Explained: ಶವರ್ಮಾ ತಿಂದ ಕೂಡಲೇ ಬಾಲಕಿ ಸತ್ತಿದ್ದು ಹೇಗೆ? ಶಿಗೆಲ್ಲ ಬ್ಯಾಕ್ಟೀರಿಯಾ ಎಂದರೇನು? ವೈರಸ್ ಇಷ್ಟು ಬೇಗ ಜೀವ ತೆಗೆಯುತ್ತಾ?

ಅಂಗಡಿಯಲ್ಲಿ ಚಿಕನ್ ಶವರ್ಮಾ ತಿಂದು 16 ವರ್ಷದ ಬಾಲಕಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಕೇರಳದ ಜನರಲ್ಲಿ ಆತಂಕ ಸೃಷ್ಟಿಸಿದೆ.

ಶಿಗೆಲ್ಲಾ ಬ್ಯಾಕ್ಟೀರಿಯಾ

ಶಿಗೆಲ್ಲಾ ಬ್ಯಾಕ್ಟೀರಿಯಾ

  • Share this:
ಅಂಗಡಿಯಲ್ಲಿ ಚಿಕನ್ ಶವರ್ಮಾ (Chicken Shawarma) ತಿಂದು 16 ವರ್ಷದ ಬಾಲಕಿ (Girl) ಮೃತಪಟ್ಟಿದ್ದು (Dead), 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಕೇರಳದ (Kerala) ಜನರಲ್ಲಿ ಆತಂಕ ಸೃಷ್ಟಿಸಿದೆ. ಇನ್ನೂ ಶವರ್ಮಾ ತಿಂದ ನಂತರ ಅಸ್ವಸ್ಥರಾಗಲು ಮತ್ತು ಬಾಲಕಿ ಸಾವಿಗೆ ಆಹಾರದಲ್ಲಿದ್ದ ಶಿಗೆಲ್ಲಾ ಬ್ಯಾಕ್ಟೀರಿಯಾ (Shigella bacteria) ಕಾರಣ ಅನ್ನೋದನ್ನು ವೈದ್ಯರು ಧೃಢಪಡಿಸಿದ್ದಾರೆ. ಕಳೆದ ವಾರ ಕಾಸರಗೋಡಿನ (Kasargodu) ಚೆರುವತ್ತೂರಿನಲ್ಲಿ ಚಿಕನ್ ಶವರ್ಮಾ ಸೇವಿಸಿದ ಬಳಿಕ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದವರ ರಕ್ತ (Blood) ಮತ್ತು ಮಲದಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಇರುವುದು ದೃಢಪಟ್ಟಿದೆ. ಪೊಲೀಸರು (Police) ಈಗಾಗ್ಲೇ ಉಪಾಹಾರ ಗೃಹದ ಮಾಲೀಕ (Owner) ಹಾಗೂ ಸಿಬ್ಬಂದಿಯನ್ನು (Staff) ಬಂಧಿಸಿದ್ದಾರೆ.

ಘಟನೆ ನಂತರ ಫಾಸ್ಟ್ ಫುಡ್ ಆರೋಗ್ಯಕ್ಕೆ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಭುಗಿಲೆದ್ದಿದೆ. ಹಾಗಾದರೆ ಬಾಲಕಿ ಸಾವಿಗೆ ಕಾರಣವಾದ ಶಿಗೆಲ್ಲ ಸೋಂಕು ಎಂದರೇನು? ಅದರ ಗುಣ ಲಕ್ಷಣಗಳು ಯಾವುವು ಮತ್ತು ನೀವು ಯಾವಾಗ ವೈದ್ಯರನ್ನು (Doctor) ಸಂಪರ್ಕಿಸಬೇಕು? ಎಂಬುದರ ಬಗ್ಗೆ ಮೊದಲು ತಿಳಿದುಕೊಳ್ಳೋಣ.

ಶಿಗೆಲ್ಲ ಎಂದರೇನು?

ಶಿಗೆಲ್ಲವು ಎಂಟ್ರೊಬ್ಯಾಕ್ಟರ್ ಕುಟುಂಬಕ್ಕೆ ಸೇರಿದ ಬ್ಯಾಕ್ಟೀರಿಯ ಆಗಿದೆ. ಇವು ಕರುಳಿನಲ್ಲಿ ವಾಸಿಸುವ ಬ್ಯಾಕ್ಟೀರಿಯಾದ ಗುಂಪು, ಇವೆಲ್ಲವೂ ಮಾನವರಲ್ಲಿ ರೋಗವನ್ನು ಉಂಟುಮಾಡುವುದಿಲ್ಲ. ಇದು ಮುಖ್ಯವಾಗಿ ಕರುಳಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅತಿಸಾರ, ಕೆಲವೊಮ್ಮೆ ರಕ್ತಸಿಕ್ತ ಭೇದಿ, ಹೊಟ್ಟೆ ನೋವು ಮತ್ತು ಜ್ವರಕ್ಕೆ ಕಾರಣವಾಗುತ್ತದೆ.

"ಅನಾರೋಗ್ಯಕ್ಕೆ ಒಳಪಡಿಸಲು ಕಡಿಮೆ ಸಂಖ್ಯೆಯ ಬ್ಯಾಕ್ಟೀರಿಯಾಗಳು ಸಾಕು ಇವು ಸೋಂಕನ್ನು ಸುಲಭವಾಗಿ ಹರಡುತ್ತದೆ” ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಹೇಳುತ್ತದೆ. ಕಲುಷಿತ ನೀರು, ಕಲುಷಿತ ಆಹಾರ, ತೊಳೆಯದ ಹಣ್ಣು, ತರಕಾರಿಗಳು ಸೋಂಕಿನ ಜನರು ತಯಾರು ಮಾಡಿದ ಆಹಾರ ಸೇವಿಸುವುದರಿಂದ ಆಹಾರದ ಮೂಲಕ ವ್ಯಕ್ತಿಯ ದೇಹಕ್ಕೆ ಸೋಂಕು ತಗಲುತ್ತದೆ. ರೋಗಿಯ ಮಲವಿಸರ್ಜನೆಯೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದಿಂದ ರೋಗವು ಸುಲಭವಾಗಿ ಹರಡುತ್ತದೆ.

ಶಿಗೆಲ್ಲ ಸೋಂಕು ಎಷ್ಟು ವ್ಯಾಪಕವಾಗಿದೆ?

"ಶಿಗೆಲೋಸಿಸ್ ಸೋಂಕಿನಿಂದ ಸಾವು ಸಂಭವಿಸುತ್ತದೆ, ಆದರೆ ಇದು ತುಂಬಾ ಅಸಾಮಾನ್ಯವಾದ ಸೋಂಕು. ಕಲುಷಿತ ಆಹಾರಗಳಿಂದಾಗಿ ಸಾಮಾನ್ಯವಾಗಿ ಟೈಫಾಯಿಡ್ ಮತ್ತು ಕಾಲರಾದಂತಹ ಕಾಯಿಲೆ ಉಂಟಾಗುತ್ತದೆ. ಇದು ಕೂಡ ಅದೇ ರೀತಿಯ ಸೋಂಕು. ಅತಿಸಾರದ 100 ಪ್ರಕರಣಗಳಲ್ಲಿ ಒಂದು ಶಿಗೆಲ್ಲೋಸಿಸ್ ಆಗಿರಬಹುದು” ಎಂದು ನವದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯ ಔಷಧದ ಹಿರಿಯ ಸಲಹೆಗಾರ ಡಾ ಸುರಂಜಿತ್ ಚಟರ್ಜಿ ಹೇಳಿದ್ದಾರೆ.

ಇದನ್ನೂ ಓದಿ: Explained: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚುತ್ತಿರೋದೇಕೇ? 4ನೇ ಅಲೆ ಬಗ್ಗೆ ಆತಂಕಪಡಬೇಕೆ?

ಗರ್ಭಾವಸ್ಥೆಯಲ್ಲಿ ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರಲ್ಲಿ ಶಿಗೆಲ್ಲ ವೇಗವಾಗಿ ಉಲ್ಬಣಗೊಳ್ಳುತ್ತದೆ.

ಮಾನವರ ಮೇಲೆ ಪರಿಣಾಮ ಬೀರುವ ನಾಲ್ಕು ವಿಧದ ಶಿಗೆಲ್ಲ ಬ್ಯಾಕ್ಟೀರಿಯಾಗಳಿವೆ ಅವು ಶಿಗೆಲ್ಲ ಸೊನ್ನೆ, ಶಿಗೆಲ್ಲ ಫ್ಲೆಕ್ಸ್ನೆರಿ, ಶಿಗೆಲ್ಲ ಬಾಯ್ಡಿ ಮತ್ತು ಶಿಗೆಲ್ಲ ಡಿಸೆಂಟರಿಯಾ. ನಾಲ್ಕನೆಯ ವಿಧವು ಅತ್ಯಂತ ತೀವ್ರವಾದ ರೋಗವನ್ನು ಉಂಟುಮಾಡುತ್ತದೆ ಏಕೆಂದರೆ ಇದು ದೇಹದಲ್ಲಿ ವಿಷ/ಟಾಕ್ಸಿನ್ ಅನ್ನು ಉತ್ಪಾದಿಸುತ್ತದೆ.

ಸೋಂಕಿನಿಂದ ಜನರು ಸಾಯುವುದು ಸಾಮಾನ್ಯವೇ?

ಇಲ್ಲ. ರೋಗಿಯು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿಲ್ಲದಿದ್ದರೆ ಅಥವಾ ರೋಗಕಾರಕವು ಸೂಚಿಸಲಾದ ಪ್ರತಿಜೀವಕಗಳಿಗೆ ನಿರೋಧಕವಾಗಿದ್ದರೆ ಸಾವು ಸಂಭವಿಸುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. “ಇದು ಚಿಕಿತ್ಸೆ ನೀಡಬಹುದಾದ ಸ್ಥಿತಿಯಾಗಿದೆ. ರೋಗಿಯು ಸಮಯಕ್ಕೆ ಸರಿಯಾಗಿ ಆಸ್ಪತ್ರೆಯನ್ನು ತಲುಪಿದರೆ ಇಂಟ್ರಾ ವೈನ್ಸ್ ಪ್ರತಿಕಾಯಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು,” ಎಂದು ಡಾ ಚಟರ್ಜಿ ಹೇಳುತ್ತಾರೆ.

ಯಾವ ಪ್ರತಿಜೀವಕಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಿರ್ಧರಿಸಲು ಯಾವ ರೋಗಕಾರಕವು ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಎಂಬುದನ್ನು ನೋಡಲು ವೈದ್ಯರು ಸಾಮಾನ್ಯವಾಗಿ ತೀವ್ರವಾದ ಅತಿಸಾರ ಹೊಂದಿರುವ ರೋಗಿಗಳ ಮಾದರಿಗಳನ್ನು ಪರೀಕ್ಷಿಸಲಾಗುತ್ತದೆ ಎಂದು ಅವರು ಹೇಳಿದರು. ಆದಾಗ್ಯೂ, ಬ್ಯಾಕ್ಟೀರಿಯಾಗಳು ಅದಕ್ಕೆ ನಿರೋಧಕವಾಗಿರುವುದರಿಂದ ಪ್ರತಿಜೀವಕಗಳು ಕಾರ್ಯನಿರ್ವಹಿಸದಿದ್ದಾಗ ಸಮಸ್ಯೆ ಉಂಟಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Explained: Paxlovid ಎಂದರೇನು? WHO ಏಕೆ ಇದನ್ನು ಕೊರೋನಾ ರೋಗಿಗಳಿಗೆ ಶಿಫಾರಸ್ಸು ಮಾಡುತ್ತಿದೆ ಗೊತ್ತಾ?

"ಶಿಗೆಲ್ಲದ ಪ್ರಮುಖ ಸಮಸ್ಯೆಯೆಂದರೆ ಅದು ಎಲ್ಲಾ ಇತರ ಅಂಗಗಳ ಮೇಲೆ ಪರಿಣಾಮ ಬೀರುವ ವಿಷವನ್ನು ಉತ್ಪಾದಿಸುತ್ತದೆ. ಆದ್ದರಿಂದ, ಪ್ರತಿಜೀವಕಗಳನ್ನು ನೀಡಿದ ನಂತರವೂ ದೇಹದಲ್ಲಿ ಬ್ಯಾಕ್ಟೀರಿಯಾಗಳು ಪ್ರಸರಣವನ್ನು ಮುಂದುವರೆಸಿದರೆ, ಅದು ವಿಷವನ್ನು ಉತ್ಪತ್ತಿ ಮಾಡುವುದನ್ನು ಮುಂದುವರೆಸುತ್ತದೆ.

ನಂತರ ಅದು ಮೂತ್ರಪಿಂಡದ ಮೇಲೆ ಪರಿಣಾಮ ಬೀರಿ ರೋಗಗ್ರಸ್ತವಾಗುವಿಕೆಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ ಬಹು-ಅಂಗಾಂಗಗಳ ವೈಫಲ್ಯ ಮತ್ತು ಬೇರೆ ಜೀವ ಹಾನಿ ಅವಘಡಗಳಿಗೆ ಕಾರಣವಾಗಬಹುದು ಮತ್ತು ಮಾರಣಾಂತಿಕವಾಗಿ ಪರಿಣಮಿಸುತ್ತದೆ ಎಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಾಂಕ್ರಾಮಿಕ ರೋಗ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಅಮಿತ್ ಸಿಂಗ್ ಹೇಳುತ್ತಾರೆ. ಆದಾಗ್ಯೂ, "ಸೋಂಕಿನ ಮರಣವು 1% ಕ್ಕಿಂತ ಕಡಿಮೆ" ಎಂದು ಅವರು ಹೇಳಿದರು.

ಯಾವಾಗ ವೈದ್ಯರ ಬಳಿ ಹೋಗಬೇಕು?

ಹೆಚ್ಚಿನ ಜ್ವರ, ಮಲದಲ್ಲಿನ ರಕ್ತ ಅಥವಾ ನಿರಂತರ ವಾಂತಿ, ಆಯಾಸ ಹೊಂದಿದ್ದರೆ ಆಗ ವೈದ್ಯರನ್ನು ಸಂಪರ್ಕಿಸಬೇಕು. ತೀವ್ರವಾದ ಅತಿಸಾರವನ್ನು ಹೊಂದಿರುವ ವ್ಯಕ್ತಿ ಅಂದರೆ ಒಂದು ದಿನದಲ್ಲಿ 20 ಅಥವಾ ಅದಕ್ಕೂ ಹೆಚ್ಚಿನ ಕರುಳಿನ ಚಲನೆಗಳು ಕಂಡು ಬಂದರೆ ಒಂದು ದಿನದೊಳಗೆ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ. ಕಡಿಮೆ ಅತಿಸಾರ ಹೊಂದಿರುವ ರೋಗಿಯು ವೈದ್ಯರ ಬಳಿಗೆ ಹೋಗುವ ಮೊದಲು ಮೂರರಿಂದ ನಾಲ್ಕು ದಿನಗಳವರೆಗೆ ಕಾಯಬಹುದು.

"ಯಾವುದೇ ಅತಿಸಾರವು ಶೀಗೆಲ್ಲ ಬ್ಯಾಕ್ಟೀರಿಯಾ ಅಥವಾ ಇತರ ಯಾವುದೇ ಬೇರೆ ಕಾರಣದಿಂದ ಆಗಿರಬಹುದು" ಎಂದು ಡಾ. ಚಟರ್ಜಿ ಹೇಳುತ್ತಾರೆ. ಶವರ್ಮಾ ತಿಂದು ಸಾವನ್ನಪ್ಪಿದ ಕೇರಳದ ವಿದ್ಯಾರ್ಥಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ದೊರೆಯದೇ ಹೀಗಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

ಶಿಗೆಲ್ಲ ಸೋಂಕು ಹೆಚ್ಚಾಗಿ ಕಲುಷಿತ ಆಹಾರ ಮತ್ತು ನೀರಿನಿಂದ ಹರಡುವುದರಿಂದ ಹೊರಗಡೆ ತಿನ್ನುವುದನ್ನು ಸಾಮಾನ್ಯವಾಗಿ ಕಡಿಮೆ ಮಾಡಿ ಮತ್ತು ಕುಡಿಯುವ ನೀರಿನಲ್ಲಿ ಗಮನವಹಿಸಿ. ಊಟದ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಮಲವಿಸರ್ಜನೆ ನಂತರ ನಿಮ್ಮ ಕೈಗಳನ್ನು ಸರಿಯಾಗಿ ತೊಳೆಯಿರಿ. ನೀವು ಕುಡಿಯುವ ನೀರು ಶುದ್ಧವಾಗಿದೆ ಮತ್ತು ಹಣ್ಣು, ತರಕಾರಿಗಳು ತಾಜಾವಾಗಿವೆ ಎಂದು ಖಚಿತಪಡಿಸಿಕೊಳ್ಳಿ. ಹಣ್ಣು, ತರಕಾರಿಗಳನ್ನು ತೊಳೆದು ಬಳಸಿ.

ಇದನ್ನೂ ಓದಿ: Fatty Liver: ತೂಕ ದಿಢೀರ್ ಹೆಚ್ಚುತ್ತಿದೆಯಾ? ಈ ಗಂಭೀರ ರೋಗದ ಲಕ್ಷಣವಿದು, ಪರೀಕ್ಷಿಸಿಕೊಳ್ಳಿ

"ಹಾಲು, ಕೋಳಿ ಮತ್ತು ಮೀನಿನಂತಹ ಉತ್ಪನ್ನಗಳು ಸುಲಭವಾಗಿ ಸೋಂಕಿಗೆ ಒಳಗಾಗಬಹುದು ಮತ್ತು ಸರಿಯಾದ ತಾಪಮಾನದಲ್ಲಿ ಇಡಬೇಕು. ಅವುಗಳನ್ನು ಸರಿಯಾಗಿ ಬೇಯಿಸಿ ಸೇವಿಸಬೇಕು” ಎಂದು ಸಿಂಗ್ ಹೇಳುತ್ತಾರೆ.
Published by:Ashwini Prabhu
First published: