Explained: ರಷ್ಯಾ-ಉಕ್ರೇನ್ ಬಿಕ್ಕಟ್ಟು; ಭಾರತದಲ್ಲಿ ಪೆಟ್ರೋಲ್​ ಬೆಲೆ ಇನ್ನಷ್ಟು ಏರಿಕೆ ಸಾಧ್ಯತೆ

ಪ್ರಸಕ್ತ 2022 ರಲ್ಲಿ, ತೈಲ ಬೆಲೆಗಳು ಹೆಚ್ಚಾದಂತೆ ಭಾರತದ ಒಟ್ಟು ಆಮದುಗಳಲ್ಲಿ ತೈಲ ಆಮದಿನ ಪಾಲು ಶೇಕಡಾ 25.8 ಕ್ಕೆ ಹೆಚ್ಚಾಗಿದೆ. ತೈಲ ಬೆಲೆಗಳು ಮತ್ತೆ ಏರಿಕೆಯ ಹಾದಿಯಲ್ಲಿದ್ದು, ತೈಲ ಆಮದು ಬಿಲ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಉಕ್ರೇನ್‌ನ (Ukraine ) ಪ್ರತ್ಯೇಕತಾವಾದಿಗಳಿರುವ ಪ್ರದೇಶಗಳಾದ ಡೊನೆಸ್ಕ್ ಮತ್ತು ಲುಹಾನ್ಸ್ಕ್‌ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin)  ಸೈನ್ಯವನ್ನು ನಿಯೋಜಿಸಿದ ನಂತರ ಬ್ರೆಂಟ್ ಕಚ್ಚಾ ತೈಲ ಬೆಲೆಗಳು (oil Prices) ಮಂಗಳವಾರ ಪ್ರತಿ ಬ್ಯಾರೆಲ್‌ಗೆ 96.7 ಡಾಲರ್ ತಲುಪಿದ್ದವು, ಇದು ಸೆಪ್ಟೆಂಬರ್ 2014 ರಿಂದ ಇಲ್ಲಿಯವರೆಗಿನ ಅತ್ಯಧಿಕ ಬೆಲೆಯಾಗಿದೆ. ಜಾಗತಿಕವಾಗಿ ಈ ಬಿಕ್ಕಟ್ಟು ಕೆಲ ಸಂಕಷ್ಟಗಳನ್ನು ತಂದೊಡ್ಡಲಿರುವುದಾಗಿ ಪರಿಣಿತರು ವಿಶ್ಲೇಷಿಸುತ್ತಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಇದನ್ನು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಕರೆದಿದ್ದರೂ, ಹೆಚ್ಚುತ್ತಿರುವ ಜಾಗತಿಕ ಉದ್ವಿಗ್ನತೆ ಮತ್ತು ಉಕ್ರೇನ್‌ನಲ್ಲಿ ಆಕ್ರಮಣದ ಬೆದರಿಕೆ ತೈಲ ಬೆಲೆಗಳು ಏರಿಕೆಯಾಗಲು ಮತ್ತು ಷೇರು ಮಾರುಕಟ್ಟೆಗಳ ಕುಸಿತಕ್ಕೆ ಕಾರಣವಾಗಿವೆ.

  ಡಿಸೆಂಬರ್ 1, 2021 ರಿಂದ ತೈಲ ಬೆಲೆಗಳಲ್ಲಿ ಸುಮಾರು 40 ಪ್ರತಿಶತದಷ್ಟು ಏರಿಕೆಯಾಗಿದ್ದರೂ, ಅದು 69.5 ಡಾಲರ್ ಪ್ರತಿ ಬ್ಯಾರೆಲ್ ನಲ್ಲಿ ವಹಿವಾಟು ನಡೆಸುತ್ತಿತ್ತು, ಸದ್ಯ ಬ್ಯಾರೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು ಮುಂದೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಬಾಂಬೆ ಸ್ಟಾಕ್ ಎಕ್ಸ್‌‌‌ಚೆಂಜ್ ಮಂಗಳವಾರದಂದು ಸೆನ್ಸೆಕ್ಸ್ ಆರಂಭಿಕ ವಹಿವಾಟಿನ ಸಮಯದಲ್ಲಿ 1,250 ಪಾಯಿಂಟ್‌ಗಳಷ್ಟು ಕುಸಿದು 56,394 ತನ್ನ ದಿನದ ಕನಿಷ್ಠ ಮಟ್ಟವನ್ನು ತಲುಪಿತ್ತು. ರೂಪಾಯಿ ಕೂಡ 33 ಪೈಸೆ ಅಥವಾ ಶೇಕಡಾ 0.44 ಕುಸಿದು ಡಾಲರ್ ಎದುರಿಗೆ 74.84 ತಲುಪಿದೆ.

  ಕಚ್ಚಾ ತೈಲ ಏಕೆ ಏರಿದೆ?

  ಇದಕ್ಕೆ ಸರಳ ಹಾಗೂ ಪ್ರಮುಖ ಕಾರಣವೆಂದರೆ ರಷ್ಯಾ ಹಾಗೂ ಉಕ್ರೇನ್ ದೇಶಗಳ ಮಧ್ಯೆ ಉಂಟಾಗಿರುವ ಬಿಕ್ಕಟ್ಟು ಹಾಗೂ ಯುದ್ಧದ ಪರಿಸ್ಥಿತಿ. ಪ್ರತ್ಯೇಕತಾವಾದಿಗಳನ್ನು ಹೊಂದಿರುವ ಪ್ರದೇಶಗಳಾದ ಡೊನೆಸ್ಕ್ ಮತ್ತು ಲುಹಾನ್ಸ್ಕ್‌ಗೆ ಪುಟಿನ್ ತಮ್ಮ ಸೈನ್ಯವನ್ನು ನಿಯೋಜಿಸಿದ ನಂತರ ಉಕ್ರೇನ್‌ ದೇಶದಲ್ಲಿ ರಷ್ಯಾದ ಆಕ್ರಮಣದ ಬೆದರಿಕೆಯು ದೊಡ್ಡದಾಗಿ ಉಂಟಾಯಿತು.

  ಈ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ಕಚ್ಚಾ ತೈಲ ಪೂರೈಕೆಯಲ್ಲಿ ಅಡ್ಡಿಯಾಗಿರುವುದು ಒಂದೆಡೆಯಾದರೆ ಯುಎಸ್ ಮತ್ತು ಯುರೋಪ್‌ನ ಪ್ರಮುಖ ದೇಶಗಳು ರಷ್ಯಾದ ಮೇಲೆ ವಿಧಿಸಬಹುದಾದ ಕಠಿಣ ಪ್ರತಿಬಂಧಗಳು ಕಚ್ಚಾ ತೈಲದ ಬೆಲೆ ಆಕಾಶಕ್ಕೇರುವಂತೆ ಮಾಡಿದೆ ಎಂದು ವ್ಯಾಖ್ಯಾನಿಸಲಾಗಿದೆ. ವಿಶ್ವದ ಎರಡನೇ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯ ನಂತರ ಪೂರೈಕೆಯ ಮೇಲಿನ ಕಳವಳದ ಆಧಾರದ ಮೇಲೆ ಕಳೆದ ಎರಡು ತಿಂಗಳುಗಳಿಂದ ತೈಲ ಬೆಲೆಗಳು ಏರುತ್ತಲೇ ಇವೆ.

  100 ಡಾಲರ್ ಗಡಿ ದಾಟಿದ ಕಚ್ಛಾ ತೈಲ ಬೆಲೆ

  ಈ ನಿಟ್ಟಿನಲ್ಲಿ ಇನ್ನೊಂದು ವಿಶೇಷ ಕಾರಣವೆಂದರೆ ಸದ್ಯ ನಿಧಾನವಾಗಿ ತೆರೆಯುತ್ತಿರುವ ಜಾಗತಿಕ ಮಾರುಕಟ್ಟೆಗಳು. ಹೌದು, ಓಮಿಕ್ರಾನ್ ಅಲೆಯ ತೀವ್ರತೆ ಈಗ ಕಡಿಮೆಯಾಗಿದೆ, ಮತ್ತೆ ವಿಶ್ವವು ಸಾಮಾನ್ಯೀಕರಣದತ್ತ ಮರಳುತ್ತಿದ್ದು ಬೇಡಿಕೆ ಮತ್ತು ಪೂರೈಕೆಯ ನಡುವೆ ಹೆಚ್ಚುತ್ತಿರುವ ಅಸಮತೋಲನವೂ ಒಂದು ರೀತಿಯಾಲಿ ತೈಲ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ನಿರ್ದಿಷ್ಟ ದಿನಾಂಕಗಳಿಗೆ ಸಾಗಿಸಬೇಕಾಗಿರುವ ಭೌತಿಕ ಉತ್ತರ ಸಮುದ್ರದ ಕಚ್ಚಾ ತೈಲ ಸರಕುಗಳಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 100 ಡಾಲರ್ ಗಡಿ ದಾಟಿದೆ. ಇದು ಸೆಪ್ಟೆಂಬರ್ 2014 ರಿಂದ ಇಲ್ಲಿಯವರೆಗಿನ ಅತ್ಯಧಿಕ ಮೊತ್ತವಾಗಿದೆ.

  ಇದು ಭಾರತದ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

  ಹಾಗೇ ನೋಡಿದರೆ ಭಾರತಕ್ಕೆ ತೀವ್ರವಾದ ಪರಿಣಾಮ ಇದರಿಂದ ಉಂಟಾಗಬಹುದೆಂದು ಸದ್ಯ ಹೇಳುವ ಪರಿಸ್ಥಿತಿ ಇಲ್ಲ. ಆದಾಗ್ಯೂ ಇದರಿಂದ ಭಾರತದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎಂಬುದನ್ನೂ ಸಹ ಅಲ್ಲಗಳೆಯಲಾಗದು. ಕಚ್ಚಾ ತೈಲ ಬೆಲೆಗಳ ಏರಿಕೆಯು ಹಣದುಬ್ಬರ, ಹಣಕಾಸು ಮತ್ತು ಬಾಹ್ಯ ವಲಯಗಳಿಗೆ ಅಪಾಯಗಳನ್ನು ಉಂಟುಮಾಡುತ್ತದೆ. ಕಚ್ಚಾ ತೈಲ-ಸಂಬಂಧಿತ ಉತ್ಪನ್ನಗಳು ಪ್ರಸ್ತುತ ಸಗಟು ಬೆಲೆ ಮಾರುಕಟ್ಟೆಯಲ್ಲಿ ಏನಿಲ್ಲವೆಂದರೂ ಶೇ. 9 ಕ್ಕಿಂತ ಹೆಚ್ಚು ಪ್ರಮಾಣದ ನೇರ ಪಾಲನ್ನು ಹೊಂದಿದೆ

  ಇನ್ನಷ್ಟು ದುಬಾರಿ ಆಗಲಿದೆ ಕಚ್ಛಾ ತೈಲ ಬೆಲೆ

  ಈ ಕುರಿತು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞರಾಗಿರುವ ಮದನ್ ಸಬ್ನವಿಸ್ ಅವರ ವರದಿಯ ಪ್ರಕಾರ, ಕಚ್ಚಾ ತೈಲದಲ್ಲಾಗುವ ಶೇ. 10 ರಷ್ಟು ಹೆಚ್ಚಳವು ಸಗಟು ಬೆಲೆ ವ್ಯಾಪಾರದಲ್ಲಿ ಸುಮಾರು 0.9 ಶೇ. ಹೆಚ್ಚಳಕ್ಕೆ ಕಾರಣವಾಗುತ್ತದೆ. "22 ರ ಆರ್ಥಿಕ ವರ್ಷದಲ್ಲಿ ಸಗಟು ಬೆಲೆ ಸೂಚ್ಯಂಕವು ಶೇ. 11.5-12 ಇರಲಿದೆ ಎಂದು ನಿರೀಕ್ಷಿಸಲಾಗಿದ್ದು ಇದು 23ನೇ ವರ್ಷದ ಸಾಲಿನಲ್ಲಿ ಶೇ.6 ರಶ್ಃತಾಗುವ ಅಂದಾಜು ಮಾಡಲಾಗಿದ್ದು ಈಗ ಕಚ್ಚಾ ತೈಲ ಬೆಲೆಗಳ ಹೆಚ್ಚಳದಿಂದಾಗಿ ಇದರಲ್ಲಿ ಸುಮಾರು ಶೇ. ~ 0.9-1ರಷ್ಟು ಹೆಚ್ಚಳ ವಾಗಬಹುದು" ಎಂದು ವರದಿ ಹೇಳುತ್ತದೆ. ಹಾಗಾಗಿ ಪ್ರತ್ಯಕ್ಷವಲ್ಲದಿದ್ದರೂ ಪರೋಕ್ಷವಾಗಿ ಭಾರತದ ಮೇಲೂ ಇದು ಪ್ರಭಾವ ಬೀಳಲಿದೆ.

  ಭಾರತದ ಮೇಲೂ ಪರಿಣಾಮ

  ಭಾರತವು ತನ್ನ ತೈಲ ಅಗತ್ಯದ ಶೇಕಡಾ 80 ಕ್ಕಿಂತ ಹೆಚ್ಚು ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತದೆ, ಆದರೆ ಅದರ ಒಟ್ಟು ಆಮದುಗಳಲ್ಲಿ ತೈಲ ಆಮದಿನ ಪಾಲು 25% ರಷ್ಟಿದೆ. ಏರುತ್ತಿರುವ ತೈಲ ಬೆಲೆಗಳು ಚಾಲ್ತಿ ಖಾತೆ ಕೊರತೆಯ ಮೇಲೆ ಪರಿಣಾಮ ಬೀರುತ್ತದೆ, ಅಂದರೆ ಆಮದು ಮತ್ತು ರಫ್ತು ಮಾಡಿದ ಸರಕುಗಳು ಮತ್ತು ಸೇವೆಗಳ ಮೌಲ್ಯಗಳ ನಡುವಿನ ವ್ಯತ್ಯಾಸ.

  ಪ್ರಸಕ್ತ 2022 ರಲ್ಲಿ, ತೈಲ ಬೆಲೆಗಳು ಹೆಚ್ಚಾದಂತೆ ಭಾರತದ ಒಟ್ಟು ಆಮದುಗಳಲ್ಲಿ ತೈಲ ಆಮದಿನ ಪಾಲು ಶೇಕಡಾ 25.8 ಕ್ಕೆ (ಏಪ್ರಿಲ್-ಡಿಸೆಂಬರ್ '21) ಹೆಚ್ಚಾಗಿದೆ. ತೈಲ ಬೆಲೆಗಳು ಮತ್ತೆ ಏರಿಕೆಯ ಹಾದಿಯಲ್ಲಿದ್ದು, ತೈಲ ಆಮದು ಬಿಲ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದು ಭಾರತದ ಮೇಲೆ ಬಾಹ್ಯವಾಗಿ ಪರಿಣಾಮ ಬೀರುತ್ತದೆ. ತೈಲ ಬೆಲೆಯಲ್ಲಿ ಶೇಕಡಾ 10 ರಷ್ಟು ಹೆಚ್ಚಳವು ಭಾರತದ ಜಿಡಿಪಿಯ ಮೇಲೆ ಶೇ. 0.4 ರಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ನಾವು ಅಂದಾಜು ಮಾಡಿರುವುದಾಗಿ ಸಬ್ನವಿಸ್ ತಮ್ಮ ವರದಿಯಲ್ಲಿ ಹೇಳಿದ್ದಾರೆ. ಕಚ್ಚಾ ತೈಲ ಬೆಲೆಯ ಏರಿಕೆಯು ಎಲ್ಪಿಜಿ ಮತ್ತು ಸೀಮೆಎಣ್ಣೆಯ ಮೇಲಿರುವ ಸಬ್ಸಿಡಿಯನ್ನೂ ಹೆಚ್ಚಿಸುವ ನಿರೀಕ್ಷೆಯಿದ್ದು ಸಬ್ಸಿಡಿ ಬಿಲ್ ಇನ್ನಷ್ಟು ಏರಲಿದೆ ಎನ್ನಲಾಗಿದೆ.

  ಇದನ್ನು ಓದಿ: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಟಾರ್ಗೆಟ್ ಆಗಿದ್ದೇಕೆ? ನಿನ್ನೆ ರಾತ್ರಿ ನಡೆದಿದ್ದು ಏನು?

  ಹೆಚ್ಚಿನ ತೈಲ ಬೆಲೆಗಳಿಂದ ಗ್ರಾಹಕರ ಮೇಲೆ ಆಗುವ ಪರಿಣಾಮ

  2021 ರಲ್ಲಿ ದೇಶದಾದ್ಯಂತ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೆಚ್ಚಳಕ್ಕೆ ಹೆಚ್ಚಿನ ಕಚ್ಚಾ ತೈಲ ಬೆಲೆಗಳು ಕೊಡುಗೆ ನೀಡಿದ್ದವೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿಯನ್ನು ಕ್ರಮವಾಗಿ ಲೀಟರ್‌ಗೆ ರೂ. 5 ಮತ್ತು ರೂ .10 ರಷ್ಟು ಕಡಿತಗೊಳಿಸಿದ್ದರಿಂದ ಬೆಲೆಗಳು ನವೆಂಬರ್‌ನಲ್ಲಿ ಕುಸಿಯಿತು. ಹೆಚ್ಚಿನ ರಾಜ್ಯಗಳು ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸಿದವು.

  ಇದನ್ನು ಓದಿ: 'ಕೋಟಿ' ಬಂದಿದೆ ಅಂತ ಕಾಲ್ ಮಾಡುವವರು ನಿಮ್ಮ ನೆಂಟರಲ್ಲ! ಇವ್ರು Cyber 'ಗಂಟು' ಕಳ್ಳರು!

  ನವೆಂಬರ್‌ನಲ್ಲಿ ತೆರಿಗೆ ಕಡಿತದ ನಂತರ, ತೈಲ ಮಾರುಕಟ್ಟೆ ಕಂಪನಿಗಳು ಬೆಲೆಗಳನ್ನು ಪರಿಷ್ಕರಿಸಿಲ್ಲ, ಕಚ್ಚಾ ತೈಲವು ನವೆಂಬರ್ ಆರಂಭದಲ್ಲಿ ಬ್ಯಾರೆಲ್‌ಗೆ ಸುಮಾರು 84.7 ಡಾಲರ್ ಮೊತ್ತದಿಂದ ಡಿಸೆಂಬರ್ ಆರಂಭದವರೆಗೆ 70 ಡಾಲರ್ ಮೊತ್ತಕ್ಕೆ ಇಳಿದಿತ್ತು. ಆದರೆ, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕಚ್ಚಾ ಬೆಲೆಯ ಕುಸಿತದ ಸಂಪೂರ್ಣ ಲಾಭ ಗ್ರಾಹಕರಿಗೆ ದೊರಕದೆ ಇದ್ದರೂ, ಹೆಚ್ಚಿದ ಕಚ್ಚಾ ತೈಲ ಬೆಲೆಗಳು ಮಾತ್ರ ಈಗ ಗ್ರಾಹಕರಿಗೆ ಹೆಚ್ಚಿನ ಇಂಧನ ಬೆಲೆಗೆ ಕಾರಣವಾಗಬಹುದು.

  ಹೂಡಿಕೆದಾರರ ಭಾವನೆ ಮತ್ತು ಮಾರುಕಟ್ಟೆಗಳ ಮೇಲೆ ಇದರ ಪರಿಣಾಮ

  ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಿರುವ ಕಚ್ಚಾತೈಲ ಬೆಲೆಗೆ ಅನುಗುಣವಾಗಿ ಹೂಡಿಕೆದಾರರ ಭಾವನೆಗಳಿಗೂ ಹೊಡೆತ ಬಿದ್ದಂತಾಗಿದೆ. ವಿದೇಶಿ ಬಂಡವಾಳ ಹೂಡಿಕೆದಾರರು ಜನವರಿ ಮತ್ತು ಫೆಬ್ರವರಿ ನಡುವೆ ಭಾರತೀಯ ಷೇರುಗಳಿಂದ 51,703 ಕೋಟಿ ರೂ.ಗಳ ನಿವ್ವಳ ಮೊತ್ತವನ್ನು ಹಿಂತೆಗೆದುಕೊಂಡಿರುವುದರಿಂದ ಇದು ಇಕ್ವಿಟಿ ಮಾರುಕಟ್ಟೆಗಳಲ್ಲಿ ಕುಸಿತ ಮತ್ತು ಅಸಮರ್ಪಕತೆಗೆ ಕಾರಣವಾಗಿದೆ.
  Published by:Seema R
  First published: