Brain Stem Failure: ಹಾಗೆಂದರೇನು? ಸಂಚಾರಿ ವಿಜಯ್ ಮತ್ತೆ ಮೊದಲಿನಂತೆ ಆಗದೇ ಇರಲು ಇದೇ ಕಾರಣ, ವೈದ್ಯರ ವಿವರಣೆ ಇಲ್ಲಿದೆ..

Brain Stem Failure: ವೈದ್ಯರು ವಿಜಯ್ ಗೆ ಆಗಿರುವ ಗಂಭೀರ ಸ್ವರೂಪದ ಅನಾರೋಗ್ಯವನ್ನು ಬ್ರೇನ್ ಸ್ಟೆಮ್ ಫೇಲ್ಯೂರ್ ಎಂದಿದ್ದಾರೆ. ಏನಿದು ಬ್ರೇನ್ ಸ್ಟೆಮ್ ಫೇಲ್ಯೂರ್? ಇದರ ಲಕ್ಷಣಗಳೇನು? ದೇಹದ ಅಂಗಾಂಗಗಳ ಮೇಲೆ ಇದರ ಪರಿಣಾಮಗಳೇನು ? ಈ ಬಗ್ಗೆ ನಿಮ್ಹಾನ್ಸ್​​ನ ಹಿರಿಯ ನ್ಯೂರೋಸರ್ಜನ್ ಡಾ ದ್ವಾರಕಾನಾಥ್ ನ್ಯೂಸ್​18 ಕನ್ನಡದ ಜೊತೆ ಕೆಲ ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ.

ಸಂಚಾರಿ ವಿಜಯ್

ಸಂಚಾರಿ ವಿಜಯ್

  • Share this:
Brain Stem Dead: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ರಸ್ತೆ ಅಪಘಾತಕ್ಕೊಳಗಾಗಿ ಆಸ್ಪತ್ರೆ ಸೇರುವಾಗಲೇ ಕೋಮಾಗೆ ಜಾರಿದ್ದರು. ವೈದ್ಯರು ವಿಜಯ್ ಗೆ ಆಗಿರುವ ಗಂಭೀರ ಸ್ವರೂಪದ ಅನಾರೋಗ್ಯವನ್ನು ಬ್ರೇನ್ ಸ್ಟೆಮ್ ಫೇಲ್ಯೂರ್ ಎಂದಿದ್ದಾರೆ. ಏನಿದು ಬ್ರೇನ್ ಸ್ಟೆಮ್ ಫೇಲ್ಯೂರ್? ಇದರ ಲಕ್ಷಣಗಳೇನು? ದೇಹದ ಅಂಗಾಂಗಗಳ ಮೇಲೆ ಇದರ ಪರಿಣಾಮಗಳೇನು ? ಈ ಬಗ್ಗೆ ನಿಮ್ಹಾನ್ಸ್​​ನ ಹಿರಿಯ ನ್ಯೂರೋಸರ್ಜನ್ ಡಾ ದ್ವಾರಕಾನಾಥ್ ನ್ಯೂಸ್​18 ಕನ್ನಡದ ಜೊತೆ ಕೆಲ ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ.

ಮೆದುಳು ಮತ್ತು ಬೆನ್ನುಹುರಿ ನಮ್ಮ ದೇಹದ ನರ್ವಸ್ ಸಿಸ್ಟಮ್ ಅಥವಾ ಇಡೀ ದೇಹದ ಕಂಟ್ರೋಲ್ ಮಾಡುವ ಅಂಗಾಂಗಗಳು. ಮೆದುಳು ಪ್ರತೀ ಅಂಗದ ಕೆಲಸಕ್ಕೆ ಬೇಕಾದ ಸಿಗ್ನಲ್ ಕೊಡುತ್ತದೆ. ಅದು ಬ್ರೇನ್​ ಸ್ಟೆಮ್ ಮೂಲಕ ಹಾದು ಬೆನ್ನು ಹುರಿ ಅಥವಾ ಸ್ಪೈನಲ್ ಕಾರ್ಡ್ ಗೆ ಹೋಗುತ್ತದೆ. ನಂತರ ಅಲ್ಲಿಂದ ನರಗಳ ಮೂಲಕ ಎಲ್ಲಾ ಅಂಗಗಳಿಗೂ ಅವುಗಳ ಕಾರ್ಯಚಲನೆಗೆ ತಕ್ಕಂತೆ ಮಾಹಿತಿ ರವಾನೆಯಾಗುತ್ತದೆ. ಬ್ರೇನ್ ಸ್ಟೆಮ್ ಈ ಎರಡೂ ಪ್ರಮುಖ ಅಂಗಗಳಾದ ಮೆದುಳು ಮತ್ತು ಬೆನ್ನುಹುರಿಯನ್ನು ಸೇರಿಸುವ ಜಂಕ್ಷನ್ ಪಾಯಿಂಟ್.

Sanchari Vijay suffers from brain stem death what is it why is it life threatening
ಪ್ರಾತಿನಿಧಿಕ ಚಿತ್ರ


ಬ್ರೇನ್ ಸ್ಟೆಮ್ ನಲ್ಲಿ ಪ್ರಮುಖವಾಗಿ ದೇಹದ ಉಸಿರಾಟದ ಕಂಟ್ರೋಲ್ ಇರುತ್ತದೆ. ಅಪಘಾತ ಮುಂತಾದ ಭಾರೀ ಪೆಟ್ಟು ಬಿದ್ದಂಥಾ ಸಂದರ್ಭಗಳಲ್ಲಿ ಬ್ರೇನ್ ಸ್ಟೆಮ್ ನಲ್ಲಿ ಇರುವ ಎಲ್ಲಾ ನರಗಳು ಒತ್ತಿದಂತಾಗಿರುತ್ತದೆ. ಹಾಗಾಗಿ ಮೆದುಳಿನಿಂದ ಹೊರಡುವ ಯಾವ ಸಿಗ್ನಲ್ ಕೂಡಾ ಅಂಗಗಳನ್ನು ತಲುಪುವುದಿಲ್ಲ, ಆಯಾ ಅಂಗಗಳು ತಮ್ಮ ಕೆಲಸಗಳನ್ನು ಮಾಡುವುದನ್ನು ಕ್ರಮೇಣ ನಿಲ್ಲಿಸಿಬಿಡುತ್ತವೆ.

ಬ್ರೇನ್ ಸ್ಟೆಮ್ ಡೆಡ್ ಎನ್ನುವುದು ಬಹುತೇಕ ಬ್ರೈನ್ ಡೆಡ್ ಅಥವಾ ಮೆದುಳು ಸಾವಿಗೆ ಸಮಾನವಾಗಿದೆ. ಆದರೆ ಹೃದಯಕ್ಕೆ ತನ್ನದೇ ಆದ ಕೆಲವು ಶಕ್ತಿಗಳಿರುತ್ತವೆ. ಹಾಗಾಗಿ ಅದು ಬಡಿಯುತ್ತಿರುತ್ತದೆ. ಆದರೂ ಮೆದುಳಿನಿಂದ ಅದಕ್ಕೆ ಸರಿಯಾದ ಆಜ್ಞೆಗಳು ಬರದೇ ಇರುವುದರಿಂದ ಬಡಿತಗಳು ಬಹಳ ಏರುಪೇರಾಗುವುದು, ಬಿಪಿ ವ್ಯತ್ಯಯವಾಗುವುದು ಉಂಟಾಗುತ್ತದೆ.

ನಮ್ಮ ಮೆದುಳನ್ನು ಒಂದು ಹೂಕೋಸಿನಂತೆ ಎಂದು ಭಾವಿಸಿದರೆ ಆ ಹೂಕೋಸನ್ನು ಅದರ ಗಿಡಕ್ಕೆ ಸೇರಿದಂತೆ ಜೋಡಿಸುವ ತೊಟ್ಟಿನಂಥಾ ಅಂಗವನ್ನು ಬ್ರೇನ್ ಸ್ಟೆಮ್ ಎನ್ನಬಹುದು. ಮೆದುಳು ಮತ್ತು ತಲೆಯಿಂದ ಕೆಳಗಿನ ದೇಹದ ಇತರ ಭಾಗಗಳಿಗೆ ಇರುವ ಲಿಂಕ್ ಅಥವಾ ಸೇತುವೆ ಈ ಬ್ರೇನ್ ಸ್ಟೆಮ್. ಬ್ರೇನ್ ಸ್ಟೆಮ್ ಫೇಲ್ಯೂರ್ ಆಗಿರುವ ವ್ಯಕ್ತಿ ಮತ್ತೆ ಮೊದಲಿನಂತೆ ಆಗಲು ಸಾಧ್ಯವಿಲ್ಲ. ವೆಂಟಿಲೇಟರ್​ ಮೇಲೆ ಇರುವಷ್ಟು ಸಮಯ ಉಸಿರಾಟ ಮುಂದುವರೆದಿರುತ್ತದೆ. ವಯಸ್ಸು ಚಿಕ್ಕದಿರುವಾಗ ಒಂದು ಹಂತದವರಗೆ ಹೃದಯದ ಬಡಿತವೂ ಮುಂದುವರೆಯುತ್ತದೆ, ಆದರೆ ಚೇತರಿಕೆ ಸಾಧ್ಯವಿಲ್ಲ ಎನ್ನುತ್ತಾರೆ ವೈದ್ಯರು.
Published by:Soumya KN
First published: