Real Hero: ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಸರೆಯಾದ ಸ್ಕಾಲರ್‌ಶಿಪ್ ಮಾಸ್ಟರ್! ನಿವೃತ್ತ ಶಿಕ್ಷಕರ ಸಾಧನೆ ಕಥೆ ಇಲ್ಲಿದೆ ಓದಿ

ಈ ವಿದ್ಯಾರ್ಥಿವೇತನ ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನೇ ಬದಲಾಯಿಸುತ್ತದೆ. ಇಷ್ಟೆಲ್ಲಾ ಮಹತ್ವ ಹೊಂದಿರುವ ವಿದ್ಯಾರ್ಥಿವೇತನ ಕೊಡಿಸುವಲ್ಲಿ ಇಲ್ಲೊಬ್ಬರು ಶಿಕ್ಷಕರು ಮೇಲುಗೈ ಸಾಧಿಸಿದ್ದಾರೆ. ಸ್ಕಾಲರ್‌ ಶಿಪ್ ಮಾಸ್ಟರ್‌ ಎಂದೇ ಕರೆಯಲಾಗುವ ಈ ನಿವೃತ್ತ ಶಿಕ್ಷಕ 5 ಕೋಟಿ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನವನ್ನು ಲಕ್ಷಗಟ್ಟಲೆ ಬಡ ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಸಹಾಯ ಮಾಡಿದ್ದಾರೆ.

ನಾರಾಯಣ್‌ ನಾಯ್ಕ್

ನಾರಾಯಣ್‌ ನಾಯ್ಕ್

  • Share this:
ವಿದ್ಯಾರ್ಥಿವೇತನ (Scholarship), ವಿದ್ಯಾರ್ಥಿಗಳ ಜೀವನದ ಒಂದು ಅತ್ಯಮೂಲ್ಯ ನಿಧಿ ಎನ್ನಬಹುದು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಥವಾ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ (Students) ರಾಜ್ಯ ಸರ್ಕಾರ, ಅನೇಕ ಇಲಾಖೆಗಳು ಮತ್ತು ನಿಗಮಗಳು, ದಾನಿಗಳು, ಯಾವುದಾದರೂ ಫೌಂಡೇಶನ್‌ ಹೀಗೆ ಹಲವರು ಮುಂದಿನ ಶಿಕ್ಷಣಕ್ಕೆ (Education) ಪ್ರೋತ್ಸಾಹದಾಯಕವಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಾರೆ. ಇವರೆಲ್ಲಾ ಕೊಡಮಾಡುವ ವಿದ್ಯಾರ್ಥಿವೇತನ ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನೇ ಬದಲಾಯಿಸುತ್ತದೆ. ಇಷ್ಟೆಲ್ಲಾ ಮಹತ್ವ ಹೊಂದಿರುವ ವಿದ್ಯಾರ್ಥಿವೇತನ ಕೊಡಿಸುವಲ್ಲಿ ಇಲ್ಲೊಬ್ಬರು ಶಿಕ್ಷಕರು (Teachers) ಮೇಲುಗೈ ಸಾಧಿಸಿದ್ದಾರೆ. ಸ್ಕಾಲರ್‌ ಶಿಪ್ ಮಾಸ್ಟರ್‌ ಎಂದೇ ಕರೆಯಲಾಗುವ ಈ ನಿವೃತ್ತ ಶಿಕ್ಷಕ (Retired Teacher) 5 ಕೋಟಿ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನವನ್ನು ಲಕ್ಷಗಟ್ಟಲೆ ಬಡ ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಸಹಾಯ ಮಾಡಿದ್ದಾರೆ.

ಎಂಬತ್ತು ವರ್ಷದ ನಿವೃತ್ತ ಶಿಕ್ಷಕರ ಮಹತ್ತರ ಸಾಧನೆಯ ಕಥೆ
ಹೌದು, ನಾರಾಯಣ ನಾಯ್ಕ್ ಎಂಬ 80 ವರ್ಷದ ನಿವೃತ್ತ ಶಿಕ್ಷಕರ ಮಹತ್ತರ ಕೆಲಸದ ಕಥೆ ಇದು. ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ನಾಯ್ಕ್ ಅವರು ವಿಶಿಷ್ಟ ಧ್ಯೇಯವನ್ನು ಹೊಂದಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುತ್ತಿದ್ದಾರೆ.

ಪ್ರತಿದಿನ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಸಂಸ್ಥೆಗಳಿಗೆ, ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಅವರೊಂದಿಗೆ ಓರಿಯಂಟ್ ಮತ್ತು ಸಂವಹನ ನಡೆಸಿ ಮತ್ತು ಸರಿಯಾದ ವಿದ್ಯಾರ್ಥಿವೇತನವನ್ನು ಕಂಡುಹಿಡಿಯಲು ಅವರಿಗೆ ಮಾರ್ಗದರ್ಶನ ನೀಡುತ್ತಾರೆ ಇವರು. "ಕಳೆದ ವರ್ಷವೊಂದರಲ್ಲೇ ನಾನು ದಕ್ಷಿಣ ಕನ್ನಡ ಮತ್ತು ಉಡುಪಿಯ ಸುಮಾರು 200 ಶಾಲೆಗಳಿಗೆ ಭೇಟಿ ನೀಡಿದ್ದೇನೆ" ಎನ್ನುತ್ತಾರೆ 80 ವರ್ಷದ ಹಿರಿಯರು.



"ಸ್ಕಾಲರ್‌ಶಿಪ್ ಮಾಸ್ಟರ್" ಎಂದೇ ಕರೆಯಲ್ಪಡುವ, ನಿವೃತ್ತ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ನಾರಾಯಣ ನಾಯ್ಕ್ ಕಳೆದ ಹಲವಾರು ದಶಕಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನವನ್ನು ತಲುಪಿದ್ದಾರೆ ಮತ್ತು ಅವರಿಗೆ ಕೋಟಿ ಮೌಲ್ಯದ ವಿದ್ಯಾರ್ಥಿವೇತನವನ್ನು ಒದಗಿಸಿದ್ದಾರೆ.

ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ನಾಯ್ಕ್ ಅವರು ವಿಶಿಷ್ಟ ಧ್ಯೇಯವನ್ನು ಹೊಂದಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುತ್ತಿದ್ದಾರೆ. ಅವರು ಶಾಲೆ-ಕಾಲೇಜುಗಳಿಗೆ ಅಥವಾ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡದೆ, ಅವರೊಂದಿಗೆ ಓರಿಯಂಟ್ ಮತ್ತು ಸಂವಹನ ನಡೆಸದೆ ಮತ್ತು ಸರಿಯಾದ ವಿದ್ಯಾರ್ಥಿವೇತನವನ್ನು ಕಂಡುಹಿಡಿಯಲು ಅವರಿಗೆ ಮಾರ್ಗದರ್ಶನ ನೀಡದೆ ಒಂದು ದಿನವೂ ಕಳೆಯುವುದಿಲ್ಲ.

"ಸ್ಕಾಲರ್‌ಶಿಪ್ ಮಾಸ್ಟರ್" ಈ ನಾರಾಯಣ್‌ ನಾಯ್ಕ್
"ಸ್ಕಾಲರ್‌ಶಿಪ್ ಮಾಸ್ಟರ್" ಎಂದು ಕರೆಯಲ್ಪಡುವ, ನಿವೃತ್ತ ಸರ್ಕಾರಿ ಪ್ರೌಢಶಾಲಾ ಶಿಕ್ಷಕರು ಕಳೆದ ಹಲವಾರು ದಶಕಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನವನ್ನು ಮುಟ್ಟಿದ್ದಾರೆ, ಅವರಿಗೆ ಕೋಟಿ ಮೌಲ್ಯದ ವಿದ್ಯಾರ್ಥಿವೇತನವನ್ನು ಒದಗಿಸಿದ್ದಾರೆ. 38 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯ ನಂತರ, 2001 ರಲ್ಲಿ ನಿವೃತ್ತರಾದ ನಾಯಕ್, ತಮ್ಮ ಸುವರ್ಣ ವರ್ಷಗಳನ್ನು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಕಳೆಯುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಬಯಸಿದ್ದಾರೆ.

"ನಾನು ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿರುವಾಗಿನಿಂದ ಇದನ್ನು ಮಾಡುತ್ತಿದ್ದೇನೆ. ನಿವೃತ್ತಿಯ ನಂತರ, ಇದರಲ್ಲಿ ತೊಡಗಿಸಿಕೊಳ್ಳಲು ಇನ್ನೂ ಹೆಚ್ಚಿನ ಸಮಯವನ್ನು ಪಡೆದಿದ್ದೇನೆ, ಇದು ನನಗೆ ಖುಷಿ ನೀಡಿದೆ. ಈಗ ನಾನು ವಿದ್ಯಾರ್ಥಿ ವೇತನಕ್ಕಾಗಿ ಸಂಪನ್ಮೂಲ ವ್ಯಕ್ತಿಯಾಗಿ ಸಹಾಯ ಮಾಡುವಲ್ಲಿ ಸಂಪೂರ್ಣವಾಗಿ ಗಮನಹರಿಸಿದ್ದೇನೆ,'' ಎಂದು ನಾಯ್ಕ್ ಹೇಳುತ್ತಾರೆ.

ಇದನ್ನೂ ಓದಿ: Survey: ನಮ್ಮ ಮಕ್ಕಳಿಗೆ ದುಡ್ಡಿನ ಬೆಲೆ ಗೊತ್ತಿಲ್ಲಾ ಅಂತಾರೆ ಪೋಷಕರು! ಅದು ನಿಜಾನಾ?

ನಿವೃತ್ತಿಯ ನಂತರ ರೂ 40,000 ಪಿಂಚಣಿ ಪಡೆಯುವ ಇವರು ಅದರಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನು ಈ ಕೆಲಸದ ಪ್ರಯಾಣ ವೆಚ್ಚಕ್ಕಾಗಿಯೇ ಖರ್ಚು ಮಾಡುತ್ತಾರೆ. ಶಿಕ್ಷಣವು ಯಶಸ್ಸಿನ ಕೀಲಿಯಾಗಿದೆ ಮತ್ತು ಆದ್ದರಿಂದ ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯುವತ್ತ ಗಮನಹರಿಸಬೇಕೆಂದು ಅವರು ಹೇಳುತ್ತಾರೆ.

ವಿದ್ಯಾರ್ಥಿಗಳಿಗೆ ಸಾಹಯ ಮಾಡಲು ಪ್ರೇರಣೆಯೇ ಅವರ ಶಾಲಾ ಜೀವನ
ಬಡ ಕೃಷಿಕ ಕುಟುಂಬದಲ್ಲಿ ಬೆಳೆದ ನಾಯಕ್ ಅವರು ಶಿಕ್ಷಣವನ್ನು ಮುಂದುವರಿಸಲು ಎದುರಿಸಿದ ಹೋರಾಟಗಳನ್ನು ನೆನಪಿಸಿಕೊಳ್ಳುತ್ತಾರೆ. ಅವರು ಹೇಳುತ್ತಾರೆ, “ನನ್ನ ತಂದೆ 5 ನೇ ತರಗತಿಯ ನಂತರ ನನ್ನ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ಕಾರಣ ಅದನ್ನು ನಿಲ್ಲಿಸಲು ಬಯಸಿದ್ದರು. ಆದರೆ ನಾನು ಬಿಟ್ಟುಕೊಡಲು ಬಯಸಲಿಲ್ಲ. ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ನನ್ನ ತಂದೆಯ ಮನಸ್ಸನ್ನು ಬದಲಾಯಿಸಿ ಶಾಲೆಗೆ ಕಳುಹಿಸಲು ಒಪ್ಪಿಗೆ ಪಡೆದೆ" ಎಂದು ತಮ್ಮ ಹಿಂದಿನ ಶಾಲಾ ಜೀವನದ ಬಗ್ಗೆ ನಾರಾಯಣ್‌ ಹೇಳುತ್ತಾರೆ.



ಪ್ರತಿನಿತ್ಯ ಸುಮಾರು 16 ಕಿಮೀ ನಡೆದುಕೊಂಡು ಶಾಲೆಗೆ ಬರುತ್ತಿದ್ದ ನಾಯ್ಕ್ ಅವರು ಕನ್ನಡ ಮತ್ತು ಹಿಂದಿಯಲ್ಲಿ ಬಿ ಎಡ್ ಮತ್ತು ಎಂಎ ಪದವಿಗಳನ್ನು ಓದಿದರು. ಅವರು 20 ನೇ ವಯಸ್ಸಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. "ನನ್ನ ಓದಿಗಾಗಿ ನಾನು ಬಹಳಷ್ಟು ಕಷ್ಟಪಡಬೇಕಾಗಿತ್ತು ಮತ್ತು ನನ್ನ ಜೀವನದ ಅನುಭವಗಳು ನನಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಕೆಲಸದ ಬಗ್ಗೆ ಯೋಚಿಸುವಂತೆ ಮಾಡಿದೆ" ಎಂದು ಅವರು ಹೇಳುತ್ತಾರೆ.

ಲಭ್ಯವಿರುವ ಎಲ್ಲಾ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ
ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ ಹಲವಾರು ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತದೆ. ಆದರೆ ಈ ವಿದ್ಯಾರ್ಥಿವೇತನಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವಿನ ಕೊರತೆಯಿರುತ್ತದೆ. ಆದ್ದರಿಂದ, ನಿವೃತ್ತ ಶಿಕ್ಷಕರಾದ ಇವರು ಲಭ್ಯವಿರುವ ಎಲ್ಲಾ ವಿದ್ಯಾರ್ಥಿವೇತನಗಳ ಬಗ್ಗೆ ಮಾಹಿತಿ ಕಲೆ ಹಾಕಿ ವಿದ್ಯಾರ್ಥಿಗಳಲ್ಲಿ ಅವುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹೆಚ್ಚು ಅರ್ಹ ವಿದ್ಯಾರ್ಥಿಗಳಿಗೆ ಅವುಗಳನ್ನು ಪಡೆಯಲು ಸಹಾಯ ಮಾಡುವ ಸಾರ್ಥಕ ಕೆಲಸವನ್ನು ಮಾಡುತ್ತಿದ್ದಾರೆ.

ಅರ್ಹತೆ, ಜಾತಿ ಅಥವಾ ಧರ್ಮ, ಕಾರ್ಮಿಕ ಮತ್ತು ಮುಂತಾದವುಗಳ ಆಧಾರದ ಮೇಲೆ ಟ್ರಸ್ಟ್‌ಗಳು ಮತ್ತು ಫೌಂಡೇಶನ್‌ಗಳಂತಹ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಹೀಗೆ ವಿವಿಧ ಮಾನದಂಡಗಳ ಆಧಾರದ ಮೇಲೆ ವಿದ್ಯಾರ್ಥಿಗಳು ವಿವಿಧ ರೀತಿಯ ವಿದ್ಯಾರ್ಥಿವೇತನವನ್ನು ಪಡೆಯಬಹುದು ಎಂದು ನಾಯ್ಕ್ ಹೇಳುತ್ತಾರೆ.

“ಶಾಲೆಯಲ್ಲಿ ಉತ್ತಮ ಸಾಧನೆ ಮಾಡುವ ಸರ್ಕಾರಿ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ನಾನು ಯಾವಾಗಲೂ ಆದ್ಯತೆ ನೀಡುತ್ತೇನೆ. ನಾನು ಅವರೊಂದಿಗೆ ಸಂವಹನ ನಡೆಸುತ್ತೇನೆ ಮತ್ತು ಅವರ ಕುಟುಂಬದ ಹಿನ್ನೆಲೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತೇನೆ. ಅದರ ನಂತರ, ಅವರು ನೀಡಿದ ಮಾಹಿತಿಯ ಬಗ್ಗೆ ನ್ಯಾಯಸಮ್ಮತತೆಯನ್ನು ಪರಿಶೀಲಿಸಲು, ನಾನು ಅವರ ಮನೆಗಳಿಗೆ ಭೇಟಿ ನೀಡುತ್ತೇನೆ. ಒಮ್ಮೆ ದೃಢೀಕರಿಸಿದ ನಂತರ, ಅವರು ಪಡೆದುಕೊಳ್ಳಬಹುದಾದ ವಿದ್ಯಾರ್ಥಿವೇತನಗಳ ಬಗ್ಗೆ ನಾನು ಅವರಿಗೆ ತಿಳಿಸುತ್ತೇನೆ ಮತ್ತು ಕಾರ್ಯವಿಧಾನಗಳೊಂದಿಗೆ ಅವರಿಗೆ ಸಹಾಯ ಮಾಡುತ್ತೇನೆ, ”ಎಂದು ಅವರು ವಿವರಿಸುತ್ತಾರೆ.

ಕಳೆದ ಎರಡು ದಶಕಗಳಲ್ಲಿ 5 ಕೋಟಿ ರೂ.ವಿದ್ಯಾರ್ಥಿವೇತನ ತಲುಪಿಸಿದ ಶಿಕ್ಷಕ
ಇದಲ್ಲದೆ, ಅವರು ವಿದ್ಯಾರ್ಥಿವೇತನ ಅಥವಾ ಪ್ರಾಯೋಜಕತ್ವಗಳೊಂದಿಗೆ ಸಹಾಯ ಮಾಡಲು ಹಿಂದುಳಿದ ವಿದ್ಯಾರ್ಥಿಗಳನ್ನು ವಿವಿಧ ಎನ್‌ಜಿಒಗಳು ಮತ್ತು ಫೌಂಡೇಶನ್‌ಗಳಿಗೆ ಸಂಪರ್ಕಿಸುತ್ತಾರೆ. "ಸುಪ್ರಜಿತ್ ಫೌಂಡೇಶನ್, ದ್ಯುತಿ ಫೌಂಡೇಶನ್ ಮತ್ತು ಮುಂತಾದ ವಿವಿಧ ಸಂಸ್ಥೆಗಳಿಂದ ವರ್ಷಕ್ಕೆ ಸುಮಾರು 16 ಲಕ್ಷ ರೂಪಾಯಿಗಳನ್ನು ವಿದ್ಯಾರ್ಥಿವೇತನವಾಗಿ ಒದಗಿಸಲಾಗಿದೆ" ಎಂದು ಅವರು ಹೇಳುತ್ತಾರೆ, "ಕಳೆದ ಎರಡು ದಶಕಗಳಲ್ಲಿ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುಮಾರು 5 ಕೋಟಿ ರೂ. ಮೌಲ್ಯಯುತವಾದ ವಿದ್ಯಾರ್ಥಿವೇತನದೊಂದಿಗೆ ಪ್ರಯೋಜನ ಪಡೆದಿದ್ದಾರೆ" ಎನ್ನುತ್ತಾರೆ ಸಾಧಕರು.

ಇದನ್ನೂ ಓದಿ:  Education: ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ! ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದೇ ಉದ್ಯಮಿಯ ಉದ್ದೇಶ

ಪಿಂಚಣಿ ಹಣದ ಮೂಲಕವೂ ವಿದ್ಯಾರ್ಥಿಗಳಿಗೆ ಸಹಾಯ
ಕಳೆದ 25 ವರ್ಷಗಳಿಂದ ಅವರನ್ನು ಬಲ್ಲ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹರಿಪ್ರಸಾದ್ ಶೆಟ್ಟಿ ಮಾತನಾಡಿ, ನನ್ನ ಜೀವನದಲ್ಲಿ ಕಂಡ ಅತ್ಯಂತ ನಿಸ್ವಾರ್ಥ ವ್ಯಕ್ತಿಗಳಲ್ಲಿ ಅವರು ಒಬ್ಬರು. ನಮ್ಮಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅವರ ಪ್ರಯತ್ನದಿಂದ ಸಾಕಷ್ಟು ಪ್ರಯೋಜನ ಪಡೆದಿದ್ದಾರೆ.



ಅವರು ನಮ್ಮ ಕಾಲೇಜಿಗೆ ಆಗಾಗ್ಗೆ ಭೇಟಿ ನೀಡುತ್ತಾರೆ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿ ನೀಡುತ್ತಾರೆ. ಹೆಚ್ಚು ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ ಮತ್ತು ಅವರ ಅರ್ಜಿಗಳನ್ನು ಭರ್ತಿ ಮಾಡಲು ಸಹ ಇವರೇ ಸಹಾಯ ಮಾಡುತ್ತಾರೆ. 80ರ ಹರೆಯದಲ್ಲೂ ಅವರ ಚೈತನ್ಯ ನಿಜಕ್ಕೂ ಹೆಮ್ಮೆ ಪಡುವಂತದ್ದು' ಎಂದು ಹರಿಪ್ರಸಾದ್‌ ನಾರಾಯಣ್‌ ಅವರನ್ನು ಶ್ಲಾಘಿಸಿದ್ದಾರೆ.

"ಸ್ಕಾಲರ್‌ಶಿಪ್‌ಗಳನ್ನು ಒದಗಿಸುವುದರ ಹೊರತಾಗಿ ಅವರು ಕೆಲವೊಮ್ಮೆ ತಮ್ಮ ಸ್ವಂತ ಪಿಂಚಣಿ ಹಣದಿಂದಲೂ ಬಡ ವಿದ್ಯಾರ್ಥಿಗಳಿಗೆ ಹಣದ ಸಹಾಯವನ್ನು ನೀಡುತ್ತಾರೆ" ಎಂದು ಅವರು ಹೇಳುತ್ತಾರೆ.

"ನಾರಾಯಣ್‌ ನಾಯ್ಕ್‌ ಅವರು, ವಿದ್ಯಾರ್ಥಿವೇತನಗಳ ಗ್ರಂಥಾಲಯ"
ಪ್ರಸ್ತುತ ಕರ್ನಾಟಕದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಯೋಗೀಶ್ ಕೈರೋಡಿ, ನಾರಾಯಣ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಪಡೆದ ಸ್ಕಾಲರ್‌ಶಿಪ್ ಸ್ನಾತಕೋತ್ತರ ಪದವಿಯನ್ನು ಮುಂದುವರಿಸಲು ಹೇಗೆ ಸಹಾಯ ಮಾಡಿದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

"ನಾರಾಯಣ್‌ ನಾಯ್ಕ್‌ ಅವರು, 'ವಿದ್ಯಾರ್ಥಿವೇತನಗಳ ಗ್ರಂಥಾಲಯ' ಮತ್ತು ಅವರು ದಶಕಗಳಿಂದ ಈ ಪ್ರದೇಶದ ಬಹುತೇಕ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದಾರೆ. ನಾನು ನನ್ನ ಸ್ನಾತಕೋತ್ತರ ಪದವಿಯನ್ನು ಓದುತ್ತಿರುವಾಗ ಅವರು ನನಗೆ ಸರ್ಕಾರಿ ವಿದ್ಯಾರ್ಥಿವೇತನವನ್ನು ಪಡೆಯಲು ಸಹಾಯ ಮಾಡಿದರು ಮತ್ತು ನನ್ನ ಕಾಲೇಜು ಶುಲ್ಕವನ್ನು ನೋಡಿಕೊಂಡರು. ಈ ವಯಸ್ಸಿನಲ್ಲೂ ಅವರು ತಮ್ಮ ಸಮಾಜ ಸೇವೆಯನ್ನು ಮುಂದುವರಿಸುತ್ತಿರುವುದು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ’ ಎಂದು ಯೋಗೀಶ್ ಹೇಳಿದ್ದಾರೆ.

ಇದನ್ನೂ ಓದಿ:  Explained: ಅಷ್ಟೊಂದು ಹಿಂಸೆಯಾಗ್ತಿದ್ರೂ ವಿಕಲಚೇತನ ಮಹಿಳೆಯರು ಎಲ್ಲಾ ನೋವು ಸಹಿಸಿಕೊಳ್ತಿರೋದೇಕೆ?

ವಿದ್ಯಾರ್ಥಿಗಳ ಜೀವನದ ಬೆಳಕಾಗಿರುವ ನಾರಾಯಣ್‌ ನಾಯ್ಕ್, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಭರವಸೆಯನ್ನು ಕಂಡುಕೊಳ್ಳಲು ಸಹಾಯ ಮಾಡುವುದು ಅವರ ಕರ್ತವ್ಯವೆಂದು ಭಾವಿಸಿದ್ದಾರೆ. ನಾನು ಯಾವಾಗಲೂ ವಿದ್ಯಾರ್ಥಿಗಳ ನೆರವಿಗೆ ನಿಲ್ಲುತ್ತೇನೆ, ನನ್ನ ಕೈಮೀರಿ ಅವರ ಏಳಿಗೆಗೆ ಪ್ರಯತ್ನಿಸುತ್ತೇನೆ ಎನ್ನುತ್ತಾರೆ ಹಿರಿಯ ಜೀವಿ, ನಿವೃತ್ತ ಶಿಕ್ಷಕ ನಾರಾಯಣ್‌ ನಾಯ್ಕ್.
Published by:Ashwini Prabhu
First published: