾಹಿರಿ ದಾಳಿಯ ಪ್ರಕರಣದಲ್ಲಿ ಇದನ್ನು ಮಾನವ ರಹಿತ ಡ್ರೋನ್ ನಲ್ಲಿ ಬಳಸಲಾಗಿದೆ.


ಕಾಸಿಮ್ ಸುಲೇಮಾನಿ ಎಂಬ ಜಿಹಾದಿಯನ್ನು ಕೊಳ್ಳಲು ಇದೆ ತಂತ್ರ ಬಳಕೆ 
ಈ ಹಿಂದೆಯೂ ಅಮೆರಿಕ ತನ್ನ ಈ ಹೆಲ್ ಫೈರ್ ಕ್ಷಿಪಣಿಯನ್ನು ಇರಾನಿನ ಜನರಲ್ ಕಾಸಿಮ್ ಸುಲೇಮಾನಿ ಎಂಬ ಜಿಹಾದಿಯನ್ನು ಕೊಲ್ಲಲು 2020 ರಲ್ಲಿ ಬಳಸಿತ್ತು. ಈತನನ್ನು 'ಜಿಹಾದಿ ಜಾನ್' ಎಂದೇ ಕರೆಯಲಾಗುತ್ತಿತ್ತು ಹಾಗೂ ಈತ ಬ್ರಿಟೀಷ್ ಸಂಸ್ಥಾನದಲ್ಲಿ ಜನಸಿದ್ದ ಅತ್ಯುಗ್ರಗಾಮಿಯಾಗಿದ್ದ. ಹೆಲ್ ಫೈರ್ ಅತಿ ನಿಖರವಾದ ತನ್ನ ಗುರಿಗೆ ಗುರುತಿಸಿಕೊಂಡಿದ್ದರಿಂದಲೇ ಅಮೆರಿಕ ಹೆಚ್ಚಾಗಿ ಈ ಕ್ಷಿಪಣಿಯನ್ನೇ ಬಳಸುವತ್ತ ಆದ್ಯತೆ ನೀಡುತ್ತದೆ.


ಇದನ್ನೂ ಓದಿ: China vs Taiwan: ಚೀನಾ-ತೈವಾನ್ ನಡುವಿನ ಸಂಘರ್ಷಕ್ಕೆ ಕಾರಣವೇನು? ಇದರಲ್ಲೇಕೆ ಅಮೆರಿಕಕ್ಕೆ ಆಸಕ್ತಿ?


ಇನ್ನು ತಾಂತ್ರಿಕವಾಗಿ ಹೇಳಬೇಕೆಂದರೆ ಡ್ರೋನ್ ಕ್ಷಿಪಣಿಯನ್ನು ಹೊತ್ತೊಯ್ಯುತ್ತದೆ ಹಾಗೂ ಆ ಡ್ರೋನಿಗೆ ಕ್ಯಾಮೆರಾ ಸಹ ಅಳವಡಿಸಲಾಗಿರುತ್ತದೆ. ಇವೆರಡೂ ಸೇರಿ ಗುರಿ ಇರುವ ಸ್ಥಳದಲ್ಲಿದ್ದರೂ ಇವುಗಳ ಕಾರ್ಯ ಪ್ರಣಾಳಿಕೆಯನ್ನು ಅದೆಷ್ಟೋ ಸಾವಿರಾರು ಮೈಲಿಗಳಷ್ಟು ದೂರದಲ್ಲಿ ಕುಳಿತು ರಿಮೋಟ್ ಮೂಲಕ ನಿರ್ವಹಿಸಲಾಗುತ್ತಿರುತ್ತದೆ. ಅಷ್ಟೆ ಅಲ್ಲದೆ, ಡ್ರೋನ್ ನಿಂದ ಒಮ್ಮೆ ಮಿಸೈಲ್ ಫೈರ್ ಆದ ಮೇಲೆ ಅದು ತನ್ನ ನಿಗದಿತ ಗುರಿಯನ್ನು ಹೊಡೆದುರುಳಿಸಿತೇ ಎಂಬುದನ್ನು ಸಹ ಡ್ರೋನ್ ನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾದ ಮೂಲಕ ತಿಳಿಯಬಹುದಾಗಿದೆ.


ಇನ್ನು ಕ್ಷಿಪಣಿ ಕೇವಲ ತನ್ನ ಗುರಿ ಮೇಲೆ ಅಷ್ಟೆ ದಾಳಿ ಮಾಡಿ ಇತರೆ ಯಾವುದೇ ಅನವಶ್ಯಕ ಸಾವು ನೋವು ಸಂಬಂಧಿಸದಂತೆ ಮಾಡಲು ಹಲವು ಕ್ಲಿಷ್ಟಕರ ಪ್ರಕ್ರಿಯೆಗಳನ್ನು ಅನುಕ್ರಮವಾಗಿ ಪಾಲಿಸಬೇಕಾಗಿರುತ್ತದೆ. ಇದನ್ನು ಪರಿಣಿತ ಕ್ಷಿಪಣಿ ನಿಯಂತ್ರಕರು ಒಂದೆಡೆ ಕುಳಿತು ಮಾಡುತ್ತಾರೆ.


ಈ ಬಗ್ಗೆ ವಿವಿಯ ಪ್ರೊಫೆಸರ್ ಆಗಿರುವ ವಿಲಿಯಮ್ ಬ್ಯಾಂಕ್ಸ್ ಅವರು ಏನು ಹೇಳಿದ್ದಾರೆ
ರಕ್ಷಣಾ ನೀತಿ ಮತ್ತು ಕಾನೂನಿಗೆ ಸಂಬಂಧಿಸಿದ ಸಿರಾಕ್ಯೂಸ್ ವಿವಿಯ ಪ್ರೊಫೆಸರ್ ಆಗಿರುವ ವಿಲಿಯಮ್ ಬ್ಯಾಂಕ್ಸ್ ಅವರು, "ಕ್ಷಿಪಣಿ ದಾಳಿ ಮಾಡುವಾಗ ಅದು ಕೇವಲ ತನ್ನ ಗುರಿ ಮೇಲೆ ಹೊಡೆದುರುಳಿ ಇದರಿಂದ ಅನವಶ್ಯಕ ಪ್ರಾಣ ಹಾನಿಗಳುಂಟಾಗದಂತೆ ಸಮತೋಲನ ಕಾಪಾಡುವುದು ಮುಖ್ಯವಾಗಿರುತ್ತದೆ. ಜವಾಹಿರಿಯ ಪ್ರಕರಣದಲ್ಲಿ ಇದನ್ನು ಬಲು ನಿಷ್ಠೆಯಿಂದ ಅನುಸರಿಸಲಾಗಿದೆ. ಅವನು ಒಬ್ಬಂಟಿಗನಾಗಿರುವ ಸಂದರ್ಭದಲ್ಲಿ ಕೇವಲ ಅವನ ಮೇಲಷ್ಟೆ ದಾಳಿ ಮಾಡುವಂತೆ ಇಲ್ಲಿ ಬಲು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲಾಗಿದೆ" ಎಂದು ಹೇಳುತ್ತಾರೆ.


ಇದನ್ನೂ ಓದಿ:  Explained: ಆರ್ಥಿಕ ಹಿಂಜರಿತ ಉಂಟಾದರೆ ನಮಗೆ ಹೇಗೆ ತಿಳಿಯುತ್ತದೆ? ಇಲ್ಲಿದೆ ಉತ್ತರ


ಪ್ರಸ್ತುತ ಜವಾಹಿರಿಯ ಮೇಲೆ ದಾಳಿ ಮಾಡಿದ ಈ ಪ್ರಕರಣದಲ್ಲಿ ಅಮೆರಿಕವು ಅಷ್ಟೊಂದು ತಿಳಿಯದ ಅಥವಾ ಮಾಹಿತಿ ಇರದ R9X ಎಂಬ ಹೆಲ್ ಫೈರ್ ಕ್ಷಿಪಣಿಯನ್ನು ಬಳಸಿದೆ ಎಂಬ ಸುದ್ದಿ ಕೆಲ ಮೂಲಗಳಿಂದ ತಿಳಿದುಬಂದಿದೆಯಾದರೂ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಇದು ಆರು ಬ್ಲೇಡ್ ಗಳನ್ನು ಹೊಂದಿರುವ ಮಿಸೈಲ್ ಆಗಿದ್ದು ತನ್ನ ಗುರಿಯನ್ನು ನಿಖರವಾಗಿ ಹೊಡೆದುರುಳಿಸಲು ಉತಾಮವಾದ ಕೈನೆಟಿಕ್ ಶಕ್ತಿಯನ್ನು ಪಡೆಯುವಂತಹ ಸಕ್ಷಮ ಅಸ್ತ್ರವಾಗಿದೆ ಎನ್ನಲಾಗಿದೆ.


ಜವಾಹಿರಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತೆ?
ಅಮೆರಿಕ ಈ ದಾಳಿ ನಡೆಸಿದ ತರುವಾಯ ಅದಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಹೊರಬರಲಾರಂಭಿಸಿವೆ. ಈ ಮಧ್ಯೆ ಅಮೆರಿಕದ ಪಡೆಯು ತಮ್ಮ ಬಳಿ ಜವಾಹಿರಿ ಬಗ್ಗೆ ಸಾಕಷ್ಟು ಮಾಹಿತಿಯಿತ್ತು ಎಂದು ಹೇಳಿದೆ. ಅದರ ಅರ್ಥ ಅಮೆರಿಕದ ಗೂಢಚಾರಿಗಳು ಅನೇಕ ದಿನಗಳಿಂದ ಜವಾಹಿರಿಯ ಮೇಲೆ ನಿಗಾ ಇಟ್ಟಿದ್ದರು ಎನ್ನಬಹುದಾಗಿದೆ. ಏಕೆಂದರೆ ಜವಾಹಿರಿ ತನ್ನ ನಿತ್ಯ ಸಮಯವನ್ನು ಹೇಗೆ ಕಳೆಯುತ್ತಾನೆ, ಯಾವಾಗ ಮನೆಯಿಂದ ಹೊರಬರುತ್ತಾನೆ, ಎಷ್ಟು ಹೊತ್ತು ಹೊರಗಿರುತ್ತಾನೆ, ಅವನ ಜೊತೆ ಯಾರು ಯಾರು ಇರುತ್ತಾರೆ ಎಂಬೆಲ್ಲ ಮಾಹಿತಿಯನ್ನು ಹಲವು ವಾರಗಳಿಂದ ಗಮನಿಸಿ ಪಡೆಯಲಾಗಿತ್ತೆನ್ನಲಾಗಿದೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು