• ಹೋಂ
  • »
  • ನ್ಯೂಸ್
  • »
  • Explained
  • »
  • Afghanistan ನಲ್ಲಿ ಷರಿಯಾ ಕಾನೂನು: ಹೆಣ್ಮಕ್ಕಳು ಶಾಲೆಗೆ ಹೋಗುವಂತಿಲ್ಲ, ಸಾಯುತ್ತಿದ್ರೂ ಪುರುಷ ವೈದ್ಯರ ಬಳಿ ಹೋಗುವಂತಿಲ್ಲ..ಹೇಗಿರಲಿದೆ ಅವರ ಬದುಕು?

Afghanistan ನಲ್ಲಿ ಷರಿಯಾ ಕಾನೂನು: ಹೆಣ್ಮಕ್ಕಳು ಶಾಲೆಗೆ ಹೋಗುವಂತಿಲ್ಲ, ಸಾಯುತ್ತಿದ್ರೂ ಪುರುಷ ವೈದ್ಯರ ಬಳಿ ಹೋಗುವಂತಿಲ್ಲ..ಹೇಗಿರಲಿದೆ ಅವರ ಬದುಕು?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Sharia in Taliban Rule: ಪುಟ್ಟ ಹುಡುಗಿಯೊಬ್ಬಳು ಉಗುರಿಗೆ ಬಣ್ಣ ಹಚ್ಚಿಕೊಂಡಿದ್ದಳು ಎಂದು ಆಕೆಯ ಬೆರಳನ್ನೇ ಕತ್ತರಿಸಿದ್ದರು ತಾಲಿಬಾನಿ ಉಗ್ರರು. ಇನ್ನು ಮಹಿಳೆ ಮದುವೆಗೆ ಮುಂಚೆ ಪ್ರೀತಿಸುತ್ತಿದ್ದಾಳೆ ಎಂದರೆ ಆಕೆಯನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸಲಾಗುತ್ತದೆ. ತಲೆಯಿಂದ ಕಾಲಿನವರಗೆ ಆಕೆ ಸರಿಯಾಗಿ ಮುಚ್ಚುವಂಥಾ ದಿರಿಸು ಧರಿಸದಿದ್ದರೆ ರಸ್ತೆ ಮಧ್ಯದಲ್ಲಿ ಆಕೆಯನ್ನು ನಿಲ್ಲಿಸಿ ಛಡಿಯೇಟು ನೀಡಲಾಗುತ್ತದೆ. ಕಳ್ಳತನ ಮಾಡಿದರೆ ಕೈಯನ್ನೇ ಕತ್ತರಿಸಲಾಗುತ್ತದೆ.

ಮುಂದೆ ಓದಿ ...
  • Share this:

Afghanistan Crisis: ಅಫ್ಘಾನಿಸ್ತಾನ ತಾಲಿಬಾನಿಗಳ (Taliban) ಕಪಿಮುಷ್ಟಿಯಲ್ಲಿ ಸಿಕ್ಕಿಕೊಂಡಿದ್ದೇ ಇಡೀ ಜಗತ್ತು ಒಮ್ಮೆ ಬೆಚ್ಚಿ ಬಿದ್ದಂತಾಗಿದೆ. ಅಲ್ಲಿನ ಜನರಂತೂ ಈ ದೇಶದ ಸಹವಾಸವೇ ಸಾಕು ಎನ್ನುವಂತೆ ಹೇಗಾದರೂ ಅಲ್ಲಿಂದ ಓಟಕಿತ್ತರೆ ಸಾಕು ಎನ್ನುವಂತೆ ಇದ್ದಾರೆ. ಇಂಥಾ ಪರಿಸ್ಥಿತಿಯಲ್ಲಿ ಎಲ್ಲರೂ ಜೀವ ಉಳಿಸೊಕೊಳ್ಳೋ ಹೋರಾಟದಲ್ಲಿ ಇರುವಾಗ ತಾನು ಷರಿಯಾ (Sharia) ಕಾನೂನಿನ ಪ್ರಕಾರ ಆಡಳಿತ ನಡೆಸುವುದಾಗಿ ತಾಲಿಬಾನ್ ಘೋಷಿಸಿದೆ. ಷರಿಯಾ ಎನ್ನುವುದು ಇಸ್ಲಾಂ ಧರ್ಮದಲ್ಲಿ ಬದುಕುವ ರೀತಿಯನ್ನು ತಿಳಿಸಿದೆ ಎಂದು ನಂಬುವ ತಾಲಿಬಾನಿಗಳು ಅದೇ ದೇಶವನ್ನು ಆಳುವ ಮಾರ್ಗವೂ ಆಗಲಿದೆ ಎಂದಿದ್ದಾರೆ. ಷರಿಯಾ ಕಾನೂನಿನ ಪ್ರಕಾರ ಆಡಳಿತ ಬಂದರೆ ಎಲ್ಲಕ್ಕಿಂತ ಹೆಚ್ಚು ನರಳುವುದು ಅಲ್ಲಿನ ಹೆಣ್ಣುಮಕ್ಕಳು. ಯಾಕೆಂದರೆ ಇದು ನಿಜವಾಗಿ ಒಂದು ಕಾನೂನು ಅಲ್ಲದಿದ್ದರೂ ಅದನ್ನು ಅರ್ಥ ಮಾಡಿಕೊಂಡಿರುವುದಕ್ಕಿಂತ ಅಪಾರ್ಥ ಮಾಡಿಕೊಂಡಿರುವುದೇ ಜಾಸ್ತಿ ಎನ್ನುತ್ತಾರೆ ತಜ್ಞರು. ಷರಿಯಾ ಕಾನೂನಿನ ಅನ್ವಯ ಹೆಣ್ಣುಮಕ್ಕಳು ಪಾಲಿಸಬೇಕಾದ ನಿಯಮಗಳೇನು?


ಹೆಣ್ಣುಮಕ್ಕಳು ಮನೆಯಿಂದ ಹೊರಹೋಗುವಾಗ ಅಡಿಯಿಂದ ಮುಡಿಯವರಗೆ ಬಟ್ಟೆಯಲ್ಲಿ ಮುಚ್ಚಿರಬೇಕು:


ಸಾಮಾನ್ಯವಾಗಿ ಮುಸ್ಲಿಂ ಹೆಣ್ಣುಮಕ್ಕಳು ಬುರ್ಖಾ ಧರಿಸುವುದು ಅಥವಾ ತಲೆಯ ಕೂದಲು ಮರೆಮಾಚುವಂತೆ ಬಟ್ಟೆ ಧರಿಸುವುದು ಎರಡೂ ನೋಡಿರುತ್ತೇವೆ. ಆದರೆ ತಾಲಿಬಾನಿಗಳು ಹೇಳುವ ಷರಿಯಾ ಕಾನೂನಿನನ್ವಯ ಪಾದಗಳು ಕೂಡಾ ಕಾಣುವಂತಿಲ್ಲ. ಕಣ್ಣು ಕೂಡಾ ಕಾಣದಂತೆ ಅಲ್ಲೊಂದು ಬಲೆಯಂಥಹಾ ಕಿಂಡಿ ಇರುತ್ತದೆ. ಎಷ್ಟರ ಮಟ್ಟಿಗೆ ಅಂದರೆ ಮನೆಯ ನೆಲಮಹಡಿ ಮತ್ತು ಮೊದಲನೇ ಮಹಡಿಯ ಕಿಟಕಿಗಳನ್ನೂ ಮುಚ್ಚಿರಬೇಕು ಎನ್ನುತ್ತದೆ ಈ ಕಾನೂನು. ಮನೆಯ ಒಳಗಿರುವ ಹೆಣ್ಣುಮಕ್ಕಳು ಹೊರಗಿನವರಿಗೆ ಕಾಣುವುದಿಲ್ಲ.


ಹೆಣ್ಣು ಮನೆಯಿಂದ ಹೊರಹೋಗಬೇಕಾದರೆ ಜೊತೆಯಲ್ಲೊಬ್ಬ ಗಂಡಸು ಇರಲೇಬೇಕು:


ಅದು ಪತಿ, ಮಗ, ಅಣ್ಣ, ತಂದೆ ಯಾರಾದರೂ ಸರಿ…ಒಟ್ಟಿನಲ್ಲಿ ಜೊತೆಯಲ್ಲೊಂದು ಗಂಡು ಜೀವ ಇರಲೇಬೇಕು. ತಾನಾಗೇ ಒಬ್ಬಳೇ ಅಥವಾ ಗುಂಪಿನಲ್ಲಾದರೂ ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಅತ್ಯಗತ್ಯವಿದ್ದರೂ ತೆರಳುವಂತಿಲ್ಲ.


ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ, ಕೆಲಸ ಎರಡೂ ಸಲ್ಲದು:


ಕುರಾನ್ ಓದುವಷ್ಟು ಅಕ್ಷರಾಭ್ಯಾಸವನ್ನು ಹೊರತುಪಡಿಸಿ ಹೆಣ್ಣುಮಕ್ಕಳಿಗೆ ಶಾಲೆ, ಕಾಲೇಜುಗಳಿಗೆ ಕಳಿಸುವುದನ್ನು ತಾಲಿಬಾನಿಗಳ ಕಾನೂನು ವಿರೋಧಿಸುತ್ತದೆ. ಇನ್ನು ಕೆಲಸಕ್ಕೆ ಹೋಗುವುದಂತೂ ಅಸಾಧ್ಯದ ಮಾತೇ ಸರಿ.


ಎಷ್ಟೇ ಅನಾರೋಗ್ಯವಿದ್ದರೂ ಪುರುಷ ವೈದ್ಯರ ಬಳಿ ಮಹಿಳೆ ಚಿಕಿತ್ಸೆ ಪಡೆಯುವಂತಿಲ್ಲ:


ಹೆಣ್ಣುಮಕ್ಕಳ ಈ ಸಮಸ್ಯೆ ಮಾತ್ರ ಯಾವ ಶತ್ರುವಿಗೂ ಬೇಡ. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಿಲ್ಲ. ಅಂದ ಮೇಲೆ ಅವರು ಹೇಗೆ ವೈದ್ಯರಾಗುತ್ತಾರೆ? ಆದರೆ ಮಹಿಳಾ ವೈದ್ಯರು ಇಲ್ಲದಿದ್ದರೆ ಸಾಯುತ್ತಿದ್ದರೂ ಚಿಕಿತ್ಸೆ ಪಡೆಯಲು ಅನುಮತಿ ಇಲ್ಲ.


ಹೆಣ್ಣು ಮಾಡಿದ ತಪ್ಪಿಗೆ ಬಹಿರಂಗ ಶಿಕ್ಷೆ:


ಪುಟ್ಟ ಹುಡುಗಿಯೊಬ್ಬಳು ಉಗುರಿಗೆ ಬಣ್ಣ ಹಚ್ಚಿಕೊಂಡಿದ್ದಳು ಎಂದು ಆಕೆಯ ಬೆರಳನ್ನೇ ಕತ್ತರಿಸಿದ್ದರು ತಾಲಿಬಾನಿ ಉಗ್ರರು. ಇನ್ನು ಮಹಿಳೆ ಮದುವೆಗೆ ಮುಂಚೆ ಪ್ರೀತಿಸುತ್ತಿದ್ದಾಳೆ ಅಥವಾ ಅನೈತಿಕ ಸಂಪರ್ಕ ಹೊಂದಿದ್ದಾಳೆ ಎಂದಾದರೆ ಆಕೆಯನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸಲಾಗುತ್ತದೆ. ತಲೆಯಿಂದ ಕಾಲಿನವರಗೆ ಆಕೆ ಸರಿಯಾಗಿ ಮುಚ್ಚುವಂಥಾ ದಿರಿಸು ಧರಿಸದಿದ್ದರೆ ರಸ್ತೆ ಮಧ್ಯದಲ್ಲಿ ಆಕೆಯನ್ನು ನಿಲ್ಲಿಸಿ ಛಡಿಯೇಟು ನೀಡಲಾಗುತ್ತದೆ. ಕಳ್ಳತನ ಮಾಡಿದರೆ ಕೈಯನ್ನೇ ಕತ್ತರಿಸಲಾಗುತ್ತದೆ.


ಇದು ತಾಲಿಬಾನ್ ತರಲು ಹೊರಟಿರುವ ಕಾನೂನಿನ ಕೆಲ ವಿಚಾರಗಳಷ್ಟೇ. ಇಂಥಾ ಅನೇಕ ನಿಯಮಗಳ ಅರಿವು ಇರುವುದರಿಂದಲೇ ಅಲ್ಲಿನ ಜನ ಅದ್ರಲ್ಲೂ ಹೆಣ್ಣುಮಕ್ಕಳು ದೇಶ ಬಿಟ್ಟು ಹೊರಡುವ ನಿರ್ಧಾರ ಮಾಡಿರುವುದು. ಹೆಣ್ಣನ್ನು ಕನಿಷ್ಟ ಮನುಷ್ಯರೆಂದೂ ನೋಡದ ತಾಲಿಬಾನಿಗಳ ನಡುವೆ ಉಳಿದ ಮಹಿಳೆಯರ ಭೀಕರ ಬದುಕು ನಿಜಕ್ಕೂ ಭಯ ಹುಟ್ಟಿಸುವಂತಿದೆ.

First published: