• ಹೋಂ
  • »
  • ನ್ಯೂಸ್
  • »
  • Explained
  • »
  • Kids Applications: ಪೋಷಕರೇ ಹುಷಾರ್, ಈ ಆ್ಯಪ್‌ಗಳು ನಿಮ್ಮ ಮಕ್ಕಳ ಮೇಲೆ ಕಣ್ಣಿಟ್ಟಿವೆಯಂತೆ!

Kids Applications: ಪೋಷಕರೇ ಹುಷಾರ್, ಈ ಆ್ಯಪ್‌ಗಳು ನಿಮ್ಮ ಮಕ್ಕಳ ಮೇಲೆ ಕಣ್ಣಿಟ್ಟಿವೆಯಂತೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಂದಿನ ಡಿಜಿಟಲ್ ಯುಗ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಯಾರು ಯಾರ ಮೇಲೆ ಹೇಗೆ ಕಣ್ಣಿಟ್ಟಿದ್ದಾರೋ ಅದರ ಸ್ವಲ್ಪ ಸುಳಿವೂ ನಮಗಿರುವುದಿಲ್ಲ. ಆನ್‌ಲೈನ್ ಜಗತ್ತಿನಲ್ಲಿ ಈ ರೀತಿ ಗೂಢಚರ್ಯೆಯ ಕೆಲಸ ನಡೆಯುತ್ತಲೇ ಇದ್ದು ಅದು ನಿಮಗೆ ಗೊತ್ತಾಗುತ್ತಿಲ್ಲ ಅಷ್ಟೆ. ಹೀಗಾಗಿ ಮಕ್ಕಳಿರುವ ಪೋಷಕರೇ ಹುಷಾರಾಗಿರಿ...

ಮುಂದೆ ಓದಿ ...
  • Share this:

ಇಂದಿನ ಡಿಜಿಟಲ್ ಯುಗ (Digital Age) ಸಾಕಷ್ಟು ಅಭಿವೃದ್ಧಿ ಹೊಂದಿದೆ. ಯಾರು ಯಾರ ಮೇಲೆ ಹೇಗೆ ಕಣ್ಣಿಟ್ಟಿದ್ದಾರೋ ಅದರ ಸ್ವಲ್ಪ ಸುಳಿವೂ ನಮಗಿರುವುದಿಲ್ಲ. ಒಂದೊಮ್ಮೆ ಯೋಚಿಸಿ, ನಿಮ್ಮ ಮನೆಯಲ್ಲಿ (Home) ನಿಮ್ಮ ಮಕ್ಕಳ (Children) ಕೋಣೆಯ ಕಿಟಕಿ (Window) ಮೂಲಕ ಯಾರಾದರೂ ಒಬ್ಬ ಅಪರಿಚಿತ ವ್ಯಕ್ತಿ ಇಣುಕಿ ನೋಡಿತ್ತಿರುವುದು ನಿಮಗೆ ಗೊತ್ತಾದರೆ ಏನು ಮಾಡುತ್ತೀರಿ? ಅಥವಾ ಸುಮ್ಮನಿರುತ್ತೀರಾ? ಖಂಡಿತ ಇಲ್ಲ ಎಂಬುದು ನಿಮ್ಮ ಉತ್ತರ. ಆದರೂ, ಆನ್ಲೈನ್ (Online) ಜಗತ್ತಿನಲ್ಲಿ ಈ ರೀತಿ ಗೂಢಚರ್ಯೆಯ ಕೆಲಸ (Work) ನಡೆಯುತ್ತಲೇ ಇದ್ದು ಅದು ನಿಮಗೆ ಗೊತ್ತಾಗುತ್ತಿಲ್ಲ ಅಷ್ಟೆ.


ಮಕ್ಕಳ ಮಾಹಿತಿ ಸಂಗ್ರಹಿಸಿ ಜಾಹೀರಾತು ಕಂಪನಿಗಳಿಗೆ ನೀಡುತ್ತಿರುವ ಆ್ಯಪ್‌ಗಳು


ಆನ್ಲೈನ್ ಜಗತ್ತಿನಲ್ಲಿ ಅದರಲ್ಲೂ ವಿಶೇಷವಾಗಿ ತಂತ್ರಜ್ಞಾನಾಧಾರಿತ ಈ ಸಂದರ್ಭದಲ್ಲಿ ಮೋಸ ಹಾಗೂ ಅನುಸರಣೆಗಳಿಗೆ ಸಂಬಂಧಿಸಿದಂತೆ ನಿಗಾ ಇಡುವ ಸಂಸ್ಥೆಯಾದ 'ಪಿಕ್ಸಾಲೇಟ್' ತನ್ನ ಹೊಸ ಅಧ್ಯಯನದಲ್ಲಿ ಐಫೋನ್ ಆ್ಯಪುಗಳ ಸುಮಾರು ಸಾವಿರ ಸಂಖ್ಯೆಗಳಲ್ಲಿ ಏನಿಲ್ಲವೆಂದರೂ ಮೂರರಲ್ಲಿ ಎರಡು ಅಂಶಗಳಷ್ಟು ಆ್ಯಪುಗಳು ಬಹುಶಃ ಹೆಚ್ಚಾಗಿ ಮಕ್ಕಳಿಂದ ಬಳಸಲ್ಪಡುವಂತಹವುಗಳು ಮಕ್ಕಳ ಮಾಹಿತಿ ಸಂಗ್ರಹಿಸಿ ಜಾಹೀರಾತು ಕಂಪನಿಗಳಿಗೆ ನೀಡುತ್ತಿರುವುದಾಗಿ ತಿಳಿಸಿದೆ.


ಇದನ್ನೇ ಆಂಡ್ರಾಯ್ಡ್ ವೇದಿಕೆಯಲ್ಲಿ ಗಮನಿಸಿದಾದ ಸುಮಾರು 79% ರಷ್ಟು ಮಕ್ಕಳಿಗೆಂದು ಅಭಿವೃದ್ಧಿಪಡಿಸಲಾಗಿರುವ ಹಾಗೂ ಜನಪ್ರೀಯವಾಗಿರುವ ಆ್ಯಪುಗಳೂ ಸಹ ಇದೇ ಕೆಲಸವನ್ನು ಮಾಡುತ್ತಿರುವುದಾಗಿ ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.


ಈ ಬಗ್ಗೆ ಅಧ್ಯಯನವೊಂದು ಏನು ಹೇಳಿದೆ ನೋಡಿ


ಆ್ಯಂಗ್ರಿ ಬರ್ಡ್ಸ್ 2, ಕ್ಯಾಂಡಿ ಕ್ರಶ್ ಸಾಗಾ ಹಾಗೂ ಹಲವು ಬಣ್ಣ ತುಂಬುವ ಹಾಗೂ ಗಣಿತ ಪಜಲ್ ಗಳನ್ನು ಒಳಗೊಂಡಿರುವ ಹಲವಾರು ಆ್ಯಪುಗಳು ಮಕ್ಕಳಿಂದ ಬಳಸಲ್ಪಟ್ಟಾಗ ಅವು ಮಾಹಿತಿ ಕಲೆ ಹಾಕಲು ಪ್ರಾರಂಭಿಸುತ್ತವೆ. ಈ ಸಂದರ್ಭದಲ್ಲಿ ಅವು ಮಕ್ಕಳ ಭೌತಿಕ ಸ್ಥಳ ಗುರುತಿಸುವಿಕೆಯಿಂದ ಹಿಡಿದು ಇತರೆ ಹಲವು ಮಾಹಿತಿಗಳನ್ನು ಹೆಕ್ಕಿ ತೆಗೆದು ಜಾಹಿರಾತು ಕಂಪನಿಗಳಿಗೆ ಕಳುಹಿಸಿಕೊಡುತ್ತವೆ ಹಾಗೂ ಈ ಕಂಪನಿಗಳು ಸಿಕ್ಕ ದತ್ತಾಂಶಗಳ ಮೂಲಕ ಮಕ್ಕಳ ಆಸಕ್ತಿಯ ವಿಷಯಗಳನ್ನು ಟ್ರ್ಯಾಕ್ ಮಾಡಲು ಮಾಹಿತಿ ಬಳಸುತ್ತವೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ.


ಈ ನಿಟ್ಟಿನಲ್ಲಿ ಸ್ಟೋರ್ ನಡೆಸುತ್ತಿರುವ ಆ್ಯಪಲ್ ಹಾಗೂ ಗೂಗಲ್ ಈ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತಿರುವುದು ಇಲ್ಲಿ ಗಮನಿಸಬೇಕಾದ ಅಂಶ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಹಾಗಾಗಿ, ಇಲ್ಲಿ ಒತ್ತಿ ಹೇಳಬೇಕಾದ ಒಂದೇ ಒಂದು ಅಂಶವೆಂದರೆ ಈ ದೈತ್ಯ ಟೆಕ್ ಕಂಪನಿಗಳು ಅವುಗಳ ಉತ್ಪನ್ನಗಳನ್ನು ಮಕ್ಕಳು ಉಪಯೋಗಿಸಲು ಆರಂಭಿಸಿದಾಗ ಮೌನವಾಗಿರುವುದನ್ನು ಕೂಡಲೇ ನಿಲ್ಲಿಸಬೇಕು ಇಲ್ಲವೆಂದಾದಲ್ಲಿ ಈ ಬಗ್ಗೆ ಕಾನೂನಾತ್ಮಕ ಶಿಸ್ತಿನ ಕ್ರಮಗಳನ್ನು ಅನುಷ್ಠಾನಗೊಳಿಸುವುದೊಂದೇ ಮಾರ್ಗವಾಗಬಹುದು.


ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವಂತಹ ಅವಕಾಶಗಳಿರುತ್ತವೆ ಎಚ್ಚರ!


ಇದು ಮಕ್ಕಳ ಖಾಸಗಿತನ ರಕ್ಷಿಸುವ ಹಕ್ಕಾಗಿದ್ದು ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಲೇ ಬೇಕಾಗುತ್ತದೆ ಎನ್ನುವ ಪರಿಣಿತರು ಈ ರೀತಿಯ ಖಾಸಗಿ ಮಾಹಿತಿ ಸೋರಿಕೆಗಳು ಮುಂದೆ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವಂತಹ ಹಾಗೂ ದುಷ್ಕೃತ್ಯಗಳಿಗೆ ಬಳಸಿಕೊಳ್ಳುವಂತಹ ಅವಘಡಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸುತ್ತಾರೆ.


ಇದನ್ನೂ ಓದಿ: Kyra: ಈಕೆಯ ಸೌಂದರ್ಯಕ್ಕೆ ಸೋತು, ಇನ್​ಸ್ಟಾದಲ್ಲಿ ಫಾಲೋ ಮಾಡೋ ಹುಡುಗರೇ ಕೇಳಿ! ರಿಯಲ್ ಕಥೆ ಬೇರೇಯೇ ಇದೆ


ಈ ನಿಟ್ಟಿನಲ್ಲಿ ನಡೆಸಲಾದ ಹಲವು ಸಂಶೋಧನೆಗಳು ಹೇಳುವುದೇನೆಂದರೆ ಚಿಕ್ಕ ಮಕ್ಕಳು ವಾಸ್ತವ ಕಂಟೆಂಟ್ ಹಾಗೂ ಪ್ರದರ್ಶಿತಗೊಳ್ಳುವ ಜಾಹಿರಾತುಗಳ ಮಧ್ಯೆ ವ್ಯತ್ಯಾಸ ಮಾಡಲು ಅಸಮರ್ಥರಾಗಿರುತ್ತಾರೆ ಹಾಗೂ ಈ ಅಸಮರ್ಥತೆಯೇ ಅವರ ಮಾಹಿತಿ ಪಡೆಯುವಂತೆ ಕೆಲವು ಸ್ವಯಂಚಾಲಿತ ವಿಧಾನಗಳಿಗೆ ಅನುಕೂಲ ಮಾಡಿಕೊಡುತ್ತವೆ ಎನ್ನಲಾಗಿದೆ.


ಅಮೆರಿಕದಂತಹ ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಿನ ಜಾಗೃತಿ ವಹಿಸಲಾಗಿದೆಯಂತೆ!


ಈ ರೀತಿಯ ಸಂಗತಿಗಳು ಭಾರತದ ಮಟ್ಟಿಗೆ ಸ್ವಲ್ಪ ಹೊಸ ವಿಷಯವಾದರೂ ಅಮೆರಿಕದಂತಹ ಪಾಶ್ಚಾತ್ಯ ದೇಶಗಳಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಇದೆ ಎಂದೇ ಹೇಳಬಹುದು. ಅಂತೆಯೇ ಅಮೆರಿಕದಲ್ಲಿ ರೂಪಿಸಲಾಗಿರುವ ಖಾಸಗಿತನಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಮಕ್ಕಳನ್ನು ಕೇಂದ್ರ ಭಾಗದಲ್ಲಿರಿಸುವ ಮೂಲಕ ಪ್ರಾಮುಖ್ಯತೆ ನೀಡಲಾಗಿದೆ ಎಂದು ಹೇಳಬಹುದು.


ಲಂಡನ್ ಮೂಲದ ಕಂಪನಿ 'ಸೂಪರ್ ಆವ್ಸಮ್' ಹೇಳುವಂತೆ ಒಂದು ಮಗು ತನ್ನ 13ನೇ ವರ್ಷಕ್ಕೆ ಕಾಲಿಡುತ್ತಿರುವಂತೆ ಅವನ/ಅವಳ ಬಗೆಗಿನ ಸರಾಸರಿ 72 ಮಿಲಿಯನ್ ಡೇಟಾ ಪಾಯಿಂಟುಗಳನ್ನು ಕಂಪನಿಗಳು ಹೊಂದಿರುತ್ತವೆ ಎನ್ನಲಾಗಿದೆ.


ಮಕ್ಕಳ-ನಿರ್ದೇಶಿತ ಅಪ್ಲಿಕೇಶನ್‌ಗಳನ್ನು ಗುರುತಿಸಿದ ಪಿಕ್ಸಾಲೇಟ್


ಆಪಲ್ ಮತ್ತು ಗೂಗಲ್ ಈ ಮುಂಚೆ ಮಾಡದ ಅಥವಾ ಮಾಡಲು ವಿಫಲವಾದ ಪ್ರಯತ್ನವೊಂದನ್ನು ಪಿಕ್ಸಾಲೇಟ್ ತಾನು ಮಾಡಿರುವುದಾಗಿ ಹೇಳಿದ್ದು ಅದಕ್ಕಾಗಿ ಅದು ಶಿಕ್ಷಕರು ಸೇರಿದಂತೆ ಸಾಫ್ಟ್‌ವೇರ್ ಮತ್ತು ಮಾನವ ವಿಮರ್ಶಕರನ್ನು ಬಳಸಿಕೊಂಡಿರುವುದಾಗಿ ಹೇಳಿದೆ. ಮಕ್ಕಳಿಗೆ ಇಷ್ಟವಾಗಬಹುದಾದ ಪ್ರತಿಯೊಂದು ಅಪ್ಲಿಕೇಶನ್ ಅನ್ನು ವರ್ಗೀಕರಿಸುವ ಮೂಲಕ ಪಿಕ್ಸಾಲೇಟ್ ಎರಡೂ ಸ್ಟೋರ್‌ಗಳಲ್ಲಿ 391,000 ಕ್ಕೂ ಹೆಚ್ಚು ಮಕ್ಕಳ-ನಿರ್ದೇಶಿತ ಅಪ್ಲಿಕೇಶನ್‌ಗಳನ್ನು ಗುರುತಿಸಿದೆ.


ಇದನ್ನೂ ಓದಿ: Baby Care: ನಿಮ್ಮ ಮಗುವೂ ಅತಿಯಾಗಿ ರಂಪಾಟ ಮಾಡುತ್ತದೆಯೇ? ಅವರನ್ನು ಶಿಕ್ಷಿಸುವ ಬದಲು ಈ ರೀತಿ ಮಾಡಿ


ಪಿಕ್ಸಾಲೇಟ್‌ನ ವಿಧಾನವು FTC ಯ "ಮಕ್ಕಳ-ನಿರ್ದೇಶಿತ" ವ್ಯಾಖ್ಯಾನಗಳ ಮೇಲೆ ಆಧಾರಿತವಾಗಿದ್ದು ಕಾನೂನನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ಮಾಜಿ ಆಯೋಗದ ಸಿಬ್ಬಂದಿಯಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ.

Published by:Ashwini Prabhu
First published: