• Home
  • »
  • News
  • »
  • explained
  • »
  • Explained: ಮೆಕ್ಕಾದಲ್ಲಿ ಉಮ್ರಾ ಆಚರಣೆ ನಡೆಸಿದ ಶಾರುಕ್ ಖಾನ್; ಇದ್ರಿಂದ ಏನೆಲ್ಲ ಫಲ ಸಿಗುತ್ತಂತೆ?

Explained: ಮೆಕ್ಕಾದಲ್ಲಿ ಉಮ್ರಾ ಆಚರಣೆ ನಡೆಸಿದ ಶಾರುಕ್ ಖಾನ್; ಇದ್ರಿಂದ ಏನೆಲ್ಲ ಫಲ ಸಿಗುತ್ತಂತೆ?

ಶಾರುಕ್ ಖಾನ್

ಶಾರುಕ್ ಖಾನ್

ಹಿಂದೂ ಧರ್ಮದಲ್ಲಿ ಹೇಗೆ ಕಾಶಿಯಾತ್ರೆ, ಕೇದಾರ ಯಾತ್ರೆ, ಪಂಚತೀರ್ಥಗಳು ಇತ್ಯಾದಿ ಧಾರ್ಮಿಕ ತೀರ್ಥ ಯಾತ್ರೆಗಳಿವೆಯೋ ಅದೇ ರೀತಿ ಇದೂ ಸಹ.

  • Share this:

ಬಾಲಿವುಡ್ ಚಿತ್ರರಂಗದ ಪ್ರಖ್ಯಾತ ನಟ ಹಾಗೂ ಸೂಪರ್ ಸ್ಟಾರ್ ಶಾರುಕ್ ಖಾನ್ ತಮ್ಮ ಬಹು ನಿರೀಕ್ಷಿತ ಚಿತ್ರವೊಂದರ ಚಿತ್ರೀಕರಣವನ್ನು ಮುಗಿಸಿದ ಬಳಿಕೆ ಸೌದಿ ಅರೇಬಿಯಾದ (Soudi Arabia) ಮೆಕ್ಕಾಗೆ ಭೇಟಿ ನೀಡಿದ್ದಾರೆ. ಮುಸ್ಲಿಮರಲ್ಲಿ ಪವಿತ್ರ ಎಂದು ಪರಿಗಣಿಸಲಾಗಿರುವ ಹಜ್ (Hajj) ತೀರ್ಥ ಯಾತ್ರೆಯ ಕಿರು ಸ್ವರೂಪವಾದಂತಹ ಉಮ್ರಾ (Umrah) ಎಂಬ ಆಚರಣೆಯನ್ನು ಅವರು ನಿರ್ವಹಿಸಿದ್ದಾರೆ. ಹಾಗೇ ನೋಡಿದರೆ ಉಮ್ರಾ ಅನ್ನುವುದು ಕಡ್ಡಾಯವಾಗಿ ಮಾಡಬೇಕಾದ ವಿಧಿವಿಧಾನವಲ್ಲವಾದರೂ ಅದು ಪಾಪಗಳನ್ನು ತೊಳೆಯುತ್ತದೆ ಎಂಬ ನಂಬಿಕೆ ಮುಸ್ಲಿಮರಲ್ಲಿದೆ.


ಶಾರುಕ್ ಖಾನ್ ಯಾತ್ರೆ
ಬಾಲಿವುಡ್ ಅಂಗಳದ ಪ್ರಖ್ಯಾತ ತಾರೆ ಶಾರುಕ್ ಖಾನ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ. ಕೇವಲ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸಹಸ್ರಾರು ಅಭಿಮಾನಿಗಳನ್ನು ಹೊಂದಿರುವ ನಟ ಶಾರುಕ್ ಖಾನ್ ಎಲ್ಲೆ ಇರಲಿ, ಹೇಗೆ ಇರಲಿ ಜನರು ಅವರನ್ನು ಗುರುತಿಸುವುದು ಪಕ್ಕಾ ಎಂದೇ ಹೇಳಬಹುದು. ಅಷ್ಟರಮಟ್ಟಿಗೆ ನಟನ ದೇಹ ಗುರುತು ಹೆಚ್ಚು ಕಡಿಮೆ ಪ್ರತಿಯೊಬ್ಬರಿಗೂ ಗೊತ್ತಿದೆ.


ಇತ್ತೀಚೆಗೆ ಅವರು ತಮ್ಮ ಧರ್ಮದ ಪ್ರಕಾರ ಉಮ್ರಾ ಎಂಬ ವಿಧಿಯನ್ನು ನೆರವೇರಿಸಲೆಂದು ಸೌದಿ ಅರೇಬಿಯಾದ ಪವಿತ್ರ ಎನ್ನಲಾಗುವ ಮೆಕ್ಕಾ ನಗರಕ್ಕೆ ತೆರಳಿದ್ದರು. ಅವರು ಆ ಸಮಯದಲ್ಲಿ ತಮ್ಮ ಗುರುತು ಗೊತ್ತಾಗದಂತೆ ಸರಳವಾದ ನಿಲುವಂಗಿ ಜೊತೆ ಮುಖಕ್ಕೆ ಮಾಸ್ಕ್ ಅನ್ನು ಧರಿಸಿದ್ದರು. ಆದರೂ ಅವರನ್ನು ಅಭಿಮಾನಿಗಳು ಗುರುತಿಸದೆ ಇರ್ತಾರಾ!?


ವೈರಲ್ ಆದ ಫೋಟೋಗಳು
ಈ ನಡುವೆ ಅವರು ಮೆಕ್ಕಾ ನಗರದಲ್ಲಿ ಮಿನಿ ಹಜ್ ಎಂದು ಪರಿಗಣಿಸಲಾಗಿರುವ ಉಮ್ರಾ ವಿಧಿಯನ್ನು ನೆರವೇರಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಜೋರಾಗಿ ಹರಿದಾಡುತ್ತಿವೆ ಎನ್ನಬಹುದು.


ಚಿತ್ರಗಳಲ್ಲಿ ಶಾರುಕ್ ಸಾಂಪ್ರದಾಯಿಕ ಉಡುಗೆಯೊಂದಿಗೆ ಮುಖಕ್ಕೆ ಮಾಸ್ಕ್ ಹಾಕಿದ್ದನ್ನು ಹಾಗೂ ಅವರ ಸುತ್ತಲೂ ಸಾಕಷ್ಟು ಜನ ಸೇರಿರುವುದನ್ನೂ ಗಮನಿಸಬಹುದು. ಶಾರುಕ್ ಖಾನ್ ಅಭಿಮಾನಿಗಳ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯು ಮೊದಲ ಬಾರಿಗೆ ಈ ಚಿತ್ರವನ್ನು ತನ್ನ ಪುಟದಲ್ಲಿ ಹಂಚಿಕೊಂಡಿದೆ.


ಸಿನಿಮಾ ಶೂಟಿಂಗ್ ಮುಗಿಸಿ ದರ್ಶನ
ವೈಯಕ್ತಿಕವಾಗಿ ಶಾರುಕ್ ಖಾನ್ ಮುಸ್ಲಿಮ್ ಧರ್ಮ ಪರಿಪಾಲಿಸುವ ವ್ಯಕ್ತಿಯಾಗಿದ್ದು ಸೌದಿ ಅರೇಬಿಯಾದಲ್ಲಿ ತಮ್ಮ ಬಹು ನಿರೀಕ್ಷಿತ ಚಿತ್ರವೊಂದರ  ಚಿತ್ರೀಕರಣ ಮುಕ್ತಾಯಗೊಳಿಸಿದ ಬಳಿಕೆ ಮೆಕ್ಕಾ ನಗರಕ್ಕೆ ಉಮ್ರಾ ನೆರವೇರಿಸಲು ಭೇಟಿ ನೀಡಿದ್ದರು.


ಏನಿದು ಉಮ್ರಾ?
ಹಿಂದೂ ಧರ್ಮದಲ್ಲಿ ಹೇಗೆ ಕಾಶಿಯಾತ್ರೆ, ಕೇದಾರ ಯಾತ್ರೆ, ಪಂಚತೀರ್ಥಗಳು ಇತ್ಯಾದಿ ಧಾರ್ಮಿಕ ತೀರ್ಥ ಯಾತ್ರೆಗಳಿವೆಯೋ ಅದೇ ರೀತಿ ಇದೂ ಸಹ. ಮುಸ್ಲಿಮರಲ್ಲೂ ಧಾರ್ಮಿಕವಾಗಿ ಮಹತ್ವ ಪಡೆದಿರುವ ಪವಿತ್ರ ಯಾತ್ರೆ ಎಂದರೆ ಅದು ವಾರ್ಷಿಕವಾಗಿ ನಡೆಯುವ ಹಜ್ ಯಾತ್ರೆ. ಈ ಹಜ್ ಯಾತ್ರೆಯ ಸಂಕ್ಷಿಪ್ತ ರೂಪವೇ ಉಮ್ರಾ ಎಂದಾಗಿದೆ. ಹಜ್ ಕಡ್ಡಾಯ ಎಂಬ ರೀತಿಯಲ್ಲಿದ್ದರೆ ಉಮ್ರಾ ಕಡ್ಡಾಯವಾಗಿ ಮಾಡಬೇಕಾದ ಆಚರಣೆಯಾಗಿಲ್ಲ. ಅರೇಬಿಕ್ ಭಾಷೆಯಲ್ಲಿ ಉಮ್ರಾ ಎಂದರೆ ಜನನಿಬೀಡ ಸ್ಥಳಕ್ಕೆ ಭೇಟಿ ನೀಡುವುದು ಎಂದಾಗಿದೆ.


ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಉಮ್ರಾ ಎನ್ನುವುದು ಮುಸ್ಲಿಮ್ ಧರ್ಮದ ಐದು ಕಡ್ಡಾಯ ವಿಧಿಗಳಲ್ಲಿ ಒಂದಾಗಿಲ್ಲ.  ವರ್ಷದಲ್ಲಿ ಯಾವುದೇ ಸಮಯ ಇದನ್ನು ನೆರವೇರಿಸಬಹುದು.


ಎಲ್ಲ ಪಾಪಗಳನ್ನೂ ತೊಳೆಯುತ್ತಂತೆ
ಅಲ್ಲದೆ ಇದನ್ನು ನೆರವೇರಿಸಲು ಕೆಲವು ಗಂಟೆಗಳಷ್ಟು ಸಮಯವೇ ಸಾಕು ಎಂದಾಗಿದೆ. ಆದರೂ ಸಾಕಷ್ಟು ಜನರು ಉಮ್ರಾ ಮಾಡುವ ಸಲಹೆಯನ್ನು ನೀಡುತ್ತಾರೆ. ಕಾರಣ ಧರ್ಮದ ಪ್ರಕಾರ ಇದು ವ್ಯಕ್ತಿಯ ಎಲ್ಲ ಪಾಪಗಳನ್ನು ತೊಳೆಯುತ್ತದೆ ಎನ್ನಲಾಗಿದೆ.


ಉಮ್ರಾದ ಮಹತ್ವ ಏನು?
ಉಮ್ರಾ ಆಚರಣೆ ಬಹುವಾಗಿ ಚರ್ಚಿತವಾಗಲ್ಲ, ಆದರೂ ಇದು ಇದರದ್ದೆ ಆದ ಮಹತ್ವವನ್ನು ಹೊಂದಿದೆ. ವ್ಯಕ್ತಿಯೊಬ್ಬ ಈ ಆಚರಣೆ ಮೂಲಕ ತನ್ನ ಧರ್ಮದಲ್ಲಿ ಹೆಚ್ಚಿನ ನಿಷ್ಠೆ ಹೊಂದುವವನಲ್ಲದೆ, ಪ್ರಾರ್ಥನೆ ಹಾಗೂ ಕ್ಷಮಾಪಣೆಯನ್ನು ಆ ಭಗವಂತನಲ್ಲಿ ಬೇಡಿಕೊಳ್ಳಲು ಅವಕಾಶವನ್ನು ಈ ಯಾತ್ರೆ ನೀಡುತ್ತದೆ ಎನ್ನಲಾಗಿದೆ.


ಮೀಡಲ್ ಈಸ್ಟ್ ಮಾಧ್ಯಮ ವರದಿ ಮಾಡುವಂತೆ ಯಾವ ವ್ಯಕ್ತಿಯು ಈ ಆಚರಣೆಯನ್ನು ನೆರವೇರಿಸುವನೋ ಆ ವ್ಯಕ್ತಿ ತನ್ನೆಲ್ಲ ಪಾಪ ಕರ್ಮಗಳಿಂದ ಮುಕ್ತನಾಗುತ್ತಾನೆ ಎನ್ನಲಾಗಿದೆ.


ಉಮ್ರಾ ಆಚರಣೆಯಲ್ಲಿ ಏನನ್ನು ಧರಿಸಬೇಕು?
ಸಹಜವಾಗಿ ಎಲ್ಲ ಧರ್ಮಗಳಲ್ಲಿ ಕಂಡುಬರುವಂತೆ ಈ ವಿಧಿಯಲ್ಲೂ ಕೆಲ ಕಟ್ಟುಪಾಡುಗಳಿವೆ ಎನ್ನಬಹುದು. ಉಮ್ರಾ ಮಾಡಬೇಕೆಂದಿರುವ ವ್ಯಕ್ತಿಯು ಕ್ಷೇತ್ರಕ್ಕೆ ಭೇಟಿ ನೀಡುವ ಮುಂಚೆ ಸ್ವಯಂ ಅನ್ನು ಸ್ವಚ್ಛಗೊಳಿಸಿಕೊಳ್ಳಬೇಕಾಗುತ್ತದೆ. ಯಾವುದೇ ರೀತಿಯ ಮೇಕ್ ಅಪ್ ಆಗಲಿ, ಸುಗಂಧ ದ್ರವ್ಯಗಳನ್ನಾಗಲಿ ಅಥವಾ ಇತರೆ ಯಾವುದೇ ಅಲಂಕಾರಿಕ ವಸ್ತುಗಳನ್ನು ಬಳಸುವಂತಿಲ್ಲ.


ಪುರುಷರು ಈ ಸಂದರ್ಭದಲ್ಲಿ ಶುಭ್ರ ಬಿಳಿ ಬಣ್ಣದ ಎರಡು ಪ್ರತ್ಯೇಕ ವಸ್ತ್ರಗಳನ್ನು ಧರಿಸಬೇಕಾಗಿರುತ್ತದೆ. ಒಂದು ವಸ್ತ್ರವು ದೇಹದ ಕೆಳಭಾಗಕ್ಕೆ ಮೀಸಲಿದ್ದರೆ ಇನ್ನೊಂದು ವಸ್ತ್ರದ ಮೂಲಕ ಪುರುಷನು ತನ್ನ ಎದೆ, ಬೆನ್ನು ಹಾಗೂ ತೋಳುಗಳ ಭಾಗವನ್ನು ಮುಚ್ಚಿಕೊಂಡಿರಬೇಕು. ಯಾವುದೇ ಒಳ ಉಡುಪುಗಳನ್ನೂ ಸಹ ಪುರುಷ ಧರಿಸಿರಬಾರದು. ಸ್ಯಾಂಡಲ್ ಗಳನ್ನು ಹಾಕಿಕೊಳ್ಳಬಹುದಾಗಿದ್ದು ತಲೆ ಮೇಲೆ ಯಾವುದೇ ವಸ್ತ್ರ ಇರಕೂಡದು.


ಯಾವುದೇ ಬಟ್ಟೆ ಧರಿಸಬಹುದು
ಇನ್ನು ಮಹಿಳೆಯರ ವಿಷಯಕ್ಕೆ ಬಂದರೆ ಅವರು ಯಾವುದೇ ಲೂಸ್ ಆಗಿರುವ ಬಟ್ಟೆಯನ್ನು ಧರಿಸಬಹುದು. ಬಹಳಷ್ಟು ಮಹಿಳೆಯರು ಸಾಮಾನ್ಯವಾಗಿ ಕಪ್ಪು ಬಣ್ಣದ ಅಬಾಯಾವನ್ನು ಧರಿಸುತ್ತಾರೆನ್ನಬಹುದು. ಇದು ದೇಹದ ಸಂಪೂರ್ಣ ಭಾಗವನ್ನು ಕವರ್ ಮಾಡುತ್ತದೆ. ಹಿಜಾಬ್ ಅನ್ನು ಹೊಂದಿರುತ್ತದೆ. ಮಿಡಲ್ ಈಸ್ಟ್ ಮಾಧ್ಯಮದ ವರದಿಯಂತೆ ಈ ಸಂದರ್ಭದಲ್ಲಿ ಮುಖವನ್ನು ಯಾವುದೇ ವಸ್ತ್ರದಿಂದ ಕವರ್ ಮಾಡಿರಬಾರದು ಎಂದಾಗಿದೆ.


ಉಮ್ರಾದ ಆಚರಣೆ ಹೇಗೆ?
ಒಬ್ಬ ಮುಸ್ಲಿಮ್ ವ್ಯಕ್ತಿಯು ಹಜ್ ಅಥವಾ ಉಮ್ರಾ ನೆರವೇರಿಸಲು ಮೊದಲಿಗೆ ಇಹ್ರಾಮ್ ಎಂಬ ಸ್ಥಿತಿಗೆ ಬರಬೇಕು. ಅಂದರೆ ಈ ಸ್ಥಿತಿಯಲ್ಲಿರುವಾಗ ಅವಾಚ್ಯ ಪದಗಳನ್ನಾಗಲಿ, ಬೈಗುಳಗಳನ್ನಾಗಲಿ ಅಥವಾ ಜಗಳವನ್ನಾಗಲಿ ಮಾಡುವಂತಿಲ್ಲ. ಈ ಸಂದರ್ಭದಲ್ಲಿ ಯಾವುದೇ ಪ್ರಾಣಿ, ಪಕ್ಷಿ ಅಥವಾ ಚಿಕ್ಕ ಪುಟ್ಟ ಹುಳುಗಳಿಗೂ ಕೂಡ ಹಿಂಸೆ ನೀಡುವಂತಿಲ್ಲ. ಹಾಗೇನಾದರೂ ಆದರೆ ಇಹ್ರಾಮ್ ಮುರಿದಂತೆ ಎಂದು ಪರಿಗಣಿಸಲಾಗುತ್ತದೆ.


ಆ ನಂತರ ಅವರು ಕ್ಯೂಬ್ ಆಕಾರದಲ್ಲಿರುವ ಕಾಬಾದ ಬಳಿ ನಡೆಯತೊಡಗುತ್ತಾರೆ. ಈ ಸಂದರ್ಭದಲ್ಲಿ ಭಕ್ತಾದಿಗಳು ಭಾವ ಪರವಶರಾಗುತ್ತ ತಲ್ಬಿಯಾ ಅನ್ನು ಉಚ್ಛರಿಸುತ್ತಾರೆ ಹಾಗೂ ಆ ಮೂಲಕ ಅವರು ಅಲ್ಲಾಹನನ್ನು ಕುರಿತು ಅವರ ಸೇವೆಗಾಗಿ ತಾವು ಇರುವುದಾಗಿ ಹೇಳಿಕೊಳ್ಳುತ್ತಿರುತ್ತಾರೆ. ಮೆಕ್ಕಾದ ಅಲ್-ಹರಮ್ ಎಂಬ ಮಸೀದಿಯ ಸಂಕೀರ್ಣದಲ್ಲಿ ಕಾಬಾ ಸ್ಥಿತವಿದೆ.


ಹೇಗೆ ಪ್ರವೇಶಿಸಬೇಕು?
ಯಾತ್ರಾರ್ಥಿಗಳು ಅಲ್-ಹರಮ್ ಮಸೀದಿಯನ್ನು ತಮ್ಮ ಬಲಗಾಲನ್ನು ಮೊದಲಿಡುವ ಮೂಲಕ ಪ್ರವೇಶಿಸಬೇಕು ಹಾಗೂ ಒಂದೊಮ್ಮೆ ಪ್ರವೇಶಿಸಿದ ನಂತರ ಅವರು ಅಲ್ಲಾಹನ್ನು ಕುರಿತು ಪ್ರಾರ್ಥಿಸುತ್ತ ತಮ್ಮನ್ನು ಕ್ಷಮಿಸು ಹಾಗೂ ತಮ್ಮ ಮೇಲೆ ದಯೆ ತೋರಿಸು ಅಂತ ಬೇಡಿಕೊಳ್ಳುತ್ತಾರೆ. ಅದರ ನಂತರ ಕಾಬಾವನ್ನು ಏಳು ಬಾರಿ ಆಂಟಿ ಕ್ಲಾಕ್ ವೈಸ್ ಪ್ರದಕ್ಷಿಣೆ ಹಾಕಲಾಗುತ್ತದೆ. ಇದನ್ನು ತವಾಫ್ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಅವರು ಕುರಾನ್ ಗ್ರಂಥದ ಆಯತಗಳನ್ನು ಚಾಂಟ್ ಮಾಡುತ್ತಿರುತ್ತಾರೆ.


ಇದನ್ನೂ ಓದಿ:Technology: ಟೆಕ್ ದೈತ್ಯಗಳು ಅಪಾಯದಲ್ಲಿ ಸಿಲುಕಲು ಕಾರಣವೇನು ಗೊತ್ತಾ?


ತದನಂತರ, ಪವಿತ್ರ ನೀರಾದ ಜಮ್ ಜಮ್ ಅನ್ನು ಸೇವಿಸಲು ತೆರಳುತ್ತಾರೆ. ಈ ವಿಧಿಯ ನಂತರ ಯಾತ್ರಾರ್ಥಿಗಳು ಸಾ ಇ ಅನ್ನು ನೆರವೇರಿಸಬೇಕು. ಇದರಲ್ಲಿ ಅವರು ಸಫಾ ಹಾಗೂ ಮರ್ವಾ ಎಂಬ ಎರಡು ಗುಡ್ಡಗಳ ಮಧ್ಯೆ ಏಳು ಬಾರಿ ಪ್ರಾರ್ಥನೆ ಮಾಡುತ್ತ ನಡೆಯಬೇಕು. ಇದು ಪ್ರವಾದಿ ಇಬ್ರಾಹಿಮ್ ಅವರ ಮಡದಿಯಾದ ಹಜ್ಜರ್ ಅವರ ಗೌರವಾರ್ಥದ ಪ್ರತೀಕವಾಗಿದೆ. ಸಾ ಇ ನಂತರ ಕೊನೆಯ ಪ್ರಾರ್ಥನೆಯನ್ನು ನೆರವೇರಿಸಲಾಗುತ್ತದೆ. ಇದನ್ನು ತಕ್ಸೀರ್ ಎನ್ನಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ತಲೆಗೂದಲನ್ನು ಸಣ್ಣದಾಗಿ ಕತ್ತರಿಸಲಾಗುತ್ತದೆ. ಇದು ಮರುಜನ್ಮದ ಸಂಕೇತ ಎನ್ನಲಾಗುತ್ತದೆ. ತಕ್ಸಿರ್ ನಂತರ ಯಾತ್ರಾರ್ಥಿಗಳು ಇಹ್ರಾಮ್ ಸ್ಥಿತಿಯ ನಿಯಮಗಳಿಂದ ಹೊರಬರಬಹುದಾಗಿದೆ.


ಉಮ್ರಾ ಹಾಗೂ ಹಜ್ ಆಚರಣೆಗಳ ಮಧ್ಯದಲ್ಲಿರುವ ವ್ಯತ್ಯಾಸ
ಮೊದಲ ಹಾಗೂ ಪ್ರಮುಖ ವ್ಯತ್ಯಾಸವೆಂದರೆ ಉಮ್ರಾ ಯಾತ್ರೆ ಆಯ್ಕೆಯನ್ನು ಒಳಗೊಂಡಿದ್ದರೆ, ದೈಹಿಕವಾಗಿ ಫಿಟ್ ಆಗಿರುವ ಹಾಗೂ ಯಾತ್ರೆ ಮಾಡುವಷ್ಟು ಸಾಮರ್ಥ್ಯ ಹೊಂದಿರುವ ಎಲ್ಲ ಮುಸ್ಲಿಮರಿಗೂ ಹಜ್ ಕಡ್ಡಾಯವಾಗಿ ಮಾಡಲೇಬೇಕಾದ ಯಾತ್ರೆಯಾಗಿದೆ. ಮುಸ್ಲಿಮ್ ಧರ್ಮದ ಐದು ಸ್ತಂಭಗಳಲ್ಲಿ ಹಜ್ ಯಾತ್ರೆ ಸಹ ಒಂದಾಗಿದ್ದು ಯಾವುದೇ ಒಬ್ಬ ಮುಸ್ಲಿಮ್ ತನ್ನ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಮಾಡಲೇಬೇಕೆನ್ನಲಾಗುತ್ತದೆ.


ಇದನ್ನೂ ಓದಿ: Dharavi Slum: ಏಷ್ಯಾದ ಅತೀ ದೊಡ್ಡ ಸ್ಲಂ ಅಭಿವೃದ್ಧಿ ಸಾಧ್ಯವೇ? ಧಾರಾವಿ ಪುನರ್‌ ನಿರ್ಮಾಣ ಅದಾನಿ ಗ್ರೂಪ್‌ಗೆ ಚಾಲೆಂಜಿಂಗ್ ಏಕೆ?


ಇಸ್ಲಾಮಿಕ್ ಲುನಾರ್ ಕ್ಯಾಲೆಂಡರಿನ ಪ್ರಕಾರ, ಅದರ ಕಡೆಯ ತಿಂಗಳಿನ ನಿರ್ದಿಷ್ಟ ಸಮಯದ ಅವಧಿಯಲ್ಲಿ ವಾರ್ಷಿಕವಾಗಿ ಹಜ್ ಯಾತ್ರೆ ಮಾಡಬೇಕಾಗುತ್ತದೆ. ಆದರೆ ಉಮ್ರಾ ಆಚರಣೆಯ ಬಗ್ಗೆ ಹಾಗೆ ಯಾವುದೇ ನಿಯಮವಿಲ್ಲ. ಈ ಆಚರಣೆಯನ್ನು ವರ್ಷದ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದಾಗಿದೆ. ಉಮ್ರಾ ಆಚರಣೆಗೆ ತೆಗೆದುಕೊಳ್ಳುವ ಸಮಯವು ಅಲ್ಪವಾಗಿದ್ದು ಹಜ್ ಯಾತ್ರೆಗೆ ಹೋಲಿಸಿದರೆ ಕಡಿಮೆ ವೆಚ್ಚದಾಯಕವಾಗಿದೆ.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು