BS Yediyurappa: ಸಿಎಂ ಬದಲಾದರೆ 8 ಸಚಿವರ ಖಾತೆಗೆ ಕೊಕ್, ಹೀಗಾಗಿ ಬಿಎಸ್​ವೈ ಪರವಾಗಿ ನಿಂತ ಹಿರಿಯ, ವಲಸಿಗ ಸಚಿವರು?

ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆದರೆ ಸೇಫ್. ರಾಜ್ಯದಲ್ಲಿ ಹೊಸ ಸಿಎಂ ಬಂದರೆ ಎಂಟಕ್ಕೂ ಹೆಚ್ಚು ಹಿರಿಯ ಸಚಿವರನ್ನು ಕೈ ಬಿಡುವ ಸಾಧ್ಯತೆ ಇದೆ. ವಲಸೆ ಗ್ಯಾಂಗ್ ನ ಕೆಲ ಸಚಿವರನ್ನು ಕೈ ಬಿಡುವ ಸಾಧ್ಯತೆ ಇದೆ. ಅಲ್ಲದೇ ಹೊಸ ಸಿಎಂ ಆದರೆ ಇರುವ ಖಾತೆಯೇ ಮತ್ತೆ ಧಕ್ಕುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಮಂತ್ರಿ ಆಗಿ ಮುಂದುವರೆಸುವ ವಿಶ್ವಾಸವೂ ಇಲ್ಲ. 

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

  • Share this:
ಬೆಂಗಳೂರು: ಕಳೆದೊಂದು ವಾರದಿಂದ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ವಿಚಾರ ಬಾರಿ ಚರ್ಚೆಯಲ್ಲಿದೆ. ಬಿಜೆಪಿ ಒಂದು ಬಣದ ಶಾಸಕರು, ಕೆಲ ಮಂತ್ರಿಗಳು ಸಿಎಂ ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆಗಾಗಿ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ. ಒಂದು ಬಣದ ನಾಯಕರು ಮೊದಲಿನಿಂದಲೂ ನಾಯಕತ್ವ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಇದ್ದಾರೆ. ಆದರೆ, ಬಿಎಸ್ ಯಡಿಯೂರಪ್ಪ ಅವರಿಗಿರುವ ವರ್ಚಸ್ಸು ಹಾಗೂ ಅವರ ಬೆಂಬಲಿಗರ ಪಡೆಯಿಂದ ನಾಯಕತ್ವ ಬದಲಾವಣೆ ಈವರೆಗೂ ಸಾಧ್ಯವಾಗಿಲ್ಲ. ಈಗಲೂ ಸಹ ಅವರ ಪರವಾಗಿ ಹಾಲಿ ಹಿರಿಯ ಸಚಿವರು ಮತ್ತು ವಲಸಿಗ ಸಚಿವರು ಸಿಎಂ ಬಿಎಸ್ ಯಡಿಯೂರಪ್ಪ ಪರವಾಗಿ ಬ್ಯಾಟ್ ಬೀಸಲು ಅಖಾಡಕ್ಕೆ ಇಳಿದಿದ್ದಾರೆ. ಇವರು ಸಿಎಂ ಯಡಿಯೂರಪ್ಪ ಪರವಾಗಿ ನಿಲ್ಲಲು ಬಲವಾದ ಕಾರಣ ಸಹ ಇದೆ.

ಯಡಿಯೂರಪ್ಪ ಅವರು ಸಿಎಂ ಆಗಿದ್ದರೆ ಮಾತ್ರ ನಾವು ಈ ಸರ್ಕಾರದಲ್ಲಿ ಉಳಿಯಲು ಸಾಧ್ಯ ಎಂದು ಅರಿತಿರುವ ಸಚಿವರು ನಾಯಕತ್ವ ಬದಲಾವಣೆಗೆ ಯಾವುದೇ ಅವಕಾಶವಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ನಾಯಕತ್ವ ಬದಲಾದರೆ ತಮ್ಮ ಹುದ್ದೆಗೆ ಕಂಟಕ ಎಂದು ಅರಿತಿರುವ ಸರ್ಕಾರದ ಕೆಲ ಹಿರಿಯ ಸಚಿವರು ಹಾಗೂ ವಲಸಿಗ ಸಚಿವರು ಬಿಎಸ್​ವೈ ಪರವಾಗಿ ನಿಂತಿದ್ದಾರೆ.

ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆದರೆ ಸೇಫ್. ರಾಜ್ಯದಲ್ಲಿ ಹೊಸ ಸಿಎಂ ಬಂದರೆ ಎಂಟಕ್ಕೂ ಹೆಚ್ಚು ಹಿರಿಯ ಸಚಿವರನ್ನು ಕೈ ಬಿಡುವ ಸಾಧ್ಯತೆ ಇದೆ. ವಲಸೆ ಗ್ಯಾಂಗ್ ನ ಕೆಲ ಸಚಿವರನ್ನು ಕೈ ಬಿಡುವ ಸಾಧ್ಯತೆ ಇದೆ. ಅಲ್ಲದೇ ಹೊಸ ಸಿಎಂ ಆದರೆ ಇರುವ ಖಾತೆಯೇ ಮತ್ತೆ ಧಕ್ಕುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಮಂತ್ರಿ ಆಗಿ ಮುಂದುವರೆಸುವ ವಿಶ್ವಾಸವೂ ಇಲ್ಲ. ಮತ್ತೆ ಮಂತ್ರಿಗಿರಿ, ಖಾತೆಗಾಗಿ ಫೈಟಿಂಗ್ ಮಾಡಬೇಕು ಎಂಬ ಕಾರಣಕ್ಕೆ ಯಡಿಯೂರಪ್ಪ ಅವರನ್ನೇ ಮುಂದುವರೆಸಲು ಮುಂದಾಗಿದ್ದಾರೆ.

ಅಲ್ಲದೇ ಯಡಿಯೂರಪ್ಪ ಅವರು ಬದಲಾದರೆ ಸಂಪುಟದಲ್ಲಿ ಹಿರಿಯ ಸಚಿವರಾದ
ಜಗದೀಶ್ ಶೆಟ್ಟರ್, ಕೆ ಎಸ್ ಈಶ್ವರಪ್ಪ, ಆರ್ ಅಶೋಕ್, ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ, ಸಿ ಸಿ ಪಾಟೀಲ್, ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಲಕ್ಷ್ಮಣ ಸವದಿ ಕೈ ಬಿಡುವ ಸಾಧ್ಯತೆ ಇದೆ. ಖಾತೆ ಬದಲಾಗುವ ಅನುಮಾನವೂ ಇದೆ. ಇದೇ ಕಾರಣಕ್ಕೆ ವಲಸಿಗರು ಮತ್ತು ಸೀನಿಯರ್ಸ್ ಗೆ ಸಿಎಂ ಬಿಎಸ್​ವೈ ಇದ್ರೇನೆ ಸೇಫ್ ಅಂತ ಅವರ ಬೆನ್ನಿಗೆ ನಿಂತಿದ್ದಾರೆ.

ಇದನ್ನು ಓದಿ: Explained: ಬೆಳಗಾವಿ ಸಾಹುಕಾರ್ ಕುಟುಂಬದಲ್ಲಿ ಬಿರುಕು? ಸತೀಶ್-ರಮೇಶ್ ಜಾರಕಿಹೊಳಿ ನಡುವೆ ಮತ್ತೆ ಮನಸ್ತಾಪಕ್ಕೆ ಕಾರಣವೇನು ಗೊತ್ತಾ?

ಸಿಎಂ ಬಿಎಸ್​ವೈ ಸರ್ಕಾರದಲ್ಲಿ ಅವರ ಮಗ ಬಿ.ವೈ. ವಿಜಯೇಂದ್ರ ಸೂಪರ್ ಸಿಎಂ ಆಗಿ ವರ್ತಿಸುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲೂ ಆಯಾ ಸಚಿವರ ಗಮನಕ್ಕೂ ತಾರದೆ ತಮಗೆ ಬೇಕಾದ ಹಾಗೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ನಮ್ಮ ಮಾತನ್ನು ಯಾರೂ ಕೇಳುತ್ತಿಲ್ಲ. ಎಲ್ಲ ವಿಜಯೇಂದ್ರ ಅವರು ಹೇಳಿದ ಹಾಗೆ ನಡೆಯುತ್ತಿದೆ ಎಂದು ಹಲವು ಸಚಿವರು ಈಗಾಗಲೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಇದೇ ವಿಚಾರವನ್ನು ಇಟ್ಟುಕೊಂಡು ವರಿಷ್ಠರ ಬಳಿ ದೂರು ಸಹ ನೀಡಿ, ನಾಯಕತ್ವ ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ ಎಂಬ ವಿಷಯ ಸಹ ಕೇಳಿಬಂದಿದೆ.

  • ವಿಶೇಷ ವರದಿ: ಚಿದಾನಂದ ಪಟೇಲ್ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: