Russian oil: ರಷ್ಯಾದ ತೈಲ ಆಮದು ಬೆಲೆ ಮಿತಿ ವಿಚಾರ; ದ್ವಿತೀಯ ನಿರ್ಬಂಧಗಳ ಕಾಯಿದೆ ಜಾರಿ ಮಾಡುವಂತೆ ಅಮೆರಿಕಾಕ್ಕೆ ಒತ್ತಾಯ

ಸೆನೆಟ್ ಸದಸ್ಯರು ಪ್ರಸ್ತುತ ರಷ್ಯಾದ ತೈಲ ಬೆಲೆಯ ಮೇಲೆ ಮಿತಿಯನ್ನು ಜಾರಿಗೊಳಿಸಲು ದ್ವಿತೀಯ ನಿರ್ಬಂಧಗಳ ಬಳಕೆಗೆ ಅಮೆರಿಕಾವನ್ನು ಒತ್ತಾಯಿಸುತ್ತಿದೆ. ರಷ್ಯಾದ ತೈಲದ ವ್ಯಾಪಾರವನ್ನು ಸುಗಮಗೊಳಿಸುವ ವಿದೇಶಿ ಸಂಸ್ಥೆಗಳ ಮೇಲೆ ಮತ್ತು ಸರಕುಗಳ ಖರೀದಿಯನ್ನು ಹೆಚ್ಚಿಸುವ ದೇಶಗಳ ಮೇಲೆ ದ್ವಿತೀಯ ನಿರ್ಬಂಧಗಳನ್ನು ವಿಧಿಸುವ ಶಾಸನದ ಮೇಲೆ ಸೆನೆಟರ್‌ ತಂಡದ ಸದಸ್ಯರಾದ ಕ್ರಿಸ್ ವ್ಯಾನ್ ಹೊಲೆನ್, ಮೇರಿಲ್ಯಾಂಡ್ ಡೆಮೋಕ್ರಾಟ್ ಮತ್ತು ಪೆನ್ಸಿಲ್ವೇನಿಯಾ ರಿಪಬ್ಲಿಕನ್ ಪ್ಯಾಟ್ ಟೂಮಿ ಕೆಲಸ ಮಾಡುತ್ತಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಉಕ್ರೇನ್‌ (Ukraine) ಮೇಲೆ ರಷ್ಯಾ ಯುದ್ಧದ ಕಾರಣ, ಮಾಸ್ಕೋದ ಯುದ್ಧಕ್ಕೆ ಹಣಕಾಸು ಒದಗಿಸುವ ಪ್ರಮುಖ ಮೂಲವನ್ನು ಕಡಿತಗೊಳಿಸುವುದರ ಭಾಗವಾಗಿ ರಷ್ಯಾದ ತೈಲ ಆಮದಿನ (Import of oil) ಬೆಲೆ ಮಿತಿಯನ್ನು ಜಾರಿಗೊಳಿಸುವ ಜಿ–7 ಸಭೆಯ ಅಭಿಪ್ರಾಯದ ಬೆನ್ನಲ್ಲೇ ಮತ್ತೊಂದು ವಿಚಾರ ಹೊರಬಿದ್ದಿದೆ. ಹೌದು, ಸೆನೆಟ್ ಸದಸ್ಯರು ಪ್ರಸ್ತುತ ರಷ್ಯಾದ ತೈಲ ಬೆಲೆಯ ಮೇಲೆ ಮಿತಿಯನ್ನು ಜಾರಿಗೊಳಿಸಲು ದ್ವಿತೀಯ ನಿರ್ಬಂಧಗಳ ಬಳಕೆಗೆ ಅಮೆರಿಕಾವನ್ನು (America) ಒತ್ತಾಯಿಸುತ್ತಿದೆ. ರಷ್ಯಾದ ತೈಲದ ವ್ಯಾಪಾರವನ್ನು ಸುಗಮಗೊಳಿಸುವ ವಿದೇಶಿ ಸಂಸ್ಥೆಗಳ ಮೇಲೆ ಮತ್ತು ಸರಕುಗಳ ಖರೀದಿಯನ್ನು(Purchase) ಹೆಚ್ಚಿಸುವ ದೇಶಗಳ ಮೇಲೆ ದ್ವಿತೀಯ ನಿರ್ಬಂಧಗಳನ್ನು ವಿಧಿಸುವ ಶಾಸನದ ಮೇಲೆ ಸೆನೆಟರ್‌ ತಂಡದ ಸದಸ್ಯರಾದ ಕ್ರಿಸ್ ವ್ಯಾನ್ ಹೊಲೆನ್, ಮೇರಿಲ್ಯಾಂಡ್ ಡೆಮೋಕ್ರಾಟ್ ಮತ್ತು ಪೆನ್ಸಿಲ್ವೇನಿಯಾ ರಿಪಬ್ಲಿಕನ್ ಪ್ಯಾಟ್ ಟೂಮಿ ಕೆಲಸ ಮಾಡುತ್ತಿದ್ದಾರೆ.

ದ್ವಿತೀಯ ನಿರ್ಬಂಧ ಕಾಯಿದೆ ಜಾರಿಗೆ ಅಮೆರಿಕಾಕ್ಕೆ ಸೆನೆಟರ್‌ ತಂಡ ಒತ್ತಾಯ

"ನಾವು ಏಕರೂಪದ ಅಂತರರಾಷ್ಟ್ರೀಯ ಗುಣಮಟ್ಟವನ್ನು ಬಯಸುತ್ತೇವೆ. ಪ್ರಪಂಚದಲ್ಲಿರುವ ಪ್ರತಿಯೊಬ್ಬರೂ ಅದನ್ನು ಅನುಸರಿಸಿದರೆ ಮಾತ್ರ ಬೆಲೆಯ ಮಿತಿ ಕಾರ್ಯನಿರ್ವಹಿಸುತ್ತದೆ. ನಮಗೆ ಯಾವುದೇ ಲೋಪದೋಷಗಳು ಬೇಡ. ನಾವು ಸೋರಿಕೆಯನ್ನು ಬಯಸುವುದಿಲ್ಲ" ಎಂದು ಸೆನೆಟರ್‌ ವ್ಯಾನ್ ಹೊಲೆನ್ ತಿಳಿಸಿದ್ದಾರೆ.

ವ್ಯಾನ್ ಹೊಲೆನ್ ಮತ್ತು ಟೂಮಿ ಈ ಮೊದಲು ಹಾಂಗ್ ಕಾಂಗ್ ಸ್ವಾಯತ್ತತೆ ಕಾಯಿದೆಯ ಸೆನೆಟ್ ಆವೃತ್ತಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಕಾಯಿದೆ ಪ್ರದೇಶದಲ್ಲಿನ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವಲ್ಲಿ ತೊಡಗಿರುವ ಚೀನಾದ ಅಧಿಕಾರಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಿತು ಮತ್ತು ಡೊನಾಲ್ಡ್ ಟ್ರಂಪ್ ಕೂಡ ಇದಕ್ಕೆ ಒಪ್ಪಿ ಕಾನೂನಿಗೆ ಸಹಿ ಹಾಕಿದ್ದರು.‌

ಬಿಡೆನ್‌ ಸರ್ಕಾರದ ನಿಲುವೇನು?

ಸೆನೆಟ್‌ ಒತ್ತಾಯಿಸುತ್ತಿರುವ ದ್ವಿತೀಯ ನಿರ್ಬಂಧ ನಿಯಮದ ವಿಚಾರವಾಗಿ ಇಬ್ಬರ ನಡುವೆ ವಿರೋಧಗಳು ಉಂಟಾಗುವ ಸಾಧ್ಯತೆ ಇದೆ. ಏಕೆಂದರೆ ಇದನ್ನು ಅಮೆರಿಕಾ ಒಪ್ಪಿಕೊಳ್ಳಲು ತಯಾರಿಲ್ಲ.

ಇದನ್ನೂ ಓದಿ: Driving Licence: ಡ್ರೈವಿಂಗ್ ಲೈಸೆನ್ಸ್​ ಕಳೆದುಹೋಗಿದ್ಯಾ? ಹೀಗೆ ಸಿಂಪಲ್ಲಾಗಿ ಮೊಬೈಲ್​​ನಲ್ಲೇ ಡೌನ್​ಲೌಡ್ ಮಾಡಿ

ದ್ವಿತೀಯ ನಿರ್ಬಂಧಗಳು ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸುವ ಭಾರತ, ಚೀನಾದಂತಹ ರಾಷ್ಟ್ರಗಳೊಂದಿಗೆ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ ಎಂಬುವುದು ಬಿಡೆನ್ ಆಡಳಿತ ತಂಡದ ವಾದ. ಈ ವಿಚಾರವಾಗಿ ಬಿಡೆನ್ ಜೊತೆ ಮಾತುಕತೆ ನಡೆಯುತ್ತಿದೆ ಎಂದು ವ್ಯಾನ್‌ ಹೊಲೆನ್‌ ಮತ್ತು ಟೂಮಿ ತಿಳಿಸಿದರು.

ಒಟ್ಟಾರೆ ಭಾರತ ಮತ್ತು ಚೀನಾವನ್ನು ಕೆರಳಿಸುವಂತಹ ರಷ್ಯಾದ ತೈಲ ಖರೀದಿಗಳ ಮೇಲೆ ಸೆನೆಟರ್‌ಗಳು ದ್ವಿತೀಯ ನಿರ್ಬಂಧಗಳನ್ನು ಹೇರುವ ಕೆಲಸ ಮಾಡುತ್ತಿದ್ದಾರೆ ಎನ್ನಬಹುದು.

ಹೊಸ ಕಾಯಿದೆ ಏನು? ಜಾರಿಗೆ ಬಂದರೆ ಏನಾಗಬಹುದು?
ಇಬ್ಬರು ಸೆನೆಟರ್‌ಗಳ ಪ್ರಸ್ತಾಪದ ಅಡಿಯಲ್ಲಿ, ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ಮಾರ್ಚ್ 2023ರ ವೇಳೆಗೆ ರಷ್ಯಾದ ಸಮುದ್ರದ ತೈಲದ ಬೆಲೆಯ ಮೇಲೆ ಮಿತಿಯನ್ನು ಹೇರಬೇಕಾಗುತ್ತದೆ. ನಂತರ ಪ್ರತಿ ವರ್ಷವೂ ಮೂರನೇ ಒಂದು ಭಾಗದಷ್ಟು ಕಡಿಮೆಗೊಳಿಸಲಾಗುತ್ತದೆ.

ಆಡಳಿತವು ತೈಲದ ಜಾಗತಿಕ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ನಿರ್ಧರಿಸಿದರೆ ಅಧ್ಯಕ್ಷರು ಬೆಲೆ ಕಡಿತವನ್ನು ಮನ್ನಾ ಮಾಡಬಹುದು,
ಬ್ಯಾಂಕುಗಳು, ವಿಮೆ ಮತ್ತು ಮರು-ವಿಮಾ ಕಂಪನಿಗಳು ಮತ್ತು ಬ್ರೋಕರೇಜ್‌ಗಳು ಸೇರಿದಂತೆ ರಷ್ಯಾದ ತೈಲದ ಮಾರಾಟ ಅಥವಾ ಸಾಗಣೆಯಲ್ಲಿ ತೊಡಗಿರುವ ಯಾವುದೇ ಸಂಸ್ಥೆಗಳ ಮೇಲೆ ದ್ವಿತೀಯ ನಿರ್ಬಂಧಗಳ ಮೂಲಕ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ.

ಇದನ್ನೂ ಓದಿ: AirAsia: ಏರ್​ಏಷ್ಯಾ ಬಂಪರ್​ ಆಫರ್​, 50 ಲಕ್ಷ ಉಚಿತ ವಿಮಾನ ಟಿಕೆಟ್​ಗಳು!

ಇನ್ನೂ ಪರಿಚಯಿಸದ ಶಾಸನವು ರಷ್ಯಾದ ತೈಲ, ತೈಲ ಉತ್ಪನ್ನಗಳು, ಅನಿಲ ಮತ್ತು ಕಲ್ಲಿದ್ದಲನ್ನು ಯುದ್ಧಪೂರ್ವದ ಸಮಯದಿಂದ ಆಮದು ಮಾಡಿಕೊಳ್ಳುತ್ತಿರುವ ದೇಶಗಳಿಗೆ ದಂಡ ವಿಧಿಸುತ್ತದೆ.

ದ್ವಿತೀಯ ನಿರ್ಬಂಧ ಎಂದರೇನು?

ಯುನೈಟೆಡ್ ಸ್ಟೇಟ್ಸ್‌ನ ಹೊರಗೆ, ದೇಶದಿಂದ ವಿಧಿಸಲಾದ ಎಲ್ಲಾ ಆರ್ಥಿಕ ನಿರ್ಬಂಧಗಳು ಪ್ರಾಥಮಿಕ ನಿರ್ಬಂಧಗಳಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ, ದ್ವಿತೀಯ ನಿರ್ಬಂಧಗಳು ಅನುಮೋದಿಸುವ ದೇಶದ ಕಾನೂನು ವ್ಯಾಪ್ತಿಗೆ ಒಳಪಡದ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ದಂಡವನ್ನು ವಿಧಿಸುತ್ತವೆ ಮತ್ತು ಪ್ರಾಥಮಿಕ ನಿರ್ಬಂಧಗಳ ಅಡಿಯಲ್ಲಿ ನಿಷೇಧಿಸಲಾದ ಅದೇ ವ್ಯವಹಾರಗಳಲ್ಲಿ ತೊಡಗಿರುವ ಘಟಕಗಳ ವಿರುದ್ಧ ಅನ್ವಯಿಸಲಾಗುತ್ತದೆ.
Published by:Ashwini Prabhu
First published: